ಇಂದು ವನ್ಯಜೀವಿಗಳ ಕಳ್ಳಸಾಗಣೆ ಮಾದಕ ವಸ್ತುಗಳ ಕಳ್ಳಸಾಗಣೆಯ ನಂತರದ ಸ್ಥಾನದಲ್ಲಿದೆ ಎಂಬುದನ್ನು ಮರೆಯಬಾರದು. ಹಾಗಾಗಿ, ಅಂತಾರಾಷ್ಟ್ರೀಯ ಸಂರಕ್ಷಣಾ ಪ್ರಯತ್ನಗಳು ಹಾಗೂ ಕಾನೂನಿನ ಅಂಶಗಳಿರುವ ಅಂತಾರಾಷ್ಟ್ರೀಯ ಒಪ್ಪಂದಗಳು ಪ್ರಮುಖ ಸಂರಕ್ಷಣಾ ಸಾಧನಗಳಾಗುತ್ತವೆ.
ಪಕ್ಷಿ ಸಂರಕ್ಷಣೆ 30
♦ ಕಲ್ಗುಂಡಿ ನವೀನ್
ಅಂಕಣಕಾರರು ಮತ್ತು ವನ್ಯಜೀವಿ ತಜ್ಞರು
newsics.com@gmail.com
ksn.bird@gmail.com
ಪಕ್ಷಿ ಸಂಕುಲಗಳನ್ನು ಸಂರಕ್ಷಿಸಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಇದರ ಹಂದರವೆಂದರೆ ಮೊಟ್ಟಮೊದಲನೆಯದಾಗಿ ಸಂರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ, ಎರಡನೆಯದು ಅಂತಾರಾಷ್ಟ್ರೀಯ ಒಪ್ಪಂದಗಳು, ಮೂರನೆಯದು ಕಳ್ಳ ಬೇಟೆ ಹಾಗೂ ಪ್ರಾಣಿಸಸ್ಯ ಮೂಲದ ವಸ್ತುಗಳ ಸಾಗಣೆ ನಿರ್ಬಂಧಿಸುವ ಕಾನೂನಿನ ಬೆಂಬಲವಿರುವಂತಹ ಒಪ್ಪಂದಗಳು. ಇನ್ನು ಪ್ರತೀ ರಾಷ್ಟ್ರದಲ್ಲಿಯೂ ಇರುವಂತಹ ಸ್ಥಳೀಯ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣಾ ಕಾನೂನುಗಳು ಸಂರಕ್ಷಣೆಯ ಬೆನ್ನೆಲುಬು ಎಂದೇ ಹೇಳಬೇಕು. ಇವುಗಳು ಅನುಷ್ಢಾನವಾಗದಿದ್ದಲ್ಲಿ ಸಂರಕ್ಷಣೆಯ ಬೆನ್ನೆಲುಬೇ ಮುರಿದಂತೆ.
ಇನ್ನು ಅನುಷ್ಠಾನಕ್ಕೆ ಇರುವ ತೊಂದರೆಗಳಲ್ಲಿ ಬಹುದೊಡ್ಡದು ಎಂದರೆ ಅಂತರಾಷ್ಟ್ರೀಯವಾಗಿ ಹಬ್ಬಿರುವ ಮಾಫಿಯಾದ ಜಾಲ. ಇದನ್ನು ಮಾಫಿಯಾ ಎಂದೇ ಅರ್ಥಮಾಡಿಕೊಳ್ಳಬೇಕು. ಮುಗ್ಧವಾಗಿ ವಿಷಯ ಅರಿಯದವರು ಎನ್ನಲಾಗದು.
ಇಂದು ವನ್ಯಜೀವಿಗಳ ಕಳ್ಳಸಾಗಣೆ ಮಾದಕ ವಸ್ತುಗಳ ಕಳ್ಳಸಾಗಣೆಯ ನಂತರದ ಸ್ಥಾನದಲ್ಲಿದೆ ಎಂಬುದನ್ನು ಮರೆಯಬಾರದು. ಹಾಗಾಗಿ, ಅಂತಾರಾಷ್ಟ್ರೀಯ ಸಂರಕ್ಷಣಾ ಪ್ರಯತ್ನಗಳು ಹಾಗೂ ಕಾನೂನಿನ ಅಂಶಗಳಿರುವ ಅಂತಾರಾಷ್ಟ್ರೀಯ ಒಪ್ಪಂದಗಳು ಪ್ರಮುಖ ಸಂರಕ್ಷಣಾ ಸಾಧನಗಳಾಗುತ್ತವೆ.
ಶಿಕ್ಷಣ, ಜನರಲ್ಲಿ ಅರಿವು ಮೂಡಿಸುವುದು ಹಾಗೂ ನಮ್ಮ ಸಂಸ್ಕೃತಿಯ ಅಂಶಗಳು ಪ್ರಧಾನ ಪಾತ್ರವಹಿಸಬೇಕಾದರೆ ನಾವೆಲ್ಲರೂ ಜಾಗೃತರಾಗಬೇಕಾಗುತ್ತದೆ.
ಬನ್ನಿ ಜಾಗೃತಿಯ ಹಾದಿಯಲ್ಲಿ ಮುನ್ನಡೆಯೋಣ!