Saturday, November 26, 2022

ಕೊರೋನಾ ಎಫೆಕ್ಟ್: ಬಾಲಕಾರ್ಮಿಕರ ಸಂಖ್ಯೆ ಭಾರೀ ಹೆಚ್ಚಳ

Follow Us

ಇಂದು ವಿಶ್ವ ಬಾಲ ಕಾರ್ಮಿಕ‌ ವಿರೋಧಿ‌ ದಿನ

ಕೊರೋನಾ ಸೋಂಕು ಜನರನ್ನು ಬಡವರನ್ನಾಗಿಸುವ ಜತೆಗೆ, ಮಕ್ಕಳನ್ನು ದುಡಿಯಲು ನೂಕಿದೆ. ಪಾಲಕರ ಬಡತನ, ಶಾಲೆಯಿಲ್ಲದೆ, ಆನ್ ಲೈನ್ ಕ್ಲಾಸುಗಳನ್ನು ಭರಿಸಲು ಸಾಧ್ಯವಾಗದೆ ಮಕ್ಕಳು ಕಾರ್ಮಿಕರಾಗಿದ್ದಾರೆ. ಅವರು ಓದಿನಿಂದ ವಂಚಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಾಜದ್ದು.

* ಎರಡು ದಶಕದಿಂದೀಚೆಗೆ ಇದೇ ಮೊದಲು

– ಸುಮಲಕ್ಷ್ಮೀ
newsics.com@gmail.com

ಕೊರೋನಾ ಸೋಂಕು ಮಾಡಿದ ಆರೋಗ್ಯ ಅವಾಂತರಗಳಿಗೆ ನಾವಿಂದು ಸಾಕ್ಷಿಯಾಗಿದ್ದೇವೆ. ಆರ್ಥಿಕವಾಗಿಯೂ ಸಾಕಷ್ಟು ಕಷ್ಟನಷ್ಟಗಳನ್ನು ಕಂಡಿದ್ದೇವೆ. ಈ ಸಾಂಕ್ರಾಮಿಕದ ಸಾಮಾಜಿಕ ಪರಿಣಾಮಗಳನ್ನು ಇನ್ನಷ್ಟೇ ನೋಡಬೇಕಿದೆ. ಎಚ್ಚರಿಕೆಯ ಗಂಟೆಯೆಂಬಂತೆ, ಕಳೆದ ಎರಡು ದಶಕದಿಂದ ಇತ್ತೀಚೆಗೆ ಇದೇ ಮೊದಲ ಬಾರಿಗೆ ಬಾಲಕಾರ್ಮಿಕರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ.

ಒಂದು ವರ್ಷದಿಂದ ಶಾಲೆಗಳು ತೆರೆದಿಲ್ಲ. ಈ ಬಾರಿಯೂ ಸದ್ಯಕ್ಕೆ ತೆರೆಯುವ ಸೂಚನೆಯಿಲ್ಲ. ಪಾಲಕರ ಆರ್ಥಿಕ ಒತ್ತಡ, ಬಡತನ, ಮಕ್ಕಳು ಮನೆಯಲ್ಲಿದ್ದು ಏನು ಮಾಡುವುದು ಎನ್ನುವ ಕಾರ್ಮಿಕರ ಅಳಲು….ಇವೆಲ್ಲ ಮಕ್ಕಳನ್ನು ಕಾರ್ಮಿಕರಾಗುವಂತೆ ಮಾಡಿವೆ. ಪರಿಣಾಮ, ಎರಡು ದಶಕದಿಂದೀಚೆಗೆ ಬಾಲ ಕಾರ್ಮಿಕರ ಸಂಖ್ಯೆ 16 ಕೋಟಿಯಷ್ಟು ಏರಿಕೆಯಾಗಿದೆ ಎಂದು ಯುನಿಸೆಫ್ ವರದಿ ಹೇಳಿದೆ. ಇಷ್ಟೇ ಅಲ್ಲ, ಸುಮಾರು 90 ಲಕ್ಷದಷ್ಟು ಮಕ್ಕಳು ಬಾಲಕಾರ್ಮಿಕರಾಗುವ ಅಪಾಯದ ಸನಿಹದಲ್ಲಿದ್ದಾರೆ ಎಂದು ಹೇಳಿದೆ.

ಕೊರೋನಾ ಸೋಂಕಿನ ಲಾಕ್ ಡೌನ್ ಪರಿಣಾಮವಾಗಿ, ವಿಶ್ವದಲ್ಲಿ ಬಡತನ ಹೆಚ್ಚಾಗಿದೆ. ಶೇ.1ರಷ್ಟು ಬಡತನ ಏರಿಕೆಯಾಗಿದೆ. ಇದರಿಂದಾಗಿ, ಕನಿಷ್ಠ ಶೇ.0.7ರಷ್ಟು ಬಾಲಕಾರ್ಮಿಕರು ಪ್ರಮಾಣ ಹೆಚ್ಚಾಗಿದೆ.

2000-2016ರ ಅವಧಿಯಲ್ಲಿ ಬಾಲಕಾರ್ಮಿಕರ ಸಂಖ್ಯೆ 9.4 ಕೋಟಿಗೆ ಇಳಿಕೆಯಾಗಿತ್ತು. ಈಗ ಒಂದು ವರ್ಷದಿಂದೀಚೆಗೆ ಅಪಾರ ಏರಿಕೆಯಾಗಿರುವುದು ಕಳವಳದ ಸಂಗತಿ. 5-11 ವರ್ಷದ ಮಕ್ಕಳು ಲಘು ಕಾರ್ಯದಲ್ಲಿ ಬಳಕೆಯಾಗುತ್ತಿದ್ದರೆ, 17 ವರ್ಷದವರನ್ನು ಅಪಾಯಕಾರಿ ಕಾರ್ಯದಲ್ಲಿ ಬಳಕೆ ಮಾಡಲಾಗುತ್ತಿದೆ.

“ಹೊಸ ದಾಖಲೆಗಳು ನಮಗೆ ಎಚ್ಚರಿಕೆಯ ಗಂಟೆಯಾಗಿವೆ. ಹೊಸ ತಲೆಮಾರಿನ ಮಕ್ಕಳು ಕಾರ್ಮಿಕರಾಗುವುದನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ’ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಒಕ್ಕೂಟದ ಪ್ರಧಾನ ನಿರ್ದೇಶಕ ಗೇ ರೈಡರ್ ಹೇಳಿದ್ದಾರೆ.

ನಮ್ಮ ರಾಜಧಾನಿ ಬೆಂಗಳೂರಿಗೆ ಪ್ರತಿ ತಿಂಗಳು ರೈಲ್ವೆ ಮೂಲಕ ಬರುವ ಸುಮಾರು 90-100 ಮಕ್ಕಳನ್ನು ರಕ್ಷಣೆ ಮಾಡಲಾಗುತ್ತಿದೆ. ಇವರನ್ನು ಕಾರ್ಮಿಕರನ್ನಾಗಿಸಲು ಸಾಗಣೆ ಮಾಡಲಾಗುತ್ತಿದೆ ಎನ್ನುತ್ತವೆ ರೈಲ್ವೆ ಮೂಲಗಳು. ಇವರಲ್ಲಿ ಹೆಚ್ಚಿನವರು ಒಡಿಶಾ, ಅಸ್ಸಾಂ ಕಡೆಯಿಂದ ಬರುತ್ತಿದ್ದಾರೆ ಎನ್ನಲಾಗಿದೆ. ಸಾರಿಗೆ ವ್ಯವಸ್ಥೆ ಬಲಗೊಂಡ ಬಳಿಕ ಈ ಕೃತ್ಯ ಇನ್ನಷ್ಟು ಹೆಚ್ಚುವ ಸಾಧ್ಯತೆಯೂ ಇದೆ.

ವರದಿ ಹೇಳಿದ್ದೇನು?

• ಬಾಲ ಕಾರ್ಮಿಕರ ಪೈಕಿ ಕೃಷಿ ಕ್ಷೇತ್ರದಲ್ಲಿ ಶೇ.70ರಷ್ಟು ಮಕ್ಕಳಿದ್ದಾರೆ.

• ಬಾಲ ಕಾರ್ಮಿಕರ ಸಂಖ್ಯೆಯಲ್ಲಿ ಸೇವಾ ಕ್ಷೇತ್ರ ಎರಡನೇ ಹಾಗೂ ಕೈಗಾರಿಕಾ ಕ್ಷೇತ್ರ ಮೂರನೇ ಸ್ಥಾನದಲ್ಲಿದೆ.

• 5-11 ವರ್ಷದ ಶೇ.28ರಷ್ಟು ಮಕ್ಕಳು, 12-14 ವರ್ಷದ ಶೇ.35ರಷ್ಟು ಮಕ್ಕಳು ಶಾಲೆಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ.

• ಗಂಡು ಮಕ್ಕಳೇ ಹೆಚ್ಚು. ಆದರೆ, ಮನೆಕೆಲಸ ಮಾಡುವ ಹುಡುಗಿಯರು ಸಾಕಷ್ಟಿದ್ದಾರೆ. ಇದಕ್ಕೆ ಹೋಲಿಕೆ ಮಾಡಿದರೆ, ಒಟ್ಟಾರೆ ಬಾಲ ಕಾರ್ಮಿಕ ಮಕ್ಕಳಲ್ಲಿ ಲಿಂಗಧಾರಿತ ವ್ಯತ್ಯಾಸ ಕಡಿಮೆ.

ಸಮಾಜದ ಜವಾಬ್ದಾರಿಯೇನು?

ಆರ್ಥಿಕ ಸಮಸ್ಯೆಯ ನಡುವೆಯೂ ಮಕ್ಕಳನ್ನು ಶಾಲೆಗೆ ಕಳಿಸುವುದು ಪಾಲಕರ ಜವಾಬ್ದಾರಿ. ಆದರೆ, ಆರ್ಥಿಕ ಸಂಕಷ್ಟ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿಸಲು ಹೇಸುವುದಿಲ್ಲ. ಹೀಗಾಗಿ, ಬಡತನದಲ್ಲಿರುವ ಕುಟುಂಬಗಳನ್ನು ಗುರುತಿಸುವ ಕೆಲಸವಾಗಬೇಕು. ಅವರಿಗೆ ಸರ್ಕಾರ, ಸಂಘ-ಸಂಸ್ಥೆಗಳು ಒತ್ತಾಸೆಯಾಗಿ ನಿಲ್ಲಬೇಕು. ಬಾಲ ಕಾರ್ಮಿಕರನ್ನು ಎಲ್ಲೆಲ್ಲಿ ಬಳಕೆ ಮಾಡಲಾಗುತ್ತಿದೆ ಎನ್ನುವ ಸಮಗ್ರ ಅಧ್ಯಯನ ನಡೆಯಬೇಕು. ಸ್ಥಳೀಯ ಬಾಲ ಕಾರ್ಮಿಕರನ್ನು ಗುರುತಿಸಿ ಅವರನ್ನು ಶಾಲೆಗೆ ಮರಳುವಂತೆ ಮಾಡುವುದು ಮುಖ್ಯ.

ಮತ್ತಷ್ಟು ಸುದ್ದಿಗಳು

vertical

Latest News

ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ: ನಗ್ನರಾಗಿ ಪೋಸ್ ನೀಡಿದ 2500 ಮಂದಿ

newsics.com ಸಿಡ್ನಿ: ಹೆಚ್ಚುತ್ತಿರುವ ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋಟೋ ಶೂಟ್ ಗೆ 2500 ಮಂದಿ ನಗ್ನರಾಗಿ ಪೋಸ್ ನೀಡಿದ್ದಾರೆ. ಸಿಡ್ನಿಯ ಬೋಂಡಿ...

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ....

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್ ಹೆಸರಿನಲ್ಲಿ ಯುವತಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದ...
- Advertisement -
error: Content is protected !!