Wednesday, July 6, 2022

ರಕ್ಷೆಗಾಗಿ ರಾಖಿಯ ಬಂಧ!

Follow Us

ಭ್ರಾತೃತ್ವದ ಭಾವ ಸ್ಫುರಿಸುವ ರಕ್ಷಾಬಂಧನ. ಅಣ್ಣನ ಆಶೀರ್ವಾದದಿಂದ ಬದುಕಲ್ಲಿ ಮುನ್ನಡೆಯುವ ನಿರ್ಧಾರ ತಂಗಿಯದ್ದಾದರೆ, ತನ್ನ ನೆಚ್ಚಿಕೊಂಡ ತಂಗಿಯೊಬ್ಬಳಿದ್ದಾಳೆ ಎನ್ನುವ ಅರಿವಿನಲ್ಲಿ ಅಣ್ಣ ಜವಾಬ್ದಾರಿಯುತ ಹೆಜ್ಜೆಗಳನ್ನಿಡುತ್ತಿದ್ದಾನೆ. ಒಂದೆಳೆಯಲ್ಲಿ ಜೀವಗಳ ನಡುವೆ ಬೆಸುಗೆ ಬೆಸೆಯುವ “ನೂಲುಹುಣ್ಣಿಮೆ’ ಅಥವಾ “ರಕ್ಷಾಬಂಧನ’ ಎಲ್ಲರಲ್ಲೂ ಸಹೋದರತ್ವದ ಭಾವನೆ ಮೂಡಿಸಲಿ.

♦ ಪ್ರಮಥ
newsics.com@gmail.com


 ಣ್ಣ-ತಂಗಿಯರ ಬಾಂಧವ್ಯಕ್ಕೆ ಭಾಷ್ಯವಿಲ್ಲ. ಬದುಕಿನಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಅಣ್ಣನೊಬ್ಬನಿದ್ದಾನೆ ಎನ್ನುವ ನೆಮ್ಮದಿ ತಂಗಿಗಾದರೆ, ತಂಗಿಯ ರಕ್ಷಣೆ, ಆಕೆಗೆ ನೆಮ್ಮದಿ ನೀಡುವ ಜವಾಬ್ದಾರಿಯನ್ನು ಅದ್ಯಾವುದೋ ಕ್ಷಣದಲ್ಲಿ ಅಣ್ಣ ಹೊತ್ತುಕೊಂಡುಬಿಟ್ಟಿರುತ್ತಾನೆ. ಪುಟ್ಟ ತಂಗಿಯನ್ನು ಕೈಹಿಡಿದು ಶಾಲೆಗೆ ಕರೆದುಕೊಂಡು ಹೋಗುವಾಗಲೇ ಅಂಥದ್ದೊಂದು ಜವಾಬ್ದಾರಿ ಅಣ್ಣನಲ್ಲಿ ಮೂಡಿದ್ದಿರಬಹುದು. ಅವನ ಆ ಹೊಣೆಗಾರಿಕೆ ಜೀವನವಿಡೀ ತಂಗಿಯನ್ನು ಪೊರೆಯುತ್ತದೆ. ಅಂಥ ಅಣ್ಣ-ತಂಗಿಯರ ಸಂಭ್ರಮಕ್ಕಾಗಿಯೇ ರಕ್ಷಾಬಂಧನ. ಒಂದೇ ಒಂದು ನೂಲಿನಲ್ಲಿ ಸಂಬಂಧಗಳನ್ನು ಬಂಧಿಸುವ ಪ್ರತೀಕವಾಗಿರುವ ರಕ್ಷಾಬಂಧನ ಅಣ್ಣ-ತಂಗಿಯರ ಪಾಲಿಗೆ ಸುದಿನ.
ವರ್ಷವಿಡೀ ಪರಸ್ಪರ ಕಾದಾಡಲು ಮುಗಿಬೀಳುವ ಅಣ್ಣ-ತಂಗಿಯರು ಸಹ ಇದೊಂದು ದಿನಕ್ಕಾಗಿ ಕಾಯುತ್ತಾರೆ. ಸಹೋದರಿಯರು ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟಿ ಸಂಭ್ರಮಿಸುತ್ತಾರೆ. ಅಣ್ಣನಿಗೆ ತಿಲಕವಿಟ್ಟು ನಮಸ್ಕರಿಸಿ ತಮ್ಮ ಪೊರೆಯುವ ಜವಾಬ್ದಾರಿಯನ್ನು ಮೌನವಾಗಿಯೇ ನಿವೇದಿಸಿಕೊಳ್ಳುತ್ತಾರೆ. ಅಣ್ಣನಿಗೋ ಸಂಭ್ರಮ. ತಂಗಿ ಎಷ್ಟು ದೊಡ್ಡವಳಾದರೂ ಇನ್ನೂ ಶಾಲೆಗೆ ಕೈಹಿಡಿದು ಕರೆದೊಯ್ದ ಪುಟ್ಟ ತಂಗಿಯಂತೆಯೇ ಭಾಸವಾಗುತ್ತಾಳೆ. ಅವರ ನಡುವೆ ಮಗದೊಮ್ಮೆ ಬಾಲ್ಯ ತೆರೆದುಕೊಳ್ಳುತ್ತದೆ. ರಕ್ಷಾಬಂಧನ ಸಹೋದರ-ಸಹೋದರಿಯರ ಅನುಬಂಧವನ್ನು ನೆನಪಿಸುವ ಮೂಲಕ ಸಹೋದರತ್ವವನ್ನು ಸಂಭ್ರಮಿಸುವಂತೆ ಮಾಡುತ್ತದೆ.
ಇಂದು ಶ್ರಾವಣ ಹುಣ್ಣಿಮೆ. ಇದನ್ನು ನೂಲುಹುಣ್ಣಿಮೆ ಎಂದೂ ಕರೆಯುತ್ತಾರೆ. ನಮ್ಮ ಭಾರತೀಯ ಪರಂಪರೆಯಲ್ಲಿ ನೂಲಿಗೆ ವಿಶಿಷ್ಟ ಸ್ಥಾನವಿದೆ. ಮನುಷ್ಯ ಯಾವುದೇ ಬಟ್ಟೆ ಧರಿಸಿದರೂ ಅದರ ಮೂಲ ಒಂದು ತೆಳ್ಳನೆಯ ನೂಲು ಮಾತ್ರ. ಆ ನೂಲೇ ಒಂದಕ್ಕೆ ಹತ್ತಾಗಿ, ನೂರಾಗಿ ಮಾನವನ ದೇಹವನ್ನು ವಿವಿಧ ರೂಪಗಳಲ್ಲಿ ಅಲಂಕರಿಸಿ ಮಾನ ರಕ್ಷಣೆ ಮಾಡುತ್ತದೆ. ಹೀಗಾಗಿ, ನೂಲನ್ನು ಪೂಜಿಸಿ ಧರಿಸುವ ಹಬ್ಬ ನೂಲುಹುಣ್ಣಿಮೆ. ದಂಪತಿಗಳು ಪೂಜಿಸಿದ ನೂಲನ್ನು ಧರಿಸಿ ಪರಸ್ಪರರ ಬಾಂಧವ್ಯವನ್ನು ಸಾರಿದರೆ, ಸಹೋದರಿಯರು ಅಣ್ಣಂದಿರಿಗೆ ರಾಖಿಯೆಂಬ ನೂಲನ್ನು ಕಟ್ಟುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ.
ಮಹಾಭಾರತದಲ್ಲಿ ಶಿಶುಪಾಲ ವಧೆಯ ಸಂದರ್ಭ. ಯುದ್ಧದ ವೇಳೆ ಕೃಷ್ಣನ ಬೆರಳಿಗೆ ಗಾಯವಾಗುತ್ತದೆ. ಅದನ್ನು ಕಂಡ ದ್ರೌಪತಿ ತನ್ನ ಬಟ್ಟೆಯನ್ನು ಹರಿದು ಕೃಷ್ಣನಿಗೆ ಕಟ್ಟುತ್ತಾಳೆ. ಸೂಕ್ತ ಸಮಯದಲ್ಲಿ ಇದರ ಪ್ರತಿಫಲ ನೀಡುವುದಾಗಿ ಹೇಳಿದ ಕೃಷ್ಣ, ವಸ್ತ್ರಾಪಹರಣದ ಸಮಯದಲ್ಲಿ ಬಟ್ಟೆ ನೀಡಿ ದ್ರೌಪತಿಯ ಮಾನವನ್ನು ಕಾಯುತ್ತಾನೆ. ಈ ಘಟನೆ ಸಹ ನೂಲಿನ ಮಹತ್ವವನ್ನು ಸಾರುತ್ತದೆ. ಅಷ್ಟಕ್ಕೂ ಸಹೋದರರೆಂದರೆ ಒಡಹುಟ್ಟಿದವರೇ ಆಗಬೇಕಿಲ್ಲ ಎಂಬ ಸಂದೇಶವನ್ನೂ ನೀಡುತ್ತದೆ. ಭಾವಿಸಿದರೆ ಪುರುಷರೆಲ್ಲರೂ ಸಹೋದರರಾಗಬಲ್ಲರು. ಸ್ತ್ರೀಯರೆಲ್ಲರೂ ಸಹೋದರಿಯರಾಗಬಲ್ಲರು. ಅಂಥದ್ದೊಂದು ಮಹೋನ್ನತ ಆಶಯವೂ ರಾಖಿ ಹಬ್ಬದ ಆಚರಣೆಯಲ್ಲಿದೆ.
ಯಾವುದೇ ಉನ್ನತ ಆದರ್ಶಗಳಿಲ್ಲದೆ ಶಾಲೆ-ಕಾಲೇಜು ದಿನಗಳಲ್ಲಿ ಸಹಪಾಠಿಯೊಬ್ಬನಿಗೆ ಸುಮ್ಮನೆ ರಾಖಿ ಕಟ್ಟಿದ್ದರೂ ಮುಂದೊಂದು ದಿನ ಆ ಬಾಂಧವ್ಯವೇ ಉನ್ನತ ಮಟ್ಟಕ್ಕೇರಿದ ಉದಾಹರಣೆಗಳು ನಮ್ಮ ಮುಂದೆ ಅದೆಷ್ಟಿಲ್ಲ! ಇದರ ಆಚರಣೆಗೆ ಮುಖ್ಯವಾಗಿ ಬೇಕಿರುವುದು ಭ್ರಾತೃತ್ವ ಭಾವವೊಂದೇ.
ರಕ್ಷಾಬಂಧನದ ರಾಖಿಯ ನೂಲು ಸಹೋದರತ್ವವನ್ನು ಇನ್ನಷ್ಟು ಬಿಗಿ ಮಾಡಲಿ. ಯಾವುದೇ ಅಣ್ಣ-ತಂಗಿಯರ ಮಧ್ಯೆ ಅಹಂಕಾರದ, ಬಿಗುಮಾನದ ಗೋಡೆಗಳು ಏಳದಿರಲಿ. ಮುಗ್ಧ, ಸುಂದರ ಮನಗಳು ವರ್ಷವರ್ಷವೂ ರಾಖಿ ಹಬ್ಬವನ್ನು ಆಚರಿಸುತ್ತ, ಸಂಭ್ರಮಿಸುತ್ತ ಸಹೋದರತ್ವದ ಮಹತ್ವವನ್ನು ಜಗತ್ತಿಗೆ ಸಾರುತ್ತಿರಲಿ.

ಮತ್ತಷ್ಟು ಸುದ್ದಿಗಳು

vertical

Latest News

ರಷ್ಯಾ ಕ್ಷಿಪಣಿ ದಾಳಿಗೆ ಬ್ರೆಜಿಲ್ ಮಾಡೆಲ್ ಸಾವು

newsics.com ಮಾಸ್ಕೋ: ಉಕ್ರೇನ್  ವಿರುದ್ಧ ರಷ್ಯಾ ನಡೆಸುತ್ತಿರುವ ಹೋರಾಟದಲ್ಲಿ ಬ್ರೆಜಿಲ್ ನ ರೂಪದರ್ಶಿಯೊಬ್ಬರು ಮೃತಪಟ್ಟಿದ್ದಾರೆ. ಸಾವನ್ನಪ್ಪಿರುವ ರೂಪದರ್ಶಿಯನ್ನು  ಬ್ರೆಜಿಲ್ ನ  ಥಾಲಿತಾ ಡೂ ವಲ್ಲೆ ಎಂದು ಗುರುತಿಸಲಾಗಿದೆ. ಥಾಲಿತಾ  ಉಕ್ರೇನ್...

ಚಾಕಲೇಟ್ ಕವರ್ ನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್: ನಾಲ್ವರ ಸೆರೆ

newsics.com ಬೆಂಗಳೂರು:  ವಿದ್ಯಾರ್ಥಿಗಳಿಗೆ ಚಾಕಲೇಟ್ ಕವರ್ ನಲ್ಲಿ ಅಡಗಿಸಿ ಡ್ರಗ್ಸ್ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ  ಆವಲ ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಅಸ್ಲಾಂ,  ಮೊಹಮ್ಮದ್ ನದೀಂ , ಸಚ್ಚಿಂದ್ರನ್ ಮತ್ತು...

ಒಟಿಪಿ ನೀಡುವ ವಿಷಯಕ್ಕೆ ಜಗಳ: ಪ್ರಯಾಣಿಕನ ಹತ್ಯೆ ಮಾಡಿದ ಕ್ಯಾಬ್ ಚಾಲಕ

newsics.com ಚೆನ್ನೈ: ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈ ನಗರದ ನವಲೂರಿನಲ್ಲಿ ಈ ಘಟನೆ ನಡೆದಿದೆ. ಸಾಫ್ಟವೇರ್ ಡೆವಲಪರ್ ಆಗಿರುವ...
- Advertisement -
error: Content is protected !!