Thursday, June 1, 2023

ವಯಸ್ಸು ನೋಡಿ ಪ್ರೇಮಿಸಬೇಕಾ ಮನು…?

Follow Us

  • ಸನಿಹ
    response@134.209.153.225

ಪ್ರಿಯ ಮನಸ್ವಿ,
ಹೇಳುವುದನ್ನೆಲ್ಲ ಅದೆಷ್ಟು ಸಲೀಸು ಹೇಳಿ ಮಲಗಿದೆಯಲ್ಲ. ನಾನಿಲ್ಲಿ ಆತ್ಮ ಸುಟ್ಟುಕೊಂಡವಳAತೆ ಒದ್ದಾಡುತ್ತಿದ್ದೇನೆ. ಮೈ ಚಳಿ ಬಿಟ್ಟು ಸುರಿಯುತ್ತಿರುವ ಮಳೆಯಲ್ಲಿಯೂ ಕಣ್ಣುಗಳು ಕುಲುಮೆಯಂತೆ ಉರಿಯುತ್ತಿವೆ. ಜಾರಲಾಗದ ಹನಿಯೊಂದು ಕಣ್ಣಂಚಿನ ತುದಿಯಲ್ಲಿ ಮಡುಗಟ್ಟಿದೆ. ಅಮೆರಿಕದ ತುದಿಯಲ್ಲೆಲ್ಲೋ ಇರುವ ನೀನು. ಮರವಂತೆಯ ಈ ಪುಟ್ಟ ಗುಬ್ಬಚ್ಚಿ ಗೂಡಿನಲ್ಲಿ ಕೂತ ನಾನು ಹೀಗೆ ಏನೆಲ್ಲ ಮಾತಾಡಿದ ಮೇಲೆ ನಮ್ಮನ್ನು ತೆರೆದುಕೊಂಡ ರೀತಿಗೋ ಒಳಗೇ ಉಳಿದಿದ್ದ ನಿಶ್ಯಬ್ದವೊಂದು ಬಾಹ್ಯ ಜಗತ್ತಿನ ಶಬ್ದ ಚೌಕಟ್ಟಿನೊಳಗೆ ಬಂದ ಕೂತದ್ದಕ್ಕೋ ಏನೋ ಮನಸ್ಸು ಕಲಕಿ ಹೋಗಿದೆ. ನೀ ಹೇಳಿದಂತೆಯೇ ಆಫೀಸಿಗೆ ರಜೆ ಹಾಕಿ ಬಂದು ಹೀಗೆ ಇಲ್ಲಿ ಬೆಚ್ಚನೆಯ ಹಾಸಿಗೆಯ ಮೇಲೆ ಕೂತು ಎದುರು ಕಾಣುವ ಕಿಟಕಿ ಸರಳುಗಳಿಗೆ ತಲೆಯಾನಿಸಿ ನಿನಗೊಂದು ಪತ್ರ ಬರೆಯುತ್ತಿದ್ದೇನೆ.
ನೀನು ಹೇಳಿದಂತೆ ಯಾರಿಲ್ಲದಿದ್ದರೂ ಎಲ್ಲಿಯೂ ಏನೂ ಬದಲಾಗುವುದಿಲ್ಲ. ಸತ್ಯ ಮತ್ತು ಸಂತೋಷ ಆ ಕ್ಷಣದ್ದು ಅಷ್ಟೇ ಆ ಕ್ಷಣಕ್ಕೆ ಅದನ್ನು ಅನುಭವಿಸಬೇಕು. ಹೌದು ಮೊನ್ನೆ ನೀನು ಮೊನ್ನೆ ರಾತ್ರಿ ನಿದ್ದೆ ಮಾಡಲ್ವ ನೀನು ಎಂದಿದ್ದಕ್ಕೆ ಬ್ಲಾಕ್ಸ್ಗಳ ಪಾರ್ಟಿ ನಡೆಯತ್ತಿದೆ ನೋಡುತ್ತಿದ್ದೇನೆ ಎಂದಿದ್ದೆ. ನನಗದರಲ್ಲಿಯ ಕಪ್ಪು ಸುಂದರಿಯರ ಎದೆಯನ್ನು ನೀನು ನೋಡುತ್ತಿರಬಹುದು ಎನ್ನುವ ಸಣ್ಣ ಆಲೋಚನೆ ಬಂದು ಕಿರಿಕರಿಯಾಗಿದ್ದು ಸುಳ್ಳಲ್ಲ. ಅದೇ ಕಾರಣಕ್ಕೆ ನಿನ್ನ ಗಮನ ಬೇರೆಡೆಗೆ ನಿಲ್ಲಿಸುವ ಸಲುವಾಗಿಯೇ ಕತೆ ಬರೆದುಬಿಡು ಎಂದದ್ದು ಅದಕ್ಕೆ ನೀನು: ಹಸು ಕರು ಹಾಕುವಾಗ ಅದು ಹೇಗೆ ಹೊರಗೆ ಬರತ್ತೆ ಎನ್ನುವುದರ ಬಗ್ಗೆ ಯೋಚಿಸಬೇಕು ಕಥೆಯ ಬಗ್ಗೆಯಲ್ಲ ಎಂದೆ. ಅದೆಷ್ಟು ಅನುವಭಸ್ಥನಂತೆ ಮಾತಾಡಿದೆ. ಆಶ್ರ‍್ಯ ಎನ್ನಿಸಿತ್ತು. ಆದರೂ ಹೊಗಳುವುದಕ್ಕೇನು ಹೋಗಲಿಲ್ಲ. ನಾನು ದೊಡ್ಡವಳೆಂಬ ಸಣ್ಣ ಅಹಂ. ಹೌದು ಮನು, ಈ ಹೆಂಗಸರು ಗಂಡಸರು ಪ್ರೇಮಿಸೋದಕ್ಕೂ ಯಾಕೆ ವಯಸ್ಸಿನ ಅಂತರ ಇಟ್ಕೋತಾರೆ ಅಂತ ನಿನಗೇನಾದರೂ ಗೊತ್ತಾ. ಆಂರ‍್ಯದೊಳಗೆ ಏಳುವ ಪ್ರೇಮಕ್ಕೇನಾದರೂ ಅದರ ಅರಿವಿರತ್ತಾ. ನಿಜ ಹೇಳಲಾ ಈ ಕಾಂಪ್ಲೆಕ್ಸ್ ನನ್ನೊಳಗಿಂದ ತೆಗೆದವನೇ ನೀನು. ವಯಸ್ಸಾಗೋದು ದೇಹಕ್ಕೆ ಮನಸ್ಸಿಗಲ್ಲ ಅಂದೆ. ಅದು ಬಿಡು ಥೇಟ್ ಯಾವುದೋ ಸಿನೆಮಾ ಡೈಲಾಗ್‌ನ ತರಹವೇ ಇತ್ತು. ಅದೆಲ್ಲ ಈ ವ್ಯವಸ್ಥೆಯ ಭಾಗ ತಾನೆ. ಯಾಕೆ ಈ ಮನುಷ್ಯರು ಬದುಕನ್ನ ಇಷ್ಟೊಂದು ಕಾಂಪ್ಲೆಕ್ಸ್ ಮಾಡಿ ಹಾಕಿಕೊಳ್ತಾರೆ ಮನು, ಕ್ಷಮಿಸು ಹೇಳಿದ್ದು ಬೆಚ್ಚಗೆ ಹೊದ್ದು ಮಲಗಲಿಕ್ಕೆ ಆದರೆ ನಿದ್ದೆ ಎಂಬುದು ಆ ಕ್ಷಣದಲ್ಲಿಯೇ ಹಾರಿ ಹೋಗಿದೆ ಮ.. ನಲವತ್ತರ ಅಂಚಿನ ನಾನು ಮೂವತ್ತರ ಹರೆಯದ ನೀನು ಸಮಯ ಹಾಳು ಮಾಡಲಿಕ್ಕೆಂದು ಹರಟಲು ಹೋಗಿ ಅಂಟಿಸಿಕೊAಡ ನಂಟಿಗೆ ಎದೆಯ ಕವಾಟವಿದು ಸಣ್ಣಗೆ ನರಳತೊಡಗಿದೆ. ಹೌದು ..ನು, ಅದ್ಯಾಕೆ ಇವತ್ತು ವಿಪರೀತ ಎನ್ನುವಷ್ಟು ಭಾವುಕನಾಗಿದ್ದೆ. ರಾತ್ರಿ ಮೂರು ಕಳೆದರೂ ನಿದ್ದೆ ಮಾಡದಷ್ಟು. ಅದೆಷ್ಟು ಚಿಂತೆಯಾಗಿತ್ತು ಗೊತ್ತ. ನೀನಲ್ಲಿ ಗೊತ್ತು ಗುರಿ ಇಲ್ಲದ ದೇಶದಲ್ಲಿ ಒಬ್ಬನೇ ಉಯ್ಯಾಲೆಯಲಿ ಕೂತು ಖಾಲಿ ಆಕಾಶವ ನೋಡತೊಡಗಿದರೆ ನಾನಿಲ್ಲಿ ಎದುರು ನಿಂತ ನೂರೆಂಟು ಅನಾಮಿಕ ರೋಗಿಗಳ ಕಣ್ಣಲ್ಲಿಯ ನೋವುಗಳಲ್ಲಿಯೇ ನಿನ್ನನ್ನೇ ಕಂಡAತಾಗಿ ಮನಸ್ಸು ಉಕ್ಕುತ್ತದೆ. ಅದಕ್ಕೇ ಪದೇ ಪದೇ ಮಲಗಲಿಕ್ಕೆ ಹೇಳಿದ್ದು. ನಿನ್ನೊಳಗೆ ಮಾತಾಡುವ ಉತ್ಸಾಹವಿತ್ತು. ದಣಿವಿತ್ತು. ಹುಡುಕಾಡಿ ಸೋತಿದ್ದರ ಭಾವವಿತ್ತು. ಹಾಗಾಗಿಯೇ ನಾನು ಹೌದು ಅಲ್ಲ ಎನ್ನುವ ಸಣ್ಣ ಪದಗಳಲ್ಲಿ ನಿನ್ನ ಮಾತಿನ ಓಘವನ್ನು ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಲೇ ಇದ್ದಾಗಲೂ ನೀನು ಹೇಳುತ್ತಲೇ ಹೋದೆ. ಅದೇಕೋ ಗೊತ್ತಿಲ್ಲ ಇದ್ದಕ್ಕಿದ್ದ ಹಾಗೆ ನೀನು ಯಾರನ್ನಾದರೂ ತಬ್ಬಿದ್ದೀಯ ಎಂದೆ.
ನಾನು ವಿಚಿತ್ರವೆಂದರೆ ತೀರಾ ದುಃಖವಾದಾಗ ಕೂಡ ಯಾರನ್ನು ತಬ್ಬಿ ಹಿಡಿದು ಅತ್ತಿಲ್ಲ ಎಂದರೆ ನಿನಗೆ ವಿಚಿತ್ರ ಎನ್ನಿಸಬಹುದು. ಗಂಡ ಹೆಂಡತಿ ಸಂಬAಧಗಳನ್ನು ಕೂಡ ನಾವು ಅದೆಷ್ಟು ದೂರದಿಂದ ಕಟ್ಟಿಕೊಳ್ತೇವೆ ಅಂತ ನನಗೆ ಯಾವಾಗಲೂ ಅನ್ನಿಸತ್ತೆ. ನಾವು ಸಂಬAಧಗಳನ್ನ ದೇಹದ ಮುಖಾಂತರ ಕಟ್ಟಿಕೊಳ್ತೇವೆ ನು. ಇಡೀ ದೇಹವನ್ನ ಬಯಕೆಗಳ ಪಾತ್ರೆಯನ್ನಾಗಿಸಿಕೊಂಡು ಅದರೊಳಗೊಂದಷ್ಟು ಬೇಡದ ಕಾಮ ಕುತೂಹಲ ಉಕ್ಕಿಸಿಕೊಂಡು. ನಿಜಕ್ಕೂ ಆಶ್ರ‍್ಯ ಎನ್ನಿಸುತ್ತದೆ. ನಾವು ಅಂದರೆ ಈ ನೆಲದವರು ಇಡೀ ಬದುಕನ್ನೆಲ್ಲ ಶ್ ಶ್ ಎನ್ನುವ ಕುತೂಹಲದೊಳಗೆ ಅಡಗಿಸಿಟ್ಟುಕೊಂಡಿರುತ್ತೇವೆ. ಯಾವುದು ಪ್ರಕೃತಿ ಸತ್ಯವೋ ಅದನ್ನ ತಪ್ಪು ಎನ್ನುವ ಭಾವದಲ್ಲಿ ಅದ್ದಿ ಬಿಡುತ್ತೇವೆ. ಸಹಹವಾಗಿ ಇರಬೇಕಾದ್ದಕ್ಕೆ ಸರಿ ತಪ್ಪು ಒಗ್ಗರಣೆ ಹಾಕಿ ಅದು ಸೀದ ನಂತರ ಹೌಹಾರಿ..ಹಾಗಾಗಿಯೇ ನಮ್ಮ ಬಹುತೇಕ ಹೈಸ್ಕೂಲಿನ ಮಕ್ಕಳು ೧೦೦ಕ್ಕೆ ೧೦೦ ಅಂಕ ತೆಗೆಯುವಾಗಲೂ ದೊಡ್ಡ ಹೆಂಗಸರ ಮತ್ತು ಗಂಡಸರ ಹಾಗೆ ಅವರಿವರಿಗೆ ನಂಟು ಕಟ್ಟಿ ಗಾಸಿಪ್ ಮಾತಾಡ್ತಾರೆ ಗೊತ್ತಾ. ಖೇದ ಅನ್ಸತ್ತೆ. ಮುಚ್ಚಿಟ್ಟಷ್ಟು ಕುತೂಹಲಗಳಿಗೆ ರೆಕ್ಕೆ ಹೆಚ್ಚು. ಯಾವುದು ಬಯಲಿಗೆ ಬರುತ್ತದೆಯೋ ಅದಕ್ಕೆ ಭ್ರಮೆಗಳಿರುವುದಿಲ್ಲ. ಆದರೆ ಸತ್ಯ ಸತ್ಯ ಎನ್ನುತ್ತಲೇ ಬದುಕಿನ ಸತ್ಯಗಳನ್ನು ಮಕ್ಕಳಿಗೆ ಮಾಡಿಸುವುದೇ ಇಲ್ಲ. ನಿನಗೊಂದು ವಿಷಯ ಗೊತ್ತಾ. ಛೇ ನಾನು ನೋಡು ಎಷ್ಟು ಪೆದ್ದು ನನ್ನ ಮುಖವನ್ನೇ ನೋಡದ ನಿನಗೆ ನನ್ನ ಹಿಂದಿನ ದಿನಗಳಲ್ಲಿ ಕಂಡ ವಿಷಯ ತಿಳಿಯುವುದು ಹೇಗೆ? ನನ್ನಗೊಬ್ಬಳು ಗೆಳತಿ ಇದ್ದಳು. ತೀರಾ ಮುದ್ದು ಮುದ್ದು. ಸದಾ ದೇವರು ದಿಂಡರು ಅಂತಲೇ. ಕಂಡ ಕಂಡ ದೇವರಿಗೆಲ್ಲ ಅಡ್ಡ ಬೀಳುತ್ತಿದ್ದಳೂ. ಕುತ್ತಿಗೆಯಲ್ಲಿ ಮೂರು ಹೊತ್ತು ಹಳದಿ ಕೆಂಪು ದಾರ. ಕೈಯ್ಯಲ್ಲಿ ದಪ್ಪ ದಪ್ಪ ಕಪ್ಪು ಮಣಿಗಂಟುಗಳೂ. ಢಾಳು ಕುಂಕುಮ. ನೋಡಿದರೆ ಅಪ್ಪಟ ದೇವಿ ಮಹಾತ್ಮೆಯ ದೇವಿಯ ಹಾಗಿದ್ದಳು. ಶಾಲೆಯ ಪ್ರತಿಯೊಬ್ಬ ಟೀಚರ್ ಕೂಡ ಅವಳನ್ನ ನೋಡಿ ಕಲೀರಿ ಅಂತಿದ್ರು. ಎಷ್ಟು ನಯ ನಾಜೂಕು ಅಂತಿದ್ರು. ಎರಡನೇ ಪಿಯುಸಿ ಆದ ನಂತರದಲ್ಲಿ ಮದುವೆ ಕೂಡ ಆದಳು. ಅದೂ ಕೂಡ ಅಪ್ಪ ಅಮ್ಮ ಹೇಳಿದ ಹುಡುಗನನ್ನೇ. ಆದರೆ ಮದುವೆ ಬಾಳಲಿಲ್ಲ. ನೀನು ನಂಬ್ತೀಯೋ ಇಲ್ಲವೋ ಗೊತ್ತಿಲ್ಲ. ಆಕೆಯ ಗಂಡ ಅವಳನ್ನು ಬಿಟ್ಟದ್ದು ಆಕೆ ಮಂಚದಲ್ಲಿ ಸರಿಯಾಗಿ ಸಹಕರಿಸಲ್ಲ ಅಂತ. ಅವಳ ತಲೆಯಲ್ಲಿ ಆ ಕುರಿತಾಗಿ ದೊಡ್ಡ ತಪ್ಪಿತಸ್ಥ ಭಾವನೆಯೇ ಇತ್ತು ಎಂಬುದು ಆ ನಂತರ ಗೊತ್ತಾಗಿದ್ದು. ಅದಾದ ನಂತರ ಮತ್ತೆ ಆಕೆಗೆ ಮತ್ತೆ ಮದುವೆ ಮಾಡಿದ್ರು ಮತ್ತೆ ಹೇಳೋದು ಬೇಕಿಲ್ಲ. ಅದೂ ಕೂಡ ಮುರಿದು ಬಿತ್ತು. ಯಾರ ತಪ್ಪು ಇದರಲ್ಲಿ. ಯಾಕೆ ಇಂತಹದ್ದೊAದು ಬದುಕನ್ನು ನಮ್ಮವರು ಹೀಗೆ ಇಷ್ಟು ರಗಳೆ ಮಾಡಿ ಹಾಕಿಕೊಳ್ತಾರೆ ಅಂತ ನನಗೂ ಅನ್ನಿಸತ್ತೆ ನು. ಇಡೀ ಜಗತ್ತು ಸಾಧನೆಯ ಹಿಂದೆ ಓಡುವಾಗ ನಾವು ಯಾರು ಯಾರನ್ನೋ ಇಟ್ಟುಕೊಂಡಿದ್ದರ ಕುರಿತು ಮಾತಾಡ್ತೀವಿ ಎಷ್ಟು ಸಿಲ್ಲಿ ಅಲ್ವಾ. ಹತ್ತತ್ತು ಮಕ್ಕಳನ್ನು ಹೆತ್ತರು ಅದು ಹೇಗಾಗತ್ತೆ ಅಂತ ಗೊತ್ತಿಲ್ಲದ ಮಂದಿ ಈಗಲೂ ಇದ್ದಾರೆ ನು. ಥೂ ನೋಡು ನಾನು ಕೂಡ ಇದನ್ನೇ ಹರಟುತ್ತ ಕೂತೆ ಅಥವಾ ಮಾತು ಬದಲಾಯಿಸಿದೆ ಅಂತಲೇ ಇಟ್ಟು ಕೋ.
ಸತ್ಯ ಏನು ಗೊತ್ತಾ ನೀನು ಇನ್ನಿಲ್ಲದ ಪ್ರಶ್ನೆಗಳ ಕೇಳುತ್ತ ಹೋದಂತೆಲ್ಲ ನನ್ನೊಳಗೆ ಅಡಗಿಸದ್ದ ಸತ್ಯವೊಂದು ಎಲ್ಲಿ ಎದುರು ನಿಂತು ಬಿಡುತ್ತದೆಯೋ ಏನ್ನುವ ಭಯ ಕಾಡತೊಡಗಿತ್ತು. ಹುದುಗಿಸಿ ನೂರಾರು ದುಗುಡ ಭರ‍್ಗರೆದು ಅಲೆವಂತೆ ಅನ್ನಿಸಿತು. ಕಳೆದ ಇಪ್ಪತ್ತು ವರ್ಷಗಳಿಂದ ಒಂಟಿಯಾಗಿ ಹೋದ ಈ ಬದುಕಿನಲ್ಲಿ ಅಚಾನಕ್ ಹಡಗೊಂದು ಬಂದು ಇದ್ದ ಬದ್ದ ಏಕಾಂತವನ್ನೆಲ್ಲ ದೋಚ ತೊಡಗಿದಂತೆ ಭಾಸವಾಗಿ ಕೈ ನಡುಗಿತು. ಎಷ್ಟೊಂದು ಖಾಲಿತನ ಎಲ್ಲ ಇದ್ದೂ ಏನೂ ಇಲ್ಲದರ ಭಾವವಿದೆಯಲ್ಲ ನು ಅದು ನಮ್ಮನ್ನು ನಿರಾಸಕ್ತಿಯ ಕಡೆಗೆ ಎಳೆದೊಯ್ಯತ್ತ ಸಾಗತ್ತೆ. ಮತ್ತೆ ಅದೇ ಅಭ್ಯಾಸವಾಗಿ ನಾವುಗಳು ಅಲ್ಲಿಯೇ ಬದುಕತೊಡಗುತ್ತೇವೆ. ಇಡೀ ಬದುಕಿನೊಟ್ಟಿಗೆ ಸಂತೋಷದ ಮುಖವಾಡ ತೊಟ್ಟು ಅಲೆಯುತ್ತೇವೆ. ತೋರಿಕೆಯ ಈ ಎಲ್ಲವುಗಳು ಕೊನೆಗೂ ಕೊಡುವುದು ಏನನ್ನು ಗೊತ್ತ. ಬರೀ ಖೊಟ್ಟಿತನವನ್ನ ಹಾಗೆ ಬದುಕಿದ್ದೇನೆ. ನಾನು ಆದ ಮದುವೆಯೊಟ್ಟಿಗೆ ಬೆಸೆದುಕೊಳ್ಳಲಾಗದ. ಬಿಟ್ಟು ಬದುಕುವ ಧರ‍್ಯವಿಲ್ಲದೆ. ಕರೆದವರೆ ಮನೆಗೆಲ್ಲ ಮುತ್ತೆöÊದೆ ಎನ್ನುವ ಹೆಸರಿನಲ್ಲಿ ಅರಿಶಿನ ಕುಂಕುಮ ಹಚ್ಚಿಕೊಳ್ಳುತ್ತ. ಅವರ ಹಳೇ ಸವಕಲು ದಾಂಪತ್ಯದ ಜೋಕುಗಳಿಗೆ ಹಲ್ಲು ಕಿರಿಯುತ್ತ… ಎಷ್ಟೋ ಬಾರಿ ನಾನು ಸತ್ತು ಹೋಗಿದ್ದೇನೆ ಅಂತಲೇ ಅನ್ನಿಸತ್ತೆ ಮ. ಈ ಮದುವೆಗಳು ನೀ ಹೇಳಿದ ಹಾಗೆ ಬರೀ ಕಾಮಕ್ಕಾದರೆ ಸರಿ. ಆದರೆ ಆತ್ಮ ಸಂಗಾತಕ್ಕಾದರೆ ಹೊಂದಿಕೆಯಾಗುವುದಿಲ್ಲ. ಆದರೂ ಬದುಕುತ್ತೇವೆ. ಇದೇ ಹುತ್ತದೊಳಗೆ. ಬಹಳಷ್ಟು ಮದುವೆಗಳು ಬದುಕುವುದು ಮನಸ್ಸಿನ ಸಲುವಾಗಿ ಅಲ್ಲ ನು. ಮಂದಿಯ ಸಲುವಾಗಿ ಬಹುಶ: ಇಲ್ಲಿಂದ ಹದಿನೇಳು ಗಂಟೆಗಳ ಅವಧಿಯ ನಾಡಿನಲ್ಲಿ ಈ ಕಟ್ಟು ಪಾಡುಗಳೇ ಇಲ್ಲ ಎನ್ನುವುದು ಇದೇ ಈ ಭೂಮಿನ ವಿಸ್ಮಯ.ಅದನ್ನು ಒಳಗೊಳಗೆ ಬಯಸಿದರೂ ನಮ್ಮದೇ ಮೇಲು ಎನ್ನುವ ಟೊಳ್ಳು ಹೆಗ್ಗಳಿಕೆಯಲ್ಲಿ ಉಳಿದು ಬಿಡುತ್ತೇವೆ. ಮತ್ತೆ ಅಲ್ಲಿನವರೂ ಕೂಡ ಇಲ್ಲಿಯದೇ ಒಳ್ಳೆಯದು ಎನ್ನುತ್ತಲೇ ಸ್ವಚ್ಛಂದದ ಬದುಕು ಬದುಕುತ್ತಾರೆ. ನಿಜ ಮ ಇರುವ ಒಂದು ಜೀವನಕ್ಕಾಗಿ ಇಷ್ಟೊಂದು ರಗಳೆ ಬೇಕಾ? ಗೊತ್ತಿಲ್ಲ. ನಿನ್ನ ಮಾತ್ರೆ ಈ ನಡು ಹಗಲಿನ ಸತ್ಯದಂತೆ ಗೋಚರಿಸುತ್ತದೆ. ಇಲ್ಲಿ ಅತೀ ಸಂಸ್ಕಾರವAತರೂ ಅತೀ ದುಷ್ಟರು ಯಾರೇ ಇದ್ದರೂ ಒಂದು ದಿನ ಕಂತೆ ಒಗೆದು ಹೋಗಲೇ ಬೇಕಿದೆ. ಹಾಗಿರುವಾಗ ನಾವು ನಮ್ಮ ನಡೆ ನುಡಿ ಧರ್ಮ ಕರ್ಮ ಇವೆಲ್ಲವೂ ಈ ಜಗತ್ತಿಗೆ ಅನಿವಾರ‍್ಯ ಎಂದುಕೊಳ್ಳುವುದಿದೆಯಲ್ಲ ಅದು ನಮ್ಮ ಹುಚ್ಚುತನವಲ್ಲದೆ ಬೇರೇನೂ ಇಲ್ಲ ಅಲ್ವಾ?
ಮತ್ತೆ ನೀ ಕೇಳಿದ ಪ್ರಶ್ನೆಯನ್ನೇ ನಿನಗೆ ಕೇಳಿ ಭೂಮಿ ಶುರುವಾದಲ್ಲಿಗೇ ಬಂದು ನಿಂತಂತೆ ನಿಂತಿದ್ದೇನೆ.
ಸಾಧ್ಯವಾದರೆ ಉತ್ತರಿಸು..

ತಾಕಲಾಟದಲ್ಲಿರುವ
ನಿನ್ನ
ಸನಿ

ಮತ್ತಷ್ಟು ಸುದ್ದಿಗಳು

vertical

Latest News

ತನ್ನ ಪ್ರೇಯಸಿಗೆ ಮೆಸೇಜ್ ಮಾಡಿದ ಎಂದು ಗೆಳೆಯನಿಗೆ ಚಾಕು ಇರಿದ ಯುವಕ

newsics.com ಮೈಸೂರು: ತನ್ನ ಪ್ರಿಯತಮೆಗೆ ಮೆಸೇಜ್ ಮಾಡಿದನೆಂದು ಯುವಕನೊಬ್ಬ ತನ್ನ ರೂಮೇಟ್‌ಗೆ ಚಾಕು ಇರಿದ ಪ್ರಸಂಗವೊಂದು ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ. ಗಾಯಾಳುವನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ,...

ಉತ್ತರಾಖಂಡದಲ್ಲಿ ಭೂಕುಸಿತ: 300 ಮಂದಿ ಪ್ರಯಾಣಿಕರ ಪರದಾಟ

newsics.com ಡೆಹ್ರಾಡೂನ್: ಉತ್ತರಾಖಂಡದ ಪಿಥೋರಗಢದಲ್ಲಿ ಭೂಕುಸಿತ ಉಂಟಾದ ಪರಿಣಾಮ ರಸ್ತೆ ಕೊಚ್ಚಿಹೋಗಿದ್ದು, 300 ಮಂದಿ ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಲಖನ್‌ಪುರ ಬಳಿಯ ಧಾರ್ಚುಲದಿಂದ 45 ಕಿಮೀ ಎತ್ತರದ ಲಿಪುಲೇಖ್ – ತವಾಘಾಟ್ ರಸ್ತೆಗೆ ಬೆಟ್ಟ ಕುಸಿದು...

ಫ್ರೀ ಎಜುಕೇಷನ್ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ 18 ಕೋಟಿ ರೂ. ಪಂಗನಾಮ

newsics.com ಬೆಂಗಳೂರು: ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ಕೊಡಿಸುವುದಾಗಿ 18 ಕೋಟಿ ರೂ. ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಆಂಧ್ರಪ್ರದೇಶ ಮೂಲದ ಶ್ರೀನಿವಾಸುಲು ಎಂದು ಗುರುತಿಸಲಾಗಿದೆ. ಆರೋಪಿ ಡಾಟ ಸೈನ್ಸ್ ಕೋರ್ಸ್ ಮಾಡಿಸುವುದಾಗಿ...
- Advertisement -
error: Content is protected !!