ಕರ್ನಾಟಕದಲ್ಲಿಯೂ ಒಂದು ರಾಮ್ಸಾರ್ ತಾಣ ಘೋಷಿತವಾದದ್ದು ಇಂತಹ ಜಾಗತಿಕ ಪ್ರಾಮುಖ್ಯದ ತಾಣ ನಮ್ಮಲ್ಲಿದೆ ಎಂಬ ಅರಿವು, ಗಹನ ಜವಾಬ್ದಾರಿಯನ್ನು ನಮ್ಮಲ್ಲಿ ಮೂಡಿಸಬೇಕು. ಕರ್ನಾಟಕದಲ್ಲಿ ಇನ್ನೂ ಕೆಲವು ತಾಣಗಳು ರಾಮ್ಸಾರ್ ತಾಣವೆಂದು ಘೋಷಿತವಾಗಲು ಹೇಳಿ ಮಾಡಿಸಿದಂತಿವೆ.
.
ಪಕ್ಷಿ ಸಂರಕ್ಷಣೆ- 19
♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
newsics.com@gmail.com
ksn.bird@gmail.com
www.facebook.com/ksn.bird
ಕಳೆದ ಬಾರಿ ಒಂದು ತಾಣ ರಾಮ್ಸಾರ್ ಎಂದಾಗಲು ಇರುವ ನಿಯಮಾವಳಿಗಳಲ್ಲಿ ಎ ಗುಂಪಿನ ನಿಯಮಾವಳಿಗಳನ್ನು ನೋಡಿದೆವು. ಈಗ ಬಿ ಗುಂಪಿನ ನಿಯಮಾವಳಿಗಳನ್ನು ಕುರಿತು ತಿಳಿದುಕೊಳ್ಳಲಿದ್ದೇವೆ. ಇಷ್ಟು ಹೊತ್ತಿಗೆ ಈ ನಿಯಮಾವಳಿಗಳು ಎಷ್ಟು ಘನವಾದದ್ದು ಹಾಗೂ ಒಂದು ಅಂತಾರಾಷ್ಟ್ರೀಯ ಸಂರಕ್ಷಣಾ ಯತ್ನದ ಸ್ವರೂಪವನ್ನು ಎಷ್ಟು ಸೊಗಸಾಗಿ ಕಟ್ಟಿಕೊಡುತ್ತದೆ ಎಂಬುದು ಅರಿವಿಗೆ ಬರುತ್ತದೆ. ಈ ಎರಡನೆಯ ಭಾಗವಾದ “ಬಿ” ಗುಂಪಿನ ನಿಯಮಗಳು ಈ ಭಾವವನ್ನು ಇನ್ನೂ ಗಟ್ಟಿಗೊಳಿಸಿ, ಎಷ್ಟು ಸಮಗ್ರವಾಗಿ ಪರಿಗಣಿಸಿ ನಿಯಮಾವಳಿಯನ್ನು ರೂಪಿಸಲಾಗಿದೆ ಎಂಬುದು ನಮ್ಮ ಮನಸ್ಸಿಗೆ ಬರುತ್ತದೆ. ಇದನ್ನು ಆಧಾರವಾಗಿಟ್ಟುಕೊಂಡು ನಾವು ನಮ್ಮ ಇತರ ಸಂರಕ್ಷಣಾ ಕಾರ್ಯಗಳನ್ನು ಯೋಜಿಸಿಕೊಳ್ಳಬಹುದು.
ಈ ಬಿ ಗುಂಪಿನಲ್ಲಿ ಐದು ನಿಯಮಾವಳಿಗಳಿವೆ. ಇವು ಮೂರು ಮುಖ್ಯ ವಿಭಾಗದಲ್ಲಿ ಹಂಚಿಕೆಯಾಗಿದೆ. ನಿಯಮಾವಳಿ ಐದು ಮತ್ತು ಆರು ನೀರಹಕ್ಕಿಗಳನ್ನು ಕುರಿತದ್ದಾಗಿದೆ. ನಿಯಮಾವಳಿ ಐದು “ಒಂದು ತಾಣ ಸದಾಕಾಲ ಇಪ್ಪತ್ತು ಸಾವಿರ ನೀರ ಹಕ್ಕಿಗಳಿಗೆ ಆಶ್ರಯ ಕೊಡುತ್ತಿದ್ದರೆ ಅದನ್ನು ಅಂತಾರಾಷ್ಟ್ರೀಯವಾಗಿ ಮಹತ್ವವಿರುವ ತಾಣ ಎಂದು ಪರಿಗಣಿಸಬೇಕು ಎಂದು ಹೇಳಿದರೆ, ನಿಯಮಾವಳಿ ಆರು “ಒಂದು ತಾಣ ಒಂದು ನೀರಹಕ್ಕಿಯ ಪ್ರಭೇದ ಅಥವಾ ಉಪಪ್ರಭೇದದ ಒಟ್ಟಾರೆ ಸಂಖ್ಯೆಯ ಶೇ 1ರಷ್ಟನ್ನು ಪೋಷಿಸುತ್ತಿದ್ದರೆ ಅದನ್ನು ಅಂತಾರಾಷ್ಟ್ರೀಯ ಮಹತ್ವವಿರುವ ತಾಣ ಎಂದು ಪರಿಗಣಿಸಬೇಕು ಎನ್ನುತ್ತದೆ.
ಇನ್ನು ನಿಯಮಾವಳಿ ಏಳು ಮತ್ತು ಎಂಟು, ತಾಣ ಪೋಷಿಸುವ ಮೀನಿನ ಪ್ರಭೇದಗಳನ್ನು ಆಧರಿಸಿದೆ. ಬಹುತೇಕ ನೀರಹಕ್ಕಿಗಳ ಮುಖ್ಯ ಆಹಾರ ಮೀನು ಎಂಬುದನ್ನು ಗಮನಿಸಬೇಕು. ನಿಯಮ ಏಳು, “ಒಂದು ತಾಣ ಒಂದು ಪ್ರಭೇದ, ಇಲ್ಲವೆ ಉಪ ಪ್ರಭೇದದ ಇಲ್ಲವೆ ಕುಟುಂಬದ ಗಣನೀಯ ಸಂಖ್ಯೆಯ ಮತ್ಸ್ಯಗಳನ್ನು ಪೋಷಿಸುತ್ತಿದ್ದರೆ, ಅಥವಾ ಅವುಗಳ ಜೀವನ ಚಕ್ರದ ಘಟ್ಟಗಳ, ಪ್ರಭೇದಗಳ ನಡುವಿನ ಕೊಡುಕೊಳ್ಳುವಿಕೆ ಮತ್ತು/ಅಥವಾ ಜಾಗತಿಕ ಜೀವಿವೈವಿಧ್ಯಕ್ಕೆ ಕೊಡುಗೆ ನೀಡುವ ಅಂಶಗಳನ್ನು ಪ್ರತಿನಿಧಿಸುತ್ತಿದ್ದರೆ ಆ ತಾಣವನ್ನು ಅಂತಾರಾಷ್ಟ್ರೀಯವಾಗಿ ಮಹತ್ವವಿರುವ ತಾಣ ಎಂದು ಪರಿಗಣಿಸಬೇಕು ಎಂದರೆ, ನಿಯಮಾವಳಿ”, ಎಂಟು “ಯಾವುದಾದರೂ ತಾಣ ಮೀನುಗಳಿಗೆ ಪ್ರಮುಖವಾದ ಆಹಾರತಾಣ ಇಲ್ಲವೆ ಅವು ಸಮೃದ್ಧವಾಗಿ ಬೆಳೆಯುವ ತಾಣ ಅಥವಾ ಅವುಗಳ ವಲಸೆಯ ಮಾರ್ಗವಾಗಿದ್ದಲ್ಲಿ, ಅಂತಹ ತಾಣವನ್ನು ಅಂತ ಲ
ಕೊನೆಯ ಒಂಬತ್ತನೆಯ ನಿಯಮವು “ತೇವಭರಿತ ಭೂಮಿಯನ್ನು ಆಶ್ರಯಿಸಿರುವ ಪಕ್ಷಿಯೇತರ ಜೀವಿಯ ಒಟ್ಟಾರೆ ಸಂಖ್ಯೆಯ ಶೇ 1ರಷ್ಟನ್ನು ಪೋಷಿಸುತ್ತಿದ್ದರೆ ಆ ತಾಣವನ್ನು ಅಂತಾರಾಷ್ಟ್ರೀಯವಾಗಿ ಮಹತ್ವದ್ದು ಎಂದು ಪರಿಗಣಿಸಬೇಕು ಎನ್ನುತ್ತದೆ.
ಹೀಗೆ ಪಕ್ಷಿಗಳ ಜಾಗತಿಕ ಸಂರಕ್ಷಣೆಯನ್ನು ರಾಮ್ಸಾರ್ ಸಾಧಿಸುತ್ತದೆ. ನಮ್ಮ ಕರ್ನಾಟಕದಲ್ಲಿಯೂ ಒಂದು ರಾಮ್ಸಾರ್ ತಾಣ ಘೋಷಿತವಾದದ್ದು ಇಂತಹ ಜಾಗತಿಕ ಪ್ರಾಮುಖ್ಯದ ತಾಣ ನಮ್ಮಲ್ಲಿದೆ ಎಂಬ ಅರಿವು, ಗಹನ ಜವಾಬ್ದಾರಿಯನ್ನು ನಮ್ಮಲ್ಲಿ ಮೂಡಿಸಬೇಕು. ಕರ್ನಾಟಕದಲ್ಲಿ ಇನ್ನೂ ಕೆಲವು ತಾಣಗಳು ರಾಮ್ಸಾರ್ ತಾಣವೆಂದು ಘೋಷಿತವಾಗಲು ಹೇಳಿ ಮಾಡಿಸಿದಂತಿದೆ. ಆ ಕುರಿತಾಗಿ ಮುಂದಿನ ವಾರ ತಿಳಿಯೋಣ. ಅಷ್ಟು ಪ್ರಾಮುಖ್ಯವುಳ್ಳ ಸ್ಥಳಗಳ ಒಡೆಯರು ನಾವು ಎಂದು
ಹೆಮ್ಮೆಯಿಂದ ಬೀಗುವುದರ ಜೊತೆಗೆ ಆ ಜವಾಬ್ದಾರಿಯನ್ನೂ ನಾವು ನಿರ್ವಹಿಸಬೇಕು. ನಿರ್ವಹಿಸುತ್ತೀವಿ ಅಲ್ಲವೆ?