Tuesday, October 4, 2022

Home

ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಭಾರೀ ಹೆಚ್ಚಳ

newsics.com ನವದೆಹಲಿ: ದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಭಾರೀ ಹೆಚ್ಚಳ ಮಾಡಲಾಗಿದೆ. ಸರಾಸರಿ 62 ರೂಪಾಯಿ ಹೆಚ್ಚಳ ಮಾಡಲಾಗಿದೆ. ದರ ಹೆಚ್ಚಳ ರಾಜ್ಯದಿಂದ ರಾಜ್ಯಕ್ಕೆ ಸ್ವಲ್ಪ ಬದಲಾವಣೆಯಾಗಲಿದೆ. ಜುಲೈ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಹೆಚ್ಚಳ ಮಾಡಲಾಗಿದೆ. ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಹೆಚ್ಚಳದ ಕಾರಣ ನೀಡಲಾಗಿದೆ. ಅಡುಗೆ...

ಒಂದೇ ದಿನ 36,604 ಮಂದಿಗೆ ಕೊರೋನಾ ಸೋಂಕು, 501 ಬಲಿ

Newsics.com ನವದೆಹಲಿ: ದೇಶದಲ್ಲಿ ಕೊರೋನಾ   ಅಬ್ಬರ ಮುಂದುವರಿದಿದೆ.ಕಳೆದ  24 ಗಂಟೆ  ಅವಧಿಯಲ್ಲಿ     36,604ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕೊರೋನಾಕ್ಕೆ  ಒಂದೇ ದಿನ 501  ಮಂದಿ ಬಲಿಯಾಗಿದ್ದಾರೆ. ಕೊರೋನಾಕ್ಕೆ  ಇದುವರೆಗೆ 1,38,122 ಮಂದಿ ಬಲಿಯಾಗಿದ್ದಾರೆ.   ಕೊರೋನಾ ಸೋಂಕಿತರ ಸಂಖ್ಯೆ  94,99 ,414 ಕ್ಕೆ ತಲುಪಿದೆ. ಕೊರೋನಾ ಸೋಂಕಿನಿಂದ ಇದುವರೆಗೆ   89,32, 647 ಮಂದಿ ಗುಣಮುಖರಾಗಿದ್ದಾರೆ. 4, 28, 644 ಮಂದಿ...

ಕಾರು – ಲಾರಿ ಡಿಕ್ಕಿ: ಆರು ಮಂದಿ ಬಲಿ

Newsics.com ಹೈದರಾಬಾದ್: ನಗರದ ಹೊರವಲಯದ  ಚೆವಳ್ಳ ಎಂಬಲ್ಲಿ ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟಿದ್ದಾರೆ. ಎರಡು ವಾಹನಗಳು ಅತೀ ವೇಗವಾಗಿ ಚಲಿಸುತ್ತಿದ್ದವು ಎಂದು ವರದಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಬಾಲಕನೊಬ್ಬ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಅಪಘಾತದಿಂದಾಗಿ ಕೆಲ ಹೊತ್ತು ಸಂಚಾರಕ್ಕೆ ಅಡ್ಡಿಯಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು...

ಸತತ ನಾಲ್ಕನೆ ದಿನ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

Newsics.com ನವದೆಹಲಿ: ದೇಶದಲ್ಲಿ ಸತತ ನಾಲ್ಕನೇ ದಿನ ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವಾಗಿದೆ. ಪೆಟ್ರೋಲ್ ಪ್ರತಿ ಲೀಟರ್ ಗೆ 15 ಪೈಸೆ ಹೆಚ್ಚಳ ಮಾಡಲಾಗಿದೆ. ಡೀಸೆಲ್ ದರ 23 ಪೈಸೆ ಪ್ರತಿ ಲೀಟರ್ ಗೆ ಹೆಚ್ಚಳವಾಗಿದೆ. ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹೆಚ್ಚಳದಿಂದಈ ಬೆಳವಣಿಗೆ ಸಂಭವಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದು ಮೂಲದರ ಹೆಚ್ಚಳವಾಗಿದ್ದು ಇದರ...

ಮೂರನೆ ಏಕದಿನ ಪಂದ್ಯ: ಭಾರತ ಬ್ಯಾಟಿಂಗ್ ಆಯ್ಕೆ

Newsics.com ಕ್ಯಾನ್ ಬೆರಾ: ಆಸ್ಟ್ರೇಲಿಯಾ ವಿರುದ್ದದ ಮೂರನೆ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ.  ಭಾರತ ತಂಡದಲ್ಲಿ ನಟರಾಜನ್ ಅವರು ಸ್ಥಾನ ಪಡೆದಿದ್ದಾರೆ. ಈ ಮೂಲಕ ನಟರಾಜನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಲಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ  ಎರಡು ಪಂದ್ಯಗಳನ್ನು ಆಸ್ಟ್ರೇಲಿಯಾ ಈಗಾಗಲೇ ಗೆದ್ದಿದೆ. ಭಾರತದ ಮಾನ ಉಳಿಸಲು ಇಂದಿನ ಪಂದ್ಯ ಗೆಲ್ಲುವುದು...

ಕಲರ್ ಪೇಪರ್ ರೂಪದಲ್ಲಿರುವ ಮಾದಕ ದ್ರವ್ಯ ವಶ: ಸಿಸಿಬಿಯಿಂದ ಇಬ್ಬರ ಬಂಧನ

Newsics.com ಬೆಂಗಳೂರು: ಮಾದಕ ದ್ರವ್ಯ ಜಾಲದ ವಿರುದ್ಧ ಸಮರ ಸಾರಿರುವ ಸಿಸಿಬಿ, ಬೆಚ್ಚಿ ಬೀಳಿಸುವ ರೀತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಮಾದಕ ದ್ರವ್ಯ ಜಾಲವನ್ನು ಬಯಲಿಗೆಳೆದಿದೆ. ಮೇಲ್ನೋಟಕ್ಕೆ ಇದು ಕಲರ್ ಪೇಪರ್ ರೀತಿ ಕಾಣುತ್ತದೆ.  ಇದು ಮಾದಕ ದ್ರವ್ಯ ಲೇಪನ ಮಾಡಿರುವ ಎಲ್ ಎಸ್ ಡಿ ಸ್ಟ್ರಿಪ್ ಆಗಿದೆ. 50 ಲಕ್ಷ ರೂಪಾಯಿ ಮೌಲ್ಯದ ಎಲ್ ಎಸ್ ಡಿ...

ನಟ ಸನ್ನಿ ಡಿಯೋಲ್’ಗೆ ಕೊರೋನಾ ಸೋಂಕು

newsics.com ನವದೆಹಲಿ: ನಟ ಹಾಗೂ ಬಿಜೆಪಿ ಸಂಸದರಾಗಿರುವ ಸನ್ನಿ ಡಿಯೋಲ್ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಚಿತ್ರೀಕರಣ ಸಂಬಂಧ ಹಿಮಾಚಲ ಪ್ರದೇಶದ ಕುಲು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಕುಲುವಿನ ಆರೋಗ್ಯಾಧಿಕಾರಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಸನ್ನಿ ಡಿಯೋಲ್ ಪಂಜಾಬಿನ ಗುರುದಾಸ್ ಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಸನ್ನಿ ಡಿಯೋಲ್ ಅವರನ್ನು...

ಇಂದಿನಿಂದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಸಮ್ಮೇಳನ

newsics.com ನವದೆಹಲಿ: ದೇಶದ ಎಲ್ಲ ರಾಜ್ಯಗಳ ಪೊಲೀಸ್ ಮಹಾ ನಿರ್ದೇಶಕರ ಸಮ್ಮೇಳನ ಇಂದು ನಡೆಯಲಿದೆ. ಕೊರೋನಾ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಈ ಮಹತ್ವದ ಸಭೆಯಲ್ಲಿ ಭಾಗವಹಿಸಲಿದ್ದಾರೆ. ದೇಶದ ಆಂತರಿಕ ಭದ್ರತೆ ಎದುರಿಸುತ್ತಿರುವ ಸವಾಲುಗಳ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ. ನಕ್ಸಲ್ ಸಮಸ್ಯೆ, ಹೆಚ್ಚುತ್ತಿರುವ...

ಕನ್ಯಾಕುಮಾರಿಯಿಂದ 240 ಕಿ.ಮೀ. ದೂರದಲ್ಲಿದೆ ಬುರೇವಿ ಚಂಡಮಾರುತ

Newsics.com ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಸೃಷ್ಠಿಯಾಗಿರುವ ಬುರೇವಿ ಚಂಡಮಾರುತ ಕನ್ಯಾಕುಮಾರಿಯಿಂದ 240 ಕಿಲೋ ಮೀಟರ್ ದೂರದಲ್ಲಿ ನೆಲೆ ನಿಂತಿದೆ. ಇದೀಗ ಅದರ ವೇಗ ಗಂಟೆಗೆ 15 ಕಿಲೋ ಮೀಟರ್. ಮುಂದಿನ 12 ಗಂಟೆಗಳಲ್ಲಿ ಅದರ ವೇಗ ಹೆಚ್ಚಾಗಲಿದೆ. ಅದು ಗಂಟೆಗೆ 90 ಕಿಲೋ ಮೀಟರ್ ವೇಗ ತಲುಪುವ ಸಾಧ್ಯತೆಯಿದೆ. ಬುರೇವಿ ಚಂಡಮಾರುತ ಇಂದು ರಾತ್ರಿ ಶ್ರೀಲಂಕಾ ತಲುಪಲಿದೆ....

ಸಿಎಂ ಯೋಗಿ ಆದಿತ್ಯನಾಥ್ ಭೇಟಿ ಮಾಡಿದ ಅಕ್ಷಯ ಕುಮಾರ್

Newsics.com ಮುಂಬೈ: ನಟ ಅಕ್ಷಯ ಕುಮಾರ್ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮುಂಬೈಗೆ ಆಗಮಿಸಿರುವ ಯೋಗಿ ಆದಿತ್ಯನಾಥ್ ಅವರು, ನಟ ಅಕ್ಷಯ ಕುಮಾರ್ ಜತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಉತ್ತರ ಪ್ರದೇಶ ದೇಶದಲ್ಲಿ ಅತೀ ದೊಡ್ಡ ಫಿಲ್ಮ್  ಸಿಟಿ ನಿರ್ಮಾಣಕ್ಕೆ  ಮುಂದಾಗಿದೆ. ಹೈದರಾಬಾದ್ ನಲ್ಲಿ ಇರುವ ರಾಮೋಜಿ ಫಿಲ್ಮ್ ಸಿಟಿ...

ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿ ಕೊಂದವನಿಗೆ ಮರಣದಂಡನೆ ಶಿಕ್ಷೆ

newsics.com ಲಖನೌ(ಉತ್ತರ ಪ್ರದೇಶ): ಎಂಟು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿದ್ದ ಹಂತಕನಿಗೆ ಫಿರೋಜ್ ಬಾದ್ ಜಿಲ್ಲಾ ನ್ಯಾಯಾಲಯ ಪೋಕ್ಸೋ ಕಾಯ್ದೆಯಡಿ ಮರಣ ದಂಡನೆ ಶಿಕ್ಷೆ ವಿಧಿಸಿದೆ.20 ತಿಂಗಳ ವಿಚಾರಣೆ ಬಳಿಕ ಫಿರೋಜ್ ಬಾದ್ ಜಿಲ್ಲಾ ನ್ಯಾಯಾಲಯ ಈ ತೀರ್ಪು ನೀಡಿದೆ. ಅಪರಾಧಿ ಶಿವಶಂಕರ್ ಮರಣದಂಡನೆ ಶಿಕ್ಷೆಗೊಳಗಾದವ. ತಲೆಮರೆಸಿಕೊಂಡಿದ್ದ...

ಮೊದಲ ದಿನವೇ ವೈದ್ಯ ಕಾಲೇಜುಗಳಲ್ಲಿ ಶೇ.60ಕ್ಕೂ ಹೆಚ್ಚು ಹಾಜರಾತಿ

ewsics.com ಬೆಂಗಳೂರು: ರಾಜ್ಯದಲ್ಲಿ 8 ತಿಂಗಳ ಬಳಿಕ ಮಂಗಳವಾರ(ಡಿ.1) ಆರಂಭಗೊಂಡ ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜುಗಳಲ್ಲಿ ಮೊದಲ ದಿನವೇ ಶೇ.60ಕ್ಕೂ ಹೆಚ್ಚು ಹಾಜರಾತಿ ಇತ್ತು.ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಅಂತಿಮ ವರ್ಷದ ಕೋರ್ಸ್‌ಗಳ ತರಗತಿ ಆರಂಭವಾಗಿ 15 ದಿನ ಕಳೆದರೂ ಶೇ.15ರಷ್ಟು ಹಾಜರಾತಿ ದಾಖಲಾಗಿಲ್ಲ. ಆದರೆ, ವೈದ್ಯಕೀಯ...

ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಿಸಿ 30 ಕೋಟಿ ರೂ.ಗೆ ಬೇಡಿಕೆ- ದೂರು ದಾಖಲು

newsics.com ಬೆಂಗಳೂರು: ಮಾಜಿ ಸಚಿವ ವರ್ತೂರ್ ಪ್ರಕಾಶ್ ಅವರನ್ನು ಅಪಹರಿಸಿರುವ ದುಷ್ಕರ್ಮಿಗಳ ತಂಡವೊಂದು ಅವರ ಮೇಲೆ ಹಲ್ಲೆ ನಡೆಸಿ, 30 ಕೋಟಿ ರೂ.ಗಳಿಗೆ ಬೇಡಿಕೆಯಿಟ್ಟಿರುವ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಘಟನೆ ಕುರಿತು ಸ್ವತಃ ದೂರು ನೀಡಿರುವ ವರ್ತೂರ್ ಪ್ರಕಾಶ್, ನ.25ರಂದು ಕೋಲಾರ ನಗರದ...

ಬೆಂಗಳೂರಿನಲ್ಲಿ 758, ರಾಜ್ಯದಲ್ಲಿ 1330 ಮಂದಿಗೆ ಕೊರೋನಾ, 14 ಬಲಿ

newsics.com ಬೆಂಗಳೂರು: ರಾಜ್ಯದಲ್ಲಿ ಇಂದು (ಡಿ.1) ಹೊಸದಾಗಿ 1330 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 14 ಮಂದಿ ಬಲಿಯಾಗಿದ್ದಾರೆ.ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 8,86,227ಕ್ಕೆ ಏರಿಕೆಯಾದರೆ, ಸಾವಿನ ಸಂಖ್ಯೆ 11,792ಕ್ಕೆ ತಲುಪಿದೆ. ರಾಜ್ಯದಲ್ಲಿ ಕೊರೋನಾದಿಂದ ಚೇತರಿಸಿಕೊಂಡವರ...

ಬಿಜೆಪಿ ರಾಜ್ಯಸಭಾ ಸದಸ್ಯ ಅಭಯ್ ಭಾರದ್ವಾಜ್ ಕೊರೋನಾಗೆ ಬಲಿ

newsics.com ಗಾಂಧಿನಗರ(ಗುಜರಾತ್): ಬಿಜೆಪಿ ರಾಜ್ಯಸಭಾ ಸದಸ್ಯ ಅಭಯ್ ಭಾರದ್ವಾಜ್ ಮಂಗಳವಾರ ಕೋವಿಡ್‍-19 ಸಂಬಂಧಿಸಿದ ಸಮಸ್ಯೆಗಳಿಂದ ಚೆನ್ನೈ ನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.66 ವರ್ಷದ ಭಾರದ್ವಾಜ್‍ ಕಳೆದ ಜೂನ್‌ನಲ್ಲಷ್ಟೇ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಪಕ್ಷದ ಸಭೆಗಳು ಮತ್ತು ರಾಜ್‌ಕೋಟ್‌ನಲ್ಲಿ ನಡೆದ ರೋಡ್ ಶೋಗೆ ಹಾಜರಾದ ನಂತರ ಆಗಸ್ಟ್ 31ರಂದು ಅವರಿಗೆ ಕೊರೋನಾ ಪಾಸಿಟಿವ್ ವರದಿಯಾಗಿತ್ತು.ಸಂಸದ...

ಹಾರುತ್ತಿದ್ದ ಹಕ್ಕಿಯ ಹೊಟ್ಟೆಯಿಂದ ಹೊರಬಂತು ಹಾವು!

NEWSICS.COM ಅಮೆರಿಕ: ಹಾರುತ್ತಿದ್ದ ಹೆರಾನ್ ಹಕ್ಕಿಯ ಹೊಟ್ಟೆಹಾರುತ್ತಿದ್ದ ಹೆರಾನ್ ಹಕ್ಕಿಯ ಹೊಟ್ಟೆಯಿಂದ ತೂಗಾಡುತ್ತಿರುವ ಹಾವಿನ ಈಲ್ ಚಿತ್ರ‌ ಇತ್ತೀಚೆಗೆ ವೈರಲ್ ಆಗಿದೆ. ಈ ವಿಲಕ್ಷಣ ಘಟನೆಯ ಪೋಟೋವನ್ನು ಸ್ಯಾಮ್ ಡೇವಿಸ್ ಎನ್ನುವವರು ಯುಎಸ್ ನ ಡೆಲವೇರ್‌ ತೀರದಲ್ಲಿ ಸೆರೆಹಿಡಿದಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಫೋಟೋದಲ್ಲಿ ಹಕ್ಕಿಯ ಹೊಟ್ಟೆಯಿಂದ ಹಾವಿನ ಈಲ್ ಸಿಡಿಯುವುದನ್ನು ತೋರಿಸುತ್ತದೆ, ಆದರೆ ಹಕ್ಕಿ ಮಾತ್ರ ನಿರಾಯಾಸವಾಗಿ...

ಭದ್ರತಾ ಪಡೆಗಳ ಕಾರ್ಯಾಚರಣೆ: ಪಾಕ್ ನೆಲಕ್ಕೆ ತಲುಪುವ ಸುರಂಗ ಪತ್ತೆ

NEWSICS.COM ನವದೆಹಲಿ: ಭಾರತದ ಭೂಪ್ರದೇಶದೊಳಗೆ ನುಸುಳಲು ಭಯೋತ್ಪಾದಕರು ಬಳಸಿದ ಸುರಂಗವನ್ನು ಪತ್ತೆ ಹಚ್ಚಲು ಭಾರತೀಯ ಭದ್ರತಾ ಪಡೆಗಳು ಸಾಗಿದಾಗ 200ಮೀ. ನಂತರ ಸುರಂಗದ ಅಂತ್ಯಕ್ಕೆ ತಲುಪಿದ್ದಾರೆ. ಅದು ಪಾಕಿಸ್ತಾನದ ಜಾಗವಾಗಿತ್ತು ಎಂದು ಸರ್ಕಾರಿ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನ.22ರಂದು ಹತ್ಯೆಗೈದಿದ್ದ ಭಯೋತ್ಪಾದಕರ ಮೊಬೈಲ್ ಫೋನ್ ಗಳ ವಿಶ್ಲೇಷಣೆ ಆಧಾರದ ಮೇಲೆ ಸುರಂಗವನ್ನು ಪತ್ತೆ ಮಾಡಲಾಗಿದೆ‌. ಅದರ ಒಳಹೊಕ್ಕು...

ಕಂಪಿಸಿದ ಭೂಮಿ: 3.9ರಷ್ಟು ತೀವ್ರತೆ ದಾಖಲು

NEWSICS.COM ಉತ್ತರಾಖಂಡ್: ಮಂಗಳವಾರ (ಡಿ.1)ಉತ್ತರಾಖಂಡದಲ್ಲಿ 3.9 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಹರಿದ್ವಾರ ಮತ್ತು ಡೆಹ್ರಾಡೂನ್, ರೂರ್ಕಿ ಮತ್ತು ಲಕ್ಸಾರ್ ಸೇರಿದಂತೆ ಹತ್ತಿರದ ಪ್ರದೇಶಗಳಲ್ಲಿ ಬೆಳಿಗ್ಗೆ 9.41 ರ ಸುಮಾರಿಗೆ 10ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದೆ. ಹರಿದ್ವಾರದ ಬಳಿ ಕಂಪನದ ಕೇಂದ್ರಬಿಂದುವಿದೆ ಎನ್ನಲಾಗಿದ್ದು, ಭೂಕಂಪದಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. https://newsics.com/news/india/ncp-leader-rekha-bhausaheb-passes-away/44541/

ಎನ್’ಸಿಪಿ ಕಾರ್ಯಕರ್ತೆ ರೇಖಾ ಬೌಸಾಹೇಬ್ ಹತ್ಯೆ

NEWSICS.COM ಮಹಾರಾಷ್ಟ್ರ: ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯಲ್ಲಿ ಎನ್‌ಸಿಪಿ ಕಾರ್ಯಕರ್ತೆ ಮತ್ತು ಮಹಿಳಾ ಸಂಘಟನೆಯ ಮುಖ್ಯಸ್ಥೆ ರೇಖಾ ಬೌಸಾಹೇಬ್ ಜಾರೆ (39) ಹತ್ಯೆಯಾಗಿದ್ದಾರೆ. ಸೋಮವಾರ ರಾತ್ರಿ 8.20 ರ ಸುಮಾರಿಗೆ ಈ ಘಟನೆ ನಡೆದಿದ್ದು, ರೇಖಾ ಕುಟುಂಬದೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ, ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ದಾರಿ ಅಡ್ಡ ಹಾಕಿ ಗಲಾಟೆ ಮಾಡಿದ್ದಾರೆ. ಗಲಾಟೆಯಲ್ಲಿ ರೇಖಾ ಬೌಸಾಹೇಬ್'ರ...

ವಿಮಾನದ ಕಿಟಕಿ ಮೇಲೆ ಜೇನ್ನೊಣಗಳ ಗುಂಪು: ವಿಡಿಯೋ ವೈರಲ್

NEWSICS.COM ಕೋಲ್ಕತ್ತಾ: ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೇನುನೊಣಗಳ ದೊಡ್ಡ ಗುಂಪೊಂದು ವಿಮಾನವೊಂದರ ಕಿಟಕಿ ಪಕ್ಕ ಕುಳಿತು ಸ್ವಲ್ಪ ಹೊತ್ತು ಆತಂಕ, ಕುತೂಹಲಕ್ಕೆ ಕಾರಣವಾಗುವಂತೆ ಮಾಡಿತ್ತು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಟ್ವಿಟ್ಟರ್ ನಲ್ಲಿ ಬಿಟ್ಟ ವಿಡಿಯೋ ತುಣುಕಿನಲ್ಲಿ ಅಗ್ನಿಶಾಮಕ ಇಲಾಖೆ ನಿಲ್ಲಿಸಿದ ವಿಮಾನದಿಂದ ಜೇನುನೊಣಗಳನ್ನು ತೆಗೆದುಹಾಕಲು ವಾಟರ್...

ಮಂಗಳೂರು ದೋಣಿ ದುರಂತ: ಇಬ್ಬರು ಮೀನುಗಾರರ ಮೃತದೇಹ ಪತ್ತೆ

NEWSICS.COM ಮಂಗಳೂರು: ಮಂಗಳೂರಿನಲ್ಲಿ ನಿನ್ನೆ ಸಂಜೆ ಸಂಭವಿಸಿದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ 6 ಮೀನುಗಾರರ ಪೈಕಿ ಇಬ್ಬರ ಮೃತದೇಹ ಇಂದು ಪತ್ತೆಯಾಗಿದೆ. ಶೋಧ ಕಾರ್ಯಾಚರಣೆಯ ಬಳಿಕ ಇಬ್ಬರ ಮೃತದೇಹವನ್ನು ಇಂದು ಮಧ್ಯಾಹ್ನದ ವೇಳೆ ಮೇಲೆತ್ತಿ ಮಂಗಳೂರಿನ ದಕ್ಕೆಗೆ ತರಲಾಗಿದೆ. ಮೃತರನ್ನು ಪಾಂಡುರಂಗ ಸುವರ್ಣ (58) ಹಾಗೂ ಚಿಂತನ್ (21) ಎಂದು ಗುರುತಿಸಲಾಗಿದೆ. ಮೀನುಗಾರಿಕೆಗೆ ತೆರಳಿದ್ದ ಬೋಳಾರದ ಶ್ರೀರಕ್ಷಾ ಮೀನುಗಾರಿಕಾ...

ಲಡಾಖ್ ಚಳಿಗೆ‌‌ ಹೆದರಿ ಸೈನಿಕರನ್ನು ಬದಲಿಸುತ್ತಿರುವ ಚೀನಾ

NEWSICS.COM ನವದೆಹಲಿ: ಪೂರ್ವ ಲಡಾಖ್ ನಲ್ಲಿ ತೀವ್ರವಾದ ಚಳಿ ಮತ್ತು ಹಿಮದ ಕಾರಣದಿಂದ ಚೀನಾ ಸೈನಿಕರನ್ನು ಪ್ರತಿದಿನವೂ ಬದಲಾಯಿಸುತ್ತಿದೆ ಆದರೆ ಭಾರತೀಯ ಯೋಧರು ಮಾತ್ರ ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ಇರಲು ಸಮರ್ಥರಾಗಿದ್ದಾರೆ ಎಂದು ವರದಿಯಾಗಿದೆ. ಲಡಾಖ್ ಗಡಿಯಲ್ಲಿ ಚೀನಾ ಸೇನೆ ಬೀಡು ಬಿಡುತ್ತಿದ್ದಂತೆ ಭಾರತೀಯ ಯೋಧರೂ ಕೂಡ ಧಾವಿಸಿದ್ದಾರೆ. ಆದ್ದರಿಂದ ಭಾರತೀಯ ಸೈನಿಕರು ಅಲ್ಲಿಯೇ ಇರುವಾಗ,...

ಈಕೆ ಅಪಘಾನ್’ನ ಮೊದಲ ಮಹಿಳಾ ಹಚ್ಚೆ ಕಲಾವಿದೆ

NEWSICS.COM ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಸೊರಾಯಾ ಶಾಹಿದಿ (27) ಎಂಬ ಮಹಿಳೆ ಸಲೂನ್‌ನಲ್ಲಿ ಇತ್ತೀಚೆಗೆ ಹಚ್ಚೆ ಹಾಕುವ ಪೋಟೊ ಎಲ್ಲಡೆ ಹರಿದಾಡುತ್ತಿದೆ. ಇಸ್ಲಾಂ ಧರ್ಮದ ಅಡಿಯಲ್ಲಿ ಹಚ್ಚೆಯನ್ನು ನಿಷೇಧಿಸಲಾಗಿದೆ ಎಂದು ಹೇಳುವ ದೇಶದಲ್ಲೇ ಹಚ್ಚೆ ಹಾಕುವ ಸೆಲೂನ್ ಆರಂಭಿಸಿ ಅಫ್ಘಾನ್ ನ ಮೊದಲ ಮಹಿಳಾ ಹಚ್ಚೆ ಕಲಾವಿದೆ ಎಂಬ ಗೌರವಕ್ಕೆ ಸೊರಾಯಾ ಶಾಹಿದಿ ಪಾತ್ರರಾಗಿದ್ದಾರೆ. ಟರ್ಕಿ...

ವೈರಲ್ ಆದ ಶಾನ್ವಿಶ್ರೀ ಮಾಲ್ಡೀವ್ಸ್ ಫೋಟೋಗಳು

NEWSICS.COM ಸ್ಯಾಂಡಲ್ ವುಡ್ ನಲ್ಲಿ ಕ್ಯೂಟ್ ನಟಿಯರ ಲಿಸ್ಟ್ ಗೆ ಶಾನ್ವಿಶ್ರೀ ಕೂಡ ಸೇರಿದ್ದಾರೆ. ಈಗ ಸದ್ಯ ಎಲ್ಲರ ಗಮನ ಶಾನ್ವಿಶ್ರೀ ಮೇಲೆಯೇ ಇದೆ. ಇತ್ತೀಚೆಗೆ ಮಾಲ್ಡೀವ್ಸ್ ಗೆ ಹೋಗಿ ಹಾಟ್ ಫೋಟೊಗಳನ್ನು ಹಂಚಿಕೊಂಡ ಶಾನ್ವಿ ಬಿಕಿನಿ, ತೊಟ್ಟು ನೀರಿನಲ್ಲಿ ಆಟವಾಡುತ್ತಿರುವ ವಿಡಿಯೋವನ್ನು ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈಗ...

ಪಾಕ್’ಕದನ ವಿರಾಮ ಉಲ್ಲಂಘನೆ: ಓರ್ವ ಬಿಎಸ್’ಎಫ್ ಯೋಧ ಹುತಾತ್ಮ

NEWSICS.COM ಜಮ್ಮು ಮತ್ತು ಕಾಶ್ಮೀರ: ಪೂಂಚ್ ಜಿಲ್ಲೆಯ ಎಲ್‌ಒಸಿ ಉದ್ದಕ್ಕೂ ಪಾಕಿಸ್ತಾನ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಗಡಿ ಭದ್ರತಾ ಪಡೆ ಅಧಿಕಾರಿಯೊಬ್ಬರು ಮಂಗಳವಾರ (ಡಿ.1) ಮೃತರಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ನಡೆಸಿ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳನ್ನು ಬೀಸುವ ಪ್ರಯತ್ನ...

ಬಾಟಾ ಕಂಪನಿಯ ಜಾಗತಿಕ ಸಿಇಒ ಆಗಿ ಭಾರತೀಯ ಮೂಲದ ಸಂದೀಪ್ ಕಟಾರಿಯಾ ನೇಮಕ

NEWSICS.COM ಮುಂಬೈ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾದರಕ್ಷೆಗಳ ಹೆಗ್ಗುರುತಾಗಿರುವ ಬಾಟಾ ಶೂ ಸಂಸ್ಥೆ ಸೋಮವಾರ (ನ.30) ಭಾರತ ಮೂಲದ ಸಂದೀಪ್ ಕಟಾರಿಯಾ (49) ಅವರನ್ನು ಬಾಟಾ ಬ್ರಾಂಡ್ಸ್‌ನ ಜಾಗತಿಕ ಸಿಇಒ ಹುದ್ದೆಗೆ ಏರಿಸುವುದಾಗಿ ಪ್ರಕಟಿಸಿದೆ. ಅವರು ಈ ಹಿಂದೆ 5ವರ್ಷಗಳ ಕಾಲ ಬಾಟಾ ಇಂಡಿಯಾದ ಸಿಇಒ ಆಗಿದ್ದರು. ಇವರು 126 ವರ್ಷಗಳ ಇತಿಹಾಸದಲ್ಲಿ ಬಾಟಾದ ಜಾಗತಿಕ ಸಿಇಓ ಪಾತ್ರಕ್ಕೆ...

ಶಿವಸೇನಾ ಕೈ ಹಿಡಿದ ನಟಿ ಉರ್ಮಿಳಾ ಮಾತೋಂಡ್ಕರ್

Newsics.com ಮುಂಬೈ: ಕಾಂಗ್ರೆಸ್ ಗೆ ಗುಡ್ ಬೈ ಹೇಳಿರುವ ನಟಿ ಉರ್ಮಿಳಾ ಮಾತೋಂಡ್ಕರ್ ಇಂದು ಶಿವಸೇನಾ ಪಕ್ಷ್ಕಕೆ ಸೇರ್ಪಡೆಗೊಂಡರು. ಪಕ್ಷದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಸಮ್ಮುಖದಲ್ಲಿ ಅವರು  ಪಕ್ಷದ ಸದಸ್ಯತ್ವ ಸ್ವೀಕರಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಉರ್ಮಿಳಾ , ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಸೋಲು...

ಮದುವೆಗೆ ಮೊದಲು ಆದಾಯ ಬಹಿರಂಗ ಕಡ್ಡಾಯ: ಅಸ್ಸಾಂನಲ್ಲಿ ಕಾನೂನು

Newsics.com ಗುವಾಹಟಿ: ದೇಶದಲ್ಲಿ ಲವ್ ಜಿಹಾದ್ ವಿರುದ್ದ ಕಾನೂನು ರಚಿಸಲು ಹಲವು ರಾಜ್ಯಗಳು ನಿರ್ಧರಿಸಿವೆ.  ಇದೇ ವೇಳೆ ಅಸ್ಸಾಂನಲ್ಲಿ ಹೊಸ ಕಾನೂನು ರಚನೆಗೆ ನಿರ್ಧರಿಸಲಾಗಿದೆ. ಅಸ್ಸಾಂನಲ್ಲಿ ವಧು ಮತ್ತು ವರ ತಮ್ಮ ಆದಾಯದ ಬಗ್ಗೆ  ಸರ್ಕಾರಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕು. ವಧು ಮತ್ತು ವರ ಇಬ್ಬರೂ ಕೂಡ ತಮ್ಮ ಆದಾಯದ ಬಗ್ಗೆ ಸರ್ಕಾರಕ್ಕೆ ಪ್ರಮಾಣ ಪತ್ರದಲ್ಲಿ ಸ್ಪಷ್ಟ...

ನಟ ರಾಹುಲ್ ರಾಯ್ ಆರೋಗ್ಯ ಸ್ವಲ್ಪ ಚೇತರಿಕೆ

Newsics.com ಮುಂಬೈ:ಬ್ರೈನ್ ಸ್ಟ್ರೋಕ್ ಗೆ ಗುರಿಯಾಗಿರುವ ನಟ ರಾಹುಲ್ ರಾಯ್ ಆರೋಗ್ಯದಲ್ಲಿ  ಸ್ವಲ್ಪ ಮಟ್ಟಿನ ಸುಧಾರಣೆ ಕಂಡು ಬಂದಿದೆ. ಅವರ ದೇಹದ ಬಲ ಭಾಗ ಮೆದುಳಿನ ಆಘಾತಕ್ಕೆ ತುತ್ತಾಗಿದೆ. ಕಾರ್ಗಿಲ್ ನಲ್ಲಿ 15 ದಿನಗಳ ಕಾಲ ಚಿತ್ರೀಕರಣ ನಡೆಸಿದ ಬಳಿಕ ರಾಹುಲ್ ರಾಯ್ ಮುಂಬೈಗೆ ಆಗಮಿಸಿದ್ದರು.  ಬಳಿಕ ಮೆದುಳಿನ ಆಘಾತಕ್ಕೆ ಗುರಿಯಾಗಿದ್ದರು. ಅವರಿಗೆ ಇದೀಗ ವಾಕ್ಯ ಸಂಪೂರ್ಣಮಾಡುವ...

ಐಸಿಐಸಿಐ ಬ್ಯಾಂಕ್ ನಿಂದ ಕೊಕ್: ಸುಪ್ರೀಂ ನಿಂದ ಕೊಚ್ಚಾರ್ ಅರ್ಜಿ ವಜಾ

Newsics.com ನವದೆಹಲಿ: ದೇಶದ ಪ್ರತಿಷ್ಠಿತ ಖಾಸಗಿ ಬ್ಯಾಂಕ್ ಐಸಿಐಸಿಐ ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪದವಿಯಿಂದ ವಜಾ ಮಾಡಿರುವುದನ್ನು ಪ್ರಶ್ನಿಸಿ ಚಂದಾ ಕೊಚ್ಚಾರ್ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಬಾಂಬೆ ಹೈಕೋರ್ಟ್ ಈ ಸಂಬಂಧ  ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಚಂದಾ ಕೊಚ್ಚಾರ್ ಅವರು ಬ್ಯಾಂಕ್ ನ ಮುಖ್ಯಸ್ಥರಾಗಿದ್ದ ವೇಳೆ  ಅಕ್ರಮವಾಗಿ ವೀಡಿಯೋ ಕಾನ್...
- Advertisement -

Latest News

ಹಿಮಕುಸಿತಕ್ಕೆ ಸಿಲುಕಿ 20 ಪರ್ವತಾರೋಹಿಗಳ ಸಾವಿನ ಶಂಕೆ

newsics.com .ಡೆಹ್ರಾಡೂನ್:  ಉತ್ತರಾಖಂಡ್ ನಲ್ಲಿ ಭೀಕರ ದುರಂತ ಸಂಭವಿಸಿದೆ ಉತ್ತರಾಖಂಡ್ ನ ಘರ್ವಾಲ್ ಎಂಬಲ್ಲಿ ಸಂಭವಿಸಿದ ದುರಂತದಲ್ಲಿ 20 ಮಂದಿ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ರಾಷ್ಟ್ರೀಯ ವಿಪತ್ತು...
- Advertisement -

ಪ್ರಮುಖ‌ ಪಕ್ಷಿ ತಾಣಗಳು

ಕರ್ನಾಟಕದ ರಂಗನತಿಟ್ಟು ಈಗ ರಾಮ್‍ಸಾರ್ ತಾಣವೂ ಹೌದು ಅಂತೆಯೇ ಪ್ರಮುಖ ಪಕ್ಷಿ ತಾಣವೂ ಹೌದು. ಮುಂದಿನ ಬಾರಿ ರಂಗನತಿಟ್ಟಿಗೆ ಹೋದಾಗ ಅಂಶ ನೆನಪಿನಲ್ಲಿಟ್ಟುಕೊಂಡು ಎಷ್ಟು ಮಹತ್ವದ ತಾಣದಲ್ಲಿ ನಡೆಯುತ್ತಿದ್ದೇವೆ ಎಂಬುದನ್ನು ಮನಸ್ಸಿಗೆ ತಂದುಕೊಳ್ಳಿ,...

ಕರ್ನಾಟಕದಲ್ಲಿ ಈ ತಾಣಗಳಿಗೂ ಬೇಕಿದೆ ರಾಮ್‌ಸಾರ್ ಪಟ್ಟ

ಕರ್ನಾಟಕದಲ್ಲಿ ಗುಡವಿ ಪಕ್ಷಿಧಾಮ, ಕಾರಂಜಿಕೆರೆ, ಕೊಕ್ಕರೆ ಬೆಳ್ಳೂರು, ಕುಕ್ಕರಹಳ್ಳಿಕೆರೆ, ಕುಂತೂರು ಕಲ್ಲೂರು ಕೆರೆಗಳು, ಲಿಂಗಾಂಬುಧಿ ಕೆರೆ ಮತ್ತು ಸುತ್ತಲಿನ ಪ್ರದೇಶ, ಮಾಗಡಿ ಮತ್ತು ಶೆಟ್ಟಿಹಳ್ಳಿ ತೇವ ಪ್ರದೇಶ (ಗದಗ), ನರಸಾಂಬುಧಿ ಕೆರೆ, ಸೂಳೆಕೆರೆ......

ರಾಮ್‌ಸಾರ್ ತಾಣವಾಗಲು ಅರ್ಹತೆಗಳು- ಭಾಗ 2

ಕರ್ನಾಟಕದಲ್ಲಿಯೂ ಒಂದು ರಾಮ್‍ಸಾರ್ ತಾಣ ಘೋಷಿತವಾದದ್ದು ಇಂತಹ ಜಾಗತಿಕ ಪ್ರಾಮುಖ್ಯದ ತಾಣ ನಮ್ಮಲ್ಲಿದೆ ಎಂಬ ಅರಿವು, ಗಹನ ಜವಾಬ್ದಾರಿಯನ್ನು ನಮ್ಮಲ್ಲಿ ಮೂಡಿಸಬೇಕು. ಕರ್ನಾಟಕದಲ್ಲಿ ಇನ್ನೂ ಕೆಲವು ತಾಣಗಳು ರಾಮ್‍ಸಾರ್ ತಾಣವೆಂದು ಘೋಷಿತವಾಗಲು ಹೇಳಿ...

ರಾಮ್‌ಸಾರ್ ತಾಣವಾಗಲು ಬೇಕು ಈ ಅರ್ಹತೆಗಳು

ರಾಮ್‍ಸಾರ್ ತಾಣವೆಂದು ಘೋಷಿಸಿದ ಕೂಡಲೇ ಅದಕ್ಕೆ ವೈಜ್ಞಾನಿಕ ಹಾಗೂ ಅಂತಾರಾಷ್ಟ್ರೀಯ ಮಹತ್ವ ಬಂದುಬಿಡುತ್ತದೆ. ಸರ್ಕಾರ ಹಾಗೂ ಸಂರಕ್ಷಣಾ ಸಂಸ್ಥೆಗಳು ಜಾಗರೂಕವಾಗುತ್ತವೆ. ಜನರೂ ಸರ್ಕಾರ ಹಾಗೂ ಇಂತಹ ಸಂಸ್ಥೆಗಳ ಜೊತೆಗೆ ಕೈಜೋಡಿಸಿ ಸಂರಕ್ಷಣೆಯನ್ನು ಸುಲಭವಾಗಿಸಬೇಕು . ...
error: Content is protected !!