ಈ ಬಾರಿ ಸಿ ಗುಂಪಿನ ನಿರ್ದೇಶಿಕೆಗಳನ್ನು ನೋಡೋಣ. ಇವು ಸಮಗ್ರ ಯೂರೋಪಿಗೆ ಅನ್ವಯವಾಗುವ ಸಂರಕ್ಷಣಾ ಅವಶ್ಯಕತೆಗಳತ್ತ ಕೇಂದ್ರೀಕೃತವಾಗಿವೆ. ಇದು ಒಟ್ಟು ಆರು ವಿಭಾಗಗಳಾಗಿ ವಿಂಗಡಣೆಯಾಗಿದೆ.
ಪಕ್ಷಿಸಂರಕ್ಷಣೆ -29
♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು ಹಾಗೂ ಅಂಕಣಕಾರರು
newsics.com@gmail.com
www.facebook.com/ksn.bird
ksn.bird@gmail.com
ಪ್ರಮುಖ ಪಕ್ಷಿ ತಾಣಗಳ ನಿರ್ದೇಶಿಕೆಗಳನ್ನು ಕುರಿತಾಗಿ ಯೋಚಿಸುತ್ತಿದ್ದೆವು. ಕಳೆದ ಬಾರಿ ಬಿ ಗುಂಪಿನ. ಈ ಬಾರಿ ಸಿ ಗುಂಪಿನ ನಿರ್ದೇಶಿಕೆಗಳನ್ನು ನೋಡೋಣ. ಇವು ಸಮಗ್ರ ಯೂರೋಪಿಗೆ ಅನ್ವಯವಾಗುವ ಸಂರಕ್ಷಣಾ ಅವಶ್ಯಕತೆಗಳತ್ತ ಕೇಂದ್ರೀಕೃತವಾಗಿದೆ. ಇದು ಒಟ್ಟು ಆರು ವಿಭಾಗಗಳಾಗಿ ವಿಂಗಡೆನೆಯಾಗಿದೆ. ಸಿ1ನಿಂದ ತೊಡಗಿ ಸಿ6ರವರೆಗೆ. ಇಲ್ಲಿಯೂ ಮುಖ್ಯವಾಗುವುದು ಪಕ್ಷಿಗಳ ಸಂರಕ್ಷಣಾ ಸೂತ್ರ.
ಬಿ ವಿಭಾಗದಲ್ಲಿ ಮೂರು ಮುಖ್ಯವಿಭಾಗಗಳಿದ್ದು ವಿಭಾಗಗಳಿದ್ದು ಅವನ್ನು ಸೂಚ್ಯವಾಗಿ ಬಿ1, ಬಿ2, ಮತ್ತು ಬಿ3 ಎಂದು ಗುರುತಿಸಲಾಗುತ್ತದೆ. ಇವುಗಳಲ್ಲಿ ಈ ಎಲ್ಲವೂ ಮತ್ತೆ ವಿಂಗಡನೆಗೆ ಒಳಗಾಗಿ ಬಿ1ಎ, ಬಿ1ಬಿ ಹೀಗೆ ಅಗತ್ಯಾನುಸಾರ ವಿಂಗಡಿಸಲಾಗಿದೆ.
ಸಿ1 ಜಾಗತಿಕ ಮಟ್ಟದಲ್ಲಿ ಸಂರಕ್ಷಣೆಯ ಅಗತ್ಯವಿರುವ ಪ್ರಭೇದಗಳು ಇಲ್ಲಿ ಸೇರುತ್ತವೆ.
ಸಿ2 ಸಮಗ್ರ ಯೂರೋಪಿನ ಮಟ್ಟದಲ್ಲಿ ಕಂಡುಬರುವ ಗಂಡಾಂತರದಂಚಿನಲ್ಲಿರುವ ಹಕ್ಕಿಗಳ ಗುಂಪುಗಳು ಇಲ್ಲಿ ಬರುತ್ತವೆ.
ಸಿ3 ಯೂರೋಪಿನ ಮಟ್ಟದಲ್ಲಿ ಗಂಡಾಂತರಕ್ಕೊಗಾಗಿರದ ಆದರೆ ವಲಸೆ ಬರುವ ಹಕ್ಕಿಗಳ ಗುಂಪುಗಳು ಇಲ್ಲಿ ಬರುತ್ತವೆ.
ಸಿ4 ಬಹುಪ್ರಭೇದಗಳ ದೊಡ್ಡಗುಂಪುಗಳು ಅಂದರೆ ಕನಿಷ್ಠ ಇಪ್ಪತ್ತು ಸಾವಿರ ನೀರಹಕ್ಕಿಗಳು ಅಥವಾ/ಮತ್ತು ಹತ್ತು ಸಾವಿರ ಸಾಗರದ ಹಕ್ಕಿಗಳ ಗುಂಪುಗಳು ಇಲ್ಲಿ ಬರುತ್ತವೆ.
ಸಿ5 ವಲಸೆ ಸಮಯದಲ್ಲಿ ಸಾವಿರ ಸಂಖ್ಯೆಯಲ್ಲಿ ಸಾಗಿಹೋಗುವ ವಿವಿಧ ಪ್ರಭೇದಗಳ ಹಕ್ಕಿಗಳು ಈ ಗುಂಪಿನಲ್ಲಿ ಬರುತ್ತವೆ.
ಸಿ6 ಸಮಗ್ರ ಯೂರೋಪ್‍ಮಟ್ಟದಲ್ಲಿ ಗಂಡಾಂತರಕ್ಕೊಳಗಾದ ಹಕ್ಕಿಗಳ ವಿಂಗಡನೆ ಇದು.
ಇವು ನೀರಸ ಎನಿಸಬಹುದು. ಆದರೆ, ಸಂರಕ್ಷಣೆಗೆ ಬಹಳ ಮುಖ್ಯ. ಮುಂದಿನ ವಾರ ಉದಾಹರಣೆಗಳನ್ನು ಚರ್ಚಿಸುವಾಗ ಇವು ಅರ್ಥವಾಗಿ ಇವುಗಳ ಪ್ರಾಮುಖ್ಯತೆ ಅರಿವಿಗೆ ಬರುತ್ತದೆ.