Tuesday, August 9, 2022

Home

ಪಾಕಿಸ್ತಾನದ ಮದರಸಾದಲ್ಲಿ ಸ್ಫೋಟ: 20ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

Newsics.com ಇಸ್ಲಾಮಾಬಾದ್: ಪಾಕಿಸ್ತಾನದ ಪೇಶಾವರದಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಇಲ್ಲಿನ ಮದರಾಸದಲ್ಲಿ ಸಂಭವಿಸಿದ ಸ್ಫೋಟದಲ್ಲಿ 20ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ. ಇವರಲ್ಲಿ ಹಲವು ಮಕ್ಕಳ ಸ್ಥಿತಿ ಗಂಭೀರವಾಗಿದೆ. ಇಡೀ ಪ್ರದೇಶವನ್ನು ಭದ್ರತಾಪಡೆ ಸುತ್ತುವರಿದಿದೆ. ಇದು ವಿಧ್ವಂಸಕ ಕೃತ್ಯವೋ ಅಥವಾ ಅನಿರೀಕ್ಷಿತವಾಗಿ ಸಂಭವಿಸಿದ ಸ್ಫೋಟವೊ ಎಂಬುದು ತಿಳಿದು ಬಂದಿಲ್ಲ. ಈ ಮದರಸಾದಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ.

ಒಂದೇ ದಿನ 36469 ಮಂದಿಗೆ ಕೊರೋನಾ ಸೋಂಕು, 488 ಬಲಿ

Newsics.com ನವದೆಹಲಿ: ದೇಶದಲ್ಲಿ  ಕೊರೋನಾದ ಅಬ್ಬರ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ  36,469 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕೊರೋನಾ ಸೋಂಕಿತರ ಸಂಖ್ಯೆ ಇದೀಗ    79.46,429ಕ್ಕೆ ತಲುಪಿದೆ. ಕೊರೋನಾ ಸೋಂಕಿತರಾಗಿದ್ದ   72, 01, 070 ಮಂದಿ ಇದೀಗ  ಗುಣಮುಖರಾಗಿದ್ದಾರೆ 6, 25, 857 ಮಂದಿ ಆಸ್ಪತ್ರೆಗಳಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನಾ ಕಳೆದ 24 ಗಂಟೆಯಲ್ಲಿ 488   ಮಂದಿಯ ಪ್ರಾಣ ...

ಹತ್ರಾಸ್ ಅತ್ಯಾಚಾರ ಪ್ರಕರಣ: ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Newsics.com ನವದೆಹಲಿ: ಉತ್ತರಪ್ರದೇಶದ ಹತ್ರಾಸ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡುವ ಸಾಧ್ಯತೆಯಿದೆ. ಪ್ರಕರಣದ ತನಿಖೆ ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ನಡೆಯಬೇಕು ಎಂದು ಮೃತ ಯುವತಿಯ ಪೋಷಕರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅತ್ಯಾಚಾರ  ಪ್ರಕರಣದ ತನಿಖೆಯನ್ನು ಉತ್ತರಪ್ರದೇಶ ಸರ್ಕಾರ ಈಗಾಗಲೇ ಸಿಬಿಐ ಗೆ ಹಸ್ತಾಂತರಿಸಿದೆ. ಆದರೆ ಕೇಂದ್ರೀಯ ತನಿಖಾ...

ಇಂದು ಪ್ರಧಾನಿ ಮೋದಿ –ಮೈಕಲ್ ಪೊಂಪೈ ಮಹತ್ವದ ಮಾತುಕತೆ

Newsics.com ನವದೆಹಲಿ: ಭಾರತ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಸಚಿವ ಮೈಕಲ್ ಪೊಂಪೈ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಅಪ್ಘಾನಿಸ್ತಾನದಿಂದ ಅಮೆರಿಕದ ಸೇನಾ ಹಿಂತೆಗೆತ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿನ ಪ್ರಸಕ್ತ ಪರಿಸ್ಥಿತಿ ಕುರಿತು ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ. ಅಪ್ಘಾನಿಸ್ತಾನದಲ್ಲಿ ಸೇನೆ ಹಿಂತೆಗೆದುಕೊಳ್ಳುವುದಾಗಿ ಅಮೆರಿಕ ಈಗಾಗಲೇ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ...

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜಾಲ: ಇಬ್ಬರ ಬಂಧನ

Newsics.com ಬೆಂಗಳೂರು:  ಸಿಸಿಬಿ ಪೊಲೀಸರು  ಕ್ರಿಕೆಟ್ ಬೆಟ್ಟಿಂಗ್ ಜಾಲವನ್ನು ಭೇದಿಸಿದ್ದಾರೆ. . ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ಆರೋಪಿಗಳನ್ನು   ಹೊಯ್ಸಳ ಗೌಡ ಮತ್ತು ನರಸಿಂಹ ಮೂರ್ತಿ ಎಂದು ಗುರುತಿಸಲಾಗಿದೆ. ಆರೋಪಿಗಳ ಬಳಿ ಇದ್ದ 13. 5 ಲಕ್ಷ ರೂಪಾಯಿ ಮತ್ತು ಎರಡು ಮೊಬೈಲ್  ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಗೋವಾ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ...

ಕೋಲ್ಕತ್ತಾ ವಿರುದ್ಧ ಪಂಜಾಬ್’ಗೆ ಜಯ

newsics.comಶಾರ್ಜಾ: ಕಿಂಗ್ಸ್ ಇಲೆವೆನ್ ಪಂಜಾಬ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎಂಟು ವಿಕೆಟ್ ಗಳ ಗೆಲುವು ಸಾಧಿಸಿದೆ.ಐಪಿಎಲ್ ನ 46ನೇ ಪಂದ್ಯದಲ್ಲಿ ಕೋಲ್ಕತ್ತಾ ನೀಡಿದ್ದ 150 ರನ್ ಗುರಿ ಬೆನ್ನತ್ತಿದ ಪಂಜಾಬ್ 18.5 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿದೆ. ಪಂಜಾಬ್ ಪರ ನಾಯಕ ಕೆ.ಎಲ್. ರಾಹುಲ್ 28,...

ಕೇಂದ್ರ ಸರ್ಕಾರದ ಆಯ್ದ ನೌಕರರಿಗೆ ಪೆಟರ್ನಿಟಿ ಲೀವ್ ಸೌಲಭ್ಯ

newsics.comನವದೆಹಲಿ: ಕೇಂದ್ರ ಸರ್ಕಾರ ತನ್ನ ಆಯ್ದ ಪುರುಷ ನೌಕರರಿಗೆ ಪೆಟರ್ನಿಟಿ ಲೀವ್ ಸೌಲಭ್ಯ ನೀಡಲು ಮುಂದಾಗಿದೆ.ಮಗು ಪಾಲನೆ ರಜೆ (ಸಿಸಿಎಲ್ - ಚೈಲ್ಡ್ ಕೇರ್ ಲೀವ್) ಅವಕಾಶವನ್ನು ಸರ್ಕಾರ ನೀಡಿದೆ. ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಸಚಿವ ಡಾ. ಜಿತೇಂದ್ರ ಸಿಂಗ್ ಈ ಮಾಹಿತಿ ನೀಡಿದ್ದಾರೆ. ಕೇಂದ್ರದ ಈ ನಿರ್ಧಾರದಿಂದ...

ಮಾಲ್ ನಲ್ಲಿ ‌ಮೂಡಿದ ರಾಮಮಂದಿರದ ಪ್ರತಿಕೃತಿ

NEWSICS.COM ನವದೆಹಲಿ: ದೆಹಲಿಯ ಟ್ಯಾಗೋರ್ ಗಾರ್ಡನ್ ಪ್ರದೇಶದ ಪೆಸಿಫಿಕ್ ಮಾಲ್ ನಲ್ಲಿ ಅಯೋಧ್ಯೆಯ ರಾಮ ಮಂದಿರ ದೇವಾಲಯದ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ. ದೇಶದ ಜನತೆಗೆ ಸಾಂಕ್ರಾಮಿಕ ರೋಗದಿಂದ ಉಂಟಾದ ಕಷ್ಟವನ್ನು ಎದುರಿಸಲು ಬೇಕಾದ ಧೈರ್ಯವನ್ನು ಸ್ಮರಿಸಲು ಮತ್ತು ದುಷ್ಟರ ವಿರುದ್ಧ ಸತ್ಯದ, ವಿಜಯದ ಮನೋಭಾವವನ್ನು ತುಂಬಲು ಈ ದೀಪಾವಳಿಗೆ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. 32 ಅಡಿ ಎತ್ತರ ಮತ್ತು...

ನೀರವ್ ಮೋದಿ ಜಾಮೀನು ಅರ್ಜಿ ಏಳನೇ ಬಾರಿಯೂ ತಿರಸ್ಕೃತ

newsics.comನವದೆಹಲಿ: ದೇಶದಿಂದ ಪಲಾಯನಗೈದಿರುವ ಉದ್ಯಮಿ ನೀರವ್ ಮೋದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಲಂಡನ್ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.ಈವರೆಗೆ ಬ್ರಿಟನ್'ನ ನ್ಯಾಯಾಲಯಗಳು ಏಳನೇ ಬಾರಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೀರವ್ ಮೋದಿ ಈ ಹಿಂದೆ ನಾಲ್ಕು ಬಾರಿ ಮಾರ್ಚ್ 20, 29 , ಮೇ 8 ಹಾಗೂ ನವೆಂಬರ್...

ಆಕ್ಸ್‌ಫರ್ಡ್ ವಿವಿ ಲಸಿಕೆಯಿಂದ ಯುವಕರು, ವೃದ್ಧರಲ್ಲಿ ಏಕರೀತಿಯ ಫಲಿತಾಂಶ

newsics.comರಿಯೋ ಡಿ ಜನೈರೋ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸುತ್ತಿರುವ ಕೋವಿಡ್ 19 ಲಸಿಕೆ ಯುವ ಮತ್ತು ವೃದ್ಧರಿಗೂ ಉತ್ತಮ ಫಲಿತಾಂಶ ನೀಡಲಿದೆ ಎಂದು ಆಸ್ಟ್ರಾಜೆನೆಕಾ ಹೇಳಿದೆ. ಲಸಿಕೆಯ 3ನೇ ಹಂತದ ಪ್ರಯೋಗ ಅಮೆರಿಕ, ಯುಕೆ, ಬ್ರೆಜಿಲ್, ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ. ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಲಸಿಕೆ ಅಭಿವೃದ್ಧಿಯಲ್ಲಿ ಭಾರತದ ಪುಣೆಯ ಸಿರಮ್‌...

ಬೆಂಗಳೂರಿನಲ್ಲಿ 1603, ರಾಜ್ಯದಲ್ಲಿ 3130 ಮಂದಿಗೆ ಕೊರೋನಾ, 42 ಜನ ಬಲಿ

newsics.comಬೆಂಗಳೂರು: ರಾಜ್ಯದಲ್ಲಿ ಇಂದು(ಅ.26) 3,130 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿನ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 805947ಕ್ಕೆ ಏರಿಕೆಯಾಗಿದೆ.ರಾಜ್ಯದಲ್ಲಿ ಸೋಮವಾರ 42 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿಯೇ 20 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 10,947 ಕ್ಕೇರಿಕೆಯಾಗಿದೆ.ಬೆಂಗಳೂರು ನಗರದಲ್ಲಿ ಸೋಮವಾರ 1603 ಮಂದಿಗೆ ಕೊರೋನಾ...

ಟಿ -20 ಸರಣಿ: ಭಾರತ ತಂಡ ಪ್ರಕಟ

newsics.comನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟೆಸ್ಟ್, ಏಕದಿನ ಮತ್ತು ಟಿ -20 ಸರಣಿಯ ತಂಡಗಳನ್ನು ಭಾರತೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.ಟಿ 20 ತಂಡದಲ್ಲಿ ವಿರಾಟ್ ಕೊಹ್ಲಿ, ಶಿಖರ್ ಧವನ್, ಮಯಾಂಕ್ ಅಗರ್ವಾಲ್, ಸಂಜು ಸ್ಯಾಮನ್ಸ್, ವರುಣ್ ಚಕ್ರವರ್ತಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ವಾಷಿಂಗ್ಟನ್...

ಜ್ಯೋತಿಷಿ ಬಂಧನ; ಹುಲಿ, ಕೃಷ್ಣಮೃಗ ಚರ್ಮ ವಶ

newsics.comವಿಜಯಪುರ: ಹುಲಿ ಹಾಗೂ ಕೃಷ್ಣ ಮೃಗದ ಚರ್ಮ ಇಟ್ಟುಕೊಂಡಿದ್ದ ಜ್ಯೋತಿಷಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.ವಿಜಯಪುರದ ಮಹೇಶ್​ ಹಿರೇಮಠ ಬಂಧಿತ ಜ್ಯೋತಿಷಿ. ಬಂಧಿತ ಜ್ಯೋತಿಷಿಯಿಂದ ಪ್ರಾಣಿಗಳ ಚರ್ಮವನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳು ಮಹೇಶ್​ ಹಿರೇಮಠ ನಿವಾಸದ ಮೇಲೆ ದಾಳಿ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಮಹೇಶ್​ ಜಿಲ್ಲೆಯಲ್ಲಿ ಮಾಟ...

ದೇಶದ ಎಲ್ಲರಿಗೂ ಕೊರೋನಾ ಲಸಿಕೆ ಉಚಿತ- ಕೇಂದ್ರ ಸಚಿವ ಸಾರಂಗಿ

newsics.comನವದೆಹಲಿ: ದೇಶದ ಎಲ್ಲರಿಗೂ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರತಾಪ್ ಸಾರಂಗಿ ಹೇಳಿದ್ದಾರೆ.ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತವಾಗಿ ಕೊರೋನಾ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ಮೋದಿಯವರೂ ಹೇಳಿದ್ದಾರೆ. ಪ್ರತಿ ವ್ಯಕ್ತಿಗೂ ಕೋವಿಡ್ ಲಸಿಕೆ ಹಾಕಲು ಅಂದಾಜು 500 ರೂ.ಗಳನ್ನು ಖರ್ಚು ಮಾಡಲಾಗುವುದು ಎಂದು ಬಾಲಂಗೋನರ್ ನಲ್ಲಿ ನಡೆದ...

ಶಿಕ್ಷಕರ ಬೋಧನಾ ಕಾರ್ಯ; ಜಾಗತಿಕವಾಗಿ ಭಾರತಕ್ಕೆ 6ನೇ ಸ್ಥಾನ

NEWSICS.COM ಲಂಡನ್: ಬೋಧನಾ ಕಾರ್ಯಪಡೆಯ ಮೌಲ್ಯದ ಮೌಲ್ಯಮಾಪನದಲ್ಲಿ ವಿಶ್ವದ ಅಗ್ರ 10 ರಾಷ್ಟ್ರಗಳಲ್ಲಿ ಭಾರತ 6ನೇ ಸ್ಥಾನ ಪಡೆದಿದೆ. ಈ ಕುರಿತು 35 ಹೊಸ ದೇಶಗಳ ಜಾಗತಿಕ ಸಮೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ. ಕಳೆದ ವಾರ ಯುಕೆ ಮೂಲದ ವರ್ಕಿ ಫೌಂಡೇಶನ್ ಬಿಡುಗಡೆ ಮಾಡಿದ 'ರೀಡಿಂಗ್ ಬಿಟ್ವೀನ್ ದಿ ಲೈನ್ಸ್: ವಾಟ್ ದಿ ವರ್ಲ್ಡ್ ರಿಯಲಿ ಥಿಂಕ್ಸ್ ಆಫ್ ಟೀಚರ್ಸ್'...

ಪಿಲಿಕುಳದ ಹಿರಿಯ ‘ವಿಕ್ರಂ’ ಇನ್ನಿಲ್ಲ

NEWSICS.COM ಮಂಗಳೂರು : 21 ವರ್ಷದ ಮಂಗಳೂರಿನ ಪಿಲಿಕೊಳದಲ್ಲಿದ್ದ ಅತೀ ಹಿರಿಯ‌ ಹುಲಿ ' ವಿಕ್ರಂ' ಇಂದು(ಅ. 26) ಮೃತಪಟ್ಟಿದೆ. 2003 ರಲ್ಲಿ ಶಿವಮೊಗ್ಗದಿಂದ ಈ ಹುಲಿಯನ್ನು ಪಿಲಿಕೊಳ ನಿಸರ್ಗಧಾಮಕ್ಕೆ ತರಲಾಗಿತ್ತು. ವಯಸ್ಸಿನ ಕಾರಣದಿಂದ ಸಾವನ್ನಪ್ಪಿದೆ ಎಂದು ವನ್ಯಜೀವಿಧಾಮದ ಅಧಿಕಾರಿಗಳು ತಿಳಿಸಿದ್ದಾರೆ.

ಖ್ಯಾತ ವಕೀಲ ಹರೀಶ್ ಸಾಳ್ವೆ ಎರಡನೇ ಮದುವೆಗೆ ಸಿದ್ಧತೆ!

NEWSICS.COM ನವದೆಹಲಿ: ಹಿರಿಯ ವಕೀಲ ಹರೀಶ್ ಸಾಳ್ವೆ (65) ಲಂಡನ್ ಮೂಲದ ಕಲಾವಿದೆಯೊಂದಿಗೆ ಎರಡನೇ ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಕಳೆದ ಜೂನ್ ನಲ್ಲಿ ತಮ್ಮ 38 ವರ್ಷಗಳ ದಾಂಪತ್ಯದಲ್ಲಿ ಪತ್ನಿಯಾಗಿದ್ದ ಮೀನಾಕ್ಷಿ ಸಾಳ್ವೆ ಅವರಿಗೆ ವಿಚ್ಛೇದನ ನೀಡಿದ್ದರು. ಸಾಳ್ವೆ ಈಗ ಅ.28 ರಂದು ಲಂಡನ್ ಮೂಲದ ಕಲಾವಿದೆ ಕ್ಯಾರೋಲಿನ್ ಬ್ರೋಸಾರ್ಡ್ ಅವರನ್ನು ಲಂಡನ್ ನ ಚರ್ಚ್ ...

ಶಾಂಭವಿಗೆ ಮಂಗಳಾರತಿ ಎತ್ತೀರೆ…

ಮಳೆಗಾಲ ಮುಗಿದು ಚಳಿಗಾಲ ಆರಂಭಿಸುವ ಸಮಯದಲ್ಲಿ ಬರುವ ಸಂಭ್ರಮದ ದಿನಗಳು ನವರಾತ್ರಿ. ಒಂಬತ್ತು ಅಥವಾ ಮೂರು ದಿನಗಳ ಕಾಲ ದೇವಿಯನ್ನು ಆರಾಧಿಸುವ, ರಾತ್ರಿ ಸಮಯದಲ್ಲೇ ದೇವಿಗೆ ವೈಭವದ ಪೂಜೆ ಸಲ್ಲಿಸುವ ವಿಶಿಷ್ಟ ಸಂಪ್ರದಾಯವನ್ನು ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಕಾಣಬಹುದು.     ನಮ್ಮೂರ ನವರಾತ್ರಿ    ♦ ಸುಮನಾ ಲಕ್ಮೀಶ newsics.com@gmail.com  ರಾ ತ್ರಿ...

ಆಪಲ್ ಆಪ್ ಸ್ಟೋರ್ ನಿಂದ ಗೂಗಲ್ ಪೇ ಹೊರಕ್ಕೆ

NEWSICS.COM ನವದೆಹಲಿ: ಆಪಲ್ ಆಪ್ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಲು ಗೂಗಲ್ ಪೇ ಇನ್ನು ಮುಂದೆ ಲಭ್ಯವಾಗುವುದಿಲ್ಲ. ಗೂಗಲ್‌ನ ಪ್ರಕಾರ, ಸಮಸ್ಯೆಯನ್ನು ಪರಿಹರಿಸಲು ಅಪ್ಲಿಕೇಶನ್ ಅನ್ನು ಆಪ್ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ ಎನ್ನಲಾಗಿದೆ. ಅಪ್ಲಿಕೇಶನ್‌ನ ಐಒಎಸ್ ಆವೃತ್ತಿಯಲ್ಲಿ ಮಾತ್ರ ಈ ಸಮಸ್ಯೆಯನ್ನು ಗುರುತಿಸಲಾಗಿದೆ, ಇದು ಯಾವುದೇ ರೀತಿಯಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಸಂಬಂಧಿಸಿಲ್ಲ. ಅಲ್ಲದೆ, ಸಮಸ್ಯೆಯನ್ನು ಪರಿಹರಿಸಿದ ನಂತರ, ಬಳಕೆದಾರರಿಗೆ ಗೂಗಲ್ ಪೇ...

ಸರಳ ಜಂಬೂಸವಾರಿ; ಗಾಂಭೀರ್ಯದ ಹೆಜ್ಜೆ ಹಾಕಿದ ಕ್ಯಾಪ್ಟನ್ ಅಭಿಮನ್ಯು

newsics.comಮೈಸೂರು: ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವವಿಖ್ಯಾತ ಮೈಸೂರು ಜಂಬೂಸವಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಚಾಲನೆ ನೀಡಿದರು.750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಕ್ಯಾಪ್ಟನ್ ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದಾಗ ಅಲ್ಲಿದ್ದ ಜನರು ಪುಳಕಗೊಂಡರು. ಅಂಬಾರಿ ವೇದಿಕೆ ಬಳಿ ಬಂದಾಗ ಚಾಮುಂಡೇಶ್ವರಿಗೆ ಸಿಎಂ...

ಇಸ್ಲಾಮೊಫೋಬಿಯಾ ನಿಷೇಧ: ಫೇಸ್‌ ಬುಕ್ ಗೆ ಪಾಕ್ ಪ್ರಧಾನಿ ಪತ್ರ

NEWSICS.COM ನವದೆಹಲಿ: ಫೇಸ್‌ಬುಕ್‌ ಸಿಇಒ ಮಾರ್ಕ್‌ ಝೂಕರ್‌ಬರ್ಗ್‌ಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಫೇಸ್‌ಬುಕ್‌ನಲ್ಲಿ ಹೆಚ್ಚಾಗುತ್ತಿರುವ ಇಸ್ಲಾಮೊಫೋಬಿಯಾ ಪೋಸ್ಟ್ ಗಳಿಗೆ ಕಡಿವಾಣ ಹಾಕುವಂತೆ ಪತ್ರ ಬರೆದಿದ್ದಾರೆ. 'ಫೇಸ್‌ಬುಕ್‌ನಂಥ ಸಾಮಾಜಿಕ ಮಾಧ್ಯಮಗಳಿಂದ ಜಗತ್ತಿನಲ್ಲಿ ಇಸ್ಲಾಮೊಫೋಬಿಯಾ ದ್ವೇಷ, ಮತ್ತು ಹಿಂಸೆ ಹೆಚ್ಚಾಗಲು ಕಾರಣವಾಗುತ್ತಿವೆ ಎಂಬುದನ್ನು ನಿಮ್ಮ ಗಮನಕ್ಕೆ ತರಲೆಂದು ಈ ಪತ್ರ ಬರೆಯುತ್ತಿದ್ದೇನೆ’ ಎಂದು ಇಮ್ರಾನ್ ಖಾನ್ ತಮ್ಮ ಪತ್ರದ...

ದಸರಾ ಆನೆ ಘೀಳಿಟ್ಟಿದ್ದಕ್ಕೆ ಪಲ್ಲಕ್ಕಿ ಎತ್ತುಗಳು ಕಕ್ಕಾಬಿಕ್ಕಿ…

newsics.comಮೈಸೂರು: ಆನೆ ಘೀಳಿಡುವ ಶಬ್ದಕ್ಕೆ ಪಲ್ಲಕ್ಕಿಗೆ ಕಟ್ಟಿದ್ದ ಎತ್ತುಗಳು ಬೆದರಿದ ಘಟನೆ ಮೈಸೂರು ರಾಜವಂಶಸ್ಥ ಯದುವೀರ್ ವಿಜಯಯಾತ್ರೆಯ ವೇಳೆ ನಡೆದಿದೆ.ಅರಮನೆಯಿಂದ ವಿಜಯಯಾತ್ರೆ ವೇಳೆ ಆನೆ, ಕುದುರೆ, ಒಂಟೆಗಳು ಭುವನೇಶ್ವರಿ ದೇವಾಲಯದ ಹತ್ತಿರ ಇರುವ ಶಮಿ ಮರದ ಹತ್ತಿರ ಮೆರವಣಿಗೆ ಹೊರಟಿದ್ದವು. ಈ ಸಮಯದಲ್ಲಿ ಆನೆ ಘೀಳಿಟ್ಟಿದ್ದು, ಆ ಶಬ್ದಕ್ಕೆ ಪಲ್ಲಕ್ಕಿಯಲ್ಲಿ ಕಟ್ಟಿದ್ದ...

2+2 ಸಭೆ: ಭಾರತಕ್ಕೆ ಬಂದಿಳಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ

NEWSICS.COM ನವದೆಹಲಿ: ಭಾರತ-ಅಮೆರಿಕ ನಡುವಿನ 2 ಪ್ಲಸ್ 2 ಮಾತುಕತೆಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೋಂಪಿಯೋ ಪತ್ನಿಯೊಂದಿಗೆ ಸೋಮವಾರ (ಅ.26)  ದೆಹಲಿಗೆ ಆಗಮಿಸಿದ್ದಾರೆ. ಅಮೆರಿಕ - ಭಾರತ ನಡುವಿನ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಮೂರನೇ  ಮಹತ್ವದ ಸಭೆ ನಾಳೆ (ಅ.27) ನಡೆಯಲಿದೆ. ವಿಪಕ್ಷೀಯ ಸಂಬಂಧ ಮತ್ತು ಭದ್ರತಾ ಸಹಕಾರ ಬಲವರ್ಧನೆ ಕುರಿತು ಸಮಾಲೋಚನೆ ನಡೆಯಲಿದೆ....

ಅತ್ಯಾಚಾರ ಆರೋಪ: ಸಬ್ ಇನ್ಸ್ ಪೆಕ್ಟರ್ ಬಂಧನ

Newsics.com ನವದೆಹಲಿ: ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರೊಬ್ಬರನ್ನು ಬಂಧಿಸಲಾಗಿದೆ. ಬಂಧಿತ ಅಧಿಕಾರಿಯನ್ನು  ಪುನೀತ್ ಗ್ರೇವಾಲ್ ಎಂದು ಗುರುತಿಸಲಾಗಿದೆ. ಆರೋಪಿ ಪುನೀತ್ ದೆಹಲಿಯ ವಿಶೇಷ ಪೊಲೀಸ್ ದಳದಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಲ್ಕು ಮಹಿಳೆಯರು ಆರೋಪಿ ಪುನೀತ್ ವಿರುದ್ದ ದೂರು ನೀಡಿದ್ದಾರೆ.  ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿದ್ದ ಮಹಿಳೆಯೊಬ್ಬರು ತಾವು ಅನುಭವಿಸಿದ್ದ...

ನಾ ಕಂಡ ಮೈಸೂರು ದಸರಾ…

ಮೈಸೂರೆಂದರೆ ನೆನಪುಗಳ ಮೆರವಣಿಗೆ... ಸಾಂಸ್ಕೃತಿಕ ಕಾರ್ಯಕ್ರಮಗಳ ದೀವಳಿಗೆ... ದಸರಾ ಉತ್ಸವವಂತೂ ಉತ್ಸಾಹ-ಉಲ್ಲಾಸಗಳ ಸವಾರಿ. ಇಂತಹ ಎಲ್ಲ ಅನುಭವಗಳನ್ನು ಅನುಭವಿಸಿರುವ ಹಿರಿಯ ನೃತ್ಯ ಕಲಾವಿದೆ, ನೃತ್ಯ ನಿರ್ದೇಶಕಿ, ನೃತ್ಯಗಿರಿ ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರದ ಸಂಸ್ಥಾಪಕಿ ವಿದುಷಿ ಡಾ.ಕೃಪಾ ಫಡ್ಕೆ 30 ವರ್ಷದಿಂದ ನಿರಂತರವಾಗಿ ಕಣ್ತುಂಬಿಕೊಂಡ ಮೈಸೂರು ದಸರಾ ವೈಭವವನ್ನು ಅಕ್ಷರರೂಪಕ್ಕಿಳಿಸಿದ್ದಾರೆ.     ದಸರಾ...

ಜಾರ್ಖಂಡ್ ಕಲ್ಲಿದ್ದಲು ಹಗರಣ; ಮಾಜಿ ಸಚಿವ ದಿಲೀಪ್ ರೇಗೆ 3 ವರ್ಷ ಜೈಲು

newsics.comರಾಂಚಿ: ಜಾರ್ಖಂಡ್ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ದಿಲೀಪ್ ರೇ ವಿರುದ್ಧದ ಆರೋಪ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಕಳೆದ ವಾರ ಕೋರ್ಟ್ ಇವರನ್ನು ಅಪರಾಧಿ ಎಂದು ಘೋಷಿಸಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿರಲಿಲ್ಲ. ಇಂದು ಶಿಕ್ಷೆಯ...

ದಿಶಾ ಸಾಲ್ಯಾನ್ ನಿಗೂಢ ಸಾವು: ತನಿಖೆಗೆ ಸುಪ್ರೀಂ ನಕಾರ

Newsics.com ನವದೆಹಲಿ:  ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿದ್ದ ದಿಶಾ ಸಾಲ್ಯಾನ್ ಅವರ ನಿಗೂಢ ಸಾವಿನ ಕುರಿತಂತೆ ಸುಪ್ರೀಂ ಕೋರ್ಟ್ ಮೇಲ್ನೋಟದಲ್ಲಿ ಸಿಬಿಐ ತನಿಖೆಗೆ ಆದೇಶ ನೀಡಬೇಕೆಂಬ ಮನವಿಯನ್ನು ಸರ್ವೋಚ್ಚ  ನ್ಯಾಯಾಲಯ ತಳ್ಳಿಹಾಕಿದೆ. ಅರ್ಜಿ ದಾರರು ಅರ್ಜಿ ಹಿಂದಕ್ಕೆ ಪಡೆಯುವಂತೆ ನ್ಯಾಯಾಲಯ ಸೂಚಿಸಿದೆ. ಮನವಿ ಸಂಬಂಧ ಬಾಂಬೆ ಹೈಕೋರ್ಟ್  ನಲ್ಲಿ ಅರ್ಜಿ ಸಲ್ಲಿಸುವಂತೆ ಸರ್ವೋಚ್ಚ...

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಗೆ ಕೊರೋನಾ ಸೋಂಕು

Newsics.com ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜಿತ್ ಪವಾರ್ ಆರೋಗ್ಯವಾಗಿದ್ದಾರೆ. ಆತಂಕ ಪಡಬೇಕಾಗಿಲ್ಲ ಎಂದು ಅವರ ಸಮೀಪವರ್ತಿಗಳು ಹೇಳಿದ್ದಾರೆ. ಎರಡು ದಿನಗಳ ಹಿಂದೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್  ಅವರಲ್ಲಿ ಕೊರೋನಾ ಸೋಂಕು ಕಂಡು ಬಂದಿತ್ತು. ಫಡ್ನಾವೀಸ್ ಅವರು ಬಿಹಾರದಲ್ಲಿ...

ಎಡನೀರು ಮಠದ ನೂತನ ಸ್ವಾಮೀಜಿಗೆ ಕಂಚಿಯಲ್ಲಿ ಸನ್ಯಾಸ ದೀಕ್ಷೆ

Newsics.com ಕಾಸರಗೋಡು: ಎಡನೀರು ಮಠದ ನೂತನ ಸ್ವಾಮೀಜಿಗಳಾಗಿ ಸಚ್ಚಿದಾನಂದ ಭಾರತಿ ಅವರು ನಿಯುಕ್ತಿಗೊಂಡಿದ್ದಾರೆ. ಕಂಚಿಯಲ್ಲಿ ನಡೆದ ಸನ್ಯಾಸ ದೀಕ್ಷೆ ಸಮಾರಂಭದಲ್ಲಿ ಕಂಚಿ ಶ್ರೀಗಳು  ಪೂರ್ವಾಶ್ರಮದ ಜಯರಾಮ ಮಂಜತ್ತಾಯ ಅವರಿಗೆ ಸನ್ಯಾಸ ದೀಕ್ಷೆ ನೀಡಿದರು. ಈ ಸಂಬಂಧ ಕಂಚಿ ಮಠದಲ್ಲಿ ಹಲವು ವೈದಿಕ ಕಾರ್ಯಕ್ರಮಗಳು ಜರುಗಿದವು ತೋಟಕಾಚರ್ಯ ಪರಂಪರೆ ಪಾಲಿಸುತ್ತಿರುವ  ಎಡನೀರು ಮಠ ಕಾಸರಗೋಡಿನಿಂದ ಸುಮಾರು 9 ಕಿಲೋ...

ಬೆಳಗಾವಿಯಲ್ಲಿ ರೌಡಿ ಶೀಟರ್ ಬರ್ಬರ ಹತ್ಯೆ

Newsics.com ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ನೆತ್ತರು ಹರಿದಿದೆ. ರೌಡಿ ಶೀಟರ್ ಶೆಹಬಾಜ್ ಪಠಾಣ್ ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದ ಶೆಹಬಾಜ್  ವಾಹನಕ್ಕೆ ಡಿಕ್ಕಿ ಹೊಡೆದ  ಬಳಿಕ ಅಟ್ಟಿಸಿಕೊಂಡು ಹೋಗಿ  ದುಷ್ಕರ್ಮಿಗಳು ಶೆಹಬಾಜ್ ಹತ್ಯೆ ಮಾಡಿದ್ದಾರೆ. ಮಾಜಿ ಡಿವೈಎಸ್ ಪಿ ಮನೆಗೆ ಶೆಹಬಾಜ್ ನುಗ್ಗಿದ್ದರೂ ಅವರ ಎದುರೇ ಈ ಕೊಲೆ...
- Advertisement -

Latest News

12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಾ ಮೊಬೈಲ್ ಬ್ಯಾನ್‌ಗೆ ಕೇಂದ್ರ ಸರ್ಕಾರ ಚಿಂತನೆ

newsics.com ನವದೆಹಲಿ: ಚೀನಾ ಕಂಪನಿಗಳ 12,000 ರೂ.ಗಳಿಗಿಂತ (150 ಡಾಲರ್) ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಮಾರಾಟ ನಿರ್ಬಂಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕುಗ್ಗುತ್ತಿರುವ ದೇಶೀಯ ಮೊಬೈಲ್ ಉದ್ಯಮ...
- Advertisement -

ರಂಗನತಿಟ್ಟು ಇದೀಗ ರಾಮ್‍ಸಾರ್ ತಾಣ!!

ರಾಮ್‍ಸಾರ್ ನಿಯಮಾನುಸಾರವಾಗಿ ಭಾರತದಲ್ಲಿ ಅನೇಕ ಪಕ್ಷಿತಾಣಗಳನ್ನು ರಾಮ್‍ಸಾರ್‍ ತಾಣಗಳು ಎಂದು ಘೋಷಿಸಲಾಯಿತು. ಈ ನಿಟ್ಟಿನಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಪಾತ್ರ ಬಹುಹಿರಿದು. ಪಕ್ಷಿ ಸಂರಕ್ಷಣೆ -14 ♦ ಕಲ್ಗುಂಡಿ...

Friendship Day; ಸ್ನೇಹದ ಬಂಧ ಇನ್ನಷ್ಟು ಗಟ್ಟಿಯಾಗಲಿ

ಪ್ರತೀ ವ್ಯಕ್ತಿಗೂ, ಪ್ರತೀ ವ್ಯಕ್ತಿತ್ವಕ್ಕೂ ಒಂದು ಸ್ನೇಹ ಬಳಗ ಇದ್ದೇ ಇರುತ್ತದೆ. ಬದುಕಿನ ಏಳು -ಬೀಳು, ಖುಷಿ ಎಲ್ಲವನ್ನೂ ಹಂಚಿಕೊಳ್ಳುವ ಅಪ್ಯಾಯಮಾನವಾದ ಜೀವಗಳೇ ಸ್ನೇಹಿತರು. newsics.com ವಾರಗಟ್ಟಲೆ ಮೆಸೇಜ್ ಇಲ್ಲ, ಫೋನ್ ಕಾಲ್ ಕೂಡ ಇಲ್ಲದಿದ್ದರೂ...

ಓ ಸಾವೇ, ನೀ ಘನತೆಯಿಂದ ಬಾ…

ಪ್ರತಿನಿತ್ಯ ನಾವು ಕಾಣುವ ಅತಿ ಹೆಚ್ಚು ಸುದ್ದಿ ಸಾವಿನದ್ದೇ. ದಿನಪತ್ರಿಕೆ ತೆರೆದರೆ ಮೂರು ಅಥವಾ ನಾಲ್ಕನೇ ಪುಟದಲ್ಲಿ ಕಣ್ಣಾಡಿಸಿದರೆ ಮೊದಲು ಕಾಣುವುದು ಸಾವುಗಳು !! ♦ ಬಿ.ಕೆ ಸುಮತಿ ಹಿರಿಯ ಉದ್ಘೋಷಕರು, ಆಕಾಶವಾಣಿ, ಬೆಂಗಳೂರು newsics.com@gmail.com ದಿನವೊಂದಕ್ಕೆ ಕನಿಷ್ಠ...

ಹುಲಿಯನ್ನಷ್ಟೇ ಉಳಿಸಿದರೆ ಸಾಲದು; ಜಿಂಕೆಯೂ, ಅರಣ್ಯವೂ ಸಂರಕ್ಷಣೆಯಾಗಲಿ

ಹುಲಿಯನ್ನು ಸಂರಕ್ಷಿಸಬೇಕು ಎಂದರೆ ಅದರ ಆಹಾರವಾದ ಜಿಂಕೆ ಜಾತಿಯ ಪ್ರಾಣಿಗಳನ್ನು ರಕ್ಷಿಸಬೇಕು. ಅವುಗಳ ರಕ್ಷಣೆ ಎಂದರೆ ಅವುಗಳ ಆಹಾರವಾದ ಸಸ್ಯರಾಶಿಯನ್ನು ರಕ್ಷಿಸಬೇಕು. ಅವುಗಳ ಬೇಟೆಯನ್ನು ತಪ್ಪಿಸಬೇಕು. ಪಕ್ಷಿ ಸಂರಕ್ಷಣೆ-13 ...
error: Content is protected !!