Wednesday, March 3, 2021

ಉದ್ಯಮಕ್ಕಿಲ್ಲ ವಯಸ್ಸಿನ ಹಂಗು

ತಮ್ಮ ಇಳಿವಯಸ್ಸಿನಲ್ಲಿ ಕಿರು ಉದ್ಯಮವೊಂದನ್ನು ಆರಂಭಿಸಿ ಯಶಸ್ವಿಯಾದ ಮಂಗಳೂರಿನ ಸರಸ್ವತಿ ಭಟ್ ಅವರ ಯಶೋಗಾಥೆಯಿದು. ಸ್ಥಳೀಯವಾಗಿ ಸಿಗುವ ವಸ್ತುಗಳನ್ನೇ ಬಳಸಿ ವಿವಿಧ ಬಗೆಯ ಸಂಡಿಗೆಗಳು, ತಂಬುಳಿ ಪುಡಿಗಳನ್ನು, ಉಪ್ಪಿನಕಾಯಿಗಳನ್ನು ತಯಾರಿಸುವುದು ಇವರ ವಿಶೇಷ.  

ಸಾಧಕಿ ಸರಸ್ವತಿ ಭಟ್  

♦ ಸರಯು
newsics.com@gmail.com
 ನು ಗ್ಗೆಸೊಪ್ಪಿನ ಸಂಡಿಗೆ, ಒಂದೆಲಗದ ಸಂಡಿಗೆಯನ್ನೆಲ್ಲಾದರೂ ಕೇಳಿದ್ದೀರಾ? ಬಹು ಅಪರೂಪ ಎನಿಸುವ ಇಂಥ ಸಂಡಿಗೆಗಳನ್ನೂ ಮಾಡಿ ಸೈ ಎನಿಸಿಕೊಂಡವರು ಮಂಗಳೂರಿನ ಸರಸ್ವತಿ ಭಟ್ ಅವರು.
ಸ್ಥಳೀಯವಾಗಿ ಸಿಗುವ ವಸ್ತುಗಳನ್ನೇ ಬಳಸಿ ವಿವಿಧ ಬಗೆಯ ಸಂಡಿಗೆಗಳು, ತಂಬುಳಿ ಪುಡಿಗಳನ್ನು, ಉಪ್ಪಿನ ಕಾಯಿಗಳನ್ನು ತಯಾರಿಸುವುದು ಇವರ ವಿಶೇಷ.
ಈಗ ಇವರು ವಿವಿಧ ಬಗೆಯ ಉಪ್ಪಿನಕಾಯಿಗಳು, ಸಾಂಬಾರು ಪುಡಿಗಳು, ಹಪ್ಪಳ ಸಂಡಿಗೆ, ಉಂಡ್ಲೆಕಾಳುಗಳನ್ನೆಲ್ಲ ತಯಾರಿಸುತ್ತಾರೆ. ಇದರಲ್ಲೇನು ವಿಶೇಷ, ಬಹುತೇಕ ಮಹಿಳೆಯರು ಇಂದು ಈ ಉದ್ಯಮ ಮಾಡುತ್ತಾರೆಂದು ಯೋಚಿಸಬೇಡಿ.
ಸರಸ್ವತಿ ಭಟ್ ಅವರು ವಿಶೇಷ ಯಾಕೆಂದರೆ ಅವರಿಗೀಗ ವಯಸ್ಸು 65. ಆದರೆ ಕುಂದದ ಉತ್ಸಾಹ. ಆಹಾರ ಉದ್ಯಮವನ್ನೇ ತಮ್ಮ ಬದುಕಾಗಿಸಿಕೊಂಡ ಮಂಗಳೂರಿನ ಸರಸ್ವತಿ ಭಟ್ ಅವರ ಉತ್ಸಾಹ, ಹುಮ್ಮಸ್ಸು ಎಂಥವರನ್ನಾದರೂ ಬೆರಗು ಹುಟ್ಟಿಸುವಂಥದ್ದು.
ಹಾಗೆ ನೋಡಿದರೆ ಇವರು ಉದ್ಯಮ ಶುರುಮಾಡಿದ್ದೇ ತಮ್ಮ ಇಳಿವಯಸ್ಸಿನಲ್ಲಿ. ಸಾಮಾನ್ಯವಾಗಿ ಯಾವುದೇ ಉದ್ಯಮ ಪ್ರಾರಂಭಿಸುವುದಿದ್ದರೆ ಬಂಡವಾಳ ಹೇಗೆ ಮುಖ್ಯವಾಗುವುದೋ ಹಾಗೆ ವಯಸ್ಸು ಕೂಡ ಮುಖ್ಯವಾಗುತ್ತದೆ. ಆದರೆ ಇವರಿಗೆ ವಯಸ್ಸಿನ ಯಾವ ಹಂಗೂ ಇಲ್ಲ.
ಮೂಲತಃ ಕುಂದಾಪುರ ತಾಲೂಕಿನ ಬೇಳೂರಿನವರಾದ ಸರಸ್ವತಿ ಭಟ್ ಅವರು ಮದುವೆಯಾಗಿ ಮಂಗಳೂರಿಗೆ ಬಂದರು. ಪತಿ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ವರ್ಷಗಳ ನಂತರ ಪತಿಯ ಅನಾರೋಗ್ಯದಿಂದಾಗಿ ಸರಸ್ವತಿಯವರು ಉದ್ಯೋಗದತ್ತ ಹೊರಳಬೇಕಾಯಿತು. ಮೊದಲು ಎಲ್‍ಐಸಿ ಏಜೆಂಟ್‍ರಾಗಿದ್ದರು. ನಂತರ ಟೆಲಿಫೋನ್ ಬೂತ್ ಅನ್ನು ನಡೆಸುತ್ತಿದ್ದರು. ಮೊಬೈಲ್ ಬಂದಮೇಲೆ ಟೆಲಿಫೋನ್ ಬೂತ್ ನಷ್ಟವುಂಟಾಗತೊಡಗಿ ಅವರು ಬೇರೆ ಉದ್ಯಮದತ್ತ ಯೋಚಿಸತೊಡಗಿದರು. ಅಷ್ಟೊತ್ತಿಗೆ ಅವರಿಗೆ ವಯಸ್ಸು 50 ದಾಟಿತ್ತು. ಆದರೆ ಸ್ವಾಭಿಮಾನದ ಛಲ ಅವರನ್ನು ಆಹಾರ ಉದ್ಯಮದತ್ತ ತಂದುನಿಲ್ಲಿಸಿತು.
ಬಿವಿಟಿಯ ತರಬೇತಿ
ಮೊದಲು ಉಪ್ಪಿನಕಾಯಿ, ಹಪ್ಪಳ, ಸಂಡಿಗೆಯನ್ನಷ್ಟೇ ಮಾಡುತ್ತಿದ್ದರು. ನಂತರ ಸಾಂಬಾರು ಪುಡಿ, ಸಾರಿನ ಪುಡಿ ಹಾಗೂ ಬಿಸಿಬೇಳೆ ಬಾತ್ ಮುಂತಾದ ಪುಡಿಗಳನ್ನು ತಯಾರಿಸುವುದನ್ನು ಕಲಿತರು. ಈಗ ಅವನ್ನೆಲ್ಲ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇವಕ್ಕೆಲ್ಲ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.
ಇದಕ್ಕೆ ಕಾರಣ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‍ನಲ್ಲಿ ಅವರು ಪಡೆದ ತರಬೇತಿ. ಈ ಮೊದಲು ಉಪ್ಪಿನಕಾಯಿ, ಹಪ್ಪಳ ಸಂಡಿಗೆಗಳನ್ನಷ್ಟೇ ಮಾಡುತ್ತಿದ್ದ ಇವರು ನಂತರ ಮಣಿಪಾಲದಲ್ಲಿ ಭಾರತೀಯ ವಿಕಾಸ ಟ್ರಸ್ಟ್‍ನಲ್ಲಿ ಆಹಾರ ಉತ್ಪನ್ನಗಳ ತಯಾರಿಕೆಯ ಕುರಿತು ಏಳೆಂಟು ವರ್ಷಗಳ ಹಿಂದೆಯೇ ತರಬೇತಿ ಪಡೆದರು. ಅದರಲ್ಲಿ ವಾಂಗಿಬಾತ್, ಬಿಸಿಬೇಳೆಬಾತ್, ಪುಳಿಯೋಗರೆ ಮುಂತಾದ ಪುಡಿಗಳನ್ನು ಮಾಡುವುದನ್ನು ಕಲಿತು ಮನೆಯಲ್ಲೇ ಉದ್ಯಮ ಪ್ರಾರಂಭಿಸಿದರು. ಈ ಉದ್ಯಮ ಅವರಲ್ಲಿ ಆತ್ಮವಿಶ್ವಾಸ ತುಂಬಿತು. ಮಂಗಳೂರಿನಲ್ಲೊಂದು ಅಂಗಡಿಯನ್ನೂ ತೆರೆದರು.
ಅರಸಿ ಬಂದ ಪ್ರಶಸ್ತಿ
ಕಳೆದ ಜನವರಿಯಲ್ಲಿ ಮಣಿಪಾಲದ ಪವರ್ ಸಂಸ್ಥೆ ಆಯೋಜಿಸಿದ್ದ “ವುಮನ್ ಪವರ್ ಪರ್ಬಾ’ದಲ್ಲಿ ಇವರಿಗೆ ಅತ್ಯುತ್ತಮ ಮಹಿಳಾ ಉದ್ಯಮಿ ಎಂದು ಮೊದಲ ಬಹುಮಾನ ದೊರೆಯಿತು. ಈ ಸಂದರ್ಭದಲ್ಲಿ ಸ್ಥಳೀಯ ವಾಹಿನಿಗಳು ಇವರ ಸಂದರ್ಶನ ಮಾಡಿದ್ದಾರೆ. ಬಿವಿಟಿಯಲ್ಲಿ ತರಬೇತಿ ನೀಡಿದ ಲಕ್ಷ್ಮೀ ಮೇಡಂ ಅವರ ಮಾರ್ಗದರ್ಶನವನ್ನು ನಾನ್ಯಾವತ್ತೂ ಮರೆಯುವುದಿಲ್ಲವೆಂದು ಸ್ಮರಿಸುತ್ತಾರೆ ಸರಸ್ವತಿ ಭಟ್ ಅವರು.
ಹೆಸರು ತಂದುಕೊಟ್ಟ ಉಂಡ್ಲಿಕಾ
ಇವರು ತಯಾರಿಸುವ ಹಲಸಿನ ಸೊಳೆಯ ಉಂಡ್ಲಿಕಾ ತುಂಬ ಜನಪ್ರಿಯವಾಯಿತು. ಈ ತಿಂಡಿ ಬಹಳಷ್ಟು ದಿನಗಳ ಕಾಲ ಕೆಡದೆ ಉಳಿಯುವುದು. ಕಳೆದ ಬಾರಿ ಸ್ಥಳೀಯ ಟಿವಿಗಳು, ಪತ್ರಿಕೆಗಳೆಲ್ಲ ಇದರ ಕುರಿತು ಪ್ರಸಾರ ಮಾಡಿದರು. ಅಂದರೆ ಹಲಸಿನ ಸೊಳೆಯನ್ನು ಉಪ್ಪುನೀರಿನಲ್ಲಿಟ್ಟರೆ ವರ್ಷಗಟ್ಟಲೆ ಕೆಡದಂತೆ ಇರುತ್ತದೆ. ಅದರಿಂದ ಇವರು ಉಂಡ್ಲೆಕಾಳು ಅಥವಾ ಉಂಡ್ಲಿಕಾವನ್ನು ತಯಾರಿಸುತ್ತಾರೆ. ಇದು ರುಚಿಕಟ್ಟಾದ ಸ್ನ್ಯಾಕ್ಸ್.
ಹಲಸಿನ ಸೊಳೆಗಳನ್ನು ಉಪ್ಪು ನೀರಿಗೆ ಹಾಕಿಟ್ಟ ಹಲಸಿನ ಸೊಳೆಗಳು ವರ್ಷಾನುಗಟ್ಟಲೆ ಹಾಳಾಗದೆ ಇರುತ್ತವೆ. ಅಂಥ ಸೊಳೆಗಳನ್ನು ತೆಗೆದು ಚೆನ್ನಾಗಿ ತೊಳೆದು ಅದನ್ನು ಕತ್ತಿರಿಸ ರುಬ್ಬಿ ಅದಕ್ಕೆ ಕೊತ್ತಂಬರಿ, ಜೀರಿಗೆ, ಅಚ್ಚಖಾರದ ಪುಡಿ, ಕೊಬ್ಬರಿ ತುರಿ ಹಾಕಿ ರುಬ್ಬಿ ಚೆನ್ನಾಗಿ ಸ್ಮಾಶ್ ಮಾಡಿ ನಂತರ ಚಿಕ್ಕಚಿಕ್ಕ ಉಂಡೆ ಕಟ್ಟಿ ಕರಿದರೆ ರುಚಿಕಟ್ಟಾದ ಉಂಡ್ಲೆಕಾಳು ತಯಾರು. ಇದಕ್ಕೆ ತುಂಬ ಬೇಡಿಕೆ ಇದೆ.
ಲಾಭ ತಂದುಕೊಟ್ಟ ಆನ್‍ಲೈನ್ ವ್ಯಾಪಾರ
2020ರಲ್ಲಿ ಬಂದ ಲಾಕ್‍ಡೌನ್‍ನಿಂದಾಗಿ ಸ್ವಲ್ಪ ಹೆದರಿದೆ. ಆದರೆ ಅದಕ್ಕೂ ಇದೇ ‘ಮಹಿಳಾ ಶಕ್ತಿ ಸಂಘದವರು ಆನ್‍ಲೈನ್‍ನಲ್ಲಿ ಮಾರಾಟ ಮಾಡುವುದನ್ನು ಹೇಳಿಕೊಟ್ಟರು. ಇದರಿಂದ ನನಗೆ ತುಂಬ ಪ್ರಯೋಜನವಾಯಿತು. ಈಗ ನನ್ನ ತಿಂಡಿ ಮತ್ತು ಪುಡಿಗಳನ್ನು ದೆಹಲಿ, ಬೆಂಗಳೂರು, ಅಮೆರಿಕದವರೆಗೂ ತೆಗೆದುಕೊಳ್ಳುತ್ತಾರೆ. ಅಲ್ಲಿಂದೆಲ್ಲ ಪ್ರಶಂಸೆಗಳು ಬಂದಿವೆ ಎಂದು ಉತ್ಸಾಹದಿಂದ ಹೇಳುತ್ತಾರೆ.
ಉಡುಪಿ, ಮಣಿಪಾಲದ ಸುತ್ತಮುತ್ತ ಯಾವುದೇ ಮೇಳಗಳಿರಲಿ ಅಲ್ಲೊಂದು ಸರಸ್ವತಿಯವರ ಸ್ಟಾಲ್ ಇದ್ದೇ ಇರುತ್ತದೆ. ಸುಮಾರು ಜನ ಕೇಳುತ್ತಾರೆ “ಮೇಡಂ, ಈ ಇಳಿವಯಸ್ಸಿನಲ್ಲಿ ನಿಮಗೆ ಇಷ್ಟು ಉತ್ಸಾಹವಿದೆಯೆಲ್ಲ ಹೇಗೆ’ ಎಂದು. ಏನು ಹೇಳೋದು. ನನಗದೆಲ್ಲ ಗೊತ್ತಿಲ್ಲ. ನನ್ನ ಪಾಡಿಗೆ ಕೆಲಸ ಮಾಡುತ್ತಿರುತ್ತೇನೆ. ಹಿತಮಿತವಾದ ಆಹಾರ ಮತ್ತು ಕೆಲಸ ಇವೇ ಇದ್ದಿರಬಹುದು’ ಎಂದು ಹೇಳುತ್ತಾರೆ ಸರಸ್ವತಿ ಅವರು.
ಅಂದರೆ ಒಂದು ಉದ್ಯಮ ಅವರಲ್ಲಿ ತಂದುಕೊಟ್ಟ ಆತ್ಮವಿಶ್ವಾಸ ದೊಡ್ಡದು. ಹಾಗೆ ನೋಡಿದರೆ ಅವರೊಳಗೊಬ್ಬ ಉದ್ಯಮಶೀಲ ಮಹಿಳೆ ರೂಪುಗೊಳ್ಳುವ ಹಿಂದೊಂದು ಕತೆ ಇದೆ.
ಕಾರಣಾಂತರಗಳಿಂದ ನೆಂಟರೊಬ್ಬರ ಮಗುವನ್ನು ನೋಡಿಕೊಳ್ಳಲು ಅವರು ದುಬೈಗೆ ಹೋಗಬೇಕಾಗಿ ಬಂತು. ಆಗ ಸರಸ್ವತಿಯವರಿಗೆ ವಯಸ್ಸು 45ರ ಆಸುಪಾಸು. ನೆಂಟರ ಮಗು ಸ್ವಲ್ಪ ದೊಡ್ಡದಾದ ಮೇಲೆ ಭಾರತಕ್ಕೆ ವಾಪಸು ಬಂದರು. ಹಾಗೆ ಬಂದವರಿಗನಿಸಿದ್ದು, ಯಾಕೆ ನಾನೂ ಉದ್ಯಮ ಮಾಡಬಾರದು ಎಂದು. ಅಷ್ಟೊತ್ತಿಗೆ ಅವರ ಪತಿಯೂ ಅನಾರೋಗ್ಯಕ್ಕೆ ತುತ್ತಾಗಿ ಇವರಿಗೆ ಸ್ವ-ಉದ್ಯೋಗ ಮಾಡುವುದು ಇವರಿಗೆ ಅನಿವಾರ್ಯವಾಯಿತು. ಹಾಗಾಗಿಯೇ ಅವರು ಮೊದಲು ಎಲ್‍ಐಸಿ ಏಜೆಂಟ್‍ರಾಗಿದ್ದರು, ನಂತರ ಟೆಲಿಫೋನ್ ಬೂತ್ ಪ್ರಾರಂಭಿಸಿದರು. ಅದು ನಷ್ಟವಾದ ಮೇಲೆ ಶುರುಮಾಡಿದ್ದೇ ಈ ಆಹಾರೋತ್ಪನ್ನಗಳ ತಯಾರಿಕೆ.
ಪಿಯುಸಿ ವರೆಗೆ ಮಾತ್ರ ಓದಿದ್ದ ಸರಸ್ವತಿಯವರು ತುಂಬ ಜಾಣ್ಮೆಯಿಂದ ಉದ್ಯಮ ನಡೆಸುತ್ತಾರೆ. ಸಾಲ ಮಾಡದೇ ತಮ್ಮಲ್ಲಿರುವಷ್ಟೇ ಹಣವನ್ನು ಬಳಸುತ್ತಾರೆ. “ನಾನು ನನ್ನಲ್ಲಿದ್ದ ಹಣದಲ್ಲೇ ಪುಡಿಗಳನ್ನು ಮಾಡಿ ಮಾರಾಟಮಾಡುತ್ತೇನೆ. ಮಾರಿ ಬಂದ ಹಣದಲ್ಲಿ ಮತ್ತೆ ಪುಡಿಗಳನ್ನು ತಯಾರಿಸುತ್ತೇನೆ. ಹಾಗಾಗಿ ನನಗೆ ಬಂಡವಾಳ ಹೂಡಬೇಕು, ಸಾಲಬೇಕು ಎಂದೆನಿಸಲಿಲ್ಲ. ಆದಾಯಕ್ಕೆ ಯಾವುದೇ ಕೊರತೆಯುಂಟಾಗಿಲ್ಲ ಎನ್ನುವ ಸರಸ್ವತಿ ನಿಜಕ್ಕೂ ಮತ್ತೊಬ್ಬರಿಗೆ ಮಾದರಿಯಾಗುವ ವ್ಯಕ್ತಿತ್ವ.
ಯಾರೂ ಕೂಡ ಯಾರನ್ನೂ ಡಿಪೆಂಡ್ ಆಗ ಅವಶ್ಯಕತೆ ಇಲ್ಲ. ನಮಗೆ ನಾವೇ ಅಂದುಕೊಂಡು ಮುನ್ನಡೆಯಬೇಕು ಎನ್ನುವ ಸರಸ್ವತಿಯವರು ಯಾವುದೇ ಕಾರಣಕ್ಕೂ ಸಾಲ ಮಾಡಿಕೊಳ್ಳಬೇಡಿ. ಇರುವಷ್ಟರಲ್ಲೇ ಉದ್ಯಮ ಮಾಡಿ ಎಂದು ಹೊಸತಾಗಿ ಉದ್ಯಮ ಶುರುಮಾಡುವವರಿಗೆ ಇವರ ಕಿವಿಮಾತು.

ತಮ್ಮ ಇಳಿವಯಸ್ಸಿನಲ್ಲಿ ಕಿರು ಉದ್ಯಮವೊಂದನ್ನು ಆರಂಭಿಸಿ ಯಶಸ್ವಿಯಾದ ಮಂಗಳೂರಿನ ಸರಸ್ವತಿ ಭಟ್ ಅವರ ಯಶೋಗಾಥೆಯಿದು. ಸ್ಥಳೀಯವಾಗಿ ಸಿಗುವ ವಸ್ತುಗಳನ್ನೇ ಬಳಸಿ ವಿವಿಧ ಬಗೆಯ ಸಂಡಿಗೆಗಳು, ತಂಬುಳಿ ಪುಡಿಗಳನ್ನು, ಉಪ್ಪಿನಕಾಯಿಗಳನ್ನು ತಯಾರಿಸುವುದು ಇವರ ವಿಶೇಷ.  ♦ ಸಾಧಕಿ ಸರಸ್ವತಿ ಭಟ್  ♦ ಸರಯು
newsics.com@gmail.com
 ನು ಗ್ಗೆಸೊಪ್ಪಿನ ಸಂಡಿಗೆ, ಒಂದೆಲಗದ ಸಂಡಿಗೆಯನ್ನೆಲ್ಲಾದರೂ ಕೇಳಿದ್ದೀರಾ? ಬಹು ಅಪರೂಪ ಎನಿಸುವ ಇಂಥ ಸಂಡಿಗೆಗಳನ್ನೂ ಮಾಡಿ ಸೈ ಎನಿಸಿಕೊಂಡವರು ಮಂಗಳೂರಿನ ಸರಸ್ವತಿ ಭಟ್ ಅವರು.
ಸ್ಥಳೀಯವಾಗಿ ಸಿಗುವ ವಸ್ತುಗಳನ್ನೇ ಬಳಸಿ ವಿವಿಧ ಬಗೆಯ ಸಂಡಿಗೆಗಳು, ತಂಬುಳಿ ಪುಡಿಗಳನ್ನು, ಉಪ್ಪಿನ ಕಾಯಿಗಳನ್ನು ತಯಾರಿಸುವುದು ಇವರ ವಿಶೇಷ.
ಈಗ ಇವರು ವಿವಿಧ ಬಗೆಯ ಉಪ್ಪಿನಕಾಯಿಗಳು, ಸಾಂಬಾರು ಪುಡಿಗಳು, ಹಪ್ಪಳ ಸಂಡಿಗೆ, ಉಂಡ್ಲೆಕಾಳುಗಳನ್ನೆಲ್ಲ ತಯಾರಿಸುತ್ತಾರೆ. ಇದರಲ್ಲೇನು ವಿಶೇಷ, ಬಹುತೇಕ ಮಹಿಳೆಯರು ಇಂದು ಈ ಉದ್ಯಮ ಮಾಡುತ್ತಾರೆಂದು ಯೋಚಿಸಬೇಡಿ.
ಸರಸ್ವತಿ ಭಟ್ ಅವರು ವಿಶೇಷ ಯಾಕೆಂದರೆ ಅವರಿಗೀಗ ವಯಸ್ಸು 65. ಆದರೆ ಕುಂದದ ಉತ್ಸಾಹ. ಆಹಾರ ಉದ್ಯಮವನ್ನೇ ತಮ್ಮ ಬದುಕಾಗಿಸಿಕೊಂಡ ಮಂಗಳೂರಿನ ಸರಸ್ವತಿ ಭಟ್ ಅವರ ಉತ್ಸಾಹ, ಹುಮ್ಮಸ್ಸು ಎಂಥವರನ್ನಾದರೂ ಬೆರಗು ಹುಟ್ಟಿಸುವಂಥದ್ದು.
ಹಾಗೆ ನೋಡಿದರೆ ಇವರು ಉದ್ಯಮ ಶುರುಮಾಡಿದ್ದೇ ತಮ್ಮ ಇಳಿವಯಸ್ಸಿನಲ್ಲಿ. ಸಾಮಾನ್ಯವಾಗಿ ಯಾವುದೇ ಉದ್ಯಮ ಪ್ರಾರಂಭಿಸುವುದಿದ್ದರೆ ಬಂಡವಾಳ ಹೇಗೆ ಮುಖ್ಯವಾಗುವುದೋ ಹಾಗೆ ವಯಸ್ಸು ಕೂಡ ಮುಖ್ಯವಾಗುತ್ತದೆ. ಆದರೆ ಇವರಿಗೆ ವಯಸ್ಸಿನ ಯಾವ ಹಂಗೂ ಇಲ್ಲ.
ಮೂಲತಃ ಕುಂದಾಪುರ ತಾಲೂಕಿನ ಬೇಳೂರಿನವರಾದ ಸರಸ್ವತಿ ಭಟ್ ಅವರು ಮದುವೆಯಾಗಿ ಮಂಗಳೂರಿಗೆ ಬಂದರು. ಪತಿ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ವರ್ಷಗಳ ನಂತರ ಪತಿಯ ಅನಾರೋಗ್ಯದಿಂದಾಗಿ ಸರಸ್ವತಿಯವರು ಉದ್ಯೋಗದತ್ತ ಹೊರಳಬೇಕಾಯಿತು. ಮೊದಲು ಎಲ್‍ಐಸಿ ಏಜೆಂಟ್‍ರಾಗಿದ್ದರು. ನಂತರ ಟೆಲಿಫೋನ್ ಬೂತ್ ಅನ್ನು ನಡೆಸುತ್ತಿದ್ದರು. ಮೊಬೈಲ್ ಬಂದಮೇಲೆ ಟೆಲಿಫೋನ್ ಬೂತ್ ನಷ್ಟವುಂಟಾಗತೊಡಗಿ ಅವರು ಬೇರೆ ಉದ್ಯಮದತ್ತ ಯೋಚಿಸತೊಡಗಿದರು. ಅಷ್ಟೊತ್ತಿಗೆ ಅವರಿಗೆ ವಯಸ್ಸು 50 ದಾಟಿತ್ತು. ಆದರೆ ಸ್ವಾಭಿಮಾನದ ಛಲ ಅವರನ್ನು ಆಹಾರ ಉದ್ಯಮದತ್ತ ತಂದುನಿಲ್ಲಿಸಿತು.
ಬಿವಿಟಿಯ ತರಬೇತಿ
ಮೊದಲು ಉಪ್ಪಿನಕಾಯಿ, ಹಪ್ಪಳ, ಸಂಡಿಗೆಯನ್ನಷ್ಟೇ ಮಾಡುತ್ತಿದ್ದರು. ನಂತರ ಸಾಂಬಾರು ಪುಡಿ, ಸಾರಿನ ಪುಡಿ ಹಾಗೂ ಬಿಸಿಬೇಳೆ ಬಾತ್ ಮುಂತಾದ ಪುಡಿಗಳನ್ನು ತಯಾರಿಸುವುದನ್ನು ಕಲಿತರು. ಈಗ ಅವನ್ನೆಲ್ಲ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇವಕ್ಕೆಲ್ಲ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.
ಇದಕ್ಕೆ ಕಾರಣ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‍ನಲ್ಲಿ ಅವರು ಪಡೆದ ತರಬೇತಿ. ಈ ಮೊದಲು ಉಪ್ಪಿನಕಾಯಿ, ಹಪ್ಪಳ ಸಂಡಿಗೆಗಳನ್ನಷ್ಟೇ ಮಾಡುತ್ತಿದ್ದ ಇವರು ನಂತರ ಮಣಿಪಾಲದಲ್ಲಿ ಭಾರತೀಯ ವಿಕಾಸ ಟ್ರಸ್ಟ್‍ನಲ್ಲಿ ಆಹಾರ ಉತ್ಪನ್ನಗಳ ತಯಾರಿಕೆಯ ಕುರಿತು ಏಳೆಂಟು ವರ್ಷಗಳ ಹಿಂದೆಯೇ ತರಬೇತಿ ಪಡೆದರು. ಅದರಲ್ಲಿ ವಾಂಗಿಬಾತ್, ಬಿಸಿಬೇಳೆ ಬಾತ್, ಪುಳಿಯೋಗರೆ ಮುಂತಾದ ಪುಡಿಗಳನ್ನು ಮಾಡುವುದನ್ನು ಕಲಿತು ಮನೆಯಲ್ಲೇ ಉದ್ಯಮ ಪ್ರಾರಂಭಿಸಿದರು. ಈ ಉದ್ಯಮ ಅವರಲ್ಲಿ ಆತ್ಮವಿಶ್ವಾಸ ತುಂಬಿತು. ಮಂಗಳೂರಿನಲ್ಲೊಂದು ಅಂಗಡಿಯನ್ನೂ ತೆರೆದರು.
ಅರಸಿ ಬಂದ ಪ್ರಶಸ್ತಿ
ಕಳೆದ ಜನವರಿಯಲ್ಲಿ ಮಣಿಪಾಲದ ಪವರ್ ಸಂಸ್ಥೆ ಆಯೋಜಿಸಿದ್ದ “ವುಮನ್ ಪವರ್ ಪರ್ಬಾ’ದಲ್ಲಿ ಇವರಿಗೆ ಅತ್ಯುತ್ತಮ ಮಹಿಳಾ ಉದ್ಯಮಿ ಎಂದು ಮೊದಲ ಬಹುಮಾನ ದೊರೆಯಿತು. ಈ ಸಂದರ್ಭದಲ್ಲಿ ಸ್ಥಳೀಯ ವಾಹಿನಿಗಳು ಇವರ ಸಂದರ್ಶನ ಮಾಡಿದ್ದಾರೆ. ಬಿವಿಟಿಯಲ್ಲಿ ತರಬೇತಿ ನೀಡಿದ ಲಕ್ಷ್ಮೀ ಮೇಡಂ ಅವರ ಮಾರ್ಗದರ್ಶನವನ್ನು ನಾನ್ಯಾವತ್ತೂ ಮರೆಯುವುದಿಲ್ಲವೆಂದು ಸ್ಮರಿಸುತ್ತಾರೆ ಸರಸ್ವತಿ ಭಟ್ ಅವರು.
ಹೆಸರು ತಂದುಕೊಟ್ಟ ಉಂಡ್ಲಿಕಾ
ಇವರು ತಯಾರಿಸುವ ಹಲಸಿನ ಸೊಳೆಯ ಉಂಡ್ಲಿಕಾ ತುಂಬ ಜನಪ್ರಿಯವಾಯಿತು. ಈ ತಿಂಡಿ ಬಹಳಷ್ಟು ದಿನಗಳ ಕಾಲ ಕೆಡದೆ ಉಳಿಯುವುದು. ಕಳೆದ ಬಾರಿ ಸ್ಥಳೀಯ ಟಿವಿಗಳು, ಪತ್ರಿಕೆಗಳೆಲ್ಲ ಇದರ ಕುರಿತು ಪ್ರಸಾರ ಮಾಡಿದರು. ಅಂದರೆ ಹಲಸಿನ ಸೊಳೆಯನ್ನು ಉಪ್ಪುನೀರಿನಲ್ಲಿಟ್ಟರೆ ವರ್ಷಗಟ್ಟಲೆ ಕೆಡದಂತೆ ಇರುತ್ತದೆ. ಅದರಿಂದ ಇವರು ಉಂಡ್ಲೆಕಾಳು ಅಥವಾ ಉಂಡ್ಲಿಕಾವನ್ನು ತಯಾರಿಸುತ್ತಾರೆ. ಇದು ರುಚಿಕಟ್ಟಾದ ಸ್ನ್ಯಾಕ್ಸ್.
ಹಲಸಿನ ಸೊಳೆಗಳನ್ನು ಉಪ್ಪು ನೀರಿಗೆ ಹಾಕಿಟ್ಟ ಹಲಸಿನ ಸೊಳೆಗಳು ವರ್ಷಾನುಗಟ್ಟಲೆ ಹಾಳಾಗದೆ ಇರುತ್ತವೆ. ಅಂಥ ಸೊಳೆಗಳನ್ನು ತೆಗೆದು ಚೆನ್ನಾಗಿ ತೊಳೆದು ಅದನ್ನು ಕತ್ತಿರಿಸ ರುಬ್ಬಿ ಅದಕ್ಕೆ ಕೊತ್ತಂಬರಿ, ಜೀರಿಗೆ, ಅಚ್ಚಖಾರದ ಪುಡಿ, ಕೊಬ್ಬರಿ ತುರಿ ಹಾಕಿ ರುಬ್ಬಿ ಚೆನ್ನಾಗಿ ಸ್ಮಾಶ್ ಮಾಡಿ ನಂತರ ಚಿಕ್ಕಚಿಕ್ಕ ಉಂಡೆ ಕಟ್ಟಿ ಕರಿದರೆ ರುಚಿಕಟ್ಟಾದ ಉಂಡ್ಲೆಕಾಳು ತಯಾರು. ಇದಕ್ಕೆ ತುಂಬ ಬೇಡಿಕೆ ಇದೆ.
ಲಾಭ ತಂದುಕೊಟ್ಟ ಆನ್‍ಲೈನ್ ವ್ಯಾಪಾರ
2020ರಲ್ಲಿ ಬಂದ ಲಾಕ್‍ಡೌನ್‍ನಿಂದಾಗಿ ಸ್ವಲ್ಪ ಹೆದರಿದೆ. ಆದರೆ ಅದಕ್ಕೂ ಇದೇ ‘ಮಹಿಳಾ ಶಕ್ತಿ ಸಂಘದವರು ಆನ್‍ಲೈನ್‍ನಲ್ಲಿ ಮಾರಾಟ ಮಾಡುವುದನ್ನು ಹೇಳಿಕೊಟ್ಟರು. ಇದರಿಂದ ನನಗೆ ತುಂಬ ಪ್ರಯೋಜನವಾಯಿತು. ಈಗ ನನ್ನ ತಿಂಡಿ ಮತ್ತು ಪುಡಿಗಳನ್ನು ದೆಹಲಿ, ಬೆಂಗಳೂರು, ಅಮೆರಿಕದವರೆಗೂ ತೆಗೆದುಕೊಳ್ಳುತ್ತಾರೆ. ಅಲ್ಲಿಂದೆಲ್ಲ ಪ್ರಶಂಸೆಗಳು ಬಂದಿವೆ ಎಂದು ಉತ್ಸಾಹದಿಂದ ಹೇಳುತ್ತಾರೆ.
ಉಡುಪಿ, ಮಣಿಪಾಲದ ಸುತ್ತಮುತ್ತ ಯಾವುದೇ ಮೇಳಗಳಿರಲಿ ಅಲ್ಲೊಂದು ಸರಸ್ವತಿಯವರ ಸ್ಟಾಲ್ ಇದ್ದೇ ಇರುತ್ತದೆ. ಸುಮಾರು ಜನ ಕೇಳುತ್ತಾರೆ “ಮೇಡಂ, ಈ ಇಳಿವಯಸ್ಸಿನಲ್ಲಿ ನಿಮಗೆ ಇಷ್ಟು ಉತ್ಸಾಹವಿದೆಯೆಲ್ಲ ಹೇಗೆ’ ಎಂದು. ಏನು ಹೇಳೋದು. ನನಗದೆಲ್ಲ ಗೊತ್ತಿಲ್ಲ. ನನ್ನ ಪಾಡಿಗೆ ಕೆಲಸ ಮಾಡುತ್ತಿರುತ್ತೇನೆ. ಹಿತಮಿತವಾದ ಆಹಾರ ಮತ್ತು ಕೆಲಸ ಇವೇ ಇದ್ದಿರಬಹುದು’ ಎಂದು ಹೇಳುತ್ತಾರೆ ಸರಸ್ವತಿ ಅವರು.
ಅಂದರೆ ಒಂದು ಉದ್ಯಮ ಅವರಲ್ಲಿ ತಂದುಕೊಟ್ಟ ಆತ್ಮವಿಶ್ವಾಸ ದೊಡ್ಡದು. ಹಾಗೆ ನೋಡಿದರೆ ಅವರೊಳಗೊಬ್ಬ ಉದ್ಯಮಶೀಲ ಮಹಿಳೆ ರೂಪುಗೊಳ್ಳುವ ಹಿಂದೊಂದು ಕತೆ ಇದೆ.
ಕಾರಣಾಂತರಗಳಿಂದ ನೆಂಟರೊಬ್ಬರ ಮಗುವನ್ನು ನೋಡಿಕೊಳ್ಳಲು ಅವರು ದುಬೈಗೆ ಹೋಗಬೇಕಾಗಿ ಬಂತು. ಆಗ ಸರಸ್ವತಿಯವರಿಗೆ ವಯಸ್ಸು 45ರ ಆಸುಪಾಸು. ನೆಂಟರ ಮಗು ಸ್ವಲ್ಪ ದೊಡ್ಡದಾದ ಮೇಲೆ ಭಾರತಕ್ಕೆ ವಾಪಾಸು ಬಂದರು. ಹಾಗೆ ಬಂದವರಿಗನಿಸಿದ್ದು, ಯಾಕೆ ನಾನೂ ಉದ್ಯಮ ಮಾಡಬಾರದು ಎಂದು. ಅಷ್ಟೊತ್ತಿಗೆ ಅವರ ಪತಿಯೂ ಅನಾರೋಗ್ಯಕ್ಕೆ ತುತ್ತಾಗಿ ಇವರಿಗೆ ಸ್ವ-ಉದ್ಯೋಗ ಮಾಡುವುದು ಇವರಿಗೆ ಅನಿವಾರ್ಯವಾಯಿತು. ಹಾಗಾಗಿಯೇ ಅವರು ಮೊದಲು ಎಲ್‍ಐಸಿ ಏಜೆಂಟ್‍ರಾಗಿದ್ದರು, ನಂತರ ಟೆಲಿಫೋನ್ ಬೂತ್ ಪ್ರಾರಂಭಿಸಿದರು. ಅದು ನಷ್ಟವಾದ ಮೇಲೆ ಶುರುಮಾಡಿದ್ದೇ ಈ ಆಹಾರೋತ್ಪನ್ನಗಳ ತಯಾರಿಕೆ.
ಪಿಯುಸಿ ವರೆಗೆ ಮಾತ್ರ ಓದಿದ್ದ ಸರಸ್ವತಿಯವರು ತುಂಬ ಜಾಣ್ಮೆಯಿಂದ ಉದ್ಯಮ ನಡೆಸುತ್ತಾರೆ. ಸಾಲ ಮಾಡದೇ ತಮ್ಮಲ್ಲಿರುವಷ್ಟೇ ಹಣವನ್ನು ಬಳಸುತ್ತಾರೆ. “ನಾನು ನನ್ನಲ್ಲಿದ್ದ ಹಣದಲ್ಲೇ ಪುಡಿಗಳನ್ನು ಮಾಡಿ ಮಾರಾಟಮಾಡುತ್ತೇನೆ. ಮಾರಿ ಬಂದ ಹಣದಲ್ಲಿ ಮತ್ತೆ ಪುಡಿಗಳನ್ನು ತಯಾರಿಸುತ್ತೇನೆ. ಹಾಗಾಗಿ ನನಗೆ ಬಂಡವಾಳ ಹೂಡಬೇಕು, ಸಾಲಬೇಕು ಎಂದೆನಿಸಲಿಲ್ಲ. ಆದಾಯಕ್ಕೆ ಯಾವುದೇ ಕೊರತೆಯುಂಟಾಗಿಲ್ಲ ಎನ್ನುವ ಸರಸ್ವತಿ ನಿಜಕ್ಕೂ ಮತ್ತೊಬ್ಬರಿಗೆ ಮಾದರಿಯಾಗುವ ವ್ಯಕ್ತಿತ್ವ.
ಯಾರೂ ಕೂಡ ಯಾರನ್ನೂ ಡಿಪೆಂಡ್ ಆಗ ಅವಶ್ಯಕತೆ ಇಲ್ಲ. ನಮಗೆ ನಾವೇ ಅಂದುಕೊಂಡು ಮುನ್ನಡೆಯಬೇಕು ಎನ್ನುವ ಸರಸ್ವತಿಯವರು ಯಾವುದೇ ಕಾರಣಕ್ಕೂ ಸಾಲ ಮಾಡಿಕೊಳ್ಳಬೇಡಿ. ಇರುವಷ್ಟರಲ್ಲೇ ಉದ್ಯಮ ಮಾಡಿ ಎಂದು ಹೊಸತಾಗಿ ಉದ್ಯಮ ಶುರುಮಾಡುವವರಿಗೆ ಇವರ ಕಿವಿಮಾತು.

ಮತ್ತಷ್ಟು ಸುದ್ದಿಗಳು

Latest News

ಇನ್ನು ನಾಲ್ಕೇ ವರ್ಷದಲ್ಲಿ ಅಂತರಿಕ್ಷದಲ್ಲೂ ಐಷಾರಾಮಿ ಹೋಟೆಲ್!

newsics.comವಾಷಿಂಗ್ಟನ್‌: ಇನ್ನು ನಾಲ್ಕೇ ವರ್ಷದಲ್ಲಿ ಅಂತರಿಕ್ಷದಲ್ಲೂ ಇಡ್ಲಿ, ಟೀ, ಕಾಫಿ ಸಿಗಬಹುದು.ಮುಂದಿನ 4 ವರ್ಷದಲ್ಲಿ ಅಂತರಿಕ್ಷದಲ್ಲಿ  “ವೊಯೇಜರ್‌ ಸ್ಟೇಷನ್‌’ ಎಂಬ ವೈಭವೋಪೇತ ಹೋಟೆಲೊಂದು...

ಮನೆಯಲ್ಲೇ ಲಸಿಕೆ ಪಡೆದ ಕೃಷಿ ಸಚಿವ; ವರದಿ ಕೇಳಿದ ಕೇಂದ್ರ

newsics.comನವದೆಹಲಿ: ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಇಂದು(ಮಾ.2) ತಮ್ಮ ಮನೆಯಲ್ಲೇ ಕೊರೋನಾ ಲಸಿಕೆ ಹಾಕಿಸಿಕೊಂಡಿರುವುದು ವಿವಾದಕ್ಕೆಡೆ ಮಾಡಿದೆ.ನರ್ಸ್ಗಳನ್ನು ಮನೆಗೆ ಕರೆಸಿಕೊಂಡು ಸಚಿವ ಬಿ.ಸಿ.ಪಾಟೀಲ್ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದು,...

ದಿನೇಶ್ ಕಲ್ಲಹಳ್ಳಿ ಯಾರೆಂದೇ ತಿಳಿದಿಲ್ಲ, ತನಿಖೆ ನಡೆಯಲಿ-ಸಚಿವ ರಮೇಶ್ ಜಾರಕಿಹೊಳಿ

newsics.com ಬೆಂಗಳೂರು: ಕಳೆದ 21 ವರ್ಷದಿಂದ ನಾನು ಶಾಸಕನಾಗಿ ಆಯ್ಕೆಯಾಗುತ್ತಿದ್ದೇನೆ. ದಿನೇಶ್ ಕಲ್ಲಹಳ್ಳಿಯಾಗಲೀ ಯುವತಿಯಾಗಲಿ ಯಾರೆಂದು ತನಗೆ ತಿಳಿದಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ‌ಹೇಳಿಕೆ ನೀಡಿದ್ದಾರೆ. ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ ವಿಡಿಯೋ...
- Advertisement -
error: Content is protected !!