Saturday, April 17, 2021

ಮುತ್ತಿನ ಸಾಗರದ ಮಾಲಿನ್ಯ ನಿಲ್ಲಿಸೋಣ…

ಇಂದು (ಮಾರ್ಚ್ 23) ಜಾಗತಿಕ ಹವಾಮಾನ ದಿನ. ಸಮುದ್ರಗಳ ಮಹತ್ವದ ಬಗ್ಗೆ ಗಮನ ಸೆಳೆಯುವುದು ಈ ಬಾರಿಯ ಉದ್ದೇಶ. ಇತ್ತೀಚಿನ ದಿನಗಳಲ್ಲಿ ಸಾಗರ ಮಾಲಿನ್ಯ ಮಿತಿಮೀರಿರುವ ಪರಿಣಾಮವಾಗಿ, ಅವುಗಳ ರಕ್ಷಣೆಯ ಅಗತ್ಯವನ್ನು ಒತ್ತಿ ಹೇಳಲಾಗುತ್ತಿದೆ.

     ಇಂದು ವಿಶ್ವ ಹವಾಮಾನ ದಿನ    

newsics.com Features Desk


 ಭೂ ಮಿ, ಮಣ್ಣು, ಜಲ, ವಾಯು ಎಲ್ಲವನ್ನೂ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಹಾಳುಮಾಡಿಕೊಂಡಿದ್ದಾಗಿದೆ. ಬೃಹತ್ ನೀರಿನ ಸಂಗ್ರಹವಾದ ಸಮುದ್ರವೂ ಮಾನವನ ಮಿತಿಮೀರಿದ ಅಹಂಕಾರಕ್ಕೆ ಸೋತು ತಲೆಬಾಗಿದೆ. ಪರಿಣಾಮವೇ ಸಾಗರದ ಮಾಲಿನ್ಯ.
ಇಂದಿನ ದಿನಗಳಲ್ಲಿ ಸಾಗರ ಮಾಲಿನ್ಯ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಭೂಮಿಯ ತಾಪಮಾನ ನಿಯಂತ್ರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುವ ಸಮುದ್ರ ಮಾಲಿನ್ಯದಿಂದಾಗಿ ಬಿಸಿಯಾಗುತ್ತಿದೆ. ಅದರ ನೇರ ಪರಿಣಾಮ ಮತ್ತೆ ಜೀವಸಂಕುಲದ ಮೇಲೆಯೇ ಆಗುತ್ತಿದೆ.
ವಿಶ್ವದ ಸಾಗರಗಳು ಇಂದು ಎರಡು ಬಗೆಯ ಮಾಲಿನ್ಯದಿಂದ ನರಳುತ್ತಿವೆ. ಒಂದು ರಾಸಾಯನಿಕ ಮಾಲಿನ್ಯ, ಇನ್ನೊಂದು ಕಸದ ರಾಶಿಯ ಮಾಲಿನ್ಯ. ಮುಖ್ಯವಾಗಿ, ರೈತರು ಕೃಷಿಗಾಗಿ ಬಳಸುವ ರಸಗೊಬ್ಬರದಿಂದಾಗಿ ಸಮುದ್ರ ಮಲಿನವಾಗುತ್ತಿದೆ. ಇನ್ನು, ಪ್ಲಾಸ್ಟಿಕ್ ಸೇರಿದಂತೆ ಇತರೆ ಸಂಸ್ಕರಣೆಯಾಗದ ಮಾಲಿನ್ಯವೂ ಅಪಾರ.
ವಾಯುಗುಣದ ಚಾಲಕ ಶಕ್ತಿ
ಇಂದು (ಮಾರ್ಚ್ 23) ವಿಶ್ವ ಹವಾಮಾನ ದಿನ. ಈ ಬಾರಿ, “ಸಮುದ್ರ, ನಮ್ಮ ಹವಾಮಾನ ಮತ್ತು ವಾಯುಗುಣ’ ಎನ್ನುವ ಥೀಮ್ ಮೇಲೆ ಹವಾಮಾನ ದಿನವನ್ನು ಆಚರಿಸಲಾಗುತ್ತಿದೆ. ಭೂ ಹವಾಗುಣ ನಿಯಂತ್ರಿಸುವಲ್ಲಿ ಸಾಗರಗಳ ಪಾತ್ರ ಅಪರಿಮಿತ. ತಾಪಮಾನ ನಿಯಂತ್ರಿಸಿ, ವಾಯುಗುಣದ ಚಾಲಕಶಕ್ತಿಯಾಗಿ ಸಾಗರಗಳು ವರ್ತಿಸುತ್ತವೆ. ಅಷ್ಟೇ ಅಲ್ಲ, ಮಳೆ ಸುರಿಯುವಿಕೆ, ಬರಗಾಲ, ಪ್ರವಾಹ ಎಲ್ಲದಕ್ಕೂ ಸಾಗರದೊಂದಿಗೆ ನಂಟು ಇದೆ. ಭೂ ಗ್ರಹದ ಅತಿದೊಡ್ಡ ಕಾರ್ಬನ್ ಸಂಗ್ರಹವಾಗಿವೆ. ಜಗತ್ತಿನ ಶೇ.83ರಷ್ಟು ಕಾರ್ಬನ್ ಚಕ್ರ ಸಾಗರದ ನೀರಿನ ಮೂಲಕ ಪ್ರಸರಣಗೊಳ್ಳುತ್ತಿರುತ್ತದೆ.
ಸಮುದ್ರವೂ ಆಮ್ಲಜನಕ ಉತ್ಪಾದಿಸುತ್ತದೆ!
ಭೂಮಿಯ ಮೇಲೆ ಮರಗಿಡಗಳೊಂದೇ ಆಮ್ಲಜನಕ ಉತ್ಪಾದಿಸುತ್ತವೆ ಎಂದು ತಿಳಿದಿದ್ದರೆ ಅದು ಅರ್ಧ ಮಾತ್ರ ಸತ್ಯ. ಸಮುದ್ರವೂ ಜಗತ್ತಿನ ಶೇ.50ರಷ್ಟು ಅಂದರೆ ಬರೋಬ್ಬರಿ ಅರ್ಧ ಪಾಲು ಆಮ್ಲಜನಕ ಉತ್ಪಾದಿಸುತ್ತದೆ ಎಂದರೆ ಅಚ್ಚರಿಯಾಗಬಹುದು. ಸಾಗರಗಳ ಮೇಲ್ಮೈ ಮೇಲೆ ಫೋಟೊಸಿಂಥೆಸಿಸ್ ಪ್ರಕ್ರಿಯೆ ನಡೆಸುವ ಪ್ಲವಕಗಳಿರುತ್ತವೆ. ಪ್ಲವಕಗಳೆಂದರೆ, ಸಮುದ್ರದಲ್ಲಿ ಅಪ್ರಯತ್ನಪೂರ್ವಕ ಚಲಿಸುವ ಪ್ರಾಣಿ ಮತ್ತು ಸಸ್ಯ ಸಮುದಾಯ. ಇವು ಬರಿಗಣ್ಣಿಗೆ ಕಾಣಿಸುವುದಿಲ್ಲ. ಬೃಹತ್ ಅರಣ್ಯ ಹೊರಸೂಸುವ ಆಮ್ಲಜನಕಕ್ಕಿಂತ ಅಧಿಕ ಪ್ರಮಾಣವನ್ನು ಇವು ಹೊರಸೂಸುತ್ತವೆ. ವಿಜ್ಞಾನಿಗಳ ಪ್ರಕಾರ, ಭೂಮಿಯ ಶೇ.50-80ರಷ್ಟು ಆಮ್ಲಜನಕ ಈ ಪ್ಲವಕಗಳಿಂದಲೇ ಉತ್ಪಾದನೆಯಾಗುತ್ತದೆ. ಇಂಥ ಆಮ್ಲಜನಕದ ಗಣಿ ಮಾನವನ ಹಸ್ತಕ್ಷೇಪದಿಂದ ನಲುಗುತ್ತಿದೆ. ರಾಸಾಯನಿಕಗಳಿಂದ ಪ್ಲವಕಗಳು ಬಹುದೊಡ್ಡ ಅಪಾಯ ಎದುರಿಸುತ್ತಿವೆ.
ತಾಪಮಾನ ಏರಿಕೆ ಫಲ
ಸಮುದ್ರದ ನೀರು ಬಿಸಿಯಾದರೆ ಇಡೀ ಜಗತ್ತಿನ ತಾಪಮಾನ ಏರಿಕೆಯಾಗುತ್ತದೆ. ಸಮುದ್ರದ ನೀರಿನಲ್ಲಿರುವ ನೀರ್ಗಲ್ಲುಗಳು ಕರಗುತ್ತವೆ. ಇದರಿಂದ ಕ್ರಮೇಣ ಸಮುದ್ರಮಟ್ಟ ಏರಿಕೆಯಾಗುತ್ತ ಬಂದು ಜನವಸತಿಯನ್ನೂ ಕಬಳಿಸಬಹುದು. ಇಷ್ಟೇ ಅಲ್ಲ, ಸಮುದ್ರದಲ್ಲಿ ಆಗುವ ಏರಿಳಿತ ಅನೂಹ್ಯ ಪರಿಣಾಮಗಳ ಸರಣಿಯನ್ನೇ ಸೃಷ್ಟಿಸಬಹುದಾದ ಅಪಾಯ ಹೆಚ್ಚು. ಇತ್ತೀಚೆಗೆ ಉತ್ತರಾಖಂಡ ರಾಜ್ಯದಲ್ಲಿ ಸಂಭವಿಸಿದ ಹಿಮಪಾತ, ಅದರಿಂದುಂಟಾದ ಪ್ರವಾಹ ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಎಚ್ಚರಿಕೆಯ ಗಂಟೆಯಾಗಿದೆ. ಈ ಹಿನ್ನೆಲೆಯಲ್ಲಿ, ಈ ಬಾರಿಯ ಹವಾಮಾನ ದಿನದ ಘೋಷವಾಕ್ಯಕ್ಕೆ ಸಮುದ್ರವನ್ನು ಜೋಡಿಸಲಾಗಿದೆ. ಸಮುದ್ರಗಳ ರಕ್ಷಣೆಗೆ ದೇಶಗಳು ಬದ್ಧವಾಗಬೇಕಿದೆ. ಪರಸ್ಪರ ಅನಾರೋಗ್ಯಕರ ಅಭಿವೃದ್ಧಿಯ ಸ್ಪರ್ಧೆಗೆ ಬೀಳದೇ ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ.

ಜಲ ಸಂರಕ್ಷಣೆಯ ಹಾದಿ…

ಅರಣ್ಯದ ಮರುಸ್ಥಾಪನೆಯತ್ತ ಮನುಕುಲದ ದಾಪುಗಾಲು

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!