Monday, October 25, 2021

ನ್ಯೂಸ್

ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನಕ್ಕೆ 10 ವಿಕೆಟ್’ಗಳ ಭರ್ಜರಿ ಗೆಲುವು

newsics.com ಯುಎಇ: ಟಿ-20 ವಿಶ್ವಕಪ್ ನ ಇಂದಿನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲನುಭವಿಸಿದೆ. ಇದೇ ಮೊದಲ ಬಾರಿಗೆ ಟಿ-20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಪಾಕಿಸ್ತಾನಕ್ಕೆ 152 ರನ್ ಗಳ ಸಾಧಾರಣ ಗುರಿ ನೀಡಿತ್ತು. ನಿಗದಿತ 20 ಓವರ್ ಗಳಲ್ಲಿ ಭಾರತ...

ಕೊಲ್ಹಾಪುರದಲ್ಲಿ ಭೂಕಂಪ: 4.4 ತೀವ್ರತೆ ದಾಖಲು

newsics.com ಮಹಾರಾಷ್ಟ್ರ:  ಕೊಲ್ಹಾಪುರದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ. ಈ ಕುರಿತು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ಮೊನ್ನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ನಿನ್ನೆಯಷ್ಟೇ ಮಣಿಪುರದ ಚುರಾಚಂದ್ ಪುರದಲ್ಲಿ 3.7 ತೀವ್ರತೆಯ ಭೂಕಂಪ ಸಂಭವಿಸಿತ್ತು. https://newsics.com/news/india/congress-activists-fought-in-stage/90099/  

ಭಾರತ-ಪಾಕ್ ಪಂದ್ಯ: ಆಟಗಾರಿಂದ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನಕ್ಕೆ ಬೆಂಬಲ

newsics.com ಯುಎಇ: ದುಬೈನ ಇಂಟರ್‌ ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಪಾಕಿಸ್ತಾನ ಹೈ ವೊಲ್ಟೇಜ್ ಪಂದ್ಯದಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನಕ್ಕೆ ಬೆಂಬಲ ವ್ಯಕ್ತವಾಗಿದೆ. ಆಂದೋಲನಕ್ಕೆ ಉಭಯ ತಂಡಗಳ ಆಟಗಾರರು ಬೆಂಬಲ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾ ಆಟಗಾರರು ಮೊಣಕಾಲಿನಲ್ಲಿ ಕುಳಿತು ಬೆಂಬಲ ವ್ಯಕ್ತಪಡಿಸಿದ್ದು, ಪಾಕ್ ಆಟಗಾರರು ಹೃದಯದ ಮೇಲೆ ಕೈ ಇಟ್ಟು ಆಂದೋಲನವನ್ನು ಬೆಂಬಲಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ...

ವೇದಿಕೆಯಲ್ಲೇ ಬಡಿದಾಡಿಕೊಂಡ ಕಾಂಗ್ರೆಸ್ ಕಾರ್ಯಕರ್ತರು

newsics.com ಛತ್ತೀಸ್‌ ಗಢ: ಇಲ್ಲಿನ ಜಶ್‌ ಪುರದಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವೇದಿಕೆಯಲ್ಲೇ ಬಡಿದಾಡಿಕೊಂಡಿದ್ದಾರೆ. ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಪವನ್ ಅಗರ್‌ ವಾಲ್ ಅವರು ರಾಜ್ಯ ಆರೋಗ್ಯ ಸಚಿವ ಟಿಎಸ್ ಸಿಂಗ್ ದೇವ್ ಬಗ್ಗೆ ಮಾತನಾಡಲು ಆರಂಭಿಸಿದಾಗ ಪವನ್ ಅಗರ್‌ ವಾಲ್ ಅವರನ್ನು ದೂರ ತಳ್ಳಲಾಗಿದೆ. https://twitter.com/i/status/1452231762013208577 ಈ ವೇಳೆ ವೇದಿಕೆಯಲ್ಲಿ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ...

ರಾಜ್ಯದಲ್ಲಿ 388 ಕೊರೋನಾ ಪ್ರಕರಣ ಪತ್ತೆ, 586 ಗುಣಮುಖ, 5 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 388 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,98,5986ಕ್ಕೆ ಏರಿಕೆಯಾಗಿದೆ. 586 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 29,39,239 ಸೋಂಕಿತರು ಗುಣಮುಖರಾಗಿದ್ದಾರೆ. ಇಂದು 5 ಸೋಂಕಿತರು ಸಾವನ್ನಪ್ಪಿದ್ದು, ಮೃತರ ಒಟ್ಟು ಸಂಖ್ಯೆ 38,007ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 8,711 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ರೇಟ್ ಶೇಕಡಾ 0.32ರಷ್ಟಿದೆ. https://newsics.com/news/karnataka/3-died-for-lightening/90094/

ಸಿಡಿಲು ಬಡಿದು ಮೂವರು ಸಾವು

newsics.com ವಿಜಯನಗರ: ಸಿಡಿಲು ಬಡಿದು ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವರಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಉಪ್ಪಾರ ಹನುಮಂತಪ್ಪ(35), ಮಲ್ಲಿಕಾರ್ಜುನ(34) ಮತ್ತು ಮೈಲಾರಿ(11) ಎಂದು ಗುರುತಿಸಲಾಗಿದೆ. ಜೊತೆಗೆ ಎರಡು ಮೇಕೆಗಳು ಮೃತಪಟ್ಟಿವೆ. ಕಳೆದೆರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಗುಡುಗು ಹಾಗೂ ಸಿಡಿಲಿನ ಅಬ್ಬರವೂ ಜೋರಾಗಿದೆ. ಸಾವಿನ ಸುದ್ದಿ ತಿಳಿದ ಗ್ರಾಮಸ್ಥರು ಭಯ ಭೀತರಾಗಿದ್ದರೆ. https://newsics.com/news/india/6-year-old-girl-raped-in-delhi/90092/

6 ವರ್ಷದ ಬಾಲಕಿಯ ಅತ್ಯಾಚಾರ: ಸಿಸಿಟಿವಿ ಸುಳಿವಿನಿಂದ ಆರೋಪಿಯ ಬಂಧನ

newsics.com ನವದೆಹಲಿ: 20 ವರ್ಷದ ಯುವಕನೊಬ್ಬ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ದೆಹಲಿಯ ರಂಜಿತ್ ನಗರದಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಯುವಕನನ್ನು ಬಂಧಿಸಲಾಗಿದೆ. ಬಂಧಿತ ಯುವಕ ಹರಿಯಾಣ ಮೂಲದವನು ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಬಾಲಕಿಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ತನಿಖೆ ಆರಂಭಿಸಲಾಗಿತ್ತು. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳಲ್ಲಿ...

ಉಯ್ಯಾಲೆ ಕೊರಳಿಗೆ ಸುತ್ತಿ ಬಾಲಕ ಸಾವು!

newsics.com ಮುಂಬೈ: ಮನೆಯಲ್ಲಿ ತಯಾರಿಸಿದ ಬಟ್ಟೆಯ ಉಯ್ಯಾಲೆ ಕೊರಳಿಗೆ ಸಿಲುಕಿ 9 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಬಾಲಕ ತನ್ನ ಮನೆಯಲ್ಲಿ ಬಟ್ಟೆಯಿಂದ ತಯಾರಿಸಿದ ಉಯ್ಯಾಲೆಯಲ್ಲಿ ಆಟವಾಡುತ್ತಿದ್ದ. ಈ ವೇಳೆ ಉಯ್ಯಾಲೆ ಕುತ್ತಿಗೆಗೆ ಸಿಲುಕಿ, ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಬಾಲಕ ಉಯ್ಯಾಲೆಯಲ್ಲಿ ಆಟವಾಡುತ್ತಿದ್ದಾಗ ಅವನ ತಾಯಿ ಕೋಣೆಯ ಇನ್ನೊಂದು ಬದಿಯಲ್ಲಿ ಮಲಗಿದ್ದರು. ಈ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ...

ಪಾಕಿಸ್ತಾನದ ಭದ್ರತಾ ಪಡೆಗಳ ಕಾರ್ಯಾಚರಣೆ: 15 ಉಗ್ರರ ಹತ್ಯೆ

newsics.com ಪಾಕಿಸ್ತಾನ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 15 ಉಗ್ರರ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಲೂಚಿಸ್ತಾನದ ಮಸ್ತುಂಗ್‌ ಪ್ರದೇಶದಲ್ಲಿ ವಿವಿಧ ನಿಷೇಧಿತ ಸಂಘಟನೆಗಳ ಒಂಬತ್ತು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಯೋತ್ಪಾದನಾ ನಿಗ್ರಹ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. ಹರ್ನೈ ಜಿಲ್ಲೆಯಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕನ ಎಳೆದೊಯ್ದ ಮೊಸಳೆ!

newsics.com ಉತ್ತರ ಕನ್ನಡ: ನದಿಯಲ್ಲಿ ಮೀನಿಗೆ ಗಾಳ ಹಾಕುತ್ತಾ, ಮೀನು ಹಿಡಿಯುತ್ತಿದ್ದ ಬಾಲಕನನ್ನು ಮೊಸಳೆ ಎಳೆದೊಯ್ದಿದೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಈ ಘಟನೆ ಸಂಭವಿಸಿದೆ. ಮೋಹಿನ್ ಮೆಹಬೂಬ್ (16) ನಾಪತ್ತೆಯಾದ ಬಾಲಕ. ಹಳಿಯಾಳ ರಸ್ತೆಯ ಬದಿ ಕಾಳಿ ನದಿಯಲ್ಲಿ ಈತ ಮೀನು ಹಿಡಿಯಲು ಗಾಳ ಹಾಕಿ ಕುಳಿತಿದ್ದ. ಈ ವೇಳೆ ಮೊಸಳೆಯೊಂದು ಬಾಲಕನ್ನು ಕಚ್ಚಿ ನೀರಿಗೆ...

ಐಟಿಬಿಪಿಯ 20 ಸಿಬ್ಬಂದಿಗೆ ಶೌರ್ಯ ಪದಕ ಪ್ರದಾನ

newsics.com ಲಡಾಖ್: ಲಡಾಖ್ ಘರ್ಷಣೆಯಲ್ಲಿ ಹೋರಾಟ ನಡೆಸಿದ್ದ ಐಟಿಬಿಪಿಯ 20 ಸಿಬ್ಬಂದಿಗಳಿಗೆ ಶೌರ್ಯ ಪದಕಗಳನ್ನು ಪ್ರದಾನ ಮಾಡಿ ಗೌರವಿಸಲಾಗಿದೆ. ಐಟಿಬಿಪಿಯ 60ನೇ ಸಂಸ್ಥಾಪನಾ ದಿನಾಚರಣೆಯಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಯೋಧರಿಗೆ ಪದಕಗ ಪ್ರದಾನ ಮಾಡಿದ್ದಾರೆ. 2020ರ ಮೇ-ಜೂನ್ ನಲ್ಲಿ ಈಶಾನ್ಯ ಲಡಾಖ್ ನಲ್ಲಿ ಚೀನಾ ಯೋಧರೊಂದಿಗೆ ನಡೆದ ಸಂಘರ್ಷದಲ್ಲಿ ಐಟಿಬಿಪಿ ಯೋಧರು ಸಾಹಸ ಪ್ರದರ್ಶಿಸಿ,...

ಏರ್ಪೋರ್ಟ್’ನಲ್ಲಿ ಯೋಧನ ನೋಡಿ ಸೆಲ್ಯೂಟ್ ಮಾಡಿದ ಬಾಲಕ: ವಿಡಿಯೋ ವೈರಲ್

newsics.com ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ಯೋಧನನ್ನು ನೋಡಿದ ಪುಟ್ಟ ಬಾಲಕನೊಬ್ಬ ಸೆಲ್ಯೂಟ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಇದು ಬೆಂಗಳೂರು ವಿಮಾನ ನಿಲ್ದಾಣದ ಬಳಿ ನಡೆದ ಘಟನೆಯ ದೃಶ್ಯ ಎಂದು ತಿಳಿದುಬಂದಿದೆ. ಪೋಷಕರೊಂದಿಗೆ ಹೋಗುತ್ತಿದ್ದ ಬಾಲಕ ಸೇನಾ ವಾಹನದಲ್ಲಿದ್ದ ಯೋಧನನ್ನು ಕಂಡು ಸೆಲ್ಯೂಟ್ ಮಾಡಿದ್ದು, ಯೋಧನೂ ಕೂಡಾ ಪ್ರತಿಕ್ರಿಯಿಸಿದ್ದಾನೆ. https://twitter.com/i/status/1452147911840522248 ಈ ಹೆಮ್ಮೆಯ ಕ್ಷಣದ ವಿಡಿಯೋ...

ಹಲವು ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುತ್ತೇನೆ ಎಂದ ಸಿಎಂ ಬಸವರಾಜ ಬೊಮ್ಮಾಯಿ

newsics.com ವಿಜಯಪುರ: ನನ್ನ ಅಧಿಕಾರಾವಧಿಯಲ್ಲಿ ಹಲವು ಸಮುದಾಯಗಳಿಗೆ ಜಾತಿ ಮೀಸಲಾತಿ ಕಲ್ಪಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮೀಸಲಾತಿ ನೀಡಬೇಕೆಂದು ಹಲವು ಸಮುದಾಯಗಳು ಬೇಡಿಕೆ ಇಟ್ಟಿವೆ. ಅದನ್ನು ಪರಿಗಣಿಸಿ, ಕಾನೂನು ಚೌಕಟ್ಟಿನಲ್ಲಿ ಮೀಸಲು ಸೌಲಭ್ಯ ಕಲ್ಪಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಸಿಂದಗಿ ವಿಧಾನಸಭೆ ಉಪ ಚುನಾವಣೆ ಪ್ರಚಾರಕ್ಕೆ ರೋಡ್ ಶೋ ನಡೆಸಿ ಮಾತನಾಡಿದ ಅವರು, ಮುಂದಿನ...

ಕಲುಷಿತ ನೀರು ಸೇವಿಸಿ ಇಬ್ಬರು ಸಾವು, ಹಲವರು ಅಸ್ವಸ್ಥ

newsics.com ವಿಜಯಪುರ: ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿ, ಹಲವರು ಅಸ್ವಸ್ಥಗೊಂಡಿರುವ ಘಟನೆ ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಯರಗಲ್ ಗ್ರಾಮದಲ್ಲಿ ನಡೆದಿದೆ. ಕುಡಿಯುವ ನೀರಿಗೆ ಚರಂಡಿ ನೀರು ಸೇರ್ಪಡೆಯಾಗಿದ್ದು, ಇದನ್ನು ಕುಡಿದು ಇಬ್ಬರು ಮೃತಪಟ್ಟಿದ್ದಾರೆ. ಗ್ರಾಮದ ನಿವಾಸಿಗಳು ಅಸ್ವಸ್ಥಗೊಂಡಿದ್ದಾರೆ. ಮೃತರನ್ನು ಯರಗಲ್ ಗ್ರಾಮದ ಗುರುರಾಜ್ ಬಸವರಾಜ ಮಳಗಿ (15) ಮತ್ತು ನೀಲಮ್ಮ ನಾರಾಯಣಪ್ಪ ಬೆನಕಣ್ಣವರ(65) ಎಂದು ಗುರುತಿಸಲಾಗಿದೆ. ಅಸ್ವಸ್ಥರು...

ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಓರ್ವ ನಾಗರಿಕ ಸಾವು

newsics.com ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ಶೋಪಿಯಾನ್ ಜಿಲ್ಲೆಯ ಬಾಬಾಪೂರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ನಾಗರಿಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು 20 ವರ್ಷದ ಶಾಹಿದ್ ಅಹ್ಮದ್ ಎಂದು ಗುರುತಿಸಲಾಗಿದೆ. ಶೋಪಿಯಾನ್ ಜಿಲ್ಲೆಯ ಬಾಬಪೋರಾ ಎಂಬ ಪ್ರದೇಶದಲ್ಲಿ ಸಿಆರ್ ​ಪಿಎಫ್​ ಯೋಧರ ಮೇಲೆ ಅಪರಿಚಿತ ಉಗ್ರರು ದಾಳಿ ನಡೆಸಿದ್ದು, ಕೂಡಲೇ ಭದ್ರತಾ...

ರೋಮ್‌ನ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗಿ

newsics.com ನವದೆಹಲಿ: ಅ.30ರಿಂದ ಇಟಲಿಯ ರೋಮ್‌ನಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪ್ರಧಾನಿ‌ ಮೋದಿ ಪಾಲ್ಗೊಳ್ಳಲಿದ್ದಾರೆ. ಶೃಂಗಸಭೆಯಲ್ಲಿ ಅಫ್ಗನ್‌ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸಲು ಜಾಗತಿಕವಾಗಿ ಸಂಘಟಿತ ಕಾರ್ಯತಂತ್ರದ ಅವಶ್ಯಕತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ. ಗುರುವಾರ ಅಥವಾ ಶುಕ್ರವಾರ ಮೋದಿಯವರು ಇಟಲಿ ಮತ್ತು ಸ್ಕಾಟ್ಲೆಂಡ್‌ ಪ್ರವಾಸ ಆರಂಭಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ....

ಹೆಣ್ಣು ಮಕ್ಕಳೆಂಬ ಕಾರಣಕ್ಕೆ ಕಿರುಕುಳ: ತಾಯಿ, ಇಬ್ಬರು ಮಕ್ಕಳ ಆತ್ಮಹತ್ಯೆ

Newsics.com ಕಲಬುರಗಿ: ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದಲ್ಲಿ ತಾಯಿಯೊಬ್ಬರು ತನ್ನ ಮೂವರು ಹೆಣ್ಣು  ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. 4 ವರ್ಷದ ಇನ್ನೊಬ್ಬ ಮಗಳನ್ನು ರಕ್ಷಿಸಲಾಗಿದೆ. ಲಕ್ಷ್ಮಿ ಎಂಬುವವರು ತಮ್ಮ ಮಕ್ಕಳಾದ ಗೌರಮ್ಮ, ಸಾವಿತ್ರಿ ಮತ್ತು ಈಶ್ವರಿ ಜತೆ ಬಾವಿಗೆ ಹಾರಿದ್ದಾರೆ. ಲಕ್ಷ್ಮಿ, ಗೌರಮ್ಮ ಮತ್ತು ಸಾವಿತ್ರಿ ಮೃತಪಟ್ಟಿದ್ದಾರೆ....

ಮೆಟ್ರೋ‌ ಕಾಮಗಾರಿ‌ ವೇಳೆ ಮತ್ತೆ ದುರಂತ: ಕೆಳಕ್ಕೆ ಬಿದ್ದ ಲಾಂಚಿಂಗ್ ಗಾರ್ಡ್

newsics.com ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿ ವೇಳೆ ಭಾನುವಾರ ಬೆಳಗ್ಗೆ ಮತ್ತೊಂದು ಅವಘಡ ಸಂಭವಿಸಿದೆ. ನಮ್ಮ ಮೆಟ್ರೋ ಫೇಸ್-2 ಕಾಮಗಾರಿ ವೇಳೆ ಬೃಹತ್ ಮಷೀನ್ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದೆ. ಲಾಂಚಿಂಗ್ ಗಾರ್ಡ್ ಎಂಬ ಮಷೀನ್ ಬಿದ್ದಿದೆ. ಅದೃಷ್ಟವಶಾತ್ ಕರ್ತವ್ಯನಿರತ ನೂರಾರು‌ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿ ಜೋಡಣೆ ವೇಳೆ ಈ...

ಸಾಹಿತಿ ರಂಗಾರೆಡ್ಡಿ ಕೋಡಿರಾಂಪುರ ನಿಧನ

Newsics.com ಬೆಂಗಳೂರು: ಸಾಹಿತಿ ರಂಗಾರೆಡ್ಡಿ ಕೋಡಿರಾಂಪುರ ಇನ್ನಿಲ್ಲ. ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಕೋಡಿರಾಂಪುರದ ರಂಗಾರೆಡ್ಡಿ ಕನ್ನಡ ಅಧ್ಯಾಪಕರಾಗಿದ್ದರು. ಗೌರಿಬಿದನೂರು ನ್ಯಾಷನಲ್​ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದರು. ಜನಪದ ಸಂಸ್ಕೃತಿ, ಸಾಲು ಹೊಂಗೆಯ ತಂಪು, ನನ್ನೂರ ಹಾಡು ಸೇರಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆ ಆಗಿದ್ದರು. ರಂಗಾರೆಡ್ಡಿ ಕೋಡಿರಾಂಪುರ ನಿಧನಕ್ಕೆ...

ಆರೋಗ್ಯ ಕಾರ್ಯಕರ್ತರ ಸೇವೆ ಕೊಂಡಾಡಿದ ಮೋದಿ

Newsics.com ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆರೋಗ್ಯ ಕಾರ್ಯಕರ್ತರ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ತಮ್ಮ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಮೋದಿ ಆರೋಗ್ಯ ಕಾರ್ಯಕರ್ತರ ಸೇವೆಯನ್ನು ಪ್ರಸ್ತಾಪಿಸಿದ್ದಾರೆ. ಕೊರೊನಾ ವೇಳೆ ದೇಶ ಹಲವು ಸವಾಲುಗಳನ್ನು ಎದುರಿಸಿತ್ತು. ಎಲ್ಲರ ಸಹಕಾರದಿಂದ ದೇಶ ಈ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಿದೆ ಎಂದು ಮೋದಿ ಹೇಳಿದ್ದಾರೆ. ದೇಶದಲ್ಲಿ 100 ಕೋಟಿ...

ಘಾಟಿ ಸುಬ್ರಹ್ಮಣ್ಯ ಬಳಿ ಭೀಕರ ಅಪಘಾತ: ಇಬ್ಬರ ಸಾವು

Newsics.com ದೊಡ್ಡಬಳ್ಳಾಪುರ: ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತೆರಳುತ್ತಿದ್ದ ವೇಳೆ ಸಂಭವಿಸಿದ ಬಸ್​ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 27 ಮಂದಿ ಗಾಯಗೊಂಡಿದ್ದಾರೆ. ದೊಡ್ಡಬಳ್ಳಾಪುರ ಸಮೀಪದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಬಸ್​ ಕಂದಕಕ್ಕೆ ಉರುಳಿ ಈ ದುರಂತ ಸಂಭವಿಸಿದೆ. ಮೃತರನ್ನು ಶಿವಕುಮಾರ್​ ಮತ್ತು ರಾಮಕೃಷ್ಣ ರೆಡ್ಡಿ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. https://newsics.com/news/india/sexual-harrasement-akshay-reveal/90045/

ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದೆ: ನಟ ಅಕ್ಷಯ್ ಕುಮಾರ್ ಬಹಿರಂಗ

Newsics.com ಮುಂಬೈ: ಖ್ಯಾತ ನಟ ಅಕ್ಷಯ್​ ಕುಮಾರ್ ಬಾಲ್ಯದಲ್ಲಿ ಎದುರಿಸಿದ್ದ ಲೈಂಗಿಕ ಕಿರುಕುಳದ ಬಗ್ಗೆ ಬಹಿರಂಗಪಡಿಸಿದ್ದಾರೆ. 6 ವರ್ಷದ ಬಾಲಕನಾಗಿದ್ದಾಗ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಲಿಫ್ಟ್​ನಲ್ಲಿ ಕೆಳಗೆ ಇಳಿಯುತ್ತಿದ್ದ ವೇಳೆ ವಾಚ್​ಮನ್​ ಅನಗತ್ಯವಾಗಿ ದೇಹ ಸ್ಪರ್ಶಿಸಿದ್ದಾನೆ. ಇದು ಕೆಟ್ಟ ಉದ್ದೇಶ ಹೊಂದಿತ್ತು. ಇದನ್ನು ತಂದೆಗೆ ತಿಳಿಸಿದಾಗ ಪೊಲೀಸರಿಗೆ ದೂರು ನೀಡಲಾಯಿತು. ಬಳಿಕ...

ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಟಿಪ್ಸ್ ನೀಡಿದ ಇಮ್ರಾನ್ ಖಾನ್

newsics.com ದುಬೈ: ಟಿ-20 ನಿರ್ಣಾಯಕ ಪಂದ್ಯ ಆರಂಭವಾಗುವ ಮುನ್ನ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪಾಕ್ ಕ್ರಿಕೆಟ್ ತಂಡದ ಸದಸ್ಯರಿಗೆ ಕೆಲವು ಕಿವಿ ಮಾತು  ಹೇಳಿದ್ದಾರೆ. ಸಲಹೆ ನೀಡಿದ್ದಾರೆ. ಇಮ್ರಾನ್ ಖಾನ್ ರಾಜಕೀಯಕ್ಕೆ ಬರುವ ಮೊದಲು ವಿಶ್ವದ ಅತ್ಯುತ್ತಮ ಕ್ರಿಕೆಟ್ ಆಟಗಾರರ ಸಾಲಿನಲ್ಲಿ ಗುರುತಿಸಿಕೊಂಡಿದ್ದರು. ಪಾಕಿಸ್ತಾನ ಕ್ರಿಕೆಟ್ ತಂಡ ಯಾವುದೇ ರಣ ತಂತ್ರ ಹೆಣೆದರೂ ಅದನ್ನು ಬಗ್ಗು...

ಪೂಂಛ್‌ನಲ್ಲಿ 14ನೇ ದಿನಕ್ಕೆ ಕಾಲಿರಿಸಿದ ಕಾರ್ಯಾಚರಣೆ, ಮೂವರು ಯೋಧರಿಗೆ ಗಾಯ

newsics.com ಶ್ರೀನಗರ: ಜಮ್ಮು ಕಾಶ್ಮೀರದ ಪೂಂಛ್ ನಲ್ಲಿ  ಅಡಗಿ ಕುಳಿತಿರುವ ಉಗ್ರರ ಪತ್ತೆ ಕಾರ್ಯಾಚರಣೆ 14 ನೇ ದಿನಕ್ಕೆ ಕಾಲಿರಿಸಿದೆ. ಅಡಗುದಾಣಗಳನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ. ಇದೇ ವೇಳೆ  ಬಂಧಿತ ಪಾಕ್ ಮೂಲದ ಉಗ್ರನೊಬ್ಬನನ್ನು  ಪೂಂಚ್ ಗೆ ಕರೆ ತಂದ ವೇಳೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಅಡಗುತಾಣವನ್ನು ಗುರುತಿಸಲು ಶಂಕಿತ ಉಗ್ರನನ್ನು ಪೂಂಛ್ ಗೆ ಕರೆ...

ರಾಮನಗರದಲ್ಲಿ ವೈದ್ಯರ ಮನೆಗೆ ನುಗ್ಗಿದ ಚಿರತೆ, ಆತಂಕ ಸೃಷ್ಟಿ

newsics.com ರಾಮನಗರ: ಚಿರತೆಯೊಂದು ವೈದ್ಯರ ಮನೆಗೆ ನುಗ್ಗಿ ಆತಂಕ ಸೃಷ್ಟಿಸಿದೆ. ರಾಮನಗರ ಜಿಲ್ಲೆಯ ಜಾಲಮಂಗಲ ಎಂಬಲ್ಲಿ ವೈದ್ಯ ರೇವಣ್ಣ ಅವರ ಮನೆಗೆ ಚಿರತೆ ನುಗ್ಗಿದೆ. ಮನೆಯ ಒಳಗಡೆ ಚಿರತೆ ಬಂಧಿಯಾಗಿದೆ. ಅರಣ್ಯಾಧಿಕಾರಿಗಳು ಇದೀಗ ಮನೆಗೆ ಭೇಟಿ ನೀಡಿದ್ದಾರೆ. ಚಿರತೆಯನ್ನು ರಕ್ಷಿಸಿ ಕಾಡಿಗೆ ಕಳುಹಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಸಮೀಪದ ಕಾಡಿನಿಂದ ಆಹಾರ ಹುಡುಕಿಕೊಂಡು ಚಿರತೆ ಮನೆಗೆ ಬಂದಿದೆ ಎಂದು ಶಂಕಿಸಲಾಗಿದೆ.

ದೇಶದಲ್ಲಿ ಹೊಸದಾಗಿ 15,906 ಮಂದಿಗೆ ಕೊರೋನಾ ಸೋಂಕು

newsics.com ನವದೆಹಲಿ: ಕಳೆದ 24 ಗಂಟೆ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 15 906 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಕೊರೋನಾ ಸೋಂಕಿನ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳವಾಗುತ್ತಿದೆ ಎಂದು ವರದಿಯಾಗಿದೆ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇದೀಗ 3,41,75,468ಕ್ಕೆ ತಲುಪಿದೆ ಇದೇ ವೇಳೆ ದೇಶದ ವಿವಿಧ ಆಸ್ಪತ್ರೆಗಳಲ್ಲಿ 1, 72,594 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ. ...

ಆರು ಕೋಟಿ ರೂಪಾಯಿ ಮೌಲ್ಯದ ತಿಮಿಂಗಿಲ ವಾಂತಿ ವಶ

newsics.com ಮಡಿಕೇರಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆರು ಕೋಟಿ ರೂಪಾಯಿ ಬೆಲೆ ಬಾಳುವ ತಿಮಿಂಗಿಲ ವಾಂತಿ, ಅಂಬರ್ ಗ್ರೀಸ್ ವಶಪಡಿಸಿಕೊಳ್ಳಲಾಗಿದೆ. ಮಾರುತಿ ವ್ಯಾನ್ ನಲ್ಲಿ ಸಾಗಿಸುತ್ತಿದ್ದ ಅಂಬರ್ ಗ್ರೀಸ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಸೋಮವಾರ ಪೇಟೆಯ ಕರೀಂ ಬೇಗ್ ಮತ್ತು ಅಬ್ದುಲ್ಲಾ ಶರೀಫ್ ಎಂದು ಗುರುತಿಸಲಾಗಿದೆ. ಮಡಿಕೇರಿ ಕಡೆ ಆರೋಪಿಗಳು ಪ್ರಯಾಣಿಸುತ್ತಿದ್ದ...

ಭಾನುವಾರವೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

newsics.com ನವದೆಹಲಿ: ತೈಲ ಸಂಸ್ಥೆಗಳು ಭಾನುವಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ಮಾಡಿವೆ. ಪೆಟ್ರೋಲ್ ಮತ್ತು ಡೀಸೆಲ್ ದರ ಲೀಟರ್ ಗೆ 35 ಪೈಸೆ ಹೆಚ್ಚಳ ಮಾಡಲಾಗಿದೆ. ರಾಜಧಾನಿ ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 107.59 ರೂಪಾಯಿಗೆ ತಲುಪಿದೆ. ಲೀಟರ್ ಡೀಸೆಲ್ ದರ 96.32 ರೂಪಾಯಿ ಆಗಿದೆ. ವಾಣಿಜ್ಯ ರಾಜಧಾನಿ ಮುಂಬೈ ನಗರದಲ್ಲಿ ಪೆಟ್ರೋಲ್ ದರ...

ಬೆಂಗಳೂರು ಸೇರಿ ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಭಾರೀ ಮಳೆ ಸಾಧ್ಯತೆ

newsics.com ಬೆಂಗಳೂರು: ಕಳೆದ ಕೆಲ ದಿನಗಳಿಂದ ಬೆಂಗಳೂರೂ ಸೇರಿದಂತೆ ರಾಜ್ಯದ ಹಲವೆಡೆ ಸುರಿಯುತ್ತಿರುವ ಭಾರೀ‌ ಮಳೆ ಇನ್ನೂ ನಾಲ್ಕು ದಿನ‌ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು, ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ನಾಳೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...

ಭಾರತ – ಪಾಕ್ ಕ್ರಿಕೆಟ್ ಕದನಕ್ಕೆ ಕ್ಷಣಗಣನೆ, ಕೊಹ್ಲಿ ಪಡೆಗೆ ಶುಭ ಹಾರೈಕೆ

newsics.com ದುಬೈ: ಟಿ- 20 ಕ್ರಿಕೆಟ್ ಕದನದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾಗಿರುವ ಭಾರತ ಮತ್ತು ಪಾಕಿಸ್ತಾನ ಇಂದು ಮುಖಾಮುಖಿಯಾಗಲಿವೆ.  ದುಬೈ ಕ್ರೀಡಾಂಗಣದಲ್ಲಿ ಸಂಜೆ 7.30ಕ್ಕೆ  ಪಂದ್ಯ ಆರಂಭವಾಗಲಿದೆ. ಎರಡು ವರ್ಷಗಳ ಬಳಿಕ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನವನ್ನು ಎದುರಿಸುತ್ತಿದೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಜಯಗಳಿಸುವ ವಿಶ್ವಾಸವನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವ್ಯಕ್ತಪಡಿಸಿದ್ದಾರೆ. ತಂಡ ಅತ್ಯುತ್ತಮ ಸಾಧನೆ ಪ್ರದರ್ಶಿಸಲಿದೆ...
- Advertisement -

Latest News

ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನಕ್ಕೆ 10 ವಿಕೆಟ್’ಗಳ ಭರ್ಜರಿ ಗೆಲುವು

newsics.com ಯುಎಇ: ಟಿ-20 ವಿಶ್ವಕಪ್ ನ ಇಂದಿನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲನುಭವಿಸಿದೆ. ಇದೇ ಮೊದಲ ಬಾರಿಗೆ ಟಿ-20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ...
- Advertisement -

ಆಕರ್ಷಣೆ ಕಳೆದುಕೊಂಡಿತೇ ಶಿಕ್ಷಕ ವೃತ್ತಿ?

 ದೇಶದಲ್ಲಿ ನುರಿತ ಶಿಕ್ಷಕರ ತೀವ್ರ ಕೊರತೆ  ಭಾರತದ ಶಿಕ್ಷಣ ವ್ಯವಸ್ಥೆಯ ಮೇಲೆ ಇತ್ತೀಚೆಗೆ ಯುನೆಸ್ಕೋ ಬಿಡುಗಡೆ ಮಾಡಿರುವ ವರದಿ ಬೆಳಕು ಚೆಲ್ಲಿದೆ. 11 ಲಕ್ಷ ನುರಿತ ಶಿಕ್ಷಕರ ಕೊರತೆ ದೇಶದಲ್ಲಿದ್ದು, ಇರುವ ಶಿಕ್ಷಕರಿಗೂ ಉದ್ಯೋಗ...

ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ

  ಶಾಲಾರಂಭಕ್ಕೆ ಎದುರಾದ ಸಮಸ್ಯೆ   ಅಕ್ಟೋಬರ್ 25ರಿಂದ 1ನೇ ತರಗತಿಯ ಮಕ್ಕಳಿಗೂ ಶಾಲೆಯ ಬಾಗಿಲು ತೆರೆಯಲಿದೆ. ಸರ್ಕಾರಿ ಶಾಲೆಗಳ ಸ್ಥಿತಿ ಪರವಾಗಿಲ್ಲ, ಏಕೆಂದರೆ, ಅಲ್ಲಿನ ಶಿಕ್ಷಕರಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ಆದರೆ, ಖಾಸಗಿ ಶಾಲೆಗಳ...

ಡಿಸ್ ಲೆಕ್ಸಿಯಾದಿಂದ ಸೆಲೆಬ್ರಿಟಿ ಮ್ಯಾನೇಜರ್ ವರೆಗೆ…

ಅಂದು 'ಟ್ಯೂಬ್ ಲೈಟ್' ಇಂದು ಟೆಡ್ ಎಕ್ಸ್ ಭಾಷಣಕಾರ! ಯಾವುದೇ ಸಮಸ್ಯೆ ಇದ್ದರೂ ಪ್ರತಿಯೊಂದು ಮಗುವೂ ಒಂದು ನಕ್ಷತ್ರವೇ. ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಪ್ರತಿಭೆಯಿದೆ ಎನ್ನುವುದನ್ನು ಸಾಬೀತುಪಡಿಸಿರುವ ಡಿಸ್ ಲೆಕ್ಸಿಯಾ ಪೀಡಿತ ಮಗುವಾಗಿದ್ದ ಮುಂಬೈನ ಹರ್ಷ್ ದೋಶಿ...

ಚಂದ್ರಮುಕುಟ

ತಲೆಯ ಮೇಲೆ ಚೊಟ್ಟಿಯಂತೆ ಕಾಣುವ, ತಿಳಿಕೆಂಗಂದು ಬಣ್ಣದ, ಕಪ್ಪುತುದಿಯ,  ಗರಿಗಳು. ಇವನ್ನು ಹಕ್ಕಿ ಬಿಚ್ಚಿದರೆ ಅರ್ಧಚಂದ್ರಾಕೃತಿಯಂತೆ ನಿಲ್ಲುತ್ತವೆ. ಇದರಿಂದಲೇ ಈ ಹಕ್ಕಿಗೆ ಚಂದ್ರ ಮುಕುಟ ಎಂಬ ಹೆಸರು ಬಂದದ್ದು.   ಪಕ್ಷಿನೋಟ - 76   ♦...
error: Content is protected !!