Sunday, December 5, 2021

ರಾಷ್ಟ್ರೀಯ ವಿಪತ್ತು ನಿವಾರಣೆಗೆ ನಾವೇನು ಮಾಡಬಹುದು?

Follow Us

♦ ಪಿ.ಎಸ್. ವೈಲೇಶ, ಕೊಡಗು
response@134.209.153.225
newsics.com@gmial.com

ಕೋವಿಡ್-19 ಎಂಬ ಮಹಾಮಾರಿ ಪ್ರಪಂಚದ 130 ರಾಷ್ಟ್ರಗಳ ಪೈಕಿ 89ಕ್ಕೂ ಹೆಚ್ಚಿನ ರಾಷ್ಟ್ರದಲ್ಲಿ ತನ್ನ ಕಬಂಧ ಬಾಹುವನ್ನು ಚಾಚತೊಡಗಿದೆ. ಈಗಾಗಲೇ ಪ್ರಪಂಚದ 85-90 ರಾಷ್ಟ್ರಗಳ ಆಡಳಿತವು ಜನತಾ ಕರ್ಪ್ಯೂ ಜಾರಿಗೊಳಿಸಿದೆ. ಇನ್ನುಳಿದ ಶೇ.33 ದೇಶಗಳಿಗೆ ಬಾಧಿಸಿರುವ ಸಾಧ್ಯತೆ ಇದ್ದರೂ ಅವರಿಗೆ ಅದನ್ನು ತಡೆಗಟ್ಟುವ ಅವಕಾಶ ವಿಫುಲವಾಗಿ ದೊರಕಿದೆಯೆಂದು ಹೇಳಬಹುದು. ಏನೇ ಆದರೂ ಆ ರಾಷ್ಟ್ರಗಳು ಕೂಡ ಕೋರೋನ ವೈರಸ್ ದಾಳಿಯಿಂದ ವಂಚಿತರಾಗಲು ಅಸಾಧ್ಯ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ. ಆದಷ್ಟೂ ಶೀಘ್ರದಲ್ಲೇ ಈ ವೈರಸ್‌ಗೆ ಸೂಕ್ತ ಔಷಧಗಳನ್ನು ಕಂಡುಹಿಡಿಯುವ ಪ್ರಯತ್ನ ಪ್ರಪಂಚದ ಮೂಲೆ ಮೂಲೆಗಳ ರಾಷ್ಟ್ರಗಳಲ್ಲಿ ಕೂಡ ನಡೆಯುತ್ತಿದೆ ಎಂದರೆ ತಪ್ಪಾಗಲಾರದು. ಆದರೆ ಏಕಾಏಕಿ ಒಂದು ಔಷಧವನ್ನು ನೇರವಾಗಿ ಮನುಷ್ಯನ ದೇಹದ ಮೇಲೆ ಪ್ರಯೋಗಿಸುವ ಮುನ್ನ ಅದು ನಿಜವಾಗಿಯೂ ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಹಲವು ಬಾರಿ ಹಲವು ಬಾರಿ ಅನೇಕ ರೀತಿಯ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಅದಕ್ಕಿಂತ ಮೊದಲು ಈ ಪ್ರಪಂಚದಲ್ಲಿ ಈ ವೈರಸ್ ವಿಜ್ಞಾನಿಗಳ ಕಣ್ಣಿಗೆ ಬಿದ್ದು ಕೇವಲ ಎರಡೂವರೆ ತಿಂಗಳ ಸಮಯವಷ್ಡೇ ಆಗಿರುವುದು ಎಂದು ನಾವೆಲ್ಲರೂ ನಂಬಿದ್ದೇವೆ. ಮತ್ತು ಮೊದಲ ಬಾರಿಗೆ ಕಂಡು ತನ್ನ ಸರ್ಕಾರದ ಉನ್ನತ ಅಧಿಕಾರಿಗಳಿಗೆ ತಿಳಿಸಿದ ವಿಜ್ಞಾನಿಯನ್ನು ನೀನು ಸುಳ್ಳು ಹೇಳುತ್ತಿದ್ದೀಯಾ ಎಂದು ಜೈಲಿಗೆ ಅಟ್ಟಿದ ಚೀನಾ ದೇಶ ಅಂತಹ ಮಹಾನ್ ವಿಜ್ಞಾನಿಗಳ ಜತೆಗೆ ಸಾಕಷ್ಟು ಮಾನವ ಸಂಪನ್ಮೂಲಗಳು ಆರ್ಥಿಕ ಸಾಮಾಜಿಕವಾದ ನಷ್ಟಗಳನ್ನು ಕಂಡು ಸೋತು ಹೋಯಿತು ಎಂದರೆ ಸರಿಯೆನಿತ್ತದೆ.

ಇತ್ತ ಆರ್ಥಿಕವಾಗಿ ಮಾತ್ರವಲ್ಲ ಆರೋಗ್ಯ ರಕ್ಷಣಾ ಕೇಂದ್ರಗಳು ಹೇರಳವಾಗಿ ಇದ್ದು ಜನಸಂಖ್ಯೆಯು ಲೆಕ್ಕದಲ್ಲಿ ಕಡಿಮೆಯಿದ್ದರೂ ಚೀನಾದವರೊಂದಿಗೆ ಅತ್ಯಂತ ನಿಕಟವರ್ತಿ ಕೂಡ ಅಗಿರುವ ಇಟಲಿಯರು ಸಂಕಷ್ಟದಲ್ಲಿರುವ ಚೀನೀಯರನ್ನು ತಬ್ಬಿಕೊಳ್ಳಿ ಎಂಬ ಅಭಿಯಾನ ಹಮ್ಮಿಕೊಂಡು ಸ್ವತಃ ತಾವೇ ಕೊರೋನಾ ವೈರಸ್ (ಕೋವಿಡ್ 19) ಗೆ ರಾಜಮಾರ್ಗ ತೆರೆದಿಟ್ಟರು. ಇಂದು ಚೀನಾಕ್ಕಿಂತಲೂ ಹೆಚ್ಚಿನ ಸಾವುನೋವಿಗೆ ಕಾರಣವಾಗಿ ಅಧ್ಯಕ್ಷರಾದಿಯಾಗಿ ದೇಶದ ತೊಂಬತ್ತು ಪ್ರತಿಶತ ಪ್ರಜೆಗಳು ಕಣ್ಣೀರು ಹರಿಸುವಂತಾಗಿದೆ. ಅಮೆರಿಕದಲ್ಲಿರುವ ನನ್ನ ಆಪ್ತರೂ ಆಗಿರುವ ಭಾರತ ಮೂಲದ ವ್ಯಕ್ತಿಯೊಬ್ಬರು ಅಮೆರಿಕದ ಪರಿಸ್ಥಿತಿಯನ್ನು ಹೀಗೆ ವಿವರಿಸುತ್ತಾರೆ.
The whole society is trying to adjust. In NewYork state, 2/3 of all cases. The hospitals are already saying they can’t cope up. All governments- state and federal helping. Financial situation is hurting. But there are more important issues now.
ಜಗತ್ತಿನ ದೊಡ್ಡಣ್ಣ ಎಂದು ಹೆಸರು ಮಾಡಿರುವ ಅಮೆರಿಕದ ಪರಿಸ್ಥಿತಿಯನ್ನು ಹೀಗೆ ವರ್ಣಿಸುವುದಾದರೆ ಮುಂದುವರಿಯುತ್ತಿರುವ ರಾಷ್ಟ್ರವಾದ ಭಾರತವು ಇಂದು ನಿಜಕ್ಕೂ ಉತ್ತಮವಾದ ರೀತಿಯಲ್ಲಿ ಕಾರ್ಯಾಚರಣೆ ನಡೆಸಲು ಪ್ರಯತ್ನಿಸುತ್ತಿದೆ ಎನ್ನಬಹುದು.

ಇರಾಕ್,ಇರಾನ್ ಇಟಲಿ, ಚೀನಾದಲ್ಲಿ ಈಗಾಗಲೇ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗದೆ ಪ್ರಜೆಗಳು ಬೀದಿಬದಿಯ ಹೆಣಗಳಾಗುತ್ತಿರುವುದನ್ನು ಕಂಡಿದ್ದೇವೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಗತ್ತಿನಾದ್ಯಂತ ಮಿಲಿಯನ್ ಗ್ಯಾಲನ್‌ಗಳ ಲೆಕ್ಕದಲ್ಲಿ ರಪ್ತುಮಾಡುತ್ತಾ ಐಷಾರಾಮಿ ಜೀವನವನ್ನು ನಡೆಸುತ್ತಿದ್ದ ಸೌದಿ ಅರೇಬಿಯಾದಲ್ಲಿ ಸಹ ಸಂಜೆ ಆರು ಗಂಟೆಯಿಂದ ಬೆಳಗಿನವರೆಗೆ ಬೀಚ್‌ನಲ್ಲಿ ಟೆಂಟ್ ಹಾಕಿಕೊಂಡು ಕಾಲ ಕಳೆಯುತ್ತಿದ್ದವರನ್ನು ನಿರ್ಬಂಧಿಸಿ ಸಂಜೆ ಆರರಿಂದ ಬೆಳಗಿನ ಆರರವರೆಗೆ ಲಾಕ್‌ಡೌನ್ ಆದೇಶ ನೀಡಲಾಗಿತ್ತು. ಅದರೂ ಕೊರೋನಾ ವೈರಸ್ ಸೋಂಕಿತರು ಹೆಚ್ಚುತ್ತಿರುವ ಕಾರಣದಿಂದ ಸದ್ಯದಲ್ಲಿಯೇ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಲಾಕ್ ಡೌನ್ ಆದೇಶ ನೀಡುವ ನಿರೀಕ್ಷೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲಿ ವಾಸವಿರುವ ಭಾರತ ಮೂಲದ ಕೆಲವರ ಅಂಬೋಣವಾಗಿದೆ. ಇಷ್ಟೆಲ್ಲದರ ನಡುವೆ ಅಮೆರಿಕ ಅಥವಾ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಜಗತ್ತಿನೆದುರು ವಿವರಿಸಲು ನಿರ್ಬಂಧ ಹೇರಲಾಗಿದೆ. ಆದರೆ ನಮ್ಮ ಭಾರತದ ವಿರೋಧ ಪಕ್ಷದ ನಾಯಕರುಗಳು ಎಗ್ಗುಸಿಗ್ಗಿಲ್ಲದೆ ತಮ್ಮ ನಾಲಿಗೆ ಚಪಲವನ್ನು ತೀರಿಸಿಕೊಳ್ಳಲು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ರೀತಿಯ ಕ್ರಮ ಕೈಗೊಳ್ಳುವ ಮುನ್ನವೇ ಅದನ್ನು ವಿರೋಧಿಸಿ ಜಗಜ್ಜಾಹೀರು ಮಾಡಿಬಿಡುತ್ತಾರೆ. ಇವರೆಲ್ಲರೂ ನಿಜವಾಗಿಯೂ ಬುದ್ಧಿವಂತರೆ ಅಥವಾ ಕೇವಲ ಅವಕಾಶವಾದಿಗಳೆ ಎಂದು ಭಾರತದ ಪ್ರಜ್ಞಾವಂತ ಪ್ರಜೆಗಳು ಆಲೋಚಿಸಬೇಕಾಗಿದೆ.

ನಮ್ಮ ನಿಮ್ಮೆಲ್ಲರ ಕಷ್ಟಕರ ವಿಷಯವೆಂದರೆ, ಬುದ್ಧಿ ಬಂದಾಗಲಿಂದಲೂ ಸ್ವತಂತ್ರವಾಗಿ ಓಡಾಡಿಕೊಂಡಿದ್ದ ನಾವು ಏಕಾಏಕಿ ಮನೆಯಲ್ಲಿ ಒಂದೆಡೆ ಇರಬೇಕಾಗಿರುವ ಅನಿವಾರ್ಯತೆಯನ್ನು ನಮ್ಮ ಮನಸ್ಸು ಮತ್ತು ದೇಹ ಒಪ್ಪದೇ ಇರುವುದು. ನಿಮ್ಮ ಮಾತು ನಿಜ. ಆದರೆ ಇಂದಿನ ಅತ್ಯಗತ್ಯವಾದ ಅಗತ್ಯ ಕೂಡ ನಾವು ಮನೆಯಲ್ಲಿ ಇರುವುದೇ ಆಗಿದೆ. ಕೇವಲ ಚಿಕ್ಕಪುಟ್ಟ ಖರೀದಿಗೆಂದು ದಿನ ಪ್ರತಿ ತೆರಳಿ ಮನಸ್ಸೋ ಇಚ್ಛೆ ಖರೀದಿಸಿ ಅಗತ್ಯ ವಸ್ತುಗಳ ಕೃತಕ ಅಭಾವವನ್ನು ನಿರ್ಮಿಸದೆ ರಾಜ್ಯ ಮತ್ತು ಜಿಲ್ಲಾಡಳಿತ ನೀಡಿರುವ ಸಮಯಾವಕಾಶದಲ್ಲಿ ಅತ್ಯಂತ ಶಾಂತ ರೀತಿಯಲ್ಲಿ ಆದಷ್ಟೂ ಹೆಚ್ಚಿನ ಪ್ರಮಾಣದಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ವ್ಯಕ್ತಿಯ ಕಾಳಜಿಯನ್ನು ನೆನಪಿಸಿಕೊಳ್ಳುತ್ತಾ ನಾವು ಮುಂದುವರೆಯಬೇಕಿದೆ. ಮೊದಲನೆಯದಾಗಿ ಅನಗತ್ಯ ಓಡಾಟವನ್ನು ನಿಯಂತ್ರಿಸಲು ನಮಗೆ ನಾವೇ ನಿರ್ಬಂಧ ಹೇರಿಕೊಳ್ಳಬೇಕಾಗಿದೆ.

ಏನೇ ಆದರೂ ನಾವು ನಮ್ಮ ದೇಶದ ಪ್ರಮುಖರು ಮಾಡಿರುವ ಮನವಿಯನ್ನು ಪಾಲಿಸಬೇಕಾದ ಅಗತ್ಯವಿದೆ. ನಾವು ಅವರ ಮನವಿಯನ್ನು ವಿರೋಧಿಸಿ ಸ್ವೆಚ್ಛಾಚಾರವನ್ನು ಪ್ರದರ್ಶಿಸಿದರೆ ಮನವಿ ಆದೇಶವಾಗುವ ದಿನಗಳು ದೂರವಿಲ್ಲ ಮತ್ತು ನಾವು ಪ್ರತಿಭಟನೆಯ ನೆಪದಲ್ಲಿ ಬಲಪ್ರಯೋಗ ಮಾಡುವ ಪ್ರಯತ್ನ ಮಾಡಿದರೆ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸುವ ದಿನಗಳು ದೂರವಿಲ್ಲ. ಇಂದಿನ ದಿನಗಳಲ್ಲಿ ಕೆಲವರಿಗೆ ತಾಳ್ಮೆ ಎಂಬುದು ಇಲ್ಲವೇ ಇಲ್ಲವೆನಿಸುವಷ್ಟು ಆತುರಗಾರರಾಗಿದ್ದಾರೆ. ದಯವಿಟ್ಟು ದುಡುಕದೆ ಅಥವಾ ಪ್ರಪಂಚದ ನಡೆಯ ಬಗ್ಗೆ ಸ್ವತಃ ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ ದೃಶ್ಯ ಮಾಧ್ಯಮದ ಮೂಲಕ ಅಥವಾ ಇನ್ನಾವುದೇ ರೀತಿಯಲ್ಲಿ ತಿಳಿದುಕೊಳ್ಳಲು ಪ್ರಯತ್ನಿಸಿ. ದಯವಿಟ್ಟು ಕಾನೂನಿನ ಪ್ರಕಾರ ನಡೆದುಕೊಳ್ಳುವ ಹಾಗೂ ಕಾನೂನನ್ನು ಜಾರಿಗೊಳಿಸಲು ಅವಕಾಶ ನೀಡಿ ಕಾನೂನನ್ನು ಕೈಗೆತ್ತಿಕೊಳ್ಳುವ ಸಾಹಸವನ್ನು ಮಾಡಬೇಡಿ. (ಕೊರೋನಾ) ಕೋವಿಡ್ ಮಹಾಮಾರಿಯಿಂದ ನಾವು ರಕ್ಷಿಸಿಕೊಳ್ಳಬೇಕಾದರೆ ಮೊದಲಿಗೆ ನಾವು ಶಾಂತಚಿತ್ತರಾಗಿ ನಡೆದುಕೊಳ್ಳುವ ಅಗತ್ಯವಿದೆ.

ಅದಕ್ಕಾಗಿ ನಾವು ನಮ್ಮ ದೈಹಿಕ ಮಾನಸಿಕ ಆರೋಗ್ಯದ ಕಡೆಗೆ ಗಮನವನ್ನು ಕೊಡುವುದು ಕೂಡ ಅಗತ್ಯವಿದೆ. ಮನಸ್ಸನ್ನು ನಿಯಂತ್ರಿಸುವ ಸಲುವಾಗಿ ಮನೆಯಲ್ಲಿಯೇ ಯೋಗ ವ್ಯಾಯಾಮ ಧ್ಯಾನವನ್ನು ಮಾಡುವ ಮೂಲಕ ಆತ್ಮ ಸ್ಥೈರ್ಯವನ್ನು ಹೊಂದಬೇಕಾಗಿದೆ. ಒಟ್ಟಾರೆ ಈಗ ಒದಗಿರುವ ಮಹಾಮಾರಿಯನ್ನು ಹೊಡೆದಟ್ಟಲು ನಾವೆಲ್ಲರೂ ಒಗ್ಗೂಡಬೇಕಿದೆ.

ಮತ್ತಷ್ಟು ಸುದ್ದಿಗಳು

Latest News

ಮುಂಬೈ ಏರ್‌ಪೋರ್ಟ್‌ನಲ್ಲಿ ನಟಿ ಜಾಕ್ವೆಲಿನ್ ಫೆರ್ನಾಂಡೀಸ್‌ಗೆ ತಡೆ

newsics.com ಮುಂಬೈ: ಖ್ಯಾತ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರಿಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಅಧಿಕಾರಿಗಳು ತಡೆಯೊಡ್ಡಿದ್ದಾರೆ. ದುಬೈಗೆ ಹೊರಟಿದ್ದ ಜಾಕ್ವೆಲಿನ್ ಫೆರ್ನಾಂಡೀಸ್ ಅವರನ್ನು ಲುಕೌಟ್ ನೋಟಿಸ್ ಜಾರಿ ಹಿನ್ನೆಲೆಯಲ್ಲಿ ತಡೆಯಲಾಗಿದೆ....

ರಾಜ್ಯದಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣ ಪತ್ತೆ, 330 ಜನ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,98,099ಕ್ಕೆ ಏರಿಕೆಯಾಗಿದೆ 330 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 29,52,708 ಜನ ಗುಣಮುಖರಾಗಿದ್ದಾರೆ. 6 ಜನ ಸೋಂಕಿತರು...

ಸರಣಿ ಅಪಘಾತ: ಓರ್ವ ಸಾವು, ಇಬ್ಬರು ಗಂಭೀರ

newsics.com ಉಡುಪಿ: ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಕಾರು, ಬೈಕ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೀನು ಸಾಗಾಟದ ವಾಹನದ...
- Advertisement -
error: Content is protected !!