Wednesday, October 28, 2020

ಬಡತನ ಅಳಿಯಲಿ, ಸುಸ್ಥಿರ ವಿಕಾಸವಾಗಲಿ

ಇಂದು(ಅ.17) ಅಂತಾರಾಷ್ಟೀಯ ಬಡತನ ನಿರ್ಮೂಲನಾ ದಿನ. ಕೊರೋನಾದಿಂದಾಗಿ ವಿಶ್ವದಲ್ಲಿ ಬಡವರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ವಿಶ್ವಬ್ಯಾಂಕ್ ಇತ್ತೀಚೆಗಷ್ಟೇ ಕಳವಳ ವ್ಯಕ್ತಪಡಿಸಿದೆ. ಬಡತನ ನಿವಾರಿಸಿಕೊಳ್ಳಲು ಇರುವ ಒಂದೇ ದಾರಿಯೆಂದರೆ, ದುಡಿಮೆ.

    ಇಂದು ಅಂತಾರಾಷ್ಟೀಯ ಬಡತನ ನಿರ್ಮೂಲನಾ ದಿನ    

♦ ಪ್ರಮಥ
newsics.com@gmail.com


“ಗಾ ಯದ ಮೇಲೆ ಬರೆ’ ಎಂದರೆ ಇದೇ. ಭಾರತ ಮೊದಲೇ ಬಡಜನರನ್ನು ಬಹಳಷ್ಟು ಸಂಖ್ಯೆಯಲ್ಲಿ ಹೊಂದಿರುವ ದೇಶ. ಈ ಬಾರಿ, ಕೊರೋನಾ ಎನ್ನುವ ಅನಿರೀಕ್ಷಿತ ಹಾಗೂ ಅನಪೇಕ್ಷಿತ ಅತಿಥಿಯ ಆಗಮನದಿಂದ ಬಡತನ ಇನ್ನಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಅಭಿವೃದ್ಧಿಯ ಪಥದಲ್ಲಿರುವ ಯಾವುದೇ ರಾಷ್ಟ್ರಕ್ಕೂ ಕೊರೋನಾ ನೀಡಿರುವ ಆಘಾತ ಅನೂಹ್ಯ.
ಇಂದು (ಅಕ್ಟೋಬರ್ 17) ಅಂತಾರಾಷ್ಟೀಯ ಬಡತನ ನಿರ್ಮೂಲನಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವದಿಂದ ಬಡತನ ನಿರ್ಮೂಲನೆಯ ಕಾರ್ಯದಲ್ಲಿ ಅಲ್ಪ ಪ್ರಮಾಣದ ಪ್ರಗತಿ ಕಾಣುತ್ತಿರುವಾಗ ಬಂದಿರುವ ಕೊರೋನಾದಿಂದಾಗಿ ಎಲ್ಲವೂ ಬುಡಮೇಲಾಗಿದೆ. ಈ ಬಾರಿಯ ಬಡತನ ನಿರ್ಮೂಲನಾ ದಿನದ ಥೀಮ್ “ಸಾಮಾಜಿಕ ಮತ್ತು ಪಾರಿಸಾರಿಕ ನ್ಯಾಯ ಎಲ್ಲರಿಗೂ ದಕ್ಕಲು ಜತೆಯಾಗಿ ಕಾರ್ಯನಿರ್ವಹಿಸೋಣ’ ಎನ್ನುವುದಾಗಿದೆ.
ಊಹಿಸಲಾಗದ ಬದಲಾವಣೆ
ಇಂದು ಭಾರತ ಮಾತ್ರವಲ್ಲ, ವಿಶ್ವಾದ್ಯಂತ ಆರೋಗ್ಯ ವ್ಯವಸ್ಥೆಯ ಮೇಲೆ ಭಾರಿ ಒತ್ತಡ ಬಿದ್ದಿದೆ. ಆರ್ಥಿಕ ವಲಯ ಈಗಿನ್ನೂ ಹಳಿಗೆ ಬರುತ್ತಿದೆ, ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕು. ಇವು ಒಟ್ಟಾರೆ ಚಿತ್ರಣವಾದರೆ, ಜನರ ವೈಯಕ್ತಿಕ ಬದುಕಿನಲ್ಲಿ ಹಿಂದೆ ಊಹಿಸದೇ ಇದ್ದ ಬದಲಾವಣೆಗಳು ಘಟಿಸಿವೆ. ಕೊರೋನಾದಿಂದಾಗಿ ಈಗಾಗಲೇ ಲಕ್ಷಾಂತರ ಜನ ಕೆಲಸ ಕಳೆದುಕೊಂಡಿದ್ದಾರೆ. ವ್ಯಾಪಾರ, ವಹಿವಾಟುಗಳು ಹಳ್ಳ ಹಿಡಿದಿವೆ. ಇನ್ನೆಂದೂ ಚೇತರಿಸಿಕೊಳ್ಳಲು ಸಾಧ್ಯವಾಗದಿರುವಷ್ಟು ಆರ್ಥಿಕ ಜರ್ಜರಿತ ಉಂಟಾಗಿದೆ. ಬಡರಾಷ್ಟ್ರಗಳಲ್ಲಿ ಈ ಸಮಸ್ಯೆ ಇನ್ನಷ್ಟು ತೀವ್ರವಾಗಿದೆ.
ಬಡತನದ ಸಂಕೋಲೆಯಲ್ಲಿ ಬಂಧಿ
ಅಂದರೆ, ಕೊರೋನಾದಿಂದಾಗಿ ಜಗತ್ತಿನ ಬಹುಪಾಲು ರಾಷ್ಟ್ರಗಳು ಮತ್ತೆ ಬಡತನದ ಸಂಕೋಲೆಯಲ್ಲಿ ಬಂಧಿಯಾಗಿ ನಿಂತುಬಿಟ್ಟಿವೆ. ವಿಶ್ವಬ್ಯಾಂಕ್ ಕೂಡ ಇತ್ತೀಚೆಗೆ ಜಗತ್ತಿನ ಆರ್ಥಿಕತೆ ಹಾಗೂ ಬಡತನ ಹೆಚ್ಚಳವಾಗುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದೆ. “ಕೊರೋನಾದ ಆರ್ಥಿಕ ಆಘಾತ ಹೇಗಿದೆ ಎಂದರೆ, ಕಳೆದ ಮೂರು ವರ್ಷಗಳಲ್ಲಿ ಬಡತನ ನಿರ್ಮೂಲನೆಯ ನಿಟ್ಟಿನಲ್ಲಿ ಸಾಧಿಸಲಾದ ಎಲ್ಲ ಪ್ರಗತಿ ಅಳಿದುಹೋಗಲಿದೆ’ ಎಂದು ಸ್ವತಃ ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್ ಪಾಸ್ ಹೇಳಿದ್ದಾರೆ.
ಕೊರೋನಾ ಪರಿಣಾಮದಿಂದಾಗಿ, ಪ್ರಸಕ್ತ ಸಾಲಿನಲ್ಲಿ ಜಗತ್ತಿನ ಆರ್ಥಿಕತೆ ಶೇ.5ರಷ್ಟು ಕುಸಿಯಲಿದೆ ಹಾಗೂ 2021ರ ಹೊತ್ತಿಗೆ ಜಗತ್ತಿನಲ್ಲಿ 15 ಕೋಟಿ ಜನರು ಕಡುಬಡತನಕ್ಕೆ ಒಳಗಾಗಲಿದ್ದಾರೆ ಎನ್ನುವ ವಿಶ್ವಬ್ಯಾಂಕ್ ಅಂದಾಜು ನಿಜಕ್ಕೂ ಕಳವಳಕಾರಿ. ಇದರಿಂದಾಗಿ, ಇದರಿಂದ ಜಾಗತಿಕ ಅರ್ಥವ್ಯವಸ್ಥೆ ಹಲವಾರು ವರ್ಷಗಳ ಕಾಲ ನರಳಲಿದೆ ಎಂದೂ ಅದು ಎಚ್ಚರಿಕೆ ನೀಡಿದೆ.
ಉದ್ಯೋಗ ಸೃಷ್ಟಿಯೇ ಪರಿಹಾರ
ಉದ್ಯೋಗಗಳು ಸೃಷ್ಟಿಯಾಗದೆ ಬಡತನ ಹೋಗದು, ದುಡಿಯುವ ಕೈಗಳಿಗೆ ಕೆಲಸ ಬೇಕು. ಆಗಲೇ ಬಡತನ ಹಾಗೂ ಹಸಿವಿನ ಬವಣೆ ನಿವಾರಣೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಭಾರತ ಸಾಕಷ್ಟು ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ, ಕೊರೋನಾ ಸೃಷ್ಟಿಸಿರುವ ಶೂನ್ಯತೆ ಎದುರು ಇವು ಏನೂ ಸಾಲದಾಗಿವೆ. 2030ರೊಳಗೆ ಭಾರತದಿಂದ ಕಡುಬಡತನ ನಿವಾರಣೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ, 2018ರಲ್ಲಿ ಪ್ರಕಟವಾದ ಒಂದು ವರದಿಯಂತೆ, ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಬಡತನ ಸಾಕಷ್ಟು ಕಡಿಮೆಯಾಗಿದೆ. ಈಗ ಪ್ರಸ್ತುತ, ದೇಶದಲ್ಲಿ ಶೇ.3ರಷ್ಟು ಬಡವರಿದ್ದಾರೆ.
ಬಡತನದ ಬವಣೆಗಳು ಒಂದೆರಡಲ್ಲ
ಬಡತನದಿಂದಾಗಿ ಮಕ್ಕಳ ಸಮಗ್ರ ಬೆಳವಣಿಗೆಯೇ ಕುಂಠಿತವಾಗುತ್ತದೆ. ಅಪೌಷ್ಟಿಕತೆ ಹೆಚ್ಚಾಗಿ ಜೀವನಪೂರ್ತಿ ಆರೋಗ್ಯ ಸಮಸ್ಯೆಗಳಿಂದ ನರಳಬೇಕಾಗುತ್ತದೆ. ಇದರಿಂದ ವ್ಯಕ್ತಿಯ ಉತ್ಪಾದನಾ ಸಾಮರ್ಥ್ಯ ಕುಸಿತವಾಗಿ ಆರ್ಥಿಕ ಪ್ರಗತಿ ಸಾಧ್ಯವಾಗುವುದಿಲ್ಲ. ಇದರೊಂದಿಗೆ, ಇನ್ನೂ ಹಲವಾರು ಸಮಸ್ಯೆಗಳು ಬಡತನವನ್ನು ಸುತ್ತುವರಿದಿವೆ. ಶುದ್ಧ ಕುಡಿಯುವ ನೀರು ದೊರಕದಿರುವುದು, ಉದ್ಯೋಗದ ಅಲಭ್ಯತೆ, ಸಾಮಾಜಿಕ ಜಂಜಾಟ, ಅಸಮಾನತೆ, ಶಿಕ್ಷಣ ಸಿಗದಿರುವುದು, ಮೂಲಸೌಕರ್ಯಗಳ ಕೊರತೆಯಿಂದಾಗಿ ಬಡತನ ಎನ್ನುವುದು ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡಿ ಹಾಕುತ್ತದೆ.

ಜಾಗತಿಕ ಹಸಿವು ಸೂಚ್ಯಂಕ; ಹಸಿವು ನೀಗಿಸುವಲ್ಲಿ ಪಾಕ್ ಗಿಂತ ಕೆಳಗಿಳಿದ ಭಾರತ

ಮತ್ತಷ್ಟು ಸುದ್ದಿಗಳು

Latest News

ಪ್ರೊಫೆಸರ್ ಹತ್ಯೆ ಪ್ರಕರಣ: ಖ್ಯಾತ ಗಾಯಕಿ ಅನನ್ಯ ಭಟ್ ತಂದೆ ಬಂಧನ

newsics.com ಮೈಸೂರು: ಸಾಂಸ್ಕೃತಿಕ ನಗರ ಮೈಸೂರನ್ನು ಬೆಚ್ಚಿ ಬೀಳಿಸಿದ್ದ ಪ್ರೊಫೆಸರ್ ಪರಶಿವಮೂರ್ತಿ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಹತ್ಯೆಗೆ ಸುಫಾರಿ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಖ್ಯಾತ ಗಾಯಕಿ ಅನನ್ಯ...

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 65 ಸಾಧಕರಿಗೆ ಪ್ರಶಸ್ತಿ ಗೌರವ

Newsics.com ಬೆಂಗಳೂರು: ರಾಜ್ಯದ ಪ್ರತಿಷ್ಠಿತ  2020ರ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸಂಘ ಸಂಸ್ಥೆಗಳು, ಸಾಧಕರು ಸೇರಿದಂತೆ 65 ಮಂದಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.  ಬೆಂಗಳೂರಿನಲ್ಲಿ  ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ ಟಿ ರವಿ ...

ಎನ್‌ಐಎನಿಂದ ಬೆಂಗಳೂರಲ್ಲಿ ಇನ್ನಿಬ್ಬರು ಶಂಕಿತ ಉಗ್ರರ ಬಂಧನ

newsics.comಬೆಂಗಳೂರು: ನಗರದಲ್ಲಿ ಶಂಕಿತ ಐಸಿಸ್ ಉಗ್ರರ ಭೇಟೆ ಮುಂದುವರಿಸಿರುವ ಎನ್‌ಐಎ ಅಧಿಕಾರಿಗಳ ತಂಡ, ಇದೀಗ ಇನ್ನಿಬ್ಬರು ಶಂಕಿತರನ್ನು ಬಂಧಿಸಿದೆ.ಬೆಂಗಳೂರಿನ ಥಣಿಸಂದ್ರದಲ್ಲಿರುವ ನಿವಾಸವೊಂದರ ಮೇಲೆ ದಾಳಿ ನಡೆಸಿರುವ ದೆಹಲಿ ಎನ್‌ಐಎ ಟೀಮ್,...
- Advertisement -
- Advertisement -
error: Content is protected !!