Wednesday, October 28, 2020

ತಪಸ್ಸಿನ ಪ್ರತೀಕ ಬ್ರಹ್ಮಚಾರಿಣೀ…

ದೇವಿಯ ಉಪಾಸನೆಯಿಂದ ಸರ್ವರಿಗೂ ಸಿದ್ಧಿ ಮತ್ತು ವಿಜಯದ ಪ್ರಾಪ್ತಿ ಆಗುತ್ತದೆ. ನವರಾತ್ರಿ ಪೂಜೆಯ ಎರಡನೇ ದಿನ ಇವಳ ಸ್ವರೂಪದ ಉಪಾಸನೆ ಮಾಡಲಾಗುತ್ತದೆ. ತಾಯಿ ಶ್ವೇತಾಂಬರಿ. ಬಿಳಿಯ ಬಣ್ಣ ಶುದ್ಧತೆ ಹಾಗೂ ಶಾಂತಿಯ ಪ್ರತೀಕವಾಗಿದೆ. ಜಗನ್ಮಾತೆ ದುರ್ಗೆಯ ಎರಡನೇ ಸ್ವರೂಪವು ಭಕ್ತರಿಗೆ ಹಾಗೂ ಸಿದ್ಧರಿಗೆ ಅನಂತ ಫಲವನ್ನು ಕೊಡುವುದು.

    ನವರಾತ್ರಿ- 2ನೇ ದಿನ    


♦ ವಿದುಷಿ ಮಿತ್ರಾ ನವೀನ್

ಭರತನಾಟ್ಯ ಗುರು
ನಾದವಿದ್ಯಾಲಯ ಸಂಗೀತ-ನೃತ್ಯ ವಿದ್ಯಾಲಯ, ಮೈಸೂರು
newsics.com@gmail.com


 ಧಾನ ಕರಪದ್ಮಾಭ್ಯಾಮಕ್ಷಮಾಲಾ ಕಮಂಡಲೂ ।
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ॥
ಜಗಜ್ಜನನಿ ದುರ್ಗೆಯ ನವಶಕ್ತಿಯರಲ್ಲಿ ಎರಡನೇ ಸ್ವರೂಪವು ಬ್ರಹ್ಮಚಾರಿಣೀಯಾಗಿದೆ. ಇಲ್ಲಿ ‘ಬ್ರಹ್ಮ’ ಶಬ್ದದ ಅರ್ಥ ತಪಸ್ಸು ಎಂದಾಗಿದೆ. ಬ್ರಹ್ಮಚಾರಿಣೀ ಅರ್ಥಾತ್ ತಪಸ್ಸಿನ ಚಾರಿಣೀ- ತಪಸ್ಸನ್ನು ಆಚರಿಸುವವಳು. ‘ವೇದಸ್ತತ್ವಂ ತಪೋ ಬ್ರಹ್ಮ’ ವೇದ ಮತ್ತು ತಪಸ್ಸು ‘ಬ್ರಹ್ಮ’ ಶಬ್ದದ ಅರ್ಥವಾಗಿದೆ. ಬ್ರಹ್ಮಚಾರಿಣೀ ದೇವಿಯ ಸ್ವರೂಪವು ಪೂರ್ಣ ಜ್ಯೋತಿರ್ಮಯ ಹಾಗೂ ಅತ್ಯಂತ ಭವ್ಯವಾಗಿದೆ. ಇವಳ ಬಲಗೈಯಲ್ಲಿ ಜಪಮಾಲೆ ಮತ್ತು ಎಡಗೈಯ್ಯಲ್ಲಿ ಕಮಂಡಲ ಇರುತ್ತದೆ.
ಹಿಂದಿನ ಜನ್ಮದಲ್ಲಿ ಇವಳು ಹಿಮವಂತನ ಪುತ್ರಿಯಾಗಿ ಅವತರಿಸಿದಾಗ ನಾರದರ ಉಪದೇಶದಿಂದ ಇವಳು ಭಗವಾನ್ ಶಿವನನ್ನು ಪತಿಯಾಗಿ ಪಡೆದುಕೊಳ್ಳಲು ಅತಿಯಾದ ಕಠಿಣ ತಪಸ್ಸನ್ನು ಮಾಡಿದ್ದಳು. ಇಂತಹ ದುಷ್ಕರ ತಪಸ್ಸಿನ ಕಾರಣ ಇವಳನ್ನು ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣೀ ಎಂಬ ಹೆಸರಿನಿಂದ ಕರೆಯಲಾಯಿತು.
1000 ವರ್ಷ ಇವಳು ಕೇವಲ ಫಲ ಮೂಲಗಳನ್ನು ತಿಂದು ಕಳೆದಿದ್ದಳು. ನೂರು ವರ್ಷಗಳವರೆಗೆ ಕೇವಲ ಎಲೆಗಳನ್ನು ತಿನ್ನುತ್ತಿದ್ದಳು. ಕೆಲವು ದಿನಗಳವರೆಗೆ ಕಠಿಣ ಉಪವಾಸವಿದ್ದು ಆಕಾಶದ ಕೆಳಗೆ ಮಳೆ ಬಿಸಿಲಿನ ಭಯಾನಕ ಕಷ್ಟಗಳನ್ನು ಸಹಿಸಿಕೊಂಡು, ತಪಗಳನ್ನು ಆಚರಿಸಿದಳು. ಎಲೆಗಳ ಸೇವನೆಯನ್ನೂ ಬಿಟ್ಟ ಕಾರಣದಿಂದ ಇವಳನ್ನು ‘ಅಪರ್ಣಾ’ ಎಂದು ಕರೆಯುತ್ತಾರೆ. ಕೊನೆಗೆ ಬ್ರಹ್ಮದೇವರು, ‘ಭಗವಾನ್ ಚಂದ್ರಮೌಳಿ ಶಿವನು ನಿನಗೆ ಪತಿಯಾಗಿ ದೊರೆಯುವನು’ ಎಂದು ಆಶೀರ್ವದಿಸಿದರು.
ದೇವಿಯ ಉಪಾಸನೆಯಿಂದ ಸರ್ವರಿಗೂ ಸಿದ್ಧಿ ಮತ್ತು ವಿಜಯದ ಪ್ರಾಪ್ತಿ ಆಗುತ್ತದೆ. ನವರಾತ್ರಿ ಪೂಜೆಯ ಎರಡನೇ ದಿನ ಇವಳ ಸ್ವರೂಪದ ಉಪಾಸನೆ ಮಾಡಲಾಗುತ್ತದೆ. ಅಂದು ಸಾಧಕನ ಮನಸ್ಸು ಸ್ವಾಧಿಷ್ಠಾನ ಚಕ್ರದಲ್ಲಿ ಸ್ಥಿತವಾಗುತ್ತದೆ. ತಾಯಿ ಶ್ವೇತಾಂಬರಿ. ಬಿಳಿಯ ಬಣ್ಣ ಶುದ್ಧತೆ ಹಾಗೂ ಶಾಂತಿಯ ಪ್ರತೀಕವಾಗಿದೆ. ಅವಳ ವಾಸಸ್ಥಾನವು ಸ್ವಾಧಿಷ್ಠಾನ ಚಕ್ರದಲ್ಲಿ.
ಜಗನ್ಮಾತೆ ದುರ್ಗೆಯ ಎರಡನೇ ಸ್ವರೂಪವು ಭಕ್ತರಿಗೆ ಹಾಗೂ ಸಿದ್ಧರಿಗೆ ಅನಂತ ಫಲವನ್ನು ಕೊಡುವುದು. ಅವಳ ಉಪಾಸನೆಯಿಂದ ಮನುಷ್ಯರಲ್ಲಿ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ಇವುಗಳ ವೃದ್ಧಿ ಆಗುತ್ತದೆ. ಜೀವನದ ಕಠಿಣ ಸಂಘರ್ಷದಲ್ಲಿಯೂ ಅವನ ಮನಸ್ಸು ಕರ್ತವ್ಯದಿಂದ ವಿಚಲಿತವಾಗಲಾರದು.

ಮತ್ತಷ್ಟು ಸುದ್ದಿಗಳು

Latest News

ಪ್ರೊಫೆಸರ್ ಹತ್ಯೆ ಪ್ರಕರಣ: ಖ್ಯಾತ ಗಾಯಕಿ ಅನನ್ಯ ಭಟ್ ತಂದೆ ಬಂಧನ

newsics.com ಮೈಸೂರು: ಸಾಂಸ್ಕೃತಿಕ ನಗರ ಮೈಸೂರನ್ನು ಬೆಚ್ಚಿ ಬೀಳಿಸಿದ್ದ ಪ್ರೊಫೆಸರ್ ಪರಶಿವಮೂರ್ತಿ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಹತ್ಯೆಗೆ ಸುಫಾರಿ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಖ್ಯಾತ ಗಾಯಕಿ ಅನನ್ಯ...

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 65 ಸಾಧಕರಿಗೆ ಪ್ರಶಸ್ತಿ ಗೌರವ

Newsics.com ಬೆಂಗಳೂರು: ರಾಜ್ಯದ ಪ್ರತಿಷ್ಠಿತ  2020ರ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸಂಘ ಸಂಸ್ಥೆಗಳು, ಸಾಧಕರು ಸೇರಿದಂತೆ 65 ಮಂದಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.  ಬೆಂಗಳೂರಿನಲ್ಲಿ  ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ ಟಿ ರವಿ ...

ಎನ್‌ಐಎನಿಂದ ಬೆಂಗಳೂರಲ್ಲಿ ಇನ್ನಿಬ್ಬರು ಶಂಕಿತ ಉಗ್ರರ ಬಂಧನ

newsics.comಬೆಂಗಳೂರು: ನಗರದಲ್ಲಿ ಶಂಕಿತ ಐಸಿಸ್ ಉಗ್ರರ ಭೇಟೆ ಮುಂದುವರಿಸಿರುವ ಎನ್‌ಐಎ ಅಧಿಕಾರಿಗಳ ತಂಡ, ಇದೀಗ ಇನ್ನಿಬ್ಬರು ಶಂಕಿತರನ್ನು ಬಂಧಿಸಿದೆ.ಬೆಂಗಳೂರಿನ ಥಣಿಸಂದ್ರದಲ್ಲಿರುವ ನಿವಾಸವೊಂದರ ಮೇಲೆ ದಾಳಿ ನಡೆಸಿರುವ ದೆಹಲಿ ಎನ್‌ಐಎ ಟೀಮ್,...
- Advertisement -
- Advertisement -
error: Content is protected !!