newsics.com
ಇದು ನಮ್ಮ ದೇಶ, ಇದಕ್ಕಾಗಿ ನಾವು ರಕ್ತ ಹರಿಸಿದ್ದೇವೆ. ಮಸೀದಿ ಬಿಟ್ಟು ಕೊಡುತ್ತೇವೆ ಎಂದು ಕನಸು ಕಾಣಬೇಡಿ. ಮಸೀದಿ ಹಾಗಿರಲಿ ನಾವು ಒಂದು ಹಿಡಿ ಮರಳನ್ನೂ ಕೊಡುವುದಿಲ್ಲ ಎಂದು ಮಂಗಳೂರಿನ ಕಣ್ಣೂರಿನಲ್ಲಿ ನಡೆದ ಬೃಹತ್ ಜನಾಧಿಕಾರ ಸಮಾವೇಶದಲ್ಲಿ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಗುಡುಗಿದ್ದಾರೆ.
ಕಾಂಗ್ರೆಸ್ ಮುಸ್ಲಿಮರ ಪರ ಇಲ್ಲ ಎಂಬುದನ್ನು ತಿಳಿದುಕೊಳ್ಳಿ. ತಾಂಬೂಲ ಪ್ರಶ್ನೆ...
newsics.com
ಮುಸ್ಲಿಂ ಯುವಕನನ್ನು ಪ್ರೀತಿಸಿದ್ದಕ್ಕೆ ಆಕ್ರೋಶಗೊಂಡ ಪೋಷಕರು 20 ವರ್ಷದ ಮಗಳನ್ನು ಕೊಲೆ ಮಾಡಿದ್ದು ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣದ ಆದಿಲಾಬಾದ್ನಲ್ಲಿ ಈ ಘಟನೆ ಸಂಭವಿಸಿದೆ.
ಮುಸ್ಲಿಂ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದ ಮಗಳನ್ನು ಪತ್ತೆ ಮಾಡಿದ್ದ ಪೊಲೀಸರು ಕೆಲವು ದಿನಗಳ ಹಿಂದಷ್ಟೇ ಆಕೆಯನ್ನು ಪೋಷಕರ ಕೈಗೊಪ್ಪಿಸಿದ್ದರು. ಆದರೆ ಪೋಷಕರು ಚಾಕುವಿನಿಂದ ಆಕೆಯ ಕತ್ತು ಸೀಳಿದ್ದಾರೆ ಎಂದು ಸಬ್ಇನ್ಸ್ಪೆಕ್ಟರ್ ಮಾಹಿತಿ...
newsics.com
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2685 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ.ಕಳೆದ 24 ಗಂಟೆಗಳಲ್ಲಿ 33 ಮಂದಿ ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ. ಕಳೆದೊಂದು ದಿನದಲ್ಲಿ 2158 ಮಂದಿ ಕೋವಿಡ್ನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಶುಕ್ರವಾರದಂದು ದೇಶದಲ್ಲಿ 2710 ದೈನಂದಿನ ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಸದ್ಯ ದೇಶದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 16,308 ಆಗಿದೆ. ದೇಶದಲ್ಲಿ...
newsics.com
ಬೆಂಗಳೂರು: ರಾಜ್ಯದ 8 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ಪಕ್ಷಗಳ ಪಟ್ಟಿಯಿಂದ ತೆಗದು ಹಾಕಲು ಚುನಾವಣಾ ಆಯೋಗ ತೀರ್ಮಾನಿಸಿದೆ.
ಈ ಪಕ್ಷಗಳು ಅಸ್ತಿತ್ವ ಕಳೆದುಕೊಂಡಿರುವುದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಪರಿಶೀಲನೆಯಿಂದ ಸಾಬೀತಾಗಿರುವುದರಿಂದ ಈ ನಿರ್ಧಾರಕ್ಕೆ ಬಂದಿದೆ.
ಇಂಡಿಯನ್ ಓಟರ್ ವೆಲ್ಫೇರ್ ಪಾರ್ಟಿ, ಕರ್ನಾಟಕ ಕ್ರಾಂತಿ ದಳ, ನವನಿರ್ಮಾಣ ನಾಗರಿಕ ಸಮಿತಿ, ರಾಷ್ಟ್ರೀಯ ಜನಾಂದೋಲನ ಪಕ್ಷ, ಸ್ವರ್ಣ...
newsics.com
ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಅಪರಾಧ ಕೃತ್ಯಗಳಲ್ಲಿ ಜೈಲು ಸೇರಿದವರಿಗಾಗಿ ಕೆಲವೇ ದಿನಗಳಲ್ಲಿ ವೃತ್ತಿಪರ ಐಟಿಐ ಶಿಕ್ಷಣ ಪ್ರಾರಂಭವಾಗಲಿದೆ.
ಐಟಿಐ ಕಾಲೇಜು ಸ್ಥಾಪನೆಯ ಪ್ರಸ್ತಾವನೆಯನ್ನು ರಾಜ್ಯ ಕಾರಾಗೃಹ ಇಲಾಖೆ ಸರ್ಕಾರಕ್ಕೆ ಒಪ್ಪಿಸಿದೆ. ಸರ್ಕಾರದಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.
ಕಾಲೇಜು ಆರಂಭವಾದ ಬಳಿಕ ರಾಜ್ಯದಲ್ಲೇ ಮೊದಲ ಬಾರಿಗೆ ಜೈಲಿನಲ್ಲಿ ಕಾಲೇಜು ಸ್ಥಾಪಿಸಿದ ಹೆಗ್ಗಳಿಕೆಗೆ ಸರ್ಕಾರ ಪಾತ್ರವಾಗಲಿದೆ ಗೌರವಯುತ ಜೀವನ ಕಟ್ಟಿಕೊಳ್ಳುವುದಕ್ಕಾಗಿ...
newsics.com
ಬೆಂಗಳೂರು: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ 110 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆಯು 650ರೂ. ಏರಿಕೆಯಾಗಿದೆ.
ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,650 ರೂ ಇದ್ದು, ಇಂದು 47,750 ರೂ. ಆಗಿದೆ.ಇಂದು ಬೆಳ್ಳಿ ಬೆಲೆಯಲ್ಲಿ 650 ರೂ ಏರಿಕೆಯಾಗಿದ್ದು, 1 ಕೆಜಿ ಬೆಳ್ಳಿಯ ದರ...
newsics.com
ಮಹಾರಾಷ್ಟ್ರ: ನರ್ಸ್ ಗಳ ನೇಮಕಾತಿಯನ್ನು ಖಾಸಗಿ ಏಜೆನ್ಸಿಗಳಿಗೆ ಹೊರಗುತ್ತಿಗೆ ನೀಡುವ ಬಗ್ಗೆ ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರವನ್ನು ಖಂಡಿಸಿ ಇಂದಿನಿಂದ ಮಹಾರಾಷ್ಟ್ರ ನರ್ಸ್ ಗಳು ಅನಿರ್ದಿಷ್ಟಾವಧಿ ಮುಷ್ಕರ ಹೂಡಲಿದ್ದಾರೆ.
ಇದನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದು, ಇದೀಗ ನರ್ಸುಗಳು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು ಇಂದಿನಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿ ನಿರ್ಧಾರವನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಲಿದ್ದಾರೆ.
ಈ ಮುಷ್ಕರದಲ್ಲಿ ಸುಮಾರು...
newsics.com
ಬೆಂಗಳೂರು: ಇಂದು ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ. ಅಸ್ಸಾಂ, ಮಣಿಪುರ, ಕೇರಳ, ಮಿಜೋರಾಂ ಇಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ ಇದೆ.
ಮುಂಗಾರು ಕೊಂಚ ವಿಳಂಬವಾಗಲಿದ್ದು, ಕೇರಳಕ್ಕೆ ಮಾನ್ಸೂನ್ ಪ್ರವೇಶವಾಗುವ ಸಾಧ್ಯತೆಯಿದೆ. ಕೇರಳದ ಬಹುತೇಕ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೇ 30 ರವರೆಗೆ ಕರ್ನಾಟಕ, ಕೇರಳ, ತೆಲಂಗಾಣ, ತಮಿಳುನಾಡಿನಲ್ಲಿ ಗುಡುಗು ಸಹಿತ...
newsics.com
ನವದೆಹಲಿ: ಮಾಜಿ ಸಚಿವ ರಾಜೇಂದ್ರ ಬಹುಗುಣ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಮ್ಮ ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಉತ್ತರಾಖಂಡ್ನ ಮಾಜಿ ಸಚಿವ ರಾಜೇಂದ್ರ ಬಹುಗುಣ ವಿರುದ್ಧ ಸೊಸೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮೂರು ದಿನಗಳ ಬಳಿಕ ಅಂದರೆ ಶುಕ್ರವಾರ ಬಹುಗುಣ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಹುಗುಣ(59) ಅವರು ತಮ್ಮ ಹಲ್ ಡ್ವಾನಿ ಪೊಲೀಸ್...
newsics.com
ಅಹ್ಮದಾಬಾದ್: ಐಪಿಎಲ್ ಕ್ವಾಲಿಫೈಯರ್ 2 ರಲ್ಲಿ ಫೈನಲ್ ಪ್ರವೇಶಕ್ಕಾಗಿ 'ರಾಯಲ್ ' ಗಳ ನಡುವೆ ನಡೆದ ಸೆಣಸಾಟದಲ್ಲಿ 7ವಿಕೆಟ್ ಗಳ ಸೋಲನ್ನು ಅನುಭವಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ಐಪಿಎಲ್ ಕಪ್ ಆಸೆಯನ್ನು ಪೂರೈಸಿಕೊಳ್ಳುವ ಅವಕಾಶವನ್ನು ಕೈಚೆಲ್ಲಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಫಾಫ್ ಪಡೆ 20 ಓವರ್ ಗಳಲ್ಲಿ 8...
newsics.com
ಬೆಂಗಳೂರು : ಡ್ರಗ್ಸ್ ದಂಧೆ ಜಾಲ ಭೇದಿಸಿರುವ ಎನ್ ಸಿ ಬಿ ಅಧಿಕಾರಿಗಳು ₹ 54.50 ಕೋಟಿ ಮೌಲ್ಯದ 34 ಕೆಜಿ 89 ಗ್ರಾಂ ಹೆರಾಯಿನ್ ಜಪ್ತಿ ಮಾಡಿದ್ದಾರೆ.
ರಾಜ್ಯದ ವಿವಿಧೆಡೆ ಡ್ರಗ್ಸ್ ಸಾಗಣೆ ಮತ್ತು ಮಾರಾಟ ಮಾಡುತ್ತಿದ್ದ 9 ಮಂದಿಯನ್ನು ಬಂಧಿಸಲಾಗಿದ್ದು, ಅದರಲ್ಲಿ ಐವರು ಮಹಿಳೆಯರಾಗಿದ್ದಾರೆ.
ವಿವಿಧ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, ಇದೀಗ ಆರೋಪಿಗಳು ಸೆರೆಯಾಗಿದ್ದಾರೆ.
https://newsics.com/news/karnataka/kovid-detects-171-cases-in-karantaka/111145/
newsics.com
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 171 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,51,302 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೋವಿಡ್ ನಿಂದಾಗಿ ಇಂದು ಯಾವುದೇ ಸಾವು ಸಂಭವಿಸಿಲ್ಲ.
ಇಂದು ಬೆಂಗಳೂರಿನಲ್ಲಿ 161 ಮಂದಿಗೆ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 17,86,973 ಕ್ಕೆ ಏರಿಕೆಯಾಗಿದೆ. ರಾಜಧಾನಿಯಲ್ಲೂ ಯಾವುದೇ ಸಾವು ವರದಿಯಾಗಿಲ್ಲ.
https://newsics.com/entertainment/rakkamma-song-of-kiccha-sudeep-starrer-vikrant-rohana-has-already-been-released/111139/
newsics.com
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನೆಮಾದ ರಕ್ಕಮ್ಮ ಹಾಡು ಇದೀಗಾಗಲೇ ಬಿಡುಗಡೆಯಾಗಿದ್ದು, ಹವಾ ಸೃಷ್ಟಿಸಿದೆ.
ಕಿಚ್ಚ ಸುದೀಪ್ ಈ ಹಾಡಿಗೆ ಕುಣಿದಿದ್ದು, ಅದನ್ನು ಜಾಕ್ಲಿನ್ ಫರ್ನಾಂಡೀಸ್ ಅವರಿಗೆ ಅರ್ಪಿಸಿದ್ದಾರೆ. ಒಂದು ವೀಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಹಾಕಿದ್ದು, "ಹೇ ಜಾಕಿ ಇದು ನಿಮಗಾಗಿ. ನಿಮ್ಮ ಆಸೆಯನ್ನು ಈಡೇರಿಸಿದ್ದೇನೆ. ಇದು ನನ್ನ ಮೊದಲ ರೀಲ್ಸ್"...
newsics.com
ಬೆಂಗಳೂರು: ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಪ್ರಸ್ತುತ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ವಂದಿತಾ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಲಿದ್ದಾರೆ. ಮುಖ್ಯ ಕಾರ್ಯದರ್ಶಿ ರವಿ ಕುಮಾರ್.ಪಿ ಅವರು ಇದೇ ತಿಂಗಳು 31ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.
1986ನೇ ಬ್ಯಾಚ್ನ ಐಎಎಸ್...
newsics.com
ಬೆಂಗಳೂರು : ವಿಧಾನಪರಿಷತ್ ಚುನಾವಣೆಯಲ್ಲಿ ಹೆಚ್ಚುವರಿ ಅಭ್ಯರ್ಥಿಗಳು ಕಣದಲ್ಲಿರದ ಕಾರಣ ಏಳೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ.
ಇದರಿಂದಾಗಿ ಬಿಜೆಪಿ 4 , ಕಾಂಗ್ರೆಸ್ 2 ಹಾಗೂ ಜೆಡಿಎಸ್ 1 ಪರಿಷತ್ ಸ್ಥಾನವನ್ನು ಪಡೆದಂತಾಗಿದೆ.
ಬಿಜೆಪಿಯಿಂದ ಛಲವಾದಿ ನಾರಾಯಣ ಸ್ವಾಮಿ, ಹೇಮಾವತಿ ನಾಯಕ್, ಲಕ್ಷ್ಮಣ ಸವದಿ,ಹಾಗೂ ಕೇಶವ ಪ್ರಸಾದ್ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ನಿಂದ ಕೆ.ಅಬ್ದುಲ್...
newsics.com
ಅತ್ಯಂತ ಅಪರೂಪದ ಜನ್ಮಜಾತ ಸಮಸ್ಯೆಯಿಂದ ಜನಿಸಿರುವ ಮಗುವೊಂದು ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಮಂದಿಯ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಜನಿಸಿರುವ ಐಲಾ ಸಮ್ಮರ್ ಮುಚಾ, ಬೈಲ್ಯಾಟರಲ್ ಮೈಕ್ರೋಸ್ಟೋಮಿಯಾದಿಂದ ಬಳಲುತ್ತಿದೆ.
ಇದೊಂದು ಅಪರೂಪದ ಸ್ಥಿತಿಯಾಗಿದ್ದು ಈ ಮಗು ಎಂದಿಗೂ ನಗುತ್ತಿರುವಂತೆಯೇ ಕಾಣುತ್ತದೆ. ಈ ಕಾರಣದಿಂದ ಈ ಮಗು ಇದೀಗ ಟಿಕ್ಟಾಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ...
newsics.com
ಜಮ್ಮು-ಕಾಶ್ಮೀರ: ಸೇನಾ ವಾಹನ ಸ್ಕಿಡ್ ಆಗಿ ಶಯೋಕ್ ನದಿಗೆ ಬಿದ್ದ ಪರಿಣಾಮ ಏಳು ಯೋಧರು ಮೃತಪಟ್ಟಿದ್ದು, ಹಲವು ಸೈನಿಕರು ಗಾಯಗೊಂಡಿದ್ದಾರೆ.
ಶುಕ್ರವಾರ (ಮೇ 27) ಲಡಾಖ್ನ ಟುರ್ ಟುಕ್ ಸೆಕ್ಟರ್ನಲ್ಲಿ ಈ ದುರಂತ ಸಂಭವಿಸಿದೆ.
26 ಯೋಧರಿದ್ದ ಸೇನಾ ವಾಹನವು ಪರ್ತಾಪುರ್ ಟ್ರಾನ್ಸಿಟ್ ಶಿಬಿರದಿಂದ ಉಪ ಸೆಕ್ಟರ್ ಹನೀಫ್ ಪ್ರದೇಶಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಸ್ಕಿಡ್ ಆಗಿ ಶಯೋಕ್...
newsics.com
ಕೆಲವು ಏಷ್ಯನ್ ಆನೆಗಳು ನಾಚಿಕೆ ಸ್ವಭಾವವನ್ನು ಹೊಂದಿರುವುದರಿಂದ ಎಲ್ಲರೆದುರು ಆಹಾರವನ್ನು ಸೇವಿಸಲು ನಾಚಿಕೆ ಪಡುತ್ತವೆ. ಹೀಗಾಗಿ ತಮ್ಮ ಅರಣ್ಯದ ಆವಾಸ ಸ್ಥಾನಗಳ ಅಂಚಿನಲ್ಲಿ ಇರುವ ಮಾನವ ವಸಾಹತುಗಳ ಸಮೀಪದಲ್ಲಿರುವ ಕಸದ ತೊಟ್ಟಿಗಳಿಗೆ ನುಗ್ಗಿ ತ್ವರಿತವಾಗಿ ಆಹಾರವನ್ನು ಸೇವಿಸುವ ಭರದಲ್ಲಿ ಕಸವನ್ನು ಸಹ ತಿಂದು ಬಿಡುತ್ತವೆ.
ತ್ವರಿತವಾಗಿ ಆಹಾರ ತಿನ್ನುವ ಭರದಲ್ಲಿ ಪ್ಲಾಸ್ಟಿಕ್ ಹಾಗೂ ಪ್ಯಾಕೆಜಿಂಗ್ ಪದಾರ್ಥಗಳನ್ನು...
newsics.com
ಮೈಸೂರು: ಮೂಳೆ ಕ್ಯಾನ್ಸರ್ನಿಂದ ಇತ್ತೀಚೆಗೆ ಮೃತಪಟ್ಟ ಶಾಸಕ ಜಿ.ಟಿ. ದೇವೇಗೌಡರ ಮೊಮ್ಮಗಳು ಗೌರಿ ಸಾವಿಗೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಜಿ.ಟಿ.ದೇವೇಗೌಡರಿಗೆ ಪತ್ರ ಬರೆದಿರುವ ಮೋದಿ, ಗೌರಿ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನಿಮಗೆ ಹಾಗು ಪಾಲಕರಿಗೆ ನೀಡಲೆಂದು ಪ್ರಾರ್ಥಿಸಿದ್ದಾರೆ.
ಗೌರಿ ಸಾವಿನ ಸುದ್ದಿ ತಿಳಿದು ಆಘಾತವಾಯಿತು. ಪುಟಾಣಿಯ ಸಾವಿನ ನೋವನ್ನು ಅರಗಿಸಿಕೊಳ್ಳುವುದು ಪಾಲಕರಿಗೆ...
newsics.com
ದೆಹಲಿಯ ತ್ಯಾಗರಾಜ್ ಕ್ರೀಡಾಂಗಣವನ್ನು ದುರಪಯೋಗ ಪಡಿಸಿಕೊಂಡು ಅವಧಿಗೆ ಮುಂಚಿತವಾಗಿ ಸ್ಟೇಡಿಯಂನ್ನು ಬಂದ್ ಮಾಡಿಸುತ್ತಿದ್ದ ಐಎಎಸ್ ಅಧಿಕಾರಿ ದಂಪತಿ ಸಂಜೀವ್ ಖಿರ್ವಾರ್ ಹಾಗೂ ರಿಂಕು ದುಗ್ಗಾ ದಂಪತಿಯನ್ನು ಕ್ರಮವಾಗಿ ಲಡಾಖ್ ಹಾಗೂ ಅರುಣಾಚಲ ಪ್ರದೇಶಕ್ಕೆ ಎತ್ತಂಗಡಿ ಮಾಡಲಾಗಿದೆ.
ಸಾಕು ನಾಯಿಯನ್ನು ವಾಕಿಂಗ್ ಮಾಡಿಸಬೇಕೆಂದು 7 ಗಂಟೆಗೂ ಮುಂಚಿತವಾಗಿ ಸ್ಟೇಡಿಯಂನ್ನು ಬಂದ್ ಮಾಡಿಸಿ ಸಾರ್ವಜನಿಕರಿಗೆ ಸಮಸ್ಯೆ ನೀಡುತ್ತಿದ್ದ ಕಾರಣಕ್ಕೆ...
newsics.com
ಚಿಕ್ಕೋಡಿ : ಟ್ರಕ್ ಹಾಗೂ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆಯು ನಿಪ್ಪಾಣಿ ಹೊರವಲಯದಲ್ಲಿ ಸಂಭವಿಸಿದೆ.
ಮೃತರನ್ನು ಅದಗೋಂಡಾ ಬಾಬು ಪಾಟೀಲ್ (60), ಪತ್ನಿ ಛಾಯಾ ಅದಗೊಂಡ ಪಾಟೀಲ್ (55) ಚಂಪಾತಾಯಿ ಮಗದುಮ್ (80), ಮಹೇಶ್ ದೇವಗೊಂಡ ಪಾಟೀಲ್ (23) ಎಂದು ಗುರುತಿಸಲಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.
https://newsics.com/news/karnataka/defense-minister-who-visited-kadamba-naval-base/111053/
newsics.com
ಬೆಂಗಳೂರು: ನಿವೃತ್ತಿ ಪಡೆದ ನೌಕರರ ಪುನರ್ ನೇಮಕಾತಿ ರದ್ದು , ಸಹಾಯಕರ ಹುದ್ದೆ ಕಡಿತ ಪ್ರಸ್ತಾವನೆ ಕೈ ಬಿಡುವಂತೆ ಆಗ್ರಹಿಸಿ ವಿಧಾನಸೌದದ ಸಚಿವಾಲಯದ ನೌಕರರು ಮುಷ್ಕರ ನಡೆಸಿದ್ದಾರೆ. ಮುಷ್ಕರ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶವನ್ನು ಗಾಳಿಗೆ ತೂರಿದ ನೌಕರರು ಕರ್ತವ್ಯಕ್ಕೆ ಹಾಜರಾಗದೇ ತಮ್ಮ ಆಕ್ರೋಶ ಹೊರ...
newsics.com
ಡ್ರಗ್ ಸೇವನೆ ಪ್ರಕರಣದಲ್ಲಿ ಎನ್ಸಿಬಿಯಿಂದ ಬಂಧನಕ್ಕೊಳಗಾಗಿದ್ದ ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ಗೆ ಎನ್ಸಿಬಿಯಿಂದ ಕ್ಲೀನ್ಚಿಟ್ ದೊರಕಿದೆ. ಆರ್ಯನ್ ವಿರುದ್ಧದ ದೋಷಾರೋಪ ಪಟ್ಟಿಯನ್ನು ಎನ್ಸಿಬಿ ವಿಶೇಷ ನ್ಯಾಯಾಲಯಕ್ಕೆ ನೀಡಿದ್ದು ಇದರಲ್ಲಿ ದಾಳಿ ವೇಳೆ ಆರ್ಯನ್ ಬಳಿ ಯಾವುದೇ ಡ್ರಗ್ ಪತ್ತೆಯಾಗಿಲ್ಲ ಎಂದು ಉಲ್ಲೇಖಿಸಲಾಗಿದೆ.
2021ರ ಅಕ್ಟೋಬರ್ 8ರಂದು ಆರ್ಯನ್ ಖಾನ್ರನ್ನು ಎನ್ಸಿಬಿ ಡ್ರಗ್...
newsics.com
ಮದುವೆ ಮನೆಯಲ್ಲಿ ಕನ್ನಡ ಹಾಡು ಹಾಕಿದ್ದಾರೆ ಎಂದು ಕೋಪಗೊಂಡ ಎಂಇಎಸ್ ಪುಂಡರು ವಧು ವರರು ಹಾಗೂ ವರನ ಸಹೋದರನ ಮೇಲೆ ಹಲ್ಲೆ ನಡೆಸಿದ ಘಟನೆಯು ಬೆಳಗಾವಿಯ ಧಾಮನೆ ಎಂಬ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ. ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ಎಂಇಎಸ್ ಪುಂಡರು ಬೈಕ್ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.
ಮದುವೆ ಮೆರವಣಿಗೆ ಸಂದರ್ಭದಲ್ಲಿ ಕರುನಾಡೇ.. ಎಂಬ...
newsics.com
ಅಮೆರಿಕದ ಟೆಕ್ಸಾಸ್ನಲ್ಲಿ ಪ್ರಾಥಮಿಕ ಶಾಲೆಯೊಂದರಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ ಸಂದರ್ಭದಲ್ಲಿ 11 ವರ್ಷದ ಬಾಲಕಿಯೊಬ್ಬಳು ತನ್ನ ಸಹಪಾಠಿಯ ರಕ್ತವನ್ನು ಮೈಮೇಲೆ ತಾಗಿಸಿಕೊಂಡು ತಾನೂ ಸತ್ತಂತೆ ನಾಟಕವಾಡಿದ್ದಾಳೆ.
ದಾಳಿಯ ಸಂದರ್ಭದಲ್ಲಿ ಗಾಯಗೊಂಡಿದ್ದ 11 ವರ್ಷದ ಬಾಲಕಿ ಮಿಯಾ ಸೆರಿಲ್ಲೊರನ್ನು ಆಸ್ಪತ್ರೆಗೆ ಸೇರಿಸಿ ಇಂದು ಡಿಸ್ಚಾರ್ಜ್ ಮಾಡಲಾಗಿದೆ.
https://newsics.com/news/india/mansoon-will-late-on-this-year/111060/
newsics.com
ಕೋಲ್ಕತ್ತಾದ ಪಟುಲಿ ಪ್ರದೇಶದಲ್ಲಿರುವ ತನ್ನ ನಿವಾಸದಲ್ಲಿ ಮಾಡೆಲ್ ಶವವಾಗಿ ಪತ್ತೆಯಾಗಿದ್ದಾರೆ. ಇದು ಕಳೆದ ಮೂರು ದಿನಗಳಲ್ಲಿ ನಡೆದ ಎರಡನೇ ಘಟನೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾಡೆಲ್ ಬಿದಿಶಾ ಮಂಜುದಾರ್ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕೇಳಿ ಖಿನ್ನತೆಗೆ ಒಳಗಾಗಿದ್ದ ಮಂಜುಷಾ ನಿಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಂಜುಷಾ ತಾಯಿ ತಿಳಿಸಿದ್ದಾರೆ. ಬಿದಿಶಾ ಬುಧವಾರದಂದು ತನ್ನ ಬಾಡಿಗೆ ಫ್ಲಾಟ್ನಲ್ಲಿ...
newsics.com
ಬ್ಯಾಂಕಿಂಗ್ ವಹಿವಾಟಿನಲ್ಲಿ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪೆಟ್ರೋಲ್ ಬಂಕ್ ಮಾಲೀಕರು ಮೇ 31ರಂದು ಪ್ರತಿಭಟನೆ ನಡೆಸಲಿದ್ದಾರೆ.ಮುಷ್ಕರದ ದಿನದಂದು ಪೆಟ್ರೋಲ್ ಬಂಕ್ಗಳಲ್ಲಿ ನೋ ಸ್ಟಾಕ್ ಎಂಬ ಫಲಕ ಕಾಣಲಿದೆ.
ನಮಗೆ ಬೇಡಿಕೆಗೆ ತಕ್ಕಂತೆ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯಾಗುತ್ತಿಲ್ಲ.ಸಾರಿಗೆ ಸಂಸ್ಥೆಗಳು ಡೀಸೆಲ್ ಖರೀದಿ ಮಾಡಿ ಸರಿಯಾಗಿ ಹಣ ನೀಡುತ್ತಿಲ್ಲ.ಬಿಪಿಸಿಎಲ್ ಹಾಗೂ ಹೆಚ್ಪಿಸಿಎಲ್...
newsics.com
ಗ್ರಾಮಸ್ಥರಲ್ಲಿ ನಡುಕವುಂಟು ಮಾಡಿದ್ದ 7 ವರ್ಷದ ಗಂಡು ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯುತ್ತಿದ್ದಂತೆಯೇ ಗ್ರಾಮಸ್ಥರು ಚಿರತೆಯನ್ನು ಸಜೀವ ದಹನ ಮಾಡಿದಂತಹ ಘಟನೆಯು ಉತ್ತರಾಖಂಡ್ನ ಪರಿ ಗರ್ವಾಲ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಈ ತಿಂಗಳ ಆರಂಭದಲ್ಲಿ ಈ ಗ್ರಾಮದಲ್ಲಿ ಚಿರತೆಯ ದಾಳಿಗೆ 47 ವರ್ಷದ ಸುಷ್ಮಾ ದೇವಿ ಎಂಬವರು ಸಾವನ್ನಪ್ಪಿದ್ದರು. ಹೀಗಾಗಿ ಚಿರತೆ ಸೆರೆ...
newsics.com
ಪೊಲೀಸರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆಯು ಕಲಬುರಗಿ ಜಿಲ್ಲೆ ಶಹಬಾದ ತಾಲೂಕಿನ ಮರತೂರ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಮನೋಜ್ ಸಿಂಧೆ (31) ಎಂದು ಗುರುತಿಸಲಾಗಿದೆ. ಮೃತ ಮನೋಜ್ ಸಿಂಧೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಮನೋಜ್ ಪತ್ನಿಯ ಅಣ್ಣನ ಮಗು ಕಾಣೆಯಾಗಿತ್ತು. ಈ ಮಗುವನ್ನು ಮನೋಜನೇ ಕಿಡ್ನಾಪ್...
newsics.com
ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ನ ಅಭ್ಯರ್ಥಿಯಾಗಿ ಜೈರಾಂ ರಮೇಶ್ ಹೆಸರು ಅಂತಿಮವಾಗಿದೆ. ಜೈರಾಂ ರಮೇಶ್ ಮೇ 30ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಈ ಬಾರಿ ರಾಜ್ಯಸಭೆ ಟಿಕೆಟ್ನ್ನು ಆಸ್ಕರ್ ಫರ್ನಾಂಡಿಸ್ ಕುಟುಂಬಸ್ಥರಿಗೆ ಕಾಂಗ್ರೆಸ್ ನೀಡಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು. ಆದರೆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಕಾಂಗ್ರೆಸ್ ಜೈರಾಂ ರಮೇಶ್ರನ್ನು ಆಯ್ಕೆ ಮಾಡಿದೆ.
https://newsics.com/news/india/mansoon-will-late-on-this-year/111060/
ಹಲಸು, ಸಪೋಟ ಇತ್ಯಾದಿ ಹಣ್ಣುಗಳ ಬೀಜಗಳನ್ನು ಸಗಣಿ, ಗೊಬ್ಬರ ಇತ್ಯಾದಿಗಳೊಂದಿಗೆ ಸೇರಿಸಿ ಅದಕ್ಕೆ ಮಣ್ಣನ್ನು ಮಿಶ್ರಮಾಡಿ ಉಂಡೆ ಕಟ್ಟುವುದು. ಈ ಉಂಡೆಗಳನ್ನು ಕಾಡುಗಳಲ್ಲಿ ಎಸೆದುಬಿಡುವುದು. ಇದೇ ಬೀಜದುಂಡೆ ಹಾಗೂ ಅದರ ಪ್ರಯೋಗ. ಮೇಲ್ನೋಟಕ್ಕೆ...
• ಪದ ಭಟ್
newsics.com@gmail. com
ಬಾ ಮಚ್ಚಾ ಒಂದು ಟೀ ಕುಡಿಯೋಣ ಎನ್ನುವುದರಿಂದ ಹಿಡಿದು ಬನ್ನಿ ಸಾರ್ ಒಂದು ಕಪ್ ಟೀ ಕುಡಿಯೋಣ ಎನ್ನುವವರೆಗೂ ಟೀ ಪ್ರಚಲಿತ. ಕೆಲವರಿಗೆ ಕಪ್ನಲ್ಲಿ ಬಿಸಿ ಬಿಸಿ ಟೀ...
newsics.com
ಬೆಂಗಳೂರು: ಮಹಾಭಾರತದ 'ಅಶ್ವತ್ಥಾಮ'ನಾಗಲು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಸಿದ್ಧರಾಗುತ್ತಿದ್ದಾರೆ.
ಹೌದು, ಶಿವರಾಜ್ ಕುಮಾರ್ “ಅಶ್ವತ್ಥಾಮ’ ಎಂಬ ಸಿನಿಮಾ ಮಾಡಲಿದ್ದಾರೆ. ಈಗ ಈ ಚಿತ್ರ ಸೆಟ್ಟೇರುವ ಹಂತಕ್ಕೆ ಬಂದಿದೆ. ಚಿತ್ರ ಸೆಪ್ಟೆಂಬರ್ನಿಂದ ಆರಂಭವಾಗುವ ಸಾಧ್ಯತೆ ಹೆಚ್ಚಿದೆ.
“ಅವನೇ...
ಸ್ವಂತವಾಗಿ ಯೋಚಿಸುವುದನ್ನು ಚಿಂತನೆ ಮಾಡುವುದನ್ನು ಬಿಟ್ಟುಬಿಡುತ್ತಾ ಇದ್ದೇವೆ.
ಅಸಹಾಯಕತೆಗೆ ಬೀಳುತ್ತಿದ್ದೇವೆ.
ಯಾರೋ ಹೇಳುವುದನ್ನು , ಮಾಧ್ಯಮದಲ್ಲಿ ಬಂದದ್ದನ್ನು , ಸಾಮಾಜಿಕ ಜಾಲತಾಣಗಳಲ್ಲಿ ಕಂಡದ್ದನ್ನು , ಪರಾಮರ್ಶೆಗೆ ಒಳಪಡಿಸದೆಯೇ ನಂಬುತ್ತೇವೆ.
ಧ್ವನಿಬಿಂಬ 20
♦ ಬಿ. ಕೆ. ಸುಮತಿ
ಹಿರಿಯ ಉದ್ಘೋಷಕರು,...