Monday, October 25, 2021

ಲೈಫ್‌ಸ್ಟೈಲ್‌

ಆರೋಗ್ಯವರ್ಧಕ ಏಲಕ್ಕಿ

 ಅಡುಗೆ ಮನೆಯಲ್ಲಿದೆ ಏಲಕ್ಕಿಯ ಮದ್ದು  ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿಗೆ ಪ್ರಮುಖ ಸ್ಥಾನವಿದೆ. ಏಲಕ್ಕಿ ಆರೋಗ್ಯಕ್ಕೂ ಅತ್ಯುತ್ತಮ. ನಿಯಮಿತವಾಗಿ ಏಲಕ್ಕಿ ಬಳಕೆ ಮಾಡುವುದರಿಂದ ಅಜೀರ್ಣ, ವಾಯು ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಲೈಂಗಿಕ ದೌರ್ಬಲ್ಯ ದೂರಮಾಡುವಲ್ಲಿಯೂ ಏಲಕ್ಕಿಯನ್ನು ಬಳಕೆ ಮಾಡಲಾಗುತ್ತದೆ. ♦ ವಿಧಾತ್ರಿ newsics.com@gmail.com ಅಡುಗೆಮನೆಯಲ್ಲೇ ಇರುವ ಆರೋಗ್ಯಕರ ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿಯ ಸ್ಥಾನ ಹಿರಿದು. ಮಸಾಲೆ ಪದಾರ್ಥಗಳ ರಾಣಿ ಏಲಕ್ಕಿ. ಹಲವಾರು...

ಬೆನ್ನುನೋವಿಗೆ ಮನೆಯಲ್ಲೇ ಪರಿಹಾರ

 ಸರಳ ವಿಧಾನಗಳಿಂದ ಬೆನ್ನುನೋವನ್ನು ದೂರವಿಡಿ  ಬೆನ್ನು ನೋವು ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವ ಸಮಸ್ಯೆ. ಆದರೆ, ಈ ನೋವಿನೊಂದಿಗೆ ದಿನವೂ ಹೋರಾಡುವುದು ಕಷ್ಟವಾಗುತ್ತದೆ. ಮನೆಯಲ್ಲೇ ನಿಯಮಿತವಾಗಿ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ನೋವನ್ನು ನಿವಾರಣೆ ಮಾಡಿಕೊಳ್ಳಬಹುದು ಅಥವಾ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ♦ ಡಾ. ಸುಮನ್ newsics.com@gmail.com ಬೆನ್ನುನೋವು ಕಾಡಿಸುತ್ತದೆ. ಕೂತರೂ ನೋವು, ಬಗ್ಗಿದರೂ ನೋವು, ಮೇಲೆದ್ದರೂ ನೋವು. ನಮ್ಮ ಉತ್ಸಾಹವನ್ನು ನಾಶ...

ವ್ಯಕ್ತಿತ್ವ ನಾಶ ಮಾಡುವ ದುರಭ್ಯಾಸಗಳು

 ಋಣಾತ್ಮಕ ಚಿಂತನೆಗಳನ್ನು ದೂರವಿಡಿ  ನಾವು ಅರಿತೋ ಅರಿಯದೆಯೋ ರೂಢಿಸಿಕೊಳ್ಳುವ ಕೆಲವು ಅಭ್ಯಾಸಗಳು ನಮ್ಮ ವ್ಯಕ್ತಿತ್ವವನ್ನು ಹಾಳುಮಾಡುತ್ತಿರುತ್ತವೆ. ಅವುಗಳನ್ನು ದೂರವಿಟ್ಟಾಗ ಮಾತ್ರ ಬದುಕು ಹಸನಾಗುತ್ತದೆ. ♦ ಸುಲಕ್ಷಣಾ newsics.com@gmail.com ಮನುಷ್ಯನ ವರ್ತನೆ, ಚಿಂತನೆ, ಸ್ವಭಾವಗಳು ಸದಾ ಅಧ್ಯಯನಯೋಗ್ಯ ಸಂಗತಿಗಳು. ಒಬ್ಬ ವ್ಯಕ್ತಿ ಹೇಗೆ ಯೋಚಿಸುತ್ತಾನೆ, ವರ್ತಿಸುತ್ತಾನೆ ಎನ್ನುವುದು ಬಹುಶಃ ಅವನ ಸಮೀಪವರ್ತಿಗಳಿಗೂ ಸ್ಪಷ್ಟವಾಗಿ ತಿಳಿದಿರುವುದಿಲ್ಲ. ಅಷ್ಟರಮಟ್ಟಿಗೆ ವೈವಿಧ್ಯತೆ ಇರುತ್ತದೆ. ಒಳ್ಳೆಯ-ಕೆಟ್ಟ ಗುಣಗಳು...

ಅಡುಗೆಗೆ ಎಂತಹ ಪಾತ್ರೆಗಳು ಬೇಕು?

ಅಡುಗೆಗೆ ಬಳಸುವ ಪಾತ್ರೆಗಳ ಬಗ್ಗೆ ಎಚ್ಚರವಿರಲಿ ಆಹಾರವನ್ನು ಯಾವುದರಲ್ಲಿ ತಯಾರಿಸುತ್ತೇವೆ ಎನ್ನುವುದು ಬಹುಮುಖ್ಯ. ಇಂದಿನ ಮಾರುಕಟ್ಟೆಯಲ್ಲಿ ಹೊಳೆಯುವ, ಚೆಂದವಾಗಿ ಕಾಣುವ ಪಾತ್ರೆಗಳು ಕಣ್ಣುಕುಕ್ಕುತ್ತವೆ. ಆದರೆ, ಎಲ್ಲದರಲ್ಲೂ ಅಡುಗೆ ಮಾಡಲು ಸಾಧ್ಯವಾಗುವುದಿಲ್ಲ. ಸುರಕ್ಷಿತ ಮಾದರಿಯ ಪಾತ್ರೆಗಳಲ್ಲಿ ಅಡುಗೆ ಮಾಡಿದಾಗಲೇ ಆರೋಗ್ಯವೂ ಸಂರಕ್ಷಣೆಯತಾಗುತ್ತದೆ. ♦ ವಿಧಾತ್ರಿ newsics.com@gmail.com 'ಆಹಾರದಿಂದ ಆರೋಗ್ಯ’ ಎನ್ನುವ ಮಾತನ್ನು ನಾವು ಕೇಳಿದ್ದೇವೆ. ಮನೆಯ...

ಪ್ರೀತಿಯ ಅಮಲಿನಿಂದ ಹೊರತರುವುದು ಹೇಗೆ?

ವಿಫಲವಾದ ಪ್ರೀತಿಯಿಂದ ಮನಸ್ಸು-ಬುದ್ಧಿಯನ್ನು ಹೊರತರುವುದೆಂದರೆ ಒಂದು ರೀತಿಯ ಅಮಲಿನಿಂದ ಮಿದುಳನ್ನು ಹೊರತಂದಂತೆ! ಇದು ಹಾರ್ಮೋನುಗಳ ಕರಾಮತ್ತು. ಆದರೆ, ಆ ಸಮಯವನ್ನು ಹೇಗೆ ನಿಭಾಯಿಸುವುದೊಂದು ಸವಾಲು ♦ ವಿಧಾತ್ರಿ newsics.com@gmail.com ಟಕ್‌ ಎಂದು ಪ್ರೀತಿಯಲ್ಲಿ ಬೀಳುವುದು ಸುಲಭ. ಇದಂತೂ ಡಿಜಿಟಲ್‌ ಯುಗ. ಮುಖ ನೋಡದಿದ್ದರೂ ಜೀವ ನೀಡುವಷ್ಟು ಪ್ರೀತಿ ಯಾರ ಮೇಲಾದರೂ ಹುಟ್ಟಿಬಿಡಬಹುದು. ಪ್ರೀತಿ-ಪ್ರೇಮದ ಸಿಕ್ಕಿನೊಳಗೆ ಸಿಲುಕುವಾಗ ಬಹುಶಃ ಯಾರೂ...

ಸಂಗಾತಿಯಲ್ಲಿರಲಿ ಹೊಂದಾಣಿಕೆ ಮನಸ್ಥಿತಿ ; ಸಮಾನ ಅಭಿರುಚಿಯೂ ಮುಖ್ಯ

ಸಂಗಾತಿ ಹೀಗಿರಬೇಕು ಎನ್ನುವ ಕಲ್ಪನೆ ಎಲ್ಲರಲ್ಲಿ ಸಾಮಾನ್ಯ. ಹೊಂದಾಣಿಕೆಯ ಬುದ್ಧಿ ಹಾಗೂ ಸಮಾನ ಅಭಿರುಚಿಯ ಸಂಗಾತಿಯಿದ್ದರೆ ಬದುಕು ಸುಲಭ ಹಾಗೂ ಸರಳ ಎನ್ನುವುದನ್ನು ಅರಿತಿರುವ ನಮ್ಮ ಯುವಜನಾಂಗ ಇದನ್ನೇ ತಮ್ಮ ಸಂಗಾತಿಯಿಂದ ಅಪೇಕ್ಷಿಸಿದ್ದಾರೆ. ♦ ವಿಧಾತ್ರಿ newsics.com@gmail.com ನಿಮ್ಮ ಸಂಗಾತಿ ಹೇಗಿರಬೇಕು ಎಂದು ಯುವತಿಯರನ್ನೋ, ಯುವಕರನ್ನೋ ಕೇಳಿ ನೋಡಬೇಕು. ದೊಡ್ಡದಾದ ಲಿಸ್ಟ್ ನೀಡುತ್ತಾರೆ. ಗಂಡನಾಗುವ/ ಹೆಂಡತಿಯಾಗುವವರ ಕುರಿತು ಬಹಳ...

ಚಂದ್ರನಂಥ ‘ಚಾಂದಿ’

ಬಿಳಿಲೋಹಕ್ಕಿದೆ ಆರೋಗ್ಯ ಪೊರೆಯುವ ಶಕ್ತಿ 'ಮಾತು ಬೆಳ್ಳಿ’ ಎಂದು ಮಾತಿನ ಮಹತ್ವವನ್ನು ಬೆಳ್ಳಿಗೆ ಹೋಲಿಕೆ ಮಾಡಲಾಗುತ್ತದೆ. ಬೆಳ್ಳಿ ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಲೋಹ. ಸೋಂಕು ನಿರೋಧಕ ಅಂಶ ಹೊಂದಿರುವ ಬೆಳ್ಳಿ, ನಮ್ಮ ದೇಹವನ್ನು ತಂಪಾಗಿಡುವ ಮೂಲಕ ಆರೋಗ್ಯಕ್ಕೆ ಮಹತ್ವದ ಕೊಡುಗೆ ನೀಡುತ್ತದೆ. ♦ ವಿಧಾತ್ರಿ newsics.com@gmail.com ಅದೇನೋ ಗೊತ್ತಿಲ್ಲ, ನಮ್ಮ ಭಾರತೀಯ ಮಹಿಳೆಯರಿಗೆ ಚಿನ್ನ ಹಾಗೂ ಬೆಳ್ಳಿಯ ಮೇಲೆ...

ಭುಜಗಳಲ್ಲೇಕೆ ಜೋಮು?

 ಭುಜದ ನೋವಿಗೆ ಪರಿಹಾರ  ಭುಜಗಳಲ್ಲಿ ಜೋಮು ಹಿಡಿಯುವುದು ಆಧುನಿಕ ಜೀವನಶೈಲಿಯ ಅತಿ ಸಾಮಾನ್ಯ ಸಮಸ್ಯೆ. ದೈಹಿಕ ಚಟುವಟಿಕೆ ಕುಂಠಿತವಾಗಿರುವುದು, ದೀರ್ಘಕಾಲ ಕುಳಿತುಕೊಂಡು ಕೆಲಸ ಮಾಡುವುದು, ದೈಹಿಕ ಶ್ರಮದ ಕೆಲಸಗಳು ದೂರವಾಗಿರುವುದೇ ಇದಕ್ಕೆ ಪ್ರಮುಖ ಕಾರಣ. ಆದರೆ, ಸಮಸ್ಯೆ ದೀರ್ಘಾವಧಿಯದ್ದಾಗಲು ಬಿಡದೆ ಆರಂಭದಲ್ಲೇ ಎಚ್ಚೆತ್ತುಕೊಂಡು, ಸೂಕ್ತ ವ್ಯಾಯಾಮದ ಸಹಾಯದಿಂದ ನಿವಾರಣೆ ಮಾಡಿಕೊಳ್ಳಬಹುದು. ♦ ಡಾ. ಲಕ್ಷ್ಮೀ ಎಸ್ newsics.com@gmail.com ಭುಜಗಳು ಜೋಮು...

ಬೈದರೆ ಕೋಪ ಶಮನ!

ಕೋಪಿಷ್ಠ ವ್ಯಕ್ತಿಗಳು ನಿಜಕ್ಕೂ ನೆಮ್ಮದಿಯಾಗಿರ್ತಾರಾ? ಬರುವ ಕೋಪವನ್ನು ಅವಾಚ್ಯ ಶಬ್ದಗಳ ಮೂಲಕ ಪ್ರದರ್ಶನ ಮಾಡುವವರು ಬದುಕಿನಲ್ಲಿ ನೆಮ್ಮದಿಯಾಗಿರುತ್ತಾರೆ. ಆದರೆ, ಕೋಪವನ್ನು ನುಂಗಿಕೊಂಡು ಬದುಕಿದರೆ ಹತಾಶೆಗೆ ಒಳಗಾಗುತ್ತಾರೆ ಎಂದು ಕೀನ್ ವಿಶ್ವವಿದ್ಯಾಲಯದ ಅಧ್ಯಯನವೊಂದು ಹೇಳಿದೆ. ♦ ವಿಧಾತ್ರಿ newsics.com@gmail.com ಎದುರು ಯಾರಿದ್ದಾರೆ, ಯಾರಿಗೆ ಏನು ಹೇಳುತ್ತಿರುವೆ ಎನ್ನುವ ಪರಿವೆಯಿಲ್ಲದೆ ಕೆಟ್ಟು ಬೈಗುಳಗಳೊಂದಿಗೆ ಕಿರಿಚಾಡುತ್ತಿರುವವರನ್ನು ನಾವು ಆಗಾಗ ನೋಡುತ್ತೇವೆ. ಕಚೇರಿಯಿರಲಿ, ಮನೆಯಿರಲಿ, ಎಲ್ಲೆಂದರಲ್ಲಿ...

ಡೆಂಘೆಯಿಂದ ಬೇಗ ಚೇತರಿಸಿಕೊಳ್ಳಲು ಹೀಗ್ಮಾಡಿ

ಸೂಕ್ತ ಆಹಾರಕ್ರಮ ಅನುಸರಿಸಿ ಡೆಂಘೆ ಪ್ರಕರಣಗಳು ಹೆಚ್ಚಾಗಿರುವ ಈ ಸಮಯದಲ್ಲಿ ಎಲ್ಲರೂ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಜತೆಗೆ, ಈಗಾಗಲೇ ಡೆಂಘೆಗೆ ತುತ್ತಾಗಿ, ಚೇತರಿಸಿಕೊಳ್ಳುತ್ತಿರುವವರು ತಮ್ಮ ಆಹಾರದ ಕುರಿತು ಸ್ವಲ್ಪ ಮುತುವರ್ಜಿ ವಹಿಸಿದರೆ ಬೇಗ ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ♦ ಡಾ.ಸುಮನ್ newsics.com@gmail.com ಇತ್ತೀಚೆಗೆ ರಾಜ್ಯದಲ್ಲಿ ಡೆಂಘೆ ಜ್ವರ ವಿಪರೀತವಾಗಿ ಕಂಡುಬರುತ್ತಿದೆ. ನಗರ-ಗ್ರಾಮೀಣ ಎನ್ನದೆ ಎಲ್ಲೆಡೆ ಡೆಂಘೆ ಜ್ವರ ಬಾಧಿಸುತ್ತಿದೆ. ಅನೇಕ ಕಡೆಗಳಲ್ಲಿ...

ಕೊರೋನಾ ಮೂರನೇ ಅಲೆ ಬೇಡ ಆತಂಕ

  ಶೇ.90ರಷ್ಟು ಮಕ್ಕಳಿಗಿಲ್ಲ ರೋಗ ತೀವ್ರತೆ   ಕೊರೋನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಸಮಸ್ಯೆಯಾಗುತ್ತದೆ ಎನ್ನುವ ಸುದ್ದಿ ಎಲ್ಲ ಪಾಲಕರನ್ನೂ ಚಿಂತೆಗೀಡು ಮಾಡಿದೆ. ಬೆಂಗಳೂರಿನ ಬಹಳಷ್ಟು ಪಾಲಕರು ತಮ್ಮ ಮಕ್ಕಳಿಗೆ ಈಗಾಗಲೇ ರೋಗ ನಿರೋಧಕತೆ ಹೆಚ್ಚಿಸುವ ಔಷಧಗಳನ್ನು ನೀಡಲು ಆರಂಭಿಸಿದ್ದಾರೆ. ಜತೆಗೆ, ಆಹಾರ ಪದ್ಧತಿ, ಅವರ ದಿನಚರಿಯನ್ನೂ ತಿದ್ದುವ ಸಮಯವಿದು. ಇವೆಲ್ಲವೂ ಸರಿಯೇ. ಆದರೆ, ಮೂರನೇ ಅಲೆಯಲ್ಲಿ...

ಪಾದಗಳಿಗೆ ಬಿಸಿನೀರ ಸ್ನಾನ

  ವಾರಕ್ಕೆರಡು ದಿನವಾದರೂ ಮಾಡಿಸಿ   ಪಾದಗಳನ್ನು ಬಿಸಿನೀರಿನಲ್ಲಿ ಇರಿಸಿಕೊಳ್ಳುವುದು ದೇಹಾರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಸುಮ್ಮನೆ ದಿನದ ಯಾವುದಾದರೂ ಸಮಯದಲ್ಲಿ ಬಿಸಿನೀರಿನಲ್ಲಿ ಪಾದಗಳನ್ನು ಇಳಿಬಿಟ್ಟು ಕುಳಿತುಕೊಳ್ಳಿ. ರಾತ್ರಿ ಸಮಯದಲ್ಲಾದರೆ ಇನ್ನಷ್ಟು ಉತ್ತಮ. ದೇಹ ಒತ್ತಡಮುಕ್ತವಾಗುವ ಜತೆಗೆ ಅನವಶ್ಯಕ ಕಿರಿಕಿರಿ ದೂರವಾಗಿ ಚೆನ್ನಾಗಿ ನಿದ್ರೆ ಬರುತ್ತದೆ. ♦ ವಿಧಾತ್ರಿ newsics.com@gmail.com ಹಿಮ್ಮಡಿ ನೋವೆಂದು ಯಾವಾಗಲಾದರೂ ವೈದ್ಯರ ಬಳಿ ಹೋಗಿದ್ದೀರಾ? ಖಂಡಿತವಾಗಿ ಬಿಸಿನೀರಿನಲ್ಲಿ ಪಾದಗಳನ್ನು...

ಮೊಡವೆಗೆ ಬೈ ಬೈ ಹೇಳಿ!

  ಜೀವನಶೈಲಿ ಸರಿಪಡಿಸಿಕೊಳ್ಳುವುದೇ ಮೊಡವೆ ಸಮಸ್ಯೆಗೆ ಪರಿಹಾರ   ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಅದರಲ್ಲೂ ಮೊಡವೆಯಂತಹ ಸಮಸ್ಯೆಗೆ ನಮ್ಮ ಅಭ್ಯಾಸಗಳೇ ಬಹುತೇಕ ಕಾರಣವಾಗಿರುತ್ತವೆ. ಉತ್ತಮ ಆಹಾರ, ಸ್ವಚ್ಛತೆ, ಸರಿಯಾದ ನಿದ್ರೆ-ವ್ಯಾಯಾಮಗಳಿಂದ ಮೊಡವೆ ಸಮಸ್ಯೆಗೆ ಮುಕ್ತಿ ದೊರಕಿಸಿಕೊಳ್ಳಬಹುದು. ♦ ವಿಧಾತ್ರಿ newsics.com@gmail.com ಚರ್ಮದ ಬಣ್ಣ, ಚಹರೆಯನ್ನು ನೋಡಿಯೇ ವ್ಯಕ್ತಿಯ ಆರೋಗ್ಯವನ್ನು ಅಳೆಯುವವರಿದ್ದಾರೆ. ಅಷ್ಟರಮಟ್ಟಿಗೆ ಚರ್ಮ ನಮ್ಮನ್ನು ಬಿಂಬಿಸುತ್ತದೆ. ಆದರೆ,...

ಹಾರ್ಮೋನ್ ಗಳಲ್ಲಿದೆ ಖುಷಿಯ ಗುಟ್ಟು

 ಜೀವನ ಧನ್ಯತೆಗೆ ಐದು ಸೂತ್ರಗಳು  ನಮ್ಮ ದೇಹದ ಮೇಲೆ ಹಾರ್ಮೋನುಗಳ ಪ್ರಭಾವ ಅಧಿಕ. ನಮ್ಮ ಮೇಲೆ ಅವುಗಳ ಧನಾತ್ಮಕ ಪ್ರಭಾವ ಇರುವಂತಾಗಲು ದಿನವೂ ವ್ಯಾಯಾಮ ಮಾಡುವ ಅಭ್ಯಾಸ, ನಗುವುದು, ನೆರವು ನೀಡುವುದು, ಮೆಚ್ಚಿಕೊಳ್ಳುವ ಗುಣ, ಕೃತಜ್ಞತಾ ಭಾವ, ಎಲ್ಲರಲ್ಲಿ ಆತ್ಮೀಯತೆಯಿಂದಿರುವುದು ಮುಖ್ಯ. newsics.com Features Desk ಮನುಷ್ಯ ಚಟುವಟಿಕೆಯಿಂದ ಕೂಡಿರಬೇಕು, ಇತರರಿಗೆ ನೆರವು ನೀಡಬೇಕು, ಬೇರೊಬ್ಬರನ್ನು ಮೆಚ್ಚಿಕೊಳ್ಳಬೇಕು, ಆತ್ಮೀಯತೆ...

ಅತಿ ಹೆಚ್ಚು ಸ್ವಚ್ಛತೆ ಅಗತ್ಯವಿಲ್ಲ!

 ರೋಗ ನಿರೋಧಕತೆ ಹೆಚ್ಚಲು ಸೂಕ್ಷ್ಮಜೀವಿಗಳ ಒಡನಾಟ ಬೇಕು!  ದೇಹದಲ್ಲಿ ರೋಗನಿರೋಧಕತೆ ಹೆಚ್ಚಬೇಕೆಂದರೆ, ಅತಿಯಾದ ಸ್ವಚ್ಛತೆ ಪಾಲಿಸಬಾರದು! ಹೌದು, ಬಾಲ್ಯಕಾಲದಲ್ಲಿ ಕೆಲವು ಸೂಕ್ಷ್ಮಾಣುಜೀವಿಗಳ ಒಡನಾಟಕ್ಕೆ ಬಂದಾಗಲೇ ಮುಂದಿನ ದಿನಗಳಲ್ಲಿ ರೋಗ ನಿರೋಧಕತೆ ಸದೃಢಗೊಳ್ಳುತ್ತದೆ. ♦ ವಿಧಾತ್ರಿ newsics.com@gmail.com ರಸ್ತೆ ಬದಿಯಲ್ಲಿ ಮಣ್ಣಿನಲ್ಲಿ ಆಟವಾಡುತ್ತ, ತನ್ನ ತಾಯಿಯೋ, ತಂದೆಯೋ ಕೆಲಸ ಮಾಡುವುದನ್ನು ನೋಡುತ್ತ ಕುಳಿತುಕೊಳ್ಳುವ ಕಾರ್ಮಿಕರ ಮಕ್ಕಳನ್ನು ಕಂಡು ಅದೆಷ್ಟೋ ಬಾರಿ ಸುಶಿಕ್ಷಿತ...

ಕಾಡದಿರಲಿ ಡೆಮೆನ್ಷಿಯಾ

 ವೃದ್ಧಾಪ್ಯ ಸುಂದರವಾಗಿರಲಿ  ಭವಿಷ್ಯದಲ್ಲಿ ಡೆಮೆನ್ಷಿಯಾ ಅಂದರೆ ವಯಸ್ಸಾದಂತೆ ಉಂಟಾಗುವ ಬುದ್ಧಿಮಾಂದ್ಯತೆ ಸಮಸ್ಯೆ ಹೆಚ್ಚಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಅಂದರೆ, ಮುಂದಿನ ವೃದ್ಧರು ಡೆಮೆನ್ಷಿಯಾ ಪೀಡಿತರಾಗುವ ಸಂಭವ ಹೆಚ್ಚಾಗಿದೆ. ಈಗಲೇ ಎಚ್ಚರಿಕೆ ತೆಗೆದುಕೊಂಡರೆ ಮಾತ್ರ ಆ ಅವಸ್ಥೆಯಿಂದ ಮುಕ್ತರಾಗಿ ವೃದ್ಧಾಪ್ಯದಲ್ಲೂ ಚಟುವಟಿಕೆಯಿಂದಿದ್ದು, ಸುಂದರ ದಿನಗಳನ್ನು ಅನುಭವಿಸಬಹುದು. ♦ ಡಾ.ಸುಮನ್ newsics.com@gmail.com ಬದುಕು ಒಂದು ರೀತಿಯಲ್ಲಿ ಟೆನ್ಷನ್ ಮಯವಾಗಿದೆ. ಹಳ್ಳಿಯಲ್ಲಿದ್ದರೂ...

ಕೊರೋನಾಗೆ‌ ಮೂರನೇ ಡೋಸ್ ಅಗತ್ಯವೇ?

ಭಾರತದಲ್ಲೂ ಮೂರನೇ ಡೋಸ್ ಲಸಿಕೆ ಅಗತ್ಯದ ಚರ್ಚೆ ಭಾರತದಲ್ಲಿನ್ನೂ ಸಂಪೂರ್ಣವಾಗಿ ಕೊರೋನಾ ಲಸಿಕೆ ಪಡೆದವರ ಸಂಖ್ಯೆ ಅತಿ ಕಡಿಮೆ ಇದೆ. ಎರಡೂ ಡೋಸ್ ಪಡೆದವರ ಸಂಖ್ಯೆ ಅತ್ಯಲ್ಪವಾಗಿದೆ. ಈ ನಡುವೆಯೇ, ಮೂರನೇ ಡೋಸ್ ಲಸಿಕೆಯ ಅಗತ್ಯದ ಕುರಿತು ಚರ್ಚೆ ಆರಂಭವಾಗಿದೆ.  ♦ ಡಾ.ಸುಮನ್ newsics.com@gmail.com ಕೋವಿಡ್ ಮೂರನೇ ಅಲೆಯ ಸಂಭಾವ್ಯ ಸಮಯ ಸಮೀಪಿಸುತ್ತಿದೆ. ಭಯಪಡುವ ಅಗತ್ಯವಿಲ್ಲವಾದರೂ ಎಚ್ಚರಿಕೆ ತೆಗೆದುಕೊಳ್ಳಬೇಕಾದುದು ಅನಿವಾರ್ಯ....

ಬಿಡುವಿನ ವೇಳೆ ಖುಷಿಯಾಗಿ ಚಟುವಟಿಕೆಯಿಂದಿರಿ

  ವಿರಾಮದ ಸಮಯ ಅನುತ್ಪಾದಕವಲ್ಲ   ಮಾನವನದ ಮಿದುಳು ಹಾಗೂ ಮನಸ್ಸಿಗೆ ಉಲ್ಲಾಸದಾಯಕ ಚಟುವಟಿಕೆಗಳು ಬೇಕು. ಸತತ ಒತ್ತಡ, ಕೆಲಸದಿಂದ ಅಲ್ಪ ವಿರಾಮ ಬೇಕು. ಆದರೆ, ಇಂಥ ಚಟುವಟಿಕೆಗಳನ್ನು ಅಪ್ರಯೋಜಕ ಎಂದು ಪರಿಗಣಿಸುವವರೂ ನಮ್ಮಲ್ಲಿದ್ದಾರೆ. ಇಂಥವರು ಬದುಕಿನ ಸಂತಸವನ್ನು ಅನುಭವಿಸಲಾರರು. ಜತೆಗೆ, ಒತ್ತಡಕ್ಕೀಡಾಗಿ, ಖಿನ್ನತೆ ಅನುಭವಿಸುತ್ತಾರೆ. newsics.com Features Desk ಒಂದಿಷ್ಟು ದಿನಗಳ ಕಾಲ ಸತತವಾಗಿ ಕೆಲಸ ಮಾಡಿದ ಬಳಿಕ...

ಮನೆ ಸ್ವಚ್ಛವಾಗಿದ್ದರೆ ಮನಸ್ಸೂ ಸ್ವಚ್ಛ

ಮನೆಯನ್ನು ಸ್ವಚ್ಛವಾಗಿಟ್ಟುಕೊಂಡರೆ ಅಲ್ಲಿ ಲಕ್ಷ್ಮೀ ನಲಿಯುತ್ತಾಳೆ ಎನ್ನುವ ನಂಬಿಕೆ ಇದೆ. ಲಕ್ಷ್ಮೀ ನಲಿಯುತ್ತಾಳೋ ಇಲ್ಲವೋ ಗೊತ್ತಿಲ್ಲ, ಮನೆ ಸ್ವಚ್ಛವಾಗಿದ್ದರೆ ನಮ್ಮ ಮನಸ್ಸುಗಳು ನಲಿಯುತ್ತವೆ. ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಗೊಂದಲ, ಗಜಿಬಿಜಿ ಕಡಿಮೆಯಾಗುತ್ತದೆ. ಇವೆಲ್ಲದರ ಪರಿಣಾಮವಾಗಿ, ಲಕ್ಷ್ಮೀಯೂ ಆಗಮಿಸಬಹುದು! ♦ ಸುಲಕ್ಷಣಾ newsics.com@gmail.com ಮನೆಯನ್ನು ನೀಟಾಗಿ ಇಟ್ಟುಕೊಳ್ಳುವುದು ಎಲ್ಲ ಮಹಿಳೆಯರ ಕನಸು. ಆದರೆ, ಕೆಲವರಿಗೆ ಮಾತ್ರವೇ ಇದು ಸಾಧ್ಯವಾಗುತ್ತದೆ....

ಈಜುವುದರಿಂದ ವಾಕ್ ಸಾಮರ್ಥ್ಯ ಹೆಚ್ಚಳ

 ಕ್ರಿಯಾಶೀಲತೆಗೆ ಉತ್ತೇಜನ ನೀಡುವ ಈಜು  ಈಜುವುದರಿಂದ ಮಕ್ಕಳ ಮಿದುಳಿನ ಸಾಮರ್ಥ್ಯ ಹೆಚ್ಚಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದರೊಂದಿಗೆ ಈಗ ಬಹಿರಂಗವಾಗಿರುವ ವಿಚಾರವೆಂದರೆ, ಕ್ರಿಯಾಶೀಲತೆ, ವಾಕ್ ಸಾಮರ್ಥ್ಯವೂ ಈಜುವುದರಿಂದ ಹೆಚ್ಚಾಗುತ್ತದೆ. ♦ ವಿಧಾತ್ರಿ newsics.com@gmail.com ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಿಸಬೇಕೆಂದು ಪಾಲಕರು ಸಾಕಷ್ಟು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಈಗಂತೂ ಶಾಲೆಗಳಿಲ್ಲ. ಆಟೋಟಗಳಿಲ್ಲ. ಶಾಲೆಯಲ್ಲಿ ಸಮವಯಸ್ಕ ಮಕ್ಕಳೊಂದಿಗೆ ಒಡನಾಡದೆ, ಆಡವಾಡುತ್ತ ಕಲಿಯದೆ, ಕ್ಲಾಸ್...

ಕೊರೋನಾ ನಂತರ ಹೆಚ್ಚಾಯ್ತು ಬೆನ್ನು-ಮಂಡಿ ನೋವು

ನೋವು ಹೆಚ್ಚಿಸುವ ಕೊರೋನಾ ಕೊರೋನಾ ನಂತರ ಎದುರಾಗುವ ಆರೋಗ್ಯದ ಸಮಸ್ಯೆಗಳು ಒಂದೆರಡಲ್ಲ. ಬೆನ್ನುನೋವು, ಮಂಡಿಗಳಲ್ಲಿ ನೋವುಗಳು ಸವಾಲೊಡುತ್ತವೆ. ವಿಶ್ರಾಂತಿಯೊಂದಿಗೆ ಸೂಕ್ತ ಚಿಕಿತ್ಸೆ ಪಡೆದು ಇವುಗಳನ್ನು ನಿವಾರಿಸಿಕೊಳ್ಳಬೇಕು. ♦ ಡಾ.ಸುಮನ್ newsics.com@gmail.com ಕೊರೋನಾ ಒಮ್ಮೆ ಬಂದು ಮುಗಿಯಿತು ಎನ್ನುವಂತಿಲ್ಲ. ತಿಂಗಳಾನುಗಟ್ಟಲೆ ಅದರ ದುಷ್ಪರಿಣಾಮಗಳನ್ನು ಅನುಭವಿಸುತ್ತಲೇ ಇರುತ್ತೇವೆ. ಒಬ್ಬೊಬ್ಬರಿಗೆ ಒಂದೊಂದು ರೀತಿ. ಉದಾಹರಣೆಗೆ, ಕೊರೋನಾ ಬಂದಾಗ ಹಸಿವೆಯಾಗುವುದು ಹೇಗೆ ಕಡಿಮೆಯಾಗಿತ್ತೋ ಅದೇ ಲಕ್ಷಣ...

ಆರೋಗ್ಯಕ್ಕೆ ಹಾನಿಕರ ಫ್ರೋಜನ್ ಹನಿ ಚಾಲೆಂಜ್!

  ಟಿಕ್ ಟಾಕ್ ನಲ್ಲಿ ವಿಶ್ವಾದ್ಯಂತ ಟ್ರೆಂಡ್ ಸೃಷ್ಟಿಸಿರುವ ಚಾಲೆಂಜ್  ಟಿಕ್ ಟಾಕ್ ಸೋಷಿಯಲ್ ಮೀಡಿಯಾದಿಂದ ಆರಂಭವಾಗಿರುವ ಫ್ರೋಜನ್ ಹನಿ ಚಾಲೆಂಜ್ ಯುವ ಜನರನ್ನು ಮೋಡಿಗೊಳಿಸಿದೆ. ಆದರೆ, ಎಚ್ಚರ, ಇದರಿಂದ ಆರೋಗ್ಯಕ್ಕೆ ಹಾನಿಯಾಬಹುದು. newsics.com Features Desk ಸದಾ ಏನಾದರೊಂದು ಟ್ರೆಂಡ್ ಅನ್ನು ವೈರಲ್ ಮಾಡುತ್ತಿರುವುದು ನಮ್ಮ ಯುವ ಜನರ ಹವ್ಯಾಸ. ಇತ್ತೀಚೆಗೆ ಸವಾಲೊಡ್ಡುವುದು ಸಹ ಟ್ರೆಂಡ್ ಆಗಿದೆ....

ಸ್ತನ್ಯಪಾನಕ್ಕೆ ಪ್ರೋತ್ಸಾಹ ನೀಡುವುದು ಸಾಮೂಹಿಕ ಜವಾಬ್ದಾರಿ

ವಿಶ್ವ ಸ್ತನ್ಯಪಾನ ಸಪ್ತಾಹ ಆಗಸ್ಟ್ 1-7 ಪ್ರತಿವರ್ಷ ಆಗಸ್ಟ್ 1ರಿಂದ 7ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ. ಕೊರೋನಾ ಕಾಲದಲ್ಲಿ ಈ ಬಾರಿ, “ಸ್ತನ್ಯಪಾನವನ್ನು ರಕ್ಷಿಸಿ: ಇದೊಂದು ಸಾಮೂಹಿಕ ಜವಾಬ್ದಾರಿ’ ಎನ್ನುವ ಥೀಮ್ ಅಡಿಯಲ್ಲಿ ಆಚರಿಸಲಾಗುತ್ತಿದೆ. newsics.com Features Desk ಕೊರೋನಾ ಸೋಂಕು ಮುಗಿಯುವ ಲಕ್ಷಣಗಳಿಲ್ಲ. ಸೋಂಕಿನಿಂದಾಗಿ ಹಲವರ ಜೀವ ಕೊನೆಯಾಗಿದೆ. ಈ ಸಮಯದಲ್ಲಿ ಭುವಿಗೆ ಬಂದಿರುವ ಶಿಶುಗಳಿಗೆ...

ದೀರ್ಘಕಾಲ ಕುಳಿತುಕೊಳ್ಳುವುದು ಹೃದ್ರೋಗಕ್ಕೆ ರಹದಾರಿ

ಮಾಂಸಖಂಡಗಳೂ ದುರ್ಬಲ ದೀರ್ಘಾವಧಿ ಕುಳಿತುಕೊಂಡು ಕೆಲಸ ಮಾಡುವವರಿಗೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ತಪ್ಪಿದ್ದಲ್ಲ. ಹೃದ್ರೋಗ, ಕ್ಯಾನ್ಸರ್, ಸೊಂಟ, ಬೆನ್ನು ನೋವುಗಳಿಂದ ಹಿಡಿದು ದೇಹದ ಮಾಂಸಖಂಡಗಳು ದರ‍್ಬಲವಾಗುವವರೆಗೆ ಇದರ ಅಪಾಯದ ವ್ಯಾಪ್ತಿಯಿದೆ. ಹೀಗಾಗಿ, ಕೆಲಸ ಮಾಡುವಾಗಲೂ ಸಾಧ್ಯವಾದಷ್ಟೂ ದೇಹವನ್ನು ಚಲನೆಯಲ್ಲಿಡುವುದು ಅಗತ್ಯ. ♦ ವಿಧಾತ್ರಿ newsics.com@gmail.com ದೀರ್ಘಕಾಲ ಕುಳಿತು ಕೆಲಸ ಮಾಡುವುದು ಹಲವು ಉದ್ಯೋಗಿಗಳಿಗೆ ಅನಿವಾರ್ಯ. ಈಗಂತೂ ವರ್ಕ್ ಫ್ರಾಂ...

ಒಬ್ಬರೇ ಇರುವಾಗ ಹೃದಯಾಘಾತವಾದರೆ ಏನು ಮಾಡಬೇಕು?

 ಅನುಸರಿಸಲೇಬೇಕಾದ ಎಚ್ಚರಿಕೆ ಕ್ರಮಗಳು  ಯಾವಾಗೆಂದರೆ ಆಗ ಹೃದಯಾಘಾತವಾಗುವುದು ಇಂದು ಸಾಮಾನ್ಯವಾಗುತ್ತಿದೆ. ಒಬ್ಬರೇ ಮನೆಯಲ್ಲಿರುವಾಗ ಹೃದಯಾಘಾತವಾದರೆ ಏನು ಮಾಡಬೇಕು ಎನ್ನುವುದನ್ನು ಅರಿತುಕೊಂಡು ಅನುಸರಿಸಿದರೆ ತೀವ್ರ ಪರಿಣಾಮಗಳನ್ನು ತಡೆಗಟ್ಟಬಹುದು.  ♦ ಡಾ.ಲಕ್ಷ್ಮೀ ಎಸ್ ಎರಡು ವರ್ಷಗಳ ಹಿಂದೆ ನಮ್ಮ ಪರಿಚಯದ ಒಬ್ಬರು ಸ್ನಾನಕ್ಕೆ ಹೋಗಿದ್ದರಂತೆ. ಅಲ್ಲಿಯೇ ಹೃದಯಾಘಾತವಾಗಿ ಬಿದ್ದು ಸಾವಿಗೀಡಾಗಿದ್ದರು. ಅರ್ಧ ಗಂಟೆಯ ಬಳಿಕ ಮನೆಯವರಿಗೆ ಇದು ತಿಳಿದುಬಂತು. ತಕ್ಷಣವೇ ಆಸ್ಪತ್ರೆಗೆ...

ಉಸಿರ ಬಲವರ್ಧನೆಗೂ ಬಂತು ಸಾಧನ

ಉಸಿರಾಟದ ವ್ಯವಸ್ಥೆ ಬಲಪಡಿಸುವ ಐಎಂಎಸ್ ಟಿ ಎನ್ನುವ ಸಾಧನ ಅಮೆರಿಕದಲ್ಲಿ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ದಿನಕ್ಕೆ ಐದೇ ನಿಮಿಷ ಈ ವ್ಯಾಯಾಮ ಮಾಡಿದರೂ ರಕ್ತದೊತ್ತಡ ಕಡಿಮೆಯಾಗುವುದನ್ನು ಗುರುತಿಸಲಾಗಿದೆ. * ಸುಮಲಕ್ಮೀnewsics.com@gmail.comಉಸಿರಾಟಕ್ಕೆ ಸಂಬಂಧಿಸಿದ ಅನೇಕ ವ್ಯಾಯಾಮಗಳು ಅಥವಾ ಪ್ರಾಣಾಯಾಮಗಳು ನಮ್ಮ ಭಾರತೀಯರ ಜನಜೀವನದಲ್ಲಿ ಬೆರೆತಿವೆ. ಅವುಗಳಿಂದಾಗುವ ಲಾಭವನ್ನು ನಾವೆಲ್ಲ ಅರಿತಿದ್ದೇವೆ. ಇದೀಗ, ಅಂಥದ್ದೇ ಇನ್ನೊಂದು ಉಸಿರಾಟದ ವ್ಯಾಯಾಮವೊಂದು...

ಏನಿದು ಮಂಕಿ ಬಿ ವೈರಸ್?

* ಅಪಾಯಕಾರಿಯಲ್ಲ, ಹರಡುವಿಕೆಯೂ ಕಡಿಮೆ ಏನಿದು ಮಂಕಿ ಬಿ ವೈರಸ್? ಚೀನಾದಲ್ಲಿ ಮಂಕಿ ಬಿ ವೈರಸ್ ಎನ್ನುವ ಹೊಸ ವೈರಸ್ ಕಾಣಿಸಿಕೊಂಡಿದೆ, ಅದೂ ಸಹ ತೀವ್ರವಾಗಿ ಹರಡುವ ಗುಣ ಹೊಂದಿದೆಯಂತೆ’ ಎನ್ನುವ ಮಾತುಗಳನ್ನು ಜನಸಾಮಾನ್ಯರ ನಡುವೆ ಕೇಳಿರಬಹುದು. ಆದರೆ, ಅದು ಹೆಚ್ಚು ಅಪಾಯಕಾರಿ ವೈರಸ್ಸೂ ಅಲ್ಲ, ತೀವ್ರವಾಗಿ ಹರಡುವುದೂ ಇಲ್ಲ. - ಡಾ. ಸುಮನ್ newsics.com@gmail.com ಕೊರೋನಾ ಸೋಂಕಿನ...

ಉಷ್ಣತೆಗೆ ಮಾನವ ದೇಹದ ಗಾತ್ರದಲ್ಲಿ ಬದಲು

ತಂತ್ರಜ್ಞಾನದ ಅವಲಂಬನೆಯಿಂದ ಕುಗ್ಗುತ್ತಿದೆ ಮಿದುಳು ಮಾನವನ ದೇಹ ಪರಿಸರದ ಬದಲಾವಣೆಗಳಿಗೆ ಪ್ರಭಾವಿತಗೊಳ್ಳುತ್ತ ತಾನೂ ಬದಲಾಗುತ್ತಿರುತ್ತದೆ. ಕಳೆದ ಹತ್ತು ಲಕ್ಷ ವರ್ಷಗಳಿಂದೀಚೆಗೆ ಮಾನವ ಮಿದುಳು ಹವಾಮಾನ ಹಾಗೂ ಉಷ್ಣತೆಗೆ ಸ್ಪಂದಿಸಿರುವ ಪರಿಣಾಮ ಕುಗ್ಗುತ್ತಿದೆ. ♦ ವಿಧಾತ್ರಿ ಪರಿಸರ, ಹವಾಮಾನ ಇಡೀ ಜೀವಸಂಕುಲದ ಮೇಲೆ ಪರಿಣಾಮ ಬೀರುವ ಅಂಶಗಳು. ಮಾನವನ ಬಾಹ್ಯ ಪ್ರಪಂಚವಷ್ಟೇ ಅಲ್ಲ, ಸ್ವತಃ ಅವನ ದೇಹ ಕೂಡ ಹವಾಮಾನದಿಂದ...

ಲಾಕ್’ಡೌನ್ ಎಫೆಕ್ಟ್: ಮಕ್ಕಳಲ್ಲಿ ಹೆಚ್ಚಿದ ದೃಷ್ಟಿದೋಷ

ಕೆಲವು ಮುಂಜಾಗ್ರತೆ ಅನುಸರಿದಿದ್ದರೆ ಮುಂದಿದೆ ಅಪಾಯ ಆನ್‌ ಲೈನ್‌ ಕ್ಲಾಸುಗಳು ಈಗ ಎಲ್ಲರಿಗೂ ಪರಿಚಿತವಾಗಿವೆ, ಅನೇಕರಿಗೆ ಸುಲಭವೆನಿಸುತ್ತಿವೆ, ಅನೇಕರು ಇನ್ನೂ ಕಷ್ಟಪಡುತ್ತಿದ್ದಾರೆ. ಆದರೆ, ಆನ್‌ ಲೈನ್‌ ಕ್ಲಾಸುಗಳು ಎಲ್ಲ ಮಕ್ಕಳನ್ನೂ ಸ್ಕ್ರೀನ್‌ ಮುಂದೆ ಕೂರಿಸುತ್ತಿವೆ. ಇದು ಭವಿಷ್ಯದಲ್ಲಿ ಮಕ್ಕಳಲ್ಲಿ ಸಮೀಪದೃಷ್ಟಿ ದೋಷ ಹೆಚ್ಚಲು ಕಾರಣವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ♦ ಪ್ರಮಥ ಕೊರೋನಾ ಕಾಲದ...

ಕೊರೋನಾ ಸಂಕಟ ಮಕ್ಕಳಲ್ಲಿ ಹೆಚ್ಚಿಸಿತು ಹಠ

ಮಕ್ಕಳಲ್ಲಿ ಕಂಡುಬರುತ್ತಿದೆ ಆಕ್ರಮಣಕಾರಿ ವರ್ತನೆ ಮಕ್ಕಳಲ್ಲಿ ವರ್ತನೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಿರುವುದು ಕೊರೋನೋತ್ತರ ಕಾಲದ ಬೆಳವಣಿಗೆ. ಹಠಮಾರಿತನ, ಆಕ್ರಮಣಕಾರಿ ಪ್ರವೃತ್ತಿ, ಕೋಪ, ಸಿಡುಕು ಹೆಚ್ಚಾಗಿರುವುದನ್ನು ಮಾನಸಿಕ ರೋಗಗಳ ತಜ್ಞರು ಗುರುತಿಸಿದ್ದಾರೆ. ಪಾಲಕರು ಎಚ್ಚೆತ್ತುಕೊಳ್ಳಬೇಕಾದ ಸಮಯವಿದು. ♦ ಸುಮನಾ ಲಕ್ಷ್ಮೀಶ newsics.com@gmail.com “ಮಗ ಅತಿಯಾಗಿ ಮೊಬೈಲ್ ನೋಡುತ್ತಾನೆ, ಕೊಡದಿದ್ದರೆ ಬಿದ್ದು ಬಿದ್ದು ಅಳುತ್ತಾನೆ, ಹಠ ಮಾಡುತ್ತಾನೆ, ಸರಿಯಾಗಿ ಊಟ –ತಿಂಡಿ ಮಾಡುತ್ತಿಲ್ಲ....
- Advertisement -

Latest News

ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನಕ್ಕೆ 10 ವಿಕೆಟ್’ಗಳ ಭರ್ಜರಿ ಗೆಲುವು

newsics.com ಯುಎಇ: ಟಿ-20 ವಿಶ್ವಕಪ್ ನ ಇಂದಿನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲನುಭವಿಸಿದೆ. ಇದೇ ಮೊದಲ ಬಾರಿಗೆ ಟಿ-20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ...
- Advertisement -

ಆಕರ್ಷಣೆ ಕಳೆದುಕೊಂಡಿತೇ ಶಿಕ್ಷಕ ವೃತ್ತಿ?

 ದೇಶದಲ್ಲಿ ನುರಿತ ಶಿಕ್ಷಕರ ತೀವ್ರ ಕೊರತೆ  ಭಾರತದ ಶಿಕ್ಷಣ ವ್ಯವಸ್ಥೆಯ ಮೇಲೆ ಇತ್ತೀಚೆಗೆ ಯುನೆಸ್ಕೋ ಬಿಡುಗಡೆ ಮಾಡಿರುವ ವರದಿ ಬೆಳಕು ಚೆಲ್ಲಿದೆ. 11 ಲಕ್ಷ ನುರಿತ ಶಿಕ್ಷಕರ ಕೊರತೆ ದೇಶದಲ್ಲಿದ್ದು, ಇರುವ ಶಿಕ್ಷಕರಿಗೂ ಉದ್ಯೋಗ...

ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ

  ಶಾಲಾರಂಭಕ್ಕೆ ಎದುರಾದ ಸಮಸ್ಯೆ   ಅಕ್ಟೋಬರ್ 25ರಿಂದ 1ನೇ ತರಗತಿಯ ಮಕ್ಕಳಿಗೂ ಶಾಲೆಯ ಬಾಗಿಲು ತೆರೆಯಲಿದೆ. ಸರ್ಕಾರಿ ಶಾಲೆಗಳ ಸ್ಥಿತಿ ಪರವಾಗಿಲ್ಲ, ಏಕೆಂದರೆ, ಅಲ್ಲಿನ ಶಿಕ್ಷಕರಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ಆದರೆ, ಖಾಸಗಿ ಶಾಲೆಗಳ...

ಡಿಸ್ ಲೆಕ್ಸಿಯಾದಿಂದ ಸೆಲೆಬ್ರಿಟಿ ಮ್ಯಾನೇಜರ್ ವರೆಗೆ…

ಅಂದು 'ಟ್ಯೂಬ್ ಲೈಟ್' ಇಂದು ಟೆಡ್ ಎಕ್ಸ್ ಭಾಷಣಕಾರ! ಯಾವುದೇ ಸಮಸ್ಯೆ ಇದ್ದರೂ ಪ್ರತಿಯೊಂದು ಮಗುವೂ ಒಂದು ನಕ್ಷತ್ರವೇ. ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಪ್ರತಿಭೆಯಿದೆ ಎನ್ನುವುದನ್ನು ಸಾಬೀತುಪಡಿಸಿರುವ ಡಿಸ್ ಲೆಕ್ಸಿಯಾ ಪೀಡಿತ ಮಗುವಾಗಿದ್ದ ಮುಂಬೈನ ಹರ್ಷ್ ದೋಶಿ...

ಚಂದ್ರಮುಕುಟ

ತಲೆಯ ಮೇಲೆ ಚೊಟ್ಟಿಯಂತೆ ಕಾಣುವ, ತಿಳಿಕೆಂಗಂದು ಬಣ್ಣದ, ಕಪ್ಪುತುದಿಯ,  ಗರಿಗಳು. ಇವನ್ನು ಹಕ್ಕಿ ಬಿಚ್ಚಿದರೆ ಅರ್ಧಚಂದ್ರಾಕೃತಿಯಂತೆ ನಿಲ್ಲುತ್ತವೆ. ಇದರಿಂದಲೇ ಈ ಹಕ್ಕಿಗೆ ಚಂದ್ರ ಮುಕುಟ ಎಂಬ ಹೆಸರು ಬಂದದ್ದು.   ಪಕ್ಷಿನೋಟ - 76   ♦...
error: Content is protected !!