Wednesday, November 30, 2022

ಪ್ರಮುಖ ಪಕ್ಷಿ ತಾಣಗಳು ಇಂಪಾರ್ಟೆಂಟ್ ಬರ್ಡ್ ಏರಿಯಾಸ್‍ – ಐಬಿಎ

Follow Us

ಕರ್ನಾಟಕದಲ್ಲಿಯೇ 37 ಪ್ರಮುಖ ಪಕ್ಷಿತಾಣಗಳಿವೆ. ಇದು ದೇಶದಲ್ಲಿಯೇ ಎರಡನೆಯ ಸ್ಥಾನ. (ಮೊದಲ ಸ್ಥಾನ ಅಸ್ಸಾಂ ರಾಜ್ಯಕ್ಕೆ ಸಂದಿದೆ). ಅಸ್ಸಾಂನಲ್ಲಿ 46 ಪ್ರಮುಖ ಪಕ್ಷಿ ತಾಣಗಳಿವೆ. ದೇಶದಲ್ಲಿ 554 ಪ್ರಮುಖ ಪಕ್ಷಿ ತಾಣಗಳಿವೆ. ನಮ್ಮ ಮೈಸೂರಿನಲ್ಲಿಯೇ ಹತ್ತು ಪ್ರಮುಖ ಪಕ್ಷಿ ತಾಣಗಳಿವೆ. ಇದೇನೂ ಸಂಖ್ಯೆಗಳ ಸ್ಪರ್ಧೆಯಲ್ಲ, ಆದರೆ, ಅದು ನಮ್ಮ ದೇಶ/ರಾಜ್ಯ/ಜಿಲ್ಲೆ ಎಷ್ಟು ಸಂಪತ್ಭರಿತವಾಗಿದೆ ಎಂಬುದನ್ನು ತೋರಿಸುತ್ತದೆ.
.

ಪಕ್ಷಿ ಸಂರಕ್ಷಣೆ 22

♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
newsics.com@gmail.com
ksn.bird@gmail.com
www.facebook.com/ksn.bird
ಇದೀಗ ತಾನೆ ರಾಮ್ಸಾರ್ ಕುರಿತಾಗಿ ತಿಳಿದೆವು, ಇದೇನಿದು ಪ್ರಮುಖ ಪಕ್ಷಿ ತಾಣಗಳು? ಎಂದು ನಿಮಗೆ ಅನ್ನಿಸಬಹುದು. ಹೌದು. ಇದು ಸಹ ಪಕ್ಷಿಗಳ ಸಂರಕ್ಷಣೆ ಕುರಿತೇ ಆಗಿದೆ. ರಾಮ್‍ಸಾರ್ ತೇವಭರಿತ ಪ್ರದೇಶಗಳ ಮೇಲೆ ಕೇಂದ್ರೀಕರಿಸಿದರೆ ಪ್ರಮುಖ ಪಕ್ಷಿ ತಾಣಗಳು ವಲಸೆ ಪಕ್ಷಿಗಳು, ಬಹುಮುಖ್ಯ ಸ್ಥಳೀಯ ಪಕ್ಷಿಗಳು, ನಿರ್ನಾಮವಾಗುವಂತಹ ಗಂಡಾಂತರಕ್ಕೆ ಸಿಲುಕಿರುವ ಪಕ್ಷಿಗಳು ಮತ್ತು ದೊಡ್ಡ ಸಂಖ್ಯೆಯಲ್ಲಿ ಒಂದೆಡೆ ಸೇರುವ ಪಕ್ಷಿಗಳ ಸಂರಕ್ಷಣೆಯತ್ತ ತನ್ನ ಕಾರ್ಯವನ್ನು ಕೇಂದ್ರೀಕರಿಸುತ್ತದೆ. ಪ್ರಮುಖ ಎಂದರೆ ಇಲ್ಲಿ ಜಾಗತಿಕವಾಗಿ. ಅಂದರೆ, ಜಗತ್ತಿನಲ್ಲಿಯೇ ಪ್ರಮುಖವಾದಂತಹ ಪಕ್ಷಿತಾಣ ಎಂದು.

ಪ್ರಮುಖ ಪಕ್ಷಿ ತಾಣಗಳು ಎಂಬುದು ಬರ್ಡ್‍ಲೈಫ್‍ ಇಂಟರ್‍ನ್ಯಾಷನಲ್‍ನ ಬಹುದೊಡ್ಡ ಕಾರ್ಯಕ್ರಮ. ಇದನ್ನು 1980ರ ದಶಕದಿಂದ ಮುನ್ನಡೆಸಿಕೊಂಡು ಬರಲಾಗುತ್ತಿದೆ. ಬರ್ಡ್‍ಲೈಫ್‍ ಇಂಟರ್ನ್ಯಾಷನಲ್‍ ಜಾಗತಿಕ ದೃಷ್ಟಿಕೋನವನ್ನು ಹೊಂದಿದ್ದು, ಸ್ಥಳೀಯರೊಂದಿಗೆ ಬೆರೆತು ಪಾರಿಸಾರಿಕವಾಗಿ ಉಳಿಸಿಕೊಳ್ಳಬಹುದಾದ ಅಭಿವೃದ್ಧಿಯನ್ನು ಆರ್ಥಿಕವಾಗಿಯೂ ಉಳಿಸಿಕೊಳ್ಳಬಹುದಾದ ಬೆಳವಣಿಗೆ ಜತೆಗೆ ಸಾಧಿಸಲು ಶ್ರಮಿಸುತ್ತಿದೆ. ಕಾರ್ಯಕ್ರಮಗಳ ಹರವು ವಿಸ್ತಾರವಾದದ್ದು, ಮೌಲ್ಯಯುತವಾದದ್ದು. ಬಡತನದ ನಿಮೂರ್ಲನೆ, ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ, ಅಸಮರ್ಪಕ ಭೂಬಳಕೆಯಿಂದ ಉಂಟಾಗುವ ಪ್ರಾಕೃತಿಕ ದುರಂತಗಳನ್ನು ತಡೆಯಲು ಪ್ರಯತ್ನಿಸುತ್ತಿದೆ.

ಹಲವು ನಿಯಮಗಳನುಸಾರ ಒಂದು ಆವಾಸವನ್ನು ಪ್ರಮುಖವಾದ ಪಕ್ಷಿ ತಾಣ ಎಂದು ಘೋಷಿಸುವುದು ಹಾಗೂ ಇಲ್ಲಿನ ಪಕ್ಷಿಗಳನ್ನು ಕುರಿತಾದ ಅನೇಕ ಮಾಹಿತಿಯನ್ನು ಸಂಗ್ರಹಿಸುವುದು ಇಲ್ಲಿನ ಮುಖ್ಯವಾದ ಕಾರ್ಯಕ್ರಮ. ಭಾರತದಲ್ಲಿನ ಹತ್ತಕ್ಕೂ ಹೆಚ್ಚು ಬಗೆಯ ವಿಶಿಷ್ಟವಾದ ಆವಾಸಗಳಲ್ಲಿ ಕಂಡುಬರುವ ಹಕ್ಕಿಗಳನ್ನು ಕುರಿತಾಗಿ ಮಾಹಿತಿ ಸಂಗ್ರಹಿಸುವುದು ಅವುಗಳ ಸಂರಕ್ಷಣೆಯ ದೃಷ್ಟಿಯಿಂದ ಅದೆಷ್ಟು ಮುಖ್ಯವೆಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಮಾಹಿತಿ ಸಂಗ್ರಹಣೆ ಹಲವಾರು ಗಂಭೀರವಾದ ಪ್ರಯೋಜನಗಳನ್ನು ಹೊಂದಿದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಉಪಗ್ರಹ ತಂತ್ರಜ್ಞಾನವನ್ನು ಬಳಸಿಕೊಂಡು ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.

ಪ್ರಮುಖ ಪಕ್ಷಿ ತಾಣಗಳು ಕೇವಲ ತೇವಭರಿತ ಪ್ರದೇಶಗಳಿಗೆ ಸೀಮಿತವಾಗಿಲ್ಲದ ಕಾರಣ ಹೆಚ್ಚು ಪಕ್ಷಿಗಳು ಸಂರಕ್ಷಣೆಯ ವ್ಯಾಪ್ತಿಯೊಳಗೆ ಬರುತ್ತವೆ. ಇದರಿಂದ ಆಗುವ ಇನ್ನೊಂದು ಮಹತ್ವದ ಅನುಕೂಲವೆಂದರೆ ಈ ಹಕ್ಕಿಗಳ ಸಂರಕ್ಷಣೆಗಾಗಿ ನಡೆಯುವ ಕಾರ್ಯಗಳಿಂದಾಗಿ ಅನೇಕ ಪ್ರಾಣಿಗಳ, ಸಸ್ಯಗಳ ಸಂರಕ್ಷಣೆ ತಂತಾನೆ ನಡೆದುಹೋಗುತ್ತದೆ.

ಕರ್ನಾಟಕದಲ್ಲಿಯೇ 37 ಪ್ರಮುಖ ಪಕ್ಷಿತಾಣಗಳಿವೆ. ಇದು ದೇಶದಲ್ಲಿಯೇ ಎರಡನೆಯ ಸ್ಥಾನ. (ಮೊದಲ ಸ್ಥಾನ ಅಸ್ಸಾಂ ರಾಜ್ಯಕ್ಕೆ ಸಂದಿದೆ). ಅಸ್ಸಾಂನಲ್ಲಿ 46 ಪ್ರಮುಖ ಪಕ್ಷಿ ತಾಣಗಳಿವೆ. ನಮ್ಮ ದೇಶದಲ್ಲಿ 554 ಪ್ರಮುಖ ಪಕ್ಷಿ ತಾಣಗಳಿವೆ. ನಮ್ಮ ಮೈಸೂರಿನಲ್ಲಿಯೇ ಹತ್ತು ಪ್ರಮುಖ ಪಕ್ಷಿ ತಾಣಗಳಿವೆ. ಇದೇನೂ ಸಂಖ್ಯೆಗಳ ಸ್ಪರ್ಧೆಯಲ್ಲ, ಆದರೆ, ಅದು ನಮ್ಮ ದೇಶ/ರಾಜ್ಯ/ಜಿಲ್ಲೆ ಎಷ್ಟು ಸಂಪತ್ಭರಿತವಾಗಿದೆ ಎಂಬುದನ್ನು ತೋರಿಸುತ್ತದೆ. ಆಯಾ ರಾಜ್ಯದ ಸಂಪನ್ಮೂಲಗಳು, ಭೌಗೋಳಿಕ ಲಕ್ಷಣಗಳನ್ನು ಅನುಸರಿಸಿ ಪಕ್ಷಿ ಸಂಪತ್ತು ವಿಕಾಸವಾಗಿದ್ದು ಅವುಗಳ ದಾಖಲಾತಿ ಹಾಗೂ ಸಂರಕ್ಷಣೆಗೆ ಪ್ರಮುಖ ಪಕ್ಷಿ ತಾಣಗಳಂತಹ ಕಾರ್ಯಕ್ರಮಗಳು ಅನುವು ಮಾಡಿಕೊಡುತ್ತವೆ. ನಮ್ಮ ನೆಲೆ ಜಾಗತಿಕವಾಗಿ ಎಷ್ಟು ಮಹತ್ವದ್ದು ಎಂಬ ಅರಿವು ನಮಗೆ ಬಂದು, ಅವುಗಳ ಸಂರಕ್ಷಣೆಯ ಜವಾಬ್ದಾರಿ ನಮಗೆ ಬರಬೇಕಿದೆ.

ಇದೇ ಭಾನುವಾರದಿಂದ ರಾಷ್ಟ್ರೀಯ ವನ್ಯಜೀವಿ ಸಪ್ತಾಹ ತೊಡಗುತ್ತದೆ. ಈ ಬಾರಿಯ ಘೋಷವಾಕ್ಯ “ಪಾರಿಸಾರಿಕ ವ್ಯವಸ್ಥೆಯ ಪುನರುತ್ಥಾನಕ್ಕಾಗಿ ಮುಖ್ಯ ಪ್ರಭೇದಗಳ ಸಂರಕ್ಷಣೆ” ಎಂಬುದು. ಇದು ಬಹಳ ಮುಖ್ಯವಾದದ್ದು. ಪ್ರಮುಖ ಪ್ರಭೇದಗಳು ಚೇತರಿಸಿಕೊಳ್ಳುವುದು ಪಾರಿಸಾರಿಕ ವ್ಯವಸ್ಥೆಯ ಪುನರುತ್ಥಾನಕ್ಕೆ ಅತಿಮುಖ್ಯ. ಹಾಗಾಗಿ, ನಮ್ಮ ಅರಣ್ಯ ಇಲಾಖೆ ಯುಕ್ತವಾದ ಥ್ಯೇಯವನ್ನೇ ಹಾಕಿಕೊಂಡಿದೆ. ನಾವೇಕೆ ಈ ವಾರವನ್ನು ವನ್ಯಜೀವಿಗಳನ್ನು ಕುರಿತು ಅರಿಯಲು, ಅಧ್ಯಯನ ಮಾಡಲು, ನಮ್ಮ ಸಹಜೀವಿಗಳಾದ ಅವುಗಳನ್ನು ಕುರಿತು ಪ್ರೀತಿ ಮೂಡಿಸಿಕೊಳ್ಳಲು ಹಾಗೂ ಸಂರಕ್ಷಿಸಲು ನಾವೇನು ಮಾಡಬಹುದು ಎಂಬುದನ್ನು ಚಿಂತಿಸಲು ಬಳಸಬಾರದು?

ಮತ್ತಷ್ಟು ಸುದ್ದಿಗಳು

vertical

Latest News

ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನಿಷೇಧ

newsics.com ನವದೆಹಲಿ:  ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನೆಟ್‌ವರ್ಕ್ ಒದಗಿಸಬಾರದು (ಸಿ–ಬ್ಯಾಂಡ್) ಎಂದು ಟೆಲಿಕಾಂ ಇಲಾಖೆ ಆದೇಶ ಮಾಡಿದೆ. ವಿಮಾನ ನಿಲ್ದಾಣದ ಸುತ್ತಮುತ್ತ 2.1 ಕಿಲೋಮೀಟರ್ ವ್ಯಾಪ್ತಿಯಲ್ಲಿ  5ಜಿ...

ಹಾಕಿ ಟೆಸ್ಟ್‌- 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತ

newsics.com ಸಿಡ್ನಿ: ಹಾಕಿ ಟೆಸ್ಟ್‌ ನಲ್ಲಿ ಭಾರತ 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ 4 3 ಗೋಲ್ ಗಳ...

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್ ಮೂಲಕ ಖಾತೆ ತೆರೆದಿದ್ದು, ಡಾಲರ್‌ಗಳ ಮೂಲಕ...
- Advertisement -
error: Content is protected !!