Friday, February 3, 2023

ಪ್ರೇಮ ಎಂದರೆ…

Follow Us

* ದೀಪ್ತಿ
response@134.209.153.225

ನಾವಿಂದು ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ಒಂದು ಹಗ್ ಕೊಟ್ಟು. ನಾಲ್ಕಾರು ಮುತ್ತುಗಳ ಎಮ್ಮೋಜಿ ಕಳಿಸಿ ಛಾನ್ಸ್ ಸಿಕ್ಕರೆ ಡೇಟಿಂಗ್ ಮಾಡಿ ನಮ್ಮಷ್ಟು ದೊಡ್ಡ ಪ್ರೇಮಿಗಳೇ ಇಲ್ಲ ಎಂದು ಕನವರಿಸುವ ಎಷ್ಟೋ ವರ್ಷಗಳ ಹಿಂದೆ. “ರಮತಾಂ, ರಮತಾಂ ಮಾ ಕಸ್ಯಚಿತ್ ಪ್ರೀತಿಚ್ಛೇದೋ ಭವತು!”, ‘ನಲಿಯಲಿ ನಲಿಯಲಿ ಯಾರ ಪ್ರೀತಿಯೂ ಛೇದವಾಗದಿರಲಿ’ ಇದು ಸಹಸ್ರ ಸಹಸ್ರ ವóರ್ಷಗಳ ಹಿಂದೆ ತನ್ನ ಇನಿಯ ಚಾರುದತ್ತನ ವಿರಹವೇದನೆಯಲ್ಲಿದ್ದ ವಸಂತಸೇನೆಯ ಮನದಾಳದ ಮಾತನ್ನು ಹೇಳಿಯಾಗಿತ್ತು. ಅಂದರೆ, 17ನೇ ಶತಮಾನದಲ್ಲಿ “ವ್ಯಾಲೆಂಟೈನ್ಸ್ ಡೇ” ಎಂಬ ಹೊಸ ಆಚರಣೆಯೊಂದು ಪಶ್ಚಿಮ ದೇಶಗಳಲ್ಲಿ ಕಣ್ಣು ಬಿಡುವ ಮೊದಲೇ ಪ್ರೇಮದ ಬಗ್ಗೆ ದಿವ್ಯ ಅನುಭೂತಿಯನ್ನು ಹೊಂದಿದವರು ನಾವು. ಪ್ರೇಮ ಎನ್ನುವುದು ದಿವ್ಯಾನುಭೂತಿ ಎಂದು ನಂಬಿದವರು ನಾವು. ತಾನು ಪ್ರೀತಿಸಿದವ ಅಥವಾ ಪ್ರೀತಿಸಿದವಳು ನೋವಿನ ಕನ್ನಡಿಯಲ್ಲಿಯೇ ಮುಖ ಅದ್ದಿ ಹಿಡಿದು ತೋರಿಸುವಾಗಲೂ.. ತನ್ನೊಲವಿನ ಜೀವ ನಲುಗಬಾರದೆಂದು ಆಶಿಸಿದವರು ನಾವು.
ಅದೇ ರೀತಿ, ಷೇಕ್ಸ್‍ಪಿಯರ್‍ನ ರೋಮಿಯೋ ಜ್ಯೂಲಿಯೆಟರು ಒಬ್ಬರ ಸಲುವಾಗಿ ಮತ್ತೊಬ್ಬರು ವಿಷ ಕುಡಿಯುವ ಹೊತ್ತಿಗಾಗಲೇ ಭಾರತದಲ್ಲಿ “ದೇವದಾಸ್” ಎನ್ನುವ ಪ್ರೇಮಿಯೊಬ್ಬ ತಾನು ಅಪರಿಮಿತವಾಗಿ ಪ್ರೀತಿಸಿದ್ದ ಪಾರ್ವತಿಯನ್ನು ತಮ್ಮ ಕುಟುಂಬದವರ ಸಲುವಾಗಿ ತಾನೇ ಖುದ್ದು ನಿಂತು ಬೇರೆಯವರಿಗೆ ಮದುವೆ ಮಾಡಿಸಿ, ಮತ್ತೆ ಅವಳದೇ ನೆನಪಲ್ಲಿ ಅಳಿದು ಹೋಗಿದ್ದ. ತನ್ನವರ ಮತ್ತು ತನ್ನ ಪ್ರಿಯತಮೆಯ ಸುಖಕ್ಕಾಗಿ ಬದುಕುವುದು ಆತನಿಗೆ ಅಲ್ಲಿ ಮುಖ್ಯವೆನ್ನಿಸಿತ್ತು. ಯಾವುದೇ ಪ್ರೇಮದ ನಿಜವಾದ ಕಳಕಳಿಯೇ ಅದು ನಮ್ಮಲ್ಲಿ ಜೀವಂತಿಕೆಯನ್ನು ಹುಟ್ಟಿಹಾಕಿದಷ್ಟೇ ಮಟ್ಟದಲ್ಲಿ ಕರುಣೆಯನ್ನು ಕೂಡ ಕೂಡಿಟ್ಟು ಕೊಡುತ್ತದೆ. ಒಂದು ಬೆಚ್ಚಗಿನ ಭಾವ. ಒಂದು ಸ್ಪರ್ಶ ಮತ್ತು ತುಸು ದೂರ ನಿನ್ನೊಂದಿಗೆ ನಡೆಯುವೆ ನಾನು ಎನ್ನುವಂತ ಕಣ್ಣ ಅಂಚಿನ ಕುಡಿ ಮಾತು ಈ ಎಲ್ಲವೂ ಪ್ರೇಮಿಗಳ ಎದೆಯಲ್ಲಿ ಹೊಸ ಜಗತ್ತನ್ನೆ ಕಟ್ಟಿ ಕೊಡುತ್ತದೆ. ಹಾಗಂತ ಅದು ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ಇಲ್ಲಿನ ಎಲ್ಲ ಮನಸ್ಸುಗಳಿಗೆ ಸಂಬಂಧಿಸಿದ್ದು, ಕೌಟುಂಬಿಕ ಚೌಕಟ್ಟಿನೊಳಗೆ ಬದುಕು ಕಟ್ಟಿಕೊಳ್ಳುವ ನಮಗೆ ಪ್ರತಿಯೊಂದು ಸಂಬಂಧಗಳಿಗೂ ಅದರದ್ದೇ ಆದ ಮೌಲ್ಯಗಳಿವೆ. ಅದೇ ಕಾರಣಕ್ಕೆ ಬಹುತೇಕ ಪ್ರೇಮಗಳು ದುರಂತ ಅಂತ್ಯವನ್ನೇ ಕಾಣುತ್ತವೆ.. ಅದಕ್ಕೆ ಏನೋ ಪ್ರೇಮಕ್ಕೆ ತ್ಯಾಗ ಎಂದಿಗೂ ಅಂಟಿಕೊಂಡೇ ಇರುತ್ತದೆ.
“ಇಟ್ ಈಜ್ ಬೆಟರ್ ಟು ಹ್ಯಾವ್ ಲವ್ಹಡ್ ಎನ್ಡ್ ಲಾಸ್ಟ್ ದ್ಯಾನ್ ನೆವರ್ ಟು ಹ್ಯಾವ್ ಲವ್ಹಡ್ ಎಟ್ ಆಲ್” ಎನ್ನುತ್ತಾನೆ ಆಂಗ್ಲ ಕವಿಯೊಬ್ಬ. ಆದರೆ ಅವನ ಈ ಮಾತಿಗಿಂತ ಅದೆಷ್ಟೋ ಮೊದಲು ರಾಧೆಯ ಒಲವಲ್ಲಿ ಕೃಷ್ಣನೂ ಕೃಷ್ಣನ ಪ್ರೀತಿಯಲ್ಲಿ ರಾಧೆಯು ಕಳೆದು ಹೋದ ಉದಾಹರಣೆ ನಮ್ಮ ನೆಲದಲ್ಲಿದೆ. ತಮ್ಮ ಒಲವಿನ ಕಾರಣಕ್ಕಾಗಿ ಇಡೀ ನೆಲದ ತುಂಬೆಲ್ಲ ಹರಡಿಕೊಂಡವರು ಅವರು. ಅವರ ಅಪರಿಮಿತ ಪ್ರೇಮ ಮತ್ತು ಅದಕ್ಕೆ ಲೇಪಿತಗೊಂಡಿರುವ ಭಕ್ತಿಯ ಕಾರಣಕ್ಕಾಗಿ ಮತ್ತು ಅದು ಭೌತ ಶರೀರದ ಹೊರತಾದ ಕಾರಣಕ್ಕೆ ಭಾರತೀಯರ ಮನೆ ಮನಗಳಲ್ಲಿ ಪೂಜ್ಯರೆನ್ನಿಸಿಕೊಂಡರು. ಪ್ರೇಮವೆಂದರೆ ಧ್ಯಾನ ಎಂದು ಈ ಜಗತ್ತಿಗೆ ತೋರಿಸಿಕೊಟ್ಟವಳು ರಾಧೆಯಾದರೆ, ಪ್ರೇಮವೆಂದರೆ ಅನುಭಾವಿಕ ತುಡಿತ ಎಂದು ಹೇಳಿದವನು ಕೃಷ್ಣ. ಹೀಗಾಗಿಯೇ ಅವರಿಬ್ಬರೂ ಇಂದಿಗೂ ನಮ್ಮ ದೇವರ ಕೋಣೆಗಳಲ್ಲಿದ್ದಾರೆ.
.ಇಷ್ಟೆಲ್ಲಾ ಪ್ರೇಮದ ಬಗೆಗೆ ಪರಂಪರೆಯನ್ನು , ಪಾವಿತ್ರತೆಯನ್ನು, ನಂಬಿಕೆಯನ್ನು ಹೊಂದಿರುವ ನಾವು ಪಾಶ್ಚಾತ್ಯರ “ಡೇ” ಸಂಸ್ಕøತಿಗೆ ವಶವಾಗುತ್ತಿದ್ದೇವೆ ಅಂತಾದರೆ, ಅದು ನಮ್ಮಗಳ ಅದರಲ್ಲೂ ಮುಖ್ಯವಾಗಿ ಇಂದಿನ ಯುವಕ ಯುವತಿಯರಲ್ಲಿ ಕಡಿಮೆಯಾಗುತ್ತಿರುವ ಜೀವಂತಿಕೆ, ಸಡಿಲವಾಗುತ್ತಿರುವ ಸಂಬಂಧಗಳು, ಪರಸ್ಪರ ಅಪನಂಬಿಕೆ ಮತ್ತು ಶಿಥಿಲವಾಗುತ್ತಿರುವ ಭಾವನೆಗಳ ಲಕ್ಷಣವಲ್ಲದೆ ಬೇರೇನೂ ಅಲ್ಲ.
ಈಗ್ಗೆ ಕೆಲ ವರ್ಷಗಳ ಹಿಂದೆಯಷ್ಟೇ ವಿಶ್ವದ ಮಾರುಕಟ್ಟೆಯಿಂದ ಹೊಸ ಹೊಸ ತಂತ್ರಜ್ಞಾನದ ಜೊತೆಗೆ ಬಂದು ಭಾರತಿಯ ಮಾರುಕಟ್ಟೆಗೆ ಬಿದ್ದ ಸರಕುಗಳಲ್ಲಿ ಈ ವ್ಯಾಲೆಂಟೈನ್ಸ್ ಡೇ ಕೂಡ ಒಂದು, ಭಾವನೆಗಳ ಹಂಗಿಲ್ಲದೆ ಬದುಕುವ ವಿದೇಶಿಯರು, ತಮ್ಮಗಳ ನಡುವಿನ ನಂಟನ್ನು ಉಳಿಸಿಕೊಳ್ಳುವ ಸಲುವಾಗಿ ಅವಲಂಬಿಸಿದ್ದು ಇಂತಹ ಡೇ ಸಂಸ್ಕøತಿಯನ್ನು ಅಷ್ಟೇ, ಆದರೆ ಹಿಂದಿನಿಂದಲೂ ವಿದೇಶಿ ಸಂಸ್ಕøತಿಯನ್ನು ಅನುಸರಿಸುವುದೇ ನಮ್ಮ ಹೆಗ್ಗಳಿಕೆ ಎಂದುಕೊಂಡ ನಾವು, ಅದೇ ರೀತಿ ಹಿಂದುಮುಂದು ನೋಡದೇ ಅನುಕರಣೆಯ ತೆಕ್ಕೆಗೆ ಬಿದ್ದೆವಷ್ಟೇ, ಅಲ್ಲದೇ ಅದು ಕೇವಲ ಹದಿಹರೆಯದವರ, ಗಂಡು ಹೆಣ್ಣಿನ ನಡುವಣ ಸಖ್ಯಕ್ಕೆ ಮಾತ್ರ ಎನ್ನುವಂತಹ ಭ್ರಮೆಗೆ ಒಳಗಾದೆವು. ಅದರ ವ್ಯಾಪ್ತಿಯನ್ನು, ಪರಿಧಿಯನ್ನು , ಅರ್ಥವನ್ನು ನಮಗೆ ಬೇಕಾದಂತೆ ಬಳಸಿಕೊಳ್ಳತೊಡಗಿದೆವು. ಅಲ್ಲಿಗೆ ಸಂತ ವ್ಯಾಲೆಂಟೈನ ಮೂಲ ಆಶಯವೂ ಮೂಲೆಗೆ ಬಿತ್ತು.
ಅಂತರಂಗದ ಒಲವಿನ ವಿಸ್ಮಯವನ್ನು ಬಹಿರಂಗವಾಗಿಸುವುದು ಹೊಸದಾಗಿ ಕಂಡಿತು. ಕಣ್ಣಲೇ ಕಲೆಯುತ್ತಿದ್ದವರು ಡೇಟಿಂಗ್ ಚಟಕ್ಕೆ ಬಿದ್ದೆವು. “ನೀನು ನನಗಿಷ್ಟ” ಎಂದು ಹೇಳಲು ಹೊಯ್ದಾಡುತ್ತಿದ್ದವರು, “ಒಂದು ರಾತ್ರಿ.. ತಪ್ಪೇನು” ಎನ್ನುವಂತಹ ಯಾಂತ್ರೀಕತೆಗೆ, ಮುಕ್ತತೆಗೆ ತೆರೆದುಕೊಂಡೆವು, ಪ್ರೇಮಿಗಳ ದಿನದ ಆಚರಣೆ ಎಂದರೆ ಸ್ವಚ್ಛಂದವಾಗಿ,. ಸ್ವೇಚ್ಛೆಯಾಗಿ ಕಾಲಹರಣ ಮಾಡುವುದು ಎನ್ನುವ ನಿಲುವಿಗೆ ಬಂದುಬಿಟ್ಟೆವು. ಇದಕ್ಕೆ ನವನವೀನ ಅವಕಾಶಗಳನ್ನುಒದಗಿಸಿಕೊಟ್ಟಿದ್ದು ನಮ್ಮ ವ್ಯಾಪಾರಿ ವರ್ಗ. ದುಬಾರಿ ಉಡುಗೊರೆಗಳು, ಆ ದಿನಕ್ಕೆಂದೆ ತಯಾರಾಗಿ ನಿಂತ ಪಬ್‍ಗಳು, ರೆಸಾರ್ಟ್‍ಗಳು, ರೇವ್ ಪಾರ್ಟಿಗಳು ಈ ಎಲ್ಲವೂ ಪ್ರೇಮ ಎನ್ನುವ ಪವಿತ್ರ ಪದಕ್ಕೊಂದು ಬೇರೆಯದೇ ಕಲ್ಪನೆಯನ್ನು ಹುಡುಕಿತಂದವೆಂದರೆ ತಪ್ಪಾಗಲಾರದೇನೋ ..
ಇಂತಹ ಆಚರಣೆಯೊಂದು ನಮ್ಮ ನಡುವೆ ಬಂದು ನಿಂತ ಕ್ಷಣದಲ್ಲಿ ಪರ ವಿರೋಧದü ಚರ್ಚೆಗಳು ವೇದಿಕೆಗಳಲ್ಲಿ ರಾರಾಜಿಸಿದವು ಎಂಬುದನ್ನು ಬಿಟ್ಟರೆ ಮತ್ತೇನೂ ಆಗಲಿಲ್ಲ. ಆಗಬೇಕಾಗಿಯೂ ಇಲ್ಲ. ಕಾರಣ ಪ್ರೇಮ ಎಂಬುವಂತದ್ದು ಯಾವುದೇ ಚೌಕಟ್ಟಿಗೆ ನಿಲುಕುವಂತದ್ದಲ್ಲ. ಯಾರದೋ ಮರ್ಜಿಗೆ ಸಿಗುವಂತದ್ದಲ್ಲ. ಅದು ಮನುಷ್ಯನ ಬದುಕಿನ ಅನಿವಾರ್ಯತೆ. ಅಲ್ಲದೆ ಬದಲಾವಣೆ ಎಂಬುದು ಬದುಕಿನ ನೈಜ ನಿಯಮ ಅದನ್ನು ಹೇಗೆ ಸ್ವೀಕರಿಸುತ್ತೇವೆಯೋ ಅದು ಹಾಗೆ ಒದಗುತ್ತದೆ.
ಆದರೂ, ಈ ಎಲ್ಲ ಮಾತುಗಳನ್ನು ತರ್ಕಗಳನ್ನು ಬದಿಗಿಟ್ಟು ಹೇಳುವುದಾದರೆ, ಪ್ರೇಮ ಎನ್ನುವುದು ಒಂದು ನವಿರಾದ ಅನುಭವ, ಅದು ಎಲ್ಲ ಮನುಷ್ಯನ ಜೀವನದಲ್ಲಿ ಬಯಸಿಯೋ ಬಯಸದೆಯೋ ಬಂದು ಆವರಿಸಿಕೊಳ್ಳುವ ಅನುಪಮವಾದ ಒಂದು ಬಂಧ.…ಅದು ಜೀವಸೆಲೆಯಂತೆ ಜೊತೆಗಿದ್ದು ಮೌನವಾಗಿ ಹರಿಯುತ್ತಿದ್ದರೆ ಚಂದ, ಸಂತಸ ಹಂಚಿಕೊಳ್ಳುವ ಕ್ಷಣಗಳು ನಿಜಕ್ಕೂ ಬೇಕು. ಜೀವ ಬೆಸೆದವರೊಡನೆ ಬೆರೆಯುವ ಬಯಕೆ ಸಹಜ, ಆದರೆ ನಾವಿರುವ ಪರಿಸರವೂ ನಮ್ಮ ಅರಿವಿನಲ್ಲಿರಬೇಕು. ಮರುಳಾದೆವೆಂದು ಮನಬಂದಂತೆ ಇರಲಾದೀತೇನು? ಖಂಡಿತಾ ಪ್ರೀತಿಸಿ, ಪ್ರೀತಿಸುವುದು ತಪ್ಪಲ್ಲ ಈ ಜಗದ ಅಣು ಅಣುವನ್ನೂ ಕೂಡ. ಕಾರಣ ಪ್ರೀತಿಯಿಲ್ಲದೆ ದ್ವೇóಷವೂ ಹುಟ್ಟುವುದಿಲ್ಲ ಅಲ್ವಾ?.

ಮತ್ತಷ್ಟು ಸುದ್ದಿಗಳು

vertical

Latest News

ಭಾರತದ ಮೊದಲ ಟ್ರಾನ್ಸ್ಮೆನ್ ಸಹದ್ ಈಗ ತುಂಬು ಗರ್ಭಿಣಿ!

newsics.com ಕೊಟ್ಟಾಯಂ(ಕೇರಳ): ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಕೋಝಿಕ್ಕೋಡ್‌ನ ಉಮ್ಮಲತ್ತೂರ್‌ನ ಟ್ರಾನ್ಸ್‌ಜೆಂಡರ್ ದಂಪತಿ ಹೊಸದೊಂದು ಆವಿಷ್ಕಾರಕ್ಕೆ ಸಿದ್ಧರಾಗಿದ್ದಾರೆ. ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಸಹದ್ ಮತ್ತು ಗಂಡಾಗಿ ಹುಟ್ಟಿ...

ಹುಡುಗಿಯರನ್ನು ನೋಡಿ ಪ್ರಜ್ಞಾಹೀನನಾಗಿ ಆಸ್ಪತ್ರೆ ಸೇರಿದ ಪರೀಕ್ಷಾರ್ಥಿ!

newsics.com ಪಟ್ನಾ: ಬಹುತೇಕರು ಹುಡುಗಿಯರನ್ನು ನೋಡಿ‌ ಖುಷಿಪಡುತ್ತಾರೆ. ಕೆಲವರು ಇನ್ನೂ ಇಲೊಂದು ಹೆಜ್ಜೆ ಮುಂದೆ ಹುಡುಗಿಯರನ್ನು ಚುಡಾಯಿಸುತ್ತಾರೆ. ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಹುಡುಗಿಯರನ್ನು ನೋಡಿ ಮೂರ್ಛೆ ಹೋಗಿದ್ದಾನೆ. ಪರೀಕ್ಷೆ ಬರೆಯಲಾರದೆ ಆಸ್ಪತ್ರೆ ಸೇರಿದ್ದಾನೆ. ಸಂಪೂರ್ಣ ವಿದ್ಯಾರ್ಥಿನಿಯರಿದ್ದ...

ವಾಯುಭಾರ ಕುಸಿತ: ತಮಿಳ್ನಾಡಲ್ಲಿ ಭಾರೀ ಮಳೆ, ಶಾಲೆಗಳಿಗೆ ರಜೆ

newsics.com ಚೆನ್ನೈ(ತಮಿಳುನಾಡು): ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಗುರುವಾರ ಭಾರೀ ಮಳೆ ಸುರಿಯುತ್ತಿದೆ. ಮಳೆ ಹಿನ್ನೆಲೆಯಲ್ಲಿ ಮೈಲಾಡುತುರೈ ನಾಗಪಟ್ಟಣಂ ಜಿಲ್ಲೆಗಳಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಶ್ರೀಲಂಕಾದ ಕರಾವಳಿಯಿಂದ 80 ಕಿಮೀ...
- Advertisement -
error: Content is protected !!