Tuesday, May 24, 2022

ಗಾನಲೋಕದ ಗಾನ ಗಾರುಡಿಗ…

Follow Us

ಭಾರತದ ನಾಲ್ಕು ಭಾಷೆಗಳ ಹಾಡುಗಳಿಗೆ ರಾಷ್ಟ್ರೀಯ ಪುರಸ್ಕಾರ ಪಡೆದಿರುವ ಏಕೈಕ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ (ಡಾ.ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಮ್). ಪ್ರಪಂಚದ ಯಾವುದೇ ಗಾಯಕ ಹಾಡಿರದಷ್ಟು ಹಾಡುಗಳನ್ನು ಹಾಡಿರುವ ಕಲಾವಿದ ಎಸ್.ಪಿ.ಬಿ. ಹುಟ್ಟಿದ್ದು ಆಂಧ್ರವಾದರೂ ಕನ್ನಡದ ಮನೆಮಗ ಎನ್ನುವಷ್ಟು ಕನ್ನಡಿಗರಿಗೆ ಆಪ್ತರಾದವರು. 8 ಫೆಬ್ರವರಿ 1981ರಂದು ಉಪೇಂದ್ರಕುಮಾರ್ ಸಂಯೋಜನೆಯಲ್ಲಿ ಒಂದೇ ದಿನ 21 ಹಾಡುಗಳ ಧ್ವನಿ ಮುದ್ರಣ, ಇನ್ನೊಂದು ದಿನ 16, ಮತ್ತೊಂದು ದಿನ ಆಗಿನ ಮದ್ರಾಸ್’ನಲ್ಲಿ 19 ಗೀತೆಗಳನ್ನು ಹಾಡಿದ್ದ ಸಾಹಸಿಗ, ಸೃಜನಶೀಲ ಮತ್ತು ನಿತ್ಯಾಹ್ಲಾದಿತ, ಸರಸ್ವತೀ ಸಂಪನ್ನ ಎಸ್.ಪಿ.ಬಿ.


     ಅಕ್ಷರ ನಮನ     

ಡಾ.ಶ್ರೀನಿವಾಸ ಪ್ರಸಾದ್ ಡಿ.ಎಸ್. ಕೋಲಾರ
newsics.com@gmail.com

“ಕಾ ಣದ ಊರಲಿ ನೀ ಕುಳಿತಿರುವೆ, ಚೆಲುವೆಯ ಅಂದದ ಮೊಗಕೆ.. ನೀ ಇರಲು ಜೊತೆಯಲ್ಲಿ, ಕೇಳದೆ ನಿಮಗೀಗ, ಆಸೆಯ ಭಾವ, ನೀರ ಬಿಟ್ಟು ನೆಲದ ಮೇಲೆ.. ಎಲ್ಲಾರ್ನ್ ಕಾಯೋ ದ್ಯಾವ್ರೇ.. ಕೋಳಿಗೆ ಹಲ್ಲಿಲ್ಲ,ಸ್ನೇಹದ ಕಡಲಲ್ಲಿ, ಚೆಲುವಾ ಪ್ರತಿಮೆ ನೀನು,ಎಲ್ಲಿರುವೆ ಮನವ ಕಾಡುವ ರೂಪಸಿಯೇ, ಇದೇ ನಾಡು, ಇದೇ ಭಾಷೆ, ಈ ದೇಶ ಚೆನ್ನ, ನಲಿವಾ ಗುಲಾಬಿ ಹೂವೇ, ಇಂಥ ಆಪಾತಮಧುರ ಹಾಡುಗಳ ಯಜಮಾನ ಡಾ.ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಮ್.
15ಕ್ಕೂ ಅಧಿಕ ಭಾಷೆಗಳಲ್ಲಿ ಕೊರಳ ಇಂಚರವನ್ನುಣಬಡಿಸಿ 53 ವರ್ಷಗಳಿಂದ ಸಿನಿರಸಿಕರಿಗೆ ಭಾವರಸಧಾರೆಯನ್ನೇ ಈ ಪುರುಷ ಸರಸ್ವತಿ ಇಂದಿಗೂ ನೀಡುತ್ತಿದ್ದಾರೆ. ಆಯಿರಂ ನಿಲವೇವ, ವಂದನಂ ಅಭಿವಂದನಂ, ಆಗದು ಆಗದು, ಪುಣ್ಯಭೂಮಿ ನಾ ದೇಶಂ, ಈ ಪೇಟಕುನೇನೇ ಮೇಸ್ತ್ರೀ, ಇದಿ ತೊಲಿ ರಾತ್ರಿ ಎಂದು ತೆಲುಗು, ತಮಿಳಿನಲ್ಲಿ ಉಲಿದು ಒಲಿದ ಕೋಗಿಲೆ ಹಿಂದಿಯಲ್ಲಿ ಸಹ ಓ ಮಾರಿಯಾ, ತೇರೇ ಮೇರೇ ಬೀಚ್ ಮೆ, ಪೆಹಲಾ ಪೆಹಲಾ ಪ್ಯಾರ್ ಹೆ, ಮೇರೆ ರಂಗ್ ಮೆ, ತುಮ್ಸೆ ಮಿಲ್ನೆ ಕಿ ತಮನ್ನಾ ಹೆ… ಹೀಗೆ ಭಾರತೀಯ ಸಿನಿ ಲೋಕದ ಅತ್ಯಧಿಕ ಗೀತೆಗಳನ್ನು ಹಾಡಿರುವ ಪುರುಷ ಗಾಯಕರು. ಸಂಖ್ಯೆ ಇಲ್ಲಿ ನಗಣ್ಯ, ಆದರೆ ಎಸ್.ಪಿ. ಅವರ ಗಾನ ಸುಭಗತೆಗೆ ಸರಿಸಾಟಿ ಎಸ್.ಪಿ ಅವರು ಮಾತ್ರ.
ಗೆಲ್ಲಿಸಿದ ರಾಗಮು ಅನುರಾಗಮು…
1946ರ ಜೂನ್ 4ರಂದು ಆಂಧ್ರದ ನೆಲ್ಲೂರಿನ ಕೊನಟಂ ಪೇಟೆಯಲ್ಲಿ ಹುಟ್ಪಿದ ಸಾಂಭಮೂರ್ತಿಗಳ ಮಗ ಹದಿವಯಸ್ಸಿನಲ್ಲೇ ಘಂಟಸಾಲ, ಕೋದಂಡಪಾಣಿ ಅವರಂಥ ದಿಗ್ಗಜರೆದುರು ಸಂಗೀತ ಸ್ಪರ್ಧೆಯೊಂದರಲ್ಲಿ ರಾಗಮು ಅನುರಾಗಮು..ಎಂಬ ಗೀತೆ ಬರೆದು, ರಾಗ ಸಂಯೋಜಿಸಿ ವಿಜೇತರಾದವರು.
ಇಂಜಿನಿಯರಿಂಗ್ ದಾರಿ ಹಿಡಿಯಬೇಕಾಗಿದ್ದ ಹುಡುಗ ತಾಂತ್ರಿಕ ಲೋಕವನ್ನು ಬಿಟ್ಟು, ಮುಂದೆ, ತಮ್ಮ ಗಾಯನ ಜಗದಲ್ಲಿ ವಿರಾಜಮಾನರಾಗಿ ಇಂದಿಗೂ ತಮ್ಮ 75ರ ವಯೋಮಾನದಲ್ಲೂ ಸುಶ್ರಾವ್ಯ ಕಂಠಸಿರಿಯ ನುಡಿ ಮಾಲಿಕನಾಗಿಯೇ ಉಳಿದಿರುವುದು ಗಟ್ಟಿ ಪರಿಶ್ರಮದ ದ್ಯೋತಕ.
ಸಂಗೀತ ಕಲಿಯದಿದ್ದರೂ…
‘ನಾನು ಸಂಗೀತ ಕಲಿತವನಲ್ಲ’ ಎನ್ನುವ ಎಸ್.ಪಿ ಅವರು ಹಾಡಿರುವ ಮಧ್ಯಮಾವತಿ ರಾಗದ ಶಂಕರಾ ನಾದಶರೀರಾ ಪರಾ, (ನಮ್ಮೂರ ಮಂದಾರ ಹೂವೇ ಹಾಡೂ ಮಧ್ಯಮಾವತಿಯೇ ಆಗಿದೆ.) ಸಾಗರ ಸಂಗಮಂನ ಷಣ್ಮುಖ ಪ್ರಿಯ ರಾಗದ ತಕಿಟತಧಿಮಿ ತಕಿಟ ತಧಿಮಿ ತಂದಾನ, ಬಾ ಬಾ ಬಾ ರಾಗವಾಗಿ ಹಾಡಿನ ರಾಗಮಾಲಿಕೆ, ನೀನು ನೀನೇ ಇಲ್ಲಿ ನಾನು ನಾನೇ, ಹಾಡಿನ ಹಿಂದೋಳ ರಾಗಾರಂಭ ಮತ್ತೆ ರಾಗ ಮಾಲಿಕೆ, ಮರಳಿ ಹಿಂದೋಳಕ್ಕೆ ತಿರುಗುವ ಗೀತೆ, ಇಳೆಯರಾಜ ಅವರ ಸಂಯೋಜನೆಯ ಎಸ್.ಪಿ ಅವರ ಉಸಿರು ರಹಿತ ಗೀತೆ ಕೇಳಡಿ ಕಣ್ಮಣಿಯ ಕೀರವಾಣಿ ರಾಗದ ಮಣ್ಣಿಲ್ ಎಂದ ಕಾದಲ್, ನಲಿವಾ ಗುಲಾಬಿ ಹೂವೇ, ಶಿಲೆಗಳು ಸಂಗೀತವ, ಬಾ ನನ್ನ ಸಂಗೀತ,ಎಲ್ಲವೂ ಶಿವರಂಜಿನಿ ರಾಗಾಧಾರಿತ ಗೀತೆಗಳೇ ಆಗಿವೆ. ಕಲಾವತಿ ರಾಗದ ಯಾವ ಕಾಣಿಕೆ ನೀಡಲಿ ನಿನಗೆ, ರೇವತಿ ರಾಗದ ನೀನೇ ಸಾಕಿದಾ ಗಿಣಿ, ಹಿಂದಿಯ ಸಾಜನ್ ಚಿತ್ರದ ದೇಖಾ ಹೆ ಪೆಹಲಿ ಬಾರ್ ಹಾಡಿನ ದರ್ಬಾರಿ ಕಾನಡ ರಾಗದ ಝಲಕ್, ಇವೆಲ್ಲ ರಾಗಸಿರಿಯ ಮಾಧುರ್ಯ ಸಿಂಚನದ ಗೀತೆಗಳು. ತಿಲಂಗ್ ರಾಗದ ಎಸ್ಪಿ- ಕನ್ನಡ ಜನತೆಯ ನಿಡುಗಾಲದ ಸಂಬಂಧಕ್ಕೆ ಅನ್ವರ್ಥವಾಗಿರುವ ಮಾಮರವೆಲ್ಲೋ, ಕೋಗಿಲೆಯೆಲ್ಲೋ, ಕರ್ನಾಟಕದ ಇತಿಹಾಸದಲಿ.. ಈ ಗೀತೆಯ ಅಭೇರಿ/ ಭೀಂಪಲಾಸ್ ರಾಗದ ಗಾನ ವಿಭವಕ್ಕೆ ಸರಿಸಮಾನವಾದ ಇನ್ನೊಂದು ಕಂಠ ಅಸಾಧ್ಯ.
ಕನ್ನಡಿಗರೇ ನಾಚುವಂತೆ ಹಾಡಿದ್ದರು…
ಮೂಲ ಕನ್ನಡದ ಗಾಯಕರಿಗೇ ಸಂಕೀರ್ಣವಾಗುವ ತರಿಕೇರಿ ಏರಿ ಮೇಲೆ, ಕೋಳಿಗೆ ಹಲ್ಲಿಲ್ಲ, ತಾಳಿ ಕಟ್ಟುವ ಶುಭವೇಳೆ, ಮಾಮ ಮಾಮ ಮಸ್ತಿ, ಸುಂದರಿ ಸುಂದರಿ ಸುರಸುಂದರಿ, ಹೊಡಿತಾವ್ಳೆ ಬಡಿತಾವ್ಳೆ ನನ್ ಎಂಡ್ತಿ… ಎಸ್.ಪಿ ಅವರನ್ನು ಬಿಟ್ಟು ಯಾರಿಂದಲೂ ಹಾಡಲಾಗದು.
ಕನ್ನಡದಲ್ಲಿ 1967ರಲ್ಲಿ ತೆರೆಕಂಡ ನಕ್ಕರೆ ಅದೇ ಸ್ವರ್ಗ ನರಸಿಂಹರಾಜು ಅವರ 100ನೇ ಚಿತ್ರ, ಎಸ್.ಪಿ. ಮತ್ತು ಎಂ.ರಂಗರಾವ್ ಅವರಿಗೆ ಇದು ಕನ್ನಡದಲ್ಲಿ ಮೊದಲ ಚಿತ್ರ, ಈ ಚಿತ್ರದ ವಿಜಯನಾರಸಿಂಹರ ಕನಸಿದೋ, ನನಸಿದೋ ಎಂಬ ಯುಗಳ ಗೀತೆ ಎಸ್ಪಿ ಅವರ ಪ್ರಥಮ ಗೀತೆ. ಪಿ.ಸುಶೀಲ ಎಸ್.ಪಿ ಯುಗಳ ಗೀತೆಗೆ ಜಯಂತಿ- ಅರುಣ್ ಕುಮಾರ್ (ಗುರುರಾಜುಲು ನಾಯ್ಡು ) ಅಭಿನಯವಿದೆ.
ಏಕಲವ್ಯ ಶಿಷ್ಯ…
ತಮ್ಮನ್ನು ಘಂಟಸಾಲ ಅವರ ‘ಏಕಲವ್ಯ ಶಿಷ್ಯ’ ಎಂದು ಕರೆದುಕೊಳ್ಳುವ ಬಾಲಸುಬ್ರಹ್ಮಣ್ಯ ಅವರ ಮೆಚ್ಚಿನ ಗಾಯಕರು ರಫಿ. ಜಾನಕಿ ಅವರು ಹಾಡಿದ ಮೋಹನ ರಾಗಾಧಾರಿತ ಗೀತೆಯಾದ ರಾಜನ್- ನಾಗೇಂದ್ರ ಸಂಗೀತದ ಬಾನಲ್ಲೂ ನೀನೇ, ಹಾಡನ್ನು ಅದೇ ಸಂಗೀತ ನಿರ್ದೇಶಕರ ಸಂಯೋಜನೆಯಲ್ಲಿ ತೆಲುಗಿನ ಪಂತುಲಮ್ಮ ಚಿತ್ರಕ್ಕಾಗಿ ಹಾಡಿದ ಎಸ್ಪಿ “ಜಾನಕಿ ಅವರಷ್ಟು ಸೊಗಸಾಗಿ ಹಾಡಲು ನನ್ನಿಂದ ಆಗಲಿಲ್ಲ” ಎಂದವರು. ಪಿ.ಸುಶೀಲ ಅವರನ್ನು ತಲ್ಲಕೋಯಿಲ ಎನ್ನುವ ಎಸ್ಪಿ ಅವರು ಪಿ.ಬಿ. ಎಸ್ ತರಹ ಹಾಡಲು ಯಾರಿಂದಲೂ ಅಸಾಧ್ಯ,ಅವರ ಹಾಡಿನ ಸವಿ ಮಾತ್ರ ಅನುಭವಿಸಬೇಕು ಎಂದಿದ್ದಾರೆ.
ಜೋಡಿ ಮಾಡಿದ ಮೋಡಿ…
ಎಲ್ಲ ಗಾಯಕಿಯರ ಜತೆಗೂ ಎಸ್ಪಿ ಅವರ ಗಂಟಲು ಗಾನಮಂಜರಿಯನ್ನೇ ಬಹು ಭಾಷೆಗಳಲ್ಲಿ ನೀಡಿವೆ. ಲತಾ ಜತೆಗೆ, ತೇರೆ ಮೇರೇ ಬೀಚ್ ಮೆ, ದೀದಿ ತೇರಾ ದೇವರ್ ದೀವಾನಾ, ಪಿ.ಸುಶೀಲ ಜತೆ ಅಲ್ಲಿ ಇಲ್ಲಿ ಹುಡುಕುತ ಕಣ್ಣು, ಜುಮ್ಮಂದಿ ನಾದಂ, ನಾ ಕಳ್ಳು ಚಪ್ತುನ್ನಾ ಯಿ, ವಿರಿಂಚಿನೈ (ಅಭೇರಿ ರಾಗಾಧಾರಿತ), ವಾಣಿಜಯರಾಮ್ ಅವರ ಜತೆ ಕನಸಲೂ ನೀನೆ, ವಸಂತ ಬರೆದನು ಒಲವಿನ ಓಲೆ, ಬೆಳ್ಳಿ ಮೋಡವೆ ಎಲ್ಲಿ ಓಡುವೆ, ಈಶ್ವರಿ ಅವರೊಂದಿಗೆ ನಮ್ಮೂರ್ನಾಗ್ ನಾನೊಬ್ನೆ ಜಾಣ, ಸಿಂಗಾಪುರಿನ ಗೊಂಬೆ ಇತ್ಯಾದಿ. ಆದರೆ ಎಸ್ಪಿ-ಎಸ್, ಜಾನಕಿ ಅವರ ಜೋಡಿ ಮಾಡಿದ ಮೋಡಿ ಸುವರ್ಣ ಅಧ್ಯಾಯ.
ಕನಸಲೂ ನೀನೆ ಮನಸಲೂ ನೀನೆ…
ಬಂದೆಯ ಬಾಳಿನ ಬೆಳಕಾಗಿ, ನನ್ನ ಆಸೆ ಹಣ್ಣಾಗಿ, ನಿನ್ನೆ ನಿನ್ನೆಗೆ, ಚಿನ್ನದ ರಾಣಿ ಬಾರೇ, ನಮ್ಮೂರು ಮೈಸೂರು, ಕನ್ನಡಮ್ಮನ ದೇವಾಲಯ, ಕಂಗಳು ವಂದನೆ ಹೇಳಿದೆ, ಒಲಿದ ಜೀವ, ನಿನ್ನ ನಗುವು ಹೂವಂತೆ, ಬಿಸಿಲಾದರೇನು, ಜೀವ ವೀಣೆ ನೀಡು ಮಿಡಿತದ ಸಂಗೀತ, ನೀ ಬಂದರೆ ಮೆಲ್ಲನೆ, ಮೌನ ಮೇಲ ನೋಯಿ… ಸಾವಿರಾರು ಗೀತೆಗಳ ಅತ್ಯಂತ ಯಶಸ್ವೀ ಜೋಡಿ.
ಸಂದರ್ಭ, ಸೌಭಾಗ್ಯ ಲಕ್ಷ್ಮಿ, ರಾಮಣ್ಣ ಶಾಮಣ್ಣ, ದೇವರೆಲ್ಲಿದ್ದಾನೆ, ಮುದ್ದಿನ ಮಾವ ಮೊದಲಾದ ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿರುವ ಪದ್ಮ ಪ್ರಶಸ್ತಿಗಳ ಈ ಅಪ್ರತಿಮ ಗಾಯಕ ತಿರುಗುಬಾಣ, ಕಲ್ಯಾಣೋತ್ಸವ, ಮಿಥಿಲೆಯ ಸೀತೆಯರು, ಮಾಂಗಲ್ಯಂ ತಂತು ನಾನೇನ, ಬಾಳೊಂದು ಚದುರಂಗ, ಕನಸಲೂ ನೀನೆ ಮನಸಲೂ ನೀನೆ, ಮುದ್ದಿನ ಮಾವ ಮೊದಲಾದ ಕನ್ನಡ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಶಿಖರಂ ತಮಿಳು ಚಿತ್ರದಲ್ಲಿ ರಾಧಾ ಅವರೊಂದಿಗೆ ಎಸ್ಪಿಯವರ ಅಭಿನಯ ಚಿತ್ರದ ಸಂಗೀತ ನಿರ್ದೇಶನದಲ್ಲಿ ಎಸ್ಪಿಯವರ ಛಾಪು ಕಾಣುತ್ತದೆ.
ಸಾಹಸಿ ಗಾಯಕ…
ಈ ಚಿತ್ರದಲ್ಲಿ ಚಿತ್ರಾ ಮತ್ತು ಎಸ್ಪಿ ಅವರು ಹಾಡಿರುವ ಇದೋ ಇದೋ ಒರು ಪಲ್ಲವಿ ಹಾಡು ಬಹಳ ಸೊಗಸು. ನೃತ್ಯಗಾರ್ತಿ ಸುಧಾಚಂದ್ರನ್ ಅವರ ಜೀವನಾಧಾರಿತ ಚಿತ್ರ ಮಯೂರಿ. ಇದರ ಸಂಗೀತ ನಿರ್ದೇಶನದಲ್ಲೂ ಎಸ್ಪಿಯವರ ಪ್ರತಿಭೆ ಮಿನುಗಿದೆ. ಪಡಮಟಿ ಸಂಧ್ಯಾರಾಗಂ ಚಿತ್ರದ ಸಂಗೀತ ನಿರ್ದೇಶನ ಮಾಡಿರುವ ಎಸ್ಪಿ Life is Shabby Without You Baby ಎಂಬ ಹಾಡನ್ನೂ ಬರೆದು ಹಾಡಿರುವ ಸೃಜನಶೀಲತೆಗೆ ನಮೋ.
ಸ್ಟುಡಿಯೊ ಮಾಲಿಕರೂ ಆದ ಎಸ್ಪಿ ಸೋದರಿ ಶೈಲಜ ಅವರೂ ಉತ್ತಮ ಗಾಯಕಿ. ಚರಣ್, ಪಲ್ಲವಿ ಎಸ್. ಪಿ ಅವರ ಮಕ್ಕಳು. ಕಂಠದಾನ ಕಲಾವಿದರಾಗಿಯೂ ಎಸ್ಪಿ ದುಡಿದಿದ್ದಾರೆ. 8 ಫೆಬ್ರವರಿ 1981ರಂದು ಉಪೇಂದ್ರಕುಮಾರ್ ಸಂಯೋಜನೆಯಲ್ಲಿ ಒಂದೇ ದಿನ 21 ಹಾಡುಗಳ ಧ್ವನಿ ಮುದ್ರಣ, ಹಾಗೇ ಒಂದೇ ದಿನ 16 ಹಾಗೂ ಮತ್ತೊಂದು ದಿನ ಆಗಿನ ಮದ್ರಾಸ್ ನಲ್ಲಿ 19 ಗೀತೆಗಳನ್ನು ಹಾಡಿದ್ದ ಸಾಹಸೀ ಸೃಜನಶೀಲ ಮತ್ತು ನಿತ್ಯಾಹ್ಲಾದಿತ, ಸರಸ್ವತೀ ಸಂಪನ್ನ ಎಸ್.ಪಿ. ಅವರನ್ನು ಹಿಂದೆ ಭೇಟಿ ಮಾಡಿದ್ದ ರಸಚಣಗಳ ಸವಿ ಮೆಲುಕು ನನ್ನ ಜೀವ -ಜೀವನದ ಶಾಶ್ವತ ಮತ್ತು ಅಜಸ್ರ ಸಂಪತ್ತು.

ಸಂಗೀತ ದಿಗ್ಗಜ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಇನ್ನಿಲ್ಲ

ಎಸ್ಪಿಬಿ ಮರಣೋತ್ತರ ಪರೀಕ್ಷೆಯಲ್ಲಿ ಕೊರೋನಾ ನೆಗೆಟಿವ್

ಎಸ್ಪಿಬಿ ಮರಣೋತ್ತರ ಪರೀಕ್ಷೆಯಲ್ಲಿ ಕೊರೋನಾ ನೆಗೆಟಿವ್

SPB ಜನ್ಮಜಾತ ಗಾಯಕ

ಎಸ್ಪಿಬಿ ನಟನೆಗೆ ರಾಜ್ ಕಂಠ!

SPB ಎಂಜಿನಿಯರಿಂಗ್ ಡ್ರಾಪೌಟ್!

ನೀವು ನನಗಾಗಿ ಹಾಡಿದ ಪ್ರತಿ ಹಾಡಿಗೂ ಥ್ಯಾಂಕ್ಸ್…

ದಾಖಲೆಯ ಸರದಾರ… ಒಂದೇ ದಿನ 21 ಹಾಡಿಗೆ SPB ಧ್ವನಿ…!

ಮತ್ತಷ್ಟು ಸುದ್ದಿಗಳು

Latest News

ಬಸ್ ನಿಲ್ದಾಣದಲ್ಲಿ ಮಗು ಸಿಕ್ಕ ಪ್ರಕರಣಕ್ಕೆ ಟ್ವಿಸ್ಟ್ : ತನಿಖೆಯಲ್ಲಿ ಬಯಲಾಯ್ತು ಅಕ್ರಮ ಸಂಬಂಧದ ಅಸಲಿಯತ್ತು

newsics.com ಮೈಸೂರು: ಕಳೆದ 15 ದಿನಗಳ ಹಿಂದೆ ರಾಯಚೂರಿನ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಯುವಕನ ಕೈಗೆ ಮಗುವನ್ನು ಕೊಟ್ಟು ಪರಾರಿಯಾದ ಪ್ರಕರಣ ಇದೀಗ ಹೊಸ ತಿರುವನ್ನೇ ಪಡೆದುಕೊಂಡಿದೆ....

ಪ್ರವಾಸಿಗರನ್ನು ಸ್ಕೂಬಾ ಡೈವಿಂಗ್ ಗೆ ಹೊತ್ತೊಯ್ದ ದೋಣಿ ಮುಳುಗಡೆ; ಇಬ್ಬರು ಸಾವು

newsics.com ಮಹಾರಾಷ್ಟ್ರ: ಸ್ಕೂಬಾ ಡೈವಿಂಗ್ ವೇಳೆ 20 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯು ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ನಡೆದಿದೆ. ಅಷ್ಟೇ ಅಲ್ಲದೇ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಾರಾಷ್ಟ್ರದ...

ತಮ್ಮ ಪಾಠ ಸೇರ್ಪಡೆಗೆ ಅನುಮತಿ ನಿರಾಕರಿಸಿದ ಲೇಖಕ ದೇವನೂರ ಮಹಾದೇವ

newsics.com ಮೈಸೂರು: 'ನನ್ನ ಪಾಠ ಸೇರಿದ್ದರೆ ಕೂಡಲೇ ಕೈ ಬಿಡಬೇಕು' ಎಂದು ಪಠ್ಯ ಪುಸ್ತಕ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿರುವ ಲೇಖಕ ದೇವನೂರ ಮಹಾದೇವ ತಮ್ಮ ಪಾಠ ಸೇರ್ಪಡೆಗೆ ಅನುಮತಿ ನಿರಾಕರಿಸಿದ್ದಾರೆ. 'ನನ್ನದೊಂದು ಕಥನವನ್ನು ಹತ್ತನೇ ತರಗತಿ...
- Advertisement -
error: Content is protected !!