Wednesday, November 30, 2022

ಸ್ವತಂತ್ರ ಭಾರತದ ಮೊದಲ‌ ಕ್ರೀಡಾ ಸೂಪರ್‌ ಸ್ಟಾರ್

Follow Us

‘ಫ್ಲೈಯಿಂಗ್ ಸಿಖ್‌’ ಮಿಲ್ಖಾ ಸಿಂಗ್‌

ಸ್ವತಂತ್ರ ಭಾರತದ ಮೊದಲ ಕ್ರೀಡಾ ಸೂಪರ್‌ ಸ್ಟಾರ್‌ ಮಿಲ್ಖಾ ಸಿಂಗ್. ಫ್ಲೈಯಿಂಗ್ ಸಿಖ್‌ ಎಂದೇ ಖ್ಯಾತರಾಗಿದ್ದ ಮಿಲ್ಖಾ ಸಾಧನೆ ಇಂದಿಗೂ ಅಪ್ರತಿಮ. ಹೆಚ್ಚಿನ ಸೌಲಭ್ಯಗಳು ಇರದ ಸಮಯದಲ್ಲೂ ಸ್ವಸಾಮರ್ಥ್ಯದಿಂದ ಅವರು ಮಾಡಿದ್ದ ಸಾಧನೆ ಕಿರಿಯರಿಗೆ ಪ್ರೇರಣೆ.

ನುಡಿನಮನ

– ವಿಧಾತ್ರಿ
newsics.com@gmail.com

1960… ಸಂಪರ್ಕದ ಕೊರತೆ ಅಗಾಧವಾಗಿದ್ದ ಸಮಯ. ಪತ್ರಿಕೆಗಳೂ ಕೆಲವು ಪ್ರಮುಖ ನಗರ, ಪಟ್ಟಣಗಳಿಗೆ ಸೀಮಿತವಾಗಿದ್ದ ಕಾಲ. ಅದಕ್ಕೂ ಕೆಲವೇ ಓದುಗರು. ಸುದ್ದಿ ಸಂಗ್ರಹವೂ ಅಪಾರ ಕಷ್ಟದ್ದಾಗಿದ್ದ ಆ ಸಮಯದಲ್ಲಿ ರೋಮ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಮಿಂಚಿನ ಓಟಗಾರ 0.1 ಸೆಕೆಂಡ್‌’ಗಳಲ್ಲಿ ಕಂಚಿನ ಪದಕ ಕೈತಪ್ಪಿಸಿಕೊಂಡಿದ್ದೇ ಪ್ರಮುಖ ಸುದ್ದಿ. ಆ ಯುವ ಓಟಗಾರ ಮಿಲ್ಖಾ ಸಿಂಗ್.

ಕ್ರೀಡಾ ಸಂಸ್ಕೃತಿಯೇ ಇಲ್ಲದ ಸಮಯದಲ್ಲಿ ಸ್ವತಂತ್ರ ಭಾರತದ ಮೊದಲ ಸೂಪರ್‌ ಸ್ಟಾರ್‌ ಆಗಿ ಕ್ರೀಡಾಸಕ್ತರನ್ನು ಬಡಿದೆಬ್ಬಿಸಿದ ಖ್ಯಾತಿ ಮಿಲ್ಖಾ ಸಿಂಗ್‌ ಅವರದ್ದು. ಅಥ್ಲೆಟಿಕ್ಸ್‌ ನಲ್ಲಿ ಭಾರತ ಎಂದಿನಿಂದಲೂ ಹಿಂದುಳಿದಿರುವ ದೇಶ. ಅದರಲ್ಲೂ, ಆ ಸಮಯದಲ್ಲೇ ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದರು ‘ಹಾರುವ ಸಿಖ್‌ʼ ಎಂದೇ ಖ್ಯಾತಿ ಪಡೆದಿದ್ದ ಮಿಲ್ಖಾ ಸಿಂಗ್.

ಭಾರತದ ಸೇನೆಯಿಂದ ಸ್ಪರ್ಧಿಸುತ್ತಿದ್ದ ಮಿಲ್ಖಾ ಸಿಂಗ್‌ ಹುಟ್ಟೂರು ಪಾಕಿಸ್ತಾನದ ಮುಲ್ತಾನ್. ದೇಶ ವಿಭಜನೆಯಾದಾಗ ಟ್ರಕ್‌ ನಲ್ಲಿ ಇವರ ಕುಟುಂಬ ಬಂದಿಳಿದಿತ್ತು. ಕೆಲ ಸಮಯದ ನಂತರ ಫಿರೋಜ್‌ ಪುರದಲ್ಲಿ ನೆಲೆ ಕಂಡುಕೊಂಡಿತ್ತು. ಆರಂಭದಲ್ಲಿ ಕುಟುಂಬದಲ್ಲಿ ಇನ್ನಿಲ್ಲದ ಬಡತನ. ಹೊಟ್ಟೆಪಾಡಿಗೆ ರೇಷನ್‌ ಕದಿಯುತ್ತಿದ್ದರು ಮಿಲ್ಖಾ.

ಸೇನೆ ಸೇರಬೇಕೆಂಬ ಬಯಕೆಯಿಂದ ಎರಡು ಬಾರಿ ಪ್ರಯತ್ನಿಸಿದ್ದರು. ಮೂರನೇ ಬಾರಿಗೆ ಸಿಕಂದರಾಬಾದ್‌ ನಲ್ಲಿ ಆಯ್ಕೆಯಾದರು. ಮೆಲ್ಬೋರ್ನ್‌ ಒಲಿಂಪಿಕ್‌ ನಲ್ಲಿ ಪಾಲ್ಗೊಂಡು ಜಯ ಗಳಿಸಬೇಕೆಂಬ ಅವರ ಆಸೆ ಈಡೇರಲಿಲ್ಲ. ಆ ಬಳಿಕ ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸುವತ್ತ ಆದ್ಯತೆ ನೀಡಿದರು.

1958ರ ಕಾರ್ಡಿಫ್‌ ಕಾಮನ್‌ ವೆಲ್ತ್‌ ಕ್ರೀಡಾಕೂಟದಲ್ಲಿ 440 ಯಾರ್ಡ್ಸ್‌ ಓಟದಲ್ಲಿ ದಾಖಲೆ ನಿರ್ಮಿಸಿದರು. ದಕ್ಷಿಣ ಆಫ್ರಿಕಾದ ಮಾಲ್ಕಮ್‌ ಸ್ಪೆನ್ಸ್‌ ಅವರ ದಾಖಲೆ ಮುರಿದು, 46.6 ಸೆಕೆಂಡ್‌ ಗಳಲ್ಲಿ 400 ಮೀಟರ್‌ ಓಡಿ ದಾಖಲೆ ಸ್ಥಾಪಿಸಿದರು. ಟೋಕಿಯೋ ಏಷ್ಯಾಡ್‌, ಜಕಾರ್ತ ಏಷ್ಯಾಡ್‌ ಗಳ 400 ಮೀಟರ್‌ ರಿಲೇ ಪಂದ್ಯಗಳಲ್ಲಿ ಚಿನ್ನ ಗಳಿಸಿಕೊಟ್ಟರು. ನಾಲ್ಕು ಏಷ್ಯಾಡ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿದರು. ಏಷ್ಯಾದ ಅತ್ಯುತ್ಕೃಷ್ಟ ಅಥ್ಲೆಟಿಕ್‌ ಕ್ರೀಡಾಪಟುವಾಗಿ ದೇಶದಲ್ಲಿ ಕ್ರೀಡಾ ಸಂಸ್ಕೃತಿಗೆ ಅಡಿಗಲ್ಲು ಹಾಕಿದರು.

ರೋಮ್‌ ಒಲಿಂಪಿಕ್‌ ನ ಇನ್ನೂರು ಮೀಟರ್‌ ಓಟವನ್ನು 45.73 ಸೆಕೆಂಡುಗಳಲ್ಲಿ ಓಡಿದ್ದುದು ಸುಮಾರು ನಲವತ್ತು ವರ್ಷಗಳ ಕಾಲ ಭಾರತದ ರಾಷ್ಟ್ರೀಯ ದಾಖಲೆಯಾಗಿತ್ತು.

ಮಿಲ್ಖಾ ಸಿಂಗ್‌ ಜೀವನಗಾಥೆಯನ್ನು ಆಧರಿಸಿ 2013ರಲ್ಲಿ ‘ಭಾಗ್‌ ಮಿಲ್ಖಾ ಭಾಗ್‌ʼ ಎನ್ನುವ ಸಿನಿಮಾ ತೆರೆ ಕಂಡಿದೆ.

ಹಾರುವ ಸಿಖ್
ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಬಳಿಕ ಎಂದಿಗೂ ಅಲ್ಲಿಗೆ ಹೋಗಿರದಿದ್ದ ಮಿಲ್ಖಾ ಸಿಂಗ್‌ ಲಾಹೋರ್‌ ನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಅಲ್ಲಿನ ಸೂಪರ್‌ ಸ್ಟಾರ್‌ ಅಬ್ದುಲ್‌ ಖಾಲಿಕ್‌ ಅವರನ್ನು ಹಿಂದಿಕ್ಕಿದರು. ಆಗ ಪಾಕಿಸ್ತಾನದ ಅಧ್ಯಕ್ಷ ಜನರಲ್‌ ಅಯ್ಯುಬ್‌ ಖಾನ್‌ ನೀಡಿದ ಬಿರುದು ‘ಫ್ಲೈಯಿಂಗ್‌ ಸಿಖ್‌ʼ.

ಮಿಲ್ಖಾ ಸಿಂಗ್‌ ಗಳಿಸಿದ ಪದಕಗಳು, ಮಾಡಿದ ಸಾಧನೆಗಳು ಅಪ್ರತಿಮ. ಅವರ ಹಾದಿ ಕಿರಿಯರಿಗೆ ಸದಾ ಪ್ರೇರಣೆ ನೀಡುವಂಥದ್ದು.

ಮಿಲ್ಖಾ ಸಿಂಗ್ ಸ್ಮರಣೆ: ಕಪ್ಪು‌ ಪಟ್ಟಿ ತೊಟ್ಟ ಭಾರತ ತಂಡ

https://newsics.com/news/latest/eteran-athleet-milkha-singh-passed-away/73687/

ಮತ್ತಷ್ಟು ಸುದ್ದಿಗಳು

vertical

Latest News

KSRTC ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ  ಬಹುಮಾನ ಗೆಲ್ಲ  ಬಹುದಾಗಿದೆ. ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ...

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ...

20ಕ್ಕೂ ಹೆಚ್ಚು ಯುವತಿಯರ ಜತೆ ಅಪ್ತಾಭ್ ಸಂಬಂಧ?

newsics.com ನವದೆಹಲಿ:  ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಪ್ತಾಭ್ 20ಕ್ಕೂ ಹೆಚ್ಚು ಯುವತಿಯರ ಜತೆ ಸಂಬಂಧ ಹೊಂದಿರುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪೊಲೀಸ್ ತನಿಖೆಯಲ್ಲಿ ಈ ಅಂಶ ಬಯಲಾಗಿದೆ. ಕೇವಲ...
- Advertisement -
error: Content is protected !!