Saturday, November 26, 2022

ಸೃಷ್ಟಿಯಾಯ್ತು ಐದನೇ ಮಹಾಸಾಗರ!

Follow Us

* ಅಧಿಕೃತವಾಗಿ ಅಸ್ತಿತ್ವಕ್ಕೆ ಬಂತು ದಕ್ಷಿಣ ಮಹಾಸಾಗರ

ಶತಮಾನಗಳಿಂದಲೂ ಚರ್ಚೆಯ ವಸ್ತುವಾಗಿ ಚಾಲ್ತಿಯಲ್ಲಿದ್ದ ದಕ್ಷಿಣ ಮಹಾಸಾಗರದ ಅಸ್ತಿತ್ವ ಕುರಿತ ವಿವಾದಕ್ಕೆ ತೆರೆ ಎಳೆಯಲಾಗಿದೆ. ದಕ್ಷಿಣ ಮಹಾಸಾಗರಕ್ಕೆ ವಿಶ್ವದ ಐದನೇ ಮಹಾಸಾಗರದ ಸ್ಥಾನ ನೀಡಲಾಗಿದೆ.


ಪ್ರಮಥ
newsics.com@gmail.com

ವಿಶ್ವದ ಮಹಾಸಾಗರಗಳ ಸಂಖ್ಯೆ ಐದಕ್ಕೇರಿದೆ! ಹೌದು, ಮಹಾಸಾಗರಗಳು ಎಷ್ಟು ಎನ್ನುವ ಪ್ರಶ್ನೆಗೆ ಮಕ್ಕಳಿನ್ನು ಐದು ಎಂದು ಉತ್ತರಿಸಬೇಕಾಗಿದೆ. ಹಿಂದಿದ್ದ ನಾಲ್ಕು ಮಹಾಸಾಗರಗಳ ಪಟ್ಟಿಗೆ ದಕ್ಷಿಣ ಮಹಾಸಾಗರ ಹೊಸದಾಗಿ ಸೇರ್ಪಡೆಯಾಗಿದೆ. ನ್ಯಾಷನಲ್‌ ಜಿಯಾಗ್ರಾಫಿಕ್‌ ಅಧಿಕೃತವಾಗಿ ಹೊಸ ಮಹಾಸಾಗರಕ್ಕೆ ನಾಮಕರಣ ಮಾಡಿದೆ.

ಅಂಟಾರ್ಕ್ಟಿಕ ನಿರ್ದಿಷ್ಟ ಸುತ್ತಲಿನ ವಲಯ ಮತ್ತು ದಕ್ಷಿಣ ಧ್ರುವದ ಪ್ರದೇಶವನ್ನು ದಕ್ಷಿಣ ಮಹಾಸಾಗರ ಎಂದು ಪರಿಗಣಿಸಲಾಗಿದೆ. ದೀರ್ಘಕಾಲದಿಂದಲೂ ಈ ಕುರಿತು ಚರ್ಚೆ ನಡೆದಿತ್ತು. ಇದೀಗ, ಗೊಂದಲಗಳಿಗೆ ತೆರೆ ಹಾಕಿ ಇತ್ತೀಚೆಗೆ ಆಚರಿಸಲಾದ ವಿಶ್ವ ಸಾಗರ ದಿನದಂದು ಹೊಸ ಮಹಾಸಾಗರವನ್ನು ಅಧಿಕೃತವಾಗಿ ಸೃಷ್ಟಿ ಮಾಡಲಾಗಿದೆ.

• ದಕ್ಷಿಣ ಮಹಾಸಾಗರ ನಾಲ್ಕನೇ ಅತಿದೊಡ್ಡ ಮಹಾಸಾಗರ

ದಕ್ಷಿಣ ಮಹಾಸಾಗರವು ಎಪ್ಪತ್ತು ಲಕ್ಷ ಚದರ ಮೈಲಿ ವ್ಯಾಪ್ತಿ ಹೊಂದಿದೆ. ಈ ಮೂಲಕ ನಾಲ್ಕನೇ ಅತಿದೊಡ್ಡ ಮಹಾಸಾಗರವಾಗಿದೆ. ಪೆಸಿಫಿಕ್‌, ಅಟ್ಲಾಂಟಿಕ್‌, ಹಿಂದು ಮಹಾಸಾಗರಗಳ ಬಳಿಕ ನಾಲ್ಕನೇ ಸ್ಥಾನದಲ್ಲಿ ದಕ್ಷಿಣ ಮಹಾಸಾಗರವಿದ್ದು, ಆರ್ಕ್ಟಿಕ್‌ ಮಹಾಸಾಗರ ಕೊನೆಯ ಸ್ಥಾನದಲ್ಲಿದೆ. ದಕ್ಷಿಣ ಮಹಾಸಾಗರದ ಪ್ರದೇಶವನ್ನು ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಿಲ್ಲ ಎನ್ನುವ ವಾದವೂ ಇದೆ. ಏಕೆಂದರೆ, ಈ ಮಹಾಸಾಗರ ಪ್ರತಿವರ್ಷ ಕೆಲವು ಇಂಚುಗಳಷ್ಟು ತನ್ನ ಆಕಾರ ಬದಲಿಸುತ್ತದೆ! ಸಾಗರ ತಳದ ಭೂಭಾಗ ವಿಸ್ತಾರವಾಗುತ್ತಿರುವುದರಿಂದ ಇದು ಸಂಭವಿಸುತ್ತದೆ ಎನ್ನುವುದು ವಿಜ್ಞಾನಿಗಳ ವಾದ. ಆದರೆ, ಇದಕ್ಕೆ ಸಂಪೂರ್ಣ ಸಹಮತವಿಲ್ಲ.

• ದಕ್ಷಿಣ ಮಹಾಸಾಗರದ ಅಸ್ತಿತ್ವ ಚರ್ಚೆಯ ವಿಷಯ

ಹದಿನೆಂಟನೇ ಶತಮಾನದಿಂದಲೂ ದಕ್ಷಿಣ ಮಹಾಸಾಗರದ ಅಸ್ತಿತ್ವ ಚರ್ಚೆಯ ವಸ್ತುವಾಗಿತ್ತು. ಭೂಪಟದ ನಕ್ಷೆ ಸಿದ್ಧಪಡಿಸುವ ವಿಜ್ಞಾನಿಗಳು ಮತ್ತು ಭೂಗೋಳ ತಜ್ಞರಲ್ಲಿ ಕೆಲವರು ದಕ್ಷಿಣ ಮಹಾಸಾಗರದ ಅಸ್ತಿತ್ವವನ್ನು ಒಪ್ಪುತ್ತಿದ್ದರು. ಇನ್ನು ಕೆಲವರು ಈ ಭಾಗ ಪೆಸಿಫಿಕ್‌, ಅಟ್ಲಾಂಟಿಕ್‌, ಹಿಂದು ಮಹಾಸಾಗರಗಳ ವಿಸ್ತಾರಿತ ಪ್ರದೇಶವಷ್ಟೆ ಎನ್ನುವುದಾಗಿ ಭಾವಿಸುತ್ತಿದ್ದರು. ಆದರೆ, ದಕ್ಷಿಣ ಮಹಾಸಾಗರದ ನೀರು ಅರವತ್ತು ಡಿಗ್ರಿ ಅಕ್ಷಾಂಶದ ಸಂಪೂರ್ಣ ದಕ್ಷಿಣ ಧ್ರುವವನ್ನು ಆವರಿಸಿಕೊಂಡಿದೆ. ಆದರೆ, ನ್ಯಾಷನಲ್‌ ಜಿಯಾಗ್ರಫಿಕ್‌ ಸೊಸೈಟಿ ಈ ವಾದವನ್ನು ಎಂದಿಗೂ ಒಪ್ಪಿಕೊಂಡಿರಲಿಲ್ಲ. ಹಾಗೂ ತನ್ನ ನಕ್ಷೆಯಲ್ಲಿ ಅದನ್ನು ಗುರುತಿಸಿರಲಿಲ್ಲ.

• ದಕ್ಷಿಣ ಮಹಾಸಾಗರದ ಭೂಗೋಳ ಮತ್ತು ವಾತಾವರಣ ವಿಭಿನ್ನ

ದಕ್ಷಿಣ ಮಹಾಸಾಗರ ಮೂರು ಕೋಟಿ ವರ್ಷಗಳ ಹಿಂದೆಯೇ ನಿರ್ಮಾಣವಾಗಿದೆ ಎನ್ನಲಾಗಿದೆ. ಅಮೆರಿಕ ಮತ್ತು ಅಂಟಾರ್ಕ್ಟಿಕ ಪ್ರತ್ಯೇಕವಾದಾಗ ನಿರ್ಮಾಣವಾದ ಡ್ರೇಕ್‌ ಪ್ಯಾಸೇಜ್‌ ನಿಂದಾಗಿ ದಕ್ಷಿಣ ಮಹಾಸಾಗರ ಉದ್ಭವವಾಯಿತು. ಆದರೂ ಉಳಿದೆಲ್ಲ ಮಹಾಸಾಗರಗಳಿಗಿಂತ ವಯಸ್ಸಿನಲ್ಲಿ ಇದು ಅತ್ಯಂತ ಚಿಕ್ಕದು. ಈ ಸಾಗರದ ನೀರು ಸುತ್ತಲಿನ ನೀರಿಗಿಂತ ಭಿನ್ನವಾಗಿದೆ. ಅಂಟಾರ್ಕ್ಟಿಕದಿಂದ ಹರಿದುಬರುವ ನೀರಿನಿಂದಾಗಿ, ಈ ವೃತ್ತಾಕಾರದ ವಲಯ ವಿಭಿನ್ನವಾಗಿದೆ. ದಕ್ಷಿಣ ಮಹಾಸಾಗರದ ಅಸ್ತಿತ್ವವನ್ನು ಸಾಬೀತುಪಡಿಸಲು ಈ ಅಂಶವನ್ನೇ ಇಟ್ಟುಕೊಂಡು ಇಂಟರ್‌ ನ್ಯಾಷನಲ್‌ ಹೈಡ್ರೊಗ್ರಾಫಿಕ್‌ ಬ್ಯೂರೋ ವಾದ ಮಾಡಿತ್ತು.

• ದಕ್ಷಿಣ ಮಹಾಸಾಗರ ವಿಪರೀತ ಹವಾಮಾನ ಏರಿಳಿತ

ದಕ್ಷಿಣ ಮಹಾಸಾಗರ ಹೇಳಿಕೇಳಿ ಅಂಟಾರ್ಕ್ಟಿಕದ ನೀರನ್ನು ಹೊಂದಿದೆ. ದಕ್ಷಿಣ ಧ್ರುವದ ಪರಿಣಾಮದಿಂದಲೂ ಅತ್ಯಂತ ವೈಪರೀತ್ಯದ ಹವಾಮಾನ ಹೊಂದಿರುತ್ತದೆ. ಸಾಗರದ ತಾಪಮಾನ ಫ್ರೀಜಿಂಗ್‌ ಪಾಯಿಂಟ್‌ ಅಂದರೆ, ನೀರು ಹೆಪ್ಪುಗಟ್ಟುವ ಅಂಶಕ್ಕಿಂತಲೂ ಅಧಿಕವಾಗಿರುತ್ತದೆ. ಅತ್ಯಂತ ಕನಿಷ್ಠ ಉಷ್ಣಾಂಶ ಹೊಂದಿರುತ್ತದೆ. ಮೈನಸ್‌ ಎರಡರಿಂದ ಮೈನಸ್‌ ಹತ್ತು ಡಿಗ್ರಿ ಇಲ್ಲಿನ ಸಾಮಾನ್ಯ ಉಷ್ಣಾಂಶ.

• ಅತ್ಯಂತ ಆಳಪ್ರದೇಶ ಹೊಂದಿರುವ ದಕ್ಷಿಣ ಮಹಾಸಾಗರ

ದಕ್ಷಿಣ ಮಹಾಸಾಗರ ಆಳ ಪ್ರದೇಶ ಹೊಂದಿರುವುದೇ ಹೆಚ್ಚು. ಕೆಲವೆಡೆ ಮಾತ್ರವೇ ಆಳವಿಲ್ಲದ ಭಾಗ ಹೊಂದಿದೆ. ಇದರ ಆಳ ಹದಿಮೂರು ಸಾವಿರ ಅಡಿಗಳಿಂದ ಹದಿನಾರು ಸಾವಿರ ಅಡಿಗಳವರೆಗೆ ಇದೆ ಎಂದರೆ ಅಚ್ಚರಿಯಾಗಬಹುದು. ದಕ್ಷಿಣದ ಅರವತ್ತು ಡಿಗ್ರಿ ಮತ್ತು ಪಶ್ಚಿಮದ ಇಪ್ಪತ್ನಾಲ್ಕು ಡಿಗ್ರಿ ಪ್ರದೇಶದಲ್ಲಿ ಅತ್ಯಂತ ಆಳವಾದ ಪ್ರದೇಶವಿದೆ. ಇದನ್ನು ಸೌತ್‌ ಸ್ಯಾಂಡ್‌ ವಿಚ್‌ ಟ್ರೆಂಚ್‌ ಎಂದು ಕರೆಯಲಾಗಿದೆ. ಇಲ್ಲಿ ಸಾಗರದ ಆಳ 23,740 ಅಡಿ! ಇತರ ಸಾಗರಗಳಲ್ಲಿರುವ ಅತ್ಯಂತ ಆಳ ಪ್ರದೇಶಗಳಲ್ಲಿ ಇದೂ ಒಂದು.

ಮತ್ತಷ್ಟು ಸುದ್ದಿಗಳು

vertical

Latest News

ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ: ನಗ್ನರಾಗಿ ಪೋಸ್ ನೀಡಿದ 2500 ಮಂದಿ

newsics.com ಸಿಡ್ನಿ: ಹೆಚ್ಚುತ್ತಿರುವ ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋಟೋ ಶೂಟ್ ಗೆ 2500 ಮಂದಿ ನಗ್ನರಾಗಿ ಪೋಸ್ ನೀಡಿದ್ದಾರೆ. ಸಿಡ್ನಿಯ ಬೋಂಡಿ...

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ....

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್ ಹೆಸರಿನಲ್ಲಿ ಯುವತಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದ...
- Advertisement -
error: Content is protected !!