Saturday, January 23, 2021

ನಿಂತಲ್ಲಿ ನಿಲಲಾರದ ಚೇಕಡಿ ಹಕ್ಕಿಗಳು!

ನಿರಂತರ ಚಲನೆಯೇ ಈ ಹಕ್ಕಿಗಳ ವಿಶೇಷ. ಇದು ಚೇಕಡಿ ಹಕ್ಕಿ. ದಕ್ಷಿಣ ಏಷ್ಯಾದಲ್ಲಿ ಹದಿನೇಳಕ್ಕೂ ಹೆಚ್ಚು ಬಗೆಯ ಚೇಕಡಿಗಳಿವೆ. ಜಗತ್ತಿನಲ್ಲಿ 56 ಬಗೆಯ ಚೇಕಡಿಹಕ್ಕಿಗಳಿವೆ. ಕಪ್ಪು, ಬಿಳಪು ಹಾಗೂ ಹಳದಿ ಬಣ್ಣಗಳಲ್ಲಿ ಇವು ಸಾಮಾನ್ಯವಾಗಿ ಕಂಡುಬರುತ್ತವೆ. ಕೊಂಬೆಗಳ ನಡುವೆ ಸರ್ಕಸ್‍ ಮಾಡುವಂತೆ ಓಡಾಡುವುದಕ್ಕೆ ಪ್ರಸಿದ್ಧವಾದರೂ ಹಾಡಿಗೆ ಇನ್ನೂ ಹೆಚ್ಚು ಪ್ರಸಿದ್ಧ.

   ಪಕ್ಷಿನೋಟ 36   



♦ ಕಲ್ಗುಂಡಿ ನವೀನ್

ವನ್ಯಜೀವಿ ತಜ್ಞರು, ಅಂಕಣಕಾರರು
ಚಿತ್ರ: ಜಿ.ಎಸ್. ಶ್ರೀನಾಥ
newsics.com@gmail.com
ksn.bird@gmail.com


 ನ ಮ್ಮಲ್ಲಿ ಸಾಮಾನ್ಯವಾಗಿ ಕಂಡುಬರುವ ಹಕ್ಕಿಗಳಲ್ಲಿ ಚೇಕಡಿಹಕ್ಕಿಗಳೂ ಒಂದು (Tits). ಇವು ಒಂದೇ ಕಡೆ ನಿಲ್ಲದೆ ನಿರಂತರವಾಗಿ ಚಲಿಸುತ್ತಿರುತ್ತವೆ. ಅದು ಕೊಂಬೆಗಳ ನಡುವೆ ಇರಬಹುದು ಇಲ್ಲವೆ ಇದ್ದಕಡೆಯೇ ಆ ಕಡೆ ಈ ಕಡೆ ತಿರುಗುವುದಿರಬಹುದು. ಈ ಚಟುವಟಿಕೆ ಹಾಗೂ ಸರ್ಕಸ್ಸಿನಂತಹ ಚಲನೆ ಇವುಗಳ ವೈಶಿಷ್ಟ್ಯ.
ಇವುಗಳು ಅತ್ಯುತ್ತಮ ಹಾಡುಹಕ್ಕಿಗಳು ಸಹ. ತ್ರಿಕೋನಾಕಾರದ ಕೊಕ್ಕುಳ್ಳ ಇವುಗಳು ಸರ್ಕಸ್ಸಿನಂತಹ ಚಲನೆ ಮಾಡುವುದು ಉದರಂಭರಣಕ್ಕಾಗಿಯೇ! ಕೀಟಗಳು ಪ್ರಧಾನವಾದ ಆಹಾರವೇ ಆದರೂ ಬೀಜಗಳನ್ನು ತೆಗೆದುಕೊಳ್ಳುತ್ತವೆ.
17ಕ್ಕೂ ಹೆಚ್ಚು ಬಗೆ
ದಕ್ಷಿಣ ಏಷ್ಯಾದಲ್ಲಿ ಹದಿನೇಳಕ್ಕೂ ಹೆಚ್ಚು ಬಗೆಯ ಚೇಕಡಿಗಳಿವೆ. ಇಲ್ಲಿ ಇನ್ನೊಂದು ಸಹ ಇರಬಹುದು ಎಂಬ ಅನುಮಾನವನ್ನು ಪಕ್ಷಿತಜ್ಞೆ ಡಾ ಪಮೇಲಾ ರಾಸ್ಮೆಸನ್ ವ್ಯಕ್ತಪಡಿಸಿದ್ದಾರೆ. ಜಗತ್ತಿನಲ್ಲಿ 56 ಬಗೆಯ ಚೇಕಡಿಹಕ್ಕಿಗಳಿವೆ. ಇವುಗಳಲ್ಲಿ ಒಂದು ಪೂರ್ಣ ಮರವಾಸಿಯಾದರೆ ಕೆಲವು ನೆಲವನ್ನು ಇಷ್ಟಪಡುವುವೂ ಇವೆ. ಸಾಮಾನ್ಯವಾಗಿ ಗುಂಪಿನಲ್ಲಿ ಕಂಡುಬರುತ್ತವೆ (ಮರಿಮಾಡುವ ಕಾಲವನ್ನು ಹೊರತುಪಡಿಸಿ). ಮರದಲ್ಲಿನ ರಂದ್ರಗಳನ್ನು ಇವುಗಳು ಗೂಡಾಗಿ ಬಳಸುತ್ತವೆ. ಕೆಲವು ಪ್ರಭೇದಗಳು ಮರವನ್ನು ಕೊರೆದು ಗೂಡು ನಿರ್ಮಿಸುವುದೂ ಉಂಟು.
ಕಪ್ಪು, ಬಿಳಪು ಹಾಗೂ ಹಳದಿ ಬಣ್ಣಗಳಲ್ಲಿ ಇವು ಸಾಮಾನ್ಯವಾಗಿ ಕಂಡುಬರುತ್ತವೆ. ಅನೇಕ ಪ್ರಭೇದಗಳಿಗೆ ಚೊಟ್ಟಿ (crest) ಇರುತ್ತದೆ. ಇವು ಕೊಂಬೆಗಳ ನಡುವೆ ಸರ್ಕಸ್‍ ಮಾಡುವಂತೆ ಓಡಾಡುವುದಕ್ಕೆ ಪ್ರಸಿದ್ಧವಾದರೂ ಹಾಡಿಗೆ ಇನ್ನೂ ಹೆಚ್ಚು ಪ್ರಸಿದ್ಧ! ಇಂತಹ ಹಕ್ಕಿಯನ್ನು ನೀವು ಕಂಡರೆ ನಮಗೆ ಬರೆದು ತಿಳಿಸಿ.

ಮತ್ತಷ್ಟು ಸುದ್ದಿಗಳು

Latest News

ಲಂಡನ್ ನಲ್ಲಿ ಆಶ್ರಯ ಕೋರಿ ವಿಜಯ ಮಲ್ಯ ಅರ್ಜಿ

Newsics.com ಲಂಡನ್: ಭಾರತಕ್ಕೆ ಗಡೀಪಾರು ಭೀತಿ ಎದುರಿಸುತ್ತಿರುವ ದಿವಾಳಿ ಉದ್ಯಮಿ ವಿಜಯ ಮಲ್ಯ ಆಶ್ರಯ ಕೋರಿ ಬ್ರಿಟನ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಮಲ್ಯ ಪರ ವಕೀಲ ಫಿಲಿಪ್...

ತುಪ್ಪದ ಬೆಡಗಿ ರಾಗಿಣಿ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆ

Newsics.com ಬೆಂಗಳೂರು: ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಇಂದು ಪರಪ್ಪನ ಅಗ್ರಹಾರ ಜೈಲ್ಲಿನಿಂದ ಬಿಡುಗಡೆಯಾಗಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರತಿ ಅವರ ವಕೀಲರ ಕೈ ಸೇರಿದ್ದು, ಇಂದು ಎನ್ ಡಿ ಪಿಎಸ್  ನ್ಯಾಯಾಲಯದಲ್ಲಿ...

ಕೊರೋನಾ ಮಾರ್ಗ ಸೂಚಿ ಉಲ್ಲಂಘನೆ: ವಾಟಾಳ್ ವಿರುದ್ದ ಎಫ್ ಐ ಆರ್

Newsics.com ಬೆಂಗಳೂರು: ನಗರದಲ್ಲಿ ಕೊರೋನಾ ಮಾರ್ಗ ಸೂಚಿ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸದಿರುವ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಡಿಸೆಂಬರ್ 5, 2020ರಂದು ನಗರದ...
- Advertisement -
error: Content is protected !!