Friday, May 20, 2022

ಹಿರಿಯರು ನಮ್ಮ ಆಸ್ತಿ

Follow Us

ಅಕ್ಟೋಬರ್ 1- ವಿಶ್ವ ವೃದ್ಧರ ದಿನ. ಈ ಕೊರೋನಾ ಸಂಕಷ್ಟದ ಸಮಯದಲ್ಲಿ ಎಲ್ಲರಿಗಿಂತ ಅತಿ ಹೆಚ್ಚು ಆತಂಕಕ್ಕೆ ಒಳಗಾದವರು ನಮ್ಮ ಮನೆಯ ಹಿರಿಯರು. ಈ ಸಮಯ ಅವರಲ್ಲಿ ಧೈರ್ಯ ತುಂಬುವ ಕೆಲಸವಾಗಬೇಕಿದೆ.


     ಅಕ್ಟೋಬರ್ 1- ವಿಶ್ವ ವೃದ್ಧರ ದಿನ     

♦ ಪ್ರಮಥ
newsics.com@gmail.com


ಕೊರೋನಾ ಸಾಂಕ್ರಾಮಿಕ ರೋಗ ಬಂದು ಜಗತ್ತೇ ಬದಲಾಗಿದೆ. ಎಲ್ಲರಲ್ಲೂ ಆರೋಗ್ಯದ ಕುರಿತು ಕಾಳಜಿ, ಎಚ್ಚರಿಕೆ ಮೂಡಿದೆ. ಅಷ್ಟೇ ಅಲ್ಲ, ಜೀವನದ ಪರಿಕಲ್ಪನೆಗಳನ್ನೂ ಹಲವಾರು ವಿಧಗಳಲ್ಲಿ ಬದಲು ಮಾಡಿದೆ. ಅದೇ ರೀತಿಯಲ್ಲಿ, ನಾವು ವೃದ್ಧಾಪ್ಯವನ್ನೂ, ವೃದ್ಧರನ್ನೂ ನೋಡುವ ದೃಷ್ಟಿಕೋನವೇನಾದರೂ ಬದಲಾಯಿತೇ? ಕೆಲವೆಡೆ ಬದಲಾಗಿರಬಹುದು. ಆದರೆ, ವ್ಯಾಪಕ ಬದಲಾವಣೆಯೇನೂ ಆಗಿಲ್ಲ.
“ಕೊರೋನಾ ಸೋಂಕು ವಯಸ್ಸಾದವರಿಗೆ ಮಾತ್ರ ಹೆಚ್ಚು ಪರಿಣಾಮ ಬೀರುವುದಂತೆ, ಹಾಗಾದರೆ ಪರವಾಗಿಲ್ಲ’ ಎಂದು ಮನೆಯ ಹಿರಿಯರ ಎದುರೇ ಮಾತನಾಡುವವರಿದ್ದಾರೆ. ಈ ಸಮಯದಲ್ಲಿ ಅವರಿಗೆ ಅದೆಷ್ಟು ಆತಂಕವಾಗಿರಲಿಕ್ಕಿಲ್ಲ? ಅಷ್ಟೇ ಅಲ್ಲ, ಹೊರಗೆ ಓಡಾಡುವ ಕಿರಿಯರಿಂದಾಗಿ ನೋಡನೋಡುತ್ತಲೇ ಹಲವಾರು ಮನೆಗಳಲ್ಲಿ ಹಿರಿಯರು ಕೊರೋನಾ ಸೋಂಕು ತಗುಲಿಸಿಕೊಂಡು ಬಲಿಯಾಗಿದ್ದಾರೆ. ಹೀಗಾಗಿ, ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ.
ಇಂದು ವಿಶ್ವ ವೃದ್ಧರ ದಿನ. ಹಿರಿಯರು ಸಮಾಜಕ್ಕೆ ನೀಡಿರುವ ಸೇವೆಯನ್ನು ಸ್ಮರಿಸಿ, ಗೌರವಿಸುವ ಉದ್ದೇಶದಿಂದ 1990ರಿಂದ ಈ ದಿನವನ್ನು ಆಚರಿಸಲಾಗುತ್ತದೆ.
ಹಿರಿಯರನ್ನು ದೃಷ್ಟಿಯಲ್ಲಿಸಿಕೊಂಡೇ ಈ ಬಾರಿಯ ವಿಶ್ವ ವೃದ್ಧರ ದಿನದ ಥೀಮ್ ಅನ್ನು “ಸಾಂಕ್ರಾಮಿಕ: ವೃದ್ಧಾಪ್ಯವನ್ನು ಮತ್ತು ವಯಸ್ಸಾಗುವಿಕೆಯನ್ನು ನಿಭಾಯಿಸುವ ನಮ್ಮ ಚಿಂತನೆಯನ್ನು ಬದಲಿಸುವುದೇ?’ ಎಂದು ಇರಿಸಲಾಗಿದೆ.
ಹೌದು, ಕೊರೊನಾದಂಥ ಸಾಂಕ್ರಾಮಿಕ ರೋಗ ಬಾಧಿಸಿದ ಬಳಿಕ ವೃದ್ಧರ ಕುರಿತು ನಮ್ಮ ಧೋರಣೆ ಬದಲಾಗಬೇಕಿದೆ. ನಮ್ಮ ಜೀವನಕ್ಕೆ ಅವರ ಕೊಡುಗೆ ಅಪಾರ ಎನ್ನುವುದನ್ನು ಮನಗಂಡು ಅವರನ್ನು ಇನ್ನಷ್ಟು ಕಾಳಜಿಯಿಂದ, ಕಳಕಳಿಯಿಂದ ನೋಡಿಕೊಳ್ಳಬೇಕಿದೆ.
ಆರೋಗ್ಯಕರ ವೃದ್ಧಾಪ್ಯ ದಶಕ
ಹಿರಿಯರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ವಿಶ್ವಸಂಸ್ಥೆ 2020ರಿಂದ 2030ವರೆಗಿನ ದಶಕವನ್ನು “ಆರೋಗ್ಯಕರ ವೃದ್ಧಾಪ್ಯ ದಶಕ’ ಎಂಬುದಾಗಿ ಪರಿಗಣಿಸಿದೆ.
ವೃದ್ಧರು ಹೆಚ್ಚಾಗುತ್ತಿದ್ದಾರೆ…
• ವಿಶ್ವಸಂಸ್ಥೆಯ 2019ರ ದಾಖಲೆಗಳ ಪ್ರಕಾರ ಜಗತ್ತಿನಲ್ಲಿ 65 ವರ್ಷ ಮೀರಿದ 70 ಕೋಟಿ ಜನರಿದ್ದಾರೆ.
• 2050ರೊಳಗೆ ಪ್ರತಿ ಆರು ಜನರಲ್ಲಿ ಒಬ್ಬರು 65 ವರ್ಷ ಮೇಲ್ಪಟ್ಟಿರುತ್ತಾರೆ. ಜಗತ್ತಿನ ಜನಸಂಖ್ಯೆಯ ಶೇ.16ರಷ್ಟು ವೃದ್ಧರೇ ಇರಲಿದ್ದಾರೆ. 2019ರಲ್ಲಿ ಪ್ರತಿ 11 ಜನರಲ್ಲಿ ಒಬ್ಬರು ವೃದ್ಧರಾಗಿದ್ದರು.
• ಭವಿಷ್ಯದಲ್ಲಿ ಶೇ.80ರಷ್ಟು ವೃದ್ಧರು ಆರ್ಥಿಕವಾಗಿ ಹಿಂದುಳಿದ ಹಾಗೂ ಮಧ್ಯಮ ಆದಾಯದ ದೇಶಗಳಲ್ಲಿರುತ್ತಾರೆ.
• ಭಾರತದಲ್ಲಿ 2021ರಲ್ಲಿ 14.3 ಕೋಟಿ ವೃದ್ಧರಿದ್ದರೆ, 2026ರ ವೇಳೆಗೆ 17.3 ಕೋಟಿ ವೃದ್ಧರಿರುತ್ತಾರೆ.
• ಭಾರತದಲ್ಲಿ ವೃದ್ಧರಿಗೆ ಸಾಮಾಜಿಕ ಭದ್ರತೆ ಕಡಿಮೆ. 60 ವರ್ಷ ಮೇಲ್ಪಟ್ಟವರ ಮೇಲೆ ದಬ್ಬಾಳಿಕೆ ಹೆಚ್ಚು.

ಮತ್ತಷ್ಟು ಸುದ್ದಿಗಳು

Latest News

ಮಾತುಗಾರರ ಶೋಧಕ್ಕೆ ಮುಂದಾದ ಕಾಂಗ್ರೆಸ್‌ನಿಂದ ಭಾಷಣ ಸ್ಪರ್ಧೆ: ವಿಜೇತರಿಗೆ ಐಫೋನ್ ಬಹುಮಾನ

newsics.com ಬೆಂಗಳೂರು: ಯುವ ಮಾತುಗಾರರ ಶೋಧಕ್ಕೆ ಮುಂದಾಗಿರುವ ಕಾಂಗ್ರೆಸ್, ಇದಕ್ಕಾಗಿ ಭಾಷಣ ಸ್ಪರ್ಧೆಯನ್ನು ಆಯೋಜಿಸಿದೆ. ರಾಜ್ಯಮಟ್ಟದ ಈ ಭಾಷಣ ಸ್ಪರ್ಧೆಯಲ್ಲಿ ಗೆಲ್ಲುವ ಮಾತುಗಾರರಿಗೆ ಐಫೋನ್ ಸಿಗಲಿದೆ. ಅಷ್ಟೇ ಅಲ್ಲ,...

ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ಕಾರು, ನಾಲ್ವರನ್ನು ರಕ್ಷಿಸಿದ ಗ್ರಾಮಸ್ಥರು

newsics.com ಗದಗ: ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ಕಾರು ಹಾಗೂ ಅದರಲ್ಲಿದ್ದ ನಾಲ್ವರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕುನ ನೆಲೋಗಲ್ ಗ್ರಾಮದ ಬಳಿ ಶುಕ್ರವಾರ ಈ ಘಟನೆ ನಡೆದಿದೆ. ನಿರಂತರ ಮಳೆಯಿಂದಾಗಿ ನೆಲೋಗಲ್-ಬೆಳ್ಳಟ್ಟಿ...

ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿ‌ ಬಂಧನ

newsics.com ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿ ಸುಭಾಷ್ ಗುಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಭಾವನ ಮೇಲೆ ಸೇಡು ತೀರಿಸಿಕೊಳ್ಳಲು ಬೆದರಿಕೆ ಕರೆ ಮಾಡಿದ್ದ ಸುಭಾಷ್, ವಿಚ್ಛೇದಿತ...
- Advertisement -
error: Content is protected !!