Monday, March 1, 2021

ಪ್ರೇಮಿಗಳ ವಾರದ ಒಳಹೊಕ್ಕು…

ಪ್ರೀತಿ ನೆನಪುಗಳ ಕಣಜ. ಮೊಗೆದಷ್ಟೂ ಉಕ್ಕುವ ಚಿಲುಮೆ. ಉತ್ಸಾಹದ-ಉಲ್ಲಾಸದ ಬುಗ್ಗೆ. ಪ್ರೀತಿಗೆ ರೀತಿಯಿದೆ, ರಿವಾಜಿದೆ. ಪ್ರೀತಿಯ ಮೋಡಿಯೇ ಅಂತಹುದು. ನಮ್ಮ ಆಚರಣೆ ಬ್ರಿಟಿಷ್ ಸಂಸ್ಕೃತಿಯ ಪ್ರತಿಬಿಂಬವಾದರೂ ಭಾರತೀಯ ಪುರಾಣಗಳಲ್ಲೂ, ಮಹಾಕಾವ್ಯಗಳಲ್ಲೂ ಪ್ರೀತಿಗೆ ಅದರದೇ ವ್ಯಾಖ್ಯಾನವಿದೆ, ಆದ್ಯತೆಯ ಸ್ಥಾನವಿದೆ. ಪ್ರೇಮಿಗಳಿಗೆ ನಿತ್ಯವೂ ಪ್ರೇಮಿಗಳ ದಿನವೇ. ಆದರೂ ಆಚರಣೆಯ ಸುತ್ತ ಒಂದು ಚಿತ್ತ.

     ವ್ಯಾಲಂಟೈನ್ಸ್ ಡೇ ವಿಶೇಷ     

♦ ಪವಿತ್ರಾ ಜಿಗಳೆಮನೆ
ಪತ್ರಿಕೋದ್ಯಮ ವಿದ್ಯಾರ್ಥಿನಿ, ಪುತ್ತೂರು
newsics.com@gmail.com


 ವ್ಯಾ ಖ್ಯಾನಕ್ಕೆ ನಿಲುಕದ, ಸಿಕ್ಕರೂ ಅರ್ಥವಾಗದ, ಅರ್ಥವಾದರೂ ಮಾತಲಿ- ಮೌನದಲಿ ಬಣ್ಣಿಸಲಾಗದ, ಆಕಾಶದಷ್ಟು ಎತ್ತರದ, ಪಾತಾಳದಷ್ಟು ಆಳದಲ್ಲಿರುವುದೆಂದರೆ ಅದು ಪ್ರೀತಿ. ಪ್ರೀತಿಯ ಮೋಡಿಯೇ ಅಂತಹುದು. ಇದರ ಸಮ್ಮೋಹಕ್ಕೆ ಸಿಲುಕದವರಾರು? ಮನುಜರಷ್ಟೇ ಅಲ್ಲ, ಜಗದ ಪ್ರತಿ ಜೀವಿಯೂ ಇದರ ವಶವೇ.
ಪ್ರತಿಯೊಬ್ಬರ ಪ್ರೀತಿಗೆ ಅವರದೇ ಆದ ಭಾಷೆಯಿದೆ, ರೀತಿಯಿದೆ. ಪ್ರೀತಿ ಅಳಿಸಬಲ್ಲದು, ಆಳಿಸಬಲ್ಲದು. ನಗಿಸಬಲ್ಲದು,
ನಿರ್ಲಿಪ್ತತೆಯನ್ನೂ ತರಬಲ್ಲದು. ಪ್ರೀತಿಯ ಶಕ್ತಿಯೇ ಅಂತಹುದು. ಪ್ರೀತಿಯ ಪದ ಕೇಳಿದಾಕ್ಷಣ ನಲ್ಲೆಯ ನಿರ್ವ್ಯಾಜ ಪ್ರೀತಿಯನ್ನು ನೆನೆದು ಕಣ್ಣೀರಾಗಬಹುದು. ಪ್ರೀತಿಯೇ ಹಾಗೆ, ಬೆರಳ ತುದಿಗಂಟಿದ ಜೇನಿನಂತಹ ಮಧುರ ಭಾವ. ಎದೆಯಲ್ಲಿದ್ದ ಭಾವನೆಯ ಅಲೆಯಲ್ಲಿ ಕಳೆದುಹೋಗಬೇಕೆಂಬ ಅತಿಶಯದ ಬಯಕೆ. ಪ್ರೀತಿ ಸಾರ್ವಕಾಲಿಕ, ಆದರೂ ಅದಕ್ಕೊಂದು ದಿನವೆಂದು ಮನುಜ ಜಗತ್ತು ಸಂಭ್ರಮಿಸುತ್ತದೆ. ಅದೇ ಫೆ.14 ವ್ಯಾಲಂಟೈನ್ಸ್ ಡೇ ಅರ್ಥಾತ್ ಪ್ರೇಮಿಗಳ ದಿನ.
ಈ ದಿನ ಹುಟ್ಟಿಕೊಂಡಿದ್ದು ವ್ಯಾಲಂಟೈನ್ ಎಂಬ ಸಂತನಿಂದ. ಕ್ರಿ.ಶ 270ರಲ್ಲಿ ರೋಮ್ ಸಾಮ್ರಾಜ್ಯವನ್ನು 2ನೇ ಕ್ಲಾಡಿಯಸ್ ಎಂಬ ರಾಜ ಆಳುತ್ತಿದ್ದ. ಈತನ ಆಡಳಿತದ ಅವಧಿಯಲ್ಲಿ ತನ್ನ ಸೈನಿಕರಿಗೆ ಮದುವೆಯಾಗಲು ಬಿಡುತ್ತಿರಲಿಲ್ಲ. ಯುದ್ಧದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದರೆ ಅವರು ಮದುವೆಯಾಗಬಾರದು ಎಂಬುದಾಗಿತ್ತು. ಆದರೆ ವ್ಯಾಲಂಟೈನ್ ಎಂಬ ಸಂತನಿಗೆ ರಾಜನ ಈ ಧೋರಣೆ ಹಿಡಿಸದೆ ಸೈನಿಕರನ್ನು ಅವರ ಪ್ರೇಮಿಗಳೊಂದಿಗೆ ಸೇರಿಸುತ್ತಿದ್ದ. ಇದನ್ನು ತಿಳಿದ ರಾಜ ವ್ಯಾಲಂಟೈನ್ ನನ್ನು ಕಾರಾಗೃಹಕ್ಕೆ ತಳ್ಳಿದ. ಆದರೆ ಅಲ್ಲಿ ಜೈಲರ್ ಮಗಳಿಗೆ ವ್ಯಾಲಂಟೈನ್ ಮೇಲೆ ಪ್ರೇಮಾಂಕುರವಾಯಿತು. ಜೈಲಿನಲ್ಲಿರುವವನೊಂದಿಗೆ ಬದುಕಲು ಸಾಧ್ಯವಿಲ್ಲವೆಂದು, ‘ಇಂತಿ ನಿಮ್ಮ ವ್ಯಾಲಂಟೈನ್’ ಎಂದು ಪತ್ರದಲ್ಲಿ ಸಹಿ ಮಾಡಿ ಫೆ.14 ರಂದು ಮರಣ ಹೊಂದುತ್ತಾಳೆ. ಹೀಗಾಗಿ, ಅಂದಿನ ರೋಮ್ ಪಾದ್ರಿಗಳು ಹಲವರ ಪ್ರೀತಿಗೆ ಪ್ರಾಣತ್ಯಾಗ ಮಾಡಿದ ವ್ಯಾಲಂಟೈನ್’ನ ನೆನಪಿಗಾಗಿ ವ್ಯಾಲಂಟೈನ್ಸ್ ಡೇ ಆಚರಣೆಗೆ ತಂದಿದ್ದರು.
ಅಂದಿನಿಂದ ಜಗತ್ತಿನೆಲ್ಲೆಡೆ ಫೆ.14ಕ್ಕೂ 7 ದಿನ ಮೊದಲು ಪ್ರೀತಿಯ ಸಂಕೇತವಾಗಿ ವಿವಿಧ ದಿನಗಳನ್ನು ಆಚರಿಸಲಾಗುತ್ತದೆ. ಫೆ.7ರಿಂದ ಆರಂಭವಾಗುವ ಆಚರಣೆ ಫೆ.14ಕ್ಕೆ ಕೊನೆಗೊಳ್ಳುವುದು.
ಫೆ.7 – ರೋಸ್‍ ಡೇ: ಗುಲಾಬಿ ಪ್ರೀತಿಯ ಸಂಕೇತ. ಮುಳ್ಳು ಮತ್ತು ಹೂವು ಇದರಲ್ಲಿ ಜತೆಗೆ ಇರುತ್ತವೆ. ಅದೇ ರೀತಿ ಜೀವನದ ಕಷ್ಟ ಸುಖಗಳಿಗೆ ಜತೆಯಾಗಿರುತ್ತೇನೆ ಎಂಬ ವಾಗ್ದಾನ ನೀಡುವುದಾಗಿದೆ.
ಫೆ.8 – ಪ್ರಪೋಸ್‍ ಡೇ: ಯಾರಾದರೂ ಇಷ್ಟವಾದರೆ ಮನಸ್ಸಿನಲ್ಲಿಯೇ ಇಟ್ಟುಕೊಂಡು ಮಂಡಿಗೆ ತಿನ್ನುವುದಕ್ಕಿಂತ ಹೇಳಿಕೊಳ್ಳುವುದು ಜಾಣತನ. ಹೀಗಾಗಿ ಉಸಿರಿನ ಕೊನೆ ಕ್ಷಣದವರೆಗೂ ಜತೆಯಾಗಿರುವೆನೆಂದು ಮನದರಸ/ಸಿಗೆ ಪ್ರೀತಿಯ ನಿವೇದನೆ ಮಾಡುವ ದಿನವೇ ಪ್ರಪೋಸ್‍ ಡೇ.
ಫೆ.9 – ಚಾಕೊಲೇಟ್‍ ಡೇ: ಖುಷಿ ಇದ್ದರೆ ಜೀವನ ಸಿಹಿಯಾಗಿರುವುದು. ನಮ್ಮನ್ನು ಪ್ರೀತಿಸುವ, ನಮಗಾಗಿ ತುಡಿಯುವ ಜೀವಗಳಿಗೆ ಚಾಕೋಲೇಟ್ ನೀಡಿ ಖುಷಿಪಡಿಸಿ ಬದುಕನ್ನು ಸಿಹಿಯಾಗಿರುಸುವುದು ಈ ಚಾಕಲೇಟ್ ದಿನದ ಮಹತ್ವ.
ಫೆ.10 – ಟೆಡ್ಡಿ ಡೇ: ಹತ್ತಿಯಿಂದ ಮಾಡಿದ ಪುಟ್ಟ ಬೊಂಬೆ ಪ್ರೀತಿಯ ಸಂಕೇತಗಳ ಸಾಲಿನಲ್ಲಿ ಮೊದಲು ಸಿಗುತ್ತದೆ. ಒಂದು ಟೆಡ್ಡಿ ಬೇರ್ ಭಾವನೆಗಳನ್ನು ವ್ಯಕ್ತಪಡಿಸಲು ನೆರವಾಗುತ್ತದೆ. ಪ್ರೀತಿಯ ಹುಡುಗ/ಗಿಗೆ ಟೆಡ್ಡ್ ಬೇರ್ ನೀಡಿ, ಪ್ರೀತಿಯ ನಿವೇದನೆ ಮಾಡಬಹುದು.
ಫೆ.11: ಪ್ರಾಮಿಸ್‍ ಡೇ: ವ್ಯಾಲಂಟೈನ್ ವಾರದ 5ನೇ ದಿನ ಪ್ರಾಮಿಸ್‍ ಡೇ. ಸುಂದರ ಕನಸುಗಳನ್ನು ಕಟ್ಟಿ ಭವಿಷ್ಯದ ದಿನಗಳನ್ನು ಜತೆಯಾಗಿ ಕಳೆಯುವ ಭರವಸೆಯೊಂದಿಗೆ ಹೆಜ್ಜೆ ಇಡುವ ಮಾತನ್ನು ಗಟ್ಟಿಯಾಗಿಸಿಕೊಳ್ಳುತ್ತಾರೆ.
ಫೆ.12 – ಹಗ್‍ ಡೇ: ಪ್ರೀತಿಯ ಆಲಿಂಗನ ಹೊಸ ಭರವಸೆಯ ಚಿಲುಮೆಗೆ ನಾಂದಿಯಾಗಿದೆ. ಸಂಗಾತಿ ಜತೆಯಿದ್ದರೆ ಜಗತ್ತನ್ನೇ ಗೆದ್ದ ಸಂಭ್ರಮ. ಒಂಟಿ ಬಾಳಿಗೊಂದು ಪೂರ್ಣ ವಿರಾಮವಿಟ್ಟು, ಹೊಸ ಬಾಂಧವ್ಯ ಬೆಳೆಸಿ ಪ್ರೀತಿಯ ತೋಟ ತಯಾರಿಸಲು ಸಾಧ್ಯ. ಇದನ್ನೇ ಹಗ್‍ ಡೇ ಎಂದು ಆಚರಿಸುತ್ತಾರೆ.
ಫೆ.13 – ಕಿಸ್‍ ಡೇ: ಮುತ್ತೇ ಹಾಗೆ. ಮತ್ತೇರಿಸುವ ಸ್ವಭಾವ. ಪ್ರೀತಿಯಿಂದ ಹಣೆಗೊಂದು ಮುತ್ತಿಟ್ಟರೆ ಸುರಕ್ಷೆಯ ಭಾವ ಆವರಿಸುತ್ತದೆ. ವಿದೇಶಗಳಲ್ಲಿ ಮುತ್ತು ನೀಡಿ ಸ್ವಾಗತಿಸುತ್ತಾರೆ. ತನ್ನೊಲುಮೆಯ ಹೃದಯದ ಬಡಿತಕ್ಕೆ ಮುತ್ತು ನೀಡಿ ಆಚರಣೆ ಮಾಡಲಾಗುತ್ತದೆ.
ಫೆ.14 – ಪ್ರೇಮಿಗಳ ದಿನವೆಂದರೆ ಒಂದಷ್ಟು ಹೊಸ ಪ್ರೀತಿ ಚಿಗುರೊಡೆವ ದಿನ, ಒಂದಷ್ಟು ನೆನಪುಗಳ ಸಂತೆಯಲ್ಲಿ ಉಯ್ಯಾಲೆಯಾಡುವ ದಿನ. ಕೈಹಿಡಿದು ಹೆಜ್ಜೆ ಹಾಕಿದ ನೆನಪು, ಸಿಹಿ ಕಹಿಗಳನ್ನು ಹಂಚಿಕೊಂಡ ನೆನಪು, ಜತೆಯಾಗಿ ಕೂಡಿ ನಲಿದ ನೆನಪು, ಮೌನರಾಗಕ್ಕೆ ಮಾತು ಕಲಿಸಿದ ನೆನಪು, ಮುಗ್ಧ, ಸ್ನಿಗ್ಧ ಪ್ರೀತಿಗೆ ಮಮತೆಯ ಲಾಲಿ ಹಾಡಿದ ನೆನಪು… ಹೀಗೆ ಪ್ರೀತಿ ಅನಂತತೆಯ, ಆಪ್ತತೆಯ ಭಾವ.

ಮತ್ತಷ್ಟು ಸುದ್ದಿಗಳು

Latest News

ಕಾಡಾನೆ ಜತೆ ಸೆಲ್ಪಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

newsics.com ರಾಂಚಿ:  ಛತ್ತೀಸ್ ಗಢದಲ್ಲಿ ಕಾಡಾನೆ ಜತೆ ಸೆಲ್ಪಿ ತೆಗೆಯಲು ಯತ್ನಿಸಿದ ಯವಕ ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು  ಮನೋಹರ್ ಪಟೇಲ್ ಎಂದು ಗುರುತಿಸಲಾಗಿದೆ. ರಾಯಗಢ...

ಅಸ್ಸಾಂನಲ್ಲಿ ಅಪಘಾತ: ಮೈಸೂರಿನ ಯೋಧ ಸಾವು

newsics.com ಗುವಾಹಟಿ:  ಅಸ್ಸಾಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೈಸೂರು ಮೂಲದ ಯೋಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.  ಮೃತಪಟ್ಟ ಯೋಧನನ್ನು ತಿ. ನರಸಿಪುರ ತಾಲೂಕಿನ  ಬೆಟ್ಟಹಳ್ಳಿ ಗ್ರಾಮದ ಮೋಹನ್ ಎಂದು ಗುರುತಿಸಲಾಗಿದೆ. ಕಳೆದ 10 ವರ್ಷದಿಂದ ಅವರು...

ತಿರುಪತಿ ಪ್ರವೇಶಿಸದಂತೆ ಚಂದ್ರಬಾಬು ನಾಯ್ಡುಗೆ ನಿರ್ಬಂಧ

newsics.com ತಿರುಪತಿ: ತೆಲುಗು ದೇಶಂ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಜು ಗೆ ತಿರುಪತಿ ಪ್ರವೇಶಿಸದಂತೆ ಪೊಲೀಸರು ತಡೆ ಒಡ್ಡಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಣಿಗುಂಟ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು...
- Advertisement -
error: Content is protected !!