Monday, March 1, 2021

ಧ್ಯಾನಕ್ಕೆ ಕೈಮರ ಬಕ ಪಕ್ಷಿ!

ದಕ್ಷಿಣ ಏಷ್ಯಾದಲ್ಲಿ ಬಕಪಕ್ಷಿಗಳು ಮತ್ತು ಬೆಳ್ಳಕ್ಕಿಗಳಲ್ಲಿ 20 ಪ್ರಭೇದಗಳು ಕಂಡುಬರುತ್ತವೆ. ಜಾಗತಿಕವಾಗಿ 64 ಇವೆ. ತೆಳುಬೂದು, ಬಿಳಿತಲೆಯ ದೊಡ್ಡಗಾತ್ರದ ಹಕ್ಕಿ. ತಲೆಯ ಮೇಲೆ ಕಪ್ಪುಪಟ್ಟಿಯುಂಟು. ಗಂಟಲ ಮೇಲೆ ಕಪ್ಪು ಇಳಿಗೆರೆಗಳಿರುತ್ತವೆ. ಕೊಕ್ಕು ನಸುಹಳದಿ. ಮರಗಳ ಮೇಲೆ ಇತರ ಹಕ್ಕಿಗಳೊಡನೆ ಕಡ್ಡಿಗಳನ್ನು ಬಳಸಿ ಗೂಡು ಕಟ್ಟುತ್ತವೆ.
   ಪಕ್ಷಿನೋಟ 42   

♦ ಕಲ್ಗುಂಡಿ ನವೀನ್

ವನ್ಯಜೀವಿ ತಜ್ಞರು, ಅಂಕಣಕಾರರು
ಚಿತ್ರಗಳು: ಜಿ.ಎಸ್. ಶ್ರೀನಾಥ
newsics.com@gmail.com
ksn.bird@gmail.com


“ಒ ಳ್ಳೆ ಬಕಪಕ್ಷಿ ಕಾದ್ಹಾಗೆ ಕಾಯ್ತಾನೆ” ಎಂಬುದು ಜನರ ನುಡಿ. ಅದರಲ್ಲಿನ ಪಕ್ಷಿಯನ್ನು ಇಂದು ಪರಿಚಯಿಸಿಕೊಳ್ಳೋಣ. ಹಾಗೆ ನೋಡಿದರೆ ಇದು ಒಂದೇ ಪಕ್ಷಿಯಲ್ಲಿ ಬಕ ಪಕ್ಷಿಗಳು ಮತ್ತು ಬೆಳ್ಳಕ್ಕಿಗಳಲ್ಲಿ ಅನೇಕ ಹಕ್ಕಿಗಳು ಹೀಗೆ “ಬಕ” ಪಕ್ಷಿಯಂತೆ ಧ್ಯಾನ ಮಾಡುತ್ತವೆ! ನಾವು ಇಂದು ಪರಿಚಯಿಸಿಕೊಳ್ಳುತ್ತಿರುವ ಹಕ್ಕಿ ಬೂದುಬಕ ಅಥವಾ ನಾರಾಯಣಿ ಹಕ್ಕಿ.
ಈ ಬಕಪಕ್ಷಿಗಳು ಮತ್ತು ಬೆಳ್ಳಕ್ಕಿಗಳಲ್ಲಿ 20 ಪ್ರಭೇದಗಳು ದಕ್ಷಿಣ ಏಷ್ಯಾದಲ್ಲಿ ಕಂಡುಬರುತ್ತದೆ. ಜಾಗತಿಕವಾಗಿ 64 ಇವೆ.
ಈಗ ಇವಕ್ಕಿರುವ ಧ್ಯಾನ ಮಾಡುವ ಗುಣದ ಬಗ್ಗೆ ತಿಳಿಯೋಣ! ಹ್ಞಾ ನೀವು ಊಹಿಸುತ್ತಿರುವಂತೆ ಅದು ಬಲಿಗಾಗಿ ಕಾದಿದೆ, ಅಷ್ಟೆ! ಧ್ಯಾನವಲ್ಲ. ನೀರಿನಂಚು (ಕೆರೆ, ನದಿ ಅಥವಾ ಸಾಗರ) ಇಲ್ಲವೆ ಜೊಂಡಿನ ಮಧ್ಯೆ ನಿಶ್ಚಲವಾಗಿ ಮೀನು ಇತರೆ ಜಲಚರಕ್ಕಾಗಿ ಒಂದಿನಿತೂ ಕದಲದಂತೆ ಪ್ರತಿಮೆಯೇನೋ ಎಂಬಂತೆ ನಿಂತಿರುತ್ತದೆ. ಒಮ್ಮೆ ನಾನು ಬೆಂಗಳೂರಿನ ಲಾಲ್ಬಾೆಗಿನ ಕೆರೆಯ ಬಳಿ ಕಾಯುತ್ತಿದ್ದ ಈ ಹಕ್ಕಿ ಎಷ್ಟು ಹೊತ್ತು ಕದಲದೆ ನಿಲ್ಲುತ್ತದೆ ನೋಡೋಣ ಎಂದು ಎರಡೂವರೆ ಗಂಟೆ ನಿಂತು ನೋಡಿ ಸೋತು ಹೋದೆ! ಅದೆಷ್ಟು ಹೊತ್ತು ನಿಂತಿತ್ತೋ ಅದಕ್ಕೂ ಮುಂಚೆ ಅದೆಷ್ಟು ಹೊತ್ತಿನಿಂದ ನಿಂತಿತ್ತೋ ಯಾರಿಗೆ ಗೊತ್ತು! ಇದು ನಿಸರ್ಗದಲ್ಲಿ ಬಿಟ್ಟಿಕೂಳಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಇದು ಆಹಾರಕ್ಕೆ ಕಾಯುತ್ತಿದ್ದರೂ ಅದನ್ನು ಕೀಳಾಗಿ ಎಣಿಸಬೇಕಿಲ್ಲ. ಅದು ಅದರ ಆಹಾರ ಕಂಡುಕೊಳ್ಳುವ ಮಾರ್ಗ, ಹಾಗಾಗಿ ಅದರ ಧರ್ಮ. ಆದ್ದರಿಂದ ಅದು ಒಂದು ಬಗೆಯ ಧ್ಯಾನವೇ, ಆಧ್ಯಾತ್ಮವೇ! ಬಕವೇ ಆಗಲಿ ಹುಲಿಯೇ ಆಗಲಿ ಹಸಿವಿಲ್ಲದಾಗ ಬೇಟೆಯಾಡವುದಿಲ್ಲ!
ಪ್ರಧಾನವಾಗಿ ತೆಳುಬೂದು, ಬಿಳಿತಲೆಯ ದೊಡ್ಡಗಾತ್ರದ ಹಕ್ಕಿ. ತಲೆಯ ಮೇಲೆ ಕಪ್ಪುಪಟ್ಟಿಯುಂಟು. ಗಂಟಲ ಮೇಲೆ ಕಪ್ಪು ಇಳಿಗೆರೆಗಳಿರುತ್ತವೆ. ಕೊಕ್ಕು ನಸುಹಳದಿ. ಮರಗಳ ಮೇಲೆ ಇತರ ಹಕ್ಕಿಗಳೊಡನೆ ಕಡ್ಡಿಗಳನ್ನು ಬಳಸಿ ಗೂಡುಕಟ್ಟುತ್ತವೆ.
ಪ್ರಾದೇಶಿಕ ಭಿನ್ನತೆಯನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ದಕ್ಷಿಣ ಏಷ್ಯಾದ ಬಹುಭಾಗಗಳಲ್ಲಿ ಇದು ಕಂಡುಬರುತ್ತದೆ. ಲಕ್ಷದ್ವೀಪಗಳಲ್ಲಿಯೂ ಇದೆ. ಅಂಡಮಾನ್‍ ಮತ್ತು ನಿಕೋಬಾರ್‍ ದ್ವೀಪಗಳಲ್ಲಿ ಇದೆ ಎಂಬ ದಾಖಲೆಗಳಿದ್ದರೂ ಅದರ ಋಜುತ್ವವನ್ನು ತಜ್ಞರು ಪ್ರಶ್ನಿಸುತ್ತಾರೆ. ನೀವು ಎಲ್ಲದರೂ ಪ್ರವಾಸ ಹೋಗುತ್ತಿರುವಾಗ ನೀರಿನಾಸರೆ ಬಳಿ ನಿಂತು ನೋಡಿ. ನಿಶ್ಚಲವಾಗಿ ನೀರಿನಲ್ಲಿ ನಿಂತು ಬಲಿಕಂಡಾಗ ಕತ್ತಿನ ಮಿಂಚಿನ ವೇಗದ ಚಲನೆಯಿಂದ ಹಿಡಿಯುವ ಬಕಪಕ್ಷಿಯ ಬೇಟೆಯನ್ನು ನೋಡುವ ಅವಕಾಶ ಸಿಕ್ಕೀತು. ಮಕ್ಕಳಿಗೂ ತೋರಿಸಿ. ಹಾಗೇ, ನಮಗೆ ಬರೆದು ತಿಳಿಸುವುದನ್ನು ಮರೆಯಬೇಡಿ.
ಅಂದಹಾಗೆ, ಇವು ನೀರಿನಲ್ಲಿ ನಿಂತ ಭಂಗಿಯಲ್ಲೇ ಸಾಮಾನ್ಯವಾಗಿ ಕಂಡುಬರುವುದು. ಹಂಸದಂತೆ ಈಜುವ ಭಂಗಿ ಅಪರೂಪ. ಅಂತಹ ಅಪರೂಪದ ಭಂಗಿಯನ್ನು ವನ್ಯಛಾಯಾಗ್ರಾಹಕ ಶ್ರೀ ಜಿ ಎಸ್ ಶ್ರೀನಾಥ ಸೆರೆಹಿಡಿದಿದ್ದಾರೆ, ನೋಡಿ!

ಮತ್ತಷ್ಟು ಸುದ್ದಿಗಳು

Latest News

ಕಾಡಾನೆ ಜತೆ ಸೆಲ್ಪಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

newsics.com ರಾಂಚಿ:  ಛತ್ತೀಸ್ ಗಢದಲ್ಲಿ ಕಾಡಾನೆ ಜತೆ ಸೆಲ್ಪಿ ತೆಗೆಯಲು ಯತ್ನಿಸಿದ ಯವಕ ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು  ಮನೋಹರ್ ಪಟೇಲ್ ಎಂದು ಗುರುತಿಸಲಾಗಿದೆ. ರಾಯಗಢ...

ಅಸ್ಸಾಂನಲ್ಲಿ ಅಪಘಾತ: ಮೈಸೂರಿನ ಯೋಧ ಸಾವು

newsics.com ಗುವಾಹಟಿ:  ಅಸ್ಸಾಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೈಸೂರು ಮೂಲದ ಯೋಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.  ಮೃತಪಟ್ಟ ಯೋಧನನ್ನು ತಿ. ನರಸಿಪುರ ತಾಲೂಕಿನ  ಬೆಟ್ಟಹಳ್ಳಿ ಗ್ರಾಮದ ಮೋಹನ್ ಎಂದು ಗುರುತಿಸಲಾಗಿದೆ. ಕಳೆದ 10 ವರ್ಷದಿಂದ ಅವರು...

ತಿರುಪತಿ ಪ್ರವೇಶಿಸದಂತೆ ಚಂದ್ರಬಾಬು ನಾಯ್ಡುಗೆ ನಿರ್ಬಂಧ

newsics.com ತಿರುಪತಿ: ತೆಲುಗು ದೇಶಂ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಜು ಗೆ ತಿರುಪತಿ ಪ್ರವೇಶಿಸದಂತೆ ಪೊಲೀಸರು ತಡೆ ಒಡ್ಡಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಣಿಗುಂಟ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು...
- Advertisement -
error: Content is protected !!