Monday, October 3, 2022

ರಾಮ್‌ಸಾರ್ ತಾಣವಾಗಲು ಬೇಕು ಈ ಅರ್ಹತೆಗಳು

Follow Us

ರಾಮ್‍ಸಾರ್ ತಾಣವೆಂದು ಘೋಷಿಸಿದ ಕೂಡಲೇ ಅದಕ್ಕೆ ವೈಜ್ಞಾನಿಕ ಹಾಗೂ ಅಂತಾರಾಷ್ಟ್ರೀಯ ಮಹತ್ವ ಬಂದುಬಿಡುತ್ತದೆ. ಸರ್ಕಾರ ಹಾಗೂ ಸಂರಕ್ಷಣಾ ಸಂಸ್ಥೆಗಳು ಜಾಗರೂಕವಾಗುತ್ತವೆ. ಜನರೂ ಸರ್ಕಾರ ಹಾಗೂ ಇಂತಹ ಸಂಸ್ಥೆಗಳ ಜೊತೆಗೆ ಕೈಜೋಡಿಸಿ ಸಂರಕ್ಷಣೆಯನ್ನು ಸುಲಭವಾಗಿಸಬೇಕು
.

ಪಕ್ಷಿ ಸಂರಕ್ಷಣೆ- 18


♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
newsics.com@gmail.com
ksn.bird@gmail.com
www.facebook.com/ksn.bird

ಕಳೆದ ಬಾರಿ ಬಾರಿ ಯಾವ ಯಾವ ಸ್ಥಳಗಳು ರಾಮ್‍ಸಾರ್ ತಾಣಗಳಾಗಬಹುದು ಎಂಬುದನ್ನು ನೋಡಿದೆವು. ಈ ಬಾರಿ ಒಂದು ತಾಣವನ್ನು ರಾಮ್‍ಸಾರ್ ತಾಣ ಎಂದು ಘೋಷಿಸಲು ಇರುವ ನಿರ್ಧಾರಕ ನಿಮಯಗಳನ್ನು ತಿಳಿಯೋಣ. ಸಹಜವಾಗಿಯೇ ಈ ನಿಯಮಾವಳಿಗಳು ಬಹಳ ವೈಜ್ಞಾನಿಕ ಹಾಗೂ ಕಟ್ಟುನಿಟ್ಟಾಗಿರುತ್ತವೆ.

ಒಮ್ಮೆ ರಾಮ್‍ಸಾರ್ ತಾಣವೆಂದು ಘೋಷಿಸಿದ ಕೂಡಲೇ ಅದಕ್ಕೆ ವೈಜ್ಞಾನಿಕ ಉಪಹಾಗೂ ಅಂತಾರಾಷ್ಟ್ರೀಯ ಮಹತ್ವ ಬಂದುಬಿಡುತ್ತದೆ. ಸರ್ಕಾರ ಹಾಗೂ ಸಂರಕ್ಷಣಾ ಸಂಸ್ಥೆಗಳು ಜಾಗರೂಕವಾಗುತ್ತವೆ. ಜನರೂ ಸರ್ಕಾರ ಹಾಗೂ ಇಂತಹ ಸಂಸ್ಥೆಗಳ ಜೊತೆಗೆ ಕೈಜೋಡಿಸಿ ಸಂರಕ್ಷಣೆಯನ್ನು ಸುಲಭವಾಗಿಸಬೇಕು.

ಈಗ ನಿಯಮಾವಳಿಗಳನ್ನು ನೋಡೋಣ:
ಒಟ್ಟಾರೆಯಾಗಿ ಒಂಬತ್ತು ನಿಯಮಗಳಿದ್ದು ಅವನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗುಂಪು ಎ ಮತ್ತು ಗುಂಪಿ ಬಿ ಎಂದು. ಗುಂಪು “ಎ”ನಲ್ಲಿ ಅಪರೂಪದ, ಪ್ರಾತಿನಿಧಿಕ ತೇವಭರಿತ ಆವಸಗಳನ್ನು ಸೇರಿಸಲಾಗುವುದು. ಜೊತೆಗೆ, ಅದು ಅಪರೂಪದ, ಅನನ್ಯವಾದ ನೈಸರ್ಗಿಕ ಅಥವಾ ಅರೆನೈಸರ್ಗಿಕ ತೇವಭರಿತ ಭೂಮಿಯಾಗಿದ್ದು ನಿರ್ದಿಷ್ಟ ಜೀವಭೌಗೋಳಿಕ ಪ್ರದೇಶದಲ್ಲಿ ಇದ್ದಲ್ಲಿ ಅದನ್ನು ಅಂತಾರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ಪ್ರದೇಶವೆಂದು ಪರಿಗಣಿಸಬೇಕು. ಇದು ಮೊದಲನೆ ನಿಯಮ.

ಎರಡನೆಯದಾಗಿ, ಒಂದು ತೇವಭರಿತ ಭೂಭಾಗವು ಅಪಾಯಕ್ಕೆ ಪಕ್ಕಾಗುವಂತಹ, ಗಂಡಾಂತರಕ್ಕೊಳಗಾಗಿರುವ ಅಥವಾ ಅಳಿದುಹೋಗುವಂತಹ ಗಂಡಾಂತರಕ್ಕೊಳಗಾಗಿರುವ ಪ್ರಭೇದ ಇಲ್ಲವೆ ಜೀವಿ ಸಮುದಾಯವನ್ನು ಹೊಂದಿದ್ದಲ್ಲಿ ಅದನ್ನು ಅಂತಾರಾಷ್ಟ್ರೀಯವಾಗಿ ಪ್ರಮುಖವಾದ ತೇವಭರಿತ ಭೂಭಾಗ ಎಂದು ಪರಿಗಣಿಸಬೇಕು.

ಮೂರನೆಯದಾಗಿ, ಒಂದು ಜೀವಭೌಗೋಳಿಕ ಭಾಗ ಅಲ್ಲಿನ ಜೀವಿವೈವಿಧ್ಯವನ್ನು ನಿರ್ವಹಿಸಲು ಬೇಕಾದ ಸಸ್ಯ ಅಥವಾ ಪ್ರಾಣಿ ಸಮುದಾಯವನ್ನು ಹೊಂದಿದ್ದಲ್ಲಿ ಅದನ್ನು . ಅಂತಾರಾಷ್ಟ್ರೀಯವಾಗಿ ಮುಖ್ಯವಾದದು ಎಂದು ಪರಿಗಣಿಸಬೇಕು.

ನಾಲ್ಕನೆಯದಾಗಿ, ಯಾವ ಜೀವಭೌಗೋಳಿಕ ಭಾಗ ಒಂದು ಸಸ್ಯ ಅಥವಾ ಪ್ರಾಣಿ ಸಮುದಾಯಗಳ ಜೀವನ ಚಕ್ರದ ನಿರ್ಣಾಯಕ ಹಂತವನ್ನು ಕಳೆಯಲು ಸಹಾಯಕವೋ ಅಥವಾ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಆ ಜೀವಿಗಳು ಬದುಕಿ ಉಳಿಯಲು ಅನುವು ಮಾಡಿಕೊಡುವುವೋ ಆ ಭಾಗವನ್ನು ಅಂತಾರಾಷ್ಟ್ರೀಯವಾಗಿ ಪ್ರಮುಖವಾದ ತೇವಭರಿತ ಪ್ರದೇಶವೆಂದು ಪರಿಗಣಿಸಬೇಕು.

ಇವನ್ನು ಓದಿದಾಗ ಈ ನಿಯಮಾವಳಿ ಎಷ್ಟು ಶಕ್ತಿಯುತ ಹಾಗೂ ಇವು ಎಷ್ಟು ಪ್ರಮುಖವಾದ ಪ್ರಾಣಿ ಮತ್ತು ಸಸ್ಯಗಳ ಆವಾಸಗಳನ್ನು ರಕ್ಷಿಸುತ್ತದೆ ಎಂಬುದು ತಿಳಿಯುತ್ತದೆ. ಅಷ್ಟಲ್ಲದೆ, ಅದೆಷ್ಟು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಈ ನಿಯಮಾವಳಿಗಳನ್ನು ರೂಪಿಸಿದ್ದಾರೆ ಎಂಬುದು ಮನಸ್ಸಿನಗೆ ಬರದೇ ಇರದು. ಇಂತಹ ತಾಣಗಳಲ್ಲಿ ನಮ್ಮ ರಂಗನತಿಟ್ಟು ಸಹ ಒಂದು ಎಂಬುದು ನಮಗೆ ಧನ್ಯತೆಯ ಭಾವವನ್ನು ಮಾತ್ರವಲ್ಲದೆ ಅದನ್ನು ಸಂರಕ್ಷಿಸುವ ಜವಾಬ್ದಾರಿಯನ್ನೂ ತರಬೇಕು. ಆ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸೋಣ ಹಾಗೂ ಈ ಮಾಹಿತಿಯನ್ನು ಹಂಚೋಣ.

ಬಿ ಗುಂಪಿನ ನಿಯಮಾವಳಿಗಳನ್ನು ಮುಂದಿನ ವಾರದ ಅಂಕಣದಲ್ಲಿ ತಿಳಿಯೋಣ. ಎಲ್ಲರಿಗೂ ಧನ್ಯವಾದಗಳು!

ಮತ್ತಷ್ಟು ಸುದ್ದಿಗಳು

vertical

Latest News

ಸೋನಿಯಾ ಗಾಂಧಿ ಮಡಿಕೇರಿ ಭೇಟಿ ರದ್ದು

newsics.com ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕೊಡಗು ಪ್ರವಾಸ ರದ್ದುಪಡಿಸಿದ್ದಾರೆ. ಹವಾಮಾನ ವೈಫರೀತ್ಯದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ತೆರಳಲು ಅಸಾಧ್ಯವಾದ ಕಾರಣ ಮಡಿಕೇರಿ...

ಹೆಚ್ ಎ ಎಲ್ ಸಿದ್ದಪಡಿಸಿದ ಹಗುರ ಯುದ್ಧ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

newsics.com ನವದೆಹಲಿ: ರಕ್ಷಣೆಯ ಸ್ವಾವಲಂಬನೆ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲುಗಲ್ಲು ಸ್ಧಾಪಿಸಿದೆ.  ಆತ್ಮ ನಿರ್ಬರ್ ಭಾರತ ಯೋಜನೆಯ ಅಂಗವಾಗಿ  ದೇಶಿಯವಾಗಿ ಅಭಿವೃದ್ದಿಪಡಿಸಲಾಗಿರುವ ಹಗುರ ಯುದ್ಧ ಹೆಲಿಕಾಪ್ಟರ್ ಗಳನ್ನು ಸೇನೆಗೆ ಅರ್ಪಿಸಲಾಗಿದೆ. ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಮಡಿಕೇರಿ ಭೇಟಿ ಮುಂದೂಡಿದ ಸೋನಿಯಾ ಗಾಂಧಿ

newsics.com ಮೈಸೂರು:  ಭಾರತ್ ಜೋಡೋ ಯಾತ್ರೆ  ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹವಾಮಾನ ವೈಫರೀತ್ಯದಿಂದ ಮಡಿಕೇರಿ ಭೇಟಿ ಮುಂದೂಡಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಮಡಿಕೇರಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಸೋನಿಯಾ...
- Advertisement -
error: Content is protected !!