newsics.com
ಮಂಗಳೂರು :ಕರಾವಳಿ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮಿತಿಮೀರಿದ್ದು ಭಾರೀ ಮಳೆಗೆ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಹರಿವಿನ ಮಟ್ಟ ಹೆಚ್ಚಾಗಿದೆ. ಕುಮಾರಧಾರಾ ನದಿಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಾದ ಪರಿಣಾಮ ಶ್ರೀ ಕ್ಷೇತ್ರ ಕುಕ್ಕೆಯ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ.
ಸ್ನಾನಘಟ್ಟದ ಜೊತೆಯಲ್ಲಿ ದೇವರಕಟ್ಟೆ ಕೂಡ ಭಾಗಶಃ ಮುಳುಗಡೆಯಾಗಿದೆ ಎನ್ನಲಾಗಿದೆ. ಆದರೆ ಭಕ್ತಾದಿಗಳು ಇದನ್ನು ಲೆಕ್ಕಿಸದೇ...
newsics.com
ಬೆಂಗಳೂರು : ಪೊಲೀಸ್ ನೇಮಕಾತಿ ಅಕ್ರಮ ಆರೋಪದಲ್ಲಿ ಎಡಿಜಿಪಿ ಅಮೃತ್ ಪೌಲ್ರನ್ನು ಬಂಧಿಸಲಾಗಿದೆ. ಅಮೃತ್ ಪೌಲ್ ನೇಮಕಾತಿ ವಿಭಾಗದ ಸುಪ್ರೀಂ ಆಗಿದ್ದರು. ಅಮೃತ್ ಪೌಲ್ ಕಚೇರಿಯಲ್ಲಿಯೇ ಓಎಂಆರ್ ಶೀಟ್ಗಳನ್ನು ತಿದ್ದುವ ಕೆಲಸ ಮಾಡಲಾಗಿತ್ತು ಎನ್ನಲಾಗಿದೆ.ನಾಲ್ಕು ದಿನಗಳ ಕಾಲ ಅಮೃತ್ ಪೌಲ್ರಿಗೆ ಸಿಐಡಿ ವಿಚಾರಣೆ ನಡೆಸಿತ್ತು. ಅಮೃತ್ ಪೌಲ್ ವಿರುದ್ಧ ಸೂಕ್ತ ಸಾಕ್ಷ್ಯಗಳು ದೊರಕಿದ ಹಿನ್ನೆಲೆಯಲ್ಲಿ...
newsics.com
ಬೆಂಗಳೂರು: ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಬಳಸುತ್ತಿರುವುದು ಪತ್ತೆ ಹಚ್ಚಲಾಗಿದೆ. ಜೈಲಿನಲ್ಲಿ ಇದ್ದುಕೊಂಡೇ ಆರೋಪಿಗಳು ಟಿಕ್ ಟಾಕ್ ಕೂಡ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಟಿಕ್ ಟಾಕ್ ಭಾರತದಲ್ಲಿ ನಿಷೇಧವಿದ್ದರೂ ಇದರ ನಕಲಿ ಆವೃತ್ತಿಗಳು ಲಭ್ಯ ಇವೆ. ನಕಲಿ ಟಿಕ್ ಟಾಕ್ ಬಳಸುತ್ತಿದ್ದರು ಎನ್ನಲಾಗಿದೆ.
ಎರಡು ದಿನಗಳ ಹಿಂದೆ ಜೈಲಿನ...
newsics.com
ನವದೆಹಲಿ: ಪಂಜಾಬಿನ ಜನಪ್ರಿಯ ಯುವ ಗಾಯಕ ಸಿಧು ಮೂಸೆವಾಲ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅಂಕಿತ್ ಸಿರ್ಸಾ ನನ್ನು ಪೊಲೀಸರು ಬಂಧಿಸಿದ್ದಾರೆ
ಮೇ 29ರಂದು ಜೀಪ್ ನಲ್ಲಿ ತೆರಳುತ್ತಿದ್ದ ಸಿಧು ಮೂಸೆವಾಲ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅತ್ಯಂತ ಸಮೀಪದಿಂದ ಅಂಕಿತ್ ಸಿರ್ಸಾ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಅಂಕಿತ್ ಸಿರ್ಸಾ...
newsics.com
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮನೆಯಲ್ಲಿ ಮಲಗಿದ್ದ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಈಜಿಪುರದಲ್ಲಿ ಈ ಪ್ರಕರಣ ವರದಿಯಾಗಿದೆ.
ಮನೆಯಲ್ಲಿ ಮಲಗಿದ್ದ ವೇಳೆ ಅಪರಿಚಿತನೊಬ್ಬ ಕಾಲಿಂಗ್ ಬೆಲ್ ಮಾಡಿದ್ದ ಎಂದು ಆರೋಪಿಸಲಾಗಿದೆ. ಆಕೆ ಬಾಗಿಲು ತೆರೆದಾಗ ಮನೆಯ ಒಳಗೆ ಬಂದ ಆರೋಪಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ವಿದ್ಯಾರ್ಥಿನಿ ...
newsics.com
ಚೆನ್ನೈ: ಅಸ್ಸಾಂನ ಜನಪ್ರಿಯ ಯುವ ನಟ ಕಿಶೋರ್ ದಾಸ್ ಇನ್ನಿಲ್ಲ. 30ರ ಹರೆಯದಲ್ಲಿ ಕಿಶೋರ್ ದಾಸ್ ಕ್ಯಾನ್ಸರ್ ರೋಗದಿಂದ ಮೃತಪಟ್ಟಿದ್ದಾರೆ.
ಚೆನ್ನೈನಲ್ಲಿ ಕಳೆದ ಹಲವು ತಿಂಗಳಿನಿಂದ ಕಿಶೋರ್ ದಾಸ್ ಚಿಕಿತ್ಸೆ ಪಡೆಯುತ್ತಿದ್ದರು. ಕ್ಯಾನ್ಸರ್ 4ನೇ ಹಂತಕ್ಕೆ ತಲುಪಿದ ಕಾರಣ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಈ ಹಿಂದೆ ಗುವಾಹಟಿಯಲ್ಲಿ ಚಿಕಿತ್ಸೆ ಪಡೆದಿದ್ದ ಕಿಶೋರ್ ದಾಸ್ ಬಳಿಕ ಚೆನ್ನೈ ಆಸ್ಪತ್ರೆಗೆ...
newsics.com
ನವದೆಹಲಿ: ತಮಿಳುನಾಡಿನ ಡಾಕ್ಯುಮೆಂಟರಿ ನಿರ್ದೇಶಕಿಯೊಬ್ಬರು ಕಾಳಿ ಮಾತೆ ಕುರಿತ ಅವಮಾನಕಾರಿ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಕಾಳಿ ಮಾತೆ ಸಿಗರೇಟ್ ಸೇದುತ್ತಿರುವ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಇದಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ದೆಹಲಿಯಲ್ಲಿ ನಿರ್ದೇಶಕಿ ಲೀನಾ ಮಣಿ ಮೇಕಲೈ ವಿರುದ್ಧ ದೂರು ನೀಡಲಾಗಿದೆ.
ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಪೋಸ್ಟರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
newsics.com
ಮುಂಬೈ: ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ವಿಶ್ವಾಸ ಮತ ಗೆದ್ದಿದೆ. ವಿಧಾನಸಭೆಯಲ್ಲಿ ಸರ್ಕಾರದ ಪರವಾಗಿ 164 ಶಾಸಕರು ಮತ ಚಲಾಯಿಸಿದ್ದಾರೆ. ಇದರೊಂದಿಗೆ ಮೊದಲ ಅಗ್ನಿ ಪರೀಕ್ಷೆಯಲ್ಲಿ ಶಿಂಧೆ ನೇತೃತ್ವದ ಸಮ್ಮಿಶ್ರ ಸರ್ಕಾರ ಜಯಗಳಿಸಿದೆ
ಶಿವಸೇನೆಯ ಏಕನಾಥ್ ಶಿಂಧೆ ಬಣದ ಜತೆ ಸೇರಿ ಬಿಜೆಪಿ ಸರ್ಕಾರ ರಚಿಸಿದೆ. ಅತೀ ದೊಡ್ಡ ಪಕ್ಷವಾಗಿದ್ದರೂ ಶಿವಸೇನಾ ಅಭ್ಯರ್ಥಿಗೆ ಮುಖ್ಯಮಂತ್ರಿ...
newsics.com
ವಾಷಿಂಗ್ಟನ್: ಜಗತ್ತಿನ ಜನಪ್ರಿಯ ಅನಿಮೇಟಡ್ ಕಾರ್ಟೂನ್ ಬ್ರಾಂಡ್ ಗಳಲ್ಲಿ ಒಂದಾಗಿರುವ ಮಿಕ್ಕಿ ಮೌಸ್ ಮೇಲಿನ ಹಕ್ಕನ್ನು ಮನೋರಂಜನಾ ಕ್ಷೇತ್ರದ ದೈತ್ಯ ಸಂಸ್ಥೆ ಡಿಸ್ನಿ ಶೀಘ್ರದಲ್ಲಿಯೇ ಕಳೆದುಕೊಳ್ಳಲಿದೆ.
ಅಮೆರಿಕದ ಕಾನೂನಿನ ಅನ್ವಯ 2024ರಲ್ಲಿ ಇದು ಎಲ್ಲರ ಬಳಕೆಗೆ ಮುಕ್ತವಾಗಿರಲಿದೆ. ಮಿಕ್ಕಿ ಮೌಸ್ ಮೇಲೆ ಹೊಂದಿದ್ದ ಹಕ್ಕು ಕೊನೆಗೊಳ್ಳಲಿದೆ. ಅದು ಸಾರ್ವತ್ರಿಕ ಬಳಕೆಗೆ ಮುಕ್ತವಾಗಿರಲಿದೆ.
1928 ಅಕ್ಚೋಬರ್ 4ರಂದು ಮಿಕ್ಕಿ...
newsics.com
ಶಿಮ್ಲಾ: ಹಿಮಾಚಲಪ್ರದೇಶದ ಕುಲು ಬಳಿ ಭೀಕರ ಅಪಘಾತ ಸಂಭವಿಸಿದೆ. ಬಸ್ ಕಣಿವೆಗೆ ಮಗುಚಿ ಬಿದ್ದ ಪರಿಣಾಮ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 16 ಮಂದಿ ಮೃತಪಟ್ಟಿದ್ದಾರೆ. ಸಾವನ್ನಪ್ಪಿದವರಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ವರದಿಯಾಗಿದೆ.
ಬಸ್ ನಲ್ಲಿ 45 ಮಂದಿ ಪ್ರಯಾಣಿಸುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿದ ಬಸ್ ಆಳವಾದ ಕಂದಕಕ್ಕೆ ಉರುಳಿ ಬಿತ್ತು ಎಂದು ವರದಿಯಾಗಿದೆ.
ಗಾಯಗೊಂಡಿರುವವರನ್ನು...
newsics.com
ನವದೆಹಲಿ: ದೇಶದಲ್ಲಿ ಕೊರೋನಾ ಹಾವಳಿ ಮುಂದುವರಿದಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 16,135 ಮಂದಿಯಲ್ಲಿ ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 13,958 ಮಂದಿ ಗುಣಮುಖರಾಗಿದ್ದಾರೆ.
ಕೊರೋನಾದಿಂದ ಕಳೆದ 24 ಗಂಟೆ ಅವಧಿಯಲ್ಲಿ 24 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿರುವ ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ 1, 13, 864....
newsics.com
ಮಂಗಳೂರು: ರಾಜ್ಯದಲ್ಲಿ ಕರಾವಳಿ, ಮಲೆನಾಡು ಮತ್ತು ಕೊಡಗಿನಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಕೊಡಗಿನಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಭಾಗಮಂಡಲ- ನಾಪೋಕ್ಲು ರಸ್ತೆ ಮಾರ್ಗ ಬಂದ್ ಆಗಿದೆ. ಜಿಲ್ಲೆಯಲ್ಲಿ ಹಲವೆಡೆ ಭೂ ಕುಸಿತ ಸಂಭವಿಸಿದೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಳಸದ ಹೆಬ್ಬಾಳೆ ಸೇತುವೆ ನೀರಿನಲ್ಲಿ ಮುಳುಗಡೆಯಾಗಿದೆ. ಸೇತುವೆ...
newsics.com
ಪಾಟ್ನ: ಆರ್ ಜೆ ಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಮನೆಯ ಮೆಟ್ಟಿಲುಗಳ ಮೇಲೆ ಎಡವಿ ಬಿದ್ದು ಗಾಯಮಾಡಿಕೊಂಡಿದ್ದಾರೆ. ಅವರ ಭುಜ ಮುರಿತವಾಗಿದೆ. ಬೆನ್ನಿಗೆ ಕೂಡ ಗಾಯವಾಗಿದೆ.
ಮೇವು ಹಗಹರಣದಲ್ಲಿ ಅಪರಾಧಿಯಾಗಿರುವ ಲಾಲೂ ಪ್ರಸಾದ್ ಯಾದವ್ ಇದೀಗ ಜಾಮೀನನ ಮೇಲೆ ಬಿಡುಗಡೆಯಾಗಿದ್ದರು. ಲಾಲು ಪ್ರಸಾದ್ ಯಾದವ್ ಹಲವು ರೋಗಗಳಿಂದ ಬಳಲುತ್ತಿದ್ದಾರೆ. ವಿದೇಶದಲ್ಲಿ ಚಿಕಿತ್ಸೆ ಪಡೆಯುವ ಸಲುವಾಗಿ...
newsics.com
ಕೋಪ್ ಹೇಗನ್, ಡೆನ್ಮಾರ್ಕ್ : ಡೆನ್ಮಾರ್ಕ್ ರಾಜಧಾನಿ ಕೋಪ್ ಹೇಗನ್ ನಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಪ್ರತಿಷ್ಟಿತ ಮಾಲ್ ಮೇಲೆ ದಾಳಿ ನಡೆಸಲಾಗಿದ್ದು, ಭಯೋತ್ಪಾದಕ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ.
ಗುಂಡಿನ ದಾಳಿಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಭಯೋತ್ಪಾದಕ ದಾಳಿ ಎಂಬ ಶಂಕೆ ಮೂಡುತ್ತಿದೆ ಎಂದು...
newsics.com
ಬೆಂಗಳೂರು: ಸಣ್ಣ ಕೈಗಾರಿಕೆ ಹಾಗೂ ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್ ನಾಗಿಣಿ ಡಾನ್ಸ್ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಹೊಸಕೋಟೆ ತಾಲೂಕಿನ ಕಟ್ಟಿಗೆನಹಳ್ಳಿ ಗ್ರಾಮದಲ್ಲಿ ಕಾರ್ಯಕರ್ತರ ಭುಜದ ಮೇಲೆ ಕುಳಿತು ಎಂಟಿಬಿ ನಾಗಿಣಿ ಡಾನ್ಸ್ ಮಾಡಿರುವಂತಹ ವೀಡಿಯೋ ಇದೀಗ ವೈರಲ್ ಆಗುತ್ತಿದೆ. ಜಡಿಗೇನಹಳ್ಳಿ ಹೋಬಳಿಯ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆಗೆ ಆಗಮಿಸಿದ ವೇಳೆಯಲ್ಲಿ ಎಂಟಿಬಿ ಕಾರ್ಯಕರ್ತರೊಂದಿಗೆ...
newsics.com
ಚಿಕ್ಕಮಗಳೂರು: ಸೀಳು ನಾಯಿ ಹಾಗೂ ಬೀದಿನಾಯಿಗಳಿಗೆ ಹೆದರಿದ ಜಿಂಕೆಯೊಂದು ಮನೆಯ ಹಾಲ್ ನಲ್ಲಿ ಬಂದು ಕುಳಿತುಕೊಂಡ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಣಿವೆ ಗ್ರಾಮದಲ್ಲಿ ನಡೆದಿದೆ.
ಕಾಡಿನ ಸಮೀಪ ಇರುವ ಕಣಿವೆ ಗ್ರಾಮದಲ್ಲಿ ಮೇವು ತಿನ್ನುತ್ತಾ ಬಂದ ಜಿಂಕೆ ನಾಡಿಗೆ ಕಾಲಿಟ್ಟಿತ್ತು. ಜಿಂಕೆಯನ್ನು ಕಂಡ ಬೀದಿ ನಾಯಿಗಳು ಜಿಂಕೆಯನ್ನು ಬೇಟೆಯಾಡಲು ಮುಂದಾದವು. ಆಗ ಅವುಗಳಿಂದ ತಪ್ಪಿಸಿಕೊಂಡ...
newsics.com
ಆಸ್ಟ್ರೇಲಿಯಾ: ಕಳೆದ ವಾರ ಸಿಡ್ನಿಯಲ್ಲಿ ಮೊದಲ ಬಾರಿಗೆ ವರದಿಯಾದ ಮಾರಣಾಂತಿಕ ವರೋವಾ ಮಿಟೆ ಕಾರಣದಿಂದ, ಏಕಾಏಕಿ ಆರು ಮಿಲಿಯನ್ ಜೇನುನೊಣಗಳನ್ನು ಆಸ್ಟ್ರೇಲಿಯಾದ ಅಧಿಕಾರಿಗಳು ಕೊಂದಿದ್ದಾರೆ.
ಪ್ರಪಂಚದಾದ್ಯಂತ ಜೇನುನೊಣಗಳಿಗೆ ದೊಡ್ಡ ಬೆದರಿಕೆ ಎಂದು ಕರೆಯಲ್ಪಡುವ ವರೋವಾ ಮಿಟೆ ಪರಾವಲಂಬಿ ಕೀಟವು, ಜೇನುನೊಣಗಳ ಮೇಲೆ ದಾಳಿ ಮಾಡುತ್ತದೆ ಮತ್ತು ಅವುಗಳನ್ನು ತಿನ್ನುತ್ತದೆ. ಜೊತೆಗೆ ಅವುಗಳ ಹಾರಾಟದ ಕಾರ್ಯಕ್ಷಮತೆಯನ್ನು ದುರ್ಬಲಗೊಳಿಸುತ್ತದೆ....
newsics.com
ಬಳ್ಳಾರಿ: ರಾಜಸ್ತಾನದ ಉದಯಪುರದಲ್ಲಿ ದುಷ್ಕರ್ಮಿಗಳು ಕನ್ನಯ್ಯ ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಇಂದು ಬಳ್ಳಾರಿ ಬಂದ್ ಗೆ ಕರೆ ನೀಡಿವೆ. ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸುವಂತೆ ಕೆಲವು ಸಂಘಟನೆಗಳು ಮನವಿ ಮಾಡಿವೆ
ದೇಶ ಭಕ್ತ ನಾಗರಿಕರ ವೇದಿಕೆ ಮತ್ತು ಇತರ ಸಂಘಟನೆಗಳು ಈ ಕರೆ ನೀಡಿದ್ದು, ಬಳ್ಳಾರಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಕನ್ನಯ್ಯ...
newsics.com
ಬೆಳಗಾವಿ: ಹೆತ್ತ ತಂದೆಯೇ 4 ವರ್ಷದ ಮಗಳ ಕೆನ್ನೆ, ಎದೆ ಭಾಗಕ್ಕೆ ಕಚ್ಚಿ ವಿಕೃತಿ ಮೆರೆದ ಘಟನೆ ಬೆಳಗಾವಿ ತಾಲೂಕಿನ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೃತ್ತಿಯಲ್ಲಿ ಆರ್ಎಂಸಿ ವೈದ್ಯನಾಗಿರುವ ತಂದೆ ಕುಡಿದ ಮತ್ತಿನಲ್ಲಿ ಇಂತಹ ಅಮಾನವೀಯ ಕೃತ್ಯ ಎಸಗಿದ್ದಾನೆ.
ಪತ್ನಿ ಖಾಸಗಿ ಆಸ್ಪತ್ರೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದು, ಆಕೆ ಕೆಲಸಕ್ಕೆ ಹೋದ...
newsics.com
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಸಂಭವಿಸಿದೆ . ಭಾನುವಾರ ರಾತ್ರಿ 9.20ರ ಹೊತ್ತಿಗೆ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ. ಚೆಂಬು ಮತ್ತು ಪೆರಾಜೆ ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ.
ಕಳೆದ ಒಂದು ವಾರದಿಂದ 9 ಬಾರಿ ಭೂಕಂಪನ ಸಂಭವಿಸಿದೆ. ಇದರಿಂದ ಜನರು ಭಯಭೀತರಾಗಿದ್ದಾರೆ. ಜಿಲ್ಲಾಡಳಿತ ಜನರ ಆತಂಕ ನಿವಾರಿಸಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ದೂರು...
newsics.com
ಮುಂಬೈ; ಭಾನುವಾರ ನಡೆದ ವಿಎಲ್ಸಿಸಿ ಫೆಮಿನಾ ಮಿಸ್ ಇಂಡಿಯಾ ಗ್ರ್ಯಾಂಡ್ ಫಿನಾಲೆಯಲ್ಲಿ ಕರ್ನಾಟಕದ ಸಿನಿ ಶೆಟ್ಟಿ (21) ಅವರು ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 ಪಟ್ಟವನ್ನು ಗೆದ್ದಿದ್ದಾರೆ.
ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಸಮಾರಂಭದಲ್ಲಿ ರಾಜಸ್ಥಾನದ ರೂಬಲ್ ಶೇಖಾವತ್ ಫೆಮಿನಾ ಮಿಸ್ ಇಂಡಿಯಾ 2022 ರ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದರು...
ನರೇಶ್, ರಮ್ಯಾ, ಪವಿತ್ರಾ ಅವರ ಸಾಲು ಸಾಲು Flash Back ಮತ್ತು ಚಿತ್ರಗಳು!
ಒಬ್ಬರು ವರದಿಗಾರರು ಹೇಳುತ್ತಾರೆ "ಇವರ ಸಂಬಂಧ ಪವಿತ್ರವೋ ಅಪವಿತ್ರವೋ? ಕಾದು ನೋಡಬೇಕಿದೆ" ಎಂದು.
ನಮ್ಮ ವಾಹಿನಿಗಳು ಎಷ್ಟು ಪವಿತ್ರ?
ವರದಿಗಾರರ "ಭಾಷಾ ಪ್ರೌಢಿಮೆ'", "ಪದಪುಂಜಗಳು" ಕೇಳಿಕೊಳ್ಳುವ ಪರಿ ಅಸಹ್ಯ ಹುಟ್ಟಿಸುತ್ತಿವೆ.
ಧ್ವನಿಬಿಂಬ 27
♦ ಬಿ.ಕೆ. ಸುಮತಿ
ಹಿರಿಯ ಉದ್ಘೋಷಕರು, ಆಕಾಶವಾಣಿ, ಬೆಂಗಳೂರು
newsics.com@gmail.com
ಬೆಂಗಳೂರಿನ ಡಿಆರ್ಡಿಒ ಅದ್ಭುತವಾದದ್ದನ್ನು...
ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತು ಜನರಲ್ಲಿ ಪ್ರಯೋಜನಕಾರಿಯಾಗುವಷ್ಟು ಅರಿವು ಇರಲೇ ಇಲ್ಲ. ಪರಿಸರ ಸಂರಕ್ಷಣೆ ಕುರಿತಾಗಿ ಮಾತನಾಡುವವರನ್ನು ಕರುಣೆಯಿಂದ ನೋಡುವಂತಹ ಕಾಲ ಎಂದರೂ ತಪ್ಪಾಗದು!
.
ಪಕ್ಷಿ ಸಂರಕ್ಷಣೆ- 9
♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞ, ಅಂಕಣಕಾರರು
www.facebook.com/ksn.bird
ksn.bird@gmail.com
newsics.com@gmail.com
ಕಳೆದ ಬಾರಿ ಪ್ರಸ್ತಾಪಿಸಿದ್ದ ಗಾಯಾ ಕುರಿತಾಗಿ ಹೆಚ್ಚಿನ ಮಾಹಿತಿ ಬೇಕೆಂದು ಅನೇಕ ಓದುಗರು ಕೇಳುತ್ತಿರುವುದರಿಂದ ಅದನ್ನು ವಿವರವಾಗಿ...
newsics.com
ರಾಯಚೂರು; ಕಲುಷಿತ ನೀರು ಸೇವನೆ ಮಾಡಿ 40 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ.
ಅನೇಕರು ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಲ್ಕಂದಿನ್ನಿಯ ಸರ್ಕಾರಿ ಶಾಲೆಯ ಹತ್ತಕ್ಕೂ ಹೆಚ್ಚು ಮಕ್ಕಳು ಹಾಗೂ ಗ್ರಾಮಸ್ಥರು ನಿರ್ಜಲೀಕರಣದಿಂದ ರಾಯಚೂರಿನ ರಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಆರೋಗ್ಯ ಇಲಾಖೆ ಈಗಾಗಲೇ ಎರಡು...
newsics.com
ನವದೆಹಲಿ: ಏರ್ ಇಂಡಿಗೋ ಸಿಬ್ಬಂದಿ ಅನಾರೋಗ್ಯದ ನೆಪವೊಡ್ಡಿ ಶನಿವಾರ ಏರ್ ಇಂಡಿಯಾ ಸಂದರ್ಶನಕ್ಕೆ ತೆರಳಿದ್ದರಿಂದ ಇಂಡಿಗೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ವಿಮಾನಯಾನ ವ್ಯತ್ಯಯ ಉಂಟಾಗಿದ್ದಕ್ಕೆ ಇಂಡಿಗೋ ಬಳಿ ಕಾರಣ ಕೇಳಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.
ಶನಿವಾರ ಇಂಡಿಗೋ ಸಂಸ್ಥೆಯ ಶೇ.55ರಷ್ಟು ವಿಮಾನಯಾನ ಅಸ್ತವ್ಯಸ್ತಗೊಂಡಿತ್ತು. ಇಂಡಿಗೋ ವಿಮಾನ ಕಂಪನಿಯ ಸಿಬ್ಬಂದಿ ಸಂದರ್ಶನಕ್ಕೆ ತೆರಳಿದ್ದರು. ಹೀಗಾಗಿ, ಗೈರುಹಾಜರಾಗಿದ್ದವರು...
newsics.com
ಬೆಂಗಳೂರು ; ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಇಂದು ಒಟ್ಟು 826 ಕೊರೊನಾ ಪ್ರಕರಣ ವರದಿಯಾಗಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 6,666ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,72,285ಕ್ಕೆ ಏರಿಕೆಯಾಗಿದೆ.
ಇಂದು ಯಾವುದೇ ಸಾವು ವರದಿಯಾಗಿಲ್ಲ. ಹೀಗಾಗಿ ಸಾವಿನ ಸಂಖ್ಯೆ 40077 ಆಗಿದೆ. ಬೆಂಗಳೂರಿನಲ್ಲಿ ಇಂದು 746 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ನಗರದಲ್ಲಿ ಸೋಂಕಿತರ...
newsics.com
ಸೂರತ್ (ಗುಜರಾತ್): ಗುಜರಾತ್ ಮೂಲದ ಮೋಟೆಲ್ ಉದ್ಯಮಿಯೊಬ್ಬರನ್ನು ಅಮೆರಿಕದ ಸೌತ್ ಕೆರೊಲಿನಾದಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ.
ಸೂರತ್ ಜಿಲ್ಲೆಯ ಪೊಪ್ರಾ ಗ್ರಾಮದ ನಿವಾಸಿ, 69 ವರ್ಷದ ಜಗದೀಶ್ ಪಟೇಲ್ ಎಂಬುವರೇ ಕೊಲೆಯಾದವರು. ಅಮೆರಿಕದಲ್ಲಿ 2007ರಿಂದ ಜಗದೀಶ್ ಪಟೇಲ್ ಕುಟುಂಬದೊಂದಿಗೆ ವಾಸವಾಗಿದ್ದರು.
ಸೌತ್ ಕೆರೋಲಿನಾದಲ್ಲಿ ಕೆಲ ವರ್ಷಗಳಿಂದ ಮೋಟೆಲ್ ನಡೆಸುತ್ತಿದ್ದರು. ಜೂನ್ 25ರಂದು ಮೋಟೆಲ್ ಬಿಲ್ ವಿಚಾರವಾಗಿ ನಡೆದ...
newsics.com
ನವದೆಹಲಿ: ಹಾಲು ಹಾಗೂ ಹಾಲಿನ ಉತ್ಪನ್ನಗಳ ದರ ಏರಿಕೆಯಾಗುವ ಸಾಧ್ಯತೆಯಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ಟಿ ಕೌನ್ಸಿಲ್ 47ನೇ ಸಭೆಯಲ್ಲಿ ಹಾಲಿನ ಉತ್ಪನ್ನಗಳಾದ ಪ್ರಿ-ಪ್ಯಾಕ್ ಮಾಡಿದ ಮೊಸರು, ಲಸ್ಸಿ ಮತ್ತು ಮಜ್ಜಿಗೆ ಸೇರಿದಂತೆ ಕೆಲವು ಆಹಾರಗಳ ಮೇಲಿನ ತೆರಿಗೆಯಿಂದ ವಿನಾಯಿತಿಯನ್ನು ಹಿಂಪಡೆದಿರುವುದೇ ದರ ಏರಿಕೆಗೆ ಕಾರಣವಾಗಿದೆ.
ಜಿಎಸ್ಟಿ ಹೆಚ್ಚುವರಿ ವೆಚ್ಚ ಹಿನ್ನೆಲೆಯಲ್ಲಿ ಡೈರಿ...
newsics.com
ನವದೆಹಲಿ: ಮಗುವನ್ನು ದತ್ತು ತೆಗೆದುಕೊಳ್ಳಲು ಕಳೆದ ಮೂರು ವರ್ಷಗಳಿಂದ 16 ಸಾವಿರಕ್ಕೂ ಹೆಚ್ಚು ದಂಪತಿ ಕಾಯುತ್ತಿದ್ದಾರೆ.
ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ (ಸಿಎಆರ್ಎ)
ಈ ಮಾಹಿತಿ ನೀಡಿದೆ. ಕಾನೂನಾತ್ಮಕವಾಗಿ ದತ್ತು ತೆಗೆದುಕೊಳ್ಳಲು ಅರ್ಹ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಕಾಯುವುದು ಅನಿವಾರ್ಯವಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
ಮಗುವನ್ನು ದತ್ತು ತಗೆದುಕೊಳ್ಳಲು 28,501 ದಂಪತಿ ಅರ್ಜಿ ಸಲ್ಲಿಸಿದ್ದು, ದತ್ತು...
newsics.com
ಮುದ್ದು ಮಗಳು ಸಮನ್ವಿ ಸಾವಿನಿಂದ ಕಂಗೆಟ್ಟಿದ್ದ ತಾಯಿ, ಕಿರುತೆರೆ ನಟಿ ಅಮೃತಾ ಬಾಳಲ್ಲಿ ಈಗ ಹೊಸ ಲವಲವಿಕೆ ಶುರುವಾಗಿದೆ. ಈಗ ಅಮೃತಾ ರೂಪೇಶ್ ಮನೆಯಲ್ಲಿ ಸಂತಸ ಮನೆ ಮಾಡಿದೆ. ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.
ಅಮೃತಾ ಈಗ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಈ ಮೂಲಕ ನಟಿಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಸಾಕಷ್ಟು ಸಿನಿಮಾ, ಕಿರುತೆರೆಯ ಸೀರಿಯಲ್...
newsics.com
ಬೆಂಗಳೂರು: ಅಕ್ರಮಗಳ ಅಡ್ಡೆ ಎಂಬ ಕುಖ್ಯಾತಿಗೆ ಒಳಗಾಗಿರುವ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕಾರಿ ರಂಗನಾಥ್ ಅವರನ್ನು ವರ್ಗಾ ಮಾಡಲಾಗಿದೆ.
ರಂಗನಾಥ್ ವಿರುದ್ಧ ಹಲವು ಆರೋಪಗಳು ಕೇಳಿ...
ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತು ಜನರಲ್ಲಿ ಪ್ರಯೋಜನಕಾರಿಯಾಗುವಷ್ಟು ಅರಿವು ಇರಲೇ ಇಲ್ಲ. ಪರಿಸರ ಸಂರಕ್ಷಣೆ ಕುರಿತಾಗಿ ಮಾತನಾಡುವವರನ್ನು ಕರುಣೆಯಿಂದ ನೋಡುವಂತಹ ಕಾಲ ಎಂದರೂ ತಪ್ಪಾಗದು!
.
ಪಕ್ಷಿ ಸಂರಕ್ಷಣೆ- 9
♦ ಕಲ್ಗುಂಡಿ...
ಮೈಸೂರ್ ಪಾಕ್ ಇರಲಿ, ರೇಷ್ಮೆ ಇರಲಿ, ಅರಮನೆಯ ಸೌಂದರ್ಯ ಇರಲಿ, ಕಲೆ-ಸಂಸ್ಕೃತಿ ಸಂಗೀತ ಸಾಮಾಜಿಕ ಆರ್ಥಿಕ ರಾಜಕೀಯ ಶೈಕ್ಷಣಿಕ ಎಲ್ಲಾ ಕ್ಷೇತ್ರಗಳಲ್ಲಿಯೂ ಮೈಸೂರು ಸದಾ ಮುಂದೆಯೇ ಇತ್ತು.
ಯದುವಂಶ ಅಂದರೆ ಒಡೆಯರ್ ವಂಶದ ದೊರೆಗಳು...
ಚೋದ್ಯದ ಸಂಗತಿ ಎಂದರೆ ಪ್ರಕೃತಿಯಲ್ಲಿ ತನ್ನ ಆವಾಸವನ್ನು ಹಾಳುಗೆಡಹುವ ಜೀವಿ ಹೇಗೆ ಕೇವಲ ಮಾನವನೋ ಅದನ್ನು ಉದ್ಧರಿಸಲು ಯತ್ನಿಸುವ ಜೀವಿಯೂ ಮಾನವ ಮಾತ್ರ! ಇದೇಕೆ ಹೀಗೆ ಎಂದು ಹೇಳಹೊರಟರೆ ಮಾನವನ ಇತಿಹಾಸವನ್ನೇ ಹೇಳಬೇಕಾದೀತು.
.
...
ನಾವೆಲ್ಲರೂ ಯೋಚಿಸಿ ಪ್ರಬುದ್ಧರಾಗಬೇಕು. ಪ್ರಬುದ್ದ ಜನರಿಂದಲೇ ಪ್ರಬುದ್ಧ ಸರ್ಕಾರ. ಜನಜಾಗೃತಿಯಾಗಬೇಕು. ನಮ್ಮ ಕಸ ಹಾಗೂ ತ್ಯಾಜ್ಯ ನಮ್ಮ ಜವಾಬ್ದಾರಿ ಎಂಬ ಭಾವ ಬೆಳೆಯಬೇಕು. ಹಾಗೆಯೇ ನಮಗೆ ಉತ್ಪನ್ನಗಳನ್ನು ಮಾರುವ ಸಂಸ್ಥೆಗಳಿಗೂ ಇವುಗಳ ವಿಲೇವಾರಿಯ...