Tuesday, August 9, 2022

ರೇಬೀಸ್ ಬಂದೀತು, ಹುಷಾರು…

Follow Us

ನಾಯಿಗಳ ಕಡಿತದಿಂದ ಬರುವ ಮಾರಣಾಂತಿಕ ರೋಗ ರೇಬೀಸ್. ಪ್ರತಿವರ್ಷ ಸೆಪ್ಟೆಂಬರ್ 28ರಂದು ವಿಶ್ವ ರೇಬೀಸ್ ದಿನವೆಂದು ಆಚರಿಸಲಾಗುತ್ತದೆ.

     ಇಂದು ವಿಶ್ವ ರೇಬೀಸ್ ದಿನ     


newsics.com@gamil.com

 ರೇ ಬೀಸ್ ರೋಗ ನಾಯಿ, ಬೆಕ್ಕು, ಮಂಗಗಳು, ಬಾವಲಿ, ದನ, ಮೇಕೆ ಮತ್ತು ಯಾವುದೇ ಕಾಡುಪ್ರಾಣಿಗಳ ಮೂಲಕ ಹರಡಬಹುದು. ಆದರೆ, ಸಾಮಾನ್ಯವಾಗಿ ನಾಯಿಯಿಂದಲೇ ಮನುಷ್ಯನಿಗೆ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ. ಸೋಂಕಿತ ಪ್ರಾಣಿಯ ಜೊಲ್ಲಿನಲ್ಲಿರುವ ವೈರಾಣು ಮನುಷ್ಯನ ಕಚ್ಚಿದ ಶರೀರದ ಭಾಗದಿಂದ ನರಗಳ ಮೂಲಕ ಮೆದುಳಿಗೆ ಸಾಗುತ್ತದೆ. ಅಲ್ಲಿ ಮೆದುಳಿನ ಉರಿಯೂತ ಉಂಟಾಗುತ್ತದೆ. ಬೆನ್ನುಹುರಿಯಲ್ಲೂ ಉರಿಯೂತ ಕಂಡುಬರುತ್ತದೆ. ಬಳಿಕ, ರೇಬೀಸ್ ರೋಗದ ಲಕ್ಷಣಗಳು ಕಂಡುಬರುತ್ತವೆ.
ನಾಯಿ ಕಚ್ಚಿದ ಸುಮಾರು 2ರಿಂದ 3 ತಿಂಗಳೊಳಗೆ ಲಕ್ಷಣಗಳು ಗೋಚರಿಸುತ್ತವೆ. ಕೆಲವು ವ್ಯಕ್ತಿಗಳಲ್ಲಿ ವಾರದಲ್ಲೇ ಲಕ್ಷಣಗಳು ಗೋಚರಿಸಿರುವುದೂ ದಾಖಲಾಗಿದೆ, ನಾಯಿ ಕಚ್ಚಿ ವರ್ಷವಾಗುವ ಸಮಯಕ್ಕೆ ರೇಬೀಸ್ ಲಕ್ಷಣಗಳು ಕಂಡುಬಂದಿದ್ದೂ ಇವೆ. ಆದರೆ, ಒಮ್ಮೆ ಲಕ್ಷಣಗಳು ಕಂಡುಬಂದ ಬಳಿಕ ಇದಕ್ಕೆ ಯಾವುದೇ ಚಿಕಿತ್ಸೆಯಿಲ್ಲ. ನಾಯಿ ಕಚ್ಚಿದಾಗಲೇ ಚಿಕಿತ್ಸೆ ಪಡೆಯುವುದು ಅಗತ್ಯ.
ಸಾಮಾನ್ಯ ಲಕ್ಷಣ
ಜ್ವರ, ನೋವು, ಗಾಯದ ಸ್ಥಳದಲ್ಲಿ ಚುಚ್ಚಿದಂತೆ ಭಾಸವಾಗುವುದು ಹಾಗೂ ಮೈ ಜುಮ್ಮೆನ್ನಿಸುವ ಅನುಭವವಾಗುತ್ತದೆ. ದೇಹದಲ್ಲಿ ಚೈತನ್ಯವಿಲ್ಲದಂತೆಯೂ ಆಗುತ್ತದೆ. ಸೋಂಕಿನ ತೀವ್ರತೆ ಹೆಚ್ಚಾದಂತೆ ಗೊಂದಲ, ಹೈಡ್ರೋಫೋಬಿಯಾ ಅಂದರೆ ನೀರನ್ನು ಕಂಡರೆ ಭಯವಾಗುವುದು, ಗಾಳಿಯ ಭಯ, ಹೃದಯ ಮತ್ತು ಉಸಿರಾಟದ ಸಮಸ್ಯೆ ಉಂಟಾಗುತ್ತದೆ, ಕೊನೆಗೆ ಸಾವು ಸಂಭವಿಸುತ್ತದೆ.
ಪ್ರಾಥಮಿಕ ಚಿಕಿತ್ಸೆ ಹೇಗೆ?
ಯಾವುದೇ ನಾಯಿ ಕಚ್ಚಿದ ತಕ್ಷಣ ಹರಿಯುವ ನೀರು, ಸೋಪಿನ ಮೂಲಕ ಕನಿಷ್ಠ 15 ನಿಮಿಷಗಳ ಕಾಲ ಸ್ವಚ್ಛಗೊಳಿಸಬೇಕು. ಆಗ ವೈರಾಣು ದೇಹ ಪ್ರವೇಶಿಸುವುದು ತಪ್ಪುತ್ತದೆ. ಬಳಿಕ, ತಕ್ಷಣ ವೈದ್ಯರನ್ನು ಭೇಟಿ ಮಾಡಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು.
ರೇಬೀಸ್ ಗೆ ಲಸಿಕೆ ಕಂಡು ಹಿಡಿದವರು ಲೂಯಿ ಪಾಶ್ಚರ್. ಅವರು ಮರಣ ಹೊಂದಿದ ದಿನವನ್ನೇ ವಿಶ್ವ ರೇಬೀಸ್ ದಿನವೆಂದು 2007ರಿಂದ ಆಚರಿಸಲಾಗುತ್ತಿದೆ. ರೇಬೀಸ್ ಕುರಿತು ಜಾಗೃತಿ ಮೂಡಿಸುವುದೇ ಇದರ ಉದ್ದೇಶ.
ವಿಶ್ವಾದ್ಯಂತ ವರ್ಷಕ್ಕೆ ಸುಮಾರು 60 ಸಾವಿರ ಜನ ರೇಬೀಸ್ ನಿಂದ ಸಾವಿಗೀಡಾಗುತ್ತಾರೆ. ಇದರಲ್ಲಿ ಭಾರತದ ಪಾಲು ಬರೋಬ್ಬರಿ 20 ಸಾವಿರ. ಮಕ್ಕಳೇ ರೇಬೀಸ್ ಗೆ ತುತ್ತಾಗುವುದು ಹೆಚ್ಚು. ಏಕೆಂದರೆ, ಸಾಕುಪ್ರಾಣಿಯಾಗಿರಲಿ, ಬೀದಿನಾಯಿಯಾಗಿರಲಿ, ಮಕ್ಕಳು ಅವರೊಂದಿಗೆ ಹೆಚ್ಚು ಒಡನಾಡುತ್ತಾರೆ. ಬೀದಿ ನಾಯಿಗಳನ್ನು ಕೆಣಕಿ ಕಚ್ಚಿಸಿಕೊಳ್ಳುವ ಮಕ್ಕಳೇ ಹೆಚ್ಚಾಗಿ ರೇಬೀಸ್ ಗೆ ತುತ್ತಾಗುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯು 2030ರೊಳಗೆ ನಾಯಿ ಕಡಿತದಿಂದ ಬರುವ ರೇಬೀಸ್ ರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಮಹಿಳೆಯರ ಎದುರು ಬೆತ್ತಲಾಗುತ್ತಿದ್ದ ವ್ಯಕ್ತಿಯ ಸಜೀವ ದಹನಕ್ಕೆ ಯತ್ನ, ಸ್ಥಿತಿ ಗಂಭೀರ

newsics.com ಬೆತುಲ್(ಮಧ್ಯಪ್ರದೇಶ): ಮಹಿಳೆಯರು ಮತ್ತು ಯುವತಿಯರ ಎದುರು ಅಶ್ಲೀಲವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಊರಿನ ಜನರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. ಈ‌...

ಹಾವಿಗೆ ಹಾಲಲ್ಲ, ರಕ್ತಾಭಿಷೇಕ!

newsics.com ವಿಜಯನಗರ: ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಪೂಜೆ ಮಾಡಿ ರಕ್ತಾಭಿಷೇಕ ಮಾಡುವ ವಿಶೇಷ ಆಚರಣೆ ವಿಜಯನಗರದ ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿದೆ. ಕೊರಚ ಮತ್ತು‌ ಕೊರಮ ಸಮುದಾಯದ ಜನರು ನಾಗರ ಪಂಚಮಿ...

ಯಾವುದೇ ಕಾರಣಕ್ಕೂ ಆಧಾರ್ ಒಟಿಪಿ ಶೇರ್ ಮಾಡಬೇಡಿ: ಸರ್ಕಾರದ ಎಚ್ಚರಿಕೆ

newsics.com ಬೆಂಗಳೂರು: ಆಧಾರ್ ಒಟಿಪಿ, ವೈಯಕ್ತಿಕ ಕಾರ್ಡ್ ವಿವರಗಳನ್ನು ಬಹಿರಂಗಪಡಿಸಬಾರದು ಎಂದು ಸರ್ಕಾರ ಎಚ್ಚರಿಸಿದೆ. ನಿಮ್ಮ ಆಧಾರ್ ಒಟಿಪಿಯನ್ನು ಕೇಳಿ ನಿಮಗೆ ಎಂದಿಗೂ ಕರೆ, SMS ಅಥವಾ ಇಮೇಲ್ ಬರುವುದಿಲ್ಲ ಎಂದು ಆಧಾರ್ ಕಾರ್ಡ್ ಸುರಕ್ಷತೆ...
- Advertisement -
error: Content is protected !!