Thursday, August 18, 2022

ಗಾಯಾ.‌… ಮತ್ತಷ್ಟು…

Follow Us

ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತು ಜನರಲ್ಲಿ ಪ್ರಯೋಜನಕಾರಿಯಾಗುವಷ್ಟು ಅರಿವು ಇರಲೇ ಇಲ್ಲ. ಪರಿಸರ ಸಂರಕ್ಷಣೆ ಕುರಿತಾಗಿ ಮಾತನಾಡುವವರನ್ನು ಕರುಣೆಯಿಂದ ನೋಡುವಂತಹ ಕಾಲ ಎಂದರೂ ತಪ್ಪಾಗದು!
.

ಪಕ್ಷಿ ಸಂರಕ್ಷಣೆ- 9

♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞ, ಅಂಕಣಕಾರರು
www.facebook.com/ksn.bird
ksn.bird@gmail.com
newsics.com@gmail.com

ಳೆದ ಬಾರಿ ಪ್ರಸ್ತಾಪಿಸಿದ್ದ ಗಾಯಾ ಕುರಿತಾಗಿ ಹೆಚ್ಚಿನ ಮಾಹಿತಿ ಬೇಕೆಂದು ಅನೇಕ ಓದುಗರು ಕೇಳುತ್ತಿರುವುದರಿಂದ ಅದನ್ನು ವಿವರವಾಗಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ.
ಈ ಬಾರಿ ಗಾಯಾ ಸಿದ್ಧಾಂತದ ಹಿನ್ನೆಲೆಯನ್ನು ತಿಳಿಯೋಣ.

ಇದರ ಪ್ರಸ್ತಾವನೆಯಾಗಿದ್ದು ಐವತ್ತು ವರ್ಷಗಳ ಹಿಂದೆ, 1970ರ ದಶಕದಲ್ಲಿ. ಅದು ಎಂತಹ ಕಾಲ? ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತು ಜನರಲ್ಲಿ ಪ್ರಯೋಜನಕಾರಿಯಾಗುವಷ್ಟು ಅರಿವು ಇರಲೇ ಇಲ್ಲ. ಪರಿಸರ ಸಂರಕ್ಷಣೆ ಕುರಿತಾಗಿ ಮಾತನಾಡುವವರನ್ನು ಕರುಣೆಯಿಂದ ನೋಡುವಂತಹ ಕಾಲ ಎಂದರೂ ತಪ್ಪಾಗದು! ಸಮೃದ್ಧವಾದ ನೈಸರ್ಗಿಕ ಸಂಪನ್ಮೂಲಗಳಿದ್ದ ಭೂ ಭಾಗಗಳಲ್ಲಿ (ಉದಾಹರಣೆಗೆ ಭಾರತದ ಉಪಖಂಡ ಹಾಗೂ ಅಮೇಜಾನ್‍ ಕಾಡುಗಳಿರುವ ದಕ್ಷಿಣ ಅಮೆರಿಕ) ಸರ್ಕಾರದಂತಹ ವ್ಯವಸ್ಥೆಗೇ ಸಂರಕ್ಷಣೆ ಕುರಿತ ಅರಿವಿರಲಿಲ್ಲ ಅಥವಾ ಕಾನೂನುಗಳಿರಲಿಲ್ಲ. ಇಂದು ಭಾರತದ ಮಟ್ಟಿಗೆ ಅತ್ಯುತ್ತಮ ಕಾನೂನುಗಳಿವೆ, ಆದರೆ ಸಂರಕ್ಷಣೆಯ ಸಮಸ್ಯೆ ಅಲ್ಲಿಗೆ ಮುಗಿದಿಲ್ಲ. ಇನ್ನು ಅಮೆಜಾನ್‍ ಕಾಡುಗಳ ಪರಿಸ್ಥಿತಿ ಶೋಚನೀಯವಾಗಿಯೇ ಇದೆ. ತಾತ್ವಿಕವಾಗಿ ಇದು ಯಾವತ್ತಿನ ಪರಿಸ್ಥಿತಿ. ತಜ್ಞರ ಮಟ್ಟದಲ್ಲಿ ಅರಿವನ ಜ್ಯೋತಿ ಪ್ರಖರವಾಗಿಯೇ ಇರುತ್ತದೆ. ಆದರೆ, ಜನಸಾಮಾನ್ಯರಿಗೆ ಅದು ತಲುಪಿರುವುದಿಲ್ಲ. ವಿಚಾರಗಳ ಭೋರ್ಗರೆತ ಜನಸಾಮಾನ್ಯರಲ್ಲಿಗೆ ಬರುವಷ್ಟರಲ್ಲಿ ತುಂತುರು ಹನಿಯಾಗಿಯಷ್ಟೇ ಉಳಿದಿರುತ್ತದೆ. ಇದಕ್ಕೆ ಹತ್ತಾರು ಕಾರಣಗಳಿವೆ ಹಾಗೂ ಅವು ಈ ಲೇಖನದ ವ್ಯಾಪ್ತಿಗೆ ಬರುವಂತಹದ್ದಲ್ಲ. ವಿಜ್ಞಾನ ಏಕೆ ಜನಸಾಮಾನ್ಯರನ್ನು ತಲುಪಬೇಕಾದ ಮಟ್ಟದಲ್ಲಿ ತಲುಪಿಲ್ಲ ಎಂಬ ಪ್ರಶ್ನೆಯ ಉತ್ತರ ಇದಕ್ಕೂ ಅನ್ವಯಿಸುತ್ತದೆ. ಇರಲಿ. ಇನ್ನು ಇದೇ ಕಾಲ ಜನರಿಗೆ ಮಾಹಿತಿ ತಲುಪಿಸುವ, ರಾಷ್ಟ್ರಗಳು ಸೇರಿ ಪರಿಸರ ಕುರಿತಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುವ ಯೋಜನೆಗಳು ಸಿದ್ಧವಾದವು. ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಸಹ ದೊಡ್ಡ ಪಾತ್ರವನ್ನು ವಹಿಸಿದವು, ವಹಿಸುತ್ತಿವೆ ಕೂಡ.

ಅಲ್ಲಿಯವರೆಗೆ, ಅಂದರೆ 1970ರವರೆಗೆ ಇದ್ದ ವಾದ/ಸಿದ್ಧಾಂತಗಳಲ್ಲಿ ಪರಿಸರ ಹನನಕ್ಕೆ ಮಾನವಕೃತ ಕಾರಣಗಳನ್ನು ಗಣಿಸಲಾಗುತ್ತಿತ್ತು. ಆಗ ಬಂದ ಹೊಸ ಚಿಂತನೆಯೇ ಗಾಯಾ ಸಿದ್ಧಾಂತ.

ಇದನ್ನು ಹುಟ್ಟುಹಾಕಿದ್ದು ಜೇಮ್ಸ್‍ ಲವ್‍ಲಾಕ್‍ ಎಂಬ ರಸಾಯನ ವಿಜ್ಞಾನಿ. ಜೆಟ್‍ಪ್ರಪಲ್ಷನ್ ಪ್ರಯೋಗಾಲಯದಲ್ಲಿ ಮಂಗಳ ಗ್ರಹ ಮೇಲೆ ಜೀವವಿರಬಹುದೇ ಎಂಬ ಶೋಧ ನಡೆಸುತ್ತಿದ್ದ ವಿಜ್ಞಾನಿ ಆತ. ಸರಿಸುಮಾರು 1965ರಿಂದ ಈ ನಿಟ್ಟಿನಲ್ಲಿ ಯೋಚಿಸುತ್ತಿದ್ದ ವಿಜ್ಞಾನಿ. ಇವರ ಬೆಂಬಲಕ್ಕೆ ನಿಂತವರು ಶ್ರೀಮತಿ ಲಿನ್ ಮಾರ್ಗುಲಿಸ್, ಅಮೇರಿಕನ್ ಮೂಲದ ವಿಕಾಸವಾದ ಜೀವಶಾಸ್ತ್ರಜ್ಞೆ. (ಕಾರ್ಲ್ ಸಾಗನ್‍ರ ಹೆಂಡತಿ).

ಈ ಇಬ್ಬರು ಬಲವಾಗಿ ಪ್ರತಿಪಾದಿಸಿದ್ದು ಗಾಯಾ ಸಿದ್ಧಾಂತ. ಇದಕ್ಕೆ ಗಾಯಾ ಎಂಬ ಹೆಸರು ಕೊಟ್ಟಿದ್ದು ಲವ್‍ಲಾಕ್, ಒರ್ವ ಕಾದಂಬರಿಕಾರನ ಸಲಹೆಯ ಮೇರೆಗೆ. ಗಾಯಾ ಎಂದರೆ ಗ್ರೀಕ್ ಪುರಾಣಗಳ ಪ್ರಕಾರ ಭೂತಾಯಿ. ನಾವೂ ಹಾಗೇಯೇ ಭೂತಾಯಿ ಎಂದೇ ಕರೆಯಬಹುದು. ಭಾರತೀಯ ಪುರಾಣಗಳಲ್ಲಿಯೂ ಭೂಮಿಯನ್ನು ತಾಯಿ ಎಂದೇ ಪರಿಗಣಿಸಲಾಗಿದೆ. ನೂರಾರು ಹೆಸರುಗಳಿಂದ ಕರೆಯಲಾಗಿದ್ದು ಭಾವುಕ ಎನಿಸುವಷ್ಟು ಗೌರವವನ್ನು ನೀಡಲಾಗಿದೆ. ಅಂದರೆ, ಭೂಮಿ ತಾಯಿಯಂತೆ ಎಲ್ಲವನ್ನೂ ಸಂಭಾಳಿಸುತ್ತದೆ ಎಂಬುದು ತಾತ್ಪರ್ಯ.

ಭೂಮಿ ತಾಯಿಯಂತೆ ಎಲ್ಲವನ್ನೂ ಸಂಭಾಳಿಸುತ್ತದೆ ಎಂಬುದು ತಾತ್ಪರ್ಯ ಎಂಬುದೇ ಈ ಸಿದ್ಧಾಂತದ ಹೂರಣ. ಭೂಮಿಯಲ್ಲಿ ನಡೆಯುವ ಬದಲಾವಣೆಗಳನ್ನು ತೂಗಿಸಿ ಸಮಸ್ಥಿತಿಗೆ ತರುವ ವ್ಯವಸ್ಥೆಯನ್ನು ಇದು ಪ್ರತಿಪಾದಿಸುತ್ತದೆ. ಭೂಮಿಯಲ್ಲಿನ ಆಕ್ಸಿಜನ್ ಪರಿಮಾಣದ ಸಮತೋಲನ, ಸಮುದ್ರದ ನೀರಿನ ಉಪ್ಪಿನಂಶ ಏಕರೂಪವಾಗಿರುವುದು ಮುಖ್ಯವಾದ ಉದಾಹರಣೆಗಳು.

ಇದು ಈ ಸಿದ್ಧಾಂತದ ಹಿನ್ನೆಲೆ. ಮುಂದಿನ ವಾರ ಇನ್ನೂ ಹೆಚ್ಚು ತಿಳಿಯೋಣ.

ಮತ್ತಷ್ಟು ಸುದ್ದಿಗಳು

vertical

Latest News

ಚಿನ್ನದ ದರದಲ್ಲಿ ಇಳಿಕೆ, ಬೆಳ್ಳಿ ದರ 200 ರೂಪಾಯಿ ಕಡಿಮೆ

newsics.com ಮುಂಬೈ: ಕಳೆದ ಎರಡು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡು ಬಂದಿದೆ. ಚಿನ್ನದ ದರ 110 ರೂಪಾಯಿ ಕಡಿಮೆಯಾಗಿದೆ. 22 ಕ್ಯಾರೆಟ್ 10 ಗ್ರಾಂ...

ಕೊಲೆಯಾದ ಸ್ಥಿತಿಯಲ್ಲಿ ಸಾಧುವಿನ ಮೃತದೇಹ ಪತ್ತೆ

newsics.com ಜೈಪುರ:  ರಾಜಸ್ತಾನದಲ್ಲಿ ಮತ್ತೊಂದು ಸಾಧು ನಿಗೂಢವಾಗಿ ಮೃತಪಟ್ಟಿದ್ದಾರೆ. ಕೊಲೆಯಾದ  ಸ್ಥಿತಿಯಲ್ಲಿ ಸಾಧುವಿನ ಮೃತ ದೇಹ ಪತ್ತೆಯಾಗಿದೆ. ಹನುಮಾನ್ ಘಡ್ ನ ಭಾಖ್ರವಾಲಿ ಎಂಬಲ್ಲಿ ಸಾಧು ನಾಗ ಚೇತನ್ ದಾಸ್ ಎಂಬವರ ಮೃತ ದೇಹ...

ಶಾಲೆ, ಕಾಲೇಜುಗಳಲ್ಲಿ ರಾಷ್ಟ್ರ ಗೀತೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

newsics.com ಬೆಂಗಳೂರು:  ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ದಿನ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ  ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದೆ. ಪದವಿ ಪೂರ್ವ ಕಾಲೇಜುಗಳಿಗೆ ಕೂಡ ಆದೇಶ ಅನ್ವಯವಾಗಲಿದೆ. ಸರ್ಕಾರಿ, ಖಾಸಗಿ  ಅನುದಾನ  ಮತ್ತು...
- Advertisement -
error: Content is protected !!