Saturday, April 17, 2021

ಯುದ್ಧ ವಿಮಾನಗಳೇ! ಅಲ್ಲ, ರೀವಗಳು

ಜಗತ್ತಿನಾದ್ಯಂತ ಸುಮಾರು ನಲವತ್ತ ನಾಲ್ಕು ಬಗೆಯ ರೀವಗಳಿವೆ. ಕರ್ನಾಟಕದಲ್ಲಿಯೇ ಹತ್ತಕ್ಕೂ ಹೆಚ್ಚು ಬಗೆಯ ರೀವಗಳನ್ನು ನೋಡಬಹುದು. ಇವು ಆಹಾರ ಸಂಪಾದಿಸುವ ಸಮಯ ಬಿಟ್ಟು ಉಳಿದಂತೆ ನೀರಿಗಿಳಿಯದಿರುವುದು ಇವುಗಳ ಒಂದು ವೈಶಿಷ್ಟ್ಯ.

ಪಕ್ಷಿನೋಟ – 48

ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
ಚಿತ್ರಗಳು: ಜಿ.ಎಸ್. ಶ್ರೀನಾಥ
newsics.com@gmail.com ksn.bird@gmail.com
ವನ್ನು ನೋಡಿದ ಕೂಡಲೇ ಎಂತಹವರ ಮನಸ್ಸಿನಲ್ಲೂ ಇದು ಹಾರಾಟಕ್ಕೆ ವಿಶೇಷವಾಗಿ ಹೇಳಿ ಮಾಡಿಸಿದ್ದು ಎಂದು ಹೊಳೆಯದಿರದು. ಅಂತಹ ವಾಯುಚಲನಾವಿನ್ಯಾಸದ ದೇಹ ಈ ಹಕ್ಕಿಗಳದ್ದು. ಇಂಗ್ಲಿಷ್‍ನಲ್ಲಿ ಟರ್ನ್ (Tern) ಎಂದು ಕರೆಯಲಾಗುವ ಇವನ್ನು ಕನ್ನಡದಲ್ಲಿ ರೀವಗಳು ಎನ್ನುತ್ತಾರೆ. ಆ ಪದದ ಅರ್ಥ ಹಾಗೂ ಬಳಕೆಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ, ಇರಲಿ. ನೀರಿನಾಸರೆಗಳಲ್ಲಿ, ಅದರಲ್ಲಿಯೂ ಮುಖ್ಯವಾಗಿ ನದಿ ಸಾಗರಗಳೆಡೆಯಲ್ಲಿ ಕಂಡುಬರುವಂತಹ ಹಕ್ಕಿಗಳು ಇವು.
ವೇಗವಾಗಿ ಹಾರುತ್ತಿದ್ದರೂ ಇವುಗಳ ದೃಷ್ಠಿ ಕೆಳಗೆ ನೀರಿನೊಳಗಿನ ಅದೃಷ್ಠಹೀನ ಮೀನಿನ ಮೇಲೆಯೇ ಇರುತ್ತದೆ! ಕ್ಷಣಾರ್ದದಲ್ಲಿ ರೆಕ್ಕೆ ಮಡಿಸಿಕೊಂಡು ನೀರನ್ನು “ಸೀಳಿಕೊಂಡು” ಒಳಗೆ ಹೋಗಿ ಮಿಕವನ್ನು ಅಡ್ಡಡ್ಡಲಾಗಿ ಕಚ್ಚಿಕೊಂಡು ಮೇಲೇಳುತ್ತದೆ. ಗಾಳಿಯಲ್ಲಿ ಅದನ್ನು ಎಸೆದು ಮುಖಮುಂದಾಗಿ ಹಿಡಿದು ನುಂಗುತ್ತದೆ. ಇವಿಷ್ಟೂ ‘ಅಹಾ’ ಎನ್ನುವಷ್ಟರಲ್ಲಿ ಆಗಿ ಹೋಗುತ್ತದೆ. ಅಷ್ಟು ಕ್ಷಿಪ್ರ ಇವುಗಳ ಬೇಟೆಯ ಕ್ರಮ. ಮೀನು ಇವುಗಳ ಪ್ರಧಾನ ಆಹಾರವಾದರೂ ನೀರಿನಲ್ಲಿನ ಕೀಟ ಹಾಗೂ ಏಡಿಗಳನ್ನೂ ತಿನ್ನುತ್ತವೆ.
ದಕ್ಷಿಣ ಏಷ್ಯಾದಲ್ಲಿ ಇಪ್ಪತ್ತು, ಜಗತ್ತಿನಾದ್ಯಂತ ಸುಮಾರು ನಲವತ್ತ ನಾಲ್ಕು ಬಗೆಯ ರೀವಗಳಿವೆ. ಕರ್ನಾಟಕದಲ್ಲಿಯೇ ಹತ್ತಕ್ಕೂ ಹೆಚ್ಚು ಬಗೆಯ ರೀವಗಳನ್ನು ನೋಡಬಹುದು. ಇವು ಆಹಾರ ಸಂಪಾದಿಸುವ ಸಮಯ ಬಿಟ್ಟು ಉಳಿದಂತೆ ನೀರಿಗಿಳಿಯದಿರುವುದು ಇವುಗಳ ಒಂದು ವೈಶಿಷ್ಟ್ಯ. ಬೇಟೆಯಾಡದ ಸಮಯದಲ್ಲಿ ನೀರಿನಾಸರೆಯ ಬಂಡೆಯ ಮೇಲೋ ದಡದ ಮೇಲೋ ಕುಳಿತಿರುತ್ತದೆ.

ಕಪ್ಪು, ಕಂದು ಹಾಗೂ ಬಿಳಿ ಇವುಗಳ ಪ್ರಧಾನ ಬಣ್ಣಗಳು. ಕಪ್ಪು ಟೋಪಿ ಸಾಮಾನ್ಯವಾಗಿ ಕಾಣುವಂತಹದ್ದು.
ಇವುಗಳ ಕೆಂಪು ಕಾಲುಗಳು ಬಹಳ ಪುಟ್ಟದು! ಜಾಲಪಾದವನ್ನು ಹೊಂದಿವೆ. ಗಂಡು ಹೆಣ್ಣು ಹಕ್ಕಿಗಳಲ್ಲಿ ಬಣ್ಣ ವ್ಯತ್ಯಾಸಗಳಿಲ್ಲ. ಒಂದೇ ರೀತಿ ಇರುತ್ತವೆ. ಬಹುತೇಕ ರೀವಗಳ ಗೂಡು ಎಂದರೆ ನೆಲವೇ ಇಲ್ಲವೇ ನೆಲದ ಮೇಲಿನ ಆಳವಿಲ್ಲದ ಕುಳಿ. ಅನೇಕ ಪ್ರಭೇದಗಳಲ್ಲಿ ಮೊಟ್ಟೆ-ಮರಿಗಳ ಪೋಷಕ ಕಾರ್ಯವನ್ನು ಗಂಡು ಹೆಣ್ಣು ಸಮಾನವಾಗಿ ನಿರ್ವಹಿಸುತ್ತವೆ.
ರಂಗನತಿಟ್ಟಿನಲ್ಲಿ ಎರಡು ಬಗೆಯ ರೀವಗಳು (ನದಿ ಹಾಗೂ ಮೀಸೆ ರೀವಗಳು) ಕಂಡುಬರುತ್ತವೆ. ಹಳದಿ ಕೊಕ್ಕಿನದು ನದಿ ರೀವ, ಕೆಂಪು ಕೊಕ್ಕಿನದು ಮೀಸೆ ರೀವ. ಮೀಸೆ ರೀವ ಕಾಶ್ಮೀರ ಹಾಗೂ ಇತರ ಉತ್ತರದ ಭಾಗಗಳಲ್ಲಿ ಮರಿ ಮಾಡುತ್ತವೆ. ಇಲ್ಲಿಗೆ ಅದು ವಲಸೆ ಹಕ್ಕಿ. ಹಾಗೆ ನೋಡಿದರೆ ಚಳಿಗಾಲದಲ್ಲಿ ಭಾರತದಾದ್ಯಂತ ಕಂಡುಬರುತ್ತದೆ. ಪಾಕಿಸ್ತಾನ, ಬಾಂಗ್ಲಾ ಹಾಗೂ ಶ್ರೀಲಂಕಾದಲ್ಲಿಯೂ ಕಂಡುಬರುತ್ತದೆ. ನದಿ ರೀವ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಮಾಯನ್ಮಾರ್‍ಗಳಲ್ಲಿ ಕಂಡುಬರುತ್ತದೆ, ಶ್ರೀಲಂಕಾದಲ್ಲಿ ಇಲ್ಲ. ನೋಡಲು ಸುಂದರವಾದ, ಅದ್ಭುತ ಮುಳುಗುಗಾರ ಹಕ್ಕಿಗಳು ಇವು. ಆಹಾರ ಸರಪಳಿ ಹಾಗೂ ಕೀಟಗಳ ನಿಯಂತ್ರಣದಲ್ಲಿ ಇವುಗಳಿಗೆ ಒಂದು ಸ್ಥಾನವಿದೆ. ಇದನ್ನು ನೀವು ಕಂಡರೆ ನಮಗೆ ಬರೆದು ತಿಳಿಸಿ.

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!