Saturday, January 23, 2021

ಸ್ವರ್ಗದ ಹಕ್ಕಿ!

ಇದು ಸ್ವರ್ಗದ ಹಕ್ಕಿ(Asian Paradise Flycatcher). ಹೆಣ್ಣುಹಕ್ಕಿಗಳ ಮೇಲ್ಭಾಗ ಕೆಂಗಂದು ಬಣ್ಣದ್ದಾಗಿದ್ದು ಹೊಟ್ಟೆಯ ಭಾಗ ಬೆಳ್ಳಗಿರುತ್ತದೆ, ತಲೆ ಕಪ್ಪು. ಗಂಡಿನಲ್ಲಿಯೂ ಹೀಗೆ ಇದ್ದರೂ ವಿಸ್ಮಯಕಾರಿ ವ್ಯತ್ಯಾಸಗಳಿವೆ. ಗಂಡಿನ ಬಾಲ ಸರಿಸುಮಾರು ಹನ್ನೆರಡು ಇಂಚಿನಷ್ಟು ಉದ್ದವಾಗಿರುತ್ತದೆ. ಇದು ಎರಡನೇ ಅಥವಾ ಮೂರನೇ ವರ್ಷ ಬಾಲ ಉದ್ದವಾಗುತ್ತದೆ. ಹೆಣ್ಣುಹಕ್ಕಿಯ ಬಾಲ ಜೀವನಪರ್ಯಂತ ಅಷ್ಟೇ ಇರುತ್ತದೆ.

     ಪಕ್ಷಿನೋಟ 35     


♦ ಕಲ್ಗುಂಡಿ ನವೀನ್

ವನ್ಯಜೀವಿ ತಜ್ಞರು, ಅಂಕಣಕಾರರು
ಚಿತ್ರಗಳು: ಜಿ.ಎಸ್. ಶ್ರೀನಾಥ
newsics.com@gmail.com
ksn.bird@gmail.com


 ಸ್ವ ರ್ಗದ ಹಕ್ಕಿ! ಎಂಬ ಹೆಸರೇ ಚಕಿತಗೊಳಿಸುತ್ತದೆ. ಅದನ್ನು ನೋಡಿದ ಕೂಡಲೆ ಯಾಕೆ ಅದನ್ನು ಸ್ವರ್ಗದ ಹಕ್ಕಿ ಎನ್ನುತ್ತಾರೆ ಎಂಬುದು ಅರ್ಥವಾಗಿ ಹೋಗುತ್ತದೆ. ಬಿಳಿ ಅಥವಾ ಕಂದು ದೇಹದ ಪುಟ್ಟ ಹಕ್ಕಿಗಳು. ಗಂಡು ಹಕ್ಕಿಗೆ ದೇಹದ ಸರಿಸುಮಾರು ಹತ್ತರಷ್ಟು ಬಾಲ ಉದ್ದವಿರುತ್ತದೆ. ಇದೇ ಆ ಹಕ್ಕಿಗೆ ಒಂದು ಅಪೂರ್ವ ಸೌಂದರ್ಯವನ್ನು ತಂದುಕೊಡುತ್ತದೆ.
ಗಂಡುಹಕ್ಕಿಯ ಬಾಲ ಎಂದರೆ ನಿಜದಲ್ಲಿ ಬಾಲದ ಮಧ್ಯದ ಎರಡು ಗರಿಗಳು ಉದ್ದವಾಗಿ ಬೆಳೆಯುತ್ತದೆ. ಇದು ಏಕೆ ಹೀಗೆ? ಇದರಿಂದ ಹಕ್ಕಿಗೆ ಏನು ಪ್ರಯೋಜನ ಎಂಬುದರ ಕುರಿತು ಸ್ಪಷ್ಟತೆಯಿಲ್ಲ. ಹೆಣ್ಣುಹಕ್ಕಿಗಳ ಮೇಲ್ಭಾಗ ಕೆಂಗಂದು ಬಣ್ಣದ್ದಾಗಿದ್ದು ಹೊಟ್ಟೆಯ ಭಾಗ ಬೆಳ್ಳಗಿರುತ್ತದೆ, ತಲೆ ಕಪ್ಪು. ಗಂಡಿನಲ್ಲಿಯೂ ಹೀಗೆ ಇದ್ದರೂ ವಿಸ್ಮಯಕಾರಿ ವ್ಯತ್ಯಾಸಗಳಿವೆ. ಗಂಡಿನ ಬಾಲ ಸರಿಸುಮಾರು ಹನ್ನೆರಡು ಇಂಚಿನಷ್ಟು ಉದ್ದವಾಗಿರುತ್ತದೆ. ಇದು ಎರಡನೇ ಅಥವಾ ಮೂರನೇ ವರ್ಷ ಬಾಲ ಉದ್ದವಾಗುತ್ತದೆ. ಹೆಣ್ಣುಹಕ್ಕಿಯ ಬಾಲ ಜೀವನಪರ್ಯಂತ ಅಷ್ಟೇ ಇರುತ್ತದೆ. ಗಂಡುಗಳಲ್ಲಿ ಕೆಲವುಗಳ ಬಾಲ ಕೆಂಗಂದು ಬಣ್ಣದ್ದಾಗಿದ್ದರೆ ಮತ್ತೆ ಕೆಲವದ್ದು ಅಪ್ಪಟ ಬಿಳಿಯಾಗಿರುತ್ತದೆ. ಇವುಗಳ ಮಧ್ಯಂತರ ಅಂದರೆ ತುಸು ಕೆಂಗಂದು ಹೆಚ್ಚು ಬಿಳಿ ಇಂತಹ ವರ್ಣವಿನ್ಯಾಸವಿರುವ ಹಕ್ಕಿಗಳೂ ಇರುತ್ತವೆ. ಕೆಂಗಂದು ಬಣ್ಣದ ಗಂಡು ಹಕ್ಕಿ ಕ್ರಮೇಣ ಬಿಳಿ ಬಾಲದ ಹಕ್ಕಿಯಾಗುವುದೂ ಉಂಟು ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಆದರೆ, ಈ ಕುರಿತಾಗಿ ಇದಮಿತ್ಥಂ ಎಂದು ಏನೂ ಹೇಳಲು ಸಾಧ್ಯವಿಲ್ಲ. ಭಾರತದಲ್ಲಿ ಮಧ್ಯಂತರ ಸ್ಥಿತಿಯ ಹಕ್ಕಿಗಳು ಸಾಕಷ್ಟು ದಾಖಲಾಗಿವೆ.
ಕೀಟಾಹಾರಿ ಹಕ್ಕಿಗಳಾದ ಇವು ಗಾಳಿಯಲ್ಲಿ ಹಾಗೂ ನೆಲದ ಮೇಲೆ ಪೊದೆಗಳ ನಡುವೆ ಕೀಟಗಳನ್ನು ಹಿಡಿದು ತಿನ್ನುತ್ತವೆ. ಕೀಟಗಳ ನಿಯಂತ್ರಣದಲ್ಲಿ ಇವುಗಳ ಪಾತ್ರವಿದೆ. ಅಷ್ಟುದ್ದದ ಬಾಲವಿದ್ದರೂ ಎಷ್ಟು ವೇಗವಾಗಿ ಪೊದಗಳ ನಡುವೆ ಹಾರಾಡುವ ವೇಗವೇನೂ ಕಡಿಮೆಯಿರುವುದಿಲ್ಲ. ಉದ್ದಬಾಲದಿಂದ ಸುಲಭವಾಗಿ ಕಾಣಿಸಿಬಿಡುತ್ತದೆ ಎಂಬುದೂ ಸುಳ್ಳು!
ಇನ್ನೊಂದು ವಿಶೇಷವೆಂದರೆ, ಬೆಳ್ಗಣ್ಣಹಕ್ಕಿಗಳು ಈ ಸ್ವರ್ಗದ ಹಕ್ಕಿಯ ಮರಿಗಳಿಗೆ ಗುಟುಕು ಕೊಡುವುದು ಕಂಡುಬಂದಿದೆ! ಪಕ್ಷಿಗಳಲ್ಲಿ ಇದೊಂದು ವಿಶೇಷ, ಅಪರೂಪವಾದ ನಡವಳಿಕೆ. ಇಂತಹ ಸ್ವರ್ಗದ ಹಕ್ಕಿಯನ್ನು ಕಂಡರೆ ನಮಗೆ ಬರೆದು ತಿಳಿಸಿ.

ಮತ್ತಷ್ಟು ಸುದ್ದಿಗಳು

Latest News

ಪ್ರತಿಭಟನಾ ನಿರತ ರೈತರ ಹತ್ಯೆಗೆ ಸಂಚು: ಆರೋಪಿ ಬಂಧನ

Newsics.com ನವದೆಹಲಿ: ಕೇಂದ್ರದ ಕೃಷಿ ನೀತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಿ ರಕ್ತಪಾತ ಹರಿಸಲು ಸಂಚು ಹೂಡಿದ್ದ ಆರೋಪಿಯನ್ನು ರೈತರು...

ಮನೆಗೆ ನುಗ್ಗಿ 15 ವರ್ಷದ ಬಾಲಕಿಯ ಬರ್ಬರ ಹತ್ಯೆ

Newsics.com ಪಾಟ್ನ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಅತ್ಯಂತ ದಾರುಣ ಕೃತ್ಯ ನಡೆದಿದೆ. ಮನೆಯೊಂದಕ್ಕೆ ದಾಳಿ ನಡೆಸಿದ ದುಷ್ಕರ್ಮಿಗಳು 15 ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ್ದಾರೆ. ಕತ್ತಿಯಿಂದ ಕಡಿದು ಈ ಹತ್ಯೆ ಮಾಡಲಾಗಿದೆ. ಮೃತಪಟ್ಟ ಬಾಲಕಿಯನ್ನು  ಅಂಶು...

ಲಂಡನ್ ನಲ್ಲಿ ಆಶ್ರಯ ಕೋರಿ ವಿಜಯ ಮಲ್ಯ ಅರ್ಜಿ

Newsics.com ಲಂಡನ್: ಭಾರತಕ್ಕೆ ಗಡೀಪಾರು ಭೀತಿ ಎದುರಿಸುತ್ತಿರುವ ದಿವಾಳಿ ಉದ್ಯಮಿ ವಿಜಯ ಮಲ್ಯ ಆಶ್ರಯ ಕೋರಿ ಬ್ರಿಟನ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಮಲ್ಯ ಪರ ವಕೀಲ ಫಿಲಿಪ್ ಮೈಕಲ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಭಾರತದ ಬ್ಯಾಂಕ್...
- Advertisement -
error: Content is protected !!