Saturday, January 23, 2021

‘ಅರವತ್ತರ ಅಭಿಮನ್ಯು’ ಗೋಪಾಲಾಚಾರ್

‘ಯಕ್ಷರಂಗದ ಒಂದೊಂದು ಮೆಟ್ಟಿಲನ್ನು ಮೂರು ಮೂರು ಬಾರಿ ಹತ್ತಿ ಬಂದವನಮ್ಮಾ ನಾನು’ ಎಂದು ಹೆಮ್ಮೆಯಿಂದ ಹೇಳಿಕೊಂಡವರು ಹಿರಿಯ ಕಲಾವಿದ ತೀರ್ಥಹಳ್ಳಿ ಗೋಪಾಲಾಚಾರ್. ಅಪ್ರಿಯವಾದ ಸತ್ಯವನ್ನು ನಾನು ಹೇಳುವುದಿಲ್ಲ. ಆದರೆ ಯಕ್ಷಗಾನವನ್ನು ದುರುಪಯೋಗಪಡಿಸಿಕೊಳ್ಳುವವರ ಬಗ್ಗೆ ನೋವಿದೆ. ಆ ನೋವನ್ನು ಯಾರಲ್ಲಿ ಹೇಳಿಕೊಳ್ಳಲಿ ಎನ್ನುತ್ತಾ ನಿಟ್ಟುಸಿರುಬಿಡುತ್ತಾರೆ ಗೋಪಾಲಾಚಾರ್. ಅವರ ನಿಟ್ಟುಸಿರಿನ ನೋವು ನಮ್ಮನ್ನು ಎಚ್ಚೆತ್ತುಕೊಳ್ಳುವಂತೆ ಮಾಡಲಿ ಎಂಬುದು ಸದ್ಯದ ಆಶಯ.

    ಯಕ್ಷಚೌಕಿ 26    


ನಿರೂಪಣೆ: ದಿವ್ಯಾ ಶ್ರೀಧರ್ ರಾವ್

newsics.com@gmail.com


“ನ ನ್ನ ತಂದೆಯಾದ ವಾಸುದೇವ ಆಚಾರ್ ಅವರು ಹವ್ಯಾಸಿ ಕಲಾವಿದರಾಗಿದ್ದರು. ಪ್ರಾಥಮಿಕ ಶಿಕ್ಷಣ ಮುಗಿಸಿದ ನಾನು ನನ್ನ ತಂದೆಯಿಂದ ಪ್ರೇರಿತನಾಗಿ ಯಕ್ಷಗಾನಕ್ಕೆ ಬಂದೆ. ತೀರ್ಥಹಳ್ಳಿಯ ಕೃಷ್ಣೋಜಿ ರಾವ್ ಅವರನ್ನು ಗುರುವಾಗಿ ಸ್ವೀಕರಿಸಿ, ಹೆಜ್ಜೆ ಕಲಿತು ನನ್ನ 14 ನೇ ವರ್ಷದಲ್ಲಿ ರಂಗಕ್ಕೆ ಪದಾರ್ಪಣೆ ಮಾಡಿದೆ.
22ನೇ ವಯಸ್ಸಿನಲ್ಲಿ ಸಾಲಿಗ್ರಾಮ ಮೇಳದಲ್ಲಿ ದಿ.ಕಾಳಿಂಗ ನಾವುಡರ ನಿರ್ದೇಶನದ ಆಧಾರದ ಮೇಲೆ ಮೊದಲ ಬಾರಿ ಅಭಿಮನ್ಯುವಾಗಿ ಕಾಣಿಸಿಕೊಂಡಿದ್ದೆ. ಮೊತ್ತ ಮೊದಲ ಬಾರಿ ಅಭಿಮನ್ಯುವಾಗಿ ರಂಗವೇರಿದ ನನ್ನ ಪಾಲಿಗೆ ಕಂಡಿದ್ದು ಸೋಲು. ಆದರೆ ಆ ಸೋಲನ್ನು ಯಶಸ್ಸಿನ ಮೆಟ್ಟಿಲಾಗಿ ಮಾರ್ಪಡಿಸಿಕೊಂಡ ನಾನು, ಕ್ರಮೇಣವಾಗಿ ರಂಗದ ಅಭಿಮನ್ಯುವಾಗಿ ಗುರುತಿಸಿಕೊಳ್ಳತೊಡಗಿದ್ದು ಸಂತಸ ನೀಡಿದೆ.
ಅಭಿಮನ್ಯುವಾಗಿ ಚುರುಕು ಹೆಜ್ಜೆ, ಅವಶ್ಯವೆನಿಸುವಷ್ಟು ಕುಣಿತ, ಅಗತ್ಯ ಮೀರದ ಮಾತು ಇವೆಲ್ಲವೂ ದಿನದಿಂದ ದಿನಕ್ಕೆ ಪ್ರಚಲಿತವಾಗುತ್ತಾ ಬಂದಿದ್ದು ನನ್ನನ್ನು ಇನ್ನಷ್ಟು ಜನ ಪ್ರೋತ್ಸಾಹಿಸುವಂತಾಯಿತು. ಯಕ್ಷಗಾನಕ್ಕೆ ಬಂದು ಇಂದಿಗೆ 51 ವರುಷವಾದರೂ ಜನರು ನನ್ನನ್ನು ‘ಅರವತ್ತರ ಅಭಿಮನ್ಯು’ ಎಂದು ಗುರುತಿಸುವ ಬಗ್ಗೆ ನನಗೆ ಬಹಳ ಸಂತೋಷವಿದೆ. ಒಂದು ವರುಷದ ಹಿಂದೆ ಮೇಳದಿಂದ ಸ್ವಯಂ ನಿವೃತ್ತಿ ಪಡೆದ ನಾನು ಸದ್ಯದಲ್ಲಿ ಅತಿಥಿ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದೇನೆ.
ಯಕ್ಷಗಾನದಲ್ಲಿ ನಾನು ಮಾಡುವ ಎಲ್ಲಾ ಪಾತ್ರಗಳೂ ನನಗಿಷ್ಟ. ಸುಧನ್ವ, ಕಾರ್ತವೀರ್ಯ, ಕೌರವ ಮೊದಲಾದ ಪಾತ್ರಗಳು ನನಗೆ ತುಂಬಾ ಇಷ್ಟ. ಆದರೆ ನನ್ನ ದೇಹ ಹಾಗೂ ಸ್ವರದ ಕಾರಣದಿಂದ ನಾನು ಖಳನಾಯಕನ ಪಾತ್ರಗಳನ್ನು ಮಾಡಲಾಗಲಿಲ್ಲ. ನಾಯಕನ ಪಾತ್ರಗಳಲ್ಲಿಯೇ ಗುರುತಿಸಿಕೊಂಡೆ.
ಅಭಿಮಾನಕ್ಕೋಸ್ಕರ ನಾನು ತಾಳಮದ್ದಳೆಯಲ್ಲಿ ಅರ್ಥ ಹೇಳಿದ್ದಿದೆ. ಆದರೆ ತಾಳಮದ್ದಳೆಯ ಅರ್ಥ ಹೇಳುವಷ್ಟು ಪುರಾಣ ಜ್ಞಾನ ನನಗಿಲ್ಲ. ನಮ್ಮ ಸಾಮರ್ಥ್ಯ ಗೊತ್ತಿದ್ದರೆ ಮಾತ್ರ ನಾವು ಮುಂದುವರೆಯುವುದು ಒಳ್ಳೆಯದು. ಹಾಗಾಗಿ ನಾನು ಯಕ್ಷಗಾನದಲ್ಲಿ ವೇಷ ಮಾಡುವ ಮೂಲಕ ಸಂತೃಪ್ತ ಜೀವನ ನಡೆಸಿದ್ದೇನೆ.

ನನಗೆ ಯಕ್ಷಗಾನವೇ ಎಲ್ಲಾ. ಯಕ್ಷಗಾನದಿಂದಲೇ ಬದುಕಿದ ನಾನು ಈ ಯಕ್ಷಗಾನದ ಬಗ್ಗೆ ಎಷ್ಟು ಮಾತನಾಡಿದರೂ ಕಡಿಮೆಯೇ. ಆದರೆ ಅನಾರೋಗ್ಯದ ಕಾರಣದಿಂದ ನಾನು ಈಗ ವೇಷ ಮಾಡಲಾಗುತ್ತಿಲ್ಲ. ಈ 50 ವರ್ಷದಲ್ಲಿ ಶ್ರಮ ವಹಿಸಿ ಗಳಿಸಿದ ಹೆಸರನ್ನು ಅನಾರೋಗ್ಯದ ಕಾರಣದಿಂದ ವೇಷ ಮಾಡಿ ಹಾಳು ಮಾಡಿಕೊಳ್ಳಲು ಬಯಸುವುದಿಲ್ಲ.

♦ ತೀರ್ಥಹಳ್ಳಿ ಗೋಪಾಲ್ ಆಚಾರ್

ಮತ್ತಷ್ಟು ಸುದ್ದಿಗಳು

Latest News

ಮನೆಗೆ ನುಗ್ಗಿ 15 ವರ್ಷದ ಬಾಲಕಿಯ ಬರ್ಬರ ಹತ್ಯೆ

Newsics.com ಪಾಟ್ನ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಅತ್ಯಂತ ದಾರುಣ ಕೃತ್ಯ ನಡೆದಿದೆ. ಮನೆಯೊಂದಕ್ಕೆ ದಾಳಿ ನಡೆಸಿದ ದುಷ್ಕರ್ಮಿಗಳು 15 ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ್ದಾರೆ. ಕತ್ತಿಯಿಂದ ಕಡಿದು...

ಲಂಡನ್ ನಲ್ಲಿ ಆಶ್ರಯ ಕೋರಿ ವಿಜಯ ಮಲ್ಯ ಅರ್ಜಿ

Newsics.com ಲಂಡನ್: ಭಾರತಕ್ಕೆ ಗಡೀಪಾರು ಭೀತಿ ಎದುರಿಸುತ್ತಿರುವ ದಿವಾಳಿ ಉದ್ಯಮಿ ವಿಜಯ ಮಲ್ಯ ಆಶ್ರಯ ಕೋರಿ ಬ್ರಿಟನ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಮಲ್ಯ ಪರ ವಕೀಲ ಫಿಲಿಪ್ ಮೈಕಲ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಭಾರತದ ಬ್ಯಾಂಕ್...

ತುಪ್ಪದ ಬೆಡಗಿ ರಾಗಿಣಿ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆ

Newsics.com ಬೆಂಗಳೂರು: ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಇಂದು ಪರಪ್ಪನ ಅಗ್ರಹಾರ ಜೈಲ್ಲಿನಿಂದ ಬಿಡುಗಡೆಯಾಗಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರತಿ ಅವರ ವಕೀಲರ ಕೈ ಸೇರಿದ್ದು, ಇಂದು ಎನ್ ಡಿ ಪಿಎಸ್  ನ್ಯಾಯಾಲಯದಲ್ಲಿ...
- Advertisement -
error: Content is protected !!