Monday, November 29, 2021

ಅವರು ಇವರು ಎಲ್ಲ ಒಂದೇ!

Follow Us

ನೀವು ಈ ಹಿಂದೆ ಯಾರನ್ನಾದರೂ ಪ್ರೀತಿಸಿದ್ದೀರಾ? ಇಷ್ಟಪಟ್ಟು ಮದುವೆಯಾಗಿದ್ದೀರಾ? ನಿಮ್ಮ ಆಪ್ತ ಬಳಗದ ಸ್ನೇಹಿತರ ಗುಂಪು ಎಷ್ಟು ದೊಡ್ಡದಿದೆ? ನಿಮ್ಮ ಸಹೋದ್ಯೋಗಿ, ನೆರೆಹೊರೆಯವರಲ್ಲಿ ಯಾರನ್ನಾದರೂ ಮೆಚ್ಚಿಕೊಂಡಿದ್ದೀರಾ? ಒಮ್ಮೆ ಅವರೆಲ್ಲರ ಗುಣ ಸ್ವಭಾವವನ್ನು ಹೋಲಿಕೆ ಮಾಡಿ. ಬಹುತೇಕ ಒಂದೇ ರೀತಿಯಲ್ಲಿರುತ್ತದೆ.

===

ಸಂಬಂಧ ಹೇಗ್ಹೇಗೋ ಯಾರೊಂದಿಗಾದರೂ ಆಗಿಬಿಡುವುದಿಲ್ಲ. ಇದು ಎಲ್ಲರ ಅನುಭವಕ್ಕೂ ಒಂದಿಲ್ಲೊಮ್ಮೆಯಾದರೂ ಬಂದಿರುತ್ತದೆ. ಸ್ನೇಹಕ್ಕಾಗಿ ಹತ್ತಿರ ಬರುವವರೆಲ್ಲರನ್ನೂ ನಾವು ನಮ್ಮ ಆಪ್ತ ಬಳಗಕ್ಕೆ ಸೇರಿಸಿಕೊಳ್ಳುವುದಿಲ್ಲವಲ್ಲ, ಹಾಗೆ. ಅಂದರೆ, ಇಂಥವರೇ ಬೇಕೆಂಬ ನಿಗದಿತ ಮಾದರಿ ನಮ್ಮಲ್ಲಿ ಮೊದಲೇ ರೂಪುಗೊಂಡಿರುತ್ತದೆ! ಇನ್ನು, ಪ್ರೀತಿ, ಪ್ರಣಯದ ವಿಚಾರಕ್ಕೆ ಬಂದರಂತೂ ಇಂಥದ್ದೇ ಜತೆಗಾರ ಬೇಕೆಂಬ ಕಲ್ಪನೆ ಮೊದಲೇ ಮೂಡಿರುತ್ತದೆ!
ಅಚ್ಚರಿ ಎನಿಸಬಹುದು, ಒಂದೇ ರೀತಿಯ ಸ್ವಭಾವವುಳ್ಳ ಸಂಗಾತಿಯನ್ನು, ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವ ಗುಣ ನಮ್ಮದಾಗಿರುತ್ತದೆ. ಹೌದು, ಇದನ್ನು ಒಂದು ಅಧ್ಯಯನವೂ ಸಾಬೀತುಪಡಿಸಿದೆ. ಜನರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಪದೇ ಪದೆ ಒಂದೇ ರೀತಿಯ ಗುಣಸ್ವಭಾವವುಳ್ಳ ವ್ಯಕ್ತಿಗಳನ್ನು ಗುರುತಿಸುವುದು ಈ ಅಧ್ಯಯನದಲ್ಲಿ ಕಂಡುಬಂದಿದೆ. ಟೊರಾಂಟೋ ವಿಶ್ವವಿದ್ಯಾಲಯ ನಡೆಸಿದ್ದ ಅಧ್ಯಯನ ಮನುಷ್ಯನ ಸ್ವಭಾವದ ಕುರಿತು ಈ ಸೋಜಿಗದ ಸಂಗತಿಯನ್ನು ಹೊರಹಾಕಿದೆ.
ಸಾರಾ ದೆಹಲಿಯ ಹುಡುಗಿ. ಆಕೆ ಕಾಲೇಜಿನಿಂದ ಇದುವರೆಗೆ ನಾಲ್ವರನ್ನು ಪ್ರೀತಿಸಿದ್ದಾಳೆ. ಆಕೆ ತನ್ನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡ ನಾಲ್ವರೂ ಬಹುತೇಕ ಒಂದೇ ತೆರನಾದ ಗುಣಸ್ವಭಾವ ಹೊಂದಿದ್ದರು! ಮೊದಲ ಸ್ನೇಹಿತನ ಜತೆಗೆ ಸಂಬಂಧ ಮುರಿದುಬಿದ್ದ ಬಳಿಕ ಅರಿವಿಲ್ಲದೇ ಅವನಂಥಹುದೇ ಸ್ವಭಾವದ ಇನ್ನೊಬ್ಬನ ಸ್ನೇಹದಲ್ಲಿ ಬಿದ್ದಿದ್ದಳು. ಅಷ್ಟೇ ಏಕೆ? ಎರಡನೇ ಸಂಬಂಧ ಹದಗೆಟ್ಟ ಬಳಿಕ ಅದನ್ನು ಮುರಿದುಕೊಳ್ಳಲು ಇಬ್ಬರೂ ತೀರ್ಮಾನಿಸಿದಾಗ “ಇನ್ನು ಮುಂದೆ ಇಂಥ ವ್ಯಕ್ತಿಯನ್ನು ಪ್ರೀತಿಸಬಾರದು’ ಎಂದು ಸಾರಾ ಅಂದುಕೊಂಡಿದ್ದಳು. ಆದರೆ, ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿಯೇ ಇನ್ನೊಂದು ವಿಭಾಗದಲ್ಲಿದ್ದ ವ್ಯಕ್ತಿ ಹತ್ತಿರವಾದಾಗ ಅವನೂ ಹಿಂದಿನವರಂತೆಯೇ ಎಂಬುದು ತಿಳಿಯಿತು!
ಸಾರಾಳಂತೆಯೇ ನಮಗೆ ಅರಿವಿಲ್ಲದೆ ನಿಗದಿತ ಮಾದರಿಯ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತ ಸಾಗುತ್ತೇವೆ ಎನ್ನುವುದು ಟೊರಾಂಟೋ ವಿವಿ ಅಧ್ಯಯನದ ಸಾರ. ಬೇಕಿದ್ದರೆ, ಒಮ್ಮೆ ನಿಮ್ಮ ಸ್ನೇಹಿತರ ಬಳಗವನ್ನು, ಸಂಗಾತಿಯನ್ನು, ತುಂಬ ಆಪ್ತರೆನಿಸಿದವರನ್ನು ನೆನಪಿಸಿಕೊಳ್ಳಿ. ಅವರಲ್ಲಿ ಬಹುತೇಕ ಮಂದಿ ಹೆಚ್ಚುಕಡಿಮೆ ಒಂದೇ ಮಾದರಿಯ ವ್ಯಕ್ತಿಗಳಾಗಿರುತ್ತಾರೆ.
ಮನುಷ್ಯನ ಈ ವರ್ತನೆ ಅತ್ಯಂತ ಸಹಜ ಎಂದಿದ್ದಾರೆ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ವಿಶ್ವವಿದ್ಯಾಲಯದ ಮಾನಸಿಕ ಶಾಸ್ತ್ರ ವಿಭಾಗದ ವಿದ್ಯಾರ್ಥಿ ಯೂಬಿನ್ ಪಾರ್ಕ್. ನಮ್ಮ ಮನಸ್ಥಿತಿಗೆ ತಕ್ಕಂತೆ, ನಮಗೆ ಇಷ್ಟವಾಗುವವರನ್ನು ಮಾತ್ರವೇ ಸಂಗಾತಿಯನ್ನೋ, ಸ್ನೇಹಿತರನ್ನೋ ಮಾಡಿಕೊಳ್ಳುವುದರಿಂದ ಸಹಜವಾಗಿ ಒಂದೇ ಮಾದರಿಯ ವ್ಯಕ್ತಿಗಳು ನಮ್ಮ ಆಪ್ತ ವಲಯದಲ್ಲಿರುವ ಸಾಧ್ಯತೆ ಹೆಚ್ಚಾಗಿರಬಹುದು. ಹರೆಯದ ಜೋಡಿಗಳು, ಮದುವೆಯಾದವರು, ಅನೇಕ ಸಂಬಂಧಗಳನ್ನು ಏಕಕಾಲದಲ್ಲಿ ಇರಿಸಿಕೊಂಡಿರುವವರು, ಈಗಾಗಲೇ ನಾಲ್ಕಾರು ಸಂಗಾತಿಗಳನ್ನು ಬದಲಾಯಿಸಿದವರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.            response@134.209.153.225

ಮತ್ತಷ್ಟು ಸುದ್ದಿಗಳು

Latest News

ಯುಎಇಯಲ್ಲಿ ಅತಿದೊಡ್ಡ ಕಾನೂನು ಸುಧಾರಣೆ: 40 ಕಾನೂನುಗಳ ಬದಲಾವಣೆ

newsics.com ಯುಎಇ: ಇಲ್ಲಿನ ಸರ್ಕಾರವು ತನ್ನ ಇತಿಹಾಸದಲ್ಲೇ ಅತಿ ದೊಡ್ಡ ಕಾನೂನು ಸುಧಾರಣೆ ನಡೆಸಲು ಮುಂದಾಗಿದ್ದು, 40 ಕಾನೂನುಗಳನ್ನು ಬದಲಾಯಿಸಲಿದೆ. ವಿವಿಧ ವಿಭಾಗಗಳ ಕಾನೂನುಗಳಲ್ಲಿ ಬದಲಾವಣೆಗಳಾಗಲಿವೆ. ಮದುವೆಯ ಮೊದಲು...

ಒಮಿಕ್ರೋನ್ ಭೀತಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಮಾರ್ಗಸೂಚಿ ಬಿಡುಗಡೆ

newsics.com ನವದೆಹಲಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಒಮಿಕ್ರೋನ್ ಹರಡುವ ಭೀತಿಯ ನಡುವೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಗೈಡ್ ಲೈನ್ಸ್ ಬಿಡುಗಡೆಗೊಳಿಸಿದ್ದು,...

ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ

newsics.com ಬೆಂಗಳೂರು: ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಡಿಸೆಂಬರ್ 27ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 30ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. 5 ನಗರ ಸಭೆ,...
- Advertisement -
error: Content is protected !!