Saturday, April 17, 2021

ಮನ-ಮನೆಯಲ್ಲೂ ಇಡ್ಲಿಯ ಘಮ

ಬಾಯಿಗಿಟ್ಟರೆ ಕರಗುವ ಮೆತ್ತನೆಯ, ಬೆಳ್ಳಗೆ ಹಬೆಯಾಡುವ ಇಡ್ಲಿಯನ್ನು ಕಂಡರೆ ಯಾರಿಗೆ ತಾನೇ ತಿನ್ನಲು ಮನಸಾಗುವುದಿಲ್ಲ? ದಕ್ಷಿಣ ಭಾರತದ ಪ್ರಿಯವಾದ ಆಹಾರ ಇಡ್ಲಿಗೆ ಇಂದು ವಿಶ್ವದೆಲ್ಲೆಡೆ ಮಾನ್ಯತೆಯಿದೆ. ವಿದೇಶಿಗರೂ ಇದನ್ನು ಬಾಯಿ ಚಪ್ಪರಿಸಿ ತಿನ್ನುತ್ತಾರೆ.

    ಇಂದು ವಿಶ್ವ ಇಡ್ಲಿ ದಿನ   


♦ ಪ್ರಮಥ
newsics.com@gmail.com


 ಹೊ ಟ್ಟೆಗೆ ಭಾರವಲ್ಲದ, ಎರಡೇ ತಿಂದರೂ ಹೊಟ್ಟೆ ತುಂಬಿಸುವ ಏಕೈಕ ತಿಂಡಿ ಇಡ್ಲಿ. ಬೆಳ್ಳಗಿನ ಮಲ್ಲಿಗೆ ಇಡ್ಲಿ, ಪುಟಾಣಿ ಬಟನ್ ಇಡ್ಲಿ, ರವೆ ಇಡ್ಲಿ, ವಿವಿಧ ಸೊಪ್ಪುಗಳ ಹಸಿರು ಇಡ್ಲಿ, ಢೋಕ್ಲಾ ಇಡ್ಲಿ, ಕೊಟ್ಟೆ ಕಡುಬು ಇಡ್ಲಿ…ಒಂದೇ ಎರಡೇ? ಒಂದೇ ಹೆಸರಿನ ಇಡ್ಲಿಯಲ್ಲೂ ನೂರಾರು ವಿಧ. ನೂರೇನು? ಕೊಯಮತ್ತೂರಿನ ಇನಿಯವನ್ ಎನ್ನುವವರು ಬರೋಬ್ಬರಿ 2 ಸಾವಿರ ವಿವಿಧ ಬಗೆಯ ಇಡ್ಲಿಗಳನ್ನು ತಯಾರಿಸಿ ದಾಖಲೆ ನಿರ್ಮಿಸಿದ್ದರು. ಈ ಮೂಲಕ ನಮ್ಮ-ನಿಮ್ಮ ಅಡುಗೆಮನೆಯಲ್ಲಿ ಸಿದ್ಧವಾಗುವ ಇಡ್ಲಿ, ಇನಿಯವನ್ ಅವರಿಗೆ ಅಮೆರಿಕದ ವಿಶ್ವವಿದ್ಯಾಲಯವೊಂದರ ಗೌರವ ಡಾಕ್ಟರೇಟ್ ಅನ್ನೂ ತಂದುಕೊಟ್ಟಿತ್ತು. ಅಷ್ಟೇ ಅಲ್ಲ, ಅವರು 2013ರಲ್ಲಿ 124 ಕೆಜಿ ತೂಕದ ಇಡ್ಲಿ ತಯಾರಿಸಿ ಗಿನ್ನೆಸ್ ದಾಖಲೆ ಸೃಷ್ಟಿಸಿದ್ದರು. ಅದಕ್ಕೆ ಅವರು 75 ಕೆಜಿ ಉದ್ದಿನಬೇಳೆ ಬಳಕೆ ಮಾಡಿದ್ದರು.
ಚೆನ್ನೈನಲ್ಲಿರುವ ಅವರ ಹೋಟೆಲ್ “ಅಂಬಾಸಡರ್ ಪಲ್ಲವ’ ಇಡ್ಲಿಗೆ ಹೆಸರುವಾಸಿಯಾಗಿದ್ದು, ಇಡ್ಲಿ ಸ್ಪೆಷಲಿಸ್ಟ್ ಎಂದೇ ಇನಿಯವನ್ ಗುರುತಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬವಾಗಿರುವ ಮಾರ್ಚ್ 30ರಂದು “ವಿಶ್ವ ಇಡ್ಲಿ ದಿನ’ವನ್ನಾಗಿ ತಮಿಳುನಾಡು ಕೇಟರಿಂಗ್ ಎಂಪ್ಲಾಯೀಸ್ ಯೂನಿಯನ್ ನಿರ್ಧರಿಸಿದ ಹಿನ್ನೆಲೆಯಲ್ಲಿ ಪ್ರತಿವರ್ಷ ಮಾರ್ಚ್ 30ರಂದು ಇಡ್ಲಿ ದಿನ ಆಚರಿಸಲಾಗುತ್ತಿದೆ.
ಬೇಯಿಸಿದ ರೈಸ್ ಕೇಕ್!
ಇಂದು ದಕ್ಷಿಣ ಭಾರತದ ಜನಪ್ರಿಯ ತಿಂಡಿಯಾಗಿರುವ ಇಡ್ಲಿಗೆ ಬಹುದೊಡ್ಡ ಇತಿಹಾಸವಿದೆ. ಕ್ರಿಸ್ತಶಕ 920ರಲ್ಲಿ ಶಿವಕೋಟಿ ಆಚಾರ್ಯ ಎಂಬುವರು ಬರೆದ ವಡ್ಡಾರಾಧನೆ ಎನ್ನುವ ಕೃತಿಯಲ್ಲಿ ಇಡ್ಲಿಯ ಉಲ್ಲೇಖವಿದೆ. ಬಳಿಕ, 10 ಮತ್ತು 17ನೇ ಶತಮಾನದ ಸಂಸ್ಕೃತ ಕೃತಿಗಳಲ್ಲೂ ಇಡ್ಲಿಯ ಬಗೆಗೆ ಹೇಳಲಾಗಿದೆ. ಇಂದು ದಕ್ಷಿಣ ಭಾರತದಲ್ಲಿ ಇಡ್ಲಿ ಮನೆಮಾತಾಗಿದ್ದರೂ ಇಡ್ಲಿಯನ್ನು ನಮಗೆ ಪರಿಚಯಿಸಿದ್ದು ಗುಜರಾತಿನ ಸೌರಾಷ್ಟ್ರದವರು ಎನ್ನಲಾಗುತ್ತದೆ. ಅಷ್ಟೇ ಅಲ್ಲ, ಇಡ್ಲಿಯ ಮೂಲ ಜನಕ ಭಾರತವಲ್ಲ, ಇಂಡೋನೇಷ್ಯಾ ಎನ್ನುವ ವಾದವೂ ಇದೆ. ಫರ್ಮಂಟೇಷನ್ ಪ್ರಕ್ರಿಯೆ ಚಾಲ್ತಿಗೆ ಬಂದಿದ್ದು ಇಂಡೋನೇಷ್ಯಾದಲ್ಲಿ ಎಂದು ಇತಿಹಾಸ ಹೇಳುತ್ತದೆ. ಕೆಲವು ದಾಖಲೆಗಳು ‘ಬೇಯಿಸಿದ ರೈಸ್ ಕೇಕ್’ ಎಂದು ಇಡ್ಲಿಯನ್ನು ವರ್ಣಿಸಿವೆ.
ಬಗೆ ಬಗೆಯ ಆಕಾರ
ಪುಟಾಣಿ ಮಕ್ಕಳಿಗೆ ಇಡ್ಲಿ ತಿನ್ನಿಸಲು ಆಸೆಯೇ? ಆದರೆ ಅವರು ತಿನ್ನುತ್ತಿಲ್ಲವೇ? ಇಂದು ಅವರಿಗಾಗಿಯೇ ಮಾರುಕಟ್ಟೆಯಲ್ಲಿ ಬಗೆಬಗೆಯ ಇಡ್ಲಿ ಪ್ಲೇಟ್’ಗಳು ಬಂದಿವೆ. ಗೊಂಬೆಯ ಆಕಾರದ ಇಡ್ಲಿ ಪ್ಲೇಟ್’ಗಳನ್ನೂ ಕಾಣಬಹುದು. ಅವುಗಳನ್ನು ತಂದು ಬೇಯಿಸಿದರಾಯಿತು, ಮಕ್ಕಳು ಖುಷಿಯಾಗಿ ಇಡ್ಲಿ ತಿನ್ನುವುದು ಗ್ಯಾರಂಟಿ. ಒಟ್ಟಿನಲ್ಲಿ, ಆರೋಗ್ಯಕ್ಕೆ ಪೂರಕವಾದ, ರುಚಿರುಚಿಯಾದ ಇಡ್ಲಿ ನಮ್ಮೆಲ್ಲರ ಹೊಟ್ಟೆಯನ್ನು ತಂಪಾಗಿಡಲಿ.

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!