Wednesday, October 28, 2020

ಇಂದಿನಿಂದ ನವರಾತ್ರಿ; ಪ್ರಕೃತಿಯ ಪೂರ್ಣರೂಪ ಶೈಲಪುತ್ರಿ

ಇಂದಿನಿಂದ ನವರಾತ್ರಿ ಉತ್ಸವ. ಚಳಿಗಾಲದ ಆರಂಭದ ಹಬ್ಬ ನವರಾತ್ರಿ. ಶರತ್ಕಾಲದಲ್ಲಿ ಆರಂಭವಾಗುವ ಈ ಹಬ್ಬ ಶರನ್ನವರಾತ್ರಿ ಎಂದೂ ಪ್ರಸಿದ್ಧ. ಕೆಟ್ಟದ್ದನ್ನು ಸೋಲಿಸಿ ವಿಜಯವನ್ನು ಸೂಚಿಸುವ ಹಬ್ಬ. ಮಹಿಷಾಸುರನ ಜತೆ ಯುದ್ಧ ಮಾಡಿ, ಜಯ ಗಳಿಸಿದ ನೆನಪಿಗಾಗಿ ಈ ಹಬ್ಬ. ಅಹಂ ಮತ್ತು ದುಷ್ಟತನದ ಮೇಲೆ ಶಾಂತಿ ಮತ್ತು ವಿಜಯವನ್ನು ಪ್ರತಿನಿಧಿಸುವ ಹಬ್ಬ. ದುರ್ಗಾದೇವಿಯು 9 ಅವತಾರದಲ್ಲಿ ಅವತರಿಸಿ ದುಷ್ಟ ಶಕ್ತಿಯ ನಿಗ್ರಹ ಮಾಡಿದ್ದರ ಪ್ರತೀಕವಾಗಿ ಆಚರಣೆಗೊಳ್ಳುವ ನವರಾತ್ರಿಲ್ಲಿ ನವದುರ್ಗೆಯರ ಆರಾಧನೆ. ದುರ್ಗೆಯ 9 ರೂಪಗಳನ್ನು ಅನಾವರಣಗೊಳಿಸುವ ಪುಟ್ಟ ಪ್ರಯತ್ನ ನಮ್ಮದು.

    ನವರಾತ್ರಿ- 1ನೇ ದಿನ    


♦ ವಿದುಷಿ ಮಿತ್ರಾ ನವೀನ್

ಭರತನಾಟ್ಯ ಗುರು
ನಾದವಿದ್ಯಾಲಯ ಸಂಗೀತ, ನೃತ್ಯ ಅಕಾಡೆಮಿ, ಮೈಸೂರು
newsics.com@gmail.com


ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಮ್ ।
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನಿ ॥
ಜಗಜ್ಜನನಿ ದುರ್ಗಾದೇವಿಯ ಮೊದಲನೇ ಸ್ವರೂಪ ಶೈಲಪುತ್ರೀ. ಪರ್ವತರಾಜ ಹಿಮವಂತನ ಪುತ್ರಿಯಾಗಿ ಅವತರಿಸಿದ ಕಾರಣ ಶೈಲಪುತ್ರೀ ಎಂಬ ಹೆಸರಾಯಿತು. ವೃಷಭವಾಹನೆಯಾದ ಇವಳ ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲಪುಷ್ಪ ಸುಶೋಭಿತವಾಗಿದೆ. ಇವಳು, ಹಿಂದಿನ ಜನ್ಮದಲ್ಲಿ ಪ್ರಜಾಪತಿ ದಕ್ಷನ ಮಗಳಾಗಿ ಹುಟ್ಟಿ ‘ಸತಿ’ ಎಂದು ಕರೆಸಿಕೊಂಡಿದ್ದಳು. ಪತಿಗಾದ ಅಪಮಾನವನ್ನು ಸಹಿಸಲಾರದೆ ತನ್ನ ಶರೀರವನ್ನು ಭಸ್ಮವಾಗಿಸಿದಳು. ಮುಂದಿನ ಜನ್ಮದಲ್ಲಿ ಶೈಲರಾಜ ಹಿಮವಂತನ ಪುತ್ರಿಯ ರೂಪದಲ್ಲಿ ಅವತರಿಸಿದಳು. ಶೈಲಪುತ್ರಿ ದೇವಿಯ ವಿವಾಹವೂ ಆಯಿತು. ನವದುರ್ಗೆಯರಲ್ಲಿ ಪ್ರಥಮ ಶೈಲಪುತ್ರಿ ದುರ್ಗೆಯ ಮಹತ್ವ ಮತ್ತು ಶಕ್ತಿಗಳು ಅನಂತವಾಗಿದವೆ. ಮೊದಲನೇ ದಿನದ ಉಪಾಸನೆಯಲ್ಲಿ ಯೋಗಿಗಳು ತಮ್ಮ ಮನವನ್ನು ಮೂಲಾಧಾರ ಚಕ್ರದಲ್ಲಿ ನೆಲೆಗೊಳಿಸುತ್ತಾರೆ. ಇಲ್ಲಿಂದಲೇ ಅವರ ಯೋಗಸಾಧನೆ ಪ್ರಾರಂಭವಾಗುತ್ತದೆ.
ಐಹಿಕ ಅಸ್ತಿತ್ವದ ಮೂಲ…
ಅವಳನ್ನು ಸತಿ, ಭವಾನಿ, ಪಾರ್ವತಿ ಅಥವಾ ಹೇಮವತಿ ಎಂದೂ ಕರೆಯುತ್ತಾರೆ. ತಾಯಿ ಶೈಲಪುತ್ರೀ ಪ್ರಕೃತಿಯ ಸಂಪೂರ್ಣ ರೂಪ.
ಶೈಲಪುತ್ರಿ ಈ ಭೂಮಿಯ ಗ್ರಹದ ಅಭಿವ್ಯಕ್ತಿ, ಇದರಲ್ಲಿ ಈ ಭೂಮಿಯ ಮೇಲೆ ಮತ್ತು ಜಗತ್ತಿನಾದ್ಯಂತ ಸ್ಪಷ್ಟವಾಗಿ ಕಂಡುಬರುತ್ತದೆ. ಶೈಲಪುತ್ರಿ ವಾತಾವರಣ ಸೇರಿದಂತೆ ಎಲ್ಲಾ ಬೆಟ್ಟಗಳು, ಕಣಿವೆಗಳು, ಜಲ ಸಂಪನ್ಮೂಲಗಳು, ಸಮುದ್ರಗಳು ಮತ್ತು ಸಾಗರಗಳನ್ನು ಒಳಗೊಂಡಿದೆ.
ಆದ್ದರಿಂದ, ಶೈಲಪುತ್ರಿ ಐಹಿಕ ಅಸ್ತಿತ್ವದ ಮೂಲತತ್ವವಾಗಿದೆ. ಅವಳ ವಾಸಸ್ಥಾನವು ಮೂಲಾಧಾರ ಚಕ್ರದಲ್ಲಿದೆ. ದೈವಿಕ ಶಕ್ತಿ ಪ್ರತಿಯೊಬ್ಬನಲ್ಲೂ ಸುಪ್ತವಾಗಿದೆ. ಅದನ್ನು ಸಾಕಾರಗೊಳಿಸಬೇಕು. ಇದರ ಬಣ್ಣ ಕಡುಗೆಂಪು. ತತ್ವ (ಅಂಶ) ಭೂಮಿಯಾಗಿದೆ. ಶೈಲಪುತ್ರಿಯ ಪೂಜೆಯಿಂದ ಮಾತೃತ್ವ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

   ಲೇಖಕರ ಕುರಿತು…  
ವಿದುಷಿ ಮಿತ್ರಾ ನವೀನ್, ಸಂಗೀತ ವಿದ್ವಾನ್ ನವೀನ್ ಎಂ.ಎಸ್. ಅಂದಗಾರು ದಂಪತಿಯ ಕನಸಿನ ಕೂಸಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೆಲೆಗೊಂಡ ನಾದವಿದ್ಯಾಲಯ (ರಿ) ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಡಾನ್ಸ್ ಹದಿನಾಲ್ಕು ವರ್ಷಗಳಿಂದ ನೂರಾರು ವಿದ್ಯಾರ್ಥಿಗಳನ್ನು ತರಬೇತುಗೊಳಿಸುತ್ತಿದೆ. ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಕೀ ಬೋರ್ಡ್ ಶಿಕ್ಷಣ ನೀಡುತ್ತಿರುವ ನಾದವಿದ್ಯಾಲಯ, ಆನ್ಲೈನ್ ಮೂಲಕ ವಿದೇಶಿ ವಿದ್ಯಾರ್ಥಿಗಳಿಗೂ ಸಂಗೀತ, ನೃತ್ಯ ಕಲಿಸುತ್ತಿದೆ. ಜತೆಗೆ ತಾತ್ವಿಕ, ಆಧ್ಯಾತ್ಮಿಕ ಹಾಗೂ ನೈತಿಕ ಮೌಲ್ಯಗಳೊಂದಿಗೆ ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಗೆ ಅಕಾಡೆಮಿ ಪ್ರಾಮುಖ್ಯತೆ ನೀಡುತ್ತಿದೆ. ಶ್ರೀಕೃಷ್ಣ ವಿಲಾಸ, ದೇವಿ ವೈಭವ, ಮಹೇಶ್ವರ ವೈಭವ, ಆದಿ ಪೂಜ್ಯ, ಶಿವಶರಣೆ ಮಹಾದೇವಿ, ಗೀತಾಮೃತಸಾರ, ರಾಮಾಯಣದರ್ಶನಂ, ಪುರಂದರದಾಸಾಮೃತ, ಧರ್ಮವಿಜಯಂ, ಪುಣ್ಯಕೋಟಿ, ಸತ್ ಕ್ರಿಯ, ಮುಕ್ತಕ ನರ್ತನ ಮೊದಲಾದವು ಅಕಾಡೆಮಿಯಿಂದ ರೂಪುಗೊಂಡು ಪ್ರದರ್ಶನಗೊಂಡ ಅದ್ಭುತ ನೃತ್ಯರೂಪಕಗಳು. ಹೆಚ್ಚಿನ ಮಾಹಿತಿಗಾಗಿ 9449203120 / www.nadavidyalaya.com

ಮತ್ತಷ್ಟು ಸುದ್ದಿಗಳು

Latest News

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 65 ಸಾಧಕರಿಗೆ ಪ್ರಶಸ್ತಿ ಗೌರವ

Newsics.com ಬೆಂಗಳೂರು: ರಾಜ್ಯದ ಪ್ರತಿಷ್ಠಿತ  2020ರ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸಂಘ ಸಂಸ್ಥೆಗಳು, ಸಾಧಕರು ಸೇರಿದಂತೆ 65 ಮಂದಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.  ಬೆಂಗಳೂರಿನಲ್ಲಿ  ಕನ್ನಡ ಮತ್ತು...

ಎನ್‌ಐಎನಿಂದ ಬೆಂಗಳೂರಲ್ಲಿ ಇನ್ನಿಬ್ಬರು ಶಂಕಿತ ಉಗ್ರರ ಬಂಧನ

newsics.comಬೆಂಗಳೂರು: ನಗರದಲ್ಲಿ ಶಂಕಿತ ಐಸಿಸ್ ಉಗ್ರರ ಭೇಟೆ ಮುಂದುವರಿಸಿರುವ ಎನ್‌ಐಎ ಅಧಿಕಾರಿಗಳ ತಂಡ, ಇದೀಗ ಇನ್ನಿಬ್ಬರು ಶಂಕಿತರನ್ನು ಬಂಧಿಸಿದೆ.ಬೆಂಗಳೂರಿನ ಥಣಿಸಂದ್ರದಲ್ಲಿರುವ ನಿವಾಸವೊಂದರ ಮೇಲೆ ದಾಳಿ ನಡೆಸಿರುವ ದೆಹಲಿ ಎನ್‌ಐಎ ಟೀಮ್,...

9 ಗಂಟೆ ವಿಚಾರಣೆ ವೇಳೆ ಮೋದಿಗೆ ಕೇಳಲಾಗಿತ್ತು 100 ಪ್ರಶ್ನೆ

Newsics.com ನವದೆಹಲಿ:  ಗುಜರಾತ್ ಹಿಂಸಾಚಾರ ಕುರಿತಂತೆ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದ ರಾಘವನ್ , ಮೋದಿ ವಿಚಾರಣೆ ಕುರಿತು ಮಾಹಿತಿ ಬಹಿರಂಗಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಐಪಿಎಸ್ ಅಧಿಕಾರಿಯಾಗಿದ್ದ ರಾಘವನ್ ನೇತೃತ್ವದಲ್ಲಿ ವಿಶೇಷ...
- Advertisement -
- Advertisement -
error: Content is protected !!