Saturday, January 23, 2021

ರಾಷ್ಟ್ರ ನಿರ್ಮಾಣಕ್ಕಾಗಿ ಯುವಶಕ್ತಿ ಜಾಗೃತವಾಗಲಿ

ಇಂದು (ಜನವರಿ 12) ರಾಷ್ಟ್ರೀಯ ಯುವದಿನ. ಯುವಶಕ್ತಿಗೆ ಯಾವ ಅಡೆತಡೆಯೂ ಇಲ್ಲ. ಅವರಿಗೆ ಬೇಕಿರುವುದು ಮಾರ್ಗದರ್ಶನ ಮಾತ್ರ. ರಾಷ್ಟ್ರ ನಿರ್ಮಾಣಕ್ಕಾಗಿ ಯುವಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ಚಾನಲೈಸ್ ಮಾಡುವುದೊಂದೇ ಈಗಿರುವ ಸವಾಲು. ಹಾಗೆ ನೋಡಿದರೆ ಇದು ಯಾವತ್ತೂ ಇರುವ ಸವಾಲೇ ಸರಿ.  ♦ ಇಂದು ರಾಷ್ಟ್ರೀಯ ಯುವದಿನ  
♦ ಸುಮನಾ ಲಕ್ಷ್ಮೀಶ
newsics.com@gmail.com ಲಂಕಾರಿಕ ವಸ್ತುಗಳು, ಲೋಟ, ಪೀಠೋಪಕರಣ, ಡೈನಿಂಗ್ ಟೇಬಲ್, ಟ್ರೇ… ಎಲ್ಲೆಲ್ಲೂ ಫಳಫಳ ಹೊಳೆಯುವ ಗಾಜು ನೋಡಲು ಬಹಳ ಅದ್ದೂರಿಯಾಗಿ, ಮುದ್ದಾಗಿ ಕಾಣಿಸುತ್ತದೆ. ಇನ್ನು, ಸಾಮಾನ್ಯ ಅಂಗಡಿಗಳಲ್ಲಿ ಒಡೆದ ಸೋಡಾ, ಕೋಲಾ ಬಾಟಲಿಗಳು ನಿತ್ಯವೂ ಕಸದ ಬುಟ್ಟಿಗೆ ಸೇರುತ್ತವೆ. ಗಾಜು ಸುಲಭವಾಗಿ ಮಣ್ಣಿನಲ್ಲಿ ಸೇರುವುದಿಲ್ಲ. ಎಲ್ಲಾದರೂ ಹಾಕಿದರೆ ಅಪಾಯ ಗ್ಯಾರಂಟಿ. ಹಾಗಾದರೆ, ಅದನ್ನು ಹೇಗೆ ಸಂಸ್ಕರಣ ಮಾಡುವುದು? ದೆಹಲಿಯ ಯುವ ಹೈದನೊಬ್ಬನ ಬಳಿ ಇದಕ್ಕೆ ಪರಿಹಾರವಿದೆ.
ಗ್ಲಾಸ್ ಟು ಸ್ಯಾಂಡ್- ಉದಿತ್ ಸಿಂಘಾಲ್
ಬಳಕೆಗೆ ಬೇಡವಾದ ಗಾಜುಗಳನ್ನು ಸೇರಿಸಿ ಸಿಲಿಕಾ ಮರಳನ್ನಾಗಿ ಪರಿವರ್ತಿಸುವ ಮೂಲಕ ಇದನ್ನು ಬಳಕೆಗೆ ಯೋಗ್ಯವನ್ನಾಗಿ ಮಾಡುವುದು ದೆಹಲಿ ಮೂಲಕ ಉದಿತ್ ಸಿಂಘಾಲ್ ಯೋಜನೆ. ಇದಕ್ಕಾಗಿ ಈತ ಗ್ಲಾಸ್ ಟು ಸ್ಯಾಂಡ್ ಎನ್ನುವ ಸ್ಟಾರ್ಟಪ್ ಅನ್ನೇ ಆರಂಭಿಸಿದ್ದಾರೆ.
ರಾಜಧಾನಿ ದೆಹಲಿಯಂತೂ ಹೇಳಿಕೇಳಿ ಮೆಟ್ರೋ ನಗರ. ನಿತ್ಯವೂ ನೂರಾರು ಟನ್ ಗಾಜಿನ ತ್ಯಾಜ್ಯ ಸೃಷ್ಟಿಯಾಗುತ್ತದೆ. ಇವುಗಳನ್ನು ಎಲ್ಲಿ ಸಂಸ್ಕರಣ ಮಾಡಲು ಸಾಧ್ಯ? ಇಂಥದ್ದೊಂದು ಯೋಚನೆ ಹೊಳೆದಿದ್ದೇ ತಡ, ಆದಿತ್ಯ ಗಾಜಿನಿಂದ ಉತ್ಕೃಷ್ಟ ಗುಣಮಟ್ಟದ ಸಿಲಿಕಾ ಮರಳನ್ನು ತಯಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಇವರು ಈ ಕಾರ್ಯ ಆರಂಭಿಸಿದ್ದು 2018ರಲ್ಲಿ. ಕೇವಲ ಕೆಲವೇ ತಿಂಗಳಲ್ಲಿ ಅವರ ಉದ್ದೇಶ ಸಾಫಲ್ಯ ಕಂಡಿತ್ತು. ಕಸದಿಂದ ರಸ ಸೃಷ್ಟಿಸಿದ್ದರು. ಈ ಸಿಲಿಕಾ ಮರಳನ್ನು ನಿರ್ಮಾಣ ಕಾಮಗಾರಿಗಳಲ್ಲಿ ಅತ್ಯಂತ ಯಶಸ್ವಿಯಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯ. ಉದಿತ್  ಅವರ ಈ ಸಾಧನೆಯನ್ನು ಮೊದಲು ಗುರುತಿಸಿದ್ದು ವಿಶ್ವ ಸಂಸ್ಥೆ. 2020ರ ಸುಸ್ಥಿರ ಅಭಿವೃದ್ಧಿಯ ಗುರಿಯ ಜಾಗತಿಕ ಯುವ ನೇತಾರರ ಪಟ್ಟಿಯಲ್ಲಿ 18 ವರ್ಷದ ಆದಿತ್ಯ ಅವರೂ ಸ್ಥಾನ ಪಡೆದು ಭಾರತದ ಹೆಮ್ಮೆಯೆನಿಸಿದರು.
ಶೂನ್ಯ ತ್ಯಾಜ್ಯ ಜೈವಿಕ ವ್ಯವಸ್ಥೆ ರೂಪಿಸುವುದು ಆದಿತ್ಯ ಅವರ ಕನಸು. ಇದಕ್ಕಾಗಿ ಅವರು ಪರಿಸರಕ್ಕೆ ಮಾರಕವಾಗಿರುವ ಗಾಜನ್ನು ಆಯ್ಕೆ ಮಾಡಿಕೊಂಡಿದ್ದುದು ವಿಶೇಷ. ಗುಂಡಿಯಲ್ಲಿ ಗಾಜಿನ ಬಾಟಲಿಗಳನ್ನು ಸುರಿದು ಅವುಗಳನ್ನು ಮರಳನ್ನಾಗಿ ಪರಿವರ್ತಿಸುವುದು ಆರ್ಥಿಕವಾಗಿಯೂ ಮೌಲ್ಯವುಳ್ಳದ್ದಾಗಿದೆ.
ಹವಾಮಾನ ಬದಲಾವಣೆಗೆ ತಂತ್ರಜ್ಞಾನದ ನೆರವು: ಸ್ವಪನ್ ಮೆಹ್ರಾ
ಆಧುನಿಕ ಜೀವನದ ಸಮಸ್ಯೆಗಳ ಪರಿಹಾರಕ್ಕೆ ಆಧುನಿಕ ಮಾರ್ಗಗಳೇ ಬೇಕು. ಸಾಂಪ್ರದಾಯಿಕ ಪದ್ಧತಿಗಳೊಂದಿಗೆ ಆಧುನಿಕ ತಂತ್ರಜ್ಞಾನಗಳನ್ನೂ ಅಳವಡಿಸಿಕೊಂಡು ಮುಂದೆ ಸಾಗಿದಾಗಲೇ ಪರಿಸರ, ಹವಾಮಾನದ ರಕ್ಷಣೆ ಸಾಧ್ಯ. ಇದನ್ನು ತುಂಬ ಚಿಕ್ಕ ವಯಸ್ಸಿನಲ್ಲೇ ಮನಗಂಡು ಮಾರ್ಗೋಪಾಯಗಳನ್ನು ರೂಪಿಸಿದವರು ಸ್ವಪನ್ ಮೆಹ್ರಾ. ಐಯೊರಾ ಇಕಾಲಾಜಿಕಲ್ ಸಿಸ್ಟಮ್ ಎನ್ನುವ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ. ಹವಾಮಾನ ಸಂಬಂಧಿ ಕಾರ್ಯನೀತಿ ಹಾಗೂ, ಜೀವವ್ಯವಸ್ಥೆ ಸಂರಕ್ಷಣೆಯಲ್ಲಿ ಜಾಗತಿಕ ಧ್ವನಿಯಾಗಿ ಹೊರಹೊಮ್ಮಿದ್ದಾರೆ ಸ್ವಪನ್. ಅರಣ್ಯೀಕರಣ ಹಣಕಾಸು, ತಂತ್ರಜ್ಞಾನ, ಸಾಮುದಾಯಿಕ ಅರಣ್ಯಗಳ ಕುರಿತು ಅವರ ಕಾರ್ಯಕ್ಕೆ ಮೆಸಾಚುಸೆಟ್ಸ್ ತಾಂತ್ರಿಕ ಸಂಸ್ಥೆಯ ಹವಾಮಾನ ಲ್ಯಾಬ್, ನಾರ್ವೆಯ ಆರ್ ಇಡಿಡಿ (ರೆಡ್ಯೂಸಿಂಗ್ ಎಮಿಷನ್ಸ್ ಫ್ರಾಮ್ ಡಿಫಾರೆಸ್ಟೇಷನ್, ಫಾರೆಸ್ಟ್ ಡಿಗ್ರೇಡೇಷನ್) ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ನೀತಿ ಒಕ್ಕೂಟಗಳು ಮೆಚ್ಚುಗೆ ವ್ಯಕ್ತಪಡಿಸಿವೆ.
ಭಾರತದ ಸುಮಾರು ಒಂದು ಕೋಟಿ ಹೆಕ್ಟೇರ್ ಅರಣ್ಯ ರಕ್ಷಣೆಯಲ್ಲಿ ಇವರ ತಂತ್ರಜ್ಞಾನ ಆಧಾರಿತ ಮಾರ್ಗೋಪಾಯಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅಸ್ಸಾಂ ರಾಜ್ಯದ ಮುಖ್ಯಮಂತ್ರಿಗಳ ಹವಾಮಾನ ಕಾರ್ಯಪಡೆಯ ಮುಖ್ಯಸ್ಥರಾಗಿಯೂ ಅವರ ಸಾಧನೆ ಅಪಾರ. “ನಮ್ಮ ದೇಶದಲ್ಲಿ ಶೇ.15ರಷ್ಟು ತ್ಯಾಜ್ಯ ನೀರನ್ನಷ್ಟೇ ಸಂಸ್ಕರಣೆ ಮಾಡುತ್ತಿದ್ದೇವೆ. ನಮ್ಮ ದೇಶದ ಅಗತ್ಯಗಳಿಗೆ ಶೇ. 80-90ರಷ್ಟು ಸಂಸ್ಕರಣೆ ಅಗತ್ಯ’ ಎಂದು ಪ್ರತಿಪಾದಿಸುವ ಸ್ವಪನ್, ಕೇವಲ ಮಾತುಗಳಲ್ಲಿ ತಮ್ಮ ಆಶಯ ಹೇಳುವುದಿಲ್ಲ. ಬದಲಿಗೆ, ಇದಕ್ಕಾಗಿ ಹಲವಾರು ತಾಂತ್ರಿಕ ಮಾರ್ಗೋಪಾಯಗಳನ್ನು ಹೊಂದಿದ್ದಾರೆ, ಅದನ್ನು ಅಳವಡಿಸಿಕೊಂಡೂ ಬಂದಿದ್ದಾರೆ.
………
ಆದಿತ್ಯ ಸಿಂಘಾಲ್, ಸ್ವಪನ್ ಮೆಹ್ರಾ ಎರಡು ಉದಾಹರಣೆಗಳು ಮಾತ್ರ. ಪ್ರಸ್ತುತ ಮಾನವನ ಜೀವನದಕ್ಕೆ ಸಂಬಂಧಿಸಿದ ಬಹುದೊಡ್ಡ ಸಮಸ್ಯೆ ಹವಾಮಾನ ಬದಲಾವಣೆ, ಏರುತ್ತಿರುವ ತಾಪಮಾನ, ಹವಾಮಾನದಲ್ಲಿ ವಿಪರೀತ ಏರಿಳಿತ. ಇವುಗಳಿಗೆ ತಮ್ಮದೇ ಆದ ವಿಧಾನಗಳ ಮೂಲಕ ಪರಿಹಾರ ಕಂಡುಹಿಡಿಯುವುದು ಇಬ್ಬರ ಗುರಿ. ದೈನಂದಿನ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ಇಂಥ ನೂರಾರು, ಸಾವಿರಾರು, ಲಕ್ಷಾಂತರ ಯುವಕರು ನಮ್ಮ ನಡುವೆ ಶ್ರಮಿಸುತ್ತಿದ್ದಾರೆ. ಅವರೆಲ್ಲರೂ ನಮ್ಮ ದೇಶದ ಯುವ ಶಕ್ತಿ, ನಮ್ಮ ಹೆಮ್ಮೆ.
ರಾಷ್ಟ್ರೀಯ ಯುವದಿನ
ಇಂದು ನಮ್ಮ ದೇಶ ರಾಷ್ಟ್ರೀಯ ಯುವದಿನವನ್ನು ಆಚರಿಸುತ್ತಿದೆ. ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಪ್ರತಿವರ್ಷ ಜನವರಿ 12ರಂದು ರಾಷ್ಟ್ರೀಯ ಯುವ ದಿನ ಆಚರಿಸುವ ಪರಿಪಾಠ 1985ರಿಂದ ಬೆಳೆದುಬಂದಿದೆ. 1984ರಲ್ಲಿ ಜ.12ನ್ನು “ರಾಷ್ಟ್ರೀಯ ಯುವದಿನ’ ವನ್ನಾಗಿ ಕೇಂದ್ರ ಸರ್ಕಾರ ಘೋಷಿಸಿತು.
2021ರ ಯುವದಿನದ ಥೀಮ್ ಅನ್ನು “ರಾಷ್ಟ್ರ ನಿರ್ಮಾಣಕ್ಕಾಗಿ ಯುವ ಶಕ್ತಿಯ ಪಥ ನಿರ್ದೇಶನ’ ಎಂದು ಇರಿಸಲಾಗಿದೆ.
ಯುವಜನಾಂಗವೆಂದರೆ ಅಪಾರ ಕನಸುಗಳ ಜಗತ್ತು. ಅವುಗಳನ್ನು ಸಾಕಾರಗೊಳಿಸುವ ಸಾಮರ್ಥ್ಯವೂ ಅವರಿಗೆ ಇರುತ್ತದೆ. ಆದರೆ, ಬೇಕಿರುವುದು ಮಾರ್ಗದರ್ಶನ ಮಾತ್ರ. ಯುವಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ಚಾನಲೈಸ್ ಮಾಡುವ ಮೂಲಕ ಅವರನ್ನು ಸಶಕ್ತಗೊಳಿಸುವುದು ಇಂದಿನ ಆದ್ಯತೆಯಾಗಲಿ.
ಸ್ವಾಮಿ ವಿವೇಕಾಂದರ ಧೀಶಕ್ತಿ ನಮ್ಮೆಲ್ಲ ಯುವಕರಲ್ಲೂ ತುಂಬಲಿ. ಅವರ ಕನಸು ನಮ್ಮ ನಡುವಿನ ಯುವಜನರ ಮೂಲಕ ಸಾಕಾರಗೊಳ್ಳಲಿ. ಆಧುನಿಕ ಬದುಕಿನ ಯಾವುದೇ ಆಮಿಷ, ಅಪಸವ್ಯಗಳಿಗೆ ಬಲಿಯಾಗದೆ ಯುವಶಕ್ತಿಯ ನೈಜ ಪ್ರದರ್ಶನವಾಗಲಿ. ದೇಶಕ್ಕೆ ಹೆಮ್ಮೆ ತರಲಿ.

ಮತ್ತಷ್ಟು ಸುದ್ದಿಗಳು

Latest News

ತುಪ್ಪದ ಬೆಡಗಿ ರಾಗಿಣಿ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆ

Newsics.com ಬೆಂಗಳೂರು: ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಇಂದು ಪರಪ್ಪನ ಅಗ್ರಹಾರ ಜೈಲ್ಲಿನಿಂದ ಬಿಡುಗಡೆಯಾಗಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರತಿ ಅವರ ವಕೀಲರ ಕೈ ಸೇರಿದ್ದು,...

ಕೊರೋನಾ ಮಾರ್ಗ ಸೂಚಿ ಉಲ್ಲಂಘನೆ: ವಾಟಾಳ್ ವಿರುದ್ದ ಎಫ್ ಐ ಆರ್

Newsics.com ಬೆಂಗಳೂರು: ನಗರದಲ್ಲಿ ಕೊರೋನಾ ಮಾರ್ಗ ಸೂಚಿ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸದಿರುವ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಡಿಸೆಂಬರ್ 5, 2020ರಂದು ನಗರದ...

ಶಿವಮೊಗ್ಗ ದುರಂತ: ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ

Newsics.com ಬೆಂಗಳೂರು: ದೇಶವನ್ನು ನಡುಗಿಸಿರುವ ಶಿವಮೊಗ್ಗ ಸಮೀಪದ  ಹುಣಸೋಡು ಸ್ಫೋಟ ಸಂಭವಿಸಿದ ಪ್ರದೇಶಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಭೇಟಿ ನೀಡಲಿದ್ದಾರೆ. ದುರಂತದಲ್ಲಿ ಐದು ಮಂದಿ ಮೃತಪಟ್ಟಿರುವುದನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ. ಶಿವಮೊಗ್ಗ ನಗರದಿಂದ ಕೇವಲ ಎಂಟು ಕಿಲೋ...
- Advertisement -
error: Content is protected !!