Thursday, December 8, 2022

ಪ್ರಮುಖ‌ ಪಕ್ಷಿ ತಾಣಗಳು

Follow Us

ಕರ್ನಾಟಕದ ರಂಗನತಿಟ್ಟು ಈಗ ರಾಮ್‍ಸಾರ್ ತಾಣವೂ ಹೌದು ಅಂತೆಯೇ ಪ್ರಮುಖ ಪಕ್ಷಿ ತಾಣವೂ ಹೌದು. ಮುಂದಿನ ಬಾರಿ ರಂಗನತಿಟ್ಟಿಗೆ ಹೋದಾಗ ಅಂಶ ನೆನಪಿನಲ್ಲಿಟ್ಟುಕೊಂಡು ಎಷ್ಟು ಮಹತ್ವದ ತಾಣದಲ್ಲಿ ನಡೆಯುತ್ತಿದ್ದೇವೆ ಎಂಬುದನ್ನು ಮನಸ್ಸಿಗೆ ತಂದುಕೊಳ್ಳಿ, ಸಂರಕ್ಷಣೆಗೆ ಕೈಜೋಡಿಸಿ.
.

ಪಕ್ಷಿ ಸಂರಕ್ಷಣೆ- 21

♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
newsics.com@gmail.com
ksn.bird@gmail.com
www.facebook.com/ksn.bird
ಕಳೆದ

ಕೆಲ ವಾರಗಳಿಂದ ನಾವು ರಾಮ್‍ಸಾರ್ ತಾಣಗಳು ಹಾಗೂ ಹಾಗೆಂದು ಘೋಷಿತವಾಗಲು ಇರುವ ನಿಯಮಾವಳಿಗಳನ್ನು ಕುರಿತಾಗಿ ತಿಳಿದುಕೊಂಡೆವು. ಇದರಿಂದಾಗಿ ನಮ್ಮ ದೇಶ ಹಾಗೂ ರಾಜ್ಯದಲ್ಲಿ ಅದೆಷ್ಟು ಜಾಗತಿಕವಾಗಿ ಪ್ರಮುಖವಾದಂತಹ ತಾಣಗಳಿವೆ ಎಂಬುದು ನಮ್ಮ ಅರಿವಿಗೆ ಬಂದಿತು. ಇವುಗಳ ಸಂರಕ್ಷಣೆ ಕೇವಲ ಹಕ್ಕಿಗಳ ರಕ್ಷಣೆ ಮಾತ್ರವಲ್ಲ, ಪರೋಕ್ಷವಾಗಿ ನಮ್ಮ ಸಂರಕ್ಷಣೆಯೇ ಆಗುತ್ತದೆ. ಈ ಅಂಕಣದ ಮೊದಲ ಸಂಚಿಕೆಗಳಲ್ಲಿ ಹೇಳಿದಂತೆ ಸಂರಕ್ಷಣೆಯ ಮೊದಲ ಅಗತ್ಯ ನಮ್ಮ ನೈತಿಕತೆ. ಅಂದರೆ, ಈ ಭೂಮಿ ನಮಗೆ ಮಾತ್ರವಲ್ಲ ಸಕಲ ಜೀವಿಗಳಿಗೂ ಸೇರಿದ್ದು, ನಾವು ಅದರ ಒಂದು ಭಾಗ ಎಂಬ ಭಾವ. ನಾವು ಇತರ ಜೀವಿಗಳ ಸಹಜೀವಿಗಳು, ಇದು ಸಂರಕ್ಷಣೆಯ ಅಸ್ತಿಭಾರ.

ಇಂದಿನ ಪಾರಿಸಾರಿಕ ಸಮಸ್ಯೆಗಳಿಗೆ ಮಾನವನ ಸ್ವಾರ್ಥ ಮಾತ್ರ ಕಾರಣವೆಂದಲ್ಲ, ಅಜ್ಞಾನವೂ ಕಾರಣ. ಸಂರಕ್ಷಣೆಯ ಮಹತ್ವ ನಮಗೆ ಹಿಂದೆ ಗೊತ್ತಿರಲಿಲ್ಲ. ಕಾಡನ್ನು ಕಡಿದು ರೆವೆನ್ಯೂ ಇಲಾಖೆಗೆ ಭೂಮಿಯನ್ನು ವರ್ಗಾಯಿಸುವುದು ಅರಣ್ಯ ಇಲಾಖೆಯ ಕಾರ್ಯವೆಂದೇ ಗಣಿಸಿದ್ದ ಕಾಲವೂ ಇತ್ತು. ಈಗ ಸಾಕಷ್ಟು ಬದಲಾಗಿದೆ. ಸಂರಕ್ಷಣೆಗೆ ಅರಣ್ಯ ಇಲಾಖೆ ಟೊಂಕಕಟ್ಟಿ ನಿಂತಿದೆ. ನಮ್ಮ ಸಂರಕ್ಷಣೆಗೆ ಬೆನ್ನುಲಾದ ವನ್ಯಜೀವಿ ಸಂರಕ್ಷಣಾ ಕಾಯಿದೆ, 1972ರ ಸುವರ್ಣ ಸಂಭ್ರಮವನ್ನು ನಾವು ಆಚರಿಸುತ್ತಿದ್ದೇವೆ ಈ ವರ್ಷ. ಹೀಗೆ ಸಂರಕ್ಷಣೆಗೆ ಹಲವಾರು ಮಾರ್ಗಗಳು, ಶಿಕ್ಷಣ ಸಂಶೋಧನೆಯಿಂದ ತೊಡಗಿ ಶಿಕ್ಷೆಯವರೆಗೂ.

ಸಂರಕ್ಷಣೆಯ ಮತ್ತೊಂದು ಮುಖವೇ ಮುಖ್ಯವಾದ ಆವಾಸಗಳನ್ನು ವೈಜ್ಞಾನಿಕ ವಿಧಾನಗಳಿಂದ ಗುರುತಿಸಿ, ಅವಕ್ಕೆ ಯುಕ್ತವಾದ ರಕ್ಷಣೆಯನ್ನು ಕೊಡುವುದು. ಇದಕ್ಕಾಗಿ ಸರ್ಕಾರದ ಕಡೆಯಿಂದ ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿಧಾಮಗಳು, ಸಮುದಾಯ ಸಂರಕ್ಷಣಾ ಪ್ರದೇಶಗಳು, ಕಾವಲು ಅರಣ್ಯಗಳು ಹೀಗೆ ನಾನಾ ಬಗೆಯ ಸಂರಕ್ಷಣಾವಶ್ಯಕತೆಯುಳ್ಳ ತಾಣಗಳನ್ನು ಗುರುತಿಸಿ ಕಾನೂನಿನ ರಕ್ಷಣೆಯನ್ನು ಒದಗಿಸಿದೆ.

ಆದರೆ ಸಂರಕ್ಷಣೆ ಎಂಬುದು ಅಂತಾರಾಷ್ಟ್ರೀಯ ವ್ಯಾಪ್ತಿಯ ವಿಷಯ. ನಮಗೆ ಇತರ ದೇಶಗಳ ಕಾಡುಗಳ ಆರೋಗ್ಯವೂ ಮುಖ್ಯವಷ್ಟೇ. ಹಾಗಾಗಿ, ರಾಮ್ಸಾರ್ ಇತ್ಯಾದಿಗಳು ಅತಿ ಮಹತ್ವವವನ್ನು ಪಡೆದುಕೊಳ‍್ಳುತ್ತದೆ. ರಾಮ್‍ಸಾರ್ ತೇವಭರಿತ ಪ್ರದೇಶಗಳ ಪಕ್ಷಿಗಳ ಸಂರಕ್ಷಣೆಗೆ ಆದರೆ ಮತ್ತೊಂದು “ಪ್ರಮುಖ ಪಕ್ಷಿ ತಾಣಗಳು” (ಐಬಿಎ – ಇಂಪಾರ್‍ಟೆಂಟ್ ಬರ್ಡ್ ಎರೀಯಾಸ್‍) ಎಂಬುದು ಇತರ ಬಗೆಯ ತಾಣಗಳನ್ನೂ ಒಳಗೊಳ್ಳುತ್ತವೆ. ಇದು ಬರ್ಡ್‍ಲೈಫ‍್‍ ಇಂಟರ್‍ನ್ಯಾಷನಲ್ ಸಂಸ್ಥೆಯಿಂದ ಪ್ರಧಾನವಾಗಿ ರೂಪುಗೊಂಡದ್ದು. ನಮ್ಮ ದೇಶದಲ್ಲಿಯೂ ಅನೇಕಾನೇಕ ಪ್ರಮುಖ ಪಕ್ಷಿ ತಾಣಗಳನ್ನು ಗುರುತಿಸಿ ಅವುಗಳಿಗೆ ಸಂಕೇತಾಕ್ಷರಗಳನ್ನು ನೀಡಲಾಗಿದೆ. ಯಾವ ಯಾವ ಸಂರಕ್ಷಣಾ ತಾಣ ರಾಮ್‍ಸಾರ್ ಜೊತೆಜೊತೆಗೆ ಪ್ರಮುಖ ಪಕ್ಷಿ ತಾಣವೂ ಆಗಿದ್ದರೆ ಅದಕ್ಕೆ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಬರುತ್ತದೆ. ಕರ್ನಾಟಕದ ರಂಗನತಿಟ್ಟು ಅಂತಹ ಒಂದು ತಾಣ. ಇದು ರಾಮ್‍ಸಾರ್ ತಾಣವೂ ಹೌದು ಅಂತೆಯೇ ಪ್ರಮುಖ ಪಕ್ಷಿ ತಾಣವೂ ಹೌದು. ಮುಂದಿನ ಬಾರಿ ರಂಗನತಿಟ್ಟಿಗೆ ಹೋದಾಗ ಅಂಶ ನೆನಪಿನಲ್ಲಿಟ್ಟುಕೊಂಡು ಎಷ್ಟು ಮಹತ್ವದ ತಾಣದಲ್ಲಿ ನಡೆಯುತ್ತಿದ್ದೇವೆ ಎಂಬುದನ್ನು ಮನಸ್ಸಿಗೆ ತಂದುಕೊಳ್ಳಿ, ಸಂರಕ್ಷಣೆಗೆ ಕೈಜೋಡಿಸಿ.

ಮುಂದೆ ಐಬಿಎಗಳ ಬಗ್ಗೆ ಹೆಚ್ಚು ತಿಳಿಯೋಣ.

ಮತ್ತಷ್ಟು ಸುದ್ದಿಗಳು

vertical

Latest News

15 ಶಂಕಿತ ಡ್ರಗ್ಸ್ ಸಾಗಣೆದಾರರನ್ನು ಹತ್ಯೆಗೈದ ಸೇನೆ

newsics.com ಬ್ಯಾಂಕಾಕ್‌: ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ನಡೆದ ಘರ್ಷಣೆಯಲ್ಲಿ ಥಾಯ್ಲೆಂಡ್‌ನ ಸೈನಿಕರು 15 ಮಂದಿಯನ್ನು ಹತ್ಯೆಗೈದ ಘಟನೆ ಮ್ಯಾನ್ಮಾರ್‌ ಗಡಿ ಪ್ರದೇಶದಲ್ಲಿ ನಡೆದಿದೆ. ಮ್ಯಾನ್ಮಾರ್‌ನ ಸ್ಥಳೀಯ ಅಧಿಕಾರಿಗಳು ಈ...

ಮುಂದಿನ ವಾರಾಂತ್ಯಕ್ಕೆ ಟಿಇಟಿ ಫಲಿತಾಂಶ: ಸಚಿವ ನಾಗೇಶ್

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ ನವೆಂಬರ್ 6ರಂದು ನಡೆದಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶ ಮುಂದಿನ ವಾರಾಂತ್ಯದೊಳಗೆ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. ಟ್ವಿಟರ್‌ ಮೂಲಕ ಈ...

ಗುಜರಾತ್ ಚುನಾವಣಾ ಫಲಿತಾಂಶ: ರಾಜ್ಯ ರಾಜಕೀಯದಲ್ಲಿ ಸಂಚಲನ

newsics.com ನವದೆಹಲಿ: ಗುಜರಾತ್ ವಿಧಾನಸಭೆಗೆ ನಡೆದ ಚುನಾವಣೆಯ  ರಿಸಲ್ಟ್ ಇದೀಗ ಹೊರಬಂದಿದೆ. ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಇದುವರೆಗಿನ ಅತ್ಯುತ್ತಮ ಸಾಧನೆ ಪ್ರದರ್ಶಿಸಿದೆ. 157 ಕ್ಷೇತ್ರಗಳನ್ನು ಗೆಲ್ಲುವ ಹಂತದಲ್ಲಿದೆ.  ಸೋಮವಾರ ನೂತನ ಮುಖ್ಯಮಂತ್ರಿ...
- Advertisement -
error: Content is protected !!