Tuesday, January 31, 2023

ಭೂಮಿ ತಲುಪಿದ ಸೌರವ್ಯೂಹದಿಂದಾಚೆಗಿನ ರೇಡಿಯೋ ಸಂದೇಶ!

Follow Us

ನಮ್ಮ ಭೂಮಿಗೆ ಇದೇ ಮೊದಲ ಬಾರಿ, ಸೌರವ್ಯೂಹದಿಂದಾಚೆಯ ರೇಡಿಯೋ ಸಿಗ್ನಲ್‌ಗಳು ಬಂದಿವೆ! ಇದು ನಮ್ಮ ಸೌರವ್ಯೂಹದಿಂದಾಚೆ ಇದ್ದಿರಬಹುದಾದ ಮತ್ತೊಂದು ಜೀವ ಪ್ರಪಂಚ ಅಥವಾ ಏಲಿಯನ್ಸ್ ಗಳ ಅಸ್ತಿತ್ವದ ಕುರಿತು ಮತ್ತೊಮ್ಮೆ ಚರ್ಚಿಸುವಂತೆ ಮಾಡಿದೆ.

* ಇದ್ದಿರಬಹುದೇ ಮತ್ತೊಂದು ಜೀವಪ್ರಪಂಚ?

– ಸುಮನಸ
newsics.com@gmail.com

ಬಾಹ್ಯಾಕಾಶ, ಬ್ರಹ್ಮಾಂಡ, ಅಲ್ಲಿ ಇದ್ದಿರಬಹುದಾದ ಜೀವಿಗಳು ಅರ್ಥಾತ್ ಏಲಿಯನ್ಸ್ ಇವುಗಳ ಬಗ್ಗೆ ಕುತೂಹಲ ಹೊಂದಿರುವವರಿಗೊಂದು ಮೈನವಿರೇಳಿಸುವ ಸುದ್ದಿ ಹೊರಬಿದ್ದಿದೆ. ಅದೆಂದರೆ, ನಮ್ಮ ಇದೇ ಮೊದಲ ಬಾರಿಗೆ, ಸೌರವ್ಯೂಹದಿಂದಾಚೆಯಿಂದ ರೇಡಿಯೋ ಸಿಗ್ನಲ್‌ಗಳು ಭೂಮಿಯನ್ನು ತಲುಪಿವೆ.
ವಿಶ್ವದ ಅತ್ಯಂತ ಶಕ್ತಿಶಾಲಿ ಆಂಟೆನಾ ಎನಿಸಿಕೊಂಡಿರುವ ಡಚ್ ಲೋ ಫ್ರೀಕ್ವೆನ್ಸಿ ಅರೆ (ಎಲ್ ಒಎಫ್ ಎಆರ್) ಈ ಸಂದೇಶಗಳನ್ನು ಪಡೆದುಕೊಂಡಿದೆ. ಅಲ್ಲಿನ ವಿಜ್ಞಾನಿಗಳ ಪ್ರಕಾರ, ಸೌರವ್ಯೂಹದಾಚೆಗಿನ ನಕ್ಷತ್ರಗಳಿಂದ ರೇಡಿಯೋ ಸಿಗ್ನಲ್ ಗಳು ಬರುತ್ತಿದ್ದು, ತಮ್ಮ ಸುತ್ತಲಿನ ಗ್ರಹಗಳ ಅಸ್ತಿತ್ವದ ಕುರಿತ ಹುಡುಕಾಟದಲ್ಲಿವೆ!
ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯದ ಡಾ.ಬೆಂಜಮಿನ್ ಪೋಪ್ ಮತ್ತು ಅವರ ಸಹೋದ್ಯೋಗಿಗಳು ಡಚ್ ರಾಷ್ಟ್ರೀಯ ವೀಕ್ಷಣಾಲಯ ಆಸ್ಟ್ರಾನ್‌ನಲ್ಲಿ ಈ ರೇಡಿಯೋ ಸಂದೇಶಗಳನ್ನು ಗುರುತಿಸಿದ್ದಾರೆ. ವರದಿ ಪ್ರಕಾರ, 19 ಬಹುದೂರದ ಕುಬ್ಜ ನಕ್ಷತ್ರಗಳಿಂದ ಸಿಗ್ನಲ್ ಗಳು ಬಂದಿವೆ. ಇವುಗಳಲ್ಲಿ ನಾಲ್ಕು ಸಂದೇಶಗಳು ಆ ಕುಬ್ಜಗಳ ಸುತ್ತ ಇರುವ ಗ್ರಹಗಳ ಕುರಿತು ತಿಳಿಯಪಡಿಸುತ್ತವೆ. ಇದೀಗ, ಖಗೋಳ ಶಾಸ್ತ್ರಜ್ಞರು ಡಚ್ ಲೋ ಫ್ರೀಕ್ವೆನ್ಸಿ ಅರೆ (ಎಲ್‌ಒಎಫ್ ಎಆರ್) ಮೂಲಕ ಈ ಗ್ರಹಗಳ ತಲಾಶಿಗೆ ತೊಡಗಿದ್ದಾರೆ.
ಸೌರ ಮಾರುತಗಳೊಂದಿಗೆ ಸಂವಾದ!
“ನಮ್ಮದೇ ಸೌರವ್ಯೂಹದೊಳಗೆ ಇರುವ ಹಲವಾರು ಗ್ರಹಗಳು ಶಕ್ತಿಶಾಲಿ ರೇಡಿಯೋ ಅಲೆಗಳನ್ನು ಹೊರಹೊಮ್ಮಿಸುತ್ತವೆ ಎನ್ನುವುದು ಬಹಳ ಹಿಂದೆಯೇ ತಿಳಿದುಬಂದಿದೆ. ಸೌರಮಾರುತಗಳು ಹಾಗೂ ಗ್ರಹಗಳ ಆಯಸ್ಕಾಂತೀಯ ವಲಯಗಳು ಪರಸ್ಪರ ಪ್ರಭಾವ ಹೊಂದಿರುತ್ತವೆ, ಸಂವಾದಿಸುತ್ತವೆ. ಈ ಮೂಲಕ ರೇಡಿಯೋ ಅಲೆಗಳು ಹೊಮ್ಮುತ್ತವೆ. ಆದರೆ, ಸೌರವ್ಯೂಹದಾಚೆಗಿನ ಗ್ರಹಗಳಿಂದ ಬರುವ ರೇಡಿಯೋ ಸಂದೇಶಗಳನ್ನು ಹಿಡಿದುಕೊಳ್ಳಬೇಕಿದೆ’ ಎಂದು ಈ ತಂಡದ ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ.
ಈ ವಿಜ್ಞಾನಿಗಳು ರೇಡಿಯೋ ಖಗೋಳ ಶಾಸ್ತ್ರದಲ್ಲಿ ವಿನೂತನ ತಂತ್ರಜ್ಞಾನದ ಮಹತ್ವ ಹೆಚ್ಚಿದ್ದು, ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿದೆ. ಇದೇ ಕಾರಣದಿಂದ ಬ್ರಹ್ಮಾಂಡದಲ್ಲಿರುವ ಅಸಂಖ್ಯಾತ ಗ್ರಹಗಳ ಅನ್ವೇಷಣೆ ಸಾಧ್ಯವಾಗಬಲ್ಲದು ಎನ್ನುತ್ತಾರೆ.
‘ನೇಚರ್ ಆಸ್ಟ್ರಾನಮಿ’ ನಿಯತಕಾಲಿಕದಲ್ಲಿ ಈ ಕುರಿತ ವರದಿ ಪ್ರಕಟವಾಗಿದ್ದು, ವಿಶ್ವಾದ್ಯಂತ ಖಗೋಳ ಶಾಸ್ತ್ರಪ್ರಿಯರ ಮೈನವಿರೇಳಿಸಿದೆ. ಸಂಶೋಧನಾ ತಂಡದ ಪ್ರಕಾರ, ಈ ರೇಡಿಯೋ ಸಂದೇಶಗಳು ಗೋಚರವಾಗದ ನಕ್ಷತ್ರಗಳು ಮತ್ತು ಪರಿಭ್ರಮಿಸುತ್ತಿರುವ ಗ್ರಹಗಳ ಆಯಸ್ಕಾಂತೀಯ ಸಂಪರ್ಕದಿಂದ ಬರುತ್ತಿವೆ. ಉದಾಹರಣೆಗೆ, ಗುರು ಗ್ರಹ ಹಾಗೂ ಅದರ ಚಂದ್ರನ ನಡುವೆ ನಡುವೆ ನಡೆಯುವ ಸಂವಾದೀಯ ತರಂಗಗಳ ಮಾದರಿಯಲ್ಲಿ ಈ ಸಂದೇಶ ದೊರೆತಿದೆ.
ಭೂಮಿಯಿಂದಲೂ ರೇಡಿಯೋ ಅಲೆ
ಈ ಸಂಶೋಧನೆಯ ಮುಖ್ಯ ಲೇಖಕ ಡಾ.ಜೋಸೆಫ್ ಕಾಲಿಂಗ್ ಹ್ಯಾಮ್ ಅವರು ‘ನಮ್ಮ ಭೂಮಿಯ ಸುತ್ತ ಒಂದು ಪ್ರಭಾವಳಿಯಿದೆ. ಇದನ್ನು ಉತ್ತರ ಹಾಗೂ ದಕ್ಷಿಣದ ಭಾಗದ ಬೆಳಕು ಎಂದು ಸಾಮಾನ್ಯವಾಗಿ ಗುರುತಿಸಲಾಗಿದೆ. ಭೂ ಗ್ರಹದ ಆಯಸ್ಕಾಂತೀಯ ವಲಯ ಮತ್ತು ಸೌರಮಾರುತಗಳು ಪರಸ್ಪರ ಪ್ರಭಾವ ಹೊಂದಿದಾಗ ಭೂಮಿ ಅತ್ಯಂತ ತೀಕ್ಷ್ಣವಾದ ರೇಡಿಯೋ ಅಲೆಗಳನ್ನು ಹೊರಸೂಸುತ್ತದೆ. ಅದೇ ರೀತಿ, ಬೇರೆ ಗ್ರಹಗಳಲ್ಲೂ ಈ ವಿದ್ಯಮಾನ ಜರುಗುತ್ತದೆ’ ಎಂದು ಹೇಳಿದ್ದಾರೆ.
ಈ ಹಿಂದೆ, ಖಗೋಳ ಶಾಸ್ತ್ರಜ್ಞರು ಸಮೀಪದಲ್ಲಿರುವ ಗ್ರಹಗಳನ್ನಷ್ಟೇ ಗುರುತಿಸಿದ್ದರು. ಕಪ್ಪು ರಂಧ್ರ ಹಾಗೂ ಅಂತರತಾರಾ ಅನಿಲ ವಲಯದ ಸ್ಥಿರವಾದ ರೇಡಿಯೋ ಹೊರಸೂಸುವಿಕೆಯನ್ನು ಪತ್ತೆ ಮಾಡಿದ್ದರು. ಆದರೆ, ಇತ್ತೀಚಿನ ರೇಡಿಯೋ ಖಗೋಳ ಶಾಸ್ತ್ರಜ್ಞರು ಹಳೆಯ ನಕ್ಷತ್ರಗಳನ್ನೂ ಗುರುತಿದ್ದಾರೆ. ಸೂರ್ಯನಿಗಿಂತ ಅತಿ ಚಿಕ್ಕದ ಗಾತ್ರದ ಕಂಪು ಕುಬ್ಜ ನಕ್ಷತ್ರಗಳನ್ನೂ ಪತ್ತೆ ಮಾಡಿದ್ದಾರೆ. ಇವು ಅತ್ಯಂತ ತೀವ್ರವಾದ ಆಯಸ್ಕಾಂತೀಯ ಚಟುವಟಿಕೆ ಹೊಂದಿದ್ದು, ಇದರಿಂದಲೇ ಅವು ತೀವ್ರವಾಗಿ ಉರಿಯುತ್ತವೆ ಹಾಗೂ ರೇಡಿಯೋ ಅಲೆಗಳನ್ನು ಹೊರಸೂಸುತ್ತವೆ. ಇದಕ್ಕೆ ನೂತನ ತಂತ್ರಜ್ಞಾನವೇ ಕಾರಣವಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಸಹಾಯಕ ಪ್ರಾಧ್ಯಾಪಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

newsics.com ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ. 26 ವಿಷಯಗಳ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು...

ಇದೇ ಏ. 1ರಿಂದ 15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ಸರ್ಕಾರಿ ವಾಹನ ಗುಜರಿಗೆ: ಗಡ್ಕರಿ

newsics.com ನವದೆಹಲಿ: 15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ಸರ್ಕಾರಿ ವಾಹನಗಳು ಇದೇ ಏ. 1ರಿಂದ ರಸ್ತೆಯಿಂದ ಗುಜರಿಗೆ ಹೋಗಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. ಎಫ್‌ಐಸಿಸಿಐ ಆಯೋಜಿಸಿದ್ದ...

ತುಳುವಿಗೆ ರಾಜ್ಯ ಭಾಷೆ ಸ್ಥಾನ: ಆಳ್ವ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ ಸರ್ಕಾರ

newsics.com ಮಂಗಳೂರು: ತುಳು ಭಾಷೆಗೆ ಕರ್ನಾಟಕದ 2ನೇ ಅಧಿಕೃತ ರಾಜ್ಯ ಭಾಷೆ ಸ್ಥಾನಮಾನ ನೀಡಬೇಕೆಂದು ಮೋಹನ್ ಆಳ್ವ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚನೆ ಮಾಡಲಾಗಿದ್ದು, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸರ್ಕಾರ...
- Advertisement -
error: Content is protected !!