newsics.com
ನವದೆಹಲಿ: ಹಾಲು ಹಾಗೂ ಹಾಲಿನ ಉತ್ಪನ್ನಗಳ ದರ ಏರಿಕೆಯಾಗುವ ಸಾಧ್ಯತೆಯಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ಟಿ ಕೌನ್ಸಿಲ್ 47ನೇ ಸಭೆಯಲ್ಲಿ ಹಾಲಿನ ಉತ್ಪನ್ನಗಳಾದ ಪ್ರಿ-ಪ್ಯಾಕ್ ಮಾಡಿದ ಮೊಸರು, ಲಸ್ಸಿ ಮತ್ತು ಮಜ್ಜಿಗೆ ಸೇರಿದಂತೆ ಕೆಲವು ಆಹಾರಗಳ ಮೇಲಿನ ತೆರಿಗೆಯಿಂದ ವಿನಾಯಿತಿಯನ್ನು ಹಿಂಪಡೆದಿರುವುದೇ ದರ ಏರಿಕೆಗೆ ಕಾರಣವಾಗಿದೆ.
ಜಿಎಸ್ಟಿ ಹೆಚ್ಚುವರಿ ವೆಚ್ಚ ಹಿನ್ನೆಲೆಯಲ್ಲಿ ಡೈರಿ...
newsics.com
ನವದೆಹಲಿ: ಮಗುವನ್ನು ದತ್ತು ತೆಗೆದುಕೊಳ್ಳಲು ಕಳೆದ ಮೂರು ವರ್ಷಗಳಿಂದ 16 ಸಾವಿರಕ್ಕೂ ಹೆಚ್ಚು ದಂಪತಿ ಕಾಯುತ್ತಿದ್ದಾರೆ.
ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ (ಸಿಎಆರ್ಎ)
ಈ ಮಾಹಿತಿ ನೀಡಿದೆ. ಕಾನೂನಾತ್ಮಕವಾಗಿ ದತ್ತು ತೆಗೆದುಕೊಳ್ಳಲು ಅರ್ಹ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಕಾಯುವುದು ಅನಿವಾರ್ಯವಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
ಮಗುವನ್ನು ದತ್ತು ತಗೆದುಕೊಳ್ಳಲು 28,501 ದಂಪತಿ ಅರ್ಜಿ ಸಲ್ಲಿಸಿದ್ದು, ದತ್ತು...
newsics.com
ಮುದ್ದು ಮಗಳು ಸಮನ್ವಿ ಸಾವಿನಿಂದ ಕಂಗೆಟ್ಟಿದ್ದ ತಾಯಿ, ಕಿರುತೆರೆ ನಟಿ ಅಮೃತಾ ಬಾಳಲ್ಲಿ ಈಗ ಹೊಸ ಲವಲವಿಕೆ ಶುರುವಾಗಿದೆ. ಈಗ ಅಮೃತಾ ರೂಪೇಶ್ ಮನೆಯಲ್ಲಿ ಸಂತಸ ಮನೆ ಮಾಡಿದೆ. ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.
ಅಮೃತಾ ಈಗ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಈ ಮೂಲಕ ನಟಿಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಸಾಕಷ್ಟು ಸಿನಿಮಾ, ಕಿರುತೆರೆಯ ಸೀರಿಯಲ್...
newsics.com
ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆ ಸಮೀಪದ ಬುಹಾಪುರ ಗ್ರಾಮದಲ್ಲಿ ಯುವಕನೊಬ್ಬನನ್ನು ಹತ್ಯೆ ಮಾಡಲಾಗಿದೆ. ಗ್ರಾಮದ ಹನುಮಂತ ದೇವಸ್ಥಾನದಲ್ಲಿ ಕುತ್ತಿಗೆ ಸೀಳಿ ಹತ್ಯೆ ಮಾಡಿದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.
ಹತ್ಯೆಗೀಡಾದ ಯುವಕ ರಾತ್ರಿ ಹೊತ್ತು ಸಾಮಾನ್ಯವಾಗಿ ದೇವಸ್ಥಾನದಲ್ಲಿ ಮಲಗುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ಸತ್ಯೇಂದ್ರ ಭೂಷಣ್ ತಿಳಿಸಿದ್ದಾರೆ.
ಮೃತದೇಹದ ಮರಣೋತ್ತರ ಪರೀಕ್ಷೆ ನ಼ಡೆಸಲಾಗಿದ್ದು ಉನ್ನತ ಮಟ್ಟದ ತನಿಖೆಗೆ...
newsics.com
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕೇವಲ 9 ತಿಂಗಳು ಬಾಕಿ ಇರುವಂತೆಯೇ ಕಾಂಗ್ರೆಸ್ ಘಟಕ ನಡೆಸಿರುವ ಆಂತರಿಕ ಸಮೀಕ್ಷೆಯ ಫಲಿತಾಂಶವನ್ನು ಬಿಜೆಪಿ ತಳ್ಳಿಹಾಕಿದೆ. ನಿರ್ಲಕ್ಷಿಸುವ ಪ್ರಯತ್ನ ನಡೆಸಿದೆ.
ಆದರೆ ನಿಜವಾದ ಬೆಳವಣಿಗೆ ಬೇರೆಯೇ ಆಗಿದೆ. ರಾಜ್ಯ ಬಿಜೆಪಿಯಲ್ಲಿ ಈ ಸಮೀಕ್ಷೆ ಸಣ್ಣ ಮಟ್ಟಿನ ಕಂಪನ ಸೃಷ್ಟಿಸಿದೆ.
ಬಿಜೆಪಿಯ ಜನಪ್ರಿಯತೆ ತಳಮಟ್ಟದಲ್ಲಿ ರಾಜ್ಯದಲ್ಲಿ ಕುಸಿಯುತ್ತಿದೆಯೇ ಎಂಬ ಆತಂಕ ಪಕ್ಷವನ್ನು ಕಾಡುತ್ತಿದೆ....
newsics.com
ಮುಂಬೈ: ಮಹಾರಾಷ್ಟ್ರದ ರಾಜಕೀಯ ಚದುರಂಗದಾಟದಲ್ಲಿ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮೊದಲ ಜಯ ಗಳಿಸಿದ್ದಾರೆ.
ಶಿಂಧೆ ಮತ್ತು ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ರಾಹುಲ್ ನರ್ವೆಕರ್ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
ನರ್ವೇಕರ್ 160ಕ್ಕೂ ಹೆಚ್ಚು ಮತ ಗಳಿಸಿದ್ದಾರೆ. ನಾಳೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿಶ್ವಾಸ ಮತ ಯಾಚಿಸಲಿದ್ದಾರೆ.
ಕಳೆದ ಎರಡು ವಾರಗಳಿಂದ ಗುವಾಹಟಿ ಮತ್ತು ಗೋವಾದಲ್ಲಿ ವಾಸ್ತವ್ಯ...
newsics.com
ಹಾಸನ: ನರ ಹಂತಕ ಕಾಡಾನೆಯೊಂದು ವ್ಯಕ್ತಿಯ ಅಂತ್ಯಸಂಸ್ಕಾರದ ವೇಳೆ ಕೂಡ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ವರದಿಯಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೆಳಗಳಲೆ ಗ್ರಾಮದ ಕೃಷ್ಣೇ ಗೌಡ(63) ಎಂಬವರು ಆನೆಯ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದರು.
ಶನಿವಾರ ಕಾಫಿ ತೋಟಕ್ಕೆ ತೆರಳಿದ್ದ ವೇಳೆ ಆನೆ ದಾಳಿ ನಡೆಸಿತ್ತು. ಅವರ ಜತೆಗಿದ್ದ ಇಬ್ಬರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಕೃಷ್ಣೇ...
newsics.com
ಮೈಸೂರು: ತೆಲುಗು ನಟ ನರೇಶ್ ಅವರ ಸಂಸಾರದಲ್ಲಿ ಎದ್ದಿರುವ ಬಿರುಗಾಳಿ ಇದೀಗ ಮೈಸೂರಿಗೂ ತಟ್ಟಿದೆ. ಮೈಸೂರಿನ ಹೋಟೆಲ್ ವೊಂದರ ಬಳಿ ಹೈ ಡ್ರಾಮಾ ನಡೆದಿದೆ.
ನರೇಶ್ ಮತ್ತು ಪವಿತ್ರಾ ಲೋಕೇಶ್ ಹುಣಸೂರು ರಸ್ತೆಯ ಹೋಟೆಲ್ ವೊಂದರಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಪಡೆದ ರಮ್ಯಾ ರಘಪತಿ, ಅವರು ಕೊಠಡಿಯಿಂದ ಹೊರ ಬರುವುದನ್ನು ಕಾದು ಕುಳಿತಿದ್ದರು..
ನರೇಶ್ ಮತ್ತು ಪವಿತ್ರಾ...
newsics.com
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಗ್ರಾಮಸ್ಥರು ಇಬ್ಬರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಬಂಧಿತ ಭಯೋತ್ಪಾದಕರನ್ನು ಫೈಸಲ್ ಅಹ್ಮದ್ ದಾರ್ ಮತ್ತು ತಾಲೀಬ್ ಹುಸೈನ್ ಎಂದು ಗುರುತಿಸಲಾಗಿದೆ.
ಜಮ್ಮು ಕಾಶ್ಮೀರದ ರೆಸಾಯಿ ಜಿಲ್ಲೆಯ ಟಕ್ಸಾನ್ ಗ್ರಾಮದಲ್ಲಿ ಭಯೋತ್ಪಾದಕರನ್ನು ಬಂಧಿಸಲಾಗಿದೆ.
ಭಯೋತ್ಪಾದಕರ ಬಳಿ ಇದ್ದ ಎರಡು ಎ ಕೆ ರೈಫಲ್ಸ್ , 7 ಗ್ರೆನೇಡ್ಸ್ ಮತ್ತು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
ಭಯೋತ್ಪಾದಕರನ್ನು ಬಂಧಿಸಿದ ಗ್ರಾಮಸ್ಥರಿಗೆ...
newsics.com
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 16,103 ಕೊರೋನಾ ಸೋಂಕಿನ ಪ್ರಕರಣ ವರದಿಯಾಗಿದೆ.
ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 13, 929 ಮಂದಿ ಗುಣಮುಖರಾಗಿದ್ದಾರೆ.
ಕೊರೋನಾದಿಂದ ಕಳೆದ ಒಂದು ದಿನದಲ್ಲಿ 31 ಮಂದಿ ಮೃತಪಟ್ಟಿದ್ದಾರೆ.
ದೇಶದ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ1,11,711ಕ್ಕೆ ತಲುಪಿದೆ.
ಪಾಸಿಟಿವಿಟಿ ದರ ಶೇಕಡ 4.27 ದಾಖಲಿಸಿದೆ
https://newsics.com/news/india/assault-on-police-actor-arrest-by-pune-police/115463
newsics.com
ಮುಂಬೈ: ಲೇಡಿ ಪೊಲೀಸ್ ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಆರೋಪಕ್ಸೆ ಸಂಬಂಧಿಸಿದಂತೆ ಹಲವು ವೆಬ್ ಸಿರೀಸ್ಗಳಲ್ಲಿ ನಟಿಸಿರುವ ಯುವತಿಯೊಬ್ಬಳನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ನಟಿ ಮೂಲತಃ ಕರ್ನಾಟಕದವರಾಗಿದ್ದಾರೆ ಎಂದು ವರದಿಯಾಗಿದೆ.
ಪ್ರಸ್ತುತ ಅಂಧೇರಿಯಲ್ಲಿ ನೆಲಿಸಿರುವ ನಟಿ ಪುಣೆಯಲ್ಲಿ ಇತ್ತೀಚೆಗೆ ಮಹಿಳಾ ಪೊಲೀಸ್ ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಸಂಬಂಧ ಪರ್ವಿನ್ ಶೇಕ್ ಎಂಬುವರು...
newsics.com
ಕುಂದಾಪುರ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಘಟನೆ ಕುಂದಾಪುರ ಸಮೀಪ ಸಂಭವಿಸಿದೆ.
ಕೋಟೇಶ್ವರದಿಂದ ಬೈಂದೂರಿಗೆ ತೆರಳುತ್ತಿದ್ದ ಕಾರು ಮರವಂತೆ ಬಳಿ ಹೆದ್ದಾರಿಯಿಂದ ಜಿಗಿದು ಸಮುದ್ರಕ್ಕೆ ಬಿದ್ದಿದೆ.
ಕಾರಿನಲ್ಲಿ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು. ಅವರಲ್ಲಿ ಓರ್ವ ಮೃತಪಟ್ಟಿದ್ದು, ಇನ್ನೊಬ್ಬ ನೀರು ಪಾಲಾಗಿದ್ದಾನೆ.
ಕಾರಿನಲ್ಲಿ ಇದ್ದ ಇಬ್ಬರನ್ನು ರಕ್ಷಿಸಲಾಗಿದೆ. ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
https://newsics.com/news/india/yogi-adityanath-offered-pooja-at-bhagya-lakshmi-tempe-in-hyderabad/115458/
newsics.com
ಹೈದರಾಬಾದ್: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೈದರಾಬಾದಿನ ಚಾರ್ ಮಿನಾರ್ ಬಳಿ ಇರುವ ಭಾಗ್ಯ ಲಕ್ಷ್ಮೀ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಚಾರ್ ಮಿನಾರ್ ನ ಸಮೀಪದಲ್ಲಿ ಈ ದೇವಸ್ಥಾನ ಇದೆ.
ಹೈದರಾಬಾದ್ ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಯೋಗಿ ಆದಿತ್ಯನಾಥ್ ಹೈದರಾಬಾದ್ ಗೆ ಆಗಮಿಸಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ಬಹಿರಂಗ...
newsics.com
ಮುಂಬೈ: ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲ ತಾಣದಲ್ಲಿ ಫೋಸ್ಟ್ ಮಾಡಿದ್ದ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಮುಖ ಸೂತ್ರಧಾರ ಸಹಿತ ಏಳು ಆರೋಪಿಗಳನ್ನು ಬಂಧಿಸಲಾಗಿದೆ.
ಇಫ್ರಾನ್ ಈ ಹತ್ಯೆಯ ಸೂತ್ರಧಾರ ಎಂದು ಆರೋಪಿಸಲಾಗಿದೆ. ಆರು ಆರೋಪಿಗಳನ್ನು ನ್ಯಾಯಾಲಯ ಪೊಲೀಸ್ ವಶಕ್ಕೆ ಒಪ್ಪಿಸಿದೆ
ಮೆಡಿಕಲ್ ಸ್ಟೋರ್ ಹೊಂದಿದ್ದ ಉಮೇಶ್ ಎಂಬವರನ್ನು ಅಮರಾವತಿಯಲ್ಲಿ ಹತ್ಯೆ...
newsics.com
ಬೆಂಗಳೂರು: ಕೊಡಗು ಜಿಲ್ಲೆ ಸೇರಿ ರಾಜ್ಯದ ಹಲವೆಡೆ ವ್ಯಾಪಕ ಮಳೆಯಾಗುತ್ತಿದ್ದು, ಜುಲೈ 5ರವರೆಗೂ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ನೈಋತ್ಯ ಮುಂಗಾರು ಚುರುಕಾಗಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಂಗಳೂರು, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ.
ಭಾರೀ ಮಳೆಯಿಂದಾಗಿ ಭಾಗಮಂಡಲದಲ್ಲಿರುವ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಬ್ರಹ್ಮಗಿರಿ...
newsics.com
ಕೊಚ್ಚಿ(ಕೇರಳ): ವಿಮಾನ ನಿಲ್ದಾಣದಲ್ಲಿನ ಅತಿಯಾದ ತಪಾಸಣೆಯಿಂದ ಬೇಸತ್ತ ದಂಪತಿ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಹೇಳಿ ಆತಂಕ ಸೃಷ್ಟಿಸಿದೆ.
ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವಿದೇಶಕ್ಕೆ ತೆರಳುತ್ತಿದ್ದ ದಂಪತಿಯ ಬ್ಯಾಗ್ ತಪಾಸಣೆ ವೇಳೆ ಅದರಲ್ಲಿ 'ಬಾಂಬ್' ಇದೆ ಎಂದು ಹೇಳಿ ಆತಂಕ ಮೂಡಿಸಿದ್ದಾರೆ.
ವಿದೇಶಕ್ಕೆ ತೆರಳಲು ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ರಾತ್ರಿ 1.30...
newsics.com
ಮೈಸೂರು: ಕಳೆದ ಕೆಲ ದಿನಗಳಿಂದ ವಿವಾದಕ್ಕೆ ಒಳಗಾಗಿರುವ ನಟಿ ಪವಿತ್ರಾ ಲೋಕೇಶ್ ಶನಿವಾರ ರಾತ್ರಿ ನಗರದ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ.
ತಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಶನಿವಾರ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸುತ್ತಿದ್ದ ವೇಳೆ ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ. ಹೀಗಾಗಿ ಮೈಸೂರಿಗೆ ಆಗಮಿಸಿದ ತಕ್ಷಣವೇ ಅವರು...
newsics.com
ಕೋಲ್ಕತಾ: ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗದ ಬಿಜೆಪಿ ಮಾಜಿ ನಾಯಕಿ ನೂಪುರ್ ಶರ್ಮಾಗೆ ಶನಿವಾರ ಕೋಲ್ಕತಾ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.
ಕೋಲ್ಕತ್ತಾದ ಎಮ್ಹರ್ಸ್ಟ್ ಸ್ಟ್ರೀಟ್ ಹಾಗೂ ನಾರ್ಕೇಲಡಂಗಾ ಪೊಲೀಸ್ ಠಾಣೆಯ ಅಧಿಕಾರಿಗಳು ಸಮನ್ಸ್ ಜಾರಿಗೊಳಿಸಿದರೂ ನೂಪುರ್ ಶರ್ಮಾ ನಾಲ್ಕನೇ ಬಾರಿಯೂ ವಿಚಾರಣೆಗೆ ಹಾಜರಾಗಿರಲಿಲ್ಲ. ಈ...
newsics.com
ಆಂಧ್ರಪ್ರದೇಶ: ಪ್ರಾಣಿಗಳ ಹುಟ್ಟುಹಬ್ಬ ಆಚರಣೆ ಇತ್ತೀಚೆಗೆ ಟ್ರೆಂಡ್ ಆಗಿದೆ. ಇಲ್ಲೊಬ್ಬ ಯುವಕ ಅದ್ದೂರಿಯಾಗಿ ಕೋಳಿಯ ಬರ್ತಡೇ ಆಚರಿಸಿದ್ದಾನೆ. ಕೋಳಿಗೆ ವಿಶೇಷವಾದ ಗೌನ್ ಹೊಲಿಸಿ ಮತ್ತು ಅದರ ಕುತ್ತಿಗೆಗೆ ಸರ ಹಾಕಿ, ಕೇಕ್ ಕತ್ತರಿಸಿ ಬರ್ತ್ಡೇ ಮಾಡಿದ್ದಾನೆ.
ಕೋಳಿಗೆ ಮೋಟು ಎಂದು ಹೆಸರಿಡಲಾಗಿದೆ. ಆಂಧ್ರಪ್ರದೇಶ ಪೂರ್ವ ಗೋದಾವರಿಯ ಗ್ರಾಮವೊಂದರಲ್ಲಿ ಭಾಸ್ಕರ್ ಎನ್ನುವ ಯುವಕ ಕೋಳಿ ಬರ್ತಡೇ ಮಾಡಿದ್ದಾನೆ.
ಕೋಳಿ...
newsics.com
ಮಡಿಕೇರಿ: ತಾಲೂಕಿನ ಪೆರಾಜೆ ಗ್ರಾಮದಲ್ಲಿ ಶನಿವಾರ ರಾತ್ರಿ 8.25ರಲ್ಲಿ ಭಾರಿ ಪ್ರಮಾಣದ ಶಬ್ದವು ಭೂಮಿಯಿಂದ ಕೇಳಿ ಬಂದಿದ್ದು, ಗ್ರಾಮಸ್ಥರು ಭೂಕಂಪದ ಭಯದಿಂದ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.
ಚೆಂಬು, ಸಂಪಾಜೆ, ಗೂನಡ್ಕ ಭಾಗಗಳಲ್ಲಿ ಶಬ್ದ ಕೇಳಿ ಬಂದೊಡನೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಈ ಕುರಿತು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ...
newsics.com
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್ ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಬುಮ್ರಾ ಸ್ಟುವರ್ಟ್ ಬ್ರಾಡ್ ಅವರ 1 ಓವರ್ ನಲ್ಲಿ 2 ಸಿಕ್ಸ್ ಮತ್ತು 4 ಫೋರ್ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್ನ...
newsics.com
ಮಧ್ಯಪ್ರದೇಶ: ಮರವೇರಿದ ಚಿರತೆಯೊಂದು ಮಂಗನನ್ನು ಬೇಟೆಯಾಡಿದ ರೋಮಾಂಚನಕಾರಿ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ ಎಂದು ಹೇಳಲಾಗಿದೆ.
ಜೂನ್ 28 ರಂದು ಈ ವೀಡಿಯೊವನ್ನು ಹಂಚಿಕೊಂಡಾಗಿನಿಂದ, ಸಕ್ಕತ್ ವೈರಲ್ ಆಗಿದ್ದು, ವೀಡಿಯೊವು 5,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
ಮರವೇರಿ ಕುಳಿತುಕೊಂಡಿದ್ದ ಮಂಗವನ್ನು ಅದರ ಪಕ್ಕದ ಮರಕ್ಕೆ ಹತ್ತಿದ...
newsics.com
ಉಡುಪಿ: ಕರಾವಳಿ ತೀರದ ವಿಶೇಷ ಜಾತಿಯ ಆಮೆ, ಆಲಿವ್ ರಿಡ್ಲಿ ಸಂತತಿ ರಕ್ಷಣೆಗೆ ಸರ್ಕಾರದ ಅರಣ್ಯ ಇಲಾಖೆ ವಿಶೇಷ ಕ್ರಮ ಕೈಗೊಂಡಿದೆ. 5 ವರ್ಷಗಳ ವಿರಾಮದ ನಂತರ ಆಲಿವ್ ರಿಡ್ಲಿ ಆಮೆಗಳು ಸಂತಾನೋತ್ಪತ್ತಿಗೆ ಮರಳಿವೆ.ಆಹಾರಕ್ಕಾಗಿ ಬಳಸುತ್ತಿದ್ದ ಈ ಮೊಟ್ಟೆಗಳನ್ನು ಕಾಪಾಡುವ ನಿಟ್ಟಿನಲ್ಲಿ ಗೂಡು ಪತ್ತೆ ಹಚ್ಚಿದ ಮೀನುಗಾರರಿಗೆ ಸರ್ಕಾರ ಹಣ ನೀಡಲಿದೆ.ಒಂದು ಗೂಡಿಗೆ 500...
newsics.com
ಸ್ಯಾಂಡಲ್ವುಡ್ನ ಹಾಸ್ಯ ನಟ ಚಿಕ್ಕಣ್ಣ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂಬ ವದಂತಿಗಳಿಗೆ ಹಾಸ್ಯ ನಟ ಚಿಕ್ಕಣ್ಣ ಸ್ಪಷ್ಟನೆ ನೀಡಿದ್ದಾರೆ. ಯಾರೋ ಕಿಡಿಗೇಡಿಗಳು ಈ ರೀತಿ ಸುದ್ದಿ ಮಾಡುತ್ತಿದ್ದು ನಾನು ಆರೋಗ್ಯವಾಗಿಯೇ ಇದ್ದೇನೆ ಎಂದು ಹೇಳಿದ್ದಾರೆ.
ಉಪಾಧ್ಯಕ್ಷ ಸಿನಿಮಾ ಮೂಲಕ ಮೊದಲ ಬಾರಿಗೆ ಸಿನಿಮಾದ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ನಟ ಚಿಕ್ಕಣ್ಣ ಇದೇ ಸಿನಿಮಾದ ಶೂಟಿಂಗ್...
newsics.com
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಲಕ್ಕಿಪುರ ಸಮೀಪ ರೈತರಿಬ್ಬರ ಮೇಲೆ ಹುಲಿಯೊಂದು ದಾಳಿ ಮಾಡಿ ಗಾಯಗೊಳಿಸಿದ ಘಟನೆ ನಡೆದಿದೆ.
ಗೋಪಾಲಪುರ ಗ್ರಾಮದ ಗವಿಯಪ್ಪ(45) ಮತ್ತು ರಾಜಶೇಖರ್ ಗಾಯಗೊಂಡ ರೈತರು.ಗವಿಯಪ್ಪನ ಕಣ್ಣು, ಕಿವಿ ಹಾಗೂ ಬೆನ್ನಿನ ಭಾಗಕ್ಕೆ ತೀವ್ರತರವಾದ ಗಾಯಗಳಾಗಿವೆ.ಇನ್ನು, ಬಾಳೆ ತೋಟದಲ್ಲಿ ಅಡಗಿದ್ದ ಹುಲಿಯನ್ನು ನೋಡಲು ತೆರಳಿದ್ದ ರಾಜಶೇಖರ್ ಎಂಬವರ ಮೇಲೂ ವ್ಯಾಘ್ರ ಎಗರಿ ಬಿದ್ದಿದ್ದು ತೀವ್ರವಾಗಿ...
newsics.com
ಚಿತ್ರದುರ್ಗ: ಭಾರತೀಯ ಸೇನೆಯ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕದ ಚಿತ್ರದುರ್ಗದಲ್ಲಿ ಮಾನವರಹಿತ ಯುದ್ಧ ವಿಮಾನ ಪರೀಕ್ಷೆ ನಡೆದಿದ್ದು, ಡಿಆರ್ಡಿಒ ಸ್ಥಾಪಿರುವ ಪರೀಕ್ಷಾ ಕೇಂದ್ರದಲ್ಲಿ ಏರೋನಾಟಿಕಲ್ ಟೆಸ್ಟ್ ರೇಂಜ್ನ ಈ ಪ್ರಯೋಗ ಯಶಸ್ಸು ಕಂಡಿದೆ.
ಜುಲೈ 1 ಶುಕ್ರವಾರದಂದು ಅಟಾನಮಸ್ ಫ್ಲೈಯಿಂಗ್ ವಿಂಗ್ನಿಂದ ಚಿತ್ರದುರ್ಗದ ಚಳ್ಳಕೆರೆಯಲ್ಲಿ ಚಾಲಕ ರಹಿತ ವಿಮಾನ ಹಾರಾಟ ನಡೆಸಲಾಗಿದೆ.ಇದು ಸಂಪೂರ್ಣ ಸ್ವಾಯತ್ತ ಮೋಡ್ನಲ್ಲಿ...
newsics.com
ಬೆಂಗಳೂರು : ಪಾಲಿಕೆಯ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಪಡೆಯುವವರು ಇನ್ಮುಂದೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರಪೇಕ್ಷಣಾ ಪತ್ರ ಅಥವಾ ಒಸಿಯನ್ನು ಪಡೆಯುವ ಅಗತ್ಯವಿಲ್ಲವೆಂದು ರಾಜ್ಯ ಸರ್ಕಾರ ಹೇಳಿದೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಇಂಧನ ಸಚಿವ ಸುನಿಲ್ ಕುಮಾರ್ ಸಂತಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಾಲದ ಒಸಿ ಪದ್ಧತಿಗೆ ನಾವು ನಾಂದಿ ಹಾಡಿದ್ದೇವೆ ಎಂದು ಸಚಿವ ಸುನೀಲ್ ಕುಮಾರ್...
newsics.com
ಯಂತ್ರದಷ್ಟೇ ವೇಗವಾಗಿ ಟಿಕೆಟ್ ನೀಡುವ ಒಬ್ಬ ವ್ಯಕ್ತಿಯ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.ಇವರು ಕೆಲಸ ಮಾಡುವ ವೇಗ ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ ಎಂದು ಹಲವಾರು ಜನರು ಆಶ್ಚರ್ಯ ವ್ಯಕಪಡಿಸಿದ್ದಾರೆ.
ರೈಲ್ವೇ ನಿಲ್ದಾಣದ ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸಲು ವ್ಯಕ್ತಿಯೊಬ್ಬರು ಟಿಕೆಟ್ ವಿತರಣಾ ಯಂತ್ರದ ಮುಂದೆ ನಿಂತು ಅತ್ಯಂತ ವೇಗದಲ್ಲಿ ಕಾರ್ಯನಿರ್ವಹಿಸುವುದು ಈ ವೀಡಿಯೋದಲ್ಲಿ...
newsics.com
ತುಮಕೂರು : ಕಚೇರಿಯಲ್ಲಿಯೇ ಪಿಡಿಒ ಹಾಗೂ ಗ್ರಾಮ ಪಂಚಾಯ್ ಸದಸ್ಯ ಪ್ರಣಯದಾಟ ನಡೆಸಿದ ದೃಶ್ಯಗಳು ಸೆರೆಯಾಗಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿಪುರ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಈ ಘಟನೆ ಸಂಭವಿಸಿದೆ.
ಈ ವಿಡಿಯೋ ನೋಡಿದ ಸಾರ್ವಜನಿಕರು ಪಿಡಿಓ ಕೋಕಿಲಾ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯನ ವಿರುದ್ಧ ಆಕ್ರೋಶ ಹೊರ...
newsics.com
ಜೈಪುರ: ಉದಯಪುರದಲ್ಲಿ ಕನ್ಹಯ್ಯಲಾಲ್ನನ್ನು ಭೀಕರವಾಗಿ ಶಿರಚ್ಛೇಧ ಮಾಡಿದ್ದ ಆರೋಪಿಗಳನ್ನು ಹತ್ತು ದಿನಗಳ ಕಾಲ ಎನ್ಐಎ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ.
ಶನಿವಾರ ಹತ್ಯೆ ಆರೋಪಿಗಳನ್ಜು ಎನ್ಐಎ ಕೋರ್ಟ್ಗೆ ಹಾಜರುಪಡಿಸಿದ್ದ ವೇಳೆ ನಾಲ್ವರು ಆರೋಪಿಗಳ ಮೇಲೆ ವಕೀಲರು ಹಲ್ಲೆ ಮಾಡಿದ್ದಾರೆ
ಹತ್ಯೆಯಲ್ಲಿ ನೇರವಾಗಿ ಭಾಗಿಯಾದ ಮೊಹಮದ್ ಗೌಸ್, ರಿಯಾಜ್ ಅಟ್ಟಾರಿ ಹಾಗೂ ಹತ್ಯೆಗೆ ಸಹಾಯ ಮಾಡಿದ ಮೊಹ್ಶಿನ್...
newsics.com
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಭಾರೀ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಸಾರಡ್ಕದಲ್ಲಿ ಗುಡ್ಡ ಕುಸಿತ ಸಂಭವಿಸಿದೆ.
ರಸ್ತೆಗೆ ಮಣ್ಣಿನ ರಾಶಿ...
ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತು ಜನರಲ್ಲಿ ಪ್ರಯೋಜನಕಾರಿಯಾಗುವಷ್ಟು ಅರಿವು ಇರಲೇ ಇಲ್ಲ. ಪರಿಸರ ಸಂರಕ್ಷಣೆ ಕುರಿತಾಗಿ ಮಾತನಾಡುವವರನ್ನು ಕರುಣೆಯಿಂದ ನೋಡುವಂತಹ ಕಾಲ ಎಂದರೂ ತಪ್ಪಾಗದು!
.
ಪಕ್ಷಿ ಸಂರಕ್ಷಣೆ- 9
♦ ಕಲ್ಗುಂಡಿ...
ಮೈಸೂರ್ ಪಾಕ್ ಇರಲಿ, ರೇಷ್ಮೆ ಇರಲಿ, ಅರಮನೆಯ ಸೌಂದರ್ಯ ಇರಲಿ, ಕಲೆ-ಸಂಸ್ಕೃತಿ ಸಂಗೀತ ಸಾಮಾಜಿಕ ಆರ್ಥಿಕ ರಾಜಕೀಯ ಶೈಕ್ಷಣಿಕ ಎಲ್ಲಾ ಕ್ಷೇತ್ರಗಳಲ್ಲಿಯೂ ಮೈಸೂರು ಸದಾ ಮುಂದೆಯೇ ಇತ್ತು.
ಯದುವಂಶ ಅಂದರೆ ಒಡೆಯರ್ ವಂಶದ ದೊರೆಗಳು...
ಚೋದ್ಯದ ಸಂಗತಿ ಎಂದರೆ ಪ್ರಕೃತಿಯಲ್ಲಿ ತನ್ನ ಆವಾಸವನ್ನು ಹಾಳುಗೆಡಹುವ ಜೀವಿ ಹೇಗೆ ಕೇವಲ ಮಾನವನೋ ಅದನ್ನು ಉದ್ಧರಿಸಲು ಯತ್ನಿಸುವ ಜೀವಿಯೂ ಮಾನವ ಮಾತ್ರ! ಇದೇಕೆ ಹೀಗೆ ಎಂದು ಹೇಳಹೊರಟರೆ ಮಾನವನ ಇತಿಹಾಸವನ್ನೇ ಹೇಳಬೇಕಾದೀತು.
.
...
ನಾವೆಲ್ಲರೂ ಯೋಚಿಸಿ ಪ್ರಬುದ್ಧರಾಗಬೇಕು. ಪ್ರಬುದ್ದ ಜನರಿಂದಲೇ ಪ್ರಬುದ್ಧ ಸರ್ಕಾರ. ಜನಜಾಗೃತಿಯಾಗಬೇಕು. ನಮ್ಮ ಕಸ ಹಾಗೂ ತ್ಯಾಜ್ಯ ನಮ್ಮ ಜವಾಬ್ದಾರಿ ಎಂಬ ಭಾವ ಬೆಳೆಯಬೇಕು. ಹಾಗೆಯೇ ನಮಗೆ ಉತ್ಪನ್ನಗಳನ್ನು ಮಾರುವ ಸಂಸ್ಥೆಗಳಿಗೂ ಇವುಗಳ ವಿಲೇವಾರಿಯ...