Wednesday, November 30, 2022

ಪ್ರಮುಖ ಪಕ್ಷಿತಾಣಗಳ ನಿರ್ದೇಶಿಕೆಗಳು

Follow Us

ರಾಮ್‍ಸಾರ್‌ ತಾಣ ತೇವಭರಿತ ಪ್ರದೇಶಗಳಿಗೆ ಸೀಮಿತಗೊಂಡರೆ ಐಬಿಎಗೆ ಹಾಗೇನೂ ಇಲ್ಲ. ಇದು ಒಣ ಪ್ರದೇಶವೂ ಆಗಬಹುದು. ಮುಖ್ಯವಾಗಿ ಒಂದು ಪಕ್ಷಿ ಪ್ರಭೇದದ ರಕ್ಷಣೆಗೆ ಸದರಿ ಸ್ಥಳ, ಆವಾಸ ಅನುವಾಗಿರಬೇಕಾದ್ದು ಮುಖ್ಯ. ಪ್ರಮುಖ ಪಕ್ಷಿ ತಾಣಗಳ ನಿರ್ದೇಶಿಕೆಗಳನ್ನು ಎ ಮತ್ತು ಬಿ ಎಂಬ ಎರಡು ಮುಖ್ಯವಾದ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ.
.

ಪಕ್ಷಿ ಸಂರಕ್ಷಣೆ 27


♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
newsics.com@gmail.com
ksn.bird@gmail.com
www.facebook.com/ksn.bird

ಪ್ರಮುಖ ಪಕ್ಷಿ ತಾಣಗಳನ್ನು ಹೇಗೆ ಗುರುತಿಸಲಾಗುತ್ತದೆ ಎಂಬುದನ್ನು ಕುರಿತಾಗಿ ಚರ್ಚಿಸುತ್ತಿದ್ದೆವು. ಮಧ್ಯೆ ಪುನರಾವಲೋಕನ ಮಾಡಬೇಕಾಗಿ ಬಂದದ್ದರಿಂದ ಕಳೆದ ವಾರದ ಲೇಖನವನ್ನು ಅದಕ್ಕಾಗಿ ಮೀಸಲಿಡಬೇಕಾಯಿತು. ಈಗ ಮತ್ತೆ ವಿಷಯಕ್ಕೆ ಮರಳೋಣ.

ರಾಮ್‍ಸಾರ್‌ ತಾಣ ತೇವಭರಿತ ಪ್ರದೇಶಗಳಿಗೆ ಸೀಮಿತಗೊಂಡರೆ ಐಬಿಎಗೆ ಹಾಗೇನೂ ಇಲ್ಲ. ಇದು ಒಣ ಪ್ರದೇಶವೂ ಆಗಬಹುದು. ಮುಖ್ಯವಾಗಿ ಒಂದು ಪಕ್ಷಿ ಪ್ರಭೇದದ ರಕ್ಷಣೆಗೆ ಸದರಿ ಸ್ಥಳ, ಆವಾಸ ಅನುವಾಗಿರಬೇಕಾದ್ದು ಮುಖ್ಯ.

ಪ್ರಮುಖ ಪಕ್ಷಿ ತಾಣಗಳ ನಿರ್ದೇಶಿಕೆಗಳನ್ನು ಎ ಮತ್ತು ಬಿ ಎಂಬ ಎರಡು ಮುಖ್ಯವಾದ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಎ ವಿಭಾಗ ಜಾಗತಿಕವಾಗಿ ಪ್ರಮುಖವಾದ ಸಂರಕ್ಷಣಾ ಅವಶ್ಯಕತೆಗಳನ್ನು ಪೂರೈಸುವುದನ್ನು ಸೂಚಿಸಿದರೆ, ಬಿ ಪ್ರಾದೇಶಿಕವಾಗಿ ಪ್ರಮುಖವಾದ ಸಂರಕ್ಷಣಾ ಅವಶ್ಯಕತೆಗಳತ್ತ ಕೇಂದ್ರೀಕೃತವಾಗಿದೆ. ಇದು ಕೇವಲ ವಿಂಗಡಣೆಗಾಗಿ ಮಾಡಿರುವುದೇ ಹೊರತಾಗಿ ಒಂದು ದೊಡ್ಡದು ಮತ್ತೊಂದು ಚಿಕ್ಕದು ಎಂಬುದು ಇಲ್ಲಿ ಮುಖ್ಯವಲ್ಲ. ಅದು ಇಲ್ಲಿ ಮುಖ್ಯವಲ್ಲವೇ ಅಲ್ಲ.

ಎ ವಿಭಾಗದಲ್ಲಿ ನಾಲ್ಕು ವಿಭಾಗಗಳಿದ್ದು ಅವನ್ನು ಸೂಚ್ಯವಾಗಿ ಎ1, ಎ2, ಎ3 ಮತ್ತು ಎ4 ಎಂದು ಗುರುತಿಸಲಾಗುತ್ತದೆ. ಇವುಗಳಲ್ಲಿ:

ಎ1: ಜಾಗತಿಕವಾಗಿ ಗಂಡಾಂತರದಂಚಿನಲ್ಲಿರುವಂತಹ ಹಕ್ಕಿಗಳ ಆವಾಸಗಳು ಬರುತ್ತವೆ.

ಎ2: ಇದು ಸೀಮಿತವಲಯದಲ್ಲಿ ಕಂಡುಬರುವ ಪ್ರಭೇದಗಳಿರುವ ಪ್ರದೇಶವನ್ನು ಸೂಚಿಸುವ ವಿಂಗಡಣೆ. ಕನಿಷ್ಠ ಎರಡು ಸೀಮಿತವಲಯದ ಹಕ್ಕಿಪ್ರಭೇದಗಳಿದ್ದಲ್ಲಿ ಆ ಪ್ರದೇಶವನ್ನು ಈ ವಿಂಗಡನೆಯಲ್ಲಿ ತರಬಹುದು.

ಎ3: ವಿವಿಧ ಪ್ರಭೇದಗಳ ಹಕ್ಕಿಗಳಿರುವ ಅಥವಾ ಇರಬಹುದು ಎಂದು ಊಹೆಮಾಡಬಹುದಾದ ವಲಯಗಳು ಈ ವಿಂಗಡನೆಗೆ ಬರುತ್ತವೆ.

ಎ4: ಪ್ರಭೇದಗಳ ಜಾಗತಿಕ (ಒಟ್ಟು) ಸಂಖ್ಯೆಯ ಶೇ 1 ಅಥವಾ ಅದಕ್ಕೂ ಹೆಚ್ಚು ಸಂಖ‍್ಯೆಯ ಹಕ್ಕಿಗಳು ಸೇರುವ ಸ್ಥಳವನ್ನು ಈ ವಿಭಾಗ ಸೂಚಿಸುತ್ತದೆ.

ಇದರ ವಿವರಣೆಯನ್ನು ಮುಂದಿನ ಬಾರಿ ತಿಳಿಯೋಣ.

ಮತ್ತಷ್ಟು ಸುದ್ದಿಗಳು

vertical

Latest News

ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನಿಷೇಧ

newsics.com ನವದೆಹಲಿ:  ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನೆಟ್‌ವರ್ಕ್ ಒದಗಿಸಬಾರದು (ಸಿ–ಬ್ಯಾಂಡ್) ಎಂದು ಟೆಲಿಕಾಂ ಇಲಾಖೆ ಆದೇಶ ಮಾಡಿದೆ. ವಿಮಾನ ನಿಲ್ದಾಣದ ಸುತ್ತಮುತ್ತ 2.1 ಕಿಲೋಮೀಟರ್ ವ್ಯಾಪ್ತಿಯಲ್ಲಿ  5ಜಿ...

ಹಾಕಿ ಟೆಸ್ಟ್‌- 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತ

newsics.com ಸಿಡ್ನಿ: ಹಾಕಿ ಟೆಸ್ಟ್‌ ನಲ್ಲಿ ಭಾರತ 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ 4 3 ಗೋಲ್ ಗಳ...

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್ ಮೂಲಕ ಖಾತೆ ತೆರೆದಿದ್ದು, ಡಾಲರ್‌ಗಳ ಮೂಲಕ...
- Advertisement -
error: Content is protected !!