Saturday, June 10, 2023

ಸ್ವಾರ್ಥ ಮತ್ತು ರಕ್ಷಿತಾರಣ್ಯ

Follow Us

ಅಭಿವೃದ್ಧಿ ಯೋಜನೆಗಳು ಎಂದಾಗ ಅವು ನಮ್ಮ ಸಮಗ್ರ ಅಭಿವೃದ್ಧಿಯ ಯೋಜನೆಗಳಾಗಿರಬೇಕೇ ಹೊರತಾಗಿ ಅಭಿವೃದ್ಧಿಯ ಹೆಸರಿನಲ್ಲಿ ಯಾರದೋ ಸ್ವಾರ್ಥ ಸಾಧನೆಯಾಗುತ್ತಿರಬಾರದು. ಜನಸಾಮಾನ್ಯರಲ್ಲಿ ಸಂರಕ್ಷಣೆ ಕುರಿತಾದ ಅಜ್ಞಾನವಿರುವವರೆಗೂ ಈ ಶೇಕಡಾ ಇಪ್ಪತ್ತರಷ್ಟು ಜನ ಉಳಿದವರ ಅಜ್ಞಾನದ ಲಾಭವನ್ನು ಪಡೆಯುತ್ತಲೇ ಇರುತ್ತಾರೆ. ಆದ್ದರಿಂದ ಪರಿಸರ ಜಾಗೃತಿ ಬಹಳ ಬಹಳ ಮುಖ್ಯ.

ಪಕ್ಷಿ ಸಂರಕ್ಷಣೆ 53


ಕಲ್ಗುಂಡಿ ನವೀನ್
ಅಂಕಣಕಾರರು, ವನ್ಯಜೀವಿ ತಜ್ಞರು

ksn.bird@gmail.com
newsics.com@gmail.com

ಇದುವರೆಗೂ ಸ್ವಾರ್ಥ ಹಾಗೂ ಅಜ್ಞಾನದ ಅಪಾಯಗಳನ್ನು ಅರಿತೆವು. ಅದೇ ಮಾನವ ರಕ್ಷಿತಾರಣ್ಯಗಳನ್ನು ರಚಿಸಿಕೊಂಡಿದ್ದಾನೆ ಎಂದರೆ ಖೇದವೂ ಆಗುತ್ತದೆ, ಆನಂದವೂ ಉಂಟಾಗುತ್ತದೆ. ಖೇದವೇಕೆಂದರೆ ಇಷ್ಟೆಲ್ಲ ತನ್ನ ಸ್ವಾರ್ಥ ಲಾಲಾಸೆಗಳಿಂದ ಪರಿಸರ ನಾಶ ಮಾಡುತ್ತಾ ಮತ್ತೊಂದೆಡೆ ರಕ್ಷಿತಾರಣ್ಯ ಎನ್ನುತ್ತಿದ್ದಾನಲ್ಲ ಎಂದು. ಆನಂದವೇಕೆಂದರೆ ಆ ರೂಪದಲ್ಲಾದರೂ ಸಂರಕ್ಷಣೆಗೆ ಯತ್ನಿಸುತ್ತಿರುವವನಲ್ಲ ಎಂದು. ಈ ಎರಡೂ ವರ್ಗದ ಜನರೂ ಬೇರೆ ಬೇರೆ ಎಂಬುದು ಸ್ಪಷ್ಟ. ನಮ್ಮ ಸಂರಕ್ಷಣಾ ಯತ್ನಗಳು ಯಶಸ್ವಿಯಾಗುತ್ತಿವೆ ಎಂದರೆ ಈ ಎರಡೂ ವರ್ಗಗಳ ನಡುವಿನ ಅಂತರ ಕಡಿಮೆಯಾಗುತ್ತಿದೆ ಎಂದರ್ಥ. ಆದರೆ ಸಂಪೂರ್ಣವಾಗಿ ಕಡಿಮೆಯಾಗಿ ಎಲ್ಲರೂ ಸಂರಕ್ಷಣೆಯ ಕುರಿತಾಗಿ ಯೋಚಿಸುತ್ತಾರೆ ಎಂದಲ್ಲ. ಸಾಮಾನ್ಯವಾಗಿ ಒಂದು ಜನಸಂಖ್ಯೆಯ ಶೇ. ಇಪ್ಪತ್ತರಷ್ಟು ಜನರು ಎಂದಿಗೂ ಕಾನೂನನ್ನು ಪಾಲಿಸುವುದಿಲ್ಲ. ಅವರನ್ನು ಸರಿದಾರಿಗೆ ತರಲು ಶಕ್ತಿಯ ಪ್ರಯೋಗ ಅತ್ಯವಶ್ಯಕವಾಗಿರುತ್ತದೆ. ಆದರೆ ಆ ಪ್ರಯೋಗ ಸಂವಿಧಾನದ ಚೌಕಟ್ಟಿನಲ್ಲಿ ಇರತಕ್ಕದ್ದು. ಹಾಗೆ ನೋಡಿದರೆ ಕಾನೂನಿನ ಅವಶ್ಯಕತೆ ಇರುವುದೇ ಈ ಶೇ. ಇಪ್ಪತ್ತು ಜನರಿಗೆ.

ಅಭಿವೃದ್ಧಿ ಯೋಜನೆಗಳು ಎಂದಾಗ ಅವು ನಮ್ಮ ಸಮಗ್ರ ಅಭಿವೃದ್ಧಿಯ ಯೋಜನೆಗಳಾಗಿರಬೇಕೇ ಹೊರತಾಗಿ ಅಭಿವೃದ್ಧಿಯ ಹೆಸರಿನಲ್ಲಿ ಯಾರದೋ ಸ್ವಾರ್ಥ ಸಾಧನೆಯಾಗುತ್ತಿರಬಾರದು. ಜನಸಾಮಾನ್ಯರಲ್ಲಿ ಸಂರಕ್ಷಣೆ ಕುರಿತಾದ ಅಜ್ಞಾನವಿರುವವರೆಗೂ ಈ ಶೇಕಡಾ ಇಪ್ಪತ್ತರಷ್ಟು ಜನ ಉಳಿದವರ ಅಜ್ಞಾನದ ಲಾಭವನ್ನು ಪಡೆಯುತ್ತಲೇ ಇರುತ್ತಾರೆ. ಆದ್ದರಿಂದ ಪರಿಸರ ಜಾಗೃತಿ ಬಹಳ ಬಹಳ ಮುಖ್ಯ. ಇಂದಿನ ಹವಾಮಾನ ಬದಲಾವಣೆಯ ಕಾಲಘಟ್ಟದಲ್ಲಿ ಅಭಿವೃದ್ಧಿ ಯೋಜನೆಗಳು ಎಂಬ ಹಣೆಪಟ್ಟಿಯಡಿ ಏನನ್ನು ಮಾಡಲಾಗುತ್ತಿದೆ ಎಂಬುದನ್ನು ಜನಸಾಮಾನ್ಯರೂ ಸಹ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಾಗಿದೆ. ಸಾಕ್ಷರತೆ ಪರಿಸರ ಸಾಕ್ಷರತೆಯೂ ಆಗಬೇಕಾಗಿದೆ.

ನಮ್ಮದೇ ಅಭ್ಯುದಯಕ್ಕಾಗಿ ನಾವು ರಕ್ಷಿತಾರಣ್ಯಗಳನ್ನು ಕಾಪಾಡಬೇಕಾಗಿದೆ. ಸರಿ, ಈಗ ನಾವೇನು ಮಾಡಬೇಕು ಎಂದರೆ, ಸಮ್ಮಲ್ಲಿರುವ ರಕ್ಷಿತಾರಣ್ಯಗಳ ಪಟ್ಟಿಯನ್ನು ಇಟ್ಟುಕೊಂಡು ಅವುಗಳಿಗಿರುವ ಗಂಡಾಂತರಗಳನ್ನು , ಸಮಸ್ಯೆಗಳನ್ನು ಅರಿತು ಅವುಗಳ ನಿವಾರಣೆಗಾಗಿ ನಮ್ಮ ನಮ್ಮ ನೆಲೆಗಳಲ್ಲಿ ಕೆಲಸ ಮಾಡಬೇಕು. ನಾವು ಪತ್ರಕರ್ತರಾದರೆ ಆ ಕುರಿತಾದ ಜಾಗೃತಿ ಮೂಡಿಸುವ ಕೆಲಸಕ್ಕೆ ಹೇರಳ ಅವಕಾಶವಿರುತ್ತದೆ. ಶಿಕ್ಷಕರಾದರೆ ಮಕ್ಕಳನ್ನು, ಮುಂದಿನ ಪೀಳಿಗೆಯನ್ನು ಜಾಗೃತಗೊಳಿಸುವ ಕಾರ್ಯಕ್ಕೆ ಅವಕಾಶವಿರುತ್ತದೆ. ವಕೀಲರಾದರೆ ನಡೆಯುತ್ತಿರುವ ಅಕ್ರಮ ಕಾರ್ಯಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅವಕಾಶವಿರುತ್ತದೆ. ಮ್ಯಾನೇಜ್‍ಮೆಂಟ್ ತಜ್ಞರಾದರೆ ನಡೆಯುತ್ತಿರುವ ಯೋಜನೆಗಳ ಅಧ್ಯಯನ ಇವಲ್ಲ ಸಂಸ್ಥೆಗಳು ನಡೆಸುತ್ತಿರುವ ಯೋಜನೆಗಳ ನಿರ್ವಹಣೆ, ಸಮರ್ಪಕ ಯೋಜನಾ ಸಾಮರ್ಥ್ಯ ಬೆಳೆಸುವಿಕೆ ಇತ್ಯಾದಿಗಳಲ್ಲಿ ತೊಡಗಿಕೊಳ್ಳಬಹುದು. ಪಶುವೈದ್ಯರಾದರೆ ಕಾಡಿನ ಸುತ್ತಲಿನಲ್ಲಿರುವ ಪ್ರಾಣಿಗಳಿಗೆ ಮುಖ್ಯವಾಗಿ ರಾಸುಗಳು ಹಾಗೂ ನಾಯಿಗಳಿಗೆ ಸೂಕ್ತವಾದ ಲಸಿಕೆಗಳನ್ನು ಹಾಕಿಸುವತ್ತ ಗಮನಕೊಡಬಹುದು. ಗೃಹಣಿಯರಾದರೂ ಮನೆಯಲ್ಲಿ ಜಾಗೃತಿ ಮೂಡಿಸುವ, ನೆರೆಹೊರೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬಹುದು. ಈ ಕುರಿತಾಗಿ ಬರೆಯಬಹುದು ಇತರರಿಗೆ ಹೇಳಬಹುದು ಇತ್ಯಾದಿ. ಇನ್ನು ಕಾನೂನಿನ ಅರಿವಿರುವವರು ಮಾಹಿತಿ ಹಕ್ಕು ಕಾಯಿದೆಯನ್ನು ಬಳಸಿಕೊಂಡು ಸರ್ಕಾರ ನಡೆಸುತ್ತಿರುವ ಕಾರ್ಯಗಳನ್ನು ಕುರಿತ ಮಾಹಿತಿ ಪಡೆದು ಅದನ್ನು ಅನುಸರಿಸಿ ಸಂರಕ್ಷಣಾ ಕಾರ್ಯಗಳನ್ನು ನಡೆಸಬಹುದು. ವಿದ್ಯಾರ್ಥಿಗಳು ಮುಖ್ಯವಾಗಿ ಸಂರಕ್ಷಣಾ ವಿಷಯಗಳನ್ನು ಸರಿಯಾಗಿ ಅರಿತು ತಮ್ಮತಮ್ಮಲ್ಲಿ ಚರ್ಚಿಸಿ ಜ್ಞಾನಪಡೆದುಕೊಳ್ಳುವುದು ಹಾಗೂ ಮನೆಯಲ್ಲಿ ಮತ್ತು ಇತರೆಡೆ ಆ ಕುರಿತಾಗಿ ಮಾತನಾಡುವುದು ಸಾಧ್ಯವರುವ ಕಾರ್ಯಗಳನ್ನು ಮಾಡಬಹುದು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಓದನ್ನು ನಿಲ್ಲಿಸುವುದಾಗಲಿ ಇಲ್ಲವೆ ಇತರರು ತಮ್ಮ ಮೂಲಕಾರ್ಯವನ್ನು ನಿಲ್ಲಿಸುವುದಾಗಲಿ ಮಾಡಬೇಕಾದ ಅವಶ್ಯಕತೆಯೇ ಇರುವುದಿಲ್ಲ.

ನಾವೆಲ್ಲರೂ ನಮ್ಮ ನಮ್ಮ ಸಾಮರ್ಥ್ಯಕ್ಕನುಗುಣವಾದ ಪರಿಸರ ಸಂರಕ್ಷಣಾ ಕಾರ್ಯಗಳಲ್ಲಿ ತೊಡಗೋಣ.

ಸಂರಕ್ಷಣೆಯ ತಾತ್ವಿಕ ಹರವು…

ಎಕೋ ಟೂರಿಸಮ್ ನಿಜ ಸ್ವರೂಪ

ಎಕೋ ಟೂರಿಸಮ್‌ಗೆ ಬೇಕು‌ ಇನ್ನಷ್ಟು ಬಲ

ಮತ್ತಷ್ಟು ಸುದ್ದಿಗಳು

vertical

Latest News

‘ಶಕ್ತಿ’ ಯೋಜನೆಗೆ ನಾಳೆ ಚಾಲನೆ: ನಿರ್ಮಲಾ ಸೀತಾರಾಮನ್‌ಗೆ ಆಹ್ವಾನ

Newsics ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ನಾಳೆ ಚಾಲನೆ ದೊರಕಲಿದೆ.

ಬ್ರಿಟನ್: ಸಂಸದ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ!

Newsics.com ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ...

ಗಡಿಯಲ್ಲಿ ಪಾಕ್ ನಿಗೂಢ ಬಲೂನ್ ಪತ್ತೆ: ಸೇನೆಯಿಂದ ಶೋಧ ಕಾರ್ಯ

Newsics.com ಶ್ರೀನಗರ: ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿದೆ.
- Advertisement -
error: Content is protected !!