Thursday, December 1, 2022

‘ಪಕ್ಷಿ ಸಂರಕ್ಷಣೆ’ಯ ಪಕ್ಷಿನೋಟ new column

Follow Us

ಇಂದಿಗೂ ಈ ಭೋರ್ಗರೆಯುವ ತಂತ್ರಜ್ಞಾನದ ಸಂದರ್ಭದಲ್ಲಿಯೂ ಯುಕ್ತ, ವಿಜ್ಞಾನಾಧಾರಿತ ಕ್ರಮಗಳನ್ನು ಅನುಸರಿಸಿದಲ್ಲಿ ವನ್ಯಜೀವಿಗಳ ಸಂರಕ್ಷಣೆ ಸಾಧ್ಯ ಎಂಬುದು ತಜ್ಞರ ಅಂಬೋಣ. ಈ ನಿಟ್ಟಿನಲ್ಲಿ ಪಕ್ಷಿ ಸಂರಕ್ಷಣೆ ಅಂಕಣದಲ್ಲಿ ಅಗತ್ಯ ತಿಳಿವಳಿಕೆಯನ್ನು ಪಡೆಯೋಣ.

ಪಕ್ಷಿ ಸಂರಕ್ಷಣೆ – 1

ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
newsics.com@gmail.com
www.facebook.com/ksn.bird
ksn.bird@gmail.com
ಮಾನವನಿಗಿಂತ ಲಕ್ಷಾಂತರ ವರ್ಷ ಮೊದಲೇ ವಿಕಾಸಗೊಂಡು ಮಾನವನನ್ನು ಸಹಜೀವಿಯಾಗಿ ಪಡೆದದ್ದು ಪಕ್ಷಿಗಳು. ಅವುಗಳಲ್ಲಿ ಅನೇಕ ಪ್ರಭೇದಗಳು ಮಾನವಕೃತ ಕಾರಣಗಳಿಂದಾಗಿಯೇ ವಿನಾಶದ ಹಾದಿಯನ್ನು ಹಿಡಿದಿವೆ. ಇಂತಹ ಪ್ರಭೇದಗಳ ರಕ್ಷಣೆ ಮಾನವನ ನೈತಿಕ ಹೊಣೆಗಾರಿಕೆಯೇ ಆಗುತ್ತದೆ.
ಮಾನವಕೃತ ಕಾರಣಗಳಿಂದ ತೊಂದರೆಗೀಡಾಗಿರುವ ವನ್ಯಜೀವಿಗಳ (ಅದು ಪಕ್ಷಿ/ಪ್ರಾಣಿ/ಸಸ್ಯ ಯಾವುದೇ ಆಗಿರಬಹುದು) ಸಂರಕ್ಷಣೆಯೇ ವನ್ಯಜೀವಿ ಸಂರಕ್ಷಣೆ. ಇದಕ್ಕಾಗಿ ವಿಜ್ಞಾನಾಧಾರಿತವಾದ ಸಂರಕ್ಷಣಾ ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತದೆ. ಈ ವಾರ ಸಂರಕ್ಷಣಾ ಮನೋಧರ್ಮದ ಮೂಲವನ್ನು ಕಳ್ಳಬೇಟೆಯ ವ್ಯಾಪ್ತಿಯನ್ನು ಪರಿಚಯ ಮಾಡಿಕೊಳ್ಳೋಣ.

* * *

ಸಂರಕ್ಷಣೆಯ ಮೂಲ ಮತ್ತು ಕಳ್ಳಬೇಟೆಯ ವ್ಯಾಪ್ತಿ

ಸಂರಕ್ಷಣೆಯ ಮೂಲ ಎಂದು ನೋಡಿದರೆ ಅದು ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಊಟ ಮಾಡುವ ಮುನ್ನ ತನ್ನ ಎಲೆಗೆ ಬಡಿಸಿಕೊಂಡ ಆಹಾರದಲ್ಲಿ ಹಸಿದವರಿಗೆ ಒಂದು ಭಾಗ, ಪ್ರಾಣಿಪಕ್ಷಿಗಳಿಗೆ ಒಂದು ಭಾಗ ಹಾಗೂ ಅಗ್ನಿಗೆ ಒಂದು ಭಾಗ ಎಂದು ಅರ್ಪಿಸುವ ಹಾಗೂ ಸಸ್ಯಮೂಲದ ಆಹಾರವೇ ಆದರೂ ಆಹಾರ ತಯಾರಿಯ ಮೂಲವಸ್ತುಗಳನ್ನು ಬೇಯಿಸುತ್ತಾರೆ, ಕತ್ತರಿಸುತ್ತಾರೆ, ಹುರಿಯುತ್ತಾರೆ, ಕರಿಯುತ್ತಾರೆ. ಆದ್ದರಿಂದ ಜೀವಹಿಂಸೆಯಾಗುತ್ತದೆ. ಇದರ ಪ್ರಾಯಶ್ಚಿತ್ತವಾಗಿಯೇ ಕೆಲವು ಕ್ರಿಯೆಗಳನ್ನು ಮಾಡಬೇಕೆಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಒಟ್ಟಾರೆಯಾಗಿ ಇದನ್ನು ವೈಶ್ವದೇವ ಎನ್ನಲಾಗುತ್ತದೆ. ಸಹಜೀವಿಗಳಿಗೆ ಆಹಾರ ನೀಡುವುದು ಒಂದು ಬಗೆಯ ರಕ್ಷಣೆಯಾದರೆ ದಯಾಸರ್ವಭೂತೇಶು ಎಂಬ ವಾಕ್ಯ ಪ್ರತಿಜೀವಿಯನ್ನು ದಯೆ, ಕರುಣೆಯಿಂದ ನೋಡಿಕೊಳ್ಳಬೇಕೆಂಬ ಸಂದೇಶವನ್ನು ಕೊಡುತ್ತದೆ. ಇದೂ ಸಂರಕ್ಷಣೆಯಷ್ಟೇ. ಭಗವದ್ಗೀತೆಯ ಉದ್ಯೋಗ ಪರ್ವದಲ್ಲಿ ಕಾಡು ಹುಲಿಗೆ ರಕ್ಷಣೆ; ಹುಲಿಯಿಂದ ಕಾಡಿಗೆ ರಕ್ಷಣೆ ಎಂಬ ಮಾತುಬರುತ್ತದೆ. ಜನಪದರಲ್ಲಿಯೂ ಸಂರಕ್ಷಣೆ ಕುರಿತ ಹೇಳಿಕೆಗಳು ಸಾಕಷ್ಟಿವೆ. ಹೀಗೆ ನಮ್ಮ ಪ್ರಾಚೀನ ಸಾಹಿತ್ಯ ಆಚರಣೆ, ನಂಬಿಕೆಗಳಲ್ಲಿಯೂ ಜಜನಪದರಲ್ಲಿಯೂ ಸಂರಕ್ಷಣೆಯ ಸಂದೇಶವಿದೆ. ಇನ್ನು ಪವಿತ್ರವನಗಳು, ನಾಗಬನಗಳು ಮೂಲದಲ್ಲಿ ಸಂರಕ್ಷಣೆಯ ಉದ್ದೇಶಗಳನ್ನು ಹೊಂದಿದ್ದಂತಹವೇ. ಆದರೆ, ಕೆಡುತ್ತಾ ಸಾಗುವುದೇ ಕಾಲನ ಧರ್ಮ ಎಂಬ ಭಾಗವತದ ವಾಕ್ಯದಂತೆ ಆಗಿದೆ. ಇಂದು ವನ್ಯಜೀವಿಗಳ ಕಳ‍್ಳವ್ಯಾಪಾರ ನಾವು ಕರುಣೆ ತೋರಿ ಶಿಕ್ಷಣ ನೀಡಿಬಿಟ್ಟರೆ ಸರಿಯಾಗಿಬಿಡುತ್ತದೆ ಎನ್ನುವ ಹಂತದಲ್ಲೇನೂ ಇಲ್ಲ. ಬದಲಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವನ್ಯಜೀವಿಗಳ ಕಳ್ಳವ್ಯಾಪಾರದ ವ್ಯಾಪ್ತಿ ಹಲವು ಬಿಲಿಯನ್ ಡಾಲರ್‍ ಹಾಗೂ ಅದು ಕಳ್ಳಸಾಗಣೆಯಾಗುವ ಸರಕಿನ ಪಟ್ಟಿಯಲ್ಲಿ ಮಾದಕ ದ್ರವ್ಯಗಳ ನಂತರದ ಸ್ಥಾನದಲ್ಲಿದೆ ಎಂದರೆ ನಮಗೆ ಸಮಸ್ಯೆಯ ಗಹನತೆ ಅರ್ಥವಾಗಬೇಕು. ಹಾಗಾಗಿ, ಕೇವಲ ಶಿಕ್ಷಣದಿಂದ ಸಂರಕ್ಷಣೆ ಸಾಧ್ಯ ಎಂಬುದು ಮುಗ್ಧವಾದ ಹೇಳಿಕೆಯಾಗುತ್ತದೆ. ಸದ್ಯ ನಡೆಯುತ್ತಿರುವ ಈ ಪ್ರಮಾಣದ ಕಳ್ಳಬೇಟೆ (ಹಾಗೆನೋಡಿದರೆ (ಮತ್ತು ಕಾನೂನು ಪ್ರಕಾರವೂ) ಎಲ್ಲ ಬೇಟೆಯೂ ಕಳ್ಳಬೇಟೆಯೇ! ಕಾನೂನು ಬದ್ಧ ಬೇಟೆ ಇಲ್ಲವೇ ಇಲ್ಲ), ವನ್ಯಪ್ರಾಣಿಗಳ ದೇಹಭಾಗಗಳ ವ್ಯಾಪಾರ, ಅರಣ್ಯಛಿದ್ರೀಕರಣ, ಕಾಡುಗಳ ಹನನ ಇವುಗಳಿಂದಾಗಿ ಕೇವಲ ಪವಿತ್ರವನಗಳಾಗಲಿ, ನಾಗಬನಗಳಾಗಲಿ (ಇವೂ ಶಿಥಿಲವಾಗುತ್ತಿರುವ ಇಂದಿನ ದಿನಮಾನದಲ್ಲಿ) ನಮಗೆ ಅಗತ್ಯವಿರುವ ಪ್ರಮಾಣದ ಸಂರಕ್ಷಣೆ ನೀಡಲು ಸಾಧ್ಯವಿಲ್ಲ. ಇದಕ್ಕಾಗಿ ವೈಜ್ಞಾನಿಕ ಸಂಶೋಧನೆ, ಕಟ್ಟುನಿಟ್ಟಾದ ಕಾಯಿದೆಗಳು ಹಾಗೂ ಅವುಗಳ ಅನುಷ್ಠಾನ ಅತ್ಯಗತ್ಯ. ಇದಕ್ಕಾಗಿ ವಿವಿಧ ದೇಶಗಳಲ್ಲಿ ವಿವಿಧ ಕಾನೂನುಗಳು ಜಾರಿಯಲ್ಲಿವೆ ಸಹ. ಭಾರತದದಲ್ಲಿ ಅನೇಕ ಕಾನೂನುಗಳಿದ್ದು 1972ರಲ್ಲಿ ಜಾರಿಯಾದ ವನ್ಯಜೀವಿ ಸಂರಕ್ಷಣಾ ಕಾಯಿದೆ ಅತೀ ಮಹತ್ವದ್ದು. ಮುಂದೆ ಅದನ್ನು ಪಕ್ಷಿಗಳಿಗೆ ಸೀಮಿತವಾಗಿ ವಿಸ್ತೃತವಾಗಿ ನೋಡೋಣ.
ಒಳ್ಳೆಯ ದಿನಗಳಿದ್ದರೂ ಕ್ರಮೇಣ ಮಾನವನ ವಿಜ್ಞಾನ-ತಂತ್ರಜ್ಞಾನಗಳಲ್ಲಿ ಆದ ಹೊಸ ಸಂಶೋಧನೆಗಳು ಅದರ ಫಲವಾಗಿ ನಡೆದ ಕೈಗಾರಿಕಾ ಕ್ರಾಂತಿಯಿಂದಾಗಿ ಒಂದು ದೊಡ್ಡವರ್ಗ ದುರಾಸೆಗೆ ಬಿದ್ದು ಅನೈತಿಕ ಹಾದಿಯನ್ನು ಹಿಡಿಯಿತು. ಅದರ ಫಲವನ್ನು ನಾವು ಇಂದು ಹಲವು ರೀತಿಯಲ್ಲಿಯೂ ಹವಾಮಾನ ಬದಲಾವಣೆಯಂತಹ ಗಂಭೀರ ಸಮಸ್ಯೆಯ ರೂಪದಲ್ಲಿಯೂ ಅನುಭವಿಸುತ್ತಿದ್ದೇವೆ. ಆದರೆ, ಇಂದಿಗೂ ಈ ಭೋರ್ಗರೆಯುವ ತಂತ್ರಜ್ಞಾನದ ಸಂದರ್ಭದಲ್ಲಿಯೂ ಯುಕ್ತ, ವಿಜ್ಞಾನಾಧಾರಿತ ಕ್ರಮಗಳನ್ನು ಅನುಸರಿಸಿದಲ್ಲಿ ವನ್ಯಜೀವಿಗಳ ಸಂರಕ್ಷಣೆ ಸಾಧ್ಯ ಎಂಬುದು ತಜ್ಞರ ಅಂಬೋಣ. ಈ ನಿಟ್ಟಿನಲ್ಲಿ ಅಗತ್ಯ ತಿಳಿವಳಿಕೆಯನ್ನು ಪಡೆಯೋಣ.

ಮತ್ತಷ್ಟು ಸುದ್ದಿಗಳು

vertical

Latest News

ಅಂದು ಟಿ ವಿ ನಿರೂಪಕಿ ಇಂದು ಮಧ್ಯವರ್ತಿ: ಬಂಧಿತ ಪಿಂಕಿ ಇರಾನಿ ನಿಗೂಢ ಹೆಜ್ಜೆ

newsics.com ನವದೆಹಲಿ: ವಂಚಕ ಸುಕೇಶ್ ಚಂದ್ರ ಶೇಖರ್ ಗೆ ಸೆಲೆಬ್ರಿಟಿಗಳನ್ನು ಪರಿಚಯ ಮಾಡಿಸಿದ್ದ ಮಧ್ಯವರ್ತಿ ಪಿಂಕಿ ಇರಾನಿ ವೃತ್ತಿ ಜೀವನ ಆರಂಭಿಸಿದ್ದು ಟಿ ವಿ ನಿರೂಪಕಿಯಾಗಿ. ಮುಂಬೈನ ಚಾನೆಲ್...

ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ : ಸಿಎಂ ಬೊಮ್ಮಾಯಿ ಸ್ಪಷ್ಟನೆ

newsics.com ಬೆಂಗಳೂರು: ಬಿಜೆಪಿ ತತ್ವಗಳಲ್ಲಿ ನಂಬಿಕೆ ಇಟ್ಟಿರುವ ಪಕ್ಷವಾಗಿದ್ದು, ರೌಡಿಗಳಿಗೆ , ಪಾತಕಿಗಳಿಗೆ ಅವಕಾಶ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಕುಖ್ಯಾತ ಪಾತಕಿ ಸೈಲೆಂಟ್...

ಕೊರಿಯಾದ ಮಹಿಳಾ ಯು ಟ್ಯೂಬರ್ ಗೆ ಕಿರುಕುಳ: ಇಬ್ಬರು ಆರೋಪಿಗಳ ಬಂಧನ

newsics.com ಮುಂಬೈ: ಮಹಾ ನಗರ ಮುಂಬೈನ ಖಾರ್ ಪ್ರದೇಶದಲ್ಲಿ ಸಾವಿರಾರು ಜನರ ಮುಂದೆ ಕೊರಿಯಾದ ಯೂ ಟ್ಯೂಬರ್ ಗೆ ಕಿರುಕುಳ ನೀಡಿದ  ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಶೇಕ್ ಮತ್ತು  ಮೊಹಮ್ಮದ್...
- Advertisement -
error: Content is protected !!