Saturday, June 10, 2023

ಸ್ವಾರ್ಥ, ಅಜ್ಞಾನದ ಪರಿಧಿ

Follow Us

ಬಹಳ ಹಿಂದೆ ಕಾಡುಗಳನ್ನು ಕಡಿದು ಭೂಮಿಯನ್ನು ರೆವಿನ್ಯೂ ಇಲಾಖೆಗೆ ವರ್ಗಾಯಿಸುವುದೇ ಅರಣ್ಯ ಇಲಾಖೆಯ ಕಾರ್ಯವಾಗಿತ್ತು. ಯಾವುದೋ ಕಾರಣಕ್ಕೆ ಮಂಜೂರಾದ ಭೂಮಿಗಿಂತಲೂ ಹೆಚ್ಚು ಭೂಮಿಯನ್ನು ಬಳಸಿಕೊಂಡವನು ಶಾಣ್ಯಾ ಎಂಬ ಭಾವವೇ ಬಲಿಯಿತು. ನಾನಾ ಕಾರಣಗಳಿಗಾಗಿ ಕಾಡು ಬಲಿಯಾಗಿ ಹೋಯಿತು. ಪ್ರಾಣಿಗಳು ಅತಂತ್ರವಾದವು. ನಿಸರ್ಗದ ಸೂಕ್ಷ್ಮ ಹಂದರ ಛಿದ್ರವಾಗಿ ಹೋಯಿತು. ಇನ್ನೆಲ್ಲಿಯ ಸಹಬಾಳ್ವೆ? ಏರುತ್ತಿರುವ ಜನಸಂಖ್ಯೆಯೂ ಇದಕ್ಕೆ ಸೇರಿ ಎಲ್ಲವೂ ಮಾರಿಗೌತಣವಾಗುವ ಪ್ರಸಂಗ ಬಂದಿತು.

ಪಕ್ಷಿ ಸಂರಕ್ಷಣೆ 52


ಕಲ್ಗುಂಡಿ ನವೀನ್
ಅಂಕಣಕಾರರು, ವನ್ಯಜೀವಿ ತಜ್ಞರು

ksn.bird@gmail.com
newsics.com@gmail.com

ಈ ಸ್ವಾರ್ಥ ಮತ್ತು ಅಜ್ಞಾನದ ಹರವನ್ನು ಇದೀಗ ನೋಡೋಣ. ಪರಿಸರದ ಇಂದಿನ ಸ್ಥಿತಿಗೆ ಪ್ರಮುಖವಾದ ಕಾರಣ ಸ್ವಾರ್ಥವೇ. ತಜ್ಞರ ಪ್ರಕಾರ, ಇಂದಿನ ತಂತ್ರಜ್ಞಾನದ ಭೋರ್ಗರೆತದ ನಡುವೆಯೂ ವನ್ಯಜೀವಿಗಳ ಸಂರಕ್ಷಣೆ ಸಾಧ್ಯ. ಹವಾಮಾನವಾಗಲಿ ಬೇರೊಂದು ಜೀವರಕ್ಷಕ ಅಂಶವಾಗಲಿ ಈ ಪ್ರಮಾಣದಲ್ಲಿ ಹದಗೆಡುವ ಪ್ರಮೇಯವಿರಲಿಲ್ಲ. ಆದರೆ ಹಾಗಾಗಿದ್ದು ಮಾನವನ ಸ್ವಾರ್ಥದಿಂದಾಗಿ. ಇದರಲ್ಲಿ ಅಜ್ಞಾನದ ಪಾಲೂ ದೊಡ್ಡದಿದೆ. ಅದಕ್ಕೆ ಮತ್ತೆ ಬರೋಣ.

ನಮಗೆ ಬೇಕಾದ ಅಭಿವೃದ್ಧಿಯನ್ನೂ ಸಾಧಿಸಿಕೊಂಡು ವನ್ಯಜೀವಿ ಸಂರಕ್ಷಣೆಯನ್ನು ಮಾಡುವುದು ಸಾಧ್ಯವಿತ್ತು ಆದರೆ ಸ್ವಾರ್ಥದಿಂದ ಆಗಲಿಲ್ಲ ಎಂಬುದನ್ನು ತುಸುವೇ ವಿವರವಾಗಿ ನೋಡೋಣ. ಪಶ್ಚಿಮಘಟ್ಟದ ಒಂದು ಕಡೆ ಅಣೆಕಟ್ಟನ್ನು ಯೋಜಿಸಿದ್ದರು. ಅದು ಅಗತ್ಯವೇ ಇತ್ತು ಎಂದು ಇಟ್ಟುಕೊಳ್ಳೋಣ. ಅದಕ್ಕಾಗಿ ಆಳಕಣಿವೆಯಿರುವ ಪ್ರದೇಶವನ್ನು ಆಯ್ಕೆ ಮಾಡಲಾಗಿತ್ತು. ಅಲ್ಲಿ ಅಣೆಕಟ್ಟು ಕಟ್ಟಿದ್ದರೆ ಹೆಚ್ಚು ಅರಣ್ಯ ನಾಶವಾಗುತ್ತಿರಲಿಲ್ಲ, ಹೆಚ್ಚು ಜನರ ಸ್ಥಳಾಂತರವೂ ಆಗುತ್ತಿರಲಿಲ್ಲ. ಅಣೆಕಟ್ಟೆಯೂ ಆಗಿ ಅದರ ಉದ್ದೇಶವೂ ಈಡೇರುತ್ತಿತ್ತು. ಆದರೆ, ರಾಜಕೀಯ ಹಾಗೆ ಮಾಡಲು ಬಿಡಲಿಲ್ಲ. ಆಯ್ಕೆಯಾದ ಪ್ರದೇಶದಲ್ಲಿ ಅಣೆಕಟ್ಟೆ ಬರಲೇ ಇಲ್ಲ. ಬದಲಿಗೆ ವಿಸ್ತಾರವಾದ ಬಯಲಿನಂತಹ ಅರಣ್ಯಪ್ರದೇಶವನ್ನು ಆಯ್ಕೆ ಮಾಡಲಾಯಿತು. ಹಿಂದಿನ ಪ್ರದೇಶಕ್ಕಿಂತಲೂ ಹೆಚ್ಚಿನ ಅರಣ್ಯ ನಾಶ, ಜನಗಳ ಸ್ಥಳಾಂತರ ನಡೆಯಿತು. ಸ್ಥಳಾಂತರಗೊಂಡ ಜನಕ್ಕೆ ಪರಿಹಾರ ಬೇಡವೇ? ಅವರು ಬದುಕು ಕಟ್ಟಿಕೊಳ್ಳಬೇಡವೇ? ಅದಕ್ಕೆ ಮತ್ತಷ್ಟು ಕಾಡನ್ನು ಕಡಿದು ಭೂಮಿಯನ್ನು ಒದಗಿಸಲಾಯಿತು. ಇನ್ನು ಕೆಲವು ಜನರಿಗೆ ಸಿಕ್ಕ ಪರಿಹಾರ ಸಾಲದು ಎಂಬ ಕೂಗೆದ್ದಿತು. ಇದನ್ನು ಸರಿ ಎಂದೇ ಇಟ್ಟುಕೊಳ್ಳೋಣ. ಆದರೆ, ಇದಕ್ಕೆ ಪರಿಹಾರ ಕೊಟ್ಟದ್ದು ಮತ್ತೆ ಅರಣ್ಯವನ್ನು ಕಡಿದು! ಇದು ಸ್ವಾರ್ಥದ ವಿಶ್ವರೂಪದ ತಿಲಾಂಶ ಮಾತ್ರ! ಇದೀಗ ಜನಸಾಮಾನ್ಯನ ಪಾತ್ರವೇನು ಎಂಬುದನ್ನು ತೀರ್ಮಾನಿಸಬೇಕಿದೆ.

ಇನ್ನು ಅಜ್ಞಾನಕ್ಕೆ ಬರೋಣ. ಕಾಡುಗಳನ್ನು ಕಾಪಾಡಬೇಕು ಎಂಬ ಮಾತು ಇದ್ದರೂ ಅದರ ವಿರಾಟ್ ರೂಪ ತಿಳಿದಿರಲಿಲ್ಲ. ಬಹಳ ಹಿಂದೆ ಕಾಡುಗಳನ್ನು ಕಡಿದು ಭೂಮಿಯನ್ನು ರೆವಿನ್ಯೂ ಇಲಾಖೆಗೆ ವರ್ಗಾಯಿಸುವುದೇ ಅರಣ್ಯ ಇಲಾಖೆಯ ಕಾರ್ಯವಾಗಿತ್ತು. ಯಾವುದೋ ಕಾರಣಕ್ಕೆ ಮಂಜೂರಾದ ಭೂಮಿಗಿಂತಲೂ ಹೆಚ್ಚು ಭೂಮಿಯನ್ನು ಬಳಸಿಕೊಂಡವನು ಶಾಣ್ಯಾ ಎಂಬ ಭಾವವೇ ಬಲಿಯಿತು. ನಾನಾ ಕಾರಣಗಳಿಗಾಗಿ ಕಾಡು ಬಲಿಯಾಗಿ ಹೋಯಿತು. ಪ್ರಾಣಿಗಳು ಅತಂತ್ರವಾದವು. ನಿಸರ್ಗದ ಸೂಕ್ಷ್ಮ ಹಂದರ ಛಿದ್ರವಾಗಿ ಹೋಯಿತು. ಇನ್ನೆಲ್ಲಿಯ ಸಹಬಾಳ್ವೆ? ಏರುತ್ತಿರುವ ಜನಸಂಖ್ಯೆಯೂ ಇದಕ್ಕೆ ಸೇರಿ ಎಲ್ಲವೂ ಮಾರಿಗೌತಣವಾಗುವ ಪ್ರಸಂಗ ಬಂದಿತು.

ಆದರೆ. ಇಂದಿಗೂ ನಾವು ಎಚ್ಚೆತ್ತು ಕೊಳ್ಳುವುದೇ ಆದರೆ, ನಮ್ಮ ಬದುಕನ್ನು ಹಸನುಗೊಳಿಸಿಕೊಳ್ಳುವ ಅವಕಾಶ ತುಸುವಾದರೂ ಇದೆ. ಇದನ್ನು ಬರೆಯುತ್ತಿರುವ ದಿನಗಳಲ್ಲೇ ಬೇಸಿಗೆಯಲ್ಲಿ ಬೆಂಗಳೂರು 36 ಡಿಗ್ರಿ ದಾಟಿದೆ, ಮಳೆ ಬರುತ್ತಿದೆ. ಈ ಚುನಾವಣೆಯ ಸಂದರ್ಭದಲ್ಲಿ ನಮ್ಮ ಹುರಿಯಾಳುಗಳಿಂದ ನಾವೇನು ನಿರೀಕ್ಷಿಸಬೇಕೆಂದುದನ್ನು ಯೋಚಿಸೋಣ…

****

ಮೂರು ವರ್ಷದ ನಿರಂತರ ಪಯಣ…

ಈ ಹಿತಕರವೇನೂ ಅಲ್ಲದ ಮಾತುಗಳೊಂದಿಗಿನ ಸವಿಯಾದ ಅಂಶವೆಂದರೆ ಇದರೊಂದಿಗೆ ನಮ್ಮ ಪಕ್ಷಿ ಸಂರಕ್ಷಣೆ ಅಂಕಣವೂ ಒಂದು ವರ್ಷವನ್ನು ಮುಗಿಸಿದೆ. ಒಟ್ಟಾರೆಯಾಗಿ ಮೂರು ವರ್ಷಗಳನ್ನು ಮುಗಿಸಿ ನಾಲ್ಕನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ನಾನು ನ್ಯೂಸಿಕ್ಸ್ ಡಾಟ್ ಕಾಂನ (newsics.com) ನಿಷ್ಠಾವಂತ ತಂಡವನ್ನು ಹೃತ್ಪೂರ್ವಕವಾಗಿ ವಂದಿಸುತ್ತೇನೆ. ಎರಡು ವರ್ಷಗಳ ನಂತರವೂ ಅನೇಕ ಸಂದರ್ಭಗಳಲ್ಲಿ ಚಿತ್ರಗಳನ್ನು ಒದಗಿಸಿದ ಗೆಳೆಯ ಹವ್ಯಾಸಿ ವನ್ಯಛಾಯಾಗ್ರಾಹಕ ಶ್ರೀ ಜಿ ಎಸ್ ಶ್ರೀನಾಥನಿಗೆ ಧನ್ಯವಾದಗಳನ್ನರ್ಪಿಸುತ್ತೇನೆ. ಅವನ್ನದ್ದು ಕೇವಲ ಚಿತ್ರಗಳ ಸಹಾಯವಲ್ಲ, ಎಷ್ಟೋ ಬಾರಿ ಓದಿ ಸಲಹೆಗಳನ್ನು ಕೊಟ್ಟದ್ದೂ ಇದೆ, ಕರಡು ತಿದ್ದಿದ್ದೂ ಇದೆ. ಈ ಎಲ್ಲಕ್ಕೂ ಹೃತ್ಪೂರ್ವಕ ಧನ್ಯವಾದಗಳು ಅವನಿಗೆ. ಇನ್ನು ಅನೇಕಾನೇಕ ಅಂಕಣಗಳನ್ನು ಓದಿ ಕೂಡಲೆ ಕರೆ ಮಾಡಿ ಚರ್ಚಿಸುತ್ತಿದ್ದ ಹಿರಿಯ ವಿಜ್ಞಾನಿಗಳಾದ ಶ್ರೀ ಸಿ ಆರ್ ಸತ್ಯ ಅವರಿಗೆ ಧನ್ಯವಾದಗಳನ್ನು ತಿಳಿಸಲು ಪದಗಳೇ ಇಲ್ಲ. ಚರ್ಚೆ ಹಲವು ಅಂಕಣಗಳನ್ನು ಕುರಿತಾಗಿ ಆದರೆ, ಪ್ರತಿಯೊಂದು ಅಂಕಣಕ್ಕೂ ತಪ್ಪದೆ ಪ್ರತಿಕ್ರಿಯಿಸುತ್ತಿದ್ದವರು ಶ್ರೀ ಸತ್ಯ ಅವರು. ಇತ್ತೀಚೆಗೆ ಅವರನ್ನು ಭೌತಿಕವಾಗಿ ಕಳೆದುಕೊಂಡೆವು ಎಂಬುದು ಅತಿನೋವಿನ ಸಂಗತಿ. ಆ ಮಹಾನ್ ಚೇತನಕ್ಕೆ ಸದ್ಗತಿಯಾಗಲಿ. ಇನ್ನು ಅಕ್ಕ ಸುಬ್ಬಲಕ್ಷ್ಮಿ ಹಾಗೂ ಪ್ರತಿಕ್ರಿಯಿಸುತ್ತಿದ್ದ, ಪ್ರತಿಕ್ರಿಯಿಸದ ಎಲ್ಲ ಓದುಗರಿಗೆ ನಮಸ್ಕಾರಗಳು. ಮುಂದಿನ ವಾರ ಮತ್ತೊಂದು ವಿಷಯದೊಂದಿಗೆ ಭೇಟಿಯಾಗೋಣ. ವಂದನೆಗಳು.

ಸಂರಕ್ಷಣೆಯ ತಾತ್ವಿಕ ಹರವು…

ಎಕೋ ಟೂರಿಸಮ್ ನಿಜ ಸ್ವರೂಪ

ಎಕೋ ಟೂರಿಸಮ್‌ಗೆ ಬೇಕು‌ ಇನ್ನಷ್ಟು ಬಲ

ಮತ್ತಷ್ಟು ಸುದ್ದಿಗಳು

vertical

Latest News

‘ಶಕ್ತಿ’ ಯೋಜನೆಗೆ ನಾಳೆ ಚಾಲನೆ: ನಿರ್ಮಲಾ ಸೀತಾರಾಮನ್‌ಗೆ ಆಹ್ವಾನ

Newsics ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ನಾಳೆ ಚಾಲನೆ ದೊರಕಲಿದೆ.

ಬ್ರಿಟನ್: ಸಂಸದ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ!

Newsics.com ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ...

ಗಡಿಯಲ್ಲಿ ಪಾಕ್ ನಿಗೂಢ ಬಲೂನ್ ಪತ್ತೆ: ಸೇನೆಯಿಂದ ಶೋಧ ಕಾರ್ಯ

Newsics.com ಶ್ರೀನಗರ: ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿದೆ.
- Advertisement -
error: Content is protected !!