Monday, November 29, 2021

ಚಂದ್ರಮುಕುಟ

Follow Us

ತಲೆಯ ಮೇಲೆ ಚೊಟ್ಟಿಯಂತೆ ಕಾಣುವ, ತಿಳಿಕೆಂಗಂದು ಬಣ್ಣದ, ಕಪ್ಪುತುದಿಯ,  ಗರಿಗಳು. ಇವನ್ನು ಹಕ್ಕಿ ಬಿಚ್ಚಿದರೆ ಅರ್ಧಚಂದ್ರಾಕೃತಿಯಂತೆ ನಿಲ್ಲುತ್ತವೆ. ಇದರಿಂದಲೇ ಈ ಹಕ್ಕಿಗೆ ಚಂದ್ರ ಮುಕುಟ ಎಂಬ ಹೆಸರು ಬಂದದ್ದು.

  ಪಕ್ಷಿನೋಟ – 76  


♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
ಚಿತ್ರಗಳು: ಜಿ.ಎಸ್.ಶ್ರೀನಾಥ
newsics.com@gmail.com
www.facebook.com/ksn.bird
kalgundi.naveen@yahoo.com

ಮ್ಮ ಜನಪದರು ಜನಕ್ಕೆ ಆಗಲೀ  ಪ್ರಾಣಿಗಳಿಗೇ ಆಗಲಿ ಹೆಸರಿಡುವಾಗ ಎಷ್ಟು ವಿಶಾಲ ಹೃದಯಿಗಳು ನೋಡಿ. ನೀಳಕೆಳಬಾಗಿದ ಕೊಕ್ಕೊನ, ಬಿಡಿಸಿದಾಗ ತಲೆಯ ಸುತ್ತ ಕಿರೀಟದಂತೆ ಕಾಣುವ ಚೊಟ್ಟಿಯುಳ್ಳ ನೆಲಕುಟುಕ ಹಕ್ಕಿಯನ್ನು ಚಂದ್ರಮುಕುಟ ಎಂದು ಕರೆದರು.
ನಮ್ಮಲ್ಲಿನ ತೀರ ಸಾಮನ್ಯವಲ್ಲದಿದ್ದರೂ ಅಪರೂಪದ ಹಕ್ಕಿಯೇನಲ್ಲ, ಚಂದ್ರಮುಕುಟ. ಇಂಗ್ಲಿಷಿನಲ್ಲಿ ಇದನ್ನು Eurasian Hoopoe Upupa epops ಎನ್ನುತ್ತಾರೆ. ಇದು ಕೂಗುವುದದು ಉಪೂಪಾ ಎಂದೇ. ನಗರ ಪ್ರದೇಶಗಳ ಹೊರವಲಯದಲ್ಲೂ ಕೆಲವೊಮ್ಮೆ ಒಳಗೂ ಕಂಡುಬರುತ್ತದೆ. ತೆಳು ಕಿತ್ತಳೆ-ಕೆಂಗಂದು ಬಣ್ಣದ ದೇಹ, ನೀಳವಾದ ತುದಿಯ ಭಾಗದಲ್ಲಿ ತುಸು ಕೆಳಬಾಗಿದ, ಕಪ್ಪುಕೊಕ್ಕು, ಕಪ್ಪುಬಿಳಿ ಪಟ್ಟೆಗಳುಳ್ಳ ರೆಕ್ಕೆಗಳು, ತಲೆಯ ಮೇಲೆ ಚೊಟ್ಟಿಯಂತೆ ಕಾಣುವ, ತಿಳಿಕೆಂಗಂದು ಬಣ್ಣದ, ಕಪ್ಪುತುದಿಯ,  ಗರಿಗಳು. ಇವನ್ನು ಹಕ್ಕಿ ಬಿಚ್ಚಿದರೆ ಅರ್ಧಚಂದ್ರಾಕೃತಿಯಂತೆ ನಿಲ್ಲುತ್ತವೆ. ಇದರಿಂದಲೇ ಈ ಹಕ್ಕಿಗೆ ಚಂದ್ರ ಮುಕುಟ ಎಂಬ ಹೆಸರು ಬಂದದ್ದು.


ಇದರ ನೀಳವಾದ ಕೊಕ್ಕಿಗೆ ಒಂದು ವಿಶೇಷವಾದ ಕೆಲಸವಿದೆ. ಅದೇ ಕೀಟಗಳ ಲಾರ್ವಾವಸ್ಥೆಯಲ್ಲಿರುವ ಕೀಟಗಳನ್ನು ನೆಲದಾಳದಿಂದ ಹೆಕ್ಕುವುದು. ಇದು ಈ ಹಕ್ಕಿಯ ಮುಖ್ಯ ಆಹಾರವೂ ಹೌದು. ಲಾರ್ವಾ, ಗ್ರಬ್‍ ಎಂದರೆ ಕೀಟಗಳು ಪ್ರೌಢಾವಸ್ಥೆ ತಲುಪುವ ಮುಂಚಿನ ಹಂತಗಳು. ಕೀಟಗಳನ್ನು ಆ ಹಂತದಲ್ಲೇ ನಿಯಂತ್ರಿಸುವ ಈ ಹಕ್ಕಿಗಳು ಕೃಷಿಗೆ ಕೊಡುವ ಮೌಲ್ಯವನ್ನು ಅಂದಾಜು ಮಾಡಬೇಕು ಎನ್ನುತ್ತಾರೆ ಸಲೀಂ ಅಲಿ. ಕೀಟಗಳನ್ನು ತಿನ್ನುವ ಹಕ್ಕಿಗಳು ಹಾಗೂ ಕೀಟಗಳು ಪ್ರೌಢಾವಸ್ಥೆ ತಲುಪುವ ಮನ್ನವೇ ತಿಂದು ಮುಗಿಸುವ ಚಂದ್ರಮುಕುಟದ ಸಂತತಿಯನ್ನು ಉಳಿಸಿಕೊಂಡರೆ ಕೀಟನಾಶಕಗಳೇ ಬೇಕಾಗುವುದಿಲ್ಲ.


ಭಾರತ (ಅಂಡಮಾನ್ ಸೇರಿದಂತೆ, ಲಕ್ಷದ್ವೀಪದಲ್ಲಿ ಅಲೆಮಾರಿ)  ಶ್ರೀಲಂಕಾ ಆಫ್ಘಾನಿಸ್ಥಾನ, ಪಾಕಿಸ್ಥಾನ, ಯೂರೋಪ್‍, ಆಫ‍್ರಿಕಾ ಹಾಗೂ ಅಪರೂಪವಾಗಿ ಬ್ರಿಟನ್ನಿನಲ್ಲಿಯೂ ಮರಿಮಾಡುವುದು ಕಂಡುಬಂದಿದೆ.
ಕೆಲವೆಡೆ ನಿವಾಸಿ ಹಕ್ಕಿಯಾದರೆ, ಕೆಲವೆಡೆಗೆ ವಲಸೆ ಬರುವ ಹಕ್ಕಿ. ತುಸು ಪಯಣಸಿ, ಈ ಹಕ್ಕಿಯನ್ನು ನೋಡಿ, ಕಂಡಾಗ ನಮಗೆ ಬರೆದು ತಿಳಿಸಿ.

ಅಂದಹಾಗೆ, ಕಳೆದವಾರ ಅಂಕಣದ ಅಮೃತಮಹೋತ್ಸವಕ್ಕೆ ಎಲ್ಲರಿಗೂ ಧನ್ಯವಾದ ಹೇಳುವ ಸಂಭ್ರಮ ನನ್ನದಾಗಿತ್ತು. ಈ ಬಾರಿ ಎಪ್ಪತ್ತೈದನೇ ಹಕ್ಕಿ ನೀಡಿದ್ದಕ್ಕಾಗಿ ಗೆಳೆಯ ಶ್ರೀನಾಥನಿಗೆ ಧನ್ಯವಾದ ಹೇಳುವ ಸಂಭ್ರಮ! ಶುಭಾಶಯಗಳು! ಅವರ ಕ್ಯಾಮೆರ ಹಕ್ಕಿ ಪ್ರಪಂಚದ ಕೌತುಕಗಳನ್ನು ದಾಖಲಿಸುತ್ತಲೇ ಇರಲಿ!

ಮತ್ತಷ್ಟು ಸುದ್ದಿಗಳು

Latest News

ಅಂತ್ಯಕ್ರಿಯೆ ನಡೆಸುವುದನ್ನೇ ಮರೆತ ಬಿಬಿಎಂಪಿ: 15 ತಿಂಗಳ ಬಳಿಕ ಪತ್ತೆಯಾಯ್ತು 2 ಕೋವಿಡ್ ಶವ!

newsics.com ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ ಇಬ್ಬರ ಶವಸಂಸ್ಕಾರ ಮಾಡುವುದನ್ನೇ ಮರೆತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಷ್ಟೇ ಅಲ್ಲ, 15 ತಿಂಗಳ ಬಳಿಕ ಎರಡು ಶವಗಳನ್ನು ಹೊರಕ್ಕೆ ತಂದ...

ಕೃಷ್ಣನ ವಿಗ್ರಹ ಸ್ಥಾಪನೆ ಹೇಳಿಕೆ: ಮಥುರಾದಲ್ಲಿ ನಿಷೇಧಾಜ್ಞೆ

newsics.com ಮಥುರಾ(ಉತ್ತರ ಪ್ರದೇಶ): ಕೃಷ್ಣನ ಜನ್ಮಸ್ಥಾನ ಪ್ರದೇಶದಲ್ಲಿ ಭಗವಾನ್ ಕೃಷ್ಣನ ವಿಗ್ರಹ ಪ್ರತಿಷ್ಠಾಪನೆ ಮಾಡುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಹೇಳಿಕೆಯ ಬೆನ್ನಲ್ಲೇ ಮಥುರಾದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ದೇವಾಲಯದ ಹತ್ತಿರವೇ ಮಸೀದಿ ಇದ್ದು,...

ತಿರುಮಲ ತಿರುಪತಿ ದೇವಸ್ಥಾನಮ್’ನ ಒಎಸ್’ಡಿ ಡಾಲರ್ ಶೇಷಾದ್ರಿ ನಿಧನ

newsics.com ವಿಶಾಖಪಟ್ಟಣಂ: ತಿರುಮಲ ತಿರುಪತಿ ದೇವಸ್ಥಾನಮ್ ನ ಪ್ರಧಾನ ಅರ್ಚಕ ಡಾಲರ್ ಶೇಷಾದ್ರಿ ನಿಧನರಾದರು. ಟಿಟಿಡಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಶೇಷಾದ್ರಿ ಅವರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು...
- Advertisement -
error: Content is protected !!