Tuesday, October 4, 2022

Home

ಬೆಂಕಿ ಪೆಟ್ಟಿಗೆ ಗಾತ್ರದ ಅಪರೂಪದ ಇಲಿಜಿಂಕೆ!

NEWSICS.COM ಪೋಲೆಂಡ್: ಅಳಿವಿನಂಚಿನಲ್ಲಿರುವ ಪ್ರಬೇಧಗಳಲ್ಲಿ ಒಂದಾದ ಅಪರೂಪದ ಇಲಿಜಿಂಕೆ ಪೋಲಾಂಡ್'ನ ರೊಕ್ಲಾ ಮೃಗಾಲಯದಲ್ಲಿ ಕಂಡುಬಂದಿದೆ. ಆಗ ತಾನೆ ಜನಿಸಿದ ಇಲಿಜಿಂಕೆಯ ಫೋಟೋವನ್ನು ಛಾಯಾಗ್ರಾಹಕರೊಬ್ಬರು ಸೆರೆ ಹಿಡಿದಿದ್ದಾರೆ. ಇದನ್ನು ಚಿರ್ವೋಟೈನ್ ಎಂದು ಕರೆಯುತ್ತಾರೆ. ಇದರ ಗಾತ್ರ ಬೆಂಕಿಪೊಟ್ಟಣದಷ್ಟಿದ್ದು ಕೇವಲ 100ಗ್ರಾಂ‌ ತೂಕವಿರುತ್ತದೆ. ಬೇಟೆಯಾಡುವುದರಿಂದ ಹಾಗೂ ತಾಳೆ ಮರಗಳ ತೋಟದಿಂದಾಗಿ ಈ ಪ್ರಬೇಧಗಳು ಅಳಿವಿನಂಚಿನಲ್ಲಿವೆ ಎನ್ನಲಾಗಿದೆ. https://newsics.com/news/world/81-year-old-fish-found/44825/

ಅರ್ಮೇನಿಯ – ಅಜೆಬ್ರೈಜನ್ ಸಂಘರ್ಷ: 2,783 ಸೈನಿಕರ ಮರಣ

NEWSICS.COM ಅಜೆಬ್ರೈಜಾನ್: ವಿವಾದಾತ್ಮಕ ಪ್ರದೇಶವಾದ ನಾಗರ್ನೊ-ಕರಾಬಖ್'ನಲ್ಲಿ ಅರ್ಮೇನಿಯಾದೊಂದಿಗಿನ ಸಂಘರ್ಷದಲ್ಲಿ 2,783 ಸೈನಿಕರು ಸಾವನ್ನಪ್ಪಿದ್ದಾರೆ ಎಂದು  ಅಜೆಬ್ರೈಜನ್  ಗುರುವಾರ (ಡಿ3) ತಿಳಿಸಿದೆ. ಸೆಪ್ಟೆಂಬರ್ ನಲ್ಲಿ ಪ್ರಾರಂಭವಾಗಿದ್ದ ಸಂಘರ್ಷ ರಷ್ಯಾದ ದಲ್ಲಾಳಿಗಳ ಶಾಂತಿ ಒಪ್ಪಂದದ ನಂತರ ನವೆಂಬರ್ ನಲ್ಲಿ ಕೊನೆಗೊಂಡಿತ್ತು. ಅರ್ಮೇನಿಯಾ ಅಧಿಕೃತವಾಗಿ ಸೈನಿಕರ ಸಾವಿನ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ ಆದರೆ ಅಧಿಕಾರಿಯೊಬ್ಬರು 2,317 ಅರ್ಮೇನಿಯನ್ ಸೈನಿಕರು ಮೃತಪಟ್ಟಿದ್ದಾರೆ ಎಂದು...

ರಸ್ತೆ ಅಗಲೀಕರಣಕ್ಕೆ ಮರ ಕಡಿಯುವಂತಿಲ್ಲ- ಸುಪ್ರೀಂ ತೀರ್ಪು

NEWSICS.COM ನವದೆಹಲಿ: ರಸ್ತೆ ಅಗಲೀಕರಣಕ್ಕೆ ಮಥುರಾ ದೇವಸ್ಥಾನಕ್ಕೆ ಸಾಗುವ ದಾರಿಯ ಸುಮಾರು 3 ಸಾವಿರ ಮರಗಳನ್ನು ಕಡಿಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ (ಡಿ.2) ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಈ ತೀರ್ಪು ನೀಡಿದ್ದಾರೆ. ಮಥುರಾಕ್ಕೆ ಸಾಗುವ 25 ಕಿಮೀ ಉದ್ದ ರಸ್ತೆಯನ್ನು ಅಗಲಗೊಳಿಸಲು 2,940 ಮರಗಳನ್ನು ಕಡಿಯುವುದಕ್ಕೆ ಅನುಮತಿ ನೀಡುವಂತೆ...

ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ; ಶಿವಮೊಗ್ಗದಲ್ಲಿ ಬಿಗು ಸ್ಥಿತಿ

newsics.com ಶಿವಮೊಗ್ಗ: ಭಜರಂಗದಳದ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಇದೀಗ ಬಿಗುವಿನ ವಾತಾವರಣ ಏರ್ಪಟ್ಟಿದೆ.ಗುರುವಾರ ಬೆಳಗ್ಗೆ ವಾಕಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದಂತ ಭಜರಂಗದಳದ ಕಾರ್ಯಕರ್ತ ನಾಗೇಶ್ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಈ ವಿಷಯ ತಿಳಿದ ಕಾರ್ಯಕರ್ತರು, ಮಧ್ಯಾಹ್ನದ ವೇಳೆಗೆ ನಗರದ ರವಿವರ್ಮ ಬೀದಿ...

ಪಿರಮಿಡ್ ಬಳಿ ಫೋಟೋ ಶೂಟ್: ಇಬ್ಬರ ಬಂಧನ

NEWSICS.COM ಈಜಿಪ್ಟ್: ಕೈರೋ ಹೊರಗಿನ ಪಿರಮಿಡ್ ಆಫ್ ಜೊಸರ್ ನಲ್ಲಿ ಪ್ರಾಚೀನ ಉಡುಪಿನಲ್ಲಿ ರೂಪದರ್ಶಿ ಸಲ್ಮಾ ಅಲ್-ಶಿಮಿ ಫೋಟೋ ತೆಗೆಸಿಕೊಂಡಿದ್ದಾರೆ. ಪರಿಣಾಮ ಪಿರಾಮಿಡ್'ಗಳಿಗೆ ಅಗೌರವ ತೋರಿಸಿದ್ದೀರಿ ಎಂದು ಈಜಿಪ್ಟ್ ಪೋಲೀಸರು ಛಾಯಾಗ್ರಾಹಕ ಹಾಗೂ ರೂಪದರ್ಶಿಯನ್ನು ಬಂಧಿಸಿದ್ದಾರೆ. ಈಜಿಪ್ಟ್ ನ 4,700 ವರ್ಷಗಳ ಹಳೆಯ ಜೋಸರ್ನ ಸ್ಟೆಪ್ ಪಿರಮಿಡ್ ಬಳಿ ಖಾಸಗಿಯಾಗಿ ಫೋಟೋ ಶೂಟ್ ಮಾಡಿಸಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ...

ಖ್ಯಾತ ಹೃದಯ ತಜ್ಞ ಡಾ. ಶ್ರೀನಿವಾಸಮೂರ್ತಿ ಇನ್ನಿಲ್ಲ

NEWSICS.COM ಹುಬ್ಬಳ್ಳಿ: ಖ್ಯಾತ ಹೃದಯ ತಜ್ಞ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಬಿ.ಕೆ ಶ್ರೀನಿವಾಸಮೂರ್ತಿ(80) ಇಂದು( ಡಿ.3) ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು ಮೂರು ದಿನಗಳ ಹಿಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ವಿಧಿವಶರಾಗಿದ್ದಾರೆ. ಮಾಜಿ ಕೇಂದ್ರ ಸಚಿವೆ ದಿ. ಸುಷ್ಮಾ ಸ್ವರಾಜ್ ಅವರ ಆಪ್ತರಾದ...

ಮಾಲ್ಡೀವ್ಸ್ ದಿನಗಳ ಫೋಟೋ ಹಂಚಿಕೊಂಡ ನಟಿ ವೇದಿಕಾ

ಶಿವಲಿಂಗ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತವಾಗಿರುವ ನಟಿ ವೇದಿಕಾ, ಸದ್ಯ ಮಾಲ್ಡೀವ್ಸ್ ನ ಕಡಲ ಕಿನಾರೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಮಾಲ್ಡೀವ್ಸ್ ನಲ್ಲಿ ತೆಗೆಸಿಕೊಂಡ ಹಾಟ್ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ತಮ್ಮ ಡಿಫರೆಂಟ್ ಲುಕ್'ನಿಂದ ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ . ಸದ್ಯ ಪಂಚ ಭಾಷಾ ನಟಿ ವೇದಿಕಾ ಹಾಟ್ ಲುಕ್ ಸಕ್ಕತ್ ವೈರಲ್ ಆಗಿದೆ. ವೇದಿಕಾ...

ಗ್ರಾಮೀಣ ಇ-ಸ್ಟೋರ್’ನಲ್ಲಿ 10ಕೋಟಿ ರೂ.‌ಹೂಡಿಕೆ ಮಾಡಿದ ಟಾಟಾ

NEWSICS.COM ಮುಂಬೈ: ಟಾಟಾ ಡಿಜಿಟಲ್ ಸರ್ಕಾರದ ಗ್ರಾಮೀಣ ಇ-ಕಾಮರ್ಸ ಉದ್ಯೋಗವಾದ ಗ್ರಾಮೀಣ ಇ-ಸ್ಟೋರ್ ನಲ್ಲಿ 10ಕೋಟಿ ರೂ. ಹೂಡಿಕೆ ಮಾಡಿದೆ ಎಂದು ವರದಿಯಾಗಿದೆ. ಈ ಮೂಲಕ ಟಾಟಾ ಡಿಜಿಟಲ್  ಸಿ ಎಸ್ ಸಿ  ಗ್ರಾಮೀಣ ಮಂಡಳಿಯ ಇ-ಸ್ಟೋರ್ ನ ಮಂಡಳಿಯಲ್ಲಿ ಸ್ಥಾನ ಪಡೆಯಲಿದೆ. ಈ ಕುರಿತು ಹೆಚ್ ಡಿ ಎಫ್ ಸಿ ಬ್ಯಾಂಕ್ ನೊಂದಿಗೆ ಸಂಭಾವ್ಯ ಷೇರು...

ಯುಎಸ್: ಒಂದೇ ದಿನ 3,157 ಮಂದಿ ಕೊರೋನಾಗೆ ಬಲಿ

NEWSICS.COM ಯುಎಸ್: ಕೊರೋನಾ ಸೋಂಕಿಗೆ ಯುಎಸ್ ನಲ್ಲಿ ಒಂದೇ ದಿನ 3,157 ಜನ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಕೋವಿಡ್ ಟ್ರಾಕಿಂಗ್ ಯೋಜನೆಯ ವರದಿಯ ಪ್ರಕಾರ ಬುಧವಾರ ಒಂದೇ ದಿನ 1,00,200 ಜನಕ್ಕೆ ಸೋಂಕು ತಗುಲಿದೆ. ಚಳಿಗಾಲದ ಪ್ರಾರಂಭವಾಗುತ್ತಿದ್ದಂತೆ ಪರಿಸ್ಥಿತಿ ಹದಗೆಡುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ವರೆಗೆ 2,73,836 ಜನರು ಸಾವನ್ನಪ್ಪಿದ್ದರೆ, 13.9 ದಶಲಕ್ಷಕ್ಕೂ ಹೆಚ್ಚು ಜನರು...

ಇಬ್ಬರು ಎನ್’ಸಿಬಿ ತನಿಖಾಧಿಕಾರಿಗ‌ಳ ಅಮಾನತು

NEWSICS.COM ಮುಂಬೈ: ಮುಂಬೈ ವಲಯದ ಘಟಕದಿಂದ ಎನ್ ಸಿ ಬಿ ತನ್ನ ಇಬ್ಬರು ತನಿಖಾಧಿಕಾರಿಗಳನ್ನು ಅಮಾನತುಗೊಳಿಸಿದೆ. ಹಾಸ್ಯ ನಟಿ ಭಾರತಿ ಸಿಂಗ್ ದಂಪತಿ ಹಾಗೂ ಕರಿಷ್ಮಾ ಪ್ರಕಾಶ್ ಅವರ ವಿರುದ್ಧದ ಮಾದಕ ಜಾಲ ಪ್ರಕರಣಗಳಲ್ಲಿ ಜಾಮೀನು ಪಡೆಯುವಲ್ಲಿ ಸಹಾಯ ಮಾಡಿದ್ದಾರೆಂಬ ಆರೋಪದಡಿ ಇಬ್ಬರು ತನಿಖಾಧಿಕಾರಿಗಳನ್ನು ಅಮಾನತುಗೊಳಿಸಿದೆ. ಪ್ರಾಥಮಿಕ ವಿಚಾರಣೆಯ ನಂತರ ಇಬ್ಬರು ತನಿಖಾಧಿಕರಿಗಳನ್ನು ಅಮಾನತುಗೊಳಿಸಿ ಇಲಾಖೆಯ ವಿಚಾರಣೆಗೆ ಒಳಪಡಿಸಲಾಗಿದೆ...

ತಜ್ಞರ ವಶದಲ್ಲಿರುವ ಈ ಮೀನಿಗೆ 81 ವರ್ಷ!

NEWSICS.COM ಆಸ್ಟ್ರೇಲಿಯಾ: 2016ರಲ್ಲಿ ಆಸ್ಟ್ರೇಲಿಯಾನ್ ಇನ್ಸ್ಟಿಟ್ಯೂಟ್ ಆಫ್ ಮೆರೈನ್ ಸೈನ್ಸ್ ಹಿಡಿದ ಮೀನಿಗೆ 81ವರ್ಷ ವಯಸ್ಸಾಗಿದೆ ಎನ್ನಲಾಗಿದೆ. ವಿಜ್ಞಾನಿಗಳ ಪ್ರಕಾರ ಇದು ಅತ್ಯಂತ ಹಳೆಯ ಉಷ್ಣವಲಯದ ಬಂಡೆ ಮೀನು ಎಂದು ವರದಿಯಾಗಿದೆ. ಸಾಗರ ತಾಪಮಾನವನ್ನು ಬದಲಾಯಿಸುವುದರಿಂದ ಮೀನುಗಳ ಜೀವಶಾಸ್ತ್ರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯಲು ಹೊಸ ಅಧ್ಯಯನದ ಭಾಗವಾಗಿ ಸಂಶೋಧನೆ ಮಾಡಲಾಗಿದೆ ಎಂದು ಅಧ್ಯಯನದ...

ಟೆರೇಸ್ ಮೇಲೆ ಭತ್ತ ಬೆಳೆದ ದಂಪತಿ

NEWSICS.COM ಕೊಟ್ಟಾಯಂ: ಕೇರಳದ ಕೊಟ್ಟಾಯಂನಲ್ಲಿ ಲಾಕ್ ಡೌನ್ ಸಮಯದಲ್ಲಿ ದಂಪತಿಗಳು ಮನೆಯ ಟೆರೇಸ್ ಮೇಲೆ ಭತ್ತ ಬೆಳೆದಿದ್ದಾರೆ. ಟೈಟಸ್ ಮತ್ತು ಪತ್ನಿ ಸೆಲೀನ್ 175 ನೀರಿನ ಬಾಟಲಿಗಳನ್ನು ಬಳಸಿ ತಮ್ಮ ಟೆರೇಸ್‌ನಲ್ಲೇ ಭತ್ತವನ್ನು ಬೆಳೆಸಿದ್ದಾರೆ. ಬಾಟಲಿಗಳನ್ನು ಅಡ್ಡವಾಗಿ ಕತ್ತರಿಸಿ ಅದಕ್ಕೆ ‌ಮಣ್ಣು, ಹಸುವಿನ ಸಗಣಿಯನ್ನು ತುಂಬಿಸಿ ನೀರಿನಲ್ಲಿ ನೆನೆಸಿಟ್ಟು ಅದಕ್ಕೆ ಬೀಜ ಬಿತ್ತಿ ಚಿಗುರೊಡದ...

ಆನ್ಲೈನ್’ನಲ್ಲಿ 2 ಊಟ ಆರ್ಡರ್: ಮನೆ ಬಳಿ ಬಂದರು 30 ಡೆಲಿವರಿ ಹುಡುಗರು!

NEWSICS.COM ಫಿಲಿಪೈನ್ಸ್: ಬಾಲಕಿಯೊಬ್ಬಳು ಆನ್ಲೈನ್'ನಲ್ಲಿ 2 ಊಟ ಆರ್ಡರ್ ಮಾಡಿದರೆ, 30 ಡೆಲಿವರಿ ಹುಡುಗರು 42 ಊಟದೊಂದಿಗೆ ಮನೆ ಬಳಿ ಬಂದ ಘಟನೆ ನಡೆದಿದೆ. ಫಿಲಿಪೈನ್ಸ್'ನ ಸಿಬು ನಗರದಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಆನ್ಲೈನ್'ನಲ್ಲಿ 2 ಊಟ ಆರ್ಡರ್ ಮಾಡಿದ್ದಳು. ಆದರೆ ಇಂಟರ್ನೆಟ್ ಸ್ಲೋ ಇದ್ದ ಕಾರಣ ಬಾಲಕಿ ಆರ್ಡರ್ ಆಯ್ಕೆಯನ್ನು ಹಲವು ಬಾರಿ ಒತ್ತಿದ್ದಾಳೆ.‌...

ಹೆಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ವಿತರಣೆ ತಡೆಗೆ ಆರ್ ಬಿ ಐ ಆದೇಶ

Newsics.com ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ನೂತನ ಕ್ರೆಡಿಟ್ ಕಾರ್ಡ್ ವಿತರಿಸದಂತೆ ಆರ್ ಬಿ ಐ , ಹೆಚ್ ಡಿ ಎಫ್ ಸಿ ಬ್ಯಾಂಕ್ ಗೆ ಆದೇಶ ನೀಡಿದೆ. ಕೆಲವು ತಾಂತ್ರಿಕ ತೊಂದರೆಗಳು ಇತ್ತೀಚೆಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರ್ ಬಿ ಐ ಈ ಮಹತ್ವದ ಆದೇಶ ನೀಡಿದೆ. ಮುಂದಿನ ಆದೇಶದ ತನಕ ಯಾವುದೇ ಹೊಸ ಡಿಜಿಟಲ್ ಯೋಜನೆ ಪ್ರಕಟಿಸದಂತೆ...

ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆ ಮುಂದೂಡಿಕೆ ಸಂಭವ

Newsics.com ಬೆಂಗಳೂರು: ಕೊರೋನಾ ಮಹಾಮಾರಿ ಸೃಷ್ಟಿಸಿರುವ ಅವಾಂತರದಿಂದಾಗಿ ರಾಜ್ಯದಲ್ಲಿ ಮಾರ್ಚ್ ಎಪ್ರಿಲ್ ತಿಂಗಳಲ್ಲಿ ನಡೆಯಲಿರುವ 10 ಮತ್ತು 12 ತರಗತಿಗಳ ವಾರ್ಷಿಕ ಪರೀಕ್ಷೆ ಎರಡು ತಿಂಗಳ ಕಾಲ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ಆನ್ ಲೈನ್ ಕ್ಲಾಸ್ ಗೊಂದಲ, ರಾಜ್ಯದ ಎಲ್ಲ ವಿದ್ಯಾರ್ಥಿಗಳು ಇದರ  ವ್ಯಾಪ್ತಿಗೆ ಬರದಿರುವುದು ಮತ್ತು ತರಗತಿ ಆರಂಭದಲ್ಲಿನ ವಿಳಂಬದಿಂದಾಗಿ  ಪರೀಕ್ಷೆ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ಈ...

ಕಿಸಾನ್ ಸಮ್ಮಾನ್ ಯೋಜನೆಗೆ ಸುಳ್ಳು ಮಾಹಿತಿ: ರೈತರಿಗೆ ಶಾಕ್ ನೀಡಿದ ಕೇಂದ್ರ

Newsics.com ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಅವ್ಯವಹಾರ ನಡೆದಿರುವುದನ್ನು ಕೇಂದ್ರ ಸರ್ಕಾರ ಪತ್ತೆ ಹಚ್ಚಿದೆ. ರಾಜ್ಯದ 85,000ಕ್ಕೂ ಹೆಚ್ಚು ರೈತರು ಈ ಯೋಜನೆಗೆ ತಪ್ಪು ಮಾಹಿತಿ ನೀಡಿ ಸಹಾಯಧನ ಪಡೆದಿರುವುದನ್ನು ಇದೀಗ ದೃಢೀಕರಿಸಲಾಗಿದೆ. ಕೇಂದ್ರ ಕೃಷಿ ಇಲಾಖೆ ನಡೆಸಿದ ತನಿಖೆಯಲ್ಲಿ ಇದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಕೃಷಿ ಇಲಾಖೆಗೆ ಪತ್ರ ಬರೆದಿರುವ ಕೇಂದ್ರ...

ಬೆಂಗಳೂರಿನ ಗರ್ಭಿಣಿಯರಲ್ಲೇ ಅತಿ ಹೆಚ್ಚು ಎಚ್ಐವಿ ಸೋಂಕು!

newsics.comಬೆಂಗಳೂರು: ರಾಜ್ಯದಲ್ಲೇ ಬೆಂಗಳೂರು ನಗರದ ಗರ್ಭಿಣಿಯರಲ್ಲಿ ಅತಿ ಹೆಚ್ಚು ಎಚ್‌ಐವಿ ಸೋಂಕು ಕಂಡುಬಂದಿದೆ.ಗರ್ಭಿಣಿಯರಲ್ಲದವರಿಗೆ ಸೋಂಕು ತಗುಲಿರುವವರ ಪಟ್ಟಿಯಲ್ಲಿ ಬೆಂಗಳೂರು 3ನೇ ಸ್ಥಾನದಲ್ಲಿದೆ. ಈ ಎರಡರಲ್ಲಿಯೂ ವಿಜಯಪುರ 2ನೇ ಸ್ಥಾನದಲ್ಲಿದ್ದರೆ, ಕೊಡಗು ಮತ್ತು ಶಿವಮೊಗ್ಗದ ಗರ್ಭಿಣಿಯರಲ್ಲಿ ಸೋಂಕು ಕಂಡುಬಂದಿಲ್ಲ ಎಂದು ಆರೋಗ್ಯ ಇಲಾಖೆಯ 2018-2091 ರ ಸಾಲಿನ ಸಮೀಕ್ಷೆ ಹೇಳಿದೆ. 2020-2021ನೇ ಸಾಲಿನ...

ಜನವರಿಯಲ್ಲಿ ರಜನಿಕಾಂತ್ ರಾಜಕೀಯ ಪಕ್ಷ ರಚನೆ

Newsics.com ಚೆನ್ನೈ: ನಟ ರಜನಿಕಾಂತ್ ಕೊನೆಗೂ ರಾಜಕೀಯ ಪಕ್ಷ ಸ್ಛಾಪಿಸಲು ನಿರ್ಧರಿಸಿದ್ದಾರೆ.  ಡಿಸೆಂಬರ್ 31ರಂದು ಈ ಸಂಬಂಧ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ. ಇಂದು  ಸಾಮಾಜಿಕ ಜಾಲ ತಾಣ  ಟ್ವಿಟರ್ ನಲ್ಲಿ ರಜನಿಕಾಂತ್ ಈ ಕುರಿತ ಅಭಿಪ್ರಾಯವನ್ನು  ಹಂಚಿಕೊಂಡಿದ್ದಾರೆ. ನೂತನ ರಾಜಕೀಯ ಪಕ್ಷ ಮುಂದಿನ ವರ್ಷ ಜನವರಿಯಲ್ಲಿ ಅಸ್ತಿತ್ವಕ್ಕೆ ಬರುವ ಸಾಧ್ಯತೆಯಿದೆ. ಎರಡು ದಿನಗಳ ಹಿಂದೆ ನೂತನ ಪಕ್ಷ...

2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ: ಟ್ರಂಪ್ ಇಂಗಿತ

Newsics.com ವಾಷಿಂಗ್ಟನ್: ಅಮೆರಿಕದ ಪ್ರಸಕ್ತ  ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತಿರುವುದನ್ನು ಬಹಿರಂಗವಾಗಿ ಒಪ್ಪಿಕೊಳ್ಳದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2024ರ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಇದೀಗ ಚುನಾವಣಾ ಫಲಿತಾಂಶ ನಾನು ನಿರೀಕ್ಷಿಸಿದ್ದಂತೆ  ಪ್ರಕಟವಾಗದಿದ್ದರೆ, 2024ರಲ್ಲಿ ಸ್ಪರ್ಧೆಗೆ ಸಿದ್ದ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕದ ನೂತನ  ಅಧ್ಯಕ್ಷರಾಗಿ ಜೊ ಬೈಡನ್ ಈಗಾಗಲೇ ಆಯ್ಕೆಯಾಗಿದ್ದಾರೆ. ಅಧಿಕೃತವಾಗಿ ಇದನ್ನು ಪ್ರಕಟಿಸಬೇಕಾಗಿದೆ. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ...

ಶಿವಸೇನಾ ನಾಯಕ ಸಂಜಯ್ ರೌತ್ ಆಸ್ಪತ್ರೆಗೆ ದಾಖಲು

Newsics.com ಮುಂಬೈ: ಶಿವಸೇನಾ ನಾಯಕ ಸಂಜಯ್ ರೌತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯ ಸಂಬಂಧಿ ಚಿಕಿತ್ಸೆಗಾಗಿ  ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಂಜಿಯೋ ಪ್ಲಾಸ್ಟಿ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಸಂಜಯ್ ರೌತ್  ಅವರು ಶಿವಸೇನಾದ ಮುಖ ವಾಣಿ ಸಾಮ್ನಾದ ಕಾರ್ಯ ನಿರ್ವಾಹಕ ಸಂಪಾದಕರಾಗಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ನಿಗೂಢ ಆತ್ಮಹತ್ಯೆ ಬಳಿಕ ನಟಿ ಕಂಗನಾ ರಣಾವತ್ ಟೀಕೆಗೆ...

ಪ್ರಧಾನಿ ಮೋದಿ ಜತೆಗಿನ ಪೋಟೋ ಶೇರ್ ಮಾಡಿದ ಇವಾಂಕ ಟ್ರಂಪ್

Newsics.com ವಾಷಿಂಗ್ಟನ್:  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಹಾಗೂ ಅವರ ಸಲಹೆಗಾರರಾಗಿರುವ ಇವಾಂಕಾ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಜತೆಗಿರುವ ಪೋಟೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿದ್ದಾರೆ. 2017ರಲ್ಲಿ ಹೈದರಾಬಾದ್ ನಲ್ಲಿ ನಡೆದ  ಜಾಗತಿಕ ಉದ್ಯಮಶೀಲ ಶೃಂಗಸಭೆಯಲ್ಲಿ ಇವಾಂಕ ಭಾಗವಹಿಸಿದ್ದರು. ಪ್ರಧಾನಿ ಮೋದಿ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೊರೇನಾ ದಿಂದಾಗಿ ದೇಶಗಳ ಮಧ್ಯೆ ನಿಕಟ ಸಹಕಾರದ...

ಪಿಎಫ್ಐ ಅಧ್ಯಕ್ಷನ ಮನೆ ಮೇಲೆ ಇ ಡಿ ದಾಳಿ

Newsics.com ತಿರುವನಂತಪುರಂ: ಮಹತ್ವದ ಬೆಳವಣಿಗೆಯೊಂದರಲ್ಲಿ  ಪೋಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಅಧ್ಯಕ್ಷ  ಸಲಾಂ ಮತ್ತು  ಪಿಎಫ್ಐ ರಾಷ್ಟ್ರೀಯ ಕಾರ್ಯದರ್ಶಿ  ನಸರುದ್ದೀನ್ ಮನೆ ಮೇಲೆ ಜಾರಿ  ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಗೆ ಖಚಿತ ಕಾರಣ ತಿಳಿದು ಬಂದಿಲ್ಲ. ತಿರುವನಂತಪುರಂ ಮತ್ತು ಮಲಪುರಂನಲ್ಲಿರುವ ಮನೆಗಳಲ್ಲಿ ಇದೀಗ ಶೋಧ ಕಾರ್ಯ ಮುಂದುವರಿದೆ.  ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ...

ಮಾನಸಿಕ ಅಸ್ವಸ್ಥ ತಂದೆಯಿಂದ 3 ಪುತ್ರರು, ಓರ್ವ ಪುತ್ರಿಯ ಬರ್ಬರ ಹತ್ಯೆ

newsics.com ಪಾಟ್ನ: ಬಿಹಾರದ ಸಿವಾನ್ ಜಿಲ್ಲೆಯ ಬೆಲಾಹ ಗ್ರಾಮದಲ್ಲಿ ಅತ್ಯಂತ ಭೀಕರ ಘಟನೆ ಸಂಭವಿಸಿದೆ. ಮಾನಸಿಕ ಅಸ್ವಸ್ಥನಾದ ತಂದೆಯೊಬ್ಬ ತನ್ನ ಮೂವರು ಪುತ್ರರನ್ನು ಮತ್ತು ಪುತ್ರಿಯನ್ನು ಹತ್ಯೆ ಮಾಡಿದ್ದಾನೆ. ಮನೆಯಲ್ಲಿದ್ದ ಕತ್ತಿಯಿಂದ ಕಡಿದು ಈ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ಅವದೇಶ್ ಚೌಧರಿ ಎಂದು ಗುರುತಿಸಲಾಗಿದೆ. ಪೇಟೆಯಿಂದ ಮನೆಗೆ ಬಂದಿದ್ದ ಆರೋಪಿ ತಕ್ಷಣ...

ಸಿಬಿಎಸ್ಇ 10, 12ನೇ ತರಗತಿಗೆ ಆನ್ ಲೈನ್ ಪರೀಕ್ಷೆ ಸಾಧ್ಯತೆ ಇಲ್ಲ

Newsics.com ನವದೆಹಲಿ: ಅತ್ಯಂತ ಮಹತ್ವದ ಸಿಬಿಎಸ್ ಇ 10 ಮತ್ತು 12ನೇ ತರಗತಿಯ ಬೋರ್ಡ್ ಎಕ್ಸಾಂ ಗಳನ್ನು ಆನ್ ಲೈನ್ ನಲ್ಲಿ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕಲಾಗಿದೆ. ಅಂತಿಮ ನಿರ್ಧಾರ ಹೊರ ಬರದಿದ್ದರೂ ಆನ್ ಲೈನ್ ನಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ ನೂರಕ್ಕೆ ನೂರು ಇಲ್ಲ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾಗಿ ನೇರವಾಗಿ ಪರೀಕ್ಷೆ ಎದುರಿಸಬೇಕು ಎಂಬ ನಿರ್ಧಾರಕ್ಕೆ...

ಒಂದೇ ದಿನ 35, 551 ಮಂದಿಗೆ ಕೊರೋನಾ ಸೋಂಕು,526 ಬಲಿ

Newsics.com ನವದೆಹಲಿ: ದೇಶದಲ್ಲಿ ಕೊರೋನಾದ ಅಬ್ಬರ   ಮುಂದುವರಿದಿದೆ.ಕಳೆದ  24 ಗಂಟೆ  ಅವಧಿಯಲ್ಲಿ     35,551 ಮಂದಿಯಲ್ಲಿ  ಕೊರೋನಾ ಸೋಂಕು ಕಂಡು ಬಂದಿದೆ. ಕೊರೋನಾಕ್ಕೆ  ಒಂದೇ ದಿನ 526  ಮಂದಿ ಬಲಿಯಾಗಿದ್ದಾರೆ. ಕೊರೋನಾ  ಇದುವರೆಗೆ 1,38,648 ಮಂದಿಯ ಪ್ರಾಣ ಅಪಹರಿಸಿದೆ. ಕೊರೋನಾ ಸೋಂಕಿತರ ಸಂಖ್ಯೆ  95, 34, 965ಕ್ಕೆ ತಲುಪಿದೆ. ಕೊರೋನಾ ಸೋಂಕಿನಿಂದ ಇದುವರೆಗೆ   89,73, 373 ಮಂದಿ ಗುಣಮುಖರಾಗಿದ್ದಾರೆ. 4,...

ತಕ್ಷಣ ಎಸ್ಸೆಸ್ಸೆಲ್ಸಿ, ಪಿಯುಸಿ ತರಗತಿ ಆರಂಭಿಸಿ; ಸರ್ಕಾರಕ್ಕೆ ಎಂಎಲ್ಸಿಗಳ ಆಗ್ರಹ

newsics.comಬೆಂಗಳೂರು: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯದಲ್ಲಿ ತಕ್ಷಣವೇ ಶಾಲೆ ಆರಂಭಿಸಬೇಕೆಂಬ ಆಗ್ರಹ ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ವ್ಯಕ್ತವಾಗಿದೆ.ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಜ್ವಲಂತ ಸಮಸ್ಯೆಗಳು ಸೇರಿ ವಿವಿಧ ವಿಷಯಗಳ ಕುರಿತು ಬುಧವಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಕ ಮತ್ತು...

ಎಂ ಡಿ ಎಚ್ ಮಸಾಲಾ ಸಂಸ್ಥೆಯ ಧರ್ಮಪಾಲ್ ಗುಲಾಟಿ ಇನ್ನಿಲ್ಲ

Newsics.com ನವದೆಹಲಿ: ದೇಶದ ಮುಂಚೂಣಿ ಮಸಾಲಾ ಸಂಸ್ಥೆಯಾಗಿರುವ ಎಂ ಡಿ ಎಚ್ ಸಂಸ್ಥೆಯ ಮಾಲಿಕ ಧರ್ಮಪಾಲ್ ಗುಲಾಟಿ ನಿಧನಹೊಂದಿದ್ದಾರೆ. ಅವರಿಗೆ 98 ವರ್ಷ ಪ್ರಾಯವಾಗಿತ್ತು. ವಯೋ ಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಸ್ವದೇಶಿ ಉತ್ಪನ್ನವನ್ನು ಜಾಗತಿಕ ಬ್ರಾಂಡ್ ಆಗಿ ಧರ್ಮಪಾಲ್ ಗುಲಾಟಿ ಪರಿವರ್ತಿಸಿದ್ದರು. ಎಂ ಡಿ ಎಚ್ ಮಸಲಾ ಉತ್ಪನ್ನ ಭಾರತದಲ್ಲಿ ಮನೆ ಮಾತಾಗಿದೆ. 30,000ಕ್ಕೂ ಹೆಚ್ಚು...

ಬೆಂಗಳೂರು ಹಿಂಸಾಚಾರ : ಮಾಜಿ ಕಾರ್ಪೋರೇಟರ್ ಜಾಕೀರ್ ಬಂಧನ

Newsics.com ಬೆಂಗಳೂರು: ನಗರದ ಕೆ ಜಿ ಹಳ್ಳಿ ಮತ್ತು ಡಿ ಜೆ ಹಳ್ಳಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೋರೇಟರ್ ಜಾಕೀರ್ ನನ್ನು  ಸಿಸಿಬಿ ಬಂಧಿಸಿದೆ. ಆರೋಪಿ ಜಾಕೀರ್ ಈಗಾಗಲೇ ಬಂಧನದಲ್ಲಿರುವ ಮಾಜಿ ಮೇಯರ್ ಸಂಪತ್ ರಾಜ್ ಅವರ ಆಪ್ತನಾಗಿದ್ದಾನೆ. ಸಂಪತ್ ರಾಜ್ ಬಂಧನದ ಬಳಿಕ ಕೂಡ ಜಾಕೀರ್ ತಲೆಮರೆಸಿಕೊಂಡಿದ್ದ. ಕಳೆದ ಮೂರು ತಿಂಗಳಿನಿಂದ ಬಂಧನದಿಂದ ತಪ್ಪಿಸಿಕೊಳ್ಳುವ...

ದೇಶದ ಪ್ರಮುಖ ಕಂಪನಿಗಳ ಜೇನುತುಪ್ಪ ಕಲಬೆರಕೆ: ಖರೀದಿಸುವಾಗ ಹುಷಾರು

Newsics.com ನವದೆಹಲಿ: ದೇಶದ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರತಿಷ್ಟಿತ ಸಂಸ್ಥೆಗಳ ಜೇನುತುಪ್ಪಗಳಲ್ಲಿ ಭಾರಿ ಕಲಬೆರಕೆಯಾಗುತ್ತಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್ಇ) ತನ್ನ ಸಂಶೋಧನಾ ವರದಿಯಲ್ಲಿ ಹೇಳಿದೆ. ದೇಶದಲ್ಲಿ ಜನಪ್ರಿಯವಾಗಿರುವ 13 ಜನಪ್ರಿಯ ಸಂಸ್ಥೆಗಳ ಜೇನುತುಪ್ಪಗಳನ್ನು ಪರೀಕ್ಷೆಗೆ ಗುರಿಪಡಿಸಲಾಗಿತ್ತು. ಇದರಲ್ಲಿ ಶೇಕಡ 77 ಉತ್ಪನ್ನಗಳಲ್ಲಿ ಕಲಬೆರಕೆ ಪತ್ತೆಯಾಗಿದೆ. ಸಕ್ಕರೆಯನ್ನು ಇದರಲ್ಲಿ ಸೇರಿಸಲಾಗಿರುವುದು ಸಂಶೋಧನೆಯಲ್ಲಿ ಪತ್ತೆ...

ನೀರು ಕುಡಿಯಲು ನದಿಗೆ ಇಳಿದ ಬಾಲಕ ಮೊಸಳೆಗೆ ಬಲಿ

Newsics.com ರಾಯಚೂರು: ನೀರು ಕುಡಿಯಲು ಕೃಷ್ಣಾ ನದಿಗೆ ಇಳಿದ ಬಾಲಕನೊಬ್ಬ ಮೊಸಳೆಗೆ ಆಹುತಿಯಾಗಿದ್ದಾನೆ. ರಾಯಚೂರು ಜಿಲ್ಲೆಯ ಡಾಂಗರಾಂಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮೊಸಳೆಗೆ ದಾಳಿಗೆ ಸಿಲುಕಿ ಮೃತಪಟ್ಟ ಬಾಲಕನನ್ನು ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ. ಬಾಯಾರಿದಾಗ  ನೀರು ಕುಡಿಯಲು ಮಲ್ಲಿಕಾರ್ಜುನ ನದಿಗೆ ತೆರಳಿದ್ದ. ಈ ಸಂದರ್ಭದಲ್ಲಿ ದಾಳಿ ನಡೆಸಿದ ಮೊಸಳೆ ಬಾಲಕನನ್ನು ಬಲಿಪಡೆದಿದೆ. ಕೃಷ್ಣಾ ನದಿಯಲ್ಲಿ ಮೊಸಳೆಗಳು ಹೆಚ್ಚಿನ...
- Advertisement -

Latest News

ಹಿಮಕುಸಿತಕ್ಕೆ ಸಿಲುಕಿ 20 ಪರ್ವತಾರೋಹಿಗಳ ಸಾವಿನ ಶಂಕೆ

newsics.com .ಡೆಹ್ರಾಡೂನ್:  ಉತ್ತರಾಖಂಡ್ ನಲ್ಲಿ ಭೀಕರ ದುರಂತ ಸಂಭವಿಸಿದೆ ಉತ್ತರಾಖಂಡ್ ನ ಘರ್ವಾಲ್ ಎಂಬಲ್ಲಿ ಸಂಭವಿಸಿದ ದುರಂತದಲ್ಲಿ 20 ಮಂದಿ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ರಾಷ್ಟ್ರೀಯ ವಿಪತ್ತು...
- Advertisement -

ಪ್ರಮುಖ‌ ಪಕ್ಷಿ ತಾಣಗಳು

ಕರ್ನಾಟಕದ ರಂಗನತಿಟ್ಟು ಈಗ ರಾಮ್‍ಸಾರ್ ತಾಣವೂ ಹೌದು ಅಂತೆಯೇ ಪ್ರಮುಖ ಪಕ್ಷಿ ತಾಣವೂ ಹೌದು. ಮುಂದಿನ ಬಾರಿ ರಂಗನತಿಟ್ಟಿಗೆ ಹೋದಾಗ ಅಂಶ ನೆನಪಿನಲ್ಲಿಟ್ಟುಕೊಂಡು ಎಷ್ಟು ಮಹತ್ವದ ತಾಣದಲ್ಲಿ ನಡೆಯುತ್ತಿದ್ದೇವೆ ಎಂಬುದನ್ನು ಮನಸ್ಸಿಗೆ ತಂದುಕೊಳ್ಳಿ,...

ಕರ್ನಾಟಕದಲ್ಲಿ ಈ ತಾಣಗಳಿಗೂ ಬೇಕಿದೆ ರಾಮ್‌ಸಾರ್ ಪಟ್ಟ

ಕರ್ನಾಟಕದಲ್ಲಿ ಗುಡವಿ ಪಕ್ಷಿಧಾಮ, ಕಾರಂಜಿಕೆರೆ, ಕೊಕ್ಕರೆ ಬೆಳ್ಳೂರು, ಕುಕ್ಕರಹಳ್ಳಿಕೆರೆ, ಕುಂತೂರು ಕಲ್ಲೂರು ಕೆರೆಗಳು, ಲಿಂಗಾಂಬುಧಿ ಕೆರೆ ಮತ್ತು ಸುತ್ತಲಿನ ಪ್ರದೇಶ, ಮಾಗಡಿ ಮತ್ತು ಶೆಟ್ಟಿಹಳ್ಳಿ ತೇವ ಪ್ರದೇಶ (ಗದಗ), ನರಸಾಂಬುಧಿ ಕೆರೆ, ಸೂಳೆಕೆರೆ......

ರಾಮ್‌ಸಾರ್ ತಾಣವಾಗಲು ಅರ್ಹತೆಗಳು- ಭಾಗ 2

ಕರ್ನಾಟಕದಲ್ಲಿಯೂ ಒಂದು ರಾಮ್‍ಸಾರ್ ತಾಣ ಘೋಷಿತವಾದದ್ದು ಇಂತಹ ಜಾಗತಿಕ ಪ್ರಾಮುಖ್ಯದ ತಾಣ ನಮ್ಮಲ್ಲಿದೆ ಎಂಬ ಅರಿವು, ಗಹನ ಜವಾಬ್ದಾರಿಯನ್ನು ನಮ್ಮಲ್ಲಿ ಮೂಡಿಸಬೇಕು. ಕರ್ನಾಟಕದಲ್ಲಿ ಇನ್ನೂ ಕೆಲವು ತಾಣಗಳು ರಾಮ್‍ಸಾರ್ ತಾಣವೆಂದು ಘೋಷಿತವಾಗಲು ಹೇಳಿ...

ರಾಮ್‌ಸಾರ್ ತಾಣವಾಗಲು ಬೇಕು ಈ ಅರ್ಹತೆಗಳು

ರಾಮ್‍ಸಾರ್ ತಾಣವೆಂದು ಘೋಷಿಸಿದ ಕೂಡಲೇ ಅದಕ್ಕೆ ವೈಜ್ಞಾನಿಕ ಹಾಗೂ ಅಂತಾರಾಷ್ಟ್ರೀಯ ಮಹತ್ವ ಬಂದುಬಿಡುತ್ತದೆ. ಸರ್ಕಾರ ಹಾಗೂ ಸಂರಕ್ಷಣಾ ಸಂಸ್ಥೆಗಳು ಜಾಗರೂಕವಾಗುತ್ತವೆ. ಜನರೂ ಸರ್ಕಾರ ಹಾಗೂ ಇಂತಹ ಸಂಸ್ಥೆಗಳ ಜೊತೆಗೆ ಕೈಜೋಡಿಸಿ ಸಂರಕ್ಷಣೆಯನ್ನು ಸುಲಭವಾಗಿಸಬೇಕು . ...
error: Content is protected !!