Wednesday, November 30, 2022

ಸಂಗೀತಮಯ ಆನಂದಮಯ…

Follow Us

 ಇಂದು ವಿಶ್ವ ಸಂಗೀತ ದಿನ 

ಇಂದು ವಿಶ್ವ ಸಂಗೀತ ದಿನ. ಬದುಕಿನ ಸತ್ತ್ವವನ್ನು ತಿಳಿಸುವ ಸಂಗೀತ, ಲೌಕಿಕ ಜಗತ್ತಿನಲ್ಲೂ ಅನಿರ್ವಚನೀಯ ಅನುಭವವೊಂದು ತುಂಬಿಕೊಳ್ಳುವಂತೆ ಮಾಡುತ್ತದೆ. ಆನಂದಮಯ ಮನಸ್ಥಿತಿಗೆ ಕಾರಣವಾಗುತ್ತದೆ. ಕೊರೋನಾ ಕಾಲದ ಈ ಸಮಯದ ಅನಿಶ್ಚಿತತೆ, ಸಂದಿಗ್ಧತೆ, ಉದ್ವೇಗಗಳನ್ನು ಶಮನಗೊಳಿಸಲು ಸಂಗೀತವೇ ಮದ್ದು.

♦ ವಿಧಾತ್ರಿ
newsics.com@gmail.com

ಬೆಳಗಿನ ಜಾವದಲ್ಲಿ ಹಾಡುವ ಭಟಿಯಾರ್‌, ಭೈರವ್, ಲಲಿತ್ ಹಿಂದುಸ್ತಾನಿ ರಾಗಗಳು ಮನಸ್ಸನ್ನು ಮೋಡಿಗೊಳಿಸುತ್ತವೆ. ಶುಭ್ರತೆಯ ಅನುಭವ ನೀಡುತ್ತವೆ. ಚೈತನ್ಯ ತುಂಬುತ್ತವೆ. ಮಧ್ಯಾಹ್ನ ನಂತರದ ಮಾರ್ವಾ, ಮಧುವಂತಿ, ಮುಲ್ತಾನಿ ಮುಂತಾದ ಅನೇಕ ರಾಗಗಳು ನಮ್ಮೊಳಗನ್ನು ಶಾಂತಗೊಳಿಸುತ್ತವೆ. ಅವುಗಳಿಂದ ಅದೇನೋ ಶಾಂತಿ ಆವರಿಸಿಕೊಳ್ಳುತ್ತದೆ. ಸಂಜೆ ವೇಳೆಯ ಪೂರಿಯಾ, ಶಂಕರ, ಯಮನ್‌ ನಂತಹ ಹತ್ತಾರು ರಾಗಗಳು ಮುದದಿಂದ ಆವರಿಸಿಕೊಳ್ಳುತ್ತವೆ. ರಾತ್ರಿ ಸಮಯದ ದುರ್ಗಾ, ದರ್ಬಾರಿ, ಕಲಾವತಿ, ಮಾಲ್ಕಂಸ್‌, ಬಿಹಾಗ್‌ ನಂತಹ ರಾಗಗಳು ಗಾಂಭೀರ್ಯ ನೀಡುತ್ತವೆ. ಮನಸ್ಸನ್ನು ಮೃದುವಾಗಿಸುತ್ತವೆ. ಇದೇ ನಮ್ಮ ಸಂಗೀತದ ತಾಕತ್ತು.


ಸಂಗೀತ ನಮ್ಮ ಬದುಕಿನ ಅವಿಭಾಜ್ಯ ಅಂಗ. ಒಂದೊಮ್ಮೆ ಸಂಗೀತದಂತಹ ಕಲಾ ಪ್ರಕಾರ ನಮ್ಮ ನಡುವಿರದಿದ್ದರೆ ಮನುಷ್ಯನ ಬದುಕು ಅದೆಷ್ಟು ಬರಡಾಗುತ್ತಿತ್ತು! ಹಿಂದುಸ್ತಾನಿ, ಕರ್ನಾಟಕಿ ಅಥವಾ ಬೇರೆ ಯಾವುದೇ ವಿಭಾಗಗಳೆಲ್ಲ ನಾವು ಮಾಡಿಕೊಂಡಿದ್ದಷ್ಟೆ. ಇವುಗಳ ಮೂಲವೆಲ್ಲ ಒಂದೇ. ಅದು ಮಾನವನ ಕಲ್ಯಾಣ. ಮಾನವ ಮನಸ್ಸನ್ನು ಶುದ್ಧಗೊಳಿಸುವ ಮೂಲಕ ಅವನನ್ನು ಈ ಲೌಕಿಕ ಪ್ರಪಂಚದಿಂದ ಹೊರತಾದ ಒಂದು ದೈವಿಕ ಅನುಭೂತಿ ನೀಡುವುದು. 
ಮನಸ್ಸಿಗೆ ನೆಮ್ಮದಿ, ಶಾಂತಿ ತುಂಬುವ ಸಂಗೀತವೆಂಬುದು ಮಾಯೆಯಾಗಿ ಆವರಿಸಿಕೊಳ್ಳುತ್ತದೆ. ಸಂಗೀತದ ಆರಾಧಕನಿಗೆ ಪ್ರಪಂಚದ ಆಗುಹೋಗುಗಳ ಬಾಧೆ ಹೆಚ್ಚು ಗಹನವಾಗಿ ತಟ್ಟುವುದಿಲ್ಲ. ಅಷ್ಟರಮಟ್ಟಿಗಿನ ಸ್ಥಿರತೆಯೊಂದು ಅವನಲ್ಲಿ ಮೂಡಿರುತ್ತದೆ. ಸ್ಥಿತಪ್ರಜ್ಞತೆ ಅರಿಯದಂತೆ ಅವನೊಳಗೆ ಇಳಿದಿರುತ್ತದೆ.
ಇಂದು (ಜೂನ್‌ ೨೧) ವಿಶ್ವ ಸಂಗೀತ ದಿನ. ಸಂಗೀತ ಮನುಷ್ಯನ ಬದುಕಿನಲ್ಲಿ ಎಂದಿನಿಂದಲೂ ಹಾಸುಹೊಕ್ಕಾಗಿದೆ. ಇದರ ಹುಟ್ಟನ್ನು ಅರಿಯುವುದು ಸಾಧ್ಯವೇ ಇಲ್ಲ. ಬಹುಶಃ ಯಾವುದೇ ಪ್ರಕಾರದ ಸಂಗೀತ ಹುಟ್ಟುವುದಕ್ಕೂ ಮುನ್ನ ಮಾನವನಿಗೆ ಪಕ್ಷಿಗಳ ಇಂಚರವೇ ಸಂಗೀತದ ಮಾಧುರ್ಯವಾಗಿದ್ದಿರಬಹುದು. ಅಂತೂ ಸಂಗೀತದ ಲಾಲಿತ್ಯವೊಂದು ಅವನ ಸಂಗಡ ಯಾವತ್ತೂ ಇತ್ತು ಎನ್ನಬಹುದು.
೧೯೮೨ರಿಂದ ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತಿದೆ. ಫ್ರಾನ್ಸ್‌ ಸಚಿವ ಜಾಕ್‌ ಲ್ಯಾಂಗ್‌ ಎನ್ನುವವರು ಸಂಗೀತ ದಿನದ ಆಚರಣೆಗೆ ಪ್ಯಾರಿಸ್‌ ನಲ್ಲಿ ಮುನ್ನುಡಿ ಬರೆದರು. ಅಂದಿನಿಂದಲೂ ವಿಶ್ವವ್ಯಾಪಿ ಸಂಗೀತ ದಿನವನ್ನು ಆಚರಿಸಲಾಗುತ್ತಿದೆ. ಸಂಗೀತ ಒಂದು ದಿನಕ್ಕೆ ಸೀಮಿತವಾದುದಲ್ಲ. ಪ್ರತಿದಿನವೂ ಸಂಗೀತದ ಮಾಧುರ್ಯ ನಮ್ಮನ್ನು ತುಂಬಿಕೊಳ್ಳಬೇಕು. ಬದುಕು ಮಾಧುರ್ಯಭರಿತವಾಗಬೇಕು.

ಮತ್ತಷ್ಟು ಸುದ್ದಿಗಳು

vertical

Latest News

ಕೇಂದ್ರ ಜಲ ಆಯೋಗದ ಅಧ್ಯಕ್ಷರಾಗಿ ಚಂದ್ರಶೇಖರ್ ಅಯ್ಯರ್

newsics.com ನವದೆಹಲಿ: ಜಲ ತಜ್ಞ ಚಂದ್ರಶೇಖರ್ ಅಯ್ಯರ್ ಅವರು ‘ಕೇಂದ್ರ ಜಲ ಆಯೋಗದ’  ಮುಂದಿನ ಅಧ್ಯಕ್ಷರಾಗಿ ನಿಯುಕ್ತಿಯಾಗಿದ್ದಾರೆ. ಗುರುವಾರ ಡಿಸೆಂಬರ್ 1 ರಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಚಂದ್ರಶೇಖರ್...

KSRTC ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ  ಬಹುಮಾನ ಗೆಲ್ಲ  ಬಹುದಾಗಿದೆ. ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನ ಗಳಿಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ...

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ...
- Advertisement -
error: Content is protected !!