ಅಮ್ಮ ಅನ್ನೋದು ಒಂದು ಬಯಲಾಜಿಕಲ್ ರಿಲೇಶನ್ ಮಾತ್ರ ಅಲ್ಲ… ಭಾವನಾತ್ಮಕ ಬೆಸುಗೆ ಕೂಡ ಹೌದು. ಅಮ್ಮಾ ಅನ್ನೋದು ಸಂಬಂಧಕ್ಕಿಂತ ಹೆಚ್ಚಾಗಿ ಒಂದು ಮಧುರ ಅನುಭೂತಿ. ಅದಮ್ಯವಾದ ನಿಸ್ವಾರ್ಥ ಪ್ರೀತಿ.
newsics.com@gmail.com
• ಸೀಮಾ ಪಿ.
ಅಮ್ಮಂದಿರ ದಿನದ ಶುಭಾಶಯಗಳು ಅಮ್ಮ
ಅದು ಎರಡಕ್ಷರದ ಶಬ್ದ.. ಆದರೆ ಅಮ್ಮನ ಜವಾಬ್ದಾರಿ, ಪ್ರೀತಿ ಭೂಮಿ ತೂಕದ್ದು. ‘ಅಮ್ಮಾ’ ಪ್ರಪಂಚದ ಎಲ್ಲಾ ಭಾಷೆಗಳಲ್ಲಿ ಈ ಪದಕ್ಕೆ ಒಂದೇ ಅರ್ಥ.
ಒಂಭತ್ತು ತಿಂಗಳು ಹೊತ್ತು, ಜೀವ ಹೋಗುವಷ್ಟು ನೋವನ್ನ ಉಂಡು ಮಗುವಿಗೆ ಜನ್ಮ ನೀಡ್ತಾಳೆ. ಮಗು ಅಳೋದು ಕೇಳಿ ಅಮ್ಮ ನಗೋದು ಆವಾಗ್ಲೇ ಅನ್ಸುತ್ತೆ. ಚಳಿಯಾದಾಗ ಅವಳ ಸೆರಗನ್ನು ಮಗುವಿಗೆ ಹೊದಿಸುತ್ತಾಳೆ. ಅದೇ ಸೆಖೆಯಾದಾಗ ಅದೇ ಸೆರಗು ಬೀಸಣಿಗೆಯಾಗುತ್ತದೆ.
ಮದುವೆಯಾಗಿ ಒಂದು ಮಗು ಆಗುವವರೆಗೂ ಹೆಣ್ಣು ತನ್ನ ಕೆರಿಯರ್ ಬಗ್ಗೆ ಹೆಚ್ಚಿನ ಗಮನ ಕೊಡ್ತಾಳೆ. ಆದ್ರೆ ಅಮ್ಮ ಅನ್ನೋ ಪ್ರಮೋಷನ್ ಸಿಗ್ತಾ ಇದ್ದ ಹಾಗೇನೇ ಆ ಮಗುವಿನ ಭವಿಷ್ಯ ರೂಪಿಸೋದೆ ಆಕೆಯ ಕೆರಿಯರ್ ಗೋಲ್ ಆಗಿಬಿಡುತ್ತೆ. ಅವಳೊಂದು ಸೂಪರ್ ವುಮನ್.
ಇದು ಹೊತ್ತು ಹೆತ್ತ ಅಮ್ಮಂದಿರ ಕಥೆ. ಹೆರದೆ ಅದೆಷ್ಟೋ ಮಕ್ಕಳಿಗೆ ತಾಯಿಯಾದವರೂ ಇದ್ದಾರೆ.. ಅಮ್ಮ ಅನ್ನೋದು ಒಂದು ಬಯಲಾಜಿಕಲ್ ರಿಲೇಶನ್ ಮಾತ್ರ ಅಲ್ಲ… ಭಾವನಾತ್ಮಕ ಬೆಸುಗೆ ಕೂಡ ಹೌದು. ಅಮ್ಮಾ ಅನ್ನೋದು ಸಂಬಂಧಕ್ಕಿಂತ ಹೆಚ್ಚಾಗಿ ಒಂದು ಮಧುರ ಅನುಭೂತಿ. ಅಧಮ್ಯವಾದ ನಿಸ್ವಾರ್ಥ ಪ್ರೀತಿ. ಆ ಅನುಬಂಧಕ್ಕೆ ಲಿಂಗದ ತಾರತಮ್ಯ ಇಲ್ಲ. ಸ್ನೇಹಿತರು, ಅಕ್ಕ ತಂಗಿಯರು, ಅಣ್ಣ ತಮ್ಮಂದಿರು, ಮಕ್ಕಳ ಪ್ರೀತಿಯಲ್ಲೂ ಅಮ್ಮನ ಮಮತೆ ಇದೆ.. ಅಮ್ಮ ಅನ್ನೋದು not just a word. It is an emotion. World’s most beautiful EMOTION.
ಅಮ್ಮಂದಿರಿಗೆ, ಅಮ್ಮಂದಿರ ಪ್ರೀತಿಯನ್ನು ಹಂಚುತ್ತಿರುವ ಬ್ಯೂಟಿಫುಲ್ ಮನಸ್ಸುಗಳಿಗೆ ಅಮ್ಮಂದಿರ ದಿನದ ಶುಭಾಶಯಗಳು.