Monday, October 2, 2023

ಪದ್ಯ

ಹೊಸ ವರುಷ…

• ಶಿವಾನಂದ್ ಕರೂರ್ ಮಠ್, ಶಿಕ್ಷಕರು, ಶ್ರೀ ಸೋಮೇಶ್ವರ ವಿದ್ಯಾಲಯ. ದಾವಣಗೆರೆ newsics.com@gmail.com ಬರಲಿದೆ ಹೊಸ ವರುಷ ತರಲಿ ಎಲ್ಲರ ಬಾಳಲಿ ಹರುಷ ನೋವು ದ್ವೇಷಗಳ ಕಳೆದು ಸ್ನೇಹ ಸಂಬಂಧವ ಕೂಡುತ ಶುರುವಾಗಲಿ ಸುಖದ ಪರ್ವವು ಮೊಳಗಲಿ ಕೀರ್ತಿ ಅನಂತವು ಬರಲಿ ಹೊಸ ವರುಷ ಬಾಳಲಿ ಹೊಸ ಚೈತನ್ಯ ಮೂಡಲಿ ಗುರಿಯ ತಟ ಸನಿಹವಾಗಲಿ ಸಕಲವೂ ಶುಭವಾಗಲಿ... ಗತಿಸಿದ ಅವಮಾನಗಳೆಲ್ಲವೂ ಸನ್ಮಾನವಾಗಿ ಸಜ್ಜನರ ಮುಡಿಗೇರಲಿ ಬರಲಿ ಹೊಸ ವರುಷ ಬಾಳಲಿ ಕಷ್ಟಗಳನು ತಳ್ಳೋಣ ಪಾಳು ಗುಂಡಿಗೆ ಸಕಲಗಳನು...

ನಾನು ಪದ್ಯವಾಗಲಿಲ್ಲ…

• ಪ್ರಭಾಕರ ತಾಮ್ರಗೌರಿ ಗೋಕರ್ಣ newsics.com@gmail.com ಹುಣ್ಣಿಮೆಯ ದಿನ ಬಾನಿನಲ್ಲಿ ಇಣುಕಿ ನೋಡಿದೆ ಅಸಂಖ್ಯ ನಕ್ಷತ್ರಗಳು ಮಿನುಗುತ್ತಿದ್ದವು ಬಂಜೆ ಮೋಡಗಳು ಸಂತಸದಿಂದ ರೆಕ್ಕೆ ಬಿಚ್ಚಿ ಹಾರಾಡುತ್ತಿದ್ದವು ತುಂಬು ಮೊಗದ ಚಂದ್ರ ನಕ್ಕು ನಲಿಯುತ್ತಿದ್ದ ಸಾಗರ ಸಂತಸದಿಂದ ಉಕ್ಕಿ ಭೋರ್ಗೆರೆಯುತ್ತಿತ್ತು ಅದೇ ಕಡಲ ಮೊರೆತದ ಅಲೆಗಳು ಶೃತಿಯಾಗಿ ತೇಲಿಬರುತ್ತಿತ್ತು ಎಂಥ ಉತ್ಸಾಹ ! ತುಟಿಯಂಚಿನಲ್ಲಿ ಬೆಳದಿಂಗಳ ನಗೆ ಮುಂಗುರುಳು...

ಹೋಗಿ ಬಾ…

♦ ಹರೀಶ್ ಗೌಡ ಗಂಗೆಕೊಳ್ಳ ಗೋಕರ್ಣ newsics.com@gmail.com ಹೋಗಿ ಬಾ ದೊರೆಯೆ ಹೋಗಿ ಬಾ ಕಾಣದ ಲೋಕವ ಹುಡುಕಿರುವೆ ನೀನು ಕಂಡರೂ ಕಾಣದೆ ಮನದೊಳಗೊಮ್ಮೆ ತಪ್ಪುವುದೇ ದಾರಿ ಪುನಃ ಬರಲು ನೀನು ಕಲ್ಮಶವಿಲ್ಲದ ಹೃದಯಾಂತರಾಳವು ಭಗವಂತ ಕುಳಿತಿಹನು ನಿನ್ನಾತ್ಮದಲ್ಲಿ ವಿಧಿಯಾಟವನಿಲ್ಲಿ ಬಲ್ಲವರಿಲ್ಲ ಆಡಿಸಿ ನಡೆದನು ಪರಮಾತ್ಮನಿಲ್ಲಿ ಅರಸಂತೆ ಕಂಡು ಆಳಂತೆ ನಡೆದು ಅಸಹಾಯಕ ಮನಗಳಿಗೆ ಆಧಾರವಾದರು ಕರುನಾಡು ಕಂದನೀ ಅಭಿಮಾನದ ಬಿಂದು ನೀ ಅಭಿಮಾನಿ ಮನದೊಳಗೆ ನೀವೆಂದು ಅಮರರು ಕಣ್ಗಳು ತುಂಬಿವೆ ಹನಿಯೊಂದು...

ಪಯಣ…

♦ ಪ್ರೊ. ಚಂದ್ರಶೇಖರ ಹೆಗಡೆ ಕನ್ನಡ ಸಹಾಯಕ ಪ್ರಾಧ್ಯಾಪಕರು newsics.com@gmail.com ಬಾಳ ಹೆದ್ದಾರಿಯಲಿ ಎದ್ದೋಡುವವರದೇ ಆರ್ಭಟ ಎತ್ತ ಸಾಗುವರೋ ಹೊರಟ ಮೇಲೆಯೇ ದಾರಿ ದಿಟ ಅಪಾಯವೆಂದರೂ ಅವಸರ ಬಿಡರು ;  ಅವರವರದೇ ಚಿತ್ತಹೂಟ ಅದೆಂತಹ ದಾಳಿಯ ಧಾವಂತ  ಒಬ್ಬರ ಮೇಲೊಬ್ಬರದಾಟ ಎಲ್ಲಿದೆ ಸಹಜತೆಯ ಏಕಾಂತ  ಮರೀಚಿಕೆಯೆಂಬಂತಿದೆ ಒಳನೋಟ ದೂರ ದಾರಿಯ ತೀರದ ದಾಹ ಮುಗಿಯದು; ಇರಲಿ ದೂರನೋಟ ಗಂತವ್ಯವ ಶೋಧಿಸಿ ಶರಣು ಶರಣಾದವರದದೋ ಇಲ್ಲಿದೆ ಪಾಠ ಜೋಕೆ, ಮಧ್ಯೆ ಗಾಲಿ, ಮೈ, ಮುರಿದುಕೊಂಡವರ ಗೋಳಾಟ ವಿರಮಿಸಿ; ಅನುಭವಿಸಿ ಕಂಡರಿಯದ ಬದುಕಿನ ತೋಟ ಅಬ್ಬಾ ಇದೇ...

ಅಪ್ಪ ನೆಟ್ಟ ಮರ…

♦ ಪ್ರಭಾಕರ ತಾಮ್ರಗೌರಿ ಗೋಕರ್ಣ newsics.com@gmail.com ಎಂದೋ ಅಪ್ಪ ನೆಟ್ಟ ಆಲದ ಮರ ಅಡ್ಡ ಕೊಂಬೆಗಳೆಷ್ಟೋ ಹಬ್ಬಿದ ಬೀಳಲುಗಳೆಷ್ಟೋ ಅದಕ್ಕೀಗ ಎಪ್ಪತ್ತು ವರ್ಷ ಪೂರ್ಣ ವಸಂತ ! ಅಂದು ಗಿಡ ನೆಟ್ಟು ಮೆಟ್ಟಿ ಮುರಿಯದ ಹಾಗೆ ಕಾದಿದ್ದ ಬೇಲಿ ಕಟ್ಟಿ ನೀರೆರೆದು ಬೆಳೆಸಿದ್ದ ಕಟ್ಟೆ ಕಟ್ಟಿ ನೆರಳಿತ್ತು ಬೆಳೆದಂತೆ ಹಸಿರೆತ್ತಿ ಹಿಡಿದಂತೆ ಏರಿ ಆಕಾಶದತ್ತ ಮುಖ ಮಾಡಿ ತಂಗಾಳಿ ಸೂಸುತ್ತಿತ್ತು ದಾರಿಗರ ಪಯಣಕೆ... ಮರದ ಎಲೆಯ ಗೊಂಚಲಿಗೆ ಎಲ್ಲಿಂದಲೋ ಬಂದ ಹಕ್ಕಿ ಬಳಗ ಗೂಡು ಕಟ್ಟಿ...

ಅಮ್ಮಾ ನನಗೆ ನೀ ಉಡುಗೊರೆ

♦ ಚಂದ್ರು ಪಿ ಹಾಸನ್ newsics.com@gmail.com ಮಮತೆಯ ಮಡಿಲಿಗೆ ಪದಗಳಲ್ಲಿ ಬಣ್ಣಿಸಲಾಗದು ತಾಯಿಯ ಒಲವಿಗೆ ಉಡುಗೊರೆ ಸಲ್ಲದು ದೇವರಿಗೆ ದೇವರುಗಳೇ ಅಮ್ಮನು ಆಗಿರುವಾಗ ನಾನೇನು ನೀಡಲೇಳೇ ಒಲವಿನ ಉಡುಗೊರೆ ಮಾಂಸದ ಮುದ್ದೆಯನ್ನು  ಗರ್ಭದಲ್ಲಿ ಇರಿಸಿದೆ ನವಮಾಸಗಳು ನನ್ನನ್ನು ಪಾಲಿಸಿ ಪೋಷಿಸಿದೆ ಜಗತ್ತಿಗೆ ಪರಿಚಯಿಸಿದೆ ಜೀವನ ಕಾಯ್ದಿರಿಸಿದೆ ಒಲವಿನ ವಾತ್ಸಲ್ಯದಲ್ಲಿ ಬಾಳಿಗೆ ಆಸರೆಯಾದೆ ಅಮ್ಮ ಎಂಬ ಪದದಲ್ಲಿ ಎಲ್ಲಾ ಶಕ್ತಿ ತುಂಬಿದೆ ನಿನ್ನಯ ಹಾರೈಕೆಯಲ್ಲಿ  ನನ್ನ ಈ ಜೀವನವಿದೆ ಅಮ್ಮ ಅಮ್ಮ ಓ ನನ್ನಮ್ಮ ಗುರುವಾಗಿ ನನ್ನನ್ನು ತಿದ್ದಿದೆ ಹಸಿದಾಗ ಅನ್ನ ನೀಡಿದೆ  ಪ್ರೀತಿಧಾರೆ ಸುರಿಸಿ ಬೆಳೆಸಿದೆ  ವಾತ್ಸಲ್ಯದ ಗುರುತುಗಳೇ  ನನ್ನ ಹಾಡಿಗೆ ಶಕ್ತಿ...

ಹೋದ ಜನ್ಮದಲ್ಲಿ…

♦ ಕೆ. ಪ್ರಭಾಕರನ್ ಮಲಯಾಳ ಕವಿತೆ-"ಪೋಯ ಜನ್ಮತ್ತಿಲ್" ಮೂಲ ಲೇಖಕರು: ಜಿಸ್ಮಿ ಪ್ರಮೋದ್ newsics.com@gmail.com ಅಂದು... ನಾವು ಒಂದಾಗಿ ಕಡಲ ತೀರದಲ್ಲಿ ಕೈಗಳ ಪೋಣಿಸಿಕೊಂಡು ದೃಷ್ಟಿಯೊಂದಿಗೆ ದೃಷ್ಟಿ ಸೇರಿಸಿಕೊಂಡು ನಿಂತಿದ್ದೆವು... ಆಗಸದಂಚಿನಲ್ಲಿ ಮೋಡಗಳು ಕಡು ಕೆಂಪು ಚಿತ್ರಗಳನ್ನು ಒಟ್ಟಿಗೆ ಬಣ್ಣವೇರಿಸಿಕೊಂಡು ಪುನರ್ ಚಿತ್ರಿಸಲಾಗಿತ್ತು... ತಣ್ಣನೆಯ ಮುಸ್ಸಂಜೆಯಲಿ ನೆತ್ತಿಯನ್ನು ಮುತ್ತಿಟ್ಟೆಚ್ಚರಿಸಿದ ಪುಟಾಣಿ ಮಳೆಹನಿಗಳನ್ನು ತಟ್ಟಿ ಚದುರಿಸಿ ಮರೆಯಾದ ನೋಟಗಳನ್ನು ಮತ್ತೆ ವಶಪಡೆಸಿಕೊಂಡೆವು... ಅಬ್ಬರಿಸಿಕೊಂಡೇರಿ ಬಂದ ತೆರೆಯಿಂದಾಗಿ ಮುಗ್ಗರಿಸಿ ಬೀಳದಿರಳು ಒಟ್ಟಾಗಿ...

ಹಣತೆ ಹಚ್ಚಿಡುವ ಮುನ್ನ…

♦ ಪ್ರಭಾಕರ ತಾಮ್ರಗೌರಿ  ಗೋಕರ್ಣ newsics.com@gmail.com ಮತ್ತೊಮ್ಮೆ ಯೋಚಿಸು  ಹಣತೆ ಹಚ್ಚಿಡುವ ಮುನ್ನ  ನೀ ಹಚ್ಚುವ ಹಣತೆ ಬರೀ ಮನೆಯ  ( ಹೊಸ್ತಿಲು ) ದೀಪವಾಗದೇ ದೂರ ದೂರ ಹರಡಬೇಕು ಆ ಹಣತೆಯ ಕಿರಣದಿಂದ ಪ್ರೀತಿ ಕರುಣೆಯು ಬೆಳಗಿ ಮನೆ ಮನೆಗೂ ನಂದಾದೀಪವಾಗಬೇಕು    ನೀ ಹಚ್ಚಿಟ್ಟ ಹಣತೆಯಿಂದ ಬೆಳಗಿದ ಬೆಳಕಿನ ಕಿರಣಕೆ ಜನರಲ್ಲಿ ಮೂಡಿದ  ದ್ವೇಷ , ರೋಷ ಅಳಿಸಿ          ಸ್ನೇಹದ ಸಂಕೋಲೆ ಬೆಸೆಯಬೇಕು ಹಣತೆ ಹಚ್ಚಿಡುವ ಮುನ್ನ ಮತ್ತೊಮ್ಮೆ...

cute foem…

♦ ಸತ್ಯಬೋಧ ಜೋಶಿ ಅಂಕಣಕಾರರು newsics.com@gmail.com ಹಗಲಿರುಳೂ ತಾಳಲಾಗದಂತೆ ಕಾಡುತ್ತಿದ್ದ ಆ ಅಕ್ಷರ ಗರ್ಭ ಕೊನೆಗೂ ಸುಖ ಪ್ರಸವ ಕಂಡಿತ್ತು ಫೇಸ್ ಬುಕ್ನಲ್ಲಿ " ತಾ ಥೈ ಥೈ...ಕೋಯ್ಯ್" ಬಾಣಂತಿ ನಾ ನಿಟ್ಟುಸಿರೂ ಬಿಟ್ಟಿರಲಿಲ್ಲ, ಜಗದೊಡೆಯ ಹುಟ್ಟಿದ ಸುದ್ದಿ ಜಗಜ್ಜಾಹೀರಾಗಿತ್ತು ಕೈ ತಟ್ಟಿ ಕುಣಿದರು ಹಲವು,ಕೆಲವರಿನ್ನೂ ಗದ್ಗದಿತ.. ಇನ್ನೂ ಹಲವರಿಗೆ ಹೃದಯಾಘಾತ, ಕೋಮಾ ಕ್ಕೆ ಜಾರಿದ್ದರು, "ತಾ ಥೈ ಥೈ .." ಸರಿ ಆದರೆ "ಕೋಯ್ಯ್" ಹೇಗೆ...

ಎಚ್ಚರಿಕೆ…!

♦ ಪ್ರಭಾಕರ ತಾಮ್ರಗೌರಿ ಗೋಕರ್ಣ ಕವಿ , ಕತೆಗಾರರು newsics.com@gmail.com ಹಸಿರುಟ್ಟ ಕಾನನದ  ಕಿರು ಶಿಲೆಯ ಬಿರುಕಿನಲಿ ಇಳಿ ಸಂಜೆಯ ಹೊಂಗಿರಣದಲಿ  ಹರಿಯುತಿದೆ ಜೀವ ಜಲ ....! ಭವಿಷ್ಯದ ಅಸಂಖ್ಯ ನಿರೀಕ್ಷೆಗಳ  ಹೊತ್ತು ಕುಳಿತ  ಎಳೆಯ ಕುವರಿಯರ  ಕಣ್ಣುಗಳ  ( ನಯನಗಳ ) ಗತ್ತು    ಒರಟು ಶಿಲೆಯನ್ನೇ ಸವೆಸಿ  ಮುಂದೆ ಮುಂದೆ ಹರಿಯುವ  ನೀರ ಯತ್ನ ಆಗಬೇಕಿದೆ  ಎಳೆಯರ ರೆಟ್ಟೆಗೆ ಬಲ ....! ಬದುಕಿನ ಆಳ ಎಷ್ಟೇ ಇರಲಿ  ಈಜು ಕಲಿತರೆ ಸಾಕು  ಆಳಕ್ಕೆ ಇಳಿಯಬಹುದು  ಹೋಗಬಹುದು ಅಗಲಕ್ಕೆ    ಶಿಲೆಯ...

ಹಸಿರು ಮರದ ಕೆಳಗೆ …

♦ ಪ್ರಭಾಕರ ತಾಮ್ರಗೌರಿ ಗೋಕರ್ಣ newsics.com@gmail.com ದಟ್ಟ ಹಸಿರಿನ ಮರದ ಕೆಳಗೆ  ತೊಟ್ಟಿಕ್ಕುವ ಇಬ್ಬನಿ ಸೋನೆ ಹೊರಟ ಸೂರ್ಯನ ಕಿರಣಕ್ಕೆ  ವಿರಮಿಸಲು ನಿನ್ನ ಜೊತೆ  ಯಾರಿದ್ದಾರೆ ...?   ಕೋಗಿಲೆಯ ಇಂಪಾದ  ಕುಹೂ ...ಕುಹೂ ... ಆಲಿಸುವವರು ಯಾರು ...? ಇಲ್ಲಿ ನಿಮಗೆ ವೈರಿಗಳಿಲ್ಲ  ಇಲ್ಲಿ ನಿಮಗೆ ಸಿಗುವುದು  ಚಳಿಗಾಲದ ಬೆಚ್ಚನೆಯ ಹವೆಯು  !   ಯಾರು ತನ್ನ ಆಸೆಗಳನ್ನೆಲ್ಲಾ  ಅದುಮಿಟ್ಟು ಸೂರ್ಯನ  ಎಳೆ ಬಿಸಿಲಿಗೆ ಮೈಯೊಡ್ಡಲು  ಬಯಸುವರೋ , ಅಲ್ಲಲ್ಲಿ ಉದುರಿಬಿದ್ದ ಹಣ್ಣುಗಳನ್ನು  ಹೆಕ್ಕಲು ಬರುವರೋ , ಇಲ್ಲಿ ಯಾವುದು ದೊರೆಯುವುದೋ , ಅದರಲ್ಲಿ...

ಕಲ್ಕಿಯವತಾರಕೆ ಮುನ್ನ

♦ ರಾಜ್ ಆಚಾರ್ಯ newsics.com@gmail.com ಜಾತಿ-ಧರ್ಮ-ಕುಲದ ಕುಲುಮೆಗಳಲಿ ಕ್ರೌರ್ಯದ ಕತ್ತಿಗಳುತ್ಪಾದನೆ ಅನವರತ ಕಾಯ್ವ ದೈವಗಳ ಹೆಸರಿನಲಿ ಕೊಲುವ ಕಾಯಕ ಕಲೆ ಮನುಜನಿಗೆ ಮಾತ್ರ ಕರಗತ ದ್ವೇಷಾಸೂಯೆಗಳ ರುಜಿನಕೆ ಪ್ರೀತಿ ಎಂದಿಗೂ ಅವಧಿ ಮೀರಿದ ಔಷಧದಂತೆ ಅನುತ್ಪಾದಿತ ಧರ್ಮಸ್ಥಾಪನೆಗೆ  ಮತ್ತೆ ಇದೇ ಭುವಿಯಲಿ ಅವತಾರವೆತ್ತಲು ಭಯ ಬಿದ್ದನಂತೆ ಭಗವಂತ ಮನಸುಗಳ ಮುಳ್ಳು-ಕಂಟಿಗಳಿಗೆ ಹಬ್ಬಿದ  ಬಳ್ಳಿಯಲಿ ರಸಗಂಧವಿರದ ಹೂವ ಸಹಜತೆ  ಅಹಮಿಕೆಯ ಧೂಳು ಢಾಳಾಗಿ ಮೆತ್ತಿದ ಕನ್ನಡಿಯಲಿ ಅಸ್ಪಷ್ಟ ಬಿಂಬ ಮಾನುಷತೆ ಆತ್ಮರತಿ ಕ್ರೀಡೆಯಲಿ ತನ್ನತನವೆನೇ ಮಾರಿ ಅವಿರಿವರಿಗೆ...

ಈಗೇನೂ ಉಳಿದಿಲ್ಲ…

♦ ಪ್ರಭಾಕರ ತಾಮ್ರಗೌರಿ ಗೋಕರ್ಣ   ಕವಿ,ಕತೆಗಾರರು newsics.com@gmail.com ಮಟ ಮಟ ಮಧ್ಯಾಹ್ನ ಕಾದ ಕಡಲ ತೀರದಿ ಮಳಲ ಹಾಸಿನ ಮೇಲೆ ಮೂಡಿದ ಹೆಜ್ಜೆ ಗುರುತುಗಳು ಅಲೆಯ ರಭಸಕ್ಕೆ ಅಳಿಸಿಹೋಯಿತು ಬೆಸ್ತರ ಬಲೆಯ ಜಾಲದ ಕುಣಿಕೆಗೆ ಸಿಲುಕಿ ಜೀವ ತೆತ್ತ ಅಮಾಯಕ ಮೀನಿನ ಹಾಗೆ !! ಪಶ್ಚಿಮ ದಿಗಂತದಲ್ಲಿ ಇಂಚಿಂಚಾಗಿ ಕರಗುವ ಕೆಂಪು ಸೂರ್ಯನ ಮುಸ್ಸಂಜೆ ( ಇಳಿಸಂಜೆ...

ಐಕ್ಯತೆ ಹರಿಕಾರ ಕಾರ್ಮಿಕ

♦ ಚಂದ್ರು ಪಿ. ಹಾಸನ್ ದಿನವೂ ದಿನಗೂಲಿಗಾಗಿ ದುಡಿದೆ ಅನುದಿನ ಕೂಳಿಗಾಗಿ ಸವೆದೆ ದುಡಿದರೆಷ್ಟೂ, ಹಸಿವಿನ ದಾಹ ಸಂಸಾರ ಉಳಿವಿಗೆ ನಿನ್ನ ಮೋಹ ಅನ್ನದಾತ ನೀ ಹೊನ್ನ ಬೆಳೆಯುವೆ ವೀರಯೋಧ ನೀ ರಕ್ಷಣೆ ಮಾಡುವೆ ಪ್ರತಿ ರಂಗದಲ್ಲೂ ನಿನ್ನದೇ ಛಾಪು ಯಜಮಾನನಿಗೆ ನೀತಂದೆ ಹೊಳಪು ದೇವರು ತೋರಿದ ಬಡತನದ ಹಾದಿ ನೀಗಿಸಲೊರಟೆ ಯಜಮಾನನ ಬೇಡಿ ತಿಂಗಳ ಕೊನೆಯಲ್ಲಿ ವಿಧಿಯ ಕಾಲ ನಿಲ್ಲಲು ಸಿದ್ಧವಿದೆ, ಸಾಲದ ಶೂಲ ಅಪಾಯವಿರಲಿ ಪ್ರಾಣವೇ ಹೋಗಲಿ ಸಾರ್ಥಕ...

ಈ ಹೊತ್ತಿನ ಪ್ರಾರ್ಥನೆ…

♦ ಗೋಪಾಲ ತ್ರಾಸಿ newsics.com@gmail.com ದಿನ ಬೆಳಗಾದರೆ ಹೊರಗೆ ಒಳಗೆ ಅದೆಷ್ಟು ಯುದ್ಧಗಳು ಎನಿತು ಸಹಿಸುವುದು ಪ್ರಶಾಂತ ಸಾವನ್ನಲ್ಲ; ಘೋರ ಬದುಕನ್ನು ಕಾರ್ಯ ಕಾರಣ ಬೆಳಕಿನಷ್ಟು ಸ್ಪಷ್ಟ ಕಪಟ ರಾಜಕೀಯ ಕುಟಿಲ ರಾಜಕಾರಣಿಗಳಿಗೆ ನಿಜ ರಾಜಧರ್ಮ ದೀಕ್ಷೆ ಮನುಜ ಕುಲಕ್ಕೆ ಮಾನವೀಯ ಸ್ಪರ್ಶ ಸುಖ ನಮ್ಮೊಳಗೆ ಯುದ್ಧ ನಿರತ ಕರುಣಾಳು ಧರ್ಮ ದೇವತೆಗಳು ನಿಶಸ್ತ್ರಗೊಂಡು ದೇವಧರ್ಮ ನಿರತರಾಗಲಿ ಶ್ರೀರಾಮಚಂದ್ರನ ಕೈಯಲಿ ಕೃಷ್ಣನ ಕೊಳಲು ಸೀತೆಯ ನೊಂದೆದೆಯಲಿ ರಾಧಾನುರಾಗದಲೆ ಮೀಟುತ್ತಿರಲಿ ಈ ಹೊತ್ತಿನ ತುರ್ತು ಪ್ರಾರ್ಥನೆ, ಇಷ್ಟೆ.

ಮಾಂತ್ರಿಕ ಬದುಕು

ಬದುಕು ಒಂದು ಕೆಟ್ಟ ಮಾಂತ್ರಿಕಒಮ್ಮೆ ಕಂಡ ವಾಸ್ತವವನ್ನು ಕಂಡೇ ಇಲ್ಲಎಂಬಂತೆ ಮರೆಮಾಚಿಸಿಬಿಡುತ್ತದೆ ♦ ವಿದ್ಯಾಶ್ರೀ ಅಡೂರ್, ಮುಂಡಾಜೆnewsics.com@gmail.com  ಬ ದುಕು ಒಂದು ದುಷ್ಟ ರಾಕ್ಷಸಅದು ನಮ್ಮ ಕೈಗೆ ಸುಂದರ ಕನ್ನಡಿಯನ್ನು ಕೊಟ್ಟುನಮ್ಮ ಮುಖವನ್ನು ಕುರೂಪಗೊಳಿಸಿಬಿಡುತ್ತದೆಬದುಕು ಒಂದು ಕಳ್ಳಬೆಳಕುಒಮ್ಮೊಮ್ಮೆ ಕುರುಡರಿಗೆ ಕಣ್ಣು ಬರಿಸುವ ಬದುಕುಕೆಲವೊಮ್ಮೆ ಕಣ್ಣಿದ್ದವರನ್ನೂ ಕುರುಡಾಗಿಸುತ್ತದೆಬದುಕು ಒಂದು ಕೆಟ್ಟ ಮಾಂತ್ರಿಕಒಮ್ಮೆ ಕಂಡ ವಾಸ್ತವವನ್ನು ಕಂಡೇ...

ಹೊಸ ವರ್ಷದ ಆಶಯ

ಹೊಸವರ್ಷವೆಂಬ ನವಭಾವದ ಬೆನ್ನೇರಿ ಸಾಗಲಿ ಜೀವನದ ನಿರಂತರ ಸವಾರಿ ಕಲಿಯುತ ತಿಳಿಯುತ ಬಾಳಿನ ಸರಿದಾರಿ ಆಗಲಿ ಸರ್ವರ ಬಾಳು ಚೇತೋಹಾರಿ... ♦ ಪ್ರಕಾಶ ಲಕ್ಕೂರ್, ಬೆಂಗಳೂರುnewsics.com@gmail.com  ಹೊ ಸವರ್ಷವೆಂಬ ನವೋಲ್ಲಾಸದ ತಂಗಾಳಿ ಮುದಗೊಳಿಸಲಿ ಮೈ-ಮನಸಿನ ಕರಾವಳಿ ತಗ್ಗುತ ಕುಗ್ಗುತ ಈ ವೈರಾಣುವಿನ ಹಾವಳಿ ಎಲ್ಲೆಡೆ ಮೂಡಲಿ ಭರವಸೆಯ ಪ್ರಭಾವಳಿಹೊಸವರ್ಷವೆಂಬ ನವೋದಯದ ಕಿರಣ ಆಗಲಿ...

ನೆನಪುಗಳು…

ಹಸಿರುಟ್ಟ ಮರದ ತುಂಬಾ ನಿಗಿ ನಿಗಿ ಕೆಂಡಗಳು... ಅರಳಿ ಹೂವಾದಂತೆ ಮುಗಿಲು ಮುಖ ಗುಲ್ಮೊಹರು ಕೆಂಪು ಕೆಂಪು ...         ಪದ್ಯ         ♦ ಪ್ರಭಾಕರ ತಾಮ್ರಗೌರಿ ಗೋಕರ್ಣಕವಿ, ಕತೆಗಾರnewsics.com@gmail.com  ಹ ಸಿರುಟ್ಟ ಮರದ ತುಂಬಾ ನಿಗಿ ನಿಗಿ ಕೆಂಡಗಳು ಅರಳಿ ಹೂವಾದಂತೆ ಮುಗಿಲು ಮುಖ ಗುಲ್ಮೊಹರುಕೆಂಪು ಕೆಂಪು .......ಹೂ...

ಸಾವೆಂದರೆ…

ವೈರಾಣುವಿಗೆ ಉಸಿರೆರೆದು ಸೋತು.. ನಮ್ಮವರನೆಲ್ಲಾ ಮಣ್ಣೊಳಗೆ ಹೂತು.. ಆಗಂತುಕನ ಬಲೆಯೊಳಗೆ ಸಿಲುಕಿ.. ಸಂಜೀವಿನಿಗಾಗಿ ಎಲ್ಲೆಲ್ಲೋ ಕೆದಕಿ.. ಸಿಗದೆ ಅನಾಥನಂತೆ ಮಲಗಿ.. ಸಮಾಧಿಯಾಗುವುದು ಸಾವೇ.. ♦ ಚಂದ್ರಶೇಖರ ಹೆಗಡೆಸಹಾಯಕ ಪ್ರಾಧ್ಯಾಪಕರು,ಬೀಳಗಿ, ಬಾಗಲಕೋಟೆnewsics.com@gmail.com  ಸಾ ವೆಂದರೆ ಹೀಗೆಯೇ..ಎಲ್ಲ ಇದ್ದೂ ಇಲ್ಲವಾಗುವುದೆ ?ಇಲ್ಲದಿರುವುದಕ್ಕೆ ಬೆನ್ನುಬಿದ್ದು ಖಾಲಿಯಾಗುವುದೆ ?ಹಸಿರು ತುಂಬಿದ್ದರೂ ಬರಡು ಕೊರಡಾದೆನೆಂದು ವ್ಯಸನಿಯಾಗಿ ಹೊರಟುಬಿಡುವುದೆ ?ವೈರಾಣುವಿಗೆ ಉಸಿರೆರೆದು ಸೋತುನಮ್ಮವರನೆಲ್ಲಾ...

ಆದಿ ಪೂಜಿತ

    ವಾಲ್ಮೀಕಿ ಜಯಂತಿ ವಿಶೇಷ     ♦ ಶಿವೈ (ವೈಲೇಶ್ ಪಿ ಎಸ್ ಕೊಡಗು)newsics.com@gmail.com  ಆ ದಿ ಕವಿಗಳ ಮೂಲ ಮುನಿಪನುವೇದವೋದದೆ ಸುಲಿಗೆ ಮಾಡುತಹಾದಿ ಹೋಕರ ಭಯವಗೊಳಿಸುತಲಿದ್ದ ಗಂಭೀರ|ಮೋದಗೊಳಿಸುತ ಸಪರಿವಾರವಭೋದೆ ತಿಳಿಯದೆ ಜಗದ ಲೋಗರಬಾಧೆಗೊಳಿಸುತ ತಮವೆ ತುಂಬಿದ ಯುವಕ ರತ್ನಕರ||ಅಪ್ಪಿ ತಪ್ಪಿಯೊ ಲೋಕ ಸುತ್ತುತ ಸಪ್ಪೆ ಸಿಹಿಯನು ತಿಳಿದ ನಾರದರೊಪ್ಪಿಸಿದ ಪರಿಯರಿತು ಮರುಗುತ...

ನಿದಿರೆಯ ಹಾಡು

      ಪದ್ಯ       ♦ ವಿದ್ಯಾಶ್ರೀ ಅಡೂರ್newsics.com@gmail.com  ಜೀ ಕಿ ನಿದಿರೆಯು ಕಣ್ಣಕೊಳದಲಿ ತಾಕಿ ಕಣ್ಣೆವೆ ಎದುರುಬದುರಲಿ ಹಾಕಿ ತಾಳವ ನವಿಲ ರೀತಿಯೆ ಮೂಕ ನರ್ತನ ಮಾಡಿದೆ... ಇರುಳ ಶಾಂತ ನಿದಿರೆ ಚಂದ ಸವಿಯ ಕನಸು ಮತ್ತೂ ಅಂದ ಕನಸು ತುಟಿಯ ಮೇಲೆ ಬರೆದ ಮುಗುಳು ನಗೆಯ ಸೂಸಿದೆ..ಹಚ್ಚಿ ಮನದ...

ಚಿತೆಯ ಮೇಲಿನ ಹಾಡು…

♦ ಪ್ರೊ.ಚಂದ್ರಶೇಖರ ಹೆಗಡೆ ಕನ್ನಡ ಸಹಾಯಕ ಪ್ರಾಧ್ಯಾಪಕರುnewsics.com@gmail.com    ದು ರ್ಮರಣಗಳ ಕತ್ತಲೆಯಲ್ಲಿಸಾಗುತ್ತಿರುವ ಮನುಜನ ನೆತ್ತಿಯ ಮೇಲೆಬರೀ ಮೂಳೆ ರಕ್ತ ಮಾಂಸದ ಮಹಾಭಿಷೇಕಬೆಳಕನ್ನೆಲ್ಲಿ ಹುಡುಕುವುದೋ ಮುರಿದು ಬಿದ್ದ ಸಮಾಧಿಯೊಳಗೆ ?ಸಾವಿನಿಂದುದಿಸಿದ ತಾಪದ ಮೇಲೆಬೇಯಿಸಿಕೊಳ್ಳುತ್ತಿದೆ ವಿಧಿ ಎಂದೂ ಕುದಿಯಲಾರದ ಬೇಳೆಗಳಬೆಂದುಹೋಗುವವೆಂದು ಕಾದಿದೆಜಗ ನಡುಗಿ ಬಿಡುಗಣ್ಣ ಬಿಟ್ಟುಕೊಂಡು ಭರವಸೆಯ ಕೆದಕಿಜವರಾಯನ ಭೋಜನವಿಂದುಪುಷ್ಕಳಮಾಯ್ತು ಜೀವಗಳನುಂಡು ತೇಗಿಅತಿರೇಕಗಳನೆಲ್ಲ ಇನ್ನಿಲ್ಲದಂತೆ ಬಳಿದು...

ಕವಿತೆಯೆಂದರೆ…

♦ ವಿದ್ಯಾಶ್ರೀ ಎಸ್ ಅಡೂರ್newsics.com@gmail.com  ಕ ವಿತೆಯೆಂದರೆ ಮನದೊಳಗೊಂದು ಚುಚ್ಚುವ ನೋವು.... ಕವಿತೆಯೆಂದರೆ ಉಕ್ಕಿಹರಿವ ಮನಸಿನ ನಲಿವು.... ಕವಿತೆಯೆಂದರೆ ಮೌನಮನಸಿನ ಸ್ವಚ್ಚಂದ ಆಕಾಶ ಕವಿತೆಯೆಂದರೆ ಗಿಜಿಗುಡುವ ಏಕತಾನತೆಯ ಆಕ್ರೋಶ ಕವಿತೆಯೆಂದರೆ ಸುಮ್ಮನೆ ನಿಡುಸುಯ್ದ ನಿಟ್ಟುಸಿರುಕವಿತೆಯೆಂದರೆ ನೀರು-ಗೊಬ್ಬರಹಾಕಿ ಬೆಳೆಸಿದ ಹಸಿರುಕವಿತೆಯೆಂದರೆ ರಂಗುರಂಗಿನಬಣ್ಣ ಬಣ್ಣದ ಕಾಮನಬಿಲ್ಲುಕವಿತೆಯೆಂದರೆ ಗಾಢಾಂಧಕಾರದಿಬಿಡುಗಡೆಯ ಸೊಲ್ಲುಕವಿತೆಯೆಂದರೆ ಮೌನಮನಸ್ಸಿನ ಟಿಪ್ಪಣಿಕವಿತೆಯೆಂದರೆ ಕೂಗಿ ಕರೆಯುವಹಾರಿ ಸಾರುವ...

ಗುರುನಮನ

♦ ವಿದ್ಯಾ ಶ್ರೀ ಎಸ್ ಅಡೂರ್newsics.com@gmail.com ಅರಿವ ಹಣತೆಯ ಹಚ್ಚಿ ನಮ್ಮೆಲ್ಲ ಬದುಕಿನಲಿಹೆಜ್ಜೆ ಹೆಜ್ಜೆಯ ಇಡಲು ದಾರಿ ಬೇಕು... ಇರುವ ಸಾವಿರದಾರಿಯೊಳಗೆನ್ನ ಕೈಹಿಡಿದು ಗುರಿಯ ತೋರಲು ಒಬ್ಬ ಗುರುವು ಬೇಕು ತಂದೆ ತಾಯಿಯೆ ಮೊದಲ ಗುರುವೆಮ್ಮ ಬದುಕಿನಲಿ ಅರುಹೇ ಹೊಸ ವಿಷಯ ಯಾರ್ ಅವರು ಗುರುವೇ .. ಗೆಳೆಯ ಗೆಳತಿ, ಪತಿ ಪತ್ನಿ,...

ಕಾಡಿದ ಕಲ್ಪನೆ

ಕನಸುಗಳ ಹೆಣೆದಿರುವೆ ಮನದೊಳಗಿನ ಸುಪ್ತ ಬಯಕೆಗಳ ಆರ್ಭಟವ ತಡೆಯಲಾರದೆ ಭೋರ್ಗರೆವ ಜಲಪಾತದಂತೆ ಧುಮ್ಮಿಕ್ಕಿ ಹರಿಯುತಿಹುದು ಹುಚ್ಚು ಆಲೋಚನೆಗಳು

ನಮ್ಮ ಇಡ್ಲಿ

♦ ಎಸ್. ಬಾಲಿ ಸಂಗೀತ ವಿದ್ವಾಂಸರು, ಲಯ ವಾದ್ಯಕಾರರು newsics.com@gmail.com    ತಾ ಯಿ ತುತ್ತಿನ ಅಮೃತವು ನೀನು; ಮುಂಜಾನೆಯ ಹುಣ್ಣಿಮೆ ಚಂದಿರ ನೀನು; ಬೆಳ್ಹತ್ತಿಯ ಮೋಡದಂಥ ಬೆಣ್ಣೆ ನೀನು; ಎದೆಹಾಲು ನಿಂತಲ್ಲಿ ಅಮ್ಮನಂತೆ ನಿಂತ ಉಣಿಸು ನೀನು; ಸತಿಯ ಕೈ ಸ್ಪರ್ಶಕೆ ಮಲ್ಲಿಗೆಯಾದೆ ನೀನು; ಕಾಯಿ ಚಟ್ನಿಯ ಜತೆ ದೇವಾಮೃತ ನೀನು; ಟೊಮೆಟೊ...

ಗುಪ್ತಗಾಮಿನಿ

♦ ವಿದ್ಯಾಶ್ರೀ ಎಸ್. ಅಡೂರ್newsics.com@gmail.com  ಸಾ ಗರವ ಸೇರುವ ನದಿಯಾಗಿದ್ದೆ ನಾನು ಬಳುಕುತ್ತಿದ್ದೆ, ಕುಲು ಕುಲು ನಗುತ್ತಿದ್ದೆ ನದಿಯೆಲ್ಲ ಬತ್ತಿ ನೀರೇ ಇಲ್ಲ ಈಗ ಯಾರಿಗೂ ಕಾಣದಂತೆ ಗುಪ್ತಗಾಮಿನಿಯಾಗಿದ್ದೇನೆ ರೆಕ್ಕೆ ಬಿಚ್ಚಿ ಎತ್ತರೆತ್ತರಕ್ಕೆ ಹಾರುವ ಹಕ್ಕಿಯಾಗಿದ್ದೆ ನಾನು ಹಾಡುತ್ತಿದ್ದೆ, ನಲಿನಲಿದಾಡುತ್ತಿದ್ದೆ ಹಾರಾಡಲು ರೆಕ್ಕೆಗಳೇ ಇಲ್ಲ ಈಗ ಅನಂತ ದಿಗಂತವನ್ನು ಕಂಡು, ಮೂಕವಾಗಿ ರೋದಿಸುತ್ತಿದ್ದೇನೆ. ಅಂದಚೆಂದದಿ...

ಸಮಾನತೆ ಸಂದರ್ಭದ ಪ್ರಶ್ನೆಗಳು…

  ♦ ಗೋಪಾಲ ತ್ರಾಸಿ, ಮುಂಬೈnewsics.com@gmail.com   1.ಅಮಾಯಕ ಪ್ರಾಣಿ ಹತ್ಯೆ ಮತ್ತು ನರಹತ್ಯೆ ಮೂಲತಃ ಒಂದೇ ಹೌದಾದರೆ ಹೌದೆನ್ನಿ; ಅಲ್ಲವಾದರೆ, ಯಾಕೋ.. 2.ಕೀಳೆನಿಸಿ ಕಾಡುವುದು ಭೋಗವೆನಿಸಿ ಕೂಡುವುದು ದೈವತ್ವಕ್ಕೇರಿಸಿ ಕೋಣೆಯಲ್ಲಿರಿಸುವುದು ಯಾರು, ಯಾರನ್ನು ಬೇಕಿಲ್ಲ ಉತ್ತರ; ಆದರೆ, ಯಾಕೆ ? ಉತ್ತರಿಸಬೇಕು...

ಸಂವೇದನೆಗಳೊಂದಿಗೆ ಸಂವಾದ…

ಬತ್ತಿಹೋಗಿರುವ ಸಂವೇದನೆಗಳೆ ಮತ್ತೆ ಚಿಗುರುವಿರೆಂದು?

ತೆರೆದ ಮನೆ

      ಕನ್ನಡಕ್ಕೆ: ಸುನೀತ ಕುಶಾಲನಗರ ಮೂಲ: ಮಲಯಾಳಂ- ಪಿ.ಟಿ. ಬಿನು response@newsics.com newsics.com@gmail.com   01 ತೆರೆದ ಮನೆಯುದ್ಧದಕುರುಹುಓಡುವಕುದುರೆಯೋನಿಂತಗಿಳಿಯೋಅಲ್ಲಬಾಗಿಲುತೆರೆದಿಟ್ಟಮನೆ. 02ಲವಣಜಲಕಡಲ ತೀರದಲಿನಡೆಯುವಾಗನನ್ನಹಿಂದೆಮಗುವೊಂದುಚಿಪ್ಪುಗಳಆಯುತ್ತಿದೆಆ ಮಗುವಿಗಿರುವದೂರನಿನ್ನಕಣ್ಣುಗಳಲ್ಲಿದೆನನಗಾಗಿಯೇಅಲೆಯೊಂದುಲವಣಜಲಬರೆಯಬಹುದೇನೋ?
- Advertisement -

Latest News

ವಿದ್ಯುತ್ ಲೈನ್ ತಗುಲಿ 5 ಜಾನುವಾರು ಸ್ಥಳದಲ್ಲಿಯೇ ಸಾವು

newsics.com ಕೊಡಗು: ವಿದ್ಯುತ್ ಲೈನ್ ತುಂಡಾಗಿ ಬಿದ್ದ ಹಿನ್ನೆಲೆ ಐದು ಜಾನುವಾರುಗಳು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ದಾರುಣ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಮತ್ತೂರಿನಲ್ಲಿ ನಡೆದಿದೆ. ಮತ್ತೂರು ಗ್ರಾಮದ...
- Advertisement -

ಸಂರಕ್ಷಣೆ ಒಂದು ಕ್ರೋಢೀಕರಣ

ಅರಣ್ಯ ಛಿದ್ರೀಕರಣವಾಗುತ್ತಿದೆ. ಈ ಅರಣ್ಯ ಛಿದ್ರೀಕರಣದಿಂದ ಕಾಡುಪ್ರಾಣಿಗಳ ಸಂತಾನೋತ್ಪತ್ತಿಗೂ ಸಹ ತೊಂದರೆಗಳುಂಟಾಗಿದೆ. ಕಾಡು- ಕಾಡುಪ್ರಾಣಿಗಳು ಹಾಗೂ ಮಳೆ, ನೀರು ಈ ಕೊಂಡಿಗಳು ಸಡಿಲವಾಗುತ್ತಿವೆ. ಇದನ್ನು ತಡೆಯಬೇಕಾಗಿದೆ. ಪಕ್ಷಿ ಸಂರಕ್ಷಣೆ 64...

ಸಂರಕ್ಷಣೆ ಒಂದು ಕ್ರೋಢೀಕರಣ

ಅರಣ್ಯ ಛಿದ್ರೀಕರಣವಾಗುತ್ತಿದೆ. ಈ ಅರಣ್ಯ ಛಿದ್ರೀಕರಣದಿಂದ ಕಾಡುಪ್ರಾಣಿಗಳ ಸಂತಾನೋತ್ಪತ್ತಿಗೂ ಸಹ ತೊಂದರೆಗಳುಂಟಾಗಿದೆ. ಕಾಡು- ಕಾಡುಪ್ರಾಣಿಗಳು ಹಾಗೂ ಮಳೆ, ನೀರು ಈ ಕೊಂಡಿಗಳು ಸಡಿಲವಾಗುತ್ತಿವೆ. ಇದನ್ನು ತಡೆಯಬೇಕಾಗಿದೆ. ಪಕ್ಷಿ ಸಂರಕ್ಷಣೆ 64...

ನಮ್ಮ ‘ಪರಿಸರ ಪರ’ ಚಟುವಟಿಕೆಗಳ ಪುನರಾವಲೋಕನ

ಹೆಚ್ಚೆಚ್ಚು ಜನ ಆರೋಗ್ಯಕರ ಚರ್ಚೆ ಮಾಡಿದರೆ ಕಾಡಿಗೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಭವಿಷ್ಯವಿದೆ. ಎಲ್ಲೆಂದರಲ್ಲಿ ಗಿಡ ನೆಡುವುದೂ ತಪ್ಪು. ಜತೆಗೆ ನೀವೆಲ್ಲರೂ ಗಮನಿಸಿರಬಹುದು ಯಾವ ವೃಕ್ಷಲಕ್ಷ ಯೋಜನೆಗಳೂ ಫಲ ನೀಡಿಲ್ಲ. ಕೋಟಿ...

ಮುಂಗಾರು ಮಳೆ ಎಂಬ ಜೀವಶಕ್ತಿ!

ಮುಂಗಾರು ಭಾರತವನ್ನು ಕೇರಳದ ಮೂಲಕ ಪ್ರವೇಶಿಸುತ್ತದೆ. ಮುಂಗಾರಿನ ಬಾಗಿಲು, ಕೇರಳ. ಹಾಗೆಯೇ ಮುಂದುವರೆಯುತ್ತಾ ಉತ್ತರಭಾರತಕ್ಕೆ ತಲಪುವ ಮುಂಗಾರು ಉತ್ತರದ ಎಷ್ಟೋ ಪ್ರದೇಶಗಳನ್ನು ತಲಪುವ ಹೊತ್ತಿಗೆ ಜುಲೈ ಬಂದಿರುತ್ತದೆ.   ಪಕ್ಷಿ ಸಂರಕ್ಷಣೆ 59   ♦ ಕಲ್ಗುಂಡಿ...
error: Content is protected !!