Sunday, May 22, 2022

ಹೆಮ್ಮಿಂಚುಳ್ಳಿ

Follow Us

ಜನವರಿಯಿಂದ ಜುಲೈವರೆಗೆ ಮರಿಮಾಡುವ ಹೆಮ್ಮಿಂಚುಳ್ಳಿಗಳು ಬಹುತೇಕ ಮೀಂಚುಳ್ಳಿಗಳಂತೆ ನೀರಿನಾಸರೆಯ ದಂಡೆಯನ್ನು ಕೊರೆದು ಗೂಡನ್ನು ರಚಿಸಿಕೊಳ್ಳುತ್ತವೆ. ಮರಿಮಾಡುವ ಕಾಲದಲ್ಲಿ ಒಮ್ಮೆ ಯಾವುದೇ ನಿರ್ದಿಷ್ಟ ಉದ್ದೇಶವಿಲ್ಲದ ಐದಾರು ರಂಧ್ರಗಳನ್ನು ದಂಡೆಯ ಮೇಲೆ ಕೊರೆದದ್ದು ದಾಖಲಾಗಿದೆ.

ಪಕ್ಷಿನೋಟ – 89


♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
ಚಿತ್ರಗಳು: ಜಿ. ಎಸ್. ಶ್ರೀನಾಥ
newsics.com@gmail.com ksn.bird@gmail.com

Stork-billed Kingfisher
ಮೀಂಚುಳ್ಳಿಗಳ ಬಗ್ಗೆ ಈಗಾಗಲೇ ನಾವು ಈ ಅಂಕಣದಲ್ಲಿ ಓದಿ ತಿಳಿದಿದ್ದೇವೆ. (ನೋಡಿ: https://newsics.com/anavarana/column-pakshinota-15-the-kingfisher/27254/
ಅವುಗಳ ಬಗೆ, ಆಹಾರ ಇತ್ಯಾದಿಗಳನ್ನು ಅರಿತಿದ್ದೇವೆ. ಈ ಬಾರಿ ನಮ್ಮ ಕರ್ನಾಟಕದಲ್ಲಿಯೂ ಕಂಡುಬರುವ ಹಾಗೂ ಬೆಂಗಳೂರಿನ ಪಕ್ಷಿಪಟ್ಟಿಯಲ್ಲಿರುವ ಒಂದು ದೊಡ್ಡಗಾತ್ರ ಮೀಂಚುಳ್ಳಿಯ ಬಗ್ಗೆ ತಿಳಿಯೋಣ.
ನಮ್ಮ ಸಿಹಿನೀರ ಮೀಂಚುಳ್ಳಿಗಳಲ್ಲಿ ಒಂದಾದ ಹೆಮ್ಮಿಂಚುಳ್ಳಿ ದೊಡ್ಡ ಗಾತ್ರದ್ದು. ಅಂದರೆ ಸುಮಾರು ನಮ್ಮ ಪಾರಿವಾಳದಷ್ಟು ದೊಡ್ಡದು, 38 ಸೆಂ.ಮೀ. ಬೂದುಛಾಯೆಯ ಕಂದು ತಲೆ, ಮೇಲ್ಭಾಗ ತೆಳು ಹಸಿರುನೀಲಿಯಿದ್ದು ಹೆಕ್ಕತ್ತಿನ ಬಳಿ ಹಳದಿಬಣ್ಣವಿರುತ್ತದೆ. ಕೊಕ್ಕು ದೊಡ್ಡಗಾತ್ರ ರಕ್ತಗೆಂಪು ಬಣ್ಣವಿದ್ದು ಚೂರಿಯ ತುದಿಯಂತೆ ಚೂಪಾಗಿರುತ್ತದೆ. ಇದು ಇಂತಹ ಬಣ‍್ಣ ಮತ್ತು ಗಾತ್ರವಿದ್ದರೂ ಹೆಮ್ಮಿಂಚುಳ್ಳಿ ಇತರ ಪಕ್ಷಿಗಳಂತೆ ಮರದ ಮೇಲೆ ಕಾಣದಂತೆ ಕುಳಿತುಕೊಳ್ಳಬಲ್ಲದು. ಇದು ಎಲ್ಲ ಜೀವಿಗಳ ನಡವಳಿಕೆಯೇ ಹೌದು.
ಮೀನು, ಕಪ್ಪೆ, ಏಡಿ, ಹಲ್ಲಿ, ಇಲಿ ಹಾಗೂ ಸಣ್ಣಗಾತ್ರದ ಪಕ್ಷಿಗಳನ್ನು, ಕೆಲವೊಮ್ಮೆ ಮರದ ರಂಧ್ರದಲ್ಲಿದ್ದವನ್ನೂ ಹೊರಕ್ಕೆಳೆದು ತಿನ್ನುತ್ತದೆ. ಹಕ್ಕಿಗಳ ಮೊಟ್ಟೆಗಳನ್ನೂ ತಿನ್ನುತ್ತದೆ. ಜನವರಿಯಿಂದ ಜುಲೈವರೆಗೆ ಮರಿಮಾಡುವ ಇವು ಬಹುತೇಕ ಮೀಂಚುಳ್ಳಿಗಳಂತೆ ನೀರಿನಾಸರೆಯ ದಂಡೆಯನ್ನು ಕೊರೆದು ಗೂಡನ್ನು ರಚಿಸಿಕೊಳ್ಳುತ್ತವೆ. ಮರಿಮಾಡುವ ಕಾಲದಲ್ಲಿ ಒಮ್ಮೆ ಯಾವುದೇ ನಿರ್ದಿಷ್ಟ ಉದ್ದೇಶವಿಲ್ಲದ ಐದಾರು ರಂಧ್ರಗಳನ್ನು ದಂಡೆಯ ಮೇಲೆ ಕೊರೆದದ್ದು ದಾಖಲಾಗಿದೆ.
ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಮಾಯನ್ಮಾರಿನ ಕೆಲಭಾಗಗಳಲ್ಲಿ ಕಂಡುಬರುತ್ತದೆ. ಇದರಲ್ಲಿ ಉಪಪ್ರಭೇದದ ದಾಂಧಲೇ ಉಂಟು. ಸುಮಾರು ಹದಿಮೂರು ಉಪಪ್ರಭೇದಗಳನ್ನು ಹೆಮ್ಮಿಂಚುಳ್ಳಿಯಲ್ಲಿ ಗುರುತಿಸಲಾಗಿದೆ.
ನಿಮ್ಮ ಪ್ರವಾಸಗಳಲ್ಲಿ ಈ ಹಕ್ಕಿಯನ್ನು ಕಂಡರೆ, ನಮಗೆ ಬರೆಯಿರಿ.

ಮತ್ತಷ್ಟು ಸುದ್ದಿಗಳು

Latest News

ಕುತುಬ್ ಮಿನಾರ್ ಸಂಕೀರ್ಣ ಉತ್ಖನನ: ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದ ಕೇಂದ್ರ ಸಚಿವ

newsics.com ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದ ಉತ್ಖನನ ಕುರಿತಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ.ಕೆ.ರೆಡ್ಡಿ ಹೇಳಿದ್ದಾರೆ. ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿ...

ನನ್ನ ದೇಹದ ಖಾಸಗಿ ಭಾಗದಲ್ಲಿನ ಮಚ್ಚೆ ಬಗ್ಗೆ ಹೇಳಲಿ: ಲೈಂಗಿಕ ಕಿರುಕುಳ ಆರೋಪಕ್ಕೆ ಎಲಾನ್ ಮಸ್ಕ್ ಓಪನ್ ಚಾಲೆಂಜ್

newsics.com ನ್ಯೂಯಾರ್ಕ್: ಖಾಸಗಿ ಜೆಟ್‌ನಲ್ಲಿ ಫ್ಲೈಟ್ ಅಟೆಂಡೆಂಟ್ ಸ್ನೇಹಿತೆ ಎನ್ನಲಾದ ವ್ಯಕ್ತಿ ಮಾಡಿರುವ ಲೈಂಗಿಕ ಕಿರುಕುಳ ಆರೋಪವನ್ನು ಜಗತ್ತಿನ‌ ನಂಬರ್ ಒನ್ ಶ್ರೀಮಂತ ಬಿಲಿಯನೇರ್ ಎಲಾನ್‌ ಮಸ್ಕ್ ಅಲ್ಲಗಳೆದಿದ್ದಾರೆ. ಒಂದು ವೇಳೆ ಲೈಂಗಿಕ ಕಿರುಕುಳ‌ ನೀಡಿದ್ದೇನೆ...

ಪ್ರಿಯಕರನನ್ನೇ ಮದುವೆಯಾಗುವೆನೆಂದ ವಧು: ತಾಳಿ ಕಟ್ಟುವ ವೇಳೆ ಹೈಡ್ರಾಮಾ

newsics.com ಮೈಸೂರು: ಮದುವೆಯಲ್ಲಿ ತಾಳಿ ಕಟ್ಟುವ ವೇಳೆ ಮದುಮಗಳು ವರನಿಗೆ ಶಾಕ್ ಕೊಟ್ಟಿದ್ದು, ತಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ಮದುಮಗಳು ಸಿಂಚನ ತನ್ನ ಪಕ್ಕದ ಮನೆಯ ಯುವಕನನ್ನು ಪ್ರೀತಿಸಿದ್ದು, ಆದರೆ ಮನೆಯವರು ಎಚ್.ಡಿ.ಕೋಟೆ...
- Advertisement -
error: Content is protected !!