Saturday, April 17, 2021

‘ಪಕ್ಷಿನೋಟ’ದೊಳಗೊಂದು ಇಣುಕು

Kalgundi Naveen
♦ ಕಲ್ಗುಂಡಿ ನವೀನ್
ಪಕ್ಷಿತಜ್ಞರು, ಶಿಕ್ಷಕರು
response@134.209.153.225
ksn.bird@gmail.com
 
ನಮ್ಮಲ್ಲಿ ಸಾಮಾನ್ಯವಾಗಿ ಕಂಡುಬರುವ ಹಕ್ಕಿಗಳ ಪರಿಚಯ, ಅವುಗಳ ವಿಶೇಷ ತಿಳಿಸಿಕೊಡುವುದು ಈ “ಪಕ್ಷಿನೋಟ” ಅಂಕಣದ ಉದ್ದೇಶ. ಪಕ್ಷಿತಜ್ಞ, ಶಿಕ್ಷಕ, ಪರಿಸರಪ್ರೇಮಿ ಕಲ್ಗುಂಡಿ ನವೀನ್ ಅವರು ಪ್ರತಿ ವಾರ ಬರೆಯಲಿದ್ದಾರೆ.

===

ನಮ್ಮಲ್ಲಿ ಸಾಮಾನ್ಯವಾಗಿ ಕಂಡುಬರುವ ಹಕ್ಕಿಗಳನ್ನು ಪರಿಚಯ ಮಾಡಿಕೊಡುವುದು ತನ್ಮೂಲಕ ಅವುಗಳ ಕೆಲವು ವಿಶೇಷಗಳನ್ನು ತಿಳಿಯುವುದು ಈ “ಪಕ್ಷಿನೋಟ” ಅಂಕಣದ ಉದ್ದೇಶ.
ಈ ಮೊದಲ ಅಂಕಣದಲ್ಲಿ ಪಕ್ಷಿಗಳನ್ನು ಕುರಿತ ಒಂದು ಕಿರು ಪರಿಚಯ ಮಾಡುವ ಯತ್ನ ನಡೆದಿದೆ. ಓದಿ, ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಬರೆದು ತಿಳಿಸಿ.
***
ಭಾರತ ಒಂದು ಶ್ರೀಮಂತ ಜೀವಿವೈವಿಧ್ಯ ಕೇಂದ್ರ. ಜಗತ್ತಿನ ಹತ್ತು ಶ್ರೀಮಂತ ಜೀವಿವೈವಿಧ್ಯ ರಾಷ್ಟ್ರಗಳಲ್ಲಿ ಭಾರತವೂ ಒಂದೆಂದು ಪರಿಗಣಿಸಲ್ಪಟ್ಟಿದೆ. ಜಗತ್ತಿನಲ್ಲಿ ಕಂಡುಬರುವ ಪ್ರಾಣಿಗಳಲ್ಲಿ ಶೇ 6.5 ಹಾಗೂ ಸಸ್ಯಗಳಲ್ಲಿ ಶೇ 7 ಭಾರತದಲ್ಲಿಯೇ ಕಂಡುಬರುತ್ತದೆ ಎಂದರೆ ನಮಗೆ ಹೆಮ್ಮೆಯ ಜತೆಗೆ ಇದರ ಸಂರಕ್ಷಣೆಯ ಜವಾಬ್ದಾರಿ ಭಾವವೂ ಮೂಡಬೇಕು. ಒಟ್ಟಾರೆ ಭಾರತದಲ್ಲಿ 350 ಪ್ರಭೇದದ ಸ್ತನಿಗಳು, 1,225 ಪ್ರಭೇದದ ಹಕ್ಕಿಗಳು, 614 ಪ್ರಭೇದದ ಉಭಯವಾಸಿಗಳು ಹಾಗೂ ಸರೀಸೃಪಗಳು ಕಂಡುಬರುತ್ತವೆ. ಆದರೆ, ಇದರಲ್ಲಿ 173 ಪ್ರಭೇದದ ಸಸ್ತನಿಗಳು, 78 ಪ್ರಭೇದದ ಹಕ್ಕಿಗಳು ಹಾಗೂ 15 ಪ್ರಭೇದದ ಸರೀಸೃಪಗಳು ಗಂಡಾಂತರದಂಚಿನಲ್ಲಿದೆ ಎಂದು ಗುರುತಿಸಲಾಗಿದೆ.

ಪಕ್ಷಿಗಳು ಎಂದರೇನು? ಅವನ್ನೇಕೆ ನಾವು ರಕ್ಷಿಸಬೇಕು? ಎರಡು ಕಾಲುಗಳುಳ್ಳ, ಗರಿಗಳನ್ನು ಹೊಂದಿರುವ ಕಶೇರುಕಗಳನ್ನು (ಬೆನ್ನುಮೂಳೆಯಿರುವ) ಪಕ್ಷಿಗಳು ಎನ್ನುತ್ತೇವೆ. ಜಗತ್ತಿನ ಬೇರೆ ಯಾವ ಜೀವಿಗೂ ಗರಿಗಳಿಲ್ಲ. ಹಾಂ, ಲಕ್ಷ ಲಕ್ಷ ವರ್ಷಗಳ ಹಿಂದೆ ಬದುಕಿದ್ದ ಬೃಹತ್‍ ಆನೆಗಳಿಗೆ ನಮ್ಮ ಜೂಲು ನಾಯಿಗೆ ಇರುವಂತೆ ಮೈಯೆಲ್ಲಾ ಜೂಲು ಇತ್ತು. ಆದರೆ, ಅವು ಗರಿಗಳಲ್ಲ.

ಇನ್ನು ಪಕ್ಷಿಗಳನ್ನು ಏಕೆ ರಕ್ಷಿಸಬೇಕು ಎಂಬ ಪ್ರಶ್ನೆ. ಇದು ನಮ್ಮನ್ನು ಏಕೆ ರಕ್ಷಿಸಿಕೊಳ್ಳಬೇಕು ಎಂಬ ಪ್ರಶ್ನೆಯೇ! ಭೂಮಿಯ ಮೇಲೆ ನಮಗಿರುವಷ್ಟು ಹಕ್ಕು ಇವುಗಳಿಗೂ (ಇತರ ಜೀವಿಗಳಿಗೂ) ಇದೆ. ಈ ನೈತಿಕತೆಯೇ ಎಲ್ಲ ಸಂರಕ್ಷಣೆಯ ಮೂಲ ಮಂತ್ರ. ಏಕೆ ರಕ್ಷಿಸಬೇಕು? ಈ ಭೂಮಿ ಅವುಗಳಿಗೆ ಸೇರಿದ್ದೂ ಸಹ! ಆದರೆ, ಅವುಗಳಿಗೆ ಮಾತಾಡಲು ಸಾಧ್ಯವಿಲ್ಲ, ಅವುಗಳಿಗೆ ಮತ ಹಾಕಲು ಸಾಧ್ಯವಿಲ್ಲ! ಕೊನೆಯ ಅಂಶಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಬೇಕು.

ಪಕ್ಷಿಗಳಿಂದ ಇರುವ ಇತರ ಉಪಯೋಗ:
1. ಇವು ಬಹಳ ಮುಖ್ಯವಾದ ಪರಾಗಸ್ಪರ್ಶಕಾರಕಗಳು. ಹಾಗೆ ನೋಡಿದರೆ ಕಾಡುಗಳು ಬೆಳೆಯಲು ಮುಖ್ಯ ಕಾರಣ ಈ ಹಕ್ಕಿಗಳೇ! ಕಾಡಿಲ್ಲದೆ, ನಾವಿಲ್ಲ ಎಂದಾಗ ಹಕ್ಕಿಗಳಿಲ್ಲದೆ ನಾವಿಲ್ಲ ಎಂದು ಒಪ್ಪಿಕೊಂಡಂತಾಯಿತು
2. ಹಕ್ಕಿಗಳು ಇತರ ಹುಳಹುಪ್ಪಟೆಗಳನ್ನು, ಮೂಷಿಕಗಳನ್ನು ತಿಂದು ನಮಗೆ ತೊಂದರೆ ಮಾಡುವ ಕೀಟ-ಪ್ರಾಣಿಗಳ ನಿಯಂತ್ರಣ ಮಾಡುತ್ತವೆ.
3. ಇವು ತಾವೂ ಖುದ್ದು ಆಹಾರವೂ ಆಗಿ ಆಹಾರ ಸರಪಳಿಯಲ್ಲಿ ವಿಶಿಷ್ಟ ಪಾತ್ರವನ್ನು ವಹಿಸುತ್ತವೆ.
4. ನಾವು ಹಾರುವುದನ್ನು (ಏರೋಪ್ಲೇನ್‍-ನಿಮ್ಮ ಇತ್ತೀಚಿನ ವಿಮಾನಯಾನವನ್ನು ನೆನಪಿಸಿಕೊಳ್ಳಿ) ಕಲಿತಿದ್ದೆ ಹಕ್ಕಿಗಳಿಂದ! ಇನ್ನು ಅನೇಕ ಸಂಶೋಧನೆಗಳಿಗೆ ಇವು ಸ್ಫೂರ್ತಿ.
5. ಇವು ಪರಿಸರದ ಸ್ಥಿತಿ ಸೂಚಕ (ಎಕೊ ಇಂಡಿಕೇಟರ್ಸ್‍)
6. ನಮ್ಮ, ಪಕ್ಷಿಗಳ ಹಾಗೂ ಪರಿಸರದ ನಡುವಿನ ಸಂಪೂರ್ಣು ಬಂಧ ನಮಗಿನ್ನೂ ತಿಳಿದೇ ಇಲ್ಲ.
… ಹೀಗೆ ಅನೇಕ ಕಾರಣಗಳಿವೆ. ಆದರೆ, ನಮಗೆ ಬಹುಮುಖ್ಯ ಕಾರಣ ಅವು ನಮ್ಮ ಸಹಜೀವಿಗಳು ಎಂಬ ನೈತಿಕತೆ ಹಾಗೂ ಪ್ರೀತಿ! ಬನ್ನಿ ನಮ್ಮ ಹಕ್ಕಿಗಳನ್ನು ಪ್ರೀತಿಸೋಣ! ಪ್ರೀತಿಸುವ ಮುನ್ನ ಅವನ್ನು ತಿಳಿಯಬೇಕಲ್ಲವೇ? ಮುಂದಿನ ಸಂಚಿಕೆಯಿಂದ ಅದೇ ಕೆಲಸ. ಕಾಯುವಿರಿ ತಾನೆ?
ನಿಮ್ಮವ – ಕಲ್ಗುಂಡಿ ನವೀನ್

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!